ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕೊಲ್ಲೂರು: ಲಚ್ಚು ನಾಯ್ಕ್ (48) ತನ್ನ ಬಾಬ್ತು ಅಡಿಕೆ ತೋಟದಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಸಾಯಂಕಾಲ ಸಮಯ 5-00 ಗಂಟೆಗೆ ಕೆರೆಯಲ್ಲಿ ನೀರನ್ನು ಕೊಡಪಾನದಿಂದ ಮುಳುಗಿಸಿ ತೆಗೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿದವರನ್ನು ನೆರೆಕೆರೆಯವರು ಸೇರಿ ಮೇಲಕ್ಕೆ ಎತ್ತಿ ಹೋಗಿ ನೋಡಲಾಗಿ ಉಸಿರುಗಟ್ಟಿ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/2022 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣಗಳು

  • ಕಾರ್ಕಳ: ಮಧು ಬಿ ಇ , ಕಾರ್ಕಳ ನಗರ ಪೊಲೀಸ್‌ ಠಾಣಾ  ಪೊಲೀಸ್‌ ಉಪ ನಿರೀಕ್ಷಕರು ಇವರು ಇಲಾಖಾ ವಾಹನದಲ್ಲಿ ತಮ್ಮ ಸಿಬ್ಬಂದಿಗಳೊಂದಿಗೆ ದಿನಾಂಕ 12/01/2022 ರಂದು ವಿಶೇಷ ರಾತ್ರಿ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಾ ಅಪರ ರಾತ್ರಿಯ ಸಮಯ ಸುಮಾರು 03:15 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಕಾಬೆಟ್ಟು ಶ್ರೀ ವೇಣುಗೋಪಾಲ ದೇವಸ್ಥಾನದ  ಬಳಿ ಸಾರ್ವಜನಿಕ ಸ್ಥಳದಲ್ಲಿ ಅಪಾದಿತ ಮಹಮ್ಮದ್ ಹನೀಫ್, ಪ್ರಾಯ: 41, ತಂದೆ ಚೆರಿಯನ್ ಸಾಹೇಬ್, ವಾಸ ಸಂತೆಕೊಪ್ಪ,ಕುಡಿಗೆರೆ ಗ್ರಾಮ, ತೀರ್ಥಹಳ್ಳಿ  ತಾಲೂಕು ಈತನು ಯಾವುದೋ ಬೇವಾರಂಟು ತಕ್ಷೀರು ಮಾಡುವ ಇರಾದೆಯಿಂದ ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದುಕೊಂಡು ತನ್ನ ಇರುವಿಕೆಯನ್ನು ಮರೆ ಮಾಚಿಕೊಂಡು ಅಪರ ರಾತ್ರಿಯ ವೇಳೆಯಲ್ಲಿ ಸದರಿ ಸ್ಥಳದಲ್ಲಿ ತನ್ನ ಉಪಸ್ಥಿತಿಯ ಬಗ್ಗೆ ಯಾವುದೇ ಸಮರ್ಪಕವಾದ ಉತ್ತರ ನೀಡದೇ ಇದ್ದ ಕಾರಣ ಅಸಾಮಿಯು ಯಾವುದೋ ಬೇವಾರಂಟು ತಕ್ಷೀರನ್ನು ನಡೆಸುವ ಇರಾದೆಯಿಂದ ಸದರಿ ಸ್ಥಳದಲ್ಲಿ ಇರುವುದಾಗಿ ಸಂಶಯಗೊಂಡು, ಅಸಾಮಿಯನ್ನು 03:30 ಘಂಟೆಗೆ ವಶಕ್ಕೆ ತೆಗೆದುಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣಾ  ಅಪರಾಧ ಕ್ರಮಾಂಕ 07/2022  ಕಲಂ 96(A) KP ACT ಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಮಲ್ಪೆ: ದಿನಾಂಕ 11-01-2022  ರಂದು  ಪಿರ್ಯಾದಿ ಸಕ್ತಿವೇಲು ಈ ಪೊಲೀಸ್ ಉಪನಿರೀಕ್ಷಕರು ಮಲ್ಪೆ ಪೊಲೀಸ್ ಠಾಣೆ ಇವರು ಠಾಣೆಯಲ್ಲಿರುವಾಗ ಸಂಜೆ 18:00 ಗಂಟೆ ಸಮಯಕ್ಕೆ ಠಾಣಾ ಸಿಬ್ಬಂದಿ ಸಿಪಿಸಿ 2586 ಸದಾನಂದ ಇವರಿಗೆ ಬಾತ್ಮೀದಾರರು ಕರೆ ಮಾಡಿ ಕೊಡವೂರು ಗ್ರಾಮದ ಮಲ್ಪೆ-ಕೊಳ ರಸ್ತೆಯ ಲಕ್ಷ್ಮೀ ಲಾಂಡ್ರಿ ಅಂಗಡಿ ಹಿಂಬದಿ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವುದಾಗಿ ಮಾಹಿತಿ ನೀಡಿದ್ದು. ಸದ್ರಿ ಮಾಹಿತಿಯನ್ನು ಪಿರ್ಯಾಧಿದಾರರಿಗೆ ತಿಳಿಸಿದಂತೆ , ಸಿಬ್ಬಂದಿ ಹಾಗೂ ಪಂಚರೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ  ಸಮಯ ಸುಮಾರು 18.15 ಗಂಟೆಗೆ ಇಸ್ಪಿಟು ಜುಗಾರಿ ಆಟ ಆಡುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿದ್ದು ಜುಗಾರಿ ಆಟ ಆಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಅವರಲ್ಲಿ  16 ಜನರಾದ  1) ಮಂಜು ಸಾಲಿಯಾನ್, 2) ರಕ್ಷಿತ್, 3) ಮಂಜು, 4) ಸೋಮನಾಥ, 5) ತಿರುಮಲ, 6) ಶೇಖರ , 7) ಮಂಜು ನಾಯಕ್, ದಾವಣಗೆರೆ  8) ವಿಶ್ವನಾಥ, 9)  ಅರ್ಜುನ್, 10) ಯಮನೂರು , 11) ಗಂಗೇಶ , 12) ಮಲ್ಲೇಶ, 13)  ಹನುಮೇಶ, 14) ರಮೇಶ, 15) ಯಮನೂರು 16) ರೂಪೇಶ , ರವರನ್ನು ವಶಕ್ಕೆ  ಪಡೆದು  ಅವರು ಜುಗಾರಿ ಆಟಕ್ಕೆ  ಬಳಸಿದ್ದ   ಒಟ್ಟು ನಗದು  ರೂಪಾಯಿ  62,480/- ,  ಇಸ್ಪೀಟ್  ಎಲೆ -52, ಮತ್ತು  ಪ್ಲಾಸ್ಟಿಕ್ ಪೇಪರನ್ನು  ಮುಂದಿನ  ಕ್ರಮದ ಬಗ್ಗೆ   ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 04/2022  ಕಲಂ 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.   

 

ಇತ್ತೀಚಿನ ನವೀಕರಣ​ : 12-01-2022 06:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080