Feedback / Suggestions

ಇತರ ಪ್ರಕರಣಗಳು

  • ಶಿರ್ವ: ದಿನಾಂಕ:10-12-2022 ರಂದು ಶಿರ್ವ ಪೊಲೀಸ್ ಠಾಣಾ ಪಿ.ಎಸ್.ಐ (ಕಾ.ಸು) ರಾಘವೇಂದ್ರ ಸಿ. ರವರು  ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಧ್ಯಾಹ್ನ 14:00 ಗಂಟೆಯ ಸುಮಾರಿಗೆ ಠಾಣಾ ಸಿಬ್ಬಂದಿಯವರಾದ  ಮಂಜುನಾಥ  ಅಡಿಗ ರವರು  ವಿಚಾರ  ತಿಳಿಸಿ ಕಾಪು ತಾಲೂಕು ಶಿರ್ವ ಗ್ರಾಮದ ಚೌಟ ವೈನ್ ಶಾಪ್ ಸಮೀಪ ಇರುವ ಹೆಸರು ಇಲ್ಲದ  ಟೀ ಸ್ಟಾಲ್‌ನ ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಧ್ಯಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಈ ಮಾಹಿತಿಯನ್ನು ಪಡೆದು ಸದ್ರಿ ಸ್ಥಳಕ್ಕೆ ದಾಳಿ ಮಾಡುವರೇ ಮಾಹಿತಿ ಬಂದ ಸ್ಥಳಕ್ಕೆ ತಲುಪಿದಾಗ ಸಾರ್ವಜನಿಕ ಸ್ಥಳದಲ್ಲಿ ಆಪಾದಿತ ಶೈಲೇಶ್‌ ಶೆಟ್ಟಿ (30) ವ್ಯಕ್ತಿಯು ಮದ್ಯಪಾನ ಮಾಡುತ್ತಿದ್ದು ಆತನ ಬಳಿಗೆ ಹೋಗಿ ಆತನ ತಪ್ಪನ್ನು  ಮನವರಿಕೆ ಮಾಡಿದಾಗ ತನ್ನ  ತಪ್ಪಿತವನ್ನು ಒಪ್ಪಿಕೊಂಡನು. ಬಳಿಕ ನೋಟಿಸ್‌ ಜ್ಯಾರಿ ಮಾಡಿ ಆತನ ವಶದಲ್ಲಿದ್ದ ಅರ್ಧ ತುಂಬಿದ ಮದ್ಯದ ಪೌಚ್‌ ಇದ್ದು 1) BANGALORE WHISKY 90 ml, 2) ಅರ್ಧ ತುಂಬಿದ AQUAJAL ನೀರಿನ ಬಾಟಲಿ. 3) ಮದ್ಯ ಸೇವನೆಗೆ ಬಳಸುವ ಒಂದು ಗ್ಲಾಸ್‌ ಮತ್ತು 4) ಎರಡು ಖಾಲಿಯಾದ ಖಾರದ ಮಿಕ್ಷರ್‌ನ ಎರಡು ಪ್ಲಾಸ್ಟಿಕ್‌ ಕವರ ಈ  ಎಲ್ಲಾ  ಈ  ಸೊತ್ತುಗಳನ್ನು  ಪಂಚರು ಮತ್ತು ಸಿಬ್ಬಂದಿಯವರ ಸಮಕ್ಷಮದಲ್ಲಿ ಮಹಜರು ಮುಖೇನ ಸ್ವಾಧೀನಪಡಿಸಿಕೊಳ್ಳಲಾಯಿತು. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 88/22, ಕಲಂ: 15(A), 32(3)ಕರ್ನಾಟಕ ಅಬಕಾರಿ ಕಾಯ್ದೆ ಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: : ಫಿರ್ಯಾದಿ ನವೀನ ಬಂಗೇರ ಇವರು ಚೇರ್ಕಾಡಿ ಗ್ರಾಮ ಪಂಚಾಯತ್‌ ನ ಸದಸ್ಯರಾಗಿದ್ದು, ಆರೋಪಿ ಜಗದೀಶ ಆಚಾರ್ಯ ಸದ್ರಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ನೀರು ಬೀಡುವ ಪಂಪ್‌ ನಿರ್ಹಾಹಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ಆತನಿಗೆ ನೀರು ಬಿಡುವರೇ ನಿರ್ದೇಶನ ನೀಡಲು ಪಿರ್ಯಾದಿದಾರರು ಅಧಿಕಾರ ಹೊಂದಿರುತ್ತಾರೆ. ದಿನಾಂಕ 12.11.2022 ರಂದು ಗ್ರಾಮದಲ್ಲಿ ಕೆಲವೊಂದು ಭಾಗಗಳಿಗೆ ಆರೋಪಿಯು ಉದ್ದೇಶಪೂರಕವಾಗಿ ಕೆಲವು ದಿನಗಳಿಂದ ನೀರು ಬಿಡದೇ ಇದ್ದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು, ಈ ಬಗ್ಗೆ ಫಿರ್ಯಾದುದಾರರು ಸಂಜೆ 5:00 ಗಂಟೆಯ ಸಮಯಕ್ಕೆ ಆರೋಪಿಯನ್ನು ವಿಚಾರಿಸಿದಾಗ, ಆತನು ಏಕಾ ಏಕಿಯಾಗಿ ನೀರು ಬಿಡುವ ಉದ್ದವಾದ ಸ್ವಾನರ್‌ ಅನ್ನು ಹಿಡಿದುಕೊಂಡು ಬಂದು ಫಿರ್ಯಾದುದಾರರ ಮೇಲೆ ಹಲ್ಲೆಗೆ ಮುಂದಾಗಿದ್ದು, ಆಗ  ಫಿರ್ಯಾದುದಾರರು ಜೀವ ಭಯ ದಿಂದ ತಪ್ಪಿಸಿಕೊಳ್ಳಲು ಓಡಿ ಹೋಗುವಾಗ ಆರೋಪಿತನು ಬೆನ್ನಟ್ಟಿ ಬಂದು ಫಿರ್ಯಾದುದಾರರಿಗೆ ಅವಾಚ್ಯವಾಗಿ ಬೈದು ಈ ದಿನ ತಪ್ಪಿಸಿಕೊಂಡು ಹೋದೆಯಾ ನಿನ್ನನ್ನು ನಾಳೆ ಸಂಜೆಯ ಒಳಗೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 212/2022 ಕಲಂ : 504, 506 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ಶಿವರಾಮ ನಾಯ್ಕ ಇವರು  KSRTC ಉಡುಪಿ ಘಟಕದಲ್ಲಿ ಘಟಕ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 09/12/2022 ರಂದು 18:00 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿರುವ ಉಡುಪಿ ಕೆ.ಎಸ್‌.ಆರ್‌.ಟಿ.ಸಿ ಘಟಕಕ್ಕೆ ಆಪಾದಿತ ವಾಸು ಮತ್ತು ಇನ್ನೊಬ್ಬ ವ್ಯಕ್ತಿ  ಸಮಾನ ಉದ್ದೇಶದಿಂದ ಅಕ್ರಮ ಪ್ರವೇಶ ಮಾಡಿ, ಅನಗತ್ಯ ಗಲಾಟೆ ಮಾಡಿ ಪಿರ್ಯಾದುದಾರರಿಗೆ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಲ್ಲದೆ ಬೆದರಿಕೆಯನ್ನು ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 181/2022 ಕಲಂ:  353, 447, 506 ಜೊತೆಗೆ 34 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಶ್ರೀಶೈಲ ಡಿ ಎಂ, ಪಿಎಸ್‌ಐ ಕಾ&ಸು, ಕಾಪು ಪೊಲೀಸ್ ಠಾಣೆ ಇವರು ದಿನಾಂಕ: 10-12-2022 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಧ್ಯಾಹ್ನ 12:45 ಗಂಟೆಯ ಸುಮಾರಿಗೆ ಕಾಪು ತಾಲೂಕು, ಮೂಡಬೆಟ್ಟು ಗ್ರಾಮದ, ಕಟಪಾಡಿ ಲತಾ ವೈನ್ ಶಾಪ್ ಹಿಂಬದಿಯ ಸಾರ್ವಜನಿಕ ಗೂಡಂಗಡಿಯಲ್ಲಿ ಇಬ್ಬರು ವ್ಯಕ್ತಿಗಳು ಮಧ್ಯಸೇವನೆ ಮಾಡುತ್ತಿರುವ ಬಗ್ಗೆ ಭಾತ್ಮೀದಾರರೊಬ್ಬರು ನೀಡಿದ ಖಚಿತ ಮಾಹಿತಿಯಂತೆ ಸಿಬ್ಬಂದಿಯವರು ಪಂಚರೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ 13:00 ಗಂಟೆಯ ಸುಮಾರಿಗೆ ಲತಾ ವೈನ್ ಶಾಪ್ ಬದಿಯಲ್ಲಿರುವ ಬಾಟಲಿ ಸೋಡಾ ಮಾರಾಟ ಮಾಡುವ ಗೂಡಂಗಡಿಯ ಬಾಗಿಲನ್ನು ಪಂಚರ ಸಮಕ್ಷಮ ತೆರೆದು ನೋಡಿದಾಗ ಒಳಗಡೆ 1) ಯೋಗೇಶ್ ಮತ್ತು  2) ದಿನೇಶ್ ಇವರುಗಳು ಸೇರಿಕೊಂಡು ಮದ್ಯ ಸೇವನೆ ಮಾಡುತ್ತಿದ್ದು, ಅವರ ಬಳಿ ಇದ್ದ ಮದ್ಯ ತುಂಬಿದ ತಲಾ 180 ಎಮ್.ಎಲ್ ನ Original Choice ಮಧ್ಯದ ಟೆಟ್ರಾ ಪ್ಯಾಕೇಟ್-3 ಅಂದಾಜು ಮೌಲ್ಯ 210/, 180 ಎಮ್.ಎಲ್ ಪ್ರಮಾಣದ Original Choice ಖಾಲಿ ಟೆಟ್ರಾ ಪ್ಯಾಕೇಟ್-1, ಮದ್ಯ ಕುಡಿಯಲು ಬಳಸಿದ ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು-2, 1 ಲೀಟರ್ ಪ್ರಮಾಣದ ಬಿಸ್ಲೇರಿ ಖಾಲಿ ಬಾಟಲಿ-1 ಇದ್ದು, ಇವುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡುತ್ತಿದ್ದ ಆರೋಪಿತರುಗಳ ವಿರುದ್ಧ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 135/2022 ಕಲಂ 15(A), 32(3) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 09-12-2022 ರಂದು ಸಂತೋಷ್ ಎ ಕಾಯ್ಕಿಣಿ , ಪೊಲೀಸ್ ವೃತ್ತ ನಿರೀಕ್ಷಕರು, ಬೈಂದೂರು ವೃತ್ತ ಬೈಂದೂರು ಇವರು  ಕುಂದಾಪುರ ಉಪ ವಿಭಾಗದ ರಾತ್ರಿ ರೌಂಡ್ಸ್ ಉಸ್ತುವಾರಿ ಕರ್ತವ್ಯದ ಬಗ್ಗೆ ಬೈಂದೂರು ವೃತ್ತ ಕಚೇರಿಯಿಂದ  ರಾತ್ರಿ 11:00 ಗಂಟೆಗೆ ಹೊರಟು  ಗಂಗೊಳ್ಳಿ  ಕಡೆಗಳಲ್ಲಿ ರೌಂಡ್ಸ್ ಮಾಡಿಕೊಂಡು  ನಂತರ ಅಲ್ಲಿಂದ ಬೈಂದೂರು ಕಡೆಗೆ ಹೊರಟು ರಾ ಹೆ 66 ರಲ್ಲಿ  ಬರುತ್ತಿರುವಾಗ  ದಿನಾಂಕ 10-12-2022 ರಂದು  01:20 ಗಂಟೆಗೆ  ಕಿರಿಮಂಜೇಶ್ವರ ಗ್ರಾಮದ ನಾಗೂರು ಮಹಿಳಾ ವಿವಿದೊದ್ದೇಶ ಸಹಕಾರಿಸಂಘದಿಂದ ಸುಮಾರು 50 ಮೀಟರ್ ಹಿಂದೆ ಮೂವರು ವ್ಯಕ್ತಿಗಳು KA 41 V 4671 ನೇ ಹೊಂಡಾ  ಆಕ್ಟೀವಾ ಸ್ಕೂಟರನ್ನು  ದೂಡಿಕೊಂಡು ಬೈಂದೂರು ಕಡೆಗೆ ಬರುತ್ತಿದ್ದವರು ಇಲಾಖಾ ಜೀಪನ್ನು ನೋಡಿ ತಮ್ಮ ಇರುವಿಕೆಯನ್ನು ಮರೆಮಾಚಲು ಅವಿತುಕೊಳ್ಳಲು ಪ್ರಯತ್ನಿಸಿದವರನ್ನು ಅವರ ಬಳಿ ಹೋಗಿ ವಿಚಾರಿಸಲಾಗಿ ತಮ್ಮ ಹೆಸರು ಶೇಕ್‌ ಪರ್ಯಾಜ್‌ ಅಹಮ್ಮದ್‌‌, ನಾಯಿಫ್‌ ಹಾಗೂ ಇನ್ನೊಬ್ಬನ ಹೆಸರು ಸರಿಯಾಗಿ ಹೇಳಿರುವುದಿಲ್ಲ. ಅವರುಗಳಲ್ಲಿ ಸ್ಕೂಟರ್ ನ ದಾಖಲೆಪತ್ರಗಳನ್ನು ತೋರಿಸಲು ಹೇಳಿದ್ದು, ತೋರಿಸಿರುವುದಿಲ್ಲ. ಸದ್ರಿ ವ್ಯಕ್ತಿಗಳಲ್ಲಿ ಶೇಕ್‌ ಫರ್ಯಾಜ್‌ ಅಹಮ್ಮದ್‌ ಎಂಬಾತನು ಬೈಂದೂರು ಪೊಲೀಸ್ ಠಾಣೆ ಕಳ್ಳತನ ಪ್ರಕರಣದ ಆರೋಪಿತನಾಗಿದ್ದು ಅವರುಗಳಲ್ಲಿ ಮದ್ಯರಾತ್ರಿ ಸಮಯ ಎಲ್ಲಿಗೆ ಹೋಗುತ್ತಿರುವುದಾಗಿ ವಿಚಾರಿಸಲಾಗಿ, ಕಾರಣವನ್ನು ಸರಿಯಾಗಿ ಹೇಳದೇ ನಂತರ ಮಂಗಳೂರಿಗೆ ಹೋಗಲು ಕಾರನ್ನು ಬೈಂದೂರಿನ ರಿಯಾಝ್ ಎಂಬಾತನು ನಾಗೂರು ಬಳಿ ಕೊಡುವುದಾಗಿ ಹೇಳಿದ್ದು ಅದನ್ನು ತೆಗೆದುಕೊಂಡು ಮಂಗಳೂರಿಗೆ ಹೋಗಲು ಬಂದಿರುವುದಾಗಿ ಹಾಗೂ ನಾವುಂದದ ಬಳಿ ಬರುವಾಗ ನಮ್ಮ ಸ್ಕೂಟರ್  ಹಾಳಾಗಿರುವುದರಿಂದ ಅದನ್ನು ದೂಡಿಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾರೆ. ಅವರುಗಳ ಹೇಳಿದ ವಿಚಾರಗಳು  ಒಂದಕ್ಕೊಂದು  ತಾಳೆಯಾಗದೇ ಇದ್ದುದರಿಂದ ಆಪಾದಿತರನ್ನು  ಕೂಲಂಕುಷವಾಗಿ ವಿಚಾರಿಸಿ  ಆಪಾದಿತರು ತಿಳಿಸಿದಂತೆ ಸ್ಥಳಗಳಿಗೆ ಹೋಗಿ ಅವರು ತಿಳಿಸಿದ ವಿಚಾರಗಳ ಬಗ್ಗೆ  ಆಪಾದಿತರು ತೋರಿಸಿಕೊಟ್ಟ  ಮನೆಯವರನ್ನು ವಿಚಾರಿಸಿ ಮಾಹಿತಿ ಕಲೆ ಹಾಕಿದಾಗ ಆಪಾದಿತರು ಸಂಶಯಾಸ್ಪದವಾಗಿ ಮಾತನಾಡುತ್ತಿದ್ದುದು  ಖಚಿತಗೊಂಡು  ಮಧ್ಯರಾತ್ರಿ ಸಮಯ ತಮ್ಮ ಇರುವಿಕೆಯನ್ನು  ಮರೆಮಾಚಲು ಪ್ರಯತ್ನಿಸಿ, ಮಧ್ಯರಾತ್ರಿಯ ಸಮಯ ಸಂಚರಿಸುತ್ತಿದ್ದ ಬಗ್ಗೆ ಕೇಳಿದಾಗ, ಸಕಾರಣವನ್ನು ನೀಡದೇ ಇದ್ದು, ಅವರ  ನಡವಳಿಕೆಗಳು ಸಂಶಯಾಸ್ಪದವಾಗಿದ್ದುದರಿಂದ  .
  • ಕಾಪು: ಭರತೇಶ್ ಕೆ. ಪಿಎಸ್‌ಐ , ಕಾಪು ಪೊಲೀಸ್ ಠಾಣೆ ಇವರು ದಿನಾಂಕ: 10-12-2022 ರಂದು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 15:00 ಗಂಟೆಯ ಸುಮಾರಿಗೆ ಕಾಪು ತಾಲೂಕು, ಮೂಡಬೆಟ್ಟು ಗ್ರಾಮದ, ಕಟಪಾಡಿ ಸುವರ್ಣ ವೈನ್ ಶಾಪ್ ಹಿಂಬದಿಯ ಸಾರ್ವಜನಿಕ ಗೂಡಂಗಡಿಯಲ್ಲಿ ಇಬ್ಬರು ವ್ಯಕ್ತಿಗಳು ಮಧ್ಯಸೇವನೆ ಮಾಡುತ್ತಿರುವ ಬಗ್ಗೆ ಭಾತ್ಮೀದಾರರೊಬ್ಬರು ನೀಡಿದ ಖಚಿತ ಮಾಹಿತಿಯಂತೆ ಪಂಚರೊಂದಿಗೆ ಸದ್ರಿ ಸ್ಥಳಕ್ಕೆ 15:30 ಗಂಟೆಗೆ ಹೋಗಿ ನೋಡಿದಾಗ  ಮಲ್ಲಪ್ಪ ಕುರಿ  ಮತ್ತು ಶಂಕರ ಇವರುಗಳು  ಕುಳಿತುಕೊಂಡು ಮದ್ಯ ಸೇವನೆ ಮಾಡುತ್ತಿದ್ದು, ಅವರುಗಳನ್ನು ವಶಕ್ಕೆ ಪಡೆದು ಹೆಸರು, ವಿಳಾಸ ವಿಚಾರಿಸಿ ಅವರ ಬಳಿ ಇದ್ದ ಮದ್ಯ ತುಂಬಿದ ತಲಾ 180 ಎಮ್.ಎಲ್ ನ HAYWARDS ಮಧ್ಯದ ಟೆಟ್ರಾ ಪ್ಯಾಕೇಟ್-3 ಅಂದಾಜು ಮೌಲ್ಯ 210/, 180 ಎಮ್.ಎಲ್ ಪ್ರಮಾಣದ HAYWARDS ಖಾಲಿ ಟೆಟ್ರಾ ಪ್ಯಾಕೇಟ್-1, ಮದ್ಯ ಕುಡಿಯಲು ಬಳಸಿದ ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು-2, 500 ML ಪ್ರಮಾಣದ ಬಿಸ್ಲೇರಿ ಖಾಲಿ ಬಾಟಲಿ-2 ಇದ್ದು, ಇವುಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 136/2022 ಕಲಂ 15(A), 32(3) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪುರುಷೋತ್ತಮ ಎ ಪೊಲೀಸ್ ಉಪನಿರೀಕ್ಷಕರು ಪಡುಬಿದ್ರಿ ಠಾಣೆ ಇವರು ದಿನಾಂಕ: 10.12.2022 ರಂದು ಸಿಬ್ಬಂದಿಯವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 17:30 ಗಂಟೆಯ ಸುಮಾರಿಗೆ ಕಾಪು ತಾಲೂಕು, ಹೆಜಮಾಡಿ ಗ್ರಾಮದ, ಹೆಜಮಾಡಿ ಗುಂಡಿ ಎಂಬಲ್ಲಿರುವ ಪುಶ್ಯ ವೈನ್ ಶಾಪ್‌ನ ಬದಿಯಲ್ಲಿ ವೈನ್‌ ಶಾಪ್ ನ ಉತ್ತರ ಬದಿಯ ಕಿಟಕಿಯಿಂದ ನೀಡಿದ ಮದ್ಯವನ್ನು ಅಲ್ಲಿಯೇ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರು ಸೇವನೆ ಮಾಡುತ್ತಿರುವ ಬಗ್ಗೆ ಭಾತ್ಮೀದಾರರೊಬ್ಬರು ನೀಡಿದ ಖಚಿತ ಮಾಹಿತಿಯಂತೆ ಪಿರ್ಯಾದಿದಾರರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ 18:00 ಗಂಟೆಯ ಸುಮಾರಿಗೆ ಪುಶ್ಯ ವೈನ್‌ ಶಾಪ್ ಎದುರು ಹೋದಾಗ ವೈನ್‌ ಶಾಪ್ ನ ಉತ್ತರ ಬದಿಯ ಗೋಡೆಯ ಕಿಟಕಿಯಿಂದ ನವೀನ್ ಎಂಬ ಆಪಾದಿತ ನವೀನ ಈತನು ಸಾರ್ವಜನಿಕರಿಗೆ  ಹೊರಗಡೆಯಿಂದ ಸೇವಿಸಲು ಮದ್ಯವನ್ನು ನೀಡುತ್ತಿದ್ದು, ಆತನನ್ನು ವಿಚಾರಿಸಿ ಹೆಸರು ವಿಳಾಸ ಪಡೆದುಕೊಂಡು ಅತನ ಬಳಿ ಇದ್ದ 1] 90 ಮಿ.ಲೀ. ನ ಅಮೃತ್ ಪ್ರೆಸ್ಟಿಜ್ ವೈನ್‌ ವಿಸ್ಕಿ ಎಂದು ಪ್ರಿಂಟ್  ಇರುವ ಟೆಟ್ರಾ ಪ್ಯಾಕೇಟ್-1, 2] 90 ಮಿ.ಲೀ. ನ  ಡಿ.ಕೆ. ಡಬಲ್ ಕಿಕ್‌ ಫೈನ್ ವಿಸ್ಕಿ ಎಂದು ಪ್ರಿಂಟ್  ಇರುವ ಟೆಟ್ರಾ  ಪ್ಯಾಕೇಟ್-1, 3] 90 ಮಿ.ಲೀ. ನ ಒರಿಜನಲ್ ಚಾಯ್ಸ್  ಡಿಲಕ್ಸ್ ವಿಸ್ಕಿ ಎಂದು ಪ್ರಿಂಟ್ ಇರುವ ಟೆಟ್ರಾ ಪ್ಯಾಕೇಟ್-1, 4] 90 ಮಿ.ಲೀ. ನ  ಮೈಸೂರು ಲಾನ್ಸರ್ ವಿಸ್ಕಿ ಎಂದು ಪ್ರಿಂಟ್  ಇರುವ ಟೆಟ್ರಾ ಪ್ಯಾಕೇಟ್-1, 5] ಅರ್ಧ ಲೀಟರ್‌ನ ನೀರಿನ ಬಾಟಲಿಯಲ್ಲಿ ಸುಮಾರು ಅರ್ಧದಷ್ಟಿರುವ  ಮದ್ಯ ಮತ್ತು ನೀರಿನ ಮಿಶ್ರಣ ಮಾಡಿ ತುಂಬಿರುವ ಪ್ಲಾಸ್ಟಿಕ್ ಬಾಟಲಿ-1, 6] ನೀರು ಕುಡಿಯುವ ಪ್ಲಾಸ್ಟಿಕ್ ಲೋಟ- 3, 7] 330 ಮಿ.ಲೀ.ನ  ಬುಲೆಟ್ ಸೂಪರ್ ಸ್ಟ್ರಾಂಗ್ ಬಿಯರ್ ನ  ಖಾಲಿ ಗಾಜಿನ ಬಾಟಲಿ-1, ಇವುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಪಡುಬಿದ್ರಿ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 158/2022 ಕಲಂ: 15(A), 32(3) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ  ಪ್ರಕರಣ ದಾಖಲಾಗಿರುತ್ತದೆ.

 

Last Updated: 11-12-2022 04:35 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080