ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿದಾರರಾದ ಸುಕೇಶ್ (36), ತಂದೆ: ಬಾಬು ಸಾಲಿಯಾನ್, ವಾಸ: ಗಣೇಶ್ ರವರ ಬಾಡಿಗೆ ಮನೆ, ಸುಶೀಲಾ ಕಂಪೌಂಡ್ ಬಳಿ, ಬೊಮ್ಮರಬೆಟ್ಟು , ಹಿರಿಯಡ್ಕ ಇವರು ಅಂಗವಿಕಲರಾಗಿದ್ದು ಅವರಿಗೆ ಸರಕಾರದಿಂದ ನೀಡಲ್ಪಟ್ಟ, ದ್ವಿಚಕ್ರ ವಾಹನ ನಂಬ್ರ KA-20-ER-3224  ನೇದರಲ್ಲಿ ತನ್ನ ಹೆಂಡತಿ ರಾಧಿಕ ರವರನ್ನು ಸಹ-ಸವಾರಳನ್ನಾಗಿ ಕುಳ್ಳಿರಿಸಿ ಮಣಿಪಾಲದಿಂದ ತನ್ನ ಮನೆಯಾದ ಹಿರಿಯಡ್ಕಕ್ಕೆ ಬರುತ್ತಿರುವಾಗ ಸಂಜೆ 17: 30 ಗಂಟೆಗೆ ಅಂಜಾರು ಗ್ರಾಮದ ಹೋಟೆಲ್ ಶಮಿತ್ ಬಳಿ ತಲುಪುವಾಗ ತನ್ನ ಹಿಂಬದಿಯಿಂದ   ಅತ್ರಾಡಿ ಕಡೆಯಿಂದ ಹಿರಿಯಡ್ಕದ ಕಡೆಗೆ  ರೆನೊಲ್ಡ್ ಟ್ರೈಬರ್ ನೀಲಿ ಬಣ್ಣದ ಕಾರನ್ನು ಅದ ರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ವಾಹನವನ್ನು ಹಿಂದಿಕ್ಕುವ ಭರದಲ್ಲಿ  ಪಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ  ವಾಹನ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಗೈ ಮೊಣಗಂಟಿನ ಬಳಿ ರಕ್ತಗಾಯವಾಗಿದ್ದು,  ಅವರ ಹೆಂಡತಿಯ ಬಲಬದಿಯ ಹಣೆಗೆ, ಬಲಗೈ ಕೋಲುಕೈಗೆ, ಬಲಕೈ ಅಂಗೈ ಬಳಿ ರಕ್ತ ಗಾಯವಾಗಿರುತ್ತದೆ.  ಅಪಾದಿತ ಕಾರು ಚಾಲಕ ಕಾರನ್ನು ಸ್ಥಳದಲ್ಲಿ ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59 /2021 ಕಲಂ: 279,337  ಐಪಿಸಿ 134 (ಎ) (ಬಿ)  ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಕಮಲ ಪೂಜಾರ್ತಿ (58), ಗಂಡ: ಸೋಮ ಪೂಜಾರಿ, ವಾಸ: ಲಲಿತಾ ನಿಲಯ ಸರ್ಕಾರಿ ಆಸ್ಪತ್ರೆಯ ಬಳಿ ಗಿಳಿಯಾರು ಗ್ರಾಮ ಬ್ರಹ್ಮಾವರ ತಾಲೂಕು ಇವರ ತಮ್ಮ ಉಮೇಶ (45) ರವರು ಮೊದಲಿನಿಂಲೂ ಮಾನಸಿಕ ಸಮಸ್ಯೆಯಿದ್ದು ಔಷಧಿಯನ್ನು  ನಿರಂತರವಾಗಿ ತೆಗೆದುಕೊಳ್ಳುತ್ತಿದ್ದು  ಹೀಗಿರುತ್ತಾ  ದಿನಾಂಕ 08/11/2021 ರಂದು ರಾತ್ರಿ 08:30 ಗಂಟೆಯ ಸಮಯಕ್ಕೆ ಬೀಡಿ ಸೇದುವ ಅಭ್ಯಾಸ ಇರುವುದರಿಂದ  ಬೀಡಿ ತರಲು ಕೋಟ ಪೇಟೆಗೆ ಹೋಗಿದ್ದವರು ರಾತ್ರಿಯಾದರೂ ಮನೆಗೆ ಬಾರದೇ ಇದ್ದು ನಂತರ ಸಂಬಂಧಿಕರಲ್ಲಿ ಹಾಗೂ ಎಲ್ಲಾ ಕಡೆ ಹುಡುಕಾಡಿದಲ್ಲಿ  ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 192/2021 ಕಲಂ: ಮನುಷ್ಯ ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ಪಿರ್ಯಾದಿದಾರರಾದ ಗೊವೀಂದ ನಾಯ್ಕ (75), ತಂದೆ:ದಿ.ಲಚ್ಚ ನಾಯ್ಕ,  ವಾಸ: ಹರ್ಷ ಅನುಧಾನಿತ ಶಾಲೆಯ  ಹಿಂಬದಿ ಜನ್ಸಾಲೆ ಸಿದ್ದಾಪುರ  ಗ್ರಾಮ ಕುಂದಾಪುರ  ತಾಲೂಕು ಇವರ  ಮಗಳ ಗಂಡ ಮಹೇಶ (45) ಇವರು ಭದ್ರಾವತಿ   ಕಡೆಯವರಾಗಿದ್ದು, ಸುಮಾರು 13  ವರ್ಷದ  ಹಿಂದೆ ಪಿರ್ಯಾದಿದಾರರ ಮಗಳು  ಶ್ರೀಮತಿ  ಪದ್ಮಾಕಿ  ಯವರನ್ನು  ಮದುವೆ   ಆಗಿದ್ದು,  ಮದುವೆ ಆದ ಬಳಿಕ ಪಿರ್ಯಾದಿದಾರರ ವಾಸದ ಮನೆಯಾದ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಜನ್ಸಾಲೆ ಎಂಬಲ್ಲಿ  ವಾಸವಾಗಿದ್ದವರು ದಿನಾಂಕ 04/07/2021 ರಂದು ಬೆಳಿಗ್ಗೆ 6:30 ಗಂಟೆಗೆ ಮನೆ ಬಿಟ್ಟು  ಹೋದವರು ವಾಪಾಸು  ಮನೆಗೆ ಬಾರದೇ  ಕಾಣೆಯಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 101/2021  ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

 • ಹೆಬ್ರಿ: ಪಿರ್ಯಾದಿದಾರರಾದ ಸಾವಿತ್ರಿ (32), ಗಂಡ: ಹರೀಶ ನಾಯಕ್, ವಾಸ: ಕೆಳಬಾದ್ಲು ಕುಚ್ಚೂರು ಗ್ರಾಮ ಹೆಬ್ರಿ ತಾಲೂಕು ಇವರು   ದಿನಾಂಕ 08/11/2021 ರಂದು ಬೆಳಿಗ್ಗೆ 09:00 ಗಂಟೆಗೆ  ತನ್ನ  ಗಂಡ ಹರೀಶ ನಾಯಕ್ (37) ರವರೊಂದಿಗೆ ಕುಚ್ಚೂರು ಗ್ರಾಮದ ಕೆಳಬಾದ್ಲು ಎಂಬಲ್ಲಿರುವ ಕಾಡು ಪ್ರದೇಶದಲ್ಲಿರುವ ಸೌದೆಯನ್ನು ತರಲು ಹೋಗಿ ಅಲ್ಲಿ ಕಟ್ಟಿಗೆ ಸಂಗ್ರಹ ಮಾಡಿ ನಂತ್ರ ಪಿರ್ಯಾದಿದಾರರ ಗಂಡ ಹರೀಶ್ ನಾಯಕ್ ಇವರು ಅಲ್ಲಿಯೇ ಕಾಡಿನ ಬದಿಯಲ್ಲಿರುವ ಸೀತಾನದಿಯ ಹೊಳೆಯಲ್ಲಿ ಕಾಲು ತೊಳೆಯಲು ಹೋದವರು ವಾಪಾಸು ಮನೆಗೆ ಬಾರದೇ ಇದ್ದು ದಿನಾಂಕ 10/11/2021 ರಂದು ಮದ್ಯಾಹ್ನ 3:30 ಗಂಟೆಗೆ ಕುಚ್ಚೂರು ಗ್ರಾಮದ ಕೆಳಬಾದ್ಲು ಎಂಬಲ್ಲಿರುವ ಹೊಳೆಯಲ್ಲಿ ಹರೀಶ ನಾಯಕ್ ರವರ ಮೃತ ದೇಹವು ಸಂಪೂರ್ಣ ಕೊಳೆತು ಹೋದ ಸ್ಥಿತಿಯಲ್ಲಿ ದೊರೆತಿರುತ್ತದೆ,  ಮೃತರು ಹೊಳೆಯಲ್ಲಿ ಕಾಲು ತೊಳೆಯಲು ಹೋದವರು ಅಕಸ್ಮಿಕವಾಗಿ ಅವರ ಕಾಲು ಜಾರಿದ ಪರಿಣಾಮ ಅವರು ಹೊಳೆಗೆ ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ 38/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
 • ಕುಂದಾಪುರ: ಪಿರ್ಯಾದಿದಾರರಾದ ಆನಂದ ರಾಜೇಶ (33), ತಂದೆ: ಶುಕ್ರ ಪೂಜಾರಿ, ವಾಸ: ಗೌರಿ ನಿಲಯ ದೊಡ್ಮನೆ ಬೆಟ್ಟು ಬಳ್ಕೂರು ಗ್ರಾಮ ಕುಂದಾಪುರ ತಾಲೂಕು ಇವರ ಚಿಕ್ಕಪ್ಪ ಚಂದ್ರ ಮೊಗವೀರವರು ಮದ್ಯಪಾನ ಮಾಡುವ ಚಟ ಹೊಂದಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 10/11/2021 ರಂದು 13:15 ಗಂಟೆಯಿಂದ 14:00 ಗಂಟೆಯ ನಡುವೆ ಮನೆಯ ಮಲಗುವ ಕೋಣೆಯಲ್ಲಿ ಸೀಲಿಂಗ್ ನ ಹುಕ್ಕಿಗೆ ಸೀರೆಯ ಬೋರ್ಡ ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 33/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕಾರ್ಕಳ: ಪಿರ್ಯಾದಿದಾರರಾದ ಭಾಸ್ಕರ ಸೆರ್ವೆಗಾರ್, ತಂದೆ: ದಿ.ವೆಂಕಪ್ಪ ಸೆರ್ವೆಗಾರ್,  ವಾಸ: ಹ್ಯೊಪಲ್ ಮನೆ ಗಣಪತಿ ಕಟ್ಟೆ ಬಳಿ , ನಲ್ಲೂರು ಗ್ರಾಮ, ಕಾರ್ಕಳ ತಾಲೂಕು ಇವರ ತಮ್ಮ ಜಗದೀಶ್ ರಾವ್ (48) ಇವರು ಒಂದು ವರ್ಷದಿಂದ ಸಕ್ಕರೆ ಕಾಯಿಲೆಗೆ  ಔಷಧಿ ಪಡೆದುಕೊಳ್ಳುತ್ತಿದ್ದು, ಅವರು ಕಾಯಿಲೆಯಿಂದ  ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 10/11/2021 ರಂದು ಬೆಳಗಿನ ಜಾವ 03:00 ಗಂಟೆಯಿಂದ 06:00 ಗಂಟೆಯ ಮಧ್ಯೆ ತಮ್ಮ ಮನೆಯ ಸಮೀಪ ಇರುವ ಮಾವಿನಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 42/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ವಿಜಯಲಕ್ಷ್ಮಿ ನಾಯಕ್ (42), ಗಂಡ: ಗುರುದಾಸ ನಾಯಕ್, ವಾಸ: ಚೇಂಪಿ ಯಡಬೆಟ್ಟು  ಮೂಡ ಹಡು ಗ್ರಾಮ ಬ್ರಹ್ಮಾವರ ತಾಲೂಕು ಇವರು   ತನ್ನ ಹಕ್ಕಿನ  ಶೌಚಾಲಯವನ್ನು ತನ್ನ ಹತ್ತಿರದ ಸಂಬಂಧಿಯಾದ ಹರೀಶ ನಾಯಕ್ ರವರಿಗೆ ಅವರ ಬಳಿ ಕೆಲಸ ಮಾಡುವ ಆಳುಗಳಿಗೆ ಉಪಯೋಗಿಸಲು ನೀಡಿದ್ದು ಆದರೆ  ಆಳುಗಳು ಶೌಚಾಲಯವನ್ನು ಶುಚಿಯಾಗಿ ಇಟ್ಟುಕೊಳ್ಳದ ಕಾರಣ ಪಿರ್ಯಾದಿದಾರರು ದಿನಾಂಕ 07/11/2021 ರಂದು ಸಂಜೆ 4:00 ಗಂಟೆಗೆ  ಶೌಚಾಲಯಕ್ಕೆ ಬೀಗ ಹಾಕಲು ಹೋದಾಗ ಹರೀಶ ನಾಯಕ್ ಪಿರ್ಯಾದಿದಾರರನ್ನು ಅಡ್ಡ ಗಟ್ಟಿ ಬೀಗ ಹಾಕುವುದನ್ನು ತಡೆದು  ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ಸಂದರ್ಭ ವನ್ನು ಪಿರ್ಯಾದಿದಾರರ ಮಗಳು  ಚಂದನಾ ಜಿ ನಾಯಕ್  ಅಲ್ಲಿಗೆ ಬಂದು  ಮೊಬೈಲ್ ನಲ್ಲಿ ಚಿತ್ರಿಸುತ್ತಿರುವಾಗ  ಹರೀಶ ನಾಯಕ್  ರವರು ಚಂದನಾ ಜಿ ನಾಯಕ್ ರವರ ಕೈಯನ್ನು ಹಿಡಿದು ಎಳೆದು ಮೊಬೈಲ ನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಿದಾಗ ಪಿರ್ಯಾದಿದಾರರು ತಡೆಯಲು ಹೋದಾಗ ಹರೀಶ ನಾಯಕ್ ರವರು ಕೈಯಿಂದ ಪಿರ್ಯಾದಿದಾರರಿಗೆ ಹಲ್ಲೆ ಮಾಡಿ ನೆಲದ ಮೇಲೆ ದೂಡಿ ಹಾಕಿದಾಗ ಪಿರ್ಯಾದಿದಾರರು ಕೂಗಿಕೊಂಡಿದ್ದು ಅಕ್ಕಪಕ್ಕದವರು ಬಂದಾಗ ಹರೀಶ ನಾಯಕ್ ಅಲ್ಲಿಂದ ಹೊರಟು ಹೋಗುತ್ತಾ  ಜೀವ ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 191/2021 ಕಲಂ: 323, 341, 354, 354(B)504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಯಡ್ತಾಡಿ ಗ್ರಾಮದ ಸಾಯಿಬ್ರಕಟ್ಟೆ ಜಂಕ್ಷನ್ ಬಳಿ ಕೆಲವು ಬೀಡಾಡಿ ದನಗಳು ಹಗಲು ವೇಳೆಯಲ್ಲಿ ಹುಲ್ಲುಗಳನ್ನು ಮೇಯುತ್ತಿದ್ದು,  ರಾತ್ರಿ ವೇಳೆಯಲ್ಲಿ ರಸ್ತೆಯ ಬದಿಯಲ್ಲಿ ಮಲಗಿರುವುದನ್ನು ಪಿರ್ಯಾದಿದಾರರಾದ ರಾಘವ್ ಮೆಂಡನ್ (35), ತಂದೆ: ಈರ ಮರಕಾಲ,ವಾಸ: ಬಿಲ್ಲಾಡಿ ಗ್ರಾಮ, ಜಾನುವಾರುಕಟ್ಟೆ ಅಂಚೆ, ಬ್ರಹ್ಮಾವರ ತಾಲೂಕು ಇವರು ನೋಡಿದ್ದು ದಿನಾಂಕ 09/11/2021 ರಂದು ರಾತ್ರಿ 11:18 ಗಂಟೆಗೆ ಯಡ್ತಾಡಿ ಗ್ರಾಮದ ಸ್ವಾಗತ್ ಬಾರ್ ಎದುರುಗಡೆ ಅಪರಿಚಿತ ವಾಹನದಲ್ಲಿ ಯಾರೋ ದನ ಕಳ್ಳರು ಬಂದು 2 ದನಗಳನ್ನು ಕಳವು ಮಾಡಿ ವಾಹನದಲ್ಲಿ ತುಂಬಿಸಿಕೊಂಡು ಹೋಗುವ ಸಿಸಿಟಿವಿ ದೃಶ್ಯಾವಳಿಗಳು ಕಂಡು ಬಂದಿರುತ್ತದೆ.  ಕಳವಾದ 2 ದನಗಳ ಮೌಲ್ಯ ರೂಪಾಯಿ 20000/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 186 /2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಕೋಟ: ಪಿರ್ಯಾದಿದಾರರಾದ ಶ್ರೀದೇವಿ . ಟಿ ಸುವರ್ಣ (31), ಗಂಡ: ಅಶ್ವಥ್ ಕುಮಾರ್, ವಾಸ: ಶ್ರೀ ದೇವಿ ಕೃಪಾ ಯಕ್ಷಿಮಠ  ಬೆಳ್ಳಿ ಬೆಟ್ಟ ಸಾಸ್ತಾನ ಗುಂಡ್ಮಿ ಗ್ರಾಮ ಬ್ರಹ್ಮಾವರ ತಾಲೂಕು ಇವರು ಮೂರು ವರ್ಷಗಳ  ಹಿಂದೆ  ಲಕ್ಷ್ಮೀ ನಗರದ ಬಾಬು ಕೊಟ್ಯಾನ್ ಎಂಬುವವರ ಮಗ ಅಶ್ವಥ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದು, ಪಿರ್ಯಾದಿದಾರರ ಗಂಡ ಅವರ ವ್ಯವಹಾರಕ್ಕೆಂದು ಪಿರ್ಯಾದಿದಾರರ ಬಳಿಯಲ್ಲಿ ಪೈನಾನ್ಸ , ಸೊಸೈಟಿ ಮತ್ತು ಸ್ವಸಹಾಯ ಸಂಘಗಳಿಂದ ಹಾಗೂ ಚಿನ್ನ ಅಡಮಾನ ಮಾಡಿಸಿ  ಕೊಟ್ಟು  17 ಲಕ್ಷ ರೂಪಾಯಿಯಷ್ಟು ಸಾಲ ಮಾಡಿ ಹಣವನ್ನು ತೆಗೆದುಕೊಂಡು ಹೋಗಿದ್ದು, ಸಾಲದ ಹಣ ಸಂದಾಯ ಮಾಡುವಂತೆ ಸಾಲ ತೆಗೆದುಕೊಂಡ ಕಡೆಯಿಂದ ಕೇಳುತ್ತಿರುವ ಬಗ್ಗೆ  ಪಿರ್ಯಾದಿದಾರರ ಗಂಡ ಅಶ್ವಥ್ ರವರಿಗೆ ಹೇಳಿದ್ದಕ್ಕೆ ಅವರು ಹಣ ಕಟ್ಟದೇ ದಿನಾಂಕ 09/11/2021 ರಂದು ರಾತ್ರಿ 8.30 ಗಂಟೆಯ ಸಮಯಕ್ಕೆ ಅಶ್ವಥ್ ಹಾಗೂ ಅವರ ಅಕ್ಕ ಅನಿತಾ ಮತ್ತು ತಾಯಿ ಶಾಂತಾ ರವರು ಪಿರ್ಯಾದಿದಾರರ  ಮನೆಯ ಒಳಗೆ ಬಂದು ಜಗಳ ಮಾಡಿ ಬಾಗಿಲನ್ನು ಹಾಕಿ ಪಿರ್ಯಾದಿದಾರರಿಗೆ ಮತ್ತು ಅವರ ಮಗುವಿಗೆ ಕೈಯಿಂದ ಹೊಡೆದಿರುತ್ತಾರೆ ಅಲ್ಲದೇ ನೀನು ಮತ್ತು ನಿನ್ನ ಮನೆಯವರು  ಕೊಟ್ಟಿರುವ ಹಣಕ್ಕೆ ನಾನು ಜವಾಬ್ದಾರನಲ್ಲ ಎಂದು ಹೇಳಿ ಮನೆಯ ಹೊರಗೆ ಬಂದು ಅವಾಚ್ಯವಾಗಿ ಕೂಗಾಡಿ ಮಗುವನ್ನು ಕರೆದುಕೊಂಡು ಹೋಗುತ್ತೇನೆಂದು ಜೀವ ಬೆದರಿಕೆ  ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 193/2021 ಕಲಂ: 447, 354, 323 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಅನಂತ ನಾಯ್ಕ (54), ವಾಸ: ಕುಬ್ರಿ ಮನೆ, ಶಿರಪುರ ಗ್ರಾಮ, ಹೆಬ್ರಿ ತಾಲೂಕು, ಪ್ರಸ್ತುತ: ಕರಾವಳಿ ಬೈಪಾಸ್‌ ಬಳಿ, ಉಡುಪಿ ತಾಲೂಕು ಇವರು ದಿನಾಂಕ 09/11/2021 ರಂದು ಸಂಜೆ ಸಂಜೀವ ಶೆಟ್ಟಿಯವರೊಂದಿಗೆ ಮಲ್ಪೆ ರಸ್ತೆಯಲ್ಲಿರುವ ಸೂಪರ್‌ ಮಾರ್ಕೇಟ್‌ಗೆ ಮನೆ ಸಾಮಾನು ಖರೀದಿಸಲು ತೆರಳಿದ್ದು, 19:25 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕರಾವಳಿ ಬಸ್‌ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದಾಗ KA-20-4288 ನೇ ಶ್ರೀ ಮೂಕಾಂಬಿಕಾ ಎಂಬ ಹೆಸರಿನ ಖಾಸಗಿ ಬಸ್‌ನ ಚಾಲಕನು ಬಸ್ಸುನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾದುದಾರರನ್ನು ಬಸ್‌ನ ಅಡಿಗೆ ಹಾಕುವ ಸಂಭವವನ್ನು ಸಂಜೀವ ಶೆಟ್ಟಿಯವರು ತಪ್ಪಿಸಿದ್ದು, ಬಸ್‌ನ ಕಂಡೆಕ್ಟರ್‌ ಬಸ್ಸಿನಿಂದ ಇಳಿದು ಬಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದುದಾರರ ಕೆನ್ನೆಗೆ ಬಲವಾಗಿ ಕೈಯಿಂದ ಹೊಡೆದು ಅವಮಾನ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 162/2021 ಕಲಂ: 279, 323, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 11-11-2021 10:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080