ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿದಾರರಾಧ ಜಯಕರ ಸಾಲಿಯಾನ್ (36) ತಂದೆ: ನಾರಾಯಣ ಸಾಲಿಯಾನ್ ವಾಸ: ದರ್ಖಾಸು ಮನೆ , ಮಡಿಬೆಟ್ಟು , ಶಾಲೆಯ ಬಳಿ ಕಣಜಾರು ಗ್ರಾಮ ಗುಡ್ಡೆಯಂಗಡಿ  ಅಂಚೆ, ಕಾರ್ಕಳ ಇವರು, ತನ್ನ ಮನೆಯಿಂದ  ದ್ವಿಚಕ್ರ ವಾಹನದಲ್ಲಿ ಗುಡ್ಡೆಯಂಗಡಿಯಿಂದ ಮನೆಗೆ ಹಾಲನ್ನು ತರುವರೇ ಹೋಗುತ್ತಿರುವಾಗ ಬೆಳಿಗ್ಗೆ 6:45 ಗಂಟೆಗೆ ಗುಡ್ಡೆಯಂಗಡಿ ಬಳಿಯ  ಮಂಜುನಾಥ ಅಚಾರ್ಯ ಎಂಬರ ಮನೆಯ ಎದುರು ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಕಾರ್ಕಳ ಕಡೆಯಿಂದ  ಮಣಿಪಾಲ ಕಡೆಗೆ ಮಿನಿ ಟೆಂಪೋ 909 ನೇದರ ಚಾಲಕ ರವಿ ಎಂಬವರು ತನ್ನ ಮಿನಿ ಟೆಂಪೋವನ್ನು  ಡಾಮಾರು ರಸ್ತೆಯಲ್ಲಿ ದುಡುಕುತನದಿಂದ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ  ರಸ್ತೆಯ ತೀರಾ ಬಲಬದಿಗೆ ಚಲಿಸಿ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಹೊಸದಾಗಿ ಖರೀದಿಸಿದ ಹೊಂಡಾ ಅ್ಯಕ್ಟಿವ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡದ ಪರಿಣಾಮ ದ್ವಿಚಕ್ರ ವಾಹನ ರಸ್ತೆಯ ಎಡಬದಿಗೆ ಎಸೆಯಲ್ಪಟ್ಟು ದ್ವಿಚಕ್ರ ವಾಹನ ಸವಾರ ವಿಘ್ನೇಶ್ ಪೂಜಾರಿಯವರ ಮುಖಕ್ಕೆ ತಲೆಗೆ ಗಂಬೀರ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಕೆಎಂಸಿ ಮಣಿಪಾಲಕ್ಕೆ ದಾಖಲಿಸಿದಲ್ಲಿ ಚಿಕಿತ್ಸೆಯು ಫಲಕಾರಿಯಾಗದೆ ಬೆಳಿಗ್ಗೆ 7: 20 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021 ಕಲಂ: 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ಪಿರ್ಯಾದಿದಾರರಾದ ಜೈನುಲ್ ಅಬಿದಿನ್‌ (53) ತಂದೆ: ಬಾಪು ಸಾಹೇಬ್‌ ವಾಸ: ಮಾವಿನಕಟ್ಟೆ ಕರ್ಕುಂಜೆ ಗ್ರಾಮ ಕುಂದಾಪುರ ಇವರು ದಿನಾಂಕ 10/11/2021 ರಂದು ತನ್ನ KA-19-EK-5531 ನೇ ಮೋಟಾರ್‌ ಸೈಕಲ್‌ನಲ್ಲಿ ತನ್ನ ಸ್ನೇಹಿತ ಮೊಹಮ್ಮದ್‌ ರಿಜ್ವಾನ್‌ರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಗಂಗೊಳ್ಳಿ ಕಡೆಯಿಂದ ಕರ್ಕುಂಜೆ ಕಡೆಗೆ ಹೋಗುತ್ತಿರುವಾಗ ಗುಜ್ಜಾಡಿ ಗ್ರಾಮದ ನಾಯಕವಾಡಿ ಯಕ್ಷಿರಾ ಕಾಂಪ್ಲೆಕ್ಸ್‌ಬಳಿ ತಲುಪುವಾಗ ರಾತ್ರಿ ಸುಮಾರು 7:45 ಗಂಟೆ ಸಮಯಕ್ಕೆ ಆಪಾದಿತನು  ತನ್ನ KA-20 MB-1354 ನೇ ಕಾರನ್ನು ಮುಳ್ಳಿಕಟ್ಟೆ ಕಡೆಯಿಂದ ನಾಯಕವಾಡಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಕಾರಿನ ಎದುರು ಹೋಗುತ್ತಿರುವ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಜೈನುಲ್ ಅಬಿದಿನ್‌ ರವರ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಜೈನುಲ್ ಅಬಿದಿನ್‌ ರವರು ಹಾಗೂ ಸಹ ಸವಾರ ಮೋಟಾರ್‌ ಸೈಕಲ್‌ ಸಮೇತ  ರಸ್ತೆಗೆ ಬಿದ್ದ ಪರಿಣಾಮ ಜೈನುಲ್ ಅಬಿದಿನ್‌ ರವರ ಬಲಕಾಲಿನ ಮೂಳೆಗೆ ಪೆಟ್ಟಾಗಿದ್ದು, ಕೈ ಕಾಲುಗಳಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿರುತ್ತದೆ. ಹಾಗೂ ಸಹ ಸವಾರ ಮೊಹಮ್ಮದ್‌ ರಿಜ್ವಾನ್‌ರವರಿಗೆ ಕೈ ಕಾಲುಗಳಿಗೆ ಪೆಟ್ಟಾಗಿದ್ದು, ತಲೆಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 105/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಉದಯ ಕುಮಾರ್‌,  (52)  ತಂದೆ: ತುಕ್ರ ಪೂಜಾರಿ,  ವಾಸ: ಆಶ್ರಯ, ಶೆಟ್ಟಿ ಕಂಪೌಂಡ್‌ ಎದುರು, ಬೊಮ್ಮನಪಾದೆ ರಸ್ತೆ, ಕೊರಂಗ್ರಪಾಡಿ ಗ್ರಾಮ, ಉಡುಪಿ ಇವರ ಕೊನೆಯ ತಮ್ಮ ಪ್ರಸನ್ನ (43) ಎಂಬವರು ಮದ್ಯ ಸೇವನೆಯ ಚಟ ಹೊಂದಿದ್ದು, ತಾಯಿಯ ಮರಣದ ಮರುದಿನ ದಿನಾಂಕ 26/10/2021 ರಂದು 13:00 ಗಂಟೆಗೆ ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಬೊಮ್ಮನಪಾದೆ ರಸ್ತೆಯಲ್ಲಿರುವ ಶೆಟ್ಟಿ ಕಂಪೌಂಡ್‌ಎದುರು ಇರುವ ಆಶ್ರಯ ಎಂಬ ಮನೆಯಿಂದ ಯಾರಿಗೂ ತಿಳಿಸದೇ ಮನೆ ಬಿಟ್ಟು ಹೋಗಿದ್ದು, ಈವರೆಗೂ ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುವುದಾಗಿದೆ, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 163/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

 • ಕಾರ್ಕಳ: ಪಿರ್ಯಾದಿದಾರರಾದ ಗಣೇಶ ಕೆ. ಪೂಜಾರಿ, (51),ತಂದೆ: ದಿವಂಗತ ಕೋಟಿ ಪೂಜಾರಿ,ವಾಸ: ಅನುಗ್ರಹ ದರ್ಖಾಸು ಮನೆ, ಪ್ರಾಂತ್ಯ ಶಾಲೆಯ ಬಳಿ, ಕೊಡಂಗಲ್ಲು ಅಂಚೆ,  ಪ್ರಾಂತ್ಯ ಗ್ರಾಮ, ಮೂಡಿಬಿದ್ರಿ ಇವರ ಅಣ್ಣ ಮಹಾಬಲ ಕೆ. ಪೂಜಾರಿ ಈತನು ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಉಳ್ಳವನಾಗಿದ್ದು, ದಿನಾಂಕ 08/11/2021 ರಂದು ಬೆಳಗ್ಗೆ  ಆತನ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಬಳಿಕ ಪತ್ನಿ ಮನೆಯಾದ ಸಾಂತೂರು ಕೊಪ್ಪಳಕ್ಕೆ ಹೋಗಿದ್ದು, ಈ ಸಮಯ ಆತನು ವಿಷ ಪದಾರ್ಥ ಸೇವನೆ ಮಾಡಿದ ವಿಚಾರ ತಿಳಿದು ಆತನ ಪತ್ನಿಯ ಮನೆಯವರು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇಲ್ಲಿಗೆ ದಾಖಲಿಸಿದ್ದು, ದಿನಾಂಕ 10/11/2021 ರಂದು ರಾತ್ರಿ ಸುಮಾರು 9:15 ಗಂಟೆಗೆ ಮೃತಪಟ್ಟಿರುತ್ತಾರೆ. ಮೃತರು  ವಿಪರೀತ ಮದ್ಯವ್ಯಸನಿಯಾಗಿದ್ದು, ಪತ್ನಿ ಹಾಗೂ ಮಕ್ಕಳು ಮನೆ ಬಿಟ್ಟು ಹೋದ ವಿಚಾರದಲ್ಲಿ ಮಾನಸಿಕವಾಗಿ ನೊಂದು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿದೆ, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 43/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಲಕ್ಷ್ಮಿ, (73) ಗಂಡ: ದಿ/ ಶೀನ ಪೂಜಾರಿ, ವಾಸ: ಮೂಡಹಿತ್ಲು 1 ನೇ ಬ್ರಿಡ್ಜ್, ಕೋಣಿ, ಕುಂದಾಪುರ ಇವರಿಗೂ ಆಪಾದಿತಳಾದ ಇವರ ಮಗಳು ಯಶೋಧಾರವರಿಗೂ ಆಸ್ತಿ ಹಂಚಿಕೆ ವಿಚಾರದಲ್ಲಿ ವೈಷಮ್ಯವಿದ್ದು, ಈ ಬಗ್ಗೆ ದ್ವೇಷದಿಂದ ಆಪಾದಿತರು ದಿನಾಂಕ 10/11/2021 ರಂದು 19:30 ಗಂಟೆಗೆ ಲಕ್ಷ್ಮೀ ರವರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮಂಚದ ಮೇಲೆ ಮಲಗಿದ್ದ ಇವರನ್ನು ಮಂಚದಿಂದ ಕೆಳಗೆ ಎಳೆದುಹಾಕಿ ಕಾಲಿನಿಂದ ತುಳಿದು, ಅವಾಚ್ಯವಾಗಿ ಬೈದು ಮನೆಯ ಜಾಗವನ್ನು ಆಪಾದಿತಳ ಹೆಸರಿಗೆ ಮಾಡಿಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಆಪಾದಿತೆ ಮಾಡಿದ ಹಲ್ಲೆಯಿಂದಾಗಿ ಲಕ್ಷ್ಮೀ ಇವರ ಕಾಲಿಗೆ ಹಾಗೂ ಸೊಂಟಕ್ಕೆ ಒಳ ನೋವು ಉಂಟಾಗಿರುವುದಾಗಿದೆ, ಈ ಬಗ್ಗೆ ಕುಂದಾಫುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 122/2021 ಕಲಂ: 448, 323, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-11-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080