ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

 • ಶಿರ್ವ: ದಿನಾಂಕ:10-12-2022 ರಂದು ಶಿರ್ವ ಪೊಲೀಸ್ ಠಾಣಾ ಪಿ.ಎಸ್.ಐ (ಕಾ.ಸು) ರಾಘವೇಂದ್ರ ಸಿ. ರವರು  ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಧ್ಯಾಹ್ನ 14:00 ಗಂಟೆಯ ಸುಮಾರಿಗೆ ಠಾಣಾ ಸಿಬ್ಬಂದಿಯವರಾದ  ಮಂಜುನಾಥ  ಅಡಿಗ ರವರು  ವಿಚಾರ  ತಿಳಿಸಿ ಕಾಪು ತಾಲೂಕು ಶಿರ್ವ ಗ್ರಾಮದ ಚೌಟ ವೈನ್ ಶಾಪ್ ಸಮೀಪ ಇರುವ ಹೆಸರು ಇಲ್ಲದ  ಟೀ ಸ್ಟಾಲ್‌ನ ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಧ್ಯಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಈ ಮಾಹಿತಿಯನ್ನು ಪಡೆದು ಸದ್ರಿ ಸ್ಥಳಕ್ಕೆ ದಾಳಿ ಮಾಡುವರೇ ಮಾಹಿತಿ ಬಂದ ಸ್ಥಳಕ್ಕೆ ತಲುಪಿದಾಗ ಸಾರ್ವಜನಿಕ ಸ್ಥಳದಲ್ಲಿ ಆಪಾದಿತ ಶೈಲೇಶ್‌ ಶೆಟ್ಟಿ (30) ವ್ಯಕ್ತಿಯು ಮದ್ಯಪಾನ ಮಾಡುತ್ತಿದ್ದು ಆತನ ಬಳಿಗೆ ಹೋಗಿ ಆತನ ತಪ್ಪನ್ನು  ಮನವರಿಕೆ ಮಾಡಿದಾಗ ತನ್ನ  ತಪ್ಪಿತವನ್ನು ಒಪ್ಪಿಕೊಂಡನು. ಬಳಿಕ ನೋಟಿಸ್‌ ಜ್ಯಾರಿ ಮಾಡಿ ಆತನ ವಶದಲ್ಲಿದ್ದ ಅರ್ಧ ತುಂಬಿದ ಮದ್ಯದ ಪೌಚ್‌ ಇದ್ದು 1) BANGALORE WHISKY 90 ml, 2) ಅರ್ಧ ತುಂಬಿದ AQUAJAL ನೀರಿನ ಬಾಟಲಿ. 3) ಮದ್ಯ ಸೇವನೆಗೆ ಬಳಸುವ ಒಂದು ಗ್ಲಾಸ್‌ ಮತ್ತು 4) ಎರಡು ಖಾಲಿಯಾದ ಖಾರದ ಮಿಕ್ಷರ್‌ನ ಎರಡು ಪ್ಲಾಸ್ಟಿಕ್‌ ಕವರ ಈ  ಎಲ್ಲಾ  ಈ  ಸೊತ್ತುಗಳನ್ನು  ಪಂಚರು ಮತ್ತು ಸಿಬ್ಬಂದಿಯವರ ಸಮಕ್ಷಮದಲ್ಲಿ ಮಹಜರು ಮುಖೇನ ಸ್ವಾಧೀನಪಡಿಸಿಕೊಳ್ಳಲಾಯಿತು. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 88/22, ಕಲಂ: 15(A), 32(3)ಕರ್ನಾಟಕ ಅಬಕಾರಿ ಕಾಯ್ದೆ ಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: : ಫಿರ್ಯಾದಿ ನವೀನ ಬಂಗೇರ ಇವರು ಚೇರ್ಕಾಡಿ ಗ್ರಾಮ ಪಂಚಾಯತ್‌ ನ ಸದಸ್ಯರಾಗಿದ್ದು, ಆರೋಪಿ ಜಗದೀಶ ಆಚಾರ್ಯ ಸದ್ರಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ನೀರು ಬೀಡುವ ಪಂಪ್‌ ನಿರ್ಹಾಹಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ಆತನಿಗೆ ನೀರು ಬಿಡುವರೇ ನಿರ್ದೇಶನ ನೀಡಲು ಪಿರ್ಯಾದಿದಾರರು ಅಧಿಕಾರ ಹೊಂದಿರುತ್ತಾರೆ. ದಿನಾಂಕ 12.11.2022 ರಂದು ಗ್ರಾಮದಲ್ಲಿ ಕೆಲವೊಂದು ಭಾಗಗಳಿಗೆ ಆರೋಪಿಯು ಉದ್ದೇಶಪೂರಕವಾಗಿ ಕೆಲವು ದಿನಗಳಿಂದ ನೀರು ಬಿಡದೇ ಇದ್ದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು, ಈ ಬಗ್ಗೆ ಫಿರ್ಯಾದುದಾರರು ಸಂಜೆ 5:00 ಗಂಟೆಯ ಸಮಯಕ್ಕೆ ಆರೋಪಿಯನ್ನು ವಿಚಾರಿಸಿದಾಗ, ಆತನು ಏಕಾ ಏಕಿಯಾಗಿ ನೀರು ಬಿಡುವ ಉದ್ದವಾದ ಸ್ವಾನರ್‌ ಅನ್ನು ಹಿಡಿದುಕೊಂಡು ಬಂದು ಫಿರ್ಯಾದುದಾರರ ಮೇಲೆ ಹಲ್ಲೆಗೆ ಮುಂದಾಗಿದ್ದು, ಆಗ  ಫಿರ್ಯಾದುದಾರರು ಜೀವ ಭಯ ದಿಂದ ತಪ್ಪಿಸಿಕೊಳ್ಳಲು ಓಡಿ ಹೋಗುವಾಗ ಆರೋಪಿತನು ಬೆನ್ನಟ್ಟಿ ಬಂದು ಫಿರ್ಯಾದುದಾರರಿಗೆ ಅವಾಚ್ಯವಾಗಿ ಬೈದು ಈ ದಿನ ತಪ್ಪಿಸಿಕೊಂಡು ಹೋದೆಯಾ ನಿನ್ನನ್ನು ನಾಳೆ ಸಂಜೆಯ ಒಳಗೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 212/2022 ಕಲಂ : 504, 506 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿ ಶಿವರಾಮ ನಾಯ್ಕ ಇವರು  KSRTC ಉಡುಪಿ ಘಟಕದಲ್ಲಿ ಘಟಕ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 09/12/2022 ರಂದು 18:00 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿರುವ ಉಡುಪಿ ಕೆ.ಎಸ್‌.ಆರ್‌.ಟಿ.ಸಿ ಘಟಕಕ್ಕೆ ಆಪಾದಿತ ವಾಸು ಮತ್ತು ಇನ್ನೊಬ್ಬ ವ್ಯಕ್ತಿ  ಸಮಾನ ಉದ್ದೇಶದಿಂದ ಅಕ್ರಮ ಪ್ರವೇಶ ಮಾಡಿ, ಅನಗತ್ಯ ಗಲಾಟೆ ಮಾಡಿ ಪಿರ್ಯಾದುದಾರರಿಗೆ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಲ್ಲದೆ ಬೆದರಿಕೆಯನ್ನು ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 181/2022 ಕಲಂ:  353, 447, 506 ಜೊತೆಗೆ 34 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಶ್ರೀಶೈಲ ಡಿ ಎಂ, ಪಿಎಸ್‌ಐ ಕಾ&ಸು, ಕಾಪು ಪೊಲೀಸ್ ಠಾಣೆ ಇವರು ದಿನಾಂಕ: 10-12-2022 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಧ್ಯಾಹ್ನ 12:45 ಗಂಟೆಯ ಸುಮಾರಿಗೆ ಕಾಪು ತಾಲೂಕು, ಮೂಡಬೆಟ್ಟು ಗ್ರಾಮದ, ಕಟಪಾಡಿ ಲತಾ ವೈನ್ ಶಾಪ್ ಹಿಂಬದಿಯ ಸಾರ್ವಜನಿಕ ಗೂಡಂಗಡಿಯಲ್ಲಿ ಇಬ್ಬರು ವ್ಯಕ್ತಿಗಳು ಮಧ್ಯಸೇವನೆ ಮಾಡುತ್ತಿರುವ ಬಗ್ಗೆ ಭಾತ್ಮೀದಾರರೊಬ್ಬರು ನೀಡಿದ ಖಚಿತ ಮಾಹಿತಿಯಂತೆ ಸಿಬ್ಬಂದಿಯವರು ಪಂಚರೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ 13:00 ಗಂಟೆಯ ಸುಮಾರಿಗೆ ಲತಾ ವೈನ್ ಶಾಪ್ ಬದಿಯಲ್ಲಿರುವ ಬಾಟಲಿ ಸೋಡಾ ಮಾರಾಟ ಮಾಡುವ ಗೂಡಂಗಡಿಯ ಬಾಗಿಲನ್ನು ಪಂಚರ ಸಮಕ್ಷಮ ತೆರೆದು ನೋಡಿದಾಗ ಒಳಗಡೆ 1) ಯೋಗೇಶ್ ಮತ್ತು  2) ದಿನೇಶ್ ಇವರುಗಳು ಸೇರಿಕೊಂಡು ಮದ್ಯ ಸೇವನೆ ಮಾಡುತ್ತಿದ್ದು, ಅವರ ಬಳಿ ಇದ್ದ ಮದ್ಯ ತುಂಬಿದ ತಲಾ 180 ಎಮ್.ಎಲ್ ನ Original Choice ಮಧ್ಯದ ಟೆಟ್ರಾ ಪ್ಯಾಕೇಟ್-3 ಅಂದಾಜು ಮೌಲ್ಯ 210/, 180 ಎಮ್.ಎಲ್ ಪ್ರಮಾಣದ Original Choice ಖಾಲಿ ಟೆಟ್ರಾ ಪ್ಯಾಕೇಟ್-1, ಮದ್ಯ ಕುಡಿಯಲು ಬಳಸಿದ ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು-2, 1 ಲೀಟರ್ ಪ್ರಮಾಣದ ಬಿಸ್ಲೇರಿ ಖಾಲಿ ಬಾಟಲಿ-1 ಇದ್ದು, ಇವುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡುತ್ತಿದ್ದ ಆರೋಪಿತರುಗಳ ವಿರುದ್ಧ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 135/2022 ಕಲಂ 15(A), 32(3) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-12-2022 04:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080