ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ:  ದಿನಾಂಕ 10.10.2022 ರಂದು 22;15  ಘಂಟೆಗೆ ಕುಂದಾಪುರ  ತಾಲೂಕು ಸಿದ್ದಾಪುರ ಗ್ರಾಮದ ಹೆನ್ನಾಬೈಲ್  ಮಸೀದಿಯ  ಶಿವಯ್ಯ  ನಾಯ್ಕ ಪ್ರಾಯ 60 ವರ್ಷ ಇವರು  ರಸ್ತೆಯ  ಬದಿಯಲ್ಲಿ  ನಡೆದುಕೊಂಡು  ಬರುತ್ತಿರುವಾಗ   ಆರೋಪಿಯು  ಕೆಎ. 01 ಎಕೆ.3999 ನೇ  ನಂಬ್ರದ  ಲಾರಿಯನ್ನು  ಸಿದ್ದಾಪುರ  ಕಡೆಯಿಂದ ಹೊಸಂಗಡಿ  ಕಡೆಗೆ  ಅತೀ   ವೇಗ   ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿ     ಶಿವಯ್ಯ  ನಾಯ್ಕ  ಇವರಿಗೆ  ಡಿಕ್ಕಿ  ಹೊಡೆದಿದ್ದು,ಇದರ  ಪರಿಣಾಮ  ಅವರ  ತಲೆ  ಹಾಗೂ ಕೈ  ಕಾಲಿಗೆ  ಗಂಭಿರ  ಸ್ವರೂಪದ  ಗಾಯವಾಗಿ  ಸ್ಥಳದಲ್ಲಿಯೇ  ಮೃತಪಟ್ಟಿರುತ್ತಾರೆ .ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/2022  ಕಲಂ: 279,304(ಎ)    ಐ.ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹಿರಿಯಡ್ಕ: ಪಿರ್ಯಾದಿ: ವಿಶ್ವನಾಥಕಾಮತ್ (52) ತಂದೆ: ಮಂಜುನಾಥ ನಾಯಕದವಾಸ: 1-58 ಸಿ ಮಂಜುಶ್ರೀ  , ಬೆಳ್ಳಾರ್ಪಾಡಿ ಇವರು ದಿನಾಂಕ: 09/10/2022 ರಂದು  ತನ್ನ ಕೆಎ 20 ಇಬಿ 1079 ನೇ ದ್ವಿಚಕ್ರ ವಾಹನದಲ್ಲಿ ಅಣ್ಣನ ಮನಗಾದ ದರ್ಶಿತ್‌ನನ್ನು  ಕುಳ್ಳಿರಿಸಿಕೊಂಡು ಮುನಿಯಾಲು  ಹೆಂಡತಿ ಮನೆಗೆ ಹೋಗಿ ವಾಪಾಸು ಬರುತ್ತಿರುವಾಗ ಸಮಯ ಸುಮಾರು ಸಂಜೆ 5:15 ಗಂಟೆಗೆ ಅಜೆಕಾರು ಹರಿಖಂಡಿಗೆ ರಸ್ತೆಯಲ್ಲಿ ಹರಿಖಂಡಿಗೆ ಸಿಂಗ ಮನೆ ಕಾಂಕ್ರೀಟ್ ರಸ್ತೆಯ ಬಳಿ ಪಿರ್ಯಾದುದಾರರ ಎದುರಿನಿಂದ ಅಂದರೆ  ಹರಿಖಂಡಿಗೆ ಕಡೆಯಿಂದ KA-20-AA-9262 ಅಟೋ ರಿಕ್ಷಾ ಚಾಲಕನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆಯ ತೀರಾ ಬಲಭಾಗಕ್ಕೆ  ಬಂದು  ಪಿರ್ಯಾದುದಾರರ ಬೈಕಿಗೆ ಡಿಕ್ಕಿ ಹೊಡೆದನು. ಇಬ್ಬರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಸವಾರ ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು ಪರಿಣಾಮ ಪಿರ್ಯಾದುದರಿಗೆ ಬಲಕೈಗೆ, ಬೆರಳಿಗೆ, ಬಲಭೂಜಕ್ಕೆ, ಪೆಟ್ಟಾಗಿದ್ದು ಬಲಕಾಲು,ಹಣೆಯ ಎಡಭಾಗ ತರಚಿದಗಾಯವಾಗಿದ್ದು  ದರ್ಶಿತ್‌ಗೆ ಬಲಕಾಲಿಗೆ  ಮೂಳೆ ಮೂರಿತವಾಗಿದ್ದು ತಲೆಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2022 ಕಲಂ: 279,337,338  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಫಿರ್ಯಾದಿ ವನಜ (45)ಗಂಡ: ಪ್ರಭಾಕರ ಮೆಂಡನ್‌, ವಾಸ; ಬೆಳ್ಳಾಡಿ  ಜೆಡ್ಡು, ವೆಂಕಟೇಶ್ವರ ನಿಲಯ, ನಾಡ-ಗುಡ್ಡೆಯಂಗಡಿ, ಇವರ ತಂದೆ  ವೆಂಕಟ ಮೊಗವೀರ (79 ವರ್ಷ), ರವರು ದಿನಾಂಕ: 10.10.2022 ರಂದು 21:30 ಗಂಟೆಗೆ ಬೈಂದೂರು ತಾಲೂಕು. ನಾಡ ಗ್ರಾಮದ  ನಾಡ-ಗುಡ್ಡೆಯಂಗಡಿ,  ಬೆಳ್ಳಾಡಿ  ಜೆಡ್ಡು, ಎಂಬಲ್ಲಿರುವ ಪಿರ್ಯಾದಿದಾರರ ಮನೆಯ ಬಳಿ ಇರುವ ಗದ್ದೆಗೆ, ಬರುವ ಕಾಡು ಪ್ರಾಣಿಗಳನ್ನು ಓಡಿಸಲು  ಹೋಗಿದ್ದು , ಕಾಡುಪ್ರಾಣಿಗಳನ್ನು ಓಡಿಸುವ ಬರದಲ್ಲಿ 21:30 ಗಂಟೆಯಿಂದ 22:15 ಗಂಟೆಯ ನಡುವಿನ ಅವದಿಯಲ್ಲಿ  ಗದ್ದೆಯ ಪಕ್ಕದಲ್ಲಿರುವ ಕೆರೆಗೆ  ಆಕಸ್ಮಿಕವಾಗಿ ಕಾಲು ಜ್ಯಾರಿ ಬಿದ್ದು ನೀರಿನಲ್ಲಿ ಮುಳುಗಿ  ಉಸಿರುಗಟ್ಟಿ ಮೃತಪಟ್ಟಿರುತ್ತಾರೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ: ಯು.ಡಿ.ಆರ್ ಸಂಖ್ಯೆ 24/2022 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  
  • ಕಾಪು: ಪಿರ್ಯಾದಿ ಎಡ್ನ ಬ್ಲೋಸಮ್ ಡಿಸೋಜ್ ಪ್ರಾಯ  36 ವರ್ಷ  ತಂದೆ  ಎಡ್ವರ್ಡ್ ಡಿಸೋಜ್ ವಾಸ  ನೆಲ್ಸನ್ ಕೋಟೇಜ್, ಗೋಕುಲ್ ಹೌಸ್ ಕಟ್ಟಿಂಗೇರಿ ಅಂಚೆ, ಮೂಡಬೆಳ್ಳೆ ಇವರ ತಂದೆ  ಎಡ್ವರ್ಡ ಡಿಸೋಜ (67) ರವರಿಗೆ ಕಳೆದ 10 ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿದ್ದು, 3 ತಿಂಗಳ ಹಿಂದೆ ಕರುಳಿಗೆ ಸಂಬಂಧಿಸಿದಂತೆ ಶಸ್ತ್ರ ಚಿಕಿತ್ಸೆಯಾಗಿದ್ದು, ದಿನಾಂಕ 09-10-2022 ರಂದು ಶಂಕರಪುರದ ಇನ್ನಂಜೆ ಗ್ರಾಮ ಮನೆಯಲ್ಲಿರುವಾಗ ಬೆಳಗ್ಗೆ 11.00 ಗಂಟೆಗೆ ಬಾತ್‌ರೂಮಿಗೆ ಹೋಗಿದ್ದು, ಎಷ್ಟು ಹೊತ್ತಾದರೂ ಬಾರದೇ ಇರುವುದನ್ನು ಕಂಡು ಎಡ್ವರ್ಡ ಡಿಸೋಜ ರವರ ಅಣ್ಣ ಪಿಯುಸ್ ಡಿಸೋಜ್ ರವರು ಬಾತ್‌ರೂಮಿಗೆ ಹೋಗಿ ನೋಡಲಾಗಿ, ಎಡ್ವರ್ಡ ಡಿಸೋಜ ರವರು ಬಾತ್‌ರೂಮಿನಲ್ಲಿ ಅಸ್ವಸ್ಥನಾಗಿ ಬಿದ್ದಿದ್ದು, ಕೂಡಲೇ ನೆರೆಕೆರೆಯವರೊಂದಿಗೆ ಮತ್ತು ಸಂಬಂಧಿಕರೊಂದಿಗೆ ಆರೈಕೆ ಮಾಡಿ ಚಿಕಿತ್ಸೆಯ ಬಗ್ಗೆ ಅಂಬುಲೆನ್ಸ್ ವಾಹನದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,  ಸಂಜೆ 5.00 ಗಂಟೆಗೆ ಪರೀಕ್ಷಿಸಿದ ಅಲ್ಲಿನ ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಎಡ್ವರ್ಡ ಡಿಸೋಜ ರವರಿಗೆ ಸುಮಾರು 10 ವರ್ಷಗಳಿಂದ  ಹೃದಯ ಸಂಬಂಧಿ ಕಾಯಿಲೆಯಿದ್ದು, ಹಾಗೂ 3 ತಿಂಗಳ ಹಿಂದೆ ಕರುಳಿಗೆ ಸಂಬಂಧಪಟ್ಟ ಶಸ್ತ್ರ ಚಿಕಿತ್ಸೆಯಾಗಿದ್ದು ಇದೇ ಕಾರಣದಿಂದ ಯಾವುದೇ ಕಾಯಿಲೆ ಉಲ್ಬಣಗೊಂಡು ದಿನಾಂಕ 09-10-2022 ರಂದು ಬೆಳಗ್ಗೆ 11.00 ಗಂಟೆಯಿಂದ ಸಂಜೆ 5.00 ಗಂಟೆಯ ಮಧ್ಯಾವಧಿಯಲ್ಲಿ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್. ನಂಬ್ರ 31/2022 ಕಲಂ 174 ಸಿಆರ್‌‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  
  • ಕಾರ್ಕಳ:  ಪಿರ್ಯಾದಿ ರೋಶನ್ (30), ತಂದೆ: ರಾಗು ಕೋಟ್ಯಾನ್, ವಾಸ: ಕುರುಡೇಲು ಮನೆ, ನಕ್ರೆ, ಕುಕ್ಕುಂದೂರು ಇವರು ತನ್ನ ಮಕ್ಕಳಾದ ರೋಹಿತ್, ರೋಶನ್ ಮತ್ತು ರೋಹನ್ ಇವ ರೊಂದಿಗೆ ವಾಸವಾಗಿದ್ದು, ರೋಶನ್ ಪ್ರಾಯ: 30 ವರ್ಷ,  ಈತನು ಮಂಗಳೂರಿನಲ್ಲಿ ಪಾರ್ಲೆ ಕಂಪೆನಿಯ ಏಜೆನ್ಸಿ ಉದ್ಯಮಕ್ಕಾಗಿ ರೂ. 25 ಲಕ್ಷ ಹಣ ಸಾಲವನ್ನು ಮಾಡಿಕೊಂಡಿದ್ದು ಇತ್ತೀಚೆಗೆ ಏಜೆನ್ಸಿ ಉದ್ಯಮದಲ್ಲಿ ನಷ್ಟ ಉಂಟಾಗಿ ಏಜೆನ್ಸಿಯನ್ನು ಮುಚ್ಚಿದ್ದು, ಬಳಿಕ ರೋಷನ್‌ನು ಪಿರ್ಯಾದಿದಾರರ ಜೊತೆ ವಾಸವಾಗಿರುತ್ತಾನೆ. ರೋಶನ್ ನು ಆಗಾಗ ಪಿರ್ಯಾದಿದಾರರೊಂದಿಗೆ ಪಾರ್ಲೆ ಕಂಪೆನಿಯ ಏಜೆನ್ಸಿ ಉದ್ಯಮಕ್ಕಾಗಿ ಮಾಡಿದ ಸಾಲದ ಬಗ್ಗೆ ಮನನೊಂದು ಮಾತನಾಡುತ್ತಿದ್ದು, ದಿನಾಂಕ 10.10.2022 ರಂದು ರಾತ್ರಿ 10.00 ಗಂಟೆಗೆ  ರೋಶನ್ ಮನೆಯ ಕೋಣೆಯಲ್ಲಿ ಮಲಗಿಕೊಂಡಿದ್ದು, ಪಿರ್ಯಾದಿದಾರರು ಈ ದಿನ ದಿನಾಂಕ: 11.10.2022 ರಂದು ಬೆಳಿಗ್ಗೆ 09:30 ಗಂಟೆಗೆ ಹೋಗಿ ನೋಡಿದಾಗ ಕೋಣೆಗೆ ಚಿಲಕ ಹಾಕಿ ಮಲಗಿಕೊಂಡಿದ್ದು, ಕರೆದರು ಮಾತನಾಡುತ್ತಿರಲಿಲ್ಲ, ಬಳಿಕ ಪಿರ್ಯಾದಿದಾರರು ಹಾಗೂ ರೋಹನ್ ಬಾಗಿಲಿಗೆ ಆಳವಡಿಸಿದ ಚಿಲಕವನ್ನು ಕಬ್ಬಿಣದ ರಾಡಿನಿಂದ ಒಡೆದು ಒಳಗೆ ಹೋಗಿ ನೋಡಿದಾಗ ರೋಶನ್‌ನು ಕೋಣೆಯ ಒಳಗೆ ಕಿಟಕಿಗೆ ಅಳವಡಿಸಿದ  ಕಬ್ಬಿಣದ  ಸರಳಿಗೆ ಇಸ್ತ್ರೀ ಪೆಟ್ಟಿಗೆಯ ಅಳವಡಿಸಿದ ವಾಯರ್ ನ್ನು ಕಿಟಕಿ ಸರಳಿಗೆ ಕಟ್ಟಿ ಇನ್ನೊಂದು ತುದಿಯನ್ನು ತನ್ನ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ 45/2022 ಕಲಂ 174 ಸಿಆರ್‌‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.   

ಹೆಂಗಸು ಕಾಣೆ ಪ್ರಕರಣ

  • ಕುಂದಾಪುರ: ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ ಲಕ್ಷ್ಮೀ ಗಾಣಿಗ , ಪ್ರಾಯ: 70 ವಷ್, ತಂರ್ಷ: ದಿ/ ವೆಂಕಟೇಶ ಗಾಣಿಗ ವಾಸ: ಗುರುಪ್ರಸಾದ ಹೋಟೇಲ್ ಹಿಂಭಾಗ , ಕೋಟೇಶ್ವರ ಇವರ ಮಗಳು 30 ವರ್ಷ ಪ್ರಾಯದ ಕು.ಲತಾ ಎಂಬುವವರು ಮಾನಸಿಕ ಅಸ್ವಸ್ಥತೆಯಿಂದ  ಬಳಲುತ್ತಿದ್ದವರು ದಿನಾಂಕ  10-10-2022 ರಂದು ಮಧ್ಯಾಹ್ನ 02:00  ಗಂಟೆಗೆ ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಗುರುಪ್ರಸಾದ ಹೋಟೆಲಿನ ಹಿಂಬದಿ ಇರುವ ತನ್ನ ಮನೆಯಿಂದ ಹೋದವಳು ವಾಪಾಸು ಬಾರದೇ ಕಾಣೆಯಾಗಿದ್ದು ನೆರೆಕರೆಯರಲ್ಲಿ  ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ  111/2022 ಕಲಂ: ಹೆಂಗಸು ಕಾಣೆಯಂತೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಅಜೆಕಾರು: ದಿನಾಂಕ 11.10.2022 ರಂದು ಬೆ. 09-15 ಗಂಟೆಗೆ, ಪಿರ್ಯಾದಿ ಎಡ್ವರ್ಡ್‌ ನೊರೋನ್ಹಾ, (71), ತಂದೆ: ಪಾಸ್ಕಲ್‌‌ ನೊರೋನ್ಹಾ, ವಾಸ: ಗುಂಡುಜೆ ಮನೆ, ಮರ್ಣೆ ಗ್ರಾಮ, ಇವರ ತಂಗಿ ಎವುಲಿನ್ ನೊರೋನ್ಹಾ ರಿಗೆ ಸಂಬಂಧಿಸಿದ ಕಾರ್ಕಳ ತಾಲೂಕು ಮರ್ಣೇ ಗ್ರಾಮದ ಸರ್ವೆ ನಂಬ್ರ 566/5 ರಲ್ಲಿನ 0-42 ಎಕ್ರೆ ಜಮೀನಿನಲ್ಲಿ, ಅವರಿಂದ ಅಧಿಕಾರ ಪತ್ರ ಪಡೆದುಕೊಂಡಿರುವ ಫಿರ್ಯಾದುದಾರರು ಜಾಗದ ಗಡಿಗೆ ಬೇಲಿ ಮಾಡಲು ಕಲ್ಲುಕಂಬ ಹಾಕುತ್ತಿರುವಾಗ ಆರೋಪಿತೆಯು ಈ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ  ನಿಂದಿಸಿ, ಕಲ್ಲು ಕಂಬ ಹಾಕದಂತೆ ತಡೆ ಮಾಡಿ, ಪಿರ್ಯಾದುದಾರರು ಹಾಕಿರುವ ಕಲ್ಲು ಕಂಬ ಕಿತ್ತು ಹಾಕಿ ಹಾನಿ ಮಾಡಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 30/2022 ಕಲಂ: 447, 504, 427, 504 ಐಪಿಸಿ   ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಅಮಾಸೆಬೈಲು: ಪಿರ್ಯಾದಿ ಶ್ರೀಮತಿ ಸುಪ್ರೀತಾ ಎಸ್ ಶೆಟ್ಟಿ ಪ್ರಾಯ 53 ವರ್ಷ  ಗಂಡ ಶಿವಾನಂದ ಶೆಟ್ಟಿ ವಾಸ: ಮನೆ ನಂಬ್ರ 207 ಯೂರೋ ಲೀವಿಂಗ್ ಅಪಾರ್ಟ್ ಮೆಂಟ್ ಪೆರಂಪಳ್ಳಿ ಉಡುಪಿ ತಾಲೂಕು ಇವರು  ದಿನಾಂಕ 14-04-1993 ರಂದು  ಆಪಾದಿ ಬೆಳಂಜೆ ಶಿವಾನಂದ ಶೆಟ್ಟಿ ಯನ್ನು ಬೆಳ್ವೆ ಶಂಕರ ನಾರಾಯಣ ದೇವಸ್ಥಾನದಲ್ಲಿ ಮದುವೆಯಾಗಿದ್ದು  ವಿವಾಹವಾದ ಬಳಿಕ 13 ವರ್ಷಗಳ ಕಾಲ ಮಡಾಮಕ್ಕಿಯ ಕಬ್ಬಿನಾಲೆ ಎಂಬಲ್ಲಿ ವಾಸವಾಗಿದ್ದು ಅವರಿಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ.ಆರೋಪಿತರು1) ಬೆಳಂಜೆ ಶಿವಾನಂದ ಶೆಟ್ಟಿ 2. ಸುಜಾತಾ ಶೆಟ್ಟಿ 3. ಅನುಸೂಯ ಶೆಟ್ಟಿ .4. ಬಿ ಎನ್ ಶ್ರೀನಿವಾಸ5 ಅರುಂಧತಿ ಶೆಟ್ಟಿ 6. ಬಾಲಕೃಷ್ಣ ಶೆಟ್ಟಿ 7. ಸುಶೀಲಾ ಶೆಟ್ಟಿ ಆಗಿರುತ್ತಾರೆ. ಆ ಮದುವೆಯಾದ ನಂತರ ಆರೋಪಿ 1 ನೇಯವರು ಫಿರ್ಯಾದಿದಾರರನ್ನು ನಿರ್ಲಕ್ಷಿಸುತ್ತಾ ಬಂದಿದ್ದು ಮಕ್ಕಳ ಮೇಲೆ  ಯಾವುದೇ ಪ್ರೀತಿ ಕಾಳಜಿ ತೋರುತ್ತಿರಲಿಲ್ಲ. ನಂತರ 1 ನೇ ಆರೋಪಿತನು ಹಾಸನದಲ್ಲಿ 2008 ರಿಂದ 2012 ರವರೆಗೆ ಹೊಟೇಲು ಉದ್ಯಮ ನಡೆಸುತ್ತಿದ್ದು ಆ ಸಮಯ ಕೆಲವು ಅನೈತಿಕ ವ್ಯವಹಾರಗಳನ್ನು ಹೊಂದಿದ್ದು ಈ ಬಗ್ಗೆ ಫಿರ್ಯಾದಿದಾರರು 1 ನೇ ಆರೋಪಿತನನ್ನು ಎಚ್ಚರಿಸಿದರೂ ಸಹ 1 ನೇ ಆರೋಪಿತನು ಪೀರ್ಯಾದಿದಾರರ ಮಾತಿಗೆ ಬೆಲೆ ಕೊಡದೆ ತಾತ್ಸಾರ ಭಾವನೆಯಿಂದ ನೋಡಿಕೊಂಡು ಬರುತ್ತಿದ್ದು ಹಾಗೂ ಪ್ರತಿಯೊಂದು ವಿಷಯದಲ್ಲಿ ನಿರ್ಲಕ್ಷಿಸುತ್ತಾ ಬಂದಿದ್ದು ಆರೋಪಿ 1 ನೇಯವರ ಅನೈತಿಕ ವ್ಯವಹಾರದ ಬಗ್ಗೆ ಸಾಕಷ್ಟು ಜಗಳಗಳಾಗಿರುತ್ತದೆ. ಅಲ್ಲದೆ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಹ ಯಾವುದೇ ಸಹಾಯ ಮಾಡಿರುವುದಿಲ್ಲ. ಈ ಮಧ್ಯೆ ದಿನಾಂಕ 18-06-2022 ರ ದಿನಪತ್ರಿಕೆಯಲ್ಲಿ ಶಿವಾನಿ ಎಂಬ ಹೆಸರಿನ ಹುಡುಗಿ ಯೋಗಾಸನ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಬಗ್ಗೆ ಪ್ರಕಟಣೆ ಬಂದಿದ್ದು ಸದ್ರಿ ಹುಡುಗಿಯ ತಂದೆ 1 ನೇ ಆರೋಪಿತ ತಾಯಿ 2 ನೇ ಆರೋಪಿತಳೆಂದು ತಿಳಿದು ಬಂದಿದ್ದು ಇದರಿಂದ ಫಿರ್ಯಾದಿದಾರರು ನೊಂದು 1 ನೇ ಆರೋಪಿತನಿಗೆ ಪೋನು ಕರೆ ಮಾಡಿದ್ದು ಈ ವಿಷಯದಲ್ಲಿ ಪ್ರಶ್ನಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದು ಅಲ್ಲದೆ ದಿನಾಂಕ 14-09-2022 ರಂದು ಫಿರ್ಯಾದಿದಾರರು  3 ರಿಂದ 7 ನೇ ಆರೋಪಿಗಳು ವಾಸವಿರುವ ಮನೆಯಾದ ಬೆಳಂಜೆಗೆ ಹೋದಾಗ 1 ನೇ ಮತ್ತು 2 ನೇ ಆರೋಪಿ ಮಾಡಿರುವ ಅನೈತಿಕ ವ್ಯವಹಾರವೇ ಸರಿ ಎಂಬಂತೆ ಮಾತನಾಡಿ ಈ ಬಗ್ಗೆ ದೂರು ನೀಡಿದಲ್ಲಿ ಫಿರ್ಯಾದಿದಾರರ ಹಾಗೂ ಅವರ ಮಕ್ಕಳ ಜೀವನ ನೆಟ್ಟಗಾಗಲು ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದು  7 ನೇ ಆರೋಪಿಯು 2 ನೇ ಆರೋಪಿಯೊಂದಿಗೆ 1 ನೇ ಆರೋಪಿತನ ಮದುವೆ ಮಾಡಿಸಿದ್ದಾಗಿ ತಿಳಿಸಿದ್ದು  1 ನೇ ಆರೋಪಿಯು  ಫಿರ್ಯಾದಿದಾರರಿಗೆ ತಿಳಿಯದಂತೆ 2 ನೇ ಆರೋಪಿಯೊಂದಿಗೆ ಮದುವೆಯಾಗಿದ್ದು 3 ರಿಂದ 7 ನೇ ಆರೋಪಿಗಳು  1 ಮತ್ತು 2 ನೇ ಆರೋಪಿಗಳಿಗೆ ತಕ್ಷೀರು ಮಾಡುವ ಸಹಾಯ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ ಬಗ್ಗೆ  ಹಾಗೂ  1 ನೇ ಆರೋಪಿಯು ಆಸ್ತಿಯನ್ನು ಮಾರಾಟ ಮಾಡಿ ಫಿರ್ಯಾದುದಾರಿಗೂ ಅವರ ಮಕ್ಕಳಿಗೂ ಮೋಸ ಮಾಡಿರುವುದಾಗಿರುತ್ತದೆ. ಈ ಬಗ್ಗೆ ಅಮಾಸೆಬೈಲು  ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  23/2022 ಕಲಂ,498(A)  417,420  504 506 ಜೊತೆಗೆ 34  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 11-10-2022 06:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080