ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೊಲ್ಲೂರು: ಪಿರ್ಯಾದಿದಾರರಾದ ಬಿ.ವಿ ಶಂಕರ ರೆಡ್ಡಿ (53), ತಂದೆ: ವೆಂಕಟಪ್ಪ, ವಾಸ:  ಬಂಡಾರಹಳ್ಳಿ  ಗ್ರಾಮ ಮುಳಬಾಗಿಲು ತಾಲೂಕು  ಕೋಲಾರ ಜಿಲ್ಲೆ ಇವರು ತನ್ನ ಪತ್ನಿ  ರೆಡ್ಡಿಯಮ್ಮ, ಮಗ  ಬಿ. ಎಸ್ ಅಂಕುಶ್  ಹಾಗೂ ಇತರ  42 ಜನ ಮತ್ತು ಬಸ್ ಚಾಲಕ ಶ್ರೀನಿವಾಸ್ ಹಾಗೂ  ಇಬ್ಬರು ಕ್ಲಿನರ್ ರೊಂದಿಗೆ ದಿನಾಂಕ 10/01/2022 ರಂದು ರಾತ್ರಿ 09:00 ಗಂಟೆಗೆ ತಮ್ಮ ಊರಾದ ಭಂಡಾರ ಹಳ್ಳಿಯಿಂದ ಹೊರಟು  ದಿನಾಂಕ 11/01/2022 ರಂದು  ಸಿಗಂದೂರು ತಲುಪಿ ಮಧ್ಯಾಹ್ನ 1:00 ಗಂಟೆಗೆ  ಅಲ್ಲಿಂದ  ಕೊಲ್ಲೂರು ಕಡೆಗೆ ಹೊರಟು ಮಧ್ಯಾಹ್ನ 3:30 ಗಂಟೆ ಕೊಲ್ಲೂರು ಗ್ರಾಮದ  ಸಮೀಪ  NH 766 C ರಸ್ತೆಯ ಒಣ್ಕಣ್ ಮೋರಿ ತಿರುವಿನಲ್ಲಿ  ಆರೋಪಿ ಬಸ್ ನ ಚಾಲಕನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಾಲಾಯಿಸಿ ಬಸ್ ಚಾಲಕನ ಹತೋಟಿ ತಪ್ಪಿ ರಸ್ತೆಯ ಎಡಬದಿಗೆ ಎಡ ಮಗ್ಗುಲಾಗಿ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ತರಚಿದ ಗಾಯ, ಪಿರ್ಯಾದಿದಾರ ಪತ್ನಿ ಗೆ ಎಡ ಭುಜಕ್ಕೆ ಗುದ್ದಿನ ಒಳಜಖಂ  ಸಹ ಪ್ರಯಾಣಿಕರಾದ ಪಾರ್ವತಮ್ಮ ರವರಿಗೆ ಎಡ ಭುಜಕ್ಕೆ ಗುದ್ದಿನ ಜಖಂ , ಭಾಗ್ಯಮ್ಮ ರವರಿಗೆ ಎಡ ಭುಜ ಬಲ ಕಾಲಿಗೆ ಮತ್ತು ಗುದ್ದಿದ ಒಳ ಜಖಂ , ಶೀನಪ್ಪ ರವರಿಗೆ ಎಡ ಪಕ್ಕೆಲುಬಿಗೆ ಗುದ್ದಿದ ಒಳ ಜಖಂ , ಮಂಜುಳಮ್ಮ ರವರಿಗೆ ಸೊಂಟಕ್ಕೆ ಗುದ್ದಿದ ಒಳಜಖಂ, ಬಿ.ಎಸ್ ರಾಮಕೃಷ್ಣರವರಿಗೆ ತಲೆಗೆ ಗುದ್ದಿದ ಒಳ ಜಖಂ, ಸರಸ್ವತಮ್ಮ ರವರಿಗೆ ಎಡಕೈ ಮಣಿಗಂಟಿಗೆ ಗುದ್ದಿದ ಒಳಜಖಂ, ವೆಂಕಟರಮಣಪ್ಪ ರವರಿಗೆ  ಬಲ ಪಕ್ಕೆಲುಬು ಮತ್ತು ಬಲ ಭುಜಕ್ಕೆ ಗುದ್ದಿದ ಒಳಜಖಂ , ಪಾರ್ವತಮ್ಮ ರವರಿಗೆ ಬಲ ಪಕ್ಕೆಲುಬಿಗೆ ಗುದ್ದಿದ ಒಳ ಜಖಂ, ಬಿ.ಕೆ ಶ್ರೀನಿವಾಸ್ ರರಿಗೆ ಎಡಕೈ ಅಂಗೈ ರಕ್ತಗಾಯ, ಬಲ ಕಾಲಿನ ಮೊಣಗಂಟಿಗೆ ಗುದ್ದಿದ ಒಳ ಜಖಂ, ವೆಂಕಟರಾಮ ಬಿ. ಎ ರವರಿಗೆ ಬೆನ್ನಿನ ಎಡಭಾಗಕ್ಕೆ ರಕ್ತ ಗಾಯ, ರಾಮಕ್ಕ ರವರಿಗೆ ಹಣೆಗೆ ರಕ್ತಗಾಯ ಬಲ ಕಾಲಿನ ಗಂಟಿಗೆ ಗುದ್ದಿದ ಒಳ ಜಖಂ, ಅರುಣಮ್ಮರಿಗೆ ಹಣೆಗೆ ಗುದ್ದಿದ ಗಾಯ ಎಡ ಕೈ ಮಣಿಗಂಟಿಗೆ ಗುದ್ದಿದ ಒಳ ಜಖಂ, ಎ. ಎನ್ ಶ್ರೀನಿವಾಸ್ ರವರಿಗೆ ಎಡ ಭುಜಕ್ಕೆ ಗುದ್ದಿದ ಒಳ ಜಖಂ, ಅನಸೂಯಮ್ಮನವರಿಗೆ ಎಡ ಭುಜಕ್ಕೆ ಗುದ್ದಿದ ಒಳ ಜಖಂ, ತ್ರೀವೇಣಿಯಮ್ಮ ರವರಿಗೆ ಎಡ ಕೈಗೆ ರಕ್ತ ಗಾಯ ಮತ್ತು ಎಡ ಭುಜಕ್ಕೆ ಗುದ್ದಿದ ಒಳ ಜಖಂ, ವೆಂಕಟಲಕ್ಷ್ಮೀ  ಯವರಿಗೆ ತಲೆಗೆ ರಕ್ತ ಗಾಯ ಮತ್ತು ಎಡ ಕೈ ಭುಜಕ್ಕೆ ಗುದ್ದಿದ ಒಳ ಜಖಂ, ಕೆ ಶಂಕರಪ್ಪರವರಿಗೆ ಎಡ ಬದಿಯ ಪಕ್ಕೆಲುಬಿಗೆ ಗುದ್ದಿದ ಒಳ ಜಖಂ,  ಆರೋಪಿ ಚಾಲಕ  ಶ್ರೀನಿವಾಸ್ ರವರಿಗೆ ಬೆನ್ನಿಗೆ ಮತ್ತು  ಎಡ ಕಾಲಿನ ಪಾದಕ್ಕೆ  ಗುದ್ದಿದ ಒಳ ಜಖಂ ಉಂಟಾಗಿ ಕುಂದಾಪುರ ಸರ್ಕಾರಿ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಬಸ್ ನಲ್ಲಿದ್ದ  ಶ್ಯಾಮಲಮ್ಮ ರವರ ಎಡ ಕೈ ತುಂಡಾಗಿದ್ದು, ರೂಪಮ್ಮರವರ ಎಡ ಕೈ ತುಂಡಾಗಿದ್ದು, ಕಲಾವತಿ ಹಾಗೂ ರತ್ನರವರಿಗೆ ಕೈ ಮೂಳೆ ಮುರಿತವಾಗಿರುತ್ತದೆ. ಇವರಿಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ನೀಡಿ  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ. ಎಮ್ ಸಿ ಆಸ್ಪತ್ರೆಗೆ  ದಾಖಲಿಸಲಾಗಿರುತ್ತದೆ. ಉಳಿದ ಸಹ ಪ್ರಯಾಣಿಕರಿಗೆ  ಸಣ್ಣಪುಟ್ಟ ರ ತರಚಿದ ರಕ್ತಗಾಯಗಳಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2022  ಕಲಂ:  279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೊಲ್ಲೂರು: ಪಿರ್ಯಾದಿದಾರರಾದ ನಾಗರಾಜ (22), ತಂದೆ: ದಿ. ವಿಶ್ವನಾಥ, ವಾಸ:  ನೂಜಾಡಿ  ಕ್ರಾಸ್  ವಂಡ್ಸೆ  ಗ್ರಾಮ ಕುಂದಾಪುರ ತಾಲೂಕು ಇವರು  ದಿನಾಂಕ 11/01/2022 ರಂದು  ಅಕ್ಕನ ಗಂಡ ಗಣೇಶರವರೊಂದಿಗೆ KA-15-S-2559ನೆ ಮೋಟಾರ್ ಸೈಕಲ್ ನಲ್ಲಿ  ಹಿಂಬದಿ ಸಹ ಸವಾರನಾಗಿ  ವಂಡ್ಸೆ ಕಡೆಯಿಂದ ಹೊಸನರಕ್ಕೆ ಹೋಗುವಾಗ SH-27 ರಸ್ತೆಯಲ್ಲಿ ಸಂಜೆ 7:30 ಗಂಟೆಗೆ ಚಿತ್ತೂರು ಗ್ರಾಮದ ಪೆಟ್ರೋಲ್ ಬಂಕ್ ಬಳಿ ತಲುಪಿದಾಗ  ಎದುರುಗಡೆಯಿಂದ ಅಂದರೆ ಚಿತ್ತೂರು ಕಡೆಯಿಂದ ವಂಡ್ಸೆ ಕಡೆಗೆ  ಆರೋಪಿ  KA-20-MC-7372 ನೇ ಕಾರಿನ ಚಾಲಕ ನ್ನು  ತನ್ನ ಕಾರನ್ನು ಅತೀ ವೇಗಾ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಕೊಂಡು ಬಂದು KA-15-S-2559 ನೇ ಮೋಟಾರ್ ಸೈಕಲ್ ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು  ಹಾಗೂ  ಬೈಕ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎಡಕೈ ಅಂಗೈ ರಕ್ತಗಾಯವಾಗಿದ್ದು , ಮೋಟಾರ್ ಸೈಕಲ್ ಸವಾರನಾದ  ಗಣೇಶ್ ರವರಿಗೆ   ತಲೆಗೆ. ಕಿವಿಗೆ, ಮುಖಕ್ಕೆ  ರಕ್ತ ಗಾಯಾವಾಗಿರುತ್ತದೆ  ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ  ಪ್ರಾಥಮಿಕ ಚಿಕಿತ್ಸೆ ಪಡೆದು  ವೈದ್ಯರ ಸಲಹೆಯಂತೆ  ಗಣೇಶ್ ರವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ. ಎಮ್ .ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2022  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
 • ಕೋಟ: ಪಿರ್ಯಾದಿದಾರರಾದ ಯೋಗೀಶ ಕುಮಾರ್ (38), ತಂದೆ:ಪ್ರಭಾಕರ ರಾವ್ , ವಾಸ: ಬಯಲು ಮನೆ, ಕಾರ್ಕಡ, ಸಾಲಿಗ್ರಾಮ , ಬ್ರಹ್ಮಾವರ ತಾಲ್ಲೂಕು, ಉಡುಪಿ ಜಿಲ್ಲೆ ಇವರು ನವಯುಗ ಉಡುಪಿ ಟೋಲ್ ಪ್ರೈ ಲಿಮಿಟೆಡ್ ಕಂಪೆನಿಯಲ್ಲಿ ಪಿ.ಆರ್.ಓ ಆಗಿ ಕೆಲಸ ಮಾಡಿಕೊಂಡಿದ್ದು  ದಿನಾಂಕ 11/01/2022 ರಂದು ಸಾಸ್ತಾನ ಜಂಕ್ಷನ್ ನಲ್ಲಿರುವಾಗ ಮಧ್ಯಾಹ್ನ 15:45  ಗಂಟೆಗೆ KA-17-HH-8040 ನೇ ನಂಬ್ರದ ಮೋಟಾರು ಸೈಕಲ್ ಸವಾರ ಮೇಘರಾಜ್  ಹಿಂಬದಿ ಮನೋಜ್ ಎಂಬುವವರನ್ನು ಕುಳ್ಳಿರಿಸಿಕೊಂಡು ಕೋಡಿ ಕಡೆಯಿಂದ ಸಾಸ್ತಾನ ಜಂಕ್ಷನ್ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮೋಟಾರು ಸೈಕಲ್ ಚಲಾಯಿಸಿಕೊಂಡು ಒಮ್ಮೇಲೆ ರಾಷ್ಟ್ರೀ ಹೆದ್ದಾರಿ 66 ರ ಜಂಕ್ಷನ್ ಗೆ  ಬಂದಾಗ  ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ MH-47-BB-8363 ನೇ ನಂಬ್ರದ ಕಾರಿನ ಚಾಲಕ ಸಂದೀಪ ಶೆಟ್ಟಿ ತನ್ನ ಕಾರನ್ನು ಜಂಕ್ಷನ್ ಅಂತ ತಿಳಿದು ಸಹ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದಿರುವುದಲ್ಲದೇ,  ಟೋಲ್ ನ ಸೋಲಾರ್ ಕಂಬ ಹಾಗೂ ಡಿವೈಡರ್ ಮಧ್ಯ ಇರುವ ಕೆ.ಇ.ಬಿ ಕಂಬಕ್ಕೆ ಡಿಕ್ಕಿ ಹೊಡೆದು 1,02,000/- ರೂಪಾಯಿ ನಷ್ಟವನ್ನುಂಟು ಮಾಡಿ ಜಖಂಗೊಳಿಸಿರುತ್ತಾನೆ.  ಈ ಅಪಘಾತದಿಂದ ಮೋಟಾರು ಸೈಕಲ್ ನಲ್ಲಿದ್ದ ಇಬ್ಬರು ಸಹ ರಸ್ತೆಗೆ ಬಿದ್ದ ಪರಿಣಾಮ ತಲೆಗೆ , ಮೇ ಕೈಗೆ ಇಬ್ಬರಿಗೂ ಸಾದಾ ಸ್ವರೂಪದ ರಕ್ತಗಾಯವಾಗಿರುತ್ತದೆ   ಈ ಅಪಘಾತದಿಂದ ಕಾರಿನ ಚಾಲಕ ಹಾಗೂ ಕಾರಿನಲ್ಲಿದ್ದವರಿಗೆ ಯಾವುದೇ  ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

 • ಅಮಾಸೆಬೈಲು: ಪಿರ್ಯಾದಿದಾರರಾದ ಆಶ್ವಿತ (19), ತಂದೆ:ಶಂಭು ಶೆಟ್ಟಿ,  ವಾಸ: ಕೆ ಎಸ್ ಎಸ್ ಕಾಂಪ್ಲೇಕ್ಸ ಹೊಸಂಗಡಿ  ಗ್ರಾಮ ಕುಂದಾಪುರ ತಾಲೂಕು ಇವರ ತಂದೆ: ಶಂಭು ಶೆಟ್ಟಿ (55) ಇವರು ಕೆ ಎಸ್ ಎಸ್ ಕಾಂಪ್ಲೇಕ್ಸನಲ್ಲಿ  ಲಕ್ಷ್ಮಿ ಹೋಟೆಲ್ ವ್ಯವಹಾರ ನೆಡೆಸಿಕೊಂಡಿದ್ದು. ಕಳೆದ 20 ವರ್ಷಗಳಿಂದ ಬಿಪಿ ಶುಗರ್ ಕಾಯಿಲೆಯಿದ್ದು ಮತ್ತು ಕಳೆದ 3 ವರ್ಷಗಳಿಂದ ಬಲ ಕಾಲಿನ ಬೆರಳುಗಳ ಮಧ್ಯ ಗಾಯಗಳಾಗಿದ್ದು ಔಷದ  ತೆಗೆದುಕೊಂಡರು ಗಾಯಗಳು ಗುಣಮುಖವಾಗಿರುವುದಿಲ್ಲ, ದಿನಾಂಕ 11/01/2022 ರಂದು ಬೆಳ್ಳಿಗ್ಗೆ 11:30 ಗಂಟೆ ಸಮಯದಲ್ಲಿ ವಾಂತಿ ಮಾಡಿ ಉಸಿರಾಟದ ತೊಂದರೆ ಎಂದು ತಿಳಿಸಿದಂತೆ ಹತ್ತಿರದಲ್ಲಿರುವ ಆಸ್ಪತ್ರೆಯ ವೈದ್ಯರಲ್ಲಿ ಪ್ರಥಮ ಚಿಕಿತ್ಸೆ  ಮಾಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈಧ್ಯಾದಿಕಾರಿಯವರು ಪರೀಕ್ಷಿಸಿ ಆಸ್ಪತ್ರೆಗೆ ಬರುವ  ಮುಂಚೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/2022 ಕಲಂ  :  174   CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಪಿರ್ಯಾದಿದಾರರಾದ ಶೃತಿ (26), ಗಂಡ: ಕಾರ್ತಿಕ್‌ ಕುಮಾರ್‌, ವಾಸ:  ಏಳಾಳಿ  ಹೆಬ್ರಿ  ಗ್ರಾಮ  ಹೆಬ್ರಿ ತಾಲೂಕು ಇವರ ಮಾವ ಮಹಾಬಲ ಪೂಜಾರಿ (60 ಇವರು ಕೃಷಿಕರಾಗಿದ್ದು.  ದಿನಾಂಕ 11/01/2022 ರಂದು ಮದ್ಯಾಹ್ನ 12:30 ಗಂಟೆಗೆ ಮಹಾಬಲ ಪೂಜಾರಿ ರವರು ಹೆಬ್ರಿ ಗ್ರಾಮದ ಏಳಾಳಿ ಎಂಬಲ್ಲಿ ಮನೆಯ ಬಳಿವಿರುವ ಡ್ಯಾಂನ ಹೊಳೆಗೆ ಹೋಗಿ ಹೊಳೆಯ ಮದ್ಯದಲ್ಲಿರುವ ಕಲ್ಲಿನ ಬಂಡೆಯ ಮೇಲೆ ನಿಂತು ಸ್ನಾನ ಮಾಡುತ್ತಿರುವಾಗ ಅವರ ಕಾಲು ಜಾರಿದ ಪರಿಣಾಮ ಅವರು ಅಕಸ್ಮಿಕವಾಗಿ ಹೊಳೆಯ ನೀರಿಗೆ ಬಿದ್ದು ಮುಳುಗಿ ಉಸಿರು ಕಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 02/2022 ಕಲಂ:  174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಶ್ರೀಮತಿ ಶೇಷಿ (65), ಗಂಡ: ದಿ.ಗೋವಿಂದ ದೇವಾಡಿಗ,  ವಾಸ: ಬಾಕಿ ಮನೆ, ರಥಬೀದಿ ಉಪ್ಪುಂದ ಬಿಜೂರು  ಗ್ರಾಮ ಬೈಂದೂರು ತಾಲೂಕು ಇವರ ಬಿಜೂರು ಗ್ರಾಮದ ಸರ್ವೆ ನಂಬ್ರ : 76/8  ರಲ್ಲಿ ಗಂಡ ಗೋವಿಂದ ರವರಿಗೆ ಸಂಬಂದಿಸಿದ 18 ಸೆಂಟ್ಸ್ ಜಾಗವು ಪಿರ್ಯಾದಿದಾರರ ಪಾಲಿಗೆ ಬಂದಿದ್ದು  ದಿನಾಂಕ 11/01/2022 ರಂದು ಬೆಳಿಗ್ಗೆ 8:00 ಗಂಟೆಗೆ ಆರೋಪಿಗಳಾದ 1) ಪದ್ಭನಾಭ, 2) ಲಕ್ಷ್ಮೀ , 3) ವೆಂಕಟೇಶ, 4) ಗಂಗಾಧರ, 5) ಸೀತಾರಾಮ ಇವರು  ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜೆ.ಸಿ.ಬಿ ಯನ್ನು ತಂದು ಪಿರ್ಯಾದಿದಾರರ ಜಾಗದಲ್ಲಿದ್ದ  4 ಮರಗಳನ್ನು ಜೆ.ಸಿ.ಬಿಯಿಂದ ಕಿತ್ತು ನೆಲಸಮ ಮಾಡಿ ಪಿರ್ಯಾದಿದಾರರಿಗೆ 25,000/- ರೂಪಾಯು ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾದ ಕ್ರಮಾಂಕ 11/2022 ಕಲಂ: 447, 427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ದಿನಾಂಕ 07/01/2022 ರಂದು  ಸಂಜೆ 17:30 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಬೀಡು ಎಂಬಲ್ಲಿ ಇಬ್ಬರು ಯುವಕರು ಮತ್ತು ಒಬ್ಬಳು ಯುವತಿ ಮಾದಕ ವಸ್ತು ಸೇವಿಸಿದಂತೆ ಕಂಡುಬಂದಿದ್ದು ಹಾಗೂ ಅವರುಗಳು ಗಾಯಗೊಂಡಿರುವುದಾಗಿ ದೊರೆತ ಮಾಹಿತಿಯಂತೆ  ಠಾಣಾ ಪ್ರಭಾರದಲ್ಲಿದ್ದ ಎಎಸ್‌‌ಐ ಸುರೇಶ್ ಎಂ ರವರು ಸ್ಥಳಕ್ಕೆ ತೆರಳಿ ಸ್ಥಳದಲ್ಲಿದ್ದ ಇಬ್ಬರು ಯುವಕರು ಹಾಗೂ ಒಬ್ಭಳು ಯುವತಿಯ ಹೆಸರು ವಿಳಾಸ ಕೇಳಿದಾಗ ಅವರು ಹೆಸರು, ವಿಳಾಸ ನೀಡುವ ಸ್ಥಿತಿಯಲ್ಲಿ ಇಲ್ಲದಿದ್ದವರನ್ನು ಹಾಗೂ ಗಾಯಗೊಂಡಿದ್ದರಿಂದ ಅವರುಗಳನ್ನು ಚಿಕಿತ್ಸೆಯ ಬಗ್ಗೆ 108 ಅಂಬ್ಯುಲೆನ್ಸ್‌‌ನಲ್ಲಿ ಕಳುಹಿಸಿ ಕೊಟ್ಟಿರುತ್ತಾರೆ. ನಂತರ ಅವರುಗಳ ವಿವರ ತಿಳಿದುಕೊಂಡು ದಿನಾಂಕ 09/01/2022 ರಂದು 1] ಹರ್ಷಿತ್ ಸಿಂಗ್ ರಾವತ್, 2] ಅಜಯ್ ಜೋಶ್ವ, 3] ನಟಶಾ ಯೋಗನಂದನ್ ರಾಜನ್ ಇವರುಗಳು ಅಮಲು ಪದಾರ್ಥ ಸೇವಿಸಿದ್ದವರಂತೆ ಕಂಡು ಬಂದಿದ್ದರಿಂದ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಅವರಲ್ಲಿ 1] ಹರ್ಷಿತ್ ಸಿಂಗ್ ರಾವತ್, ಪ್ರಾಯ: 20 ವರ್ಷ, ತಂದೆ: ನಂದನ್ ಸಿಂಗ್ ರಾವತ್, ವಾಸ: ಮ್ಯಾಗ್ನೊಲಿಯ-005, ಎಲ್& ಟಿ ಸೆರಿನ್ ಕೌಂಟಿ, ಗಚಿಬೌಲಿ ತಾಲೂಕು  ಹೈದರಬಾದ್ ಜಿಲ್ಲೆ. ತೆಲಂಗಾಣ ರಾಜ್ಯ. 2] ಅಜಯ್ ಜೋಶ್ವ, ಪ್ರಾಯ: 20 ವರ್ಷ, ತಂದೆ: ಜಾನಸ್ಸನ್ ಜಯಕರ್ ಥಿಗಾಲ,  ವಾಸ: ಪ್ಲಾಟ್ ನಂಬ್ರ 185, HNO.10-2-282, Road no-6 ಸ್ಟ್ರೀಟ್ ನಂ-5, ವೆಸ್ಟ್ ಮಾರೆಡ್ಪಲಿ, ಸಿಕಂದರ ಬಾದ್,  ಹೈದರಬಾದ್ ಜಿಲ್ಲೆ. ತೆಲಂಗಾಣ ಇವರು ಗಾಂಜಾ ಸೇವಿಸಿರುವುದಾಗಿ ದಿನಾಂಕ 11/01/2022 ರಂದು ವೈದ್ಯರು ದೃಢ ಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2022 ಕಲಂ: 27 (B) NDPS Act ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 11/01/2022 ರಂದು ಮಂಜುನಾಥ, ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರಿಗೆ ದೊರೆತ ಮಾಹಿತಿ ಮೇರೆಗೆ ಉಡುಪಿ ತಾಲೂಕು  ಶಿವಳ್ಳಿ ಗ್ರಾಮದ ಪೆರಂಪಳ್ಳಿ ರೈಲ್ವೇ ಸೇತುವೆಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ 1) ಗ್ಲಾಡನ್ ಕ್ಲೆವಿನ್‌ ರೊಡ್ರಿಗಸ್‌ (21), ತಂದೆ: ಗ್ಲಾಡನ್‌ ಎಫ್‌ ರೋಡ್ರಿಗಸ್‌, ವಾಸ:4-33 ಬಿ, ಗ್ಲೀ ಗ್ಲಾಡ್‌ವೀವ್‌, ನಯಂಪಳ್ಳಿ 3 ನೇ ಕ್ರಾಸ್‌, ಕಲ್ಯಾಣಪುರ, ಉಡುಪಿ ತಾಲೂಕು, 2) ಹೃತಿಕ್‌.ಕೆ. ಎಮ್ (21), ತಂದೆ: ಕೆ,ವಿ ಮನೋಹರ, ವಾಸ: 10/24 ಡಿ, ಜನತಾ ಬೇಕರಿ, ಪಡು ಪೆರಂಪಳ್ಳಿ, ಅಂಬಾಗಿಲು, ಉಡುಪಿ ತಾಲೂಕು ಇವರನ್ನು ವಶಕ್ಕೆ ಪಡೆದು ಅವರಿಂದ ಯಾವುದೇ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 93 ಗ್ರಾಂ ( ಮೌಲ್ಯ ರೂಪಾಯಿ 30,000/-) ತೂಕದ, ಗಾಂಜಾದಿಂದ ಉತ್ಪಾದಿಸಿರುವ ಆಶೀಶ್ ಆಯಿಲ್ ಮತ್ತು ಗಿರಾಕಿ ಕುದುರಿಸಲು ಬಳಸುವ ಮೊಬೈಲ್ ಹ್ಯಾಂಡ್ ಸೆಟ್-2 ( ಮೌಲ್ಯ ರೂಪಾಯಿ 7,000/-) ನ್ನು, ಗಿರಾಕಿಗಳಿಗೆ  ಆಶೀಶ್ ಆಯಿಲ್ನ್ನು ತುಂಬಿಸಿ ನೀಡುತ್ತಿದ್ದ ಸಣ್ಣ ಬಾಟಲಿಗಳನ್ನು, ಆಶೀಶ್ ಆಯಿಲ್ನ್ನು ಇರಿಸಿದ್ದ KA-20-EU-1547 ನಂಬ್ರದ ಹೊಂಡಾ ಡಿಯೋ ಸ್ಕೂಟರ್(ಮೌಲ್ಯ 40,000/-) ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2022 ಕಲಂ:20 (ಬಿ), (II), (ಎ) NDPS Act ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-01-2022 09:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080