ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 10/11/2022 ರಂದು ಬೆಳಗ್ಗೆ 10:15 ಗಂಟೆಗೆ ಕಾರ್ಕಳ ತಾಲೂಕು ಮುಲ್ಲಡ್ಕ ಗ್ರಾಮದ ತಾರಿದಡಿ ಎಂಬಲ್ಲಿ ಹಾದು ಹೋಗುವ ಪಾದೆಮನೆ-ತಾರಿದಡಿ ಸಾರ್ವಜನಿಕ ರಸ್ತೆಯಲ್ಲಿ  ಮೋಟಾರ್ ಸೈಕಲ್ ನಂಬ್ರ KA-20- EN-4369 ನೇದರ ಸವಾರ ಸುರೇಶ್ ಬಂಗೇರ ಎಂಬುವವರು ಮೋಟಾರ್ ಸೈಕಲನ್ನು ಪಾದೆಮನೆ ಕಡೆಯಿಂದ ತಾರಿದಡಿ ಕಡೆಗೆ ಅತಿವೇಗವಾಗಿ ಸವಾರಿ ಮಾಡಿಕೊಂಡು ಹೋಗುವಾಗ ತಿರುವಿನಲ್ಲಿ ಮೋಟಾರ್ ಸೈಕಲ್ ಸ್ಕಿಡ್ ಆಗಿ ರಸ್ತೆಯ ಬಲಬದಿಯ ಹೊಂಡಕ್ಕೆ ಬಿದ್ದು ತಲೆಯ ಹಿಂಬದಿ ಗಾಯಗೊಂಡವರು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.   ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 138/2022 ಕಲಂ : 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ 

  • ಬ್ರಹ್ಮಾವರ: ಪಿರ್ಯಾದಿದಾರರಾದ ಸೂರಜ್ (21), ತಂದೆ: ಶ್ರೀನಿವಾಸ್ ಕುಲಾಲ್, ವಾಸ: ಕೀರ್ತಿ ನಗರ, ಮುಂಡ್ಕಿನ್‌ ಜೆಡ್ಡು, ಆರೂರು ಗ್ರಾ ಮ, ಬ್ರಹ್ಮಾವರ ತಾಲೂಕು ಇವರ ತಂದೆ ಶ್ರೀನಿವಾಸ ಕುಲಾಲ್ 58 ರವರು ಮಾನಸಿಕ ಖಿನ್ನತೆಗೆ ಒಳಗಾಗಿ ಯಾರೊಂದಿಗೂ ಮಾತನಾಡದೇ ಒಬ್ಬರೇ ಇರುತ್ತಿದ್ದು, ಆಗಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರು. ಶ್ರೀನಿವಾಸ ಕುಲಾಲ್ ರವರು ತನಗಿರುವ ಮಾನಸಿಕ ಖಿನ್ನತೆಯಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ದಿನಾಂಕ: 11/11/2022 ರಂದು ಬೆಳಿಗ್ಗೆ 08:30 ಗಂಟೆಯಿಂದ ಬೆಳಿಗ್ಗೆ 09:30 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಹಾಲ್‌ ನಲ್ಲಿರುವ ಮಲುಗುವ ಮಂಚದ ದಡ್ಡೆಗೆ ಬೈರಾಸನ್ನು ಕಟ್ಟಿ ಒನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 55/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ರಂಗಪ್ಪ ಬಂದಕೇರಿ ಪ್ರಾಯ: 37 ವರ್ಷ, ತಂದೆ: ಬಸಪ್ಪ ವಾಸ: ಹಿರೇಬೂದಿಹಾಳ, ಬಾದಾಮಿತಾಲೂಕು, ಬಾಗಲಕೋಟೆ ಜಿಲ್ಲೆ. ಪ್ರಸ್ತುತ: ಬಾಡಿಗೆ ಮನೆ, ಪುಷ್ಪನಿಲಯ, ಬಬ್ಬುಸ್ವಾಮಿ ದೇವಸ್ಥಾನದ ಬಳಿ, ನಿಟ್ಟೂರು, ಪುತ್ತೂರು ಗ್ರಾಮ, ಉಡುಪಿ ತಾಲೂಕು ಇವರ ಹೆಂಡತಿಯ ತಮ್ಮ ದ್ಯಾಮಣ್ಣ ಜಿಗೇರಿ ಪ್ರಾಯ 28 ವರ್ಷ ಎಂಬುವವರು ಪಿರ್ಯಾದಿದರರೊಂದಿಗೆ ವಾಸ್ತವ್ಯವಿದ್ದು, ದಿನಾಂಕ 30/10/2022 ರಂದು 16:00 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರು ಬಬ್ಬು ಸ್ವಾಮಿ ದೇವಸ್ಥಾನದ ಬಳಿ ಇರುವ ಬಾಡಿಗೆ ಮನೆಯಿಂದ ಹೋದವರು, ಈವರೆಗೂ ವಾಪಾಸು ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 164/2022 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಹೆಬ್ರಿ: ಪಿರ್ಯಾದಿದಾರರಾದ ಕಮಲಾಕ್ಷಿ ಪ್ರಾಯ 35 ವರ್ಷ, ಗಂಡ: ಬಸವರಾಜ್, ವಾಸ: ಸುಂಕಣುರು ಮಸ್ಕಿ ತಾಲೂಕು ರಾಯಚೂರು ಜಿಲ್ಲೆ ಇವರ ಮಗ ಶ್ರೀನಿವಾಸ ಹೆಬ್ರಿ ಗ್ರಾಮದ ಹೆಬ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದು ಹೆಬ್ರಿಯ ಪರಿಶಿಷ್ಟ ವರ್ಗಗಳ ಕಲ್ಯಾಣ ವಿವೇಕ ನಿಲಯ ಜಿಲ್ಲಾ ಪರಿಶಿಷ್ಟ ಪಂಗಡ ವರ್ಗದ ಕಿರಿಯ ಪ್ರಾಥಮಿಕ ಆಶ್ರಮ ಶಾಲೆಯ ಹಾಸ್ಟೇಲ್ ನಲ್ಲಿ ಉಳಕೊಂಡಿರುವುದಾಗಿದೆ. ಶ್ರೀನಿವಾಸನು ದಿನಾಂಕ:09/11/2022 ರಂದು ಶಾಲೆಯು ಮುಗಿದ ಬಳಿಕ ಹಾಸ್ಟೆಲ್ ಗೆ ಬಂದು ಹಾಸ್ಟೇಲ್ ನಲ್ಲಿ ತಿಂಡಿಯನ್ನು ತಿಂದು ಸಂಜೆ ಆಟ ಆಡಿಕೊಂಡಿರುವಾಗ ಸಮಯ ಸುಮಾರು ಸಂಜೆ 04:15 ಗಂಟೆಗೆ ಹಾಸ್ಟೇಲ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಸಾವಿತ್ರಿ ರವರು ಆಟ ಆಡುತ್ತಿರುವ ಶ್ರೀನಿವಾಸ,ಅಮರೇಶ, ವಿನೋದ್ ಮತ್ತು ಮನೋಜ್ ಬಾವಿಮನೆ ರವರುಗಳನ್ನು ಕರೆದು ಹಾಸ್ಟೇಲ್ ನಲ್ಲಿರುವ ಕಸಕ್ಕೆ ಸ್ಯಾನಿಟೈಸರ್ ಹಾಕಿ ಬೆಂಕಿಯಿಂದ ಸುಡುವಂತೆ ತಿಳಿಸಿರುತ್ತಾರೆ. ಅದರಂತೆ ಮಕ್ಕಳು ಹಾಸ್ಟೇಲ್ ನ ಕಂಪೌಂಡ್ ನ ಬದಿಯಲ್ಲಿ ಕಸ ಸುಡುವ ಜಾಗದಲ್ಲಿ ಕಸವನ್ನು ಹಾಕಿ ಕಸಕ್ಕೆ ಸ್ಯಾನಿಟೈಸರ್ ಹಾಕಿ ಬೆಂಕಿ ಹಚ್ಚುವಾಗ ಮಕ್ಕಳ ಕೈಯಲ್ಲಿದ್ದ ಸ್ಯಾನಿಟೈಸರ್ ಡಬ್ಬಿಗೆ ಬೆಂಕಿ ಹಿಡಿದು ಅದು ಸ್ಪೋಟಗೊಂಡು ಬೆಂಕಿಯ ಕಿಡಿಗಳು ಮಕ್ಕಳ ಮೈಮೇಲೆ ಬಿದ್ದ ಪರಿಣಾಮ ಶ್ರೀನಿವಾಸನಿಗೆ, ಅಮರೇಶ, ವಿನೋದ್ ಮತ್ತು ಮನೋಜ್ ಬಾವಿಮನೆ ರವರಿಗೆ ಸುಟ್ಟ ಗಾಯಗಳಾಗಿರುತ್ತದೆ ಈ ಘಟನೆ ಹಾಸ್ಟೇಲ್ ಅಡುಗೆ ಕೆಲಸದ ಸಾವಿತ್ರಿ ಮತ್ತು ಹಾಸ್ಟೇಲ್ ವಾರ್ಡನ್ ರವರ ನಿರ್ಲಕ್ಷತನದಿಂದ ಆಗಿರುವುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌  ಠಾಣೆ ಅಪರಾಧ ಕ್ರಮಾಂಕ 62/2022 ಕಲಂ:338, ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ: 11/11/2022 ರಂದು ಬೆಳಿಗ್ಗಿನ ಜಾವ ವಿನಯ ಕೊರ್ಲಹಳ್ಳಿ , ಪಿಎಸ್‌ಐ(ಕಾ&ಸು) ಗಂಗೊಳ್ಳಿ ಪೊಲೀಸ್ ಠಾಣೆ ಇವರಿಗೆ KA-20-AA-6557ನೇ ಪಿಕಪ್‌ ವಾಹನದಲ್ಲಿ ಜಾನುವಾರುಗಳನ್ನು ಮೋವಾಡಿ ಕಡೆಯಿಂದ ಕುಂದಾಪುರ ಕಡೆಗೆ ಸಾಗಿಸುತ್ತಿರುವುದಾಗಿ ಮಾಹಿತಿ ಬಂದಂತೆ ಹೊಸಾಡು ಗ್ರಾಮದ ಅರಾಟೆ ಬಸ್‌ ನಿಲ್ದಾಣದ ಬಳಿ ರಾ.ಹೆ.-66 ರ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುವ ಏಕ ಮುಖ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಮುಳ್ಳಿಕಟ್ಟೆ ಕಡೆಯಿಂದ ಒಂದು ಪಿಕಪ್‌ ವಾಹನ ಬರುವುದನ್ನು ನೋಡಿ ನಿಲ್ಲಿಸಲು ಸೂಚನೆ ನೀಡಿದಾಗ ವಾಹನವನ್ನು ಅದರ ಚಾಲಕ ಸ್ವಲ್ಪ ಮುಂದೆ ಕೊಂಡು ಹೋಗಿ ನಿಲ್ಲಿಸಿದ್ದು, ವಾಹನದ ಬಳಿ ಹೋಗಿ ನೋಡಲಾಗಿ ಎದುರುಗಡೆ ಚಾಲಕ ಸೇರಿ 3 ಜನರಿದ್ದು, ಪಿಕಪ್‌ ವಾಹನದ ಹಿಂಬದಿಯಲ್ಲಿ ಪರಿಶೀಲಿಸಲಾಗಿ 2 ದನಗಳಿದ್ದು, ದನಗಳ ಬಗ್ಗೆ ವಿಚಾರಿಸಿದಲ್ಲಿ ಮೋವಾಡಿಯಿಂದ ಕುಂದಾಪುರಕ್ಕೆ ಸಾಗಿಸುವುದಾಗಿ ತಿಳಿಸಿದ್ದು, ದನಗಳನ್ನು ಸಾಗಿಸಲು ಹಾಗೂ ಖರೀದಿ ಮಾಡಿದ ಬಗ್ಗೆ ಪರವಾನಿಗೆ, ಕ್ರಯ ಚೀಟಿ ಹಾಗೂ ಇತರ ದಾಖಲಾತಿಗಳ ಬಗ್ಗೆ ವಿಚಾರಿಸಿದಲ್ಲಿ ಯಾವುದೇ ಪರವಾನಿಗೆ/ದಾಖಲಾತಿ ಇಲ್ಲ ಎಂಬುದಾಗಿ ತಿಳಿಸಿದ್ದು, ಆಪಾದಿತರಾದ 1)ಉಸ್ಮಾನ್,‌ 2)ಜೋಸೆಫ್‌ ಡಿಸೋಜಾ ,3)ಶೇಖರ ಶೆಟ್ಟಿ ಇವರುಗಳು ಪಿಕಪ್‌ ವಾಹನದಲ್ಲಿ 2 ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಮೇವು, ನೀರು ಇಡದೇ, ಯಾವುದೇ ಕಂಪಾರ್ಟ್‌ಮೆಂಟ್‌ ವ್ಯವಸ್ಥೆಯನ್ನು ಮಾಡದೇ ಹಗ್ಗದಿಂದ ಕಟ್ಟಿ ಸಾಗಾಟ ಮಾಡುತ್ತಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 100/2022 ಕಲಂ: 5,12 The Karnataka Prevention of Slaughter and Prevention of cattle Ordiance 2020 and u/s 11(1)(D) Prevention of cruelty to animal Act 1960 and 66 r/w 192(A) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 11-11-2022 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080