ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 11/01/2023  ರಂದು ಪಿರ್ಯಾದಿದಾರರಾದ ಉದಯ ಪೂಜಾರಿ (44), ತಂದೆ: ದಿ. ಕರಿಯ ಪೂಜಾರಿ, ವಾಸ: ಭಟ್ರಬೆಟ್ಟು ಹೌಸ್‌, ಸಾಲಿಕೇರಿ ಅಂಚೆ, ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ವಾರಂಬಳ್ಳಿ ಗ್ರಾಮದ ಭಟ್ರಬೆಟ್ಟು ಹೌಸ್‌ ಎಂಬ ಅವರ ಮನೆಯ ಎದುರು ಬೆಳಿಗ್ಗೆ ನಿಂತುಕೊಂಡಿರುವಾಗ ಆರೋಪಿಯು ಅವರ KA-20-AB-1553 ನೇ ಆಟೋ ರಿಕ್ಷಾ ವನ್ನು ಸಾಲಿಕೇರಿ ಯಿಂದ ಓಜೋನ್‌ ಬಾರ್‌ ಡಾಮರು ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಸಾಲಿಕೇರಿ  ಪವಾಡ ಪುರುಷ ದೇವರ ಗುಡಿ ಬಳಿ ತಲುಪುವಾಗ  ಬೆಳಿಗ್ಗೆ 6:30 ಗಂಟೆಗೆ ಆರೋಪಿಯ ಹತೋಟಿ ತಪ್ಪಿ ಆಟೋ ರಿಕ್ಷಾ  ಡಾಮರು ರಸ್ತೆಗೆ ಮುಗುಚಿ ಬಿದಿದ್ದು, ಈ ಅಪಘಾತದಿಂದ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಗಿರಿಜಾ ಎಂಬುವವರು  ಕೂಡ ರಸ್ತೆಗೆ ಬಿದ್ದು ಅವರ ಮುಖದ ಎಡಭಾಗ  ತೀವ್ರ ತರಹದ  ರಕ್ತ ಗಾಯವಾಗಿರುತ್ತದೆ. ಆರೋಪಿ ಸತೀಶ್‌ ಶೆಟ್ಟಿಗಾರ್‌ ರವರ ಎಡ ಭಾಗದ  ಸೊಂಟದ  ಬಳಿ  ತರಚಿದ ಗಾಯವಾಗಿರುತ್ತ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2023  ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಶಂಕರನಾರಾಯಣ: ಪಿರ್ಯಾದಿದಾರರಾದ ಪ್ರಶಾಂತ ಶೆಟ್ಟಿ  (42), ತಂದೆ" ಚಂದ್ರಶೇಖರ  ಶೆಟ್ಟಿ, ವಾಸ: ನಿಡಗೋಡು  74 ಉಳ್ಳೂರು  ಗ್ರಾಮ ಕುಂದಾಪುರ  ತಾಲೂಕು ಇವರು  ದಿನಾಂಕ  11/01/2023 ರಂದು KA-19-K-8535 ನೇ   ನಂಬ್ರದ   ಮೋಟಾರ್  ಸೈಕಲ್‌‌‌ನಲ್ಲಿ   ಹೆಂಡತಿ  ಶ್ರೀಮತಿ  ರೂಪಾ  ಇವರೊಂದಿಗೆ  ಸಿದ್ದಾಪುರ  ಸೈಬರ  ಸೆಂಟರ್ ಗೆ   ಹೋಗಿ  ಅಲ್ಲಿಂದ ವಾಪಾಸು  ಮನೆಗೆ  ಹೋಗಲು  13:15  ಗಂಟೆಗೆ  ಕುಂದಾಪುರ   ತಾಲೂಕಿನ ಸಿದ್ದಾಪುರ   ಗ್ರಾಮದ   ಸಿದ್ದಾಪುರ  ಕೆಳಪೇಟೆ ಸರಕಾರಿ   ಕಿರಿಯ  ಪ್ರಾಥಮಿಕ  ಶಾಲೆಯ  ಬಳಿ   ಬರುತ್ತಿರುವಾಗ  ಆರೋಪಿ   KA-20-EW-6485  ನೇ ನಂಬ್ರದ  ಮೋಟಾರ್  ಸೈಕಲ್‌‌ನ್ನು  ಶಂಕರನಾರಾಯಣ  ಕಡೆಯಿಂದ  ಸಿದ್ದಾಪುರ   ಕಡೆಗೆ  ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಪಿರ್ಯಾದಿದಾರರು  ಚಲಾಯಿಸಿಕೊಂಡು  ಬರುತ್ತಿದ್ದ  ಮೋಟಾರ್  ಸೈಕಲ್‌‌ಗೆ  ಡಿಕ್ಕಿ ಹೊಡೆದ  ಪರಿಣಾಮ  ಪಿರ್ಯಾದಿದಾರರಿಗೆ  ಹಾಗೂ  ಹಿಂಬದಿ ಸವಾರೆ  ಶ್ರೀಮತಿ ರೂಪಾ  ಮತ್ತು  ಡಿಕ್ಕಿ  ಹೊಡೆದ   KA-20-EW-6485    ನೇ ನಂಬ್ರದ  ಮೋಟಾರ್   ಸೈಕಲ್  ಸವಾರ  ಮಂಜು  ಕುಲಾಲ್  ಹಾಗೂ  ಹಿಂಬದಿ ಸವಾರ  ಶೇಖರ  ಕುಲಾಲ್  ಇವರ ಕಾಲುಗಳಿಗೆ   ಗಂಭೀರ ಸ್ವರೂಪದ ರಕ್ತಗಾಯವಾಗಿರುತ್ತದೆ,   ಗಾಯಾಳುಗಳು  ಚಿಕಿತ್ಸೆಯ  ಬಗ್ಗೆ  ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 07/2023  ಕಲಂ:  279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಗೋಪಾಲ ಪೂಜಾರಿ (58), ತಂದೆ: ಕಾಳು ಪೂಜಾರಿ, ವಾಸ: ದುಗ್ಗಪ್ಪ ಪೂಜಾರಿ ಮನೆ, ತೋಟದ ಮನೆ, ಸಾಯ್‌ ಹೋಟೆಲ್‌ ಬಳಿ ಕಟಪಾಡಿ, ಮೂಡಬೆಟ್ಟು ಗ್ರಾಮ ಕಾಪು ತಾಲೂಕು ಉಡುಪಿ ಇವರು ದಿನಾಂಕ 11/01/2023 ರಂದು ಕೆಲಸ ಮುಗಿಸಿದ ಬಳಿಕ ಮೂಡಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆಯಾಗಿ ತನ್ನ ಮನೆಗೆ ನಡೆದುಕೊಂಡು ಹೋಗುತ್ತಾ 19:00 ಗಂಟೆಗೆ ಮೂಡಬೆಟ್ಟು ಪೆಟ್ರೋಲ್‌ ಪಂಪ್‌ ಎದುರು ರಾಷ್ಟ್ರೀಯ ಹೆದ್ದಾರಿ 66 ಉಡುಪಿ-ಮಂಗಳೂರು ರಸ್ತೆಯನ್ನು ದಾಟಿ ಬಳಿಕ ಮಂಗಳೂರು-ಉಡುಪಿ ರಸ್ತೆಯನ್ನು ದಾಟಿ ಪಶ್ಚಿಮ ಬದಿಯಲ್ಲಿನ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಕಾಪು ಕಡೆಯಿಂದ ಕಟಪಾಡಿ ಕಡೆಗೆ ಹೋಗುತ್ತಿದ್ದ KA-19-ET-0553 ನೇ ಸ್ಕೂಟರ್ ಸವಾರ ಯತಿನ್‌  ರವರು ತನ್ನ ಸ್ಕೂಟರ್‌ ನ್ನು ಅತೀ ವೇಗ & ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮಣ್ಣು ರಸ್ತೆಗೆ ಬಿದ್ದಿದ್ದು, ಎಡಗಾಲಿನ ಮೊಣಗಂಟಿನ ಮೂಳೆ ಮುರಿತವಾಗಿದ್ದು, ಎಡ ಕಿವಿಗೆ ರಕ್ತಗಾಯವಾಗಿರುತ್ತದೆ. ಸ್ಕೂಟರ್‌ ಸವಾರನಿಗೂ ಸಣ್ಣ-ಪುಟ್ಟ ತರಚಿದ ಗಾಯಗಳಾಗಿರುತ್ತದೆ.  ಪಿರ್ಯಾದಿದಾರರನ್ನು ಅಲ್ಲಿ ಸೇರಿದ್ದ ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಅಂಬುಲೆನ್ಸ್‌ ನಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 06/2023 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಹೆಬ್ರಿ: ದಿನಾಂಕ 11/01/2023 ರಂದು ಸುದರ್ಶನ್ ದೊಡಮನಿ, ಪೊಲೀಸ್‌ ಉಪನಿರೀಕ್ಷಕರು, ಹೆಬ್ರಿ ಪೊಲೀಸ್ ಠಾಣೆ ಇವರು ರಾತ್ರಿ ರೌಂಡ್ಸ್ ಗೆ ಹೊರಟು ಹೆಬ್ರಿ , ಶಿವಪುರ, ಮುದ್ರಾಡಿ, ಮುನಿಯಲ್ , ವರಂಗ ಕಡೆಗಳಲ್ಲಿ ರೌಂಡ್ಸ್ ಮಾಡಿ ದಿನಾಂಕ 12/01/2023 ರಂದು ಮುಂಜಾನೆಯ ಸಮಯ ಹೆಬ್ರಿಯ ಸೀತಾನದಿ ಕೈಕಂಬದ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ನಾಡ್ಪಾಲು ಕಡೆಯಿಂದ ಒಂದು ವಾಹನವು ಅತೀವೇಗವಾಗಿ ಬರುತ್ತಿರುವುದನ್ನು ನೋಡಿ ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಅದರ ಚಾಲಕನು  ವಾಹನವನ್ನು ನಿಲ್ಲಿಸದೇ ಮುದ್ರಾಡಿ ಕಡೆಯ ರಸ್ತೆಗೆ ತಿರುಗಿಸಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು, ವಾಹನವನ್ನು ಬೆನ್ನಟ್ಟಿದ್ದಾಗ ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿ ಹೆಬ್ರಿ ಗ್ರಾಮದ ಬಚ್ಚಪ್ಪು ಜಂಕ್ಷನ್ ಬಳಿ ತಲುಪಿದಾಗ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಗೆ ಹೋಗಿ ರಸ್ತೆಯ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಬಲಮುಗ್ಗಲಾಗಿ ಬಿದ್ದು. ಅದರಲ್ಲಿದ್ದ 3 ಜನರು ವಾಹನದಿಂದ ಇಳಿದು ಕಾಡಿಗೆ ಓಡಿ ತಪ್ಪಿಸಿಕೊಂಡಿದ್ದು, ವಾಹನವನ್ನು ಪರಿಶೀಲಿಸಿದಾಗ KA-05-MF-6137 ನೇ ಮಹೇಂದ್ರ ಬೊಲೇರೋ ವಾಹನ ವಾಗಿದ್ದು. ಇದರ ಮುಂದಿನ ಭಾಗ ಮತ್ತು ಬಲಬದಿಯ ಬಾಗವು ಜಖಂ ಅಗಿರುವುದರಿಂದ ಅದರಲ್ಲಿದ್ದವರಿಗೆ ಗಾಯವಾಗಿರುವ ಸಾದ್ಯತೆ ಇರುತ್ತದೆ.  ವಾಹನದ ಒಳಬದಿಯ ಸೀಟ್‌ ತೆಗೆದು ಒಂದು ನೀಲಿಬಣ್ಣದ ಟಾರ್ಪಲ್ ನ್ನು ಹಾಕಿ ಅದರ ಮೇಲೆ 05 ಜಾನುವಾರು ಗಳನ್ನು ಯದ್ವತದ್ವವಾಗಿ ಒಂದರ ಮೇಲೆ ಒಂದರಂತೆ ತುಂಬಿಸಿ ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಅವುಗಳ ಕುತ್ತಿಗೆಗೆ ಹುರಿಹಗ್ಗವನ್ನು ಕಟ್ಟಿರುವುದು ಕಂಡು ಬರುತ್ತದೆ. ಆರೋಪಿತರುಗಳು  ಜಾನುವಾರುಗಳನ್ನು ಎಲ್ಲಿಂದಲೂ ಕಳವು ಮಾಡಿ ಸದರಿ ವಾಹನದಲ್ಲಿ ಯದ್ವಾತದ್ವವಾಗಿ ಒಂದರ ಮೇಲೆ ಒಂದರಂತೆ ತುಂಬಿಸಿ ಅವುಗಳಿಗೆ ಹಿಂಸೆ ಆಗುವ ರೀತಿಯಲ್ಲಿ ಅವುಗಳ ಕುತ್ತಿಗೆಗೆ ಮತ್ತು ಕಾಲಿಗೆ ಹುರಿ ಹಗ್ಗವನ್ನು ಕಟ್ಟಿ ಅವುಗಳನ್ನು ವಧೆ ಮಾಡುವ ಸಲುವಾಗಿ ಖಾಸಾಯಿ ಖಾನೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2023 ಕಲಂ:379, 279 ಐಪಿಸಿ ಮತ್ತು ಕಲಂ: 4,5,7,12 ಕರ್ನಾಟಕ ಜಾನುವಾರುಹತ್ಯೆ ಪ್ರತಿಬಂದಕ ಮತ್ತುಸಂರಕ್ಷಣ ಕಾಯಿದೆ 2020 ಮತ್ತು ಕಲಂ 11(1`)(ಡಿ) ಪ್ರಾಣಿಹಿಂಸಾ ಪ್ರತಿಬಂದಕ ಕಾಯಿದೆ 1960 ರಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ: ದಿನಾಂಕ  09/01/2023 ರಂದು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಅಬ್ದುಲ್ ರವೂಫ್(23) ಎಂಬಾತನನ್ನು ಸುಧಾಕರ್ ತೋನ್ಸೆ, ಪೊಲೀಸ್‌ ಉಪನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿ ಪಿ  ನಗರದ ಬಳಿ ಸಾರ್ವಜನಿಕ ಸ್ಥಳದಲ್ಲಿ  ವಶಕ್ಕೆ ಪಡೆದು  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು, ವೈದ್ಯಾಧಿಕಾರಿಗಳು ದಿನಾಂಕ 12/01/2023 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 10/2023, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 12-01-2023 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080