ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕೊಲ್ಲೂರು: ಪಿರ್ಯಾದಿದಾರರಾದ ರತ್ನಾಕರ  ಶೆಟ್ಟಿ (44), ತಂದೆ: ಗಣಪಯ್ಯ ಶೆಟ್ಟಿ,  ವಾಶ: ಜೆಡ್ಡಿನ ಮುಲ್ಲಿ  ಮಂಜಿ ಕೋಡ್  ಮೇಲ್ ಹೊಸೂರು  ಹೊಸೂರು ಗ್ರಾಮ  ಕುಂದಾಫುರ ತಾಲೂಕು ಇವರು ದಿನಾಂಕ 10/12/2021 ರಂದು  ಮದ್ಯಾಹ್ನ 12:45  ಗಂಟೆಗೆ ತನ್ನ ಮಾಯಿ ನಾಗಮ್ಮ ಶೆಟ್ಟಿ ಯವರೊಂದಿಗೆ  ಇಡೂರು  ಪಂಚಾಯತಿಗೆ ಬಂದು  ಕೆಲಸ ಮುಗಿಸಿ ವಾಪಾಸು  ಹೊಸೂರು ಗೆ ಹೋಗಲು  ಇಡೂರು ಗ್ರಾಮ ಪಂಚಾಯತ್ ಎದುರು   ರಿಕ್ಷಾಕ್ಕಾಗಿ ಕಾಯುತ್ತಿದ್ದಾಗ,  ಚಿತ್ತೂರು ಕಡೆಯಿಂದ ಇಡೂರು ಕಡೆಗೆ KA-20-EJ-0488 ನೇ ಮೋಟಾರ್ ಸೈಕಲ್  ಸವಾರನು ತನ್ನ  ಮೋಟಾರ್ ಸೈಕಲನ್ನು ಅತೀ ವೇಗವಾಗಿ ಅಜಗಾರೂಕತೆಯಿಂದ ಚಲಾಯಿಸಿಕೊಂಡು ಬಂದು  ಇಡೂರು ಗ್ರಾಮ ಪಂಚಾಯತ್ ಎದುರು ತೀರಾ ಎಡ ಬದಿಗೆ ಚಲಾಯಿಸಿ ರಸ್ತೆ  ಬದಿಯಲ್ಲಿ  ನಿಂತಿದ್ದ ನಾಗಮ್ಮ ಶೆಟ್ಟಿ  ರವರಿಗೆ  ಢಿಕ್ಕಿ ಹೊಡೆದ ಪರಿಣಾಮ ಅವರ ಎಡ ಕೈ ಭುಜಕ್ಕೆ , ಕುತ್ತಿಗೆಗೆ, ಬೆನ್ನಿ ಗೆ ಹಾಗೂ ಸೊಂಟಕ್ಕೆ ಒಳ ಜಖಂ ಉಂಟಾಗಿ  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ  ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ:  ದಿನಾಂಕ 10/12/2021 ರಂದು ಪಿರ್ಯಾದಿದಾರರಾದ ಕೀರ್ತನ್  (24), ತಂದೆ: ಎನ್ ರವಿಂದ್ರ ಆಚಾರ್ಯ, ಮನೆ ನಂಬ್ರ, 11-58 A  ಶ್ರೀ ವಿನಾಯಕ ಅನಂತಕೃಷ್ಣ ನಗರ 3 ನೇ ಕ್ರಾಸ್ ಕುತ್ಪಾಡಿ  ಉದ್ಯಾವರ ಉಡುಪಿ ಜಿಲ್ಲೆ ಇವರು ತನ್ನ KA-20-MA- 7549 ನೇ ಕಾರನ್ನು  ಉದ್ಯಾವರ ಕಡೆಯಿಂದ ಅಂಬಲಪಾಡಿ ಕಡೆಗೆ 66 ರಲ್ಲಿಚಲಾಯಿಸಿಕೊಂಡು ಬಂದು ಬಲಾಯ್ಪಾದೆ ಜಂಕ್ಷನ್ ಬಳಿ  ಸಾಗರ್ ಎಮ್ ಕಾರು ವರ್ಕ್ ಶಾಪ್ ಬಳಿ ತಲುಪುವಾಗ ಪೋನ್ ಬಂದದಿರುವುದರಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ರಸ್ತೆಯ ಎಡಭಾಗ ಮಣ್ಣಿನ ರಸ್ತೆಯಲ್ಲಿ ಪಾರ್ಕ್ ಮಾಡಿಕೊಂಡು ಪೋನ್ ಲ್ಲಿ  ಮಾತನಾಡುತ್ತಿರುವಾಗ 12:25 ಗಂಟೆಗೆ KA-20-C-5908 ನಂಬ್ರದ ಮ್ಯಾಜಿಕ್ ಇಂಡಿಯಾದ ಆಟೋ  ಚಾಲಕ ಹಿಂದಿನಿಂದ ಉದ್ಯಾವರ ಕಡೆಯಿಂದ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು  ಬಂದು ತೀರಾ ಎಡಬದಿಗೆ ಬಂದು ಪಿರ್ಯಾದಿದಾರರ ಕಾರಿಗೆ  ಹಿಂದಿನಿಂದ ಡಿಕ್ಕಿಹೊಡೆದ  ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಭಾಗ ಜಖಂ ಆಗಿದ್ದು   KA-20-C-5908 ನಂಬ್ರದ ಮ್ಯಾಜಿಕ ಐರಿಸ್ ಆಟೋ ಸಹ ಜಖಂ ಆಗಿದ್ದು ಅದರಲ್ಲಿದ್ದ ಚಾಲಕ ಸೇರಿ ಐದು ಜನರಿಗೆ ಗಾಯ ವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86/2021 ಕಲಂ : 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 08/12/2021  ರಂದು ಪಿರ್ಯಾದಿದಾರರಾದ ಉಮೇಶ (60), ತಂದೆ: ದಿ.ಗೋಪಾಲ ಪೂಜಾರಿ, ವಾಸ: ಸುಮೀತ್ ನಿಲಯ, ಬೈಲಕೆರೆ, ತೊಟ್ಟಂ ತೆಂಕನಿಡಿಯೂರು ಗ್ರಾಮ, ಉಡುಪಿ, ತಾಲೂಕು ಇವರ  ಮಗ  ಸುಜಿತ್  ತಾನು ಕೆಲಸ ಮಾಡುತ್ತಿದ್ದ  ಸಂತೆಕಟ್ಟೆ ಯ ಪೋರ್ಸ ಕಂಪೆನಿಯಲ್ಲಿ ಕೆಲಸ ಮುಗಿಸಿ ತನ್ನ ಮನೆ ಕಡೆ  ತನ್ನ ಟಾರು ಸೈಕಲ್ ನಂಬ್ರ  KA-20-K-9778 ನ್ನು ಸವಾರಿ ಮಾಡಿಕೊಂಡು ಹೊಗುತ್ತಿರುವಾಗ  ಸಂಜೆ 06:00 ಗಂಟೆಗೆ  ಸಂತೆಕಟ್ಟೆ ಕಲ್ಯಾಣಪುರ ರಸ್ತೆಯಲ್ಲಿರುವ ನಿಸರ್ಗ ಲೇ ಔಟ್  ಜಂಕ್ಷನ ತಲುಪುವಾಗ 1 ನೇ ಕ್ರಾಸ್ ನಿಸರ್ಗ ಲೇ ಔಟ್ ಜಂಕ್ಷನ್ ನಿಂದ KA-20-MD-0461  ಜೆಸಿಬಿ ಚಾಲಕ ಪಡಿಯಪ್ಪ ಗುಲಾಗುಲಿ ತನ್ನ ಜೆಸಿಬಿ ಯನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಸುಜಿತ್ ರವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಸುಜಿತ್ ರವರು ಮೋಟಾರು ಸೈಕಲ್ ಸಮೇತ ರಸ್ತೆ ಗೆ ಬಿದ್ದು ಬಲ ಕಾಲಿನ ಮೂಳೆ ಮೂರಿತ ಉಂಟಾಗಿ ಮಣಿಪಾಲ ಕೆಎಂಸಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕೆತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2021 ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಸಂಕೇತ್ ಕಾಮತ್ (32), ತಂದೆ :ಸೂರ್ಯ ನಾರಾಯಣ ಕಾಮತ್, ವಾಸ : 2-87 (ಎ) ದಾಮೋದರ ಕೃಪಾ ಪೊಸಾರು ಮೂಡಬೆಟ್ಟು ಕಟಪಾಡಿ ಉಡುಪಿ ಇವರು ದಿನಾಂಕ 10/12/2021 ರಂದು ಸಂಜೆ 06:00 ಗಂಟೆಗೆ ಮೂಡಬೆಟ್ಟು ಗ್ರಾಮದ  ಬಿಸ್ಮಿಲ್ಲಾ ಹೋಟೆಲ್ ಸಮೀಪ ಬಂದಿರುವಾಗ ಪಿರ್ಯಾದಿದಾರರ ಚಿಕ್ಕಪ್ಪ ರಾಜೇಂದ್ರ ಕಾಮತ್ (56) ರವರು ಸೈಕಲ್ ನಲ್ಲಿ ಮಂಗಳೂರು – ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯಲ್ಲಿ ಕಟಪಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಓರ್ವ ಕಾರು ಚಾಲಕ ತನ್ನ ಕಾರನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ತೀರ ಎಡ ಬದಿಗೆ ಚಲಾಯಿಸಿಕೊಂಡು ಬಂದು ಸೈಕಲ್ ನಲ್ಲಿ ಹೋಗುತ್ತಿದ್ದ ರಾಜೇಂದ್ರ ಕಾಮತ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು ಅವರನ್ನು ಸ್ಥಳೀಯರ ಸಹಾಯದಿಂದ ಅದೇ ಕಾರಿನಲ್ಲಿ ಉಡುಪಿ ಹೈಟೆಕ್ ಆಸ್ಪತ್ರೆ ನಂತರ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು  ರಾಜೇಂದ್ರ ಕಾಮತ್ ರವರನ್ನು ಪರೀಕ್ಷಿಸಿ ಅವರು ಈಗಾಗಲೇ ಮೃತ ಪಟ್ಟಿರುವುದಾಗಿ ಸಂಜೆ 07.00 ಗಂಟೆಗೆ ತಿಳಿಸಿರುತ್ತಾರೆ. ಅಪಘಾತ ಮಾಡಿದ ಕಾರು ನಂಬ್ರ MH-03-BS-5219 ಆಗಿದ್ದು ಅದರ ಚಾಲಕನ  ಹೆಸರು ಸಂಜೀತ್ ಶೆಟ್ಟಿ ಎಂಬುದಾಗಿ ತಿಳಿದು ಬಂದಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 181/2021 ಕಲಂ: 279,  304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಸುಮತಿ (67), ಗಂಡ: ತಿಮ್ಮಪ್ಪ, ವಾಸ: ಕೋಂಕೆಬೆಟ್ಟು ಕುಂಟಾಡಿ, ಕಲ್ಯಾ ಗ್ರಾಮ ಕಾರ್ಕಳ ತಾಲೂಕು ಇವರ ಮಗ ಗಣೇಶ ಪೂಜಾರಿ (35) ಇವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸಳ್ಳವರಾಗಿದ್ದು, ತನಗೆ ಈ ಜೀವನ ಬೇಡ ತಾನು ಸಾಯುತ್ತೇನೆ ಎಂದು ಪಿರ್ಯಾದಿದಾರರಲ್ಲಿ  ಆಗಾಗ್ಗೆ ತಿಳಿಸುತ್ತಿದ್ದವರು ದಿನಾಂಕ 10/12/2021 ರಂದು ಮಧ್ಯಾಹ್ನ 1:00 ಗಂಟೆಯಿಂದ 1:15 ಗಂಟೆಯ ಮಧ್ಯೆ ತನ್ನ ವಾಸ್ತವ್ಯದ ಮನೆಯ ಅಂಗಳದಲ್ಲಿ ಹಾಕಲಾದ ತಗಡು ಶೀಟಿನ ಮಾಡಿಗೆ ಹಾಕಲಾದ ಕಬ್ಬಿಣದ ಅಡ್ಡಕ್ಕೆ ಬಾವಿಯ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 47/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಬಸವರಾಜ್‌ ಎಸ್‌ ಎತ್ತಿನಮನೆ (38), ತಂದೆ: ಸಿದ್ದಪ್ಪ ಎತ್ತಿನಮನೆ, ವಾಸ: ಅರುಣ್‌ಶೆಟ್ಟಿಯವರ ಬಾಡಿಗೆ ಮನೆ, ದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿ, ಮಂಚಿ ಕೋಡಿ, ಉಡುಪಿ ತಾಲೂಕು ಇವರು ಓಮ್ನಿ ಕಾರು ನಂಬ್ರ KA-20-B-4519 ನೇದನ್ನು ಸುಕುಮಾರ್‌ ಶೆಟ್ಟಿ ಎಂಬುವವರಿಂದ ಖರೀದಿಸಿದ್ದು, ದಿನಾಂಕ 09/12/2021 ರಂದು ಕಾರಿನ ಇನ್ಸುರೆನ್ಸ್‌ನ್ನು ತನ್ನ ಹೆಸರಿಗೆ ಬದಲಿಸಿಕೊಡುವಂತೆ ಪಿರ್ಯಾದಿದಾರರು ನಿತಿನ್‌ ಎಂಬುವವರಿಗೆ ಕರೆ ಮಾಡಿ ತಿಳಿಸಿದ್ದು, ಅವರು ಕೃಷ್ಣ ಮಠದ ಪಾರ್ಕಿಂಗ್‌ ಸ್ಥಳಕ್ಕೆ ಓಮ್ನಿಯನ್ನು ತೆಗೆದುಕೊಂಡು ಹೋಗಿ ಅಲ್ಲಿಗೆ ಇನ್ಸುರೆನ್ಸ್‌ ಮಾಡಿಸಲು ಜನ ಕಳುಹಿಸಿಕೊಡುತ್ತೇನೆ ಎಂದು ತಿಳಿಸಿದ ಮೇರೆಗೆ ಪಿರ್ಯಾದಿದಾರರು ಶಿವಳ್ಳಿ ಗ್ರಾಮದ ಕೃಷ್ಣ ಮಠದ ಪಾರ್ಕಿಂಗ್‌ ಸ್ಥಳಕ್ಕೆ ಓಮ್ನಿ ಕಾರಿನ ಜೊತೆ ಹೋಗಿದ್ದು, 16:00 ಗಂಟೆಗೆ 5 ಜನ ಅಪರಿಚಿತರು ಬಂದು ಪಿರ್ಯಾದಿದಾರರಲ್ಲಿ ವಿಚಾರಿಸಿ ಓಮ್ನಿ ಕೀ ಕೊಡಿ, ಇನ್ಸುರೆನ್ಸ್‌ಗೆ ಹೋಗಿ ಬರುತ್ತೇವೆ ಎಂದು ತಿಳಿಸಿದ್ದು, ತಾನು ಸಹ ಜೊತೆಯಲ್ಲಿ ಬರುತ್ತೇನೆ ಎಂದು ತಿಳಿಸಿದಾಗ ಆರೋಪಿತರು ನೀವು ಬರುವುದು ಬೇಡ ಎಂದಿದ್ದು, ಪಿರ್ಯಾದುದಾರರು ತಡೆದಾಗ 5 ಜನ ಆರೋಪಿತರು ಒಟ್ಟು ಸೇರಿ ಪಿರ್ಯಾದುದಾರರಿಗೆ ಕೈಯಿಂದ ಮತ್ತು ಮರದ ಕೋಲಿನಿಂದ ಹೊಡಿದಿದ್ದು, ಪರಿಣಾಮ ಪಿರ್ಯಾದಿದಾರರ ಬೆನ್ನಿಗೆ, ಕೈಗೆ, ಕಾಲಿಗೆ ಗಾಯ ಹಾಗೂ ಎದೆಗೆ ಗುದ್ದಿ ಒಳನೋವು ಉಂಟುಮಾಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 183/2021 ಕಲಂ: 143, 147, 323, 324 ಜೊತಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಶಿಶಿರ್‌ ಎಸ್‌ ಪೂಜಾರಿ @ ಶಿಶಿರ್‌ ಪಾಲನ್‌ (29), ತಂದೆ: ಶೇಖರ ಪೂಜಾರಿ, ವಾಸ: ಮನೆ ನಂಬ್ರ: 1-35-1, ಶೇಖರ ನಿಲಯ, ತೊಟ್ಟಂ, ಬಡಾನಿಡಿಯೂರು ಗ್ರಾಮ, ಮಲ್ಪೆ, ಉಡುಪಿ ತಾಲೂಕು ಇವರು HMT ಬಸ್ಸಿನಲ್ಲಿ ಚಾಲಕ ವೃತ್ತಿ ಮಾಡಿಕೊಂಡಿದ್ದು, ದಿನಾಂಕ 09/12/2021 ರಂದು 19:40 ಗಂಟೆಗೆ ಉಡುಪಿ ಸಿಟಿ ಬಸ್‌ ನಿಲ್ದಾಣದ ದಕ್ಷಿಣದ ಬದಿಯಲ್ಲಿ ಬಸ್ಸುಗಳು ನಿಲ್ಲುವ ಸ್ಥಳದಲ್ಲಿ TMT ಬಸ್ಸಿನ ಎದುರು ಬದಿಯಲ್ಲಿ ಹೋಗುವಾಗ, ಬಸ್ಸಿನಲ್ಲಿದ್ದ ಆರೋಪಿತರಾದ 1)  ಸುದೀಪ್‌, 2)  ಸಾದಿಕ್‌, 3) ಜಾಸಿಮ್‌, 4) ತನ್ವೀರ್‌, 5) ರಿಜ್ವಾನ್‌, 6) ಶಾಹಿದ್‌, 7)  ಜಾವಿದ್‌, 8) ಅಪ್ರೋಜ್‌ ಮತ್ತು ಇತರರು ಒಟ್ಟು ಸೇರಿ ಏಕಾಏಕಿಯಾಗಿ ಬಸ್ಸಿನಿಂದ ಕೆಳಗಿಳಿದು ಪಿರ್ಯಾದಿದಾರರನ್ನು ದೂಡಿದ್ದು, ಕೆಳಗೆ ಬಿದ್ದಾಗ ಸುದೀಪನು ಆತನ ಕೈಯಲ್ಲಿದ್ದ ಮರದ ತುಂಡಿನಿಂದ ಕುತ್ತಿಗೆ ಮೇಲ್ಭಾಗಕ್ಕೆ ಹಾಗೂ ತಲೆಗೆ ಹೊಡೆದಿದ್ದು ಇತರರು ಕೆನ್ನೆಗೆ ಹೊಡೆದು ಕಾಲಿನಿಂದ ತುಳಿದಿರುತ್ತಾರೆ ಅಲ್ಲದೆ ಸುದೀಪನು ಕೈಯಲ್ಲಿ ಒಂದು ಚಾಕು ಹಿಡಿದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 184/2021 ಕಲಂ: 143, 147, 148, 323, 324, 506(ii) ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-12-2021 09:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080