ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಉಡುಪಿ: ದಿನಾಂಕ 05/12/2021 ರಂದು ಪಿರ್ಯಾದಿದಾರರಾದ ಉದಯ ಕುಮಾರ್‌ (58), ತಂದೆ: ಚಂದ್ರಶೇಖರ, ವಾಸ: ಉಪ್ಪೂರು ಕುದ್ರುಬೆಟ್ಟು, ಉಪ್ಪೂರು ಅಂಚೆ, ಉಡುಪಿ ತಾಲೂಕು ಇವರು ಮದುವೆ ಕಾರ್ಯಕ್ರಮಕ್ಕೆ ಮಂಗಳೂರಿಗೆ ಹೋಗಲು ಅವರ ಮಗ ಜ್ಞಾನೇಶ್‌. ಯು ರವರು ಆರ್‌.ಸಿ ಮಾಲಕರಾಗಿರುವ HERO HONDA SPLENDOR PLUS ದ್ವಿ-ಚಕ್ರ ವಾಹನ ನಂಬ್ರ: KA- -19-EE-4279 (Chassis No: MBLHA10EZBHM52975, Engine No: HA10EFBHM49203) ನೇದರಲ್ಲಿ ಮನೆಯಿಂದ ಹೊರಟು ಬೆಳಿಗ್ಗೆ 11:00 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ಹಳೆ ಸಂತೆ ಮಾರ್ಕೇಟ್‌ನ ಒಳಭಾಗದಲ್ಲಿ ಇರಿಸಿ, ಬಸ್ಸಿನ ಮುಖಾಂತರ ಮಂಗಳೂರಿಗೆ ಹೋಗಿ, ವಾಪಾಸು ದಿನಾಂಕ 07/12/2021 ರಂದು 19:00 ಗಂಟೆಗೆ ಬಂದು ನೋಡಲಾಗಿ, ದ್ವಿ-ಚಕ್ರ ವಾಹನ ಇಟ್ಟ ಜಾಗದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ ಸೈಕಲ್‌ನ ಮೌಲ್ಯ ರೂಪಾಯಿ 20,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 185/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಶಂಕರನಾರಾಯಣ: ನಾಗರಾಜ ಎಮ್ ಗಾಣಿಗ (37), ತಂದೆ: ಮಾದೇವ ಗಾಣಿಗ ,ವಾಸ: ಗಾಣದ ಮನೆ ಬೆಳವಾಣ ಆಜ್ರಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 08/11/2021 ರಂದು 16:00 ಗಂಟೆಗೆ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಗಾಣದ ಮನೆ ಬೆಳುವಾಣ ಎಂಬಲ್ಲಿದ ಕುಂದಾಪುರಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 111/2021 ಕಲಂ:ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಅಕ್ಕಮ್ಮ (55), ಗಂಡ: ಪುಟ್ಟ ರಾಜು, ವಾಸ:ಯೋಜನಾ ನಗರ, ಯಡ್ತರೆ ಗ್ರಾಮ ಬೈಂದೂರು ತಾಲೂಕು ಇವರ ಗಂಡ ಪುಟ್ಟರಾಜು (71) ರವರು ದಿನಾಂಕ 03/12/2021 ರಂದು ರಾತ್ರಿ 10:00 ಗಂಟೆಗೆ ಮನೆ ಬಿಟ್ಟುಹೋದವರು ಮನೆಗೆ ವಾಪಾಸ್ಸು ಬಾರದೇ ,ಹುಡುಕಾಡಿದಲ್ಲಿ ಪತ್ತೆಯಾಗದೇ ಇರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 201/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಸದಾನಂದ ದೇವಾಡಿಗ, (36), ತಂದೆ: ಹೊನ್ನಯ್ಯ ದೇವಾಡಿಗ, ವಾಸ: ಅದಮಾರು ಮಠದ ಬಳಿ, ಆರ್ ಅಂಡ್ ಆರ್ ಕಾಲೋನಿ, ಅದಮಾರು ಅಂಚೆ, ತೆಂಕ ಎರ್ಮಾಳು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಮಾವ ಸುಧಾಕರ ದೇವಾಡಿಗ (48) ಇವರು ಕೃಷಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 10/12/2021 ರಂದು ಬೆಳಿಗ್ಗೆ ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಅದಮಾರು ಮಠದ ಬಳಿ ಇರುವ ಕೃಷಿ ಮಾಡಿಕೊಂಡಿರುವ ಗದ್ದೆಗೆ ಹೋದವರು ವಾಪಾಸ್ಸು ಬಾರದೇ ಇದ್ದು, ದಿನಾಂಕ:11/12/2021 ರ ಬೆಳಿಗ್ಗೆ 07:00 ಗಂಟೆಗೆ ಅದಮಾರು ಮಠದ ಗದ್ದೆಯ ಸಮೀಪ ಇರುವ ನಾರಾಯಣ ಶೆಟ್ಟಿ ಎಂಬುವವರ ಜಾಗದಲ್ಲಿ ಇರುವ ತೋಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು, ಸುಧಾಕರ ದೇವಾಡಿಗ ರವರು ದಿನಾಂಕ:10/12/2021 ರಂದು 10:00 ಗಂಟೆಯಿಂದ ದಿನಾಂಕ:11/12/2021 ರ ಬೆಳಿಗ್ಗೆ 07:00 ಗಂಟೆಯ ಮಧ್ಯಾವಧಿಯಲ್ಲಿ ಅದಮಾರು ಮಠದ ಗದ್ದೆಯ ಸಮೀಪ ಇರುವ ನಾರಾಯಣ ಶೆಟ್ಟಿ ಎಂಬುವರ ಜಾಗದಲ್ಲಿ ಇರುವ ಕಿರುಸೇತುವೆಯಿಂದ ಅಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು, ತಲೆಗೆ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರಬಹುದಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 26/2021, ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಅಜೆಕಾರು: ಪಿರ್ಯಾದಿದಾರರಾದ ಬಿ. ಇಬ್ರಾಹಿಂ (58), ತಂದೆ: ಬಿ. ಹಸನಬ್ಬ, ವಾಸ: ರಫಿಕ್ ಮಂಜಿಲ್, ಎಣ್ಣೆಹೊಳೆ, ಮರ್ಣೆಗ್ರಾಮ, ಕಾರ್ಕಳ ತಾಲೂಕು ಇವರ ಮಗ 48 ವರ್ಷ ಪ್ರಾಯದ ರಫಿಕ್ ಎಂಬುವವರು ಹುಟ್ಟಿನಿಂದಲೇ ಬುದ್ಧಿಮಾಂದ್ಯರಾಗಿದ್ದು, ಮನೆಯವರ ಮಾತು ಕೇಳದೆ ಹೊರಗಡೆ ಅಡ್ಡಾಡಿಕೊಂಡು ರಾತ್ರಿ ವೇಳೆ ಮನೆಗೆ ಬರುತ್ತಿದ್ದವರು, ದಿನಾಂಕ 11/12/2021 ರಂದು ಬೆಳಿಗ್ಗೆ 05:30 ಗಂಟೆಗೆ ಮನೆಯಿಂದ ಹೊರಗೆ ಹೋದವರು 08:00 ಗಂಟೆಯಾದರೂ ವಾಪಾಸು ಬಾರದೇ ಇದ್ದು ನಂತರ ಹುಡುಕಲಾಗಿ ಬೆಳಿಗ್ಗೆ 10:00 ಗಂಟೆಗೆ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಎಣ್ಣೆಹೊಳೆ ಎಂಬಲ್ಲಿ ಪವನ್ ಎಂಬುವವರ ಮನೆ ಮುಂದೆ ಇರುವ ಬಾವಿಯಲ್ಲಿ ರಫಿಕ್‌ ರವರ ಮೃತದೇಹ ಕಂಡು ಬಂದಿರುತ್ತದೆ. ರಫಿಕ್‌ನ ಬುದ್ದಿಮಾಂದ್ಯರಾಗಿದ್ದು, ದಿನಾಂಕ: 11/12/2021 ರಂದು ಬೆಳಿಗ್ಗೆ 05:30 ಗಂಟೆಯಿಂದ 10:00 ಗಂಟೆಯ ಮದ್ಯಾವಧಿಯಲ್ಲಿ ಆಕಸ್ಮಿಕವಾಗಿ ಬಾವಿ ನೀರಿಗೆ ಬಿದ್ದುಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 24/2021 ಕಲಂ: 174 ಸಿ.ಆರ್ .ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಅಜೆಕಾರು: ದಿನಾಂಕ: 11/12/2021 ರಂದು ಸುದರ್ಶನ ದೊಡಮನಿ, ಪೊಲೀಸ್‌ ಉಪನಿರೀಕ್ಷಕರು ಅಜೆಕಾರು ಪೊಲೀಸ್ ಠಾಣೆ ಇವರಿಗೆ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಕುರ್ಪಾಡಿ ಮದಗದ ಬಳಿಯ ರಸ್ತೆಯ ಬದಿಯಲ್ಲಿ ವ್ಯಕ್ತಿಯೊಬ್ಬರು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುವ ಬಗ್ಗೆ ಬಂದ ಮಾಹಿತಿಯಂತೆ ಅಜೆಕಾರು ಮಾರ್ಕೆಟ್ ನಿಂದಾಗಿ ಕುರ್ಪಾಡಿ ಕಡೆಯ ರಸ್ತೆಗೆ ಹೋಗಿ ಮದಗದ ಕಡೆಯ ತಿರುವಿನ ರಸ್ತೆಯ ಬದಿಯಲ್ಲಿ ಜೀಪನ್ನು ನಿಲ್ಲಿಸಿ ಮಗದದ ಕಡೆಗೆ ಹೋಗುವ ರಸ್ತೆಯಲ್ಲಿ ಹೋಗಿ ಕೃಷ್ಣ ಆಚಾರಿ ರವರ ಮನೆಯ ಹತ್ತಿರ ನಿಂತು ನೋಡಲಾಗಿ ಮದಗದ ಪಕ್ಕದಲ್ಲಿನ ಒಂದು ಮರದ ಬುಡದಲ್ಲಿ ಬಿಳಿ-ನೀಲಿ ಬಣ್ಣದ ಚೆಕ್ಸ್ ಅಂಗಿ ಧರಿಸಿದ ಓರ್ವ ವ್ಯಕ್ತಿಯು ಸಾರ್ವಜನಿಕರಿಗೆ ಮಧ್ಯವನ್ನು ಗ್ಲಾಸ್ ಗೆ ಹಾಕಿ ಕೊಡುತ್ತಿರುವುದು ಕಂಡುಬಂದಿದ್ದು, ದಾಳಿ ಮಾಡಿದಾಗ ಸ್ಥಳದಲ್ಲಿದ್ದ 2-3 ಗಿರಾಕಿಗಳು ಓಡಿ ಹೋಗಿರುತ್ತಾರೆ. ನಂತರ ಮಧ್ಯ ಮಾರಾಟ ಮಾಡುತ್ತಿದ್ದ ಬಳಿ-ನೀಲಿ ಬಣ್ಣದ ಚೆಕ್ಸ್ ಅಂಗಿ ಧರಿಸಿದ ವ್ಯಕ್ತಿಯನ್ನು ಸುತ್ತುವರೆದಿದ್ದು, ಆತನ ಕೈಯಲ್ಲಿ ಅರ್ಧ ಮಧ್ಯ ತುಂಬಿದ Original Choice” ನ 180 ML ನ ಪ್ಯಾಕೇಟ್ ಹಾಗೂ ಸ್ವಲ್ಪ ಮಧ್ಯ ಹಾಕಿದ ಗಾಜಿನ ಗ್ಲಾಸ್ ಇದ್ದು ಪಕ್ಕದಲ್ಲಿದ್ದ ವಿಧ್ಯುತ್ ಕಂಬದ ಬದಿಯಲ್ಲಿ ಒಂದು ಬಾಕ್ಸ್ ಇದ್ದು ಸದ್ರಿ ಬಾಕ್ಸ್ ನ್ನು ತೆರೆದು ನೋಡಲಾಗಿ Original Choice” ಹೆಸರಿನ 180 ML ನ 11 ಪ್ಯಾಕೇಟ್ ಗಳು ಇರುತ್ತವೆ. ಇವುಗಳ ಮೌಲ್ಯ 808/- ರೂಪಾಯಿ ಆಗಿರುತ್ತದೆ.. ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಹೆಸರು, ವಿಳಾಸ ವಿಚಾರಿಸಲಾಗಿ ಧರ್ಮೇಶ್ ಪ್ರಾಯ 50 ವರ್ಷ ತಂದೆ: ಸೂರಪ್ಪ ವಾಸ: ಹಳೆ ಪೋಸ್ಟ್ ಆಫೀಸ್ ಹಿಂಭಾಗ, ಅಜೆಕಾರು ಮರ್ಣೆ ಗ್ರಾಮ ಕಾರ್ಕಳ ತಾಲೂಕು ಎಂಬುದಾಗಿ ತಿಳಿಸಿದನು. ತಾನು ಸಾರ್ವಜನಿಕರಿಂದ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ವೈನ್ ಶಾಪ್ ನಿಂದ ಮಧ್ಯವನ್ನು ಖರೀದಿಸಿ ಸಾರ್ವಜನಿರಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ. ಆತನು ಧರಿಸಿದ ಅಂಗಿಯ ಜೇಬಿನಿಂದ ಮಧ್ಯದ ಮಾರಾಟ ದಿಂದ ಬಂದ ಹಣವನ್ನು ಹಾಜರುಪಡಿಸಿದ್ದು 450/- ರೂಪಾಯಿಗಳಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2021 ಕಲಂ: 15(A), 32(3) KE Act ರಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 11-12-2021 06:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080