ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಕಮಲಾಕ್ಷ (38)  ತಂದೆ  ಪ್ರಭಾಕರ ಪೂಜಾರಿ  ವಾಸ   ಶ್ರೀದೇವಿ ಕೃಪಾ ಕೋಟೆ ಗ್ರಾಮ ಕಟಪಾಡಿ ಕಾಪು ತಾಲ್ಲೂಕು ಉಡುಪಿ ಇವರು ದಿನಾಂಕ 10/10/2022 ರಂದು ತನ್ನ ಮೋಟಾರು ಸೈಕಲ್‌ನಲ್ಲಿ  ಮಂಗಳೂರು ಉಡುಪಿ ರಾ ಹೆ 66 ರಲ್ಲಿ ಮನೆಯಿಂದ ಉಡುಪಿ ಕಡೆಗೆ ಹೊರಟಿದ್ದು, ಅದೇ ರಸ್ತೆಯಲ್ಲಿ ಮಹಮ್ಮದ್ ರಪೀಕ್ ಬಾವಾ ರವರು ಅವರ ಕೆಎ- 20 ಇಇ- 2532 ಮೋಟಾರು ಸೈಕಲ್‌ನಲ್ಲಿ ಉಡುಪಿ ಕಡಗೆ ಹೋಗುತ್ತಿರುವಾಗ ಸಮಯ ಸುಮಾರು 17:30 ಗಂಟೆಗೆ ಉದ್ಯಾವರ ಗ್ರಾಮದ ಜೈಹಿಂದ್ ಜಂಕ್ಷನ್‌ನ ಡಿವೈಡರ್‌ಬಳಿ ತಲುಪುತ್ತಿದ್ದಂತೆ, ಮಲ್ಲಿಕಾರ್ಜುನ ಎಸ್. ಅಂಬಿಗೇರ ರವರ ತನ್ನ ಅಶೋಕ ಲೇಲ್ಯಾಂಡ ಕಂಪನಿಯ 1920 ಹೆಚ್‌ಜಿ ನಂಬರ್ ಪ್ಲೇಟ್ ಇಲ್ಲದ ಹೊಸ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಮಹಮ್ಮದ್ ರಪೀಕ್ ಬಾವಾ ರವರ ಮೋಟಾರು ಸೈಕಲ್‌ಹತ್ತಿರ ಹೋಗಿ ಓಮ್ಮೇಲೆ ಎಡಬದಿಗೆ ತಿರುಗಿಸಿದ ಪರಿಣಾಮ ಲಾರಿಯ ಹಿಂಬದಿ ಎಡಭಾಗ ಮಹಮ್ಮದ್ ರಪೀಕ್ ಬಾವಾ ರವರಿಗೆ ತಾಗಿ ಮಹಮ್ಮದ್ ರಪೀಕ್ ಬಾವಾ ರವರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದಿದ್ದು, ಕೂಡಲೇ  ಕಮಲಾಕ್ಷ ರವರು ಉಪಚರಿಸಿ ನೋಡಲಾಗಿ ತಲೆಗೆ ತೀವೃ ರಕ್ತಗಾಯವಾಗಿದ್ದು , ಕಿವಿ, ಮೂಗು, ಬಾಯಿಯಲ್ಲಿ ರಕ್ತ ಬರುತ್ತಿದ್ದು, ಪ್ರಜ್ಞಾಹೀನನಾಗಿದ್ದು ಅಲ್ಲಿದ್ದ ಸಾರ್ವಜನಿಕರೊಂದಿಗೆ ಚಿಕಿತ್ಸೆಯ ಬಗ್ಗೆ ಅಂಬುಲೆನ್ಸ್ ವಾಹನದಲ್ಲಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ ಇಲ್ಲಿನ ವೈದ್ಯರು ಮಹಮ್ಮದ್ ರಪೀಕ್ ಬಾವಾ ರವರು ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 113/2022 ಕಲಂ 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ದಿನಾಂಕ 10/10/2022 ರಂದು ಬೆಳಿಗ್ಗೆ ಸಾಲಿಗ್ರಾಮದ ಸ್ಟ್ಯಾಂಡ್ ನಲ್ಲಿ ತನ್ನ ಗೂಡ್ಸ ಗಾಡಿಯನ್ನು ಇಟ್ಟುಕೊಂಡು ನಿಂತುಕೊಂಡಿರುವಾಗ ಸುಮಾರು 08:20 ಗಂಟೆಯ ಸಮಯಕ್ಕೆ  ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ರಾ ಹೆ 66 ರಲ್ಲಿ KA-20 EP-7066  TVS ಸ್ಕೂಟಿ  ಸವಾರ ತನ್ನ ಬಾಬ್ತು ಸ್ಕೂಟಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಸಾಲಿಗ್ರಾಮ ಬಸ್ ನಿಲ್ದಾಣದ ಎದುರು  ತೀರಾ ಎಡ ಬದಿಗೆ ಸವಾರಿ ಮಾಡಿಕೊಂಡು ಬಂದು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಎದುರುಗಡೆಯಿಂದ ಹೋಗುತ್ತಿದ್ದ KA EY -4895 ನೇ ಸ್ಕೂಟಿಗೆ ಬಲ ಬದಿಯಿಂದ ಢಿಕ್ಕಿ ಹೊಡೆದ  ಪರಿಣಾಮ ಎರಡೂ  ಸ್ಕೂಟರ್ ಸವಾರರು ಸ್ಕೂಟಿ ಸಮೇತ ಎಡ ಮಗ್ಗುಲಾಗಿ ರಸ್ತೆಗೆ ಬಿದ್ದರು.ಎದುರುಗಡೆಯಿಂದ ಹೋಗುತ್ತಿದ್ದ ಸ್ಕೂಟಿ ಸವಾರ ಶಶಾಂಕ ಎಂಬವರಾಗಿದ್ದು, ಅವರಿಗೆ  ಎಡ ಕಾಲು ಹಾಗೂ ಎಡ ಕೈ ಮೂಳೆ ಮುರಿತದ ತೀವೃ ತರಹದ ಗಾಯವಾಗಿರುತ್ತದೆ. ಢಿಕ್ಕಿ ಹೊಡೆದ  ಸ್ಕೂಟರ್ ಸವಾರ ರಂಗ ಎಂಬವರಾಗಿದ್ದು ಅವರಿಗೆಎಡ ಭುಜ ಮತ್ತು ಎಡ ಕೈ ಮಣಿಗಂಟು ತರಚಿದ ಸಣ್ಣ ಗಾಯವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 171/2022 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ:ಪಿರ್ಯಾದಿದಾರರಾಧ ಸುರೇಶ್ ಕುಲಾಲ್  (37) ತಂದೆ : ಪೋಂಕ್ರ ಕುಲಾಲ್ ವಾಸ: ಅಂಬಾಗಿಲು ಮನೆ ಬುಕ್ಕಿಗುಡ್ಡೆ ಪೆರ್ಡೂರು ಅಂಚೆ ಮತ್ತು ಗ್ರಾಮ  ಉಡುಪಿ ಇವರು  ದಿನಾಂಕ 10/10/2022 ರಂದು ತನ್ನ  ಆಟೋ ರೀಕ್ಷಾದಲ್ಲಿ  ಪೆರ್ಡೂರು  ಕಡೆ ಬಾಡಿಗೆ ಬಗ್ಗೆ ಕುಕ್ಕೆಹಳ್ಳಿ – ಪೆರ್ಡೂರು ರಸ್ತೆಯಲ್ಲಿ  ಹೋಗುತ್ತಾ ಪೆರ್ಡೂರು ಗ್ರಾಮದ ಬುಕ್ಕಿಗುಡ್ಡೆ ಕುಲಾಲ್ ಭವನದ ಎದುರು ಸಮಯ ಸುಮಾರು ಮದ್ಯಾಹ್ನ 12:00 ಗಂಟೆ ತಲುಪುವಾಗ ಎದುರಿನಿಂದ ಅಂದರೆ ಪೆರ್ಡೂರು ಕಡೆಯಿಂದ  ಓರ್ವ  ಸ್ಕೂಟಿ ಸವಾರ ತನ್ನ ಸ್ಕೂಟಿಯನ್ನು ಅತಿವೇಗ ಹಾಗೂ ಅಜಾಗ ರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಒಮ್ಮಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟಿ ಸವಾರ ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು ಸುರೇಶ್ ಕುಲಾಲ್ ರವರು ಸ್ಕೂಟಿ ಸವಾರ ಬಿದ್ದಲ್ಲಿಗೆ ಹೋಗಿ ನೋಡಲಾಗಿ ಸ್ಕೂಟಿ ಸವಾರ ಸುರೇಶ್ ಕುಲಾಲ್  ರವರ ಪರಿಚಯದ ಬುಕ್ಕಿಗುಡ್ಡೆ ಗೋವಿಂದ ಕುಲಾಲ್ ಆಗಿದ್ದು ಅವರಿಗೆ ಹಣೆಗೆ ಹಾಗೂ ಮೂಗಿಗೆ ತೀವ್ರ ರಕ್ತಗಾಯವಾಗಿದ್ದು ಸುರೇಶ್ ಕುಲಾಲ್  ರವರು ಹಾಗೂ ಅಲ್ಲಿಗೆ ಬಂದ ಸಂತೋಷ ಕುಲಾಲ್ ಹಾಗೂ ರತ್ನ ಕುಲಾಲ್ ರವರು ಸೇರಿ ಅವರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕಳುಹಿಸಿದ್ದು, ಗೋವಿಂದ ಕುಲಾಲ್ ಸವಾರಿ ಮಾಡಿಕೊಂಡು ಬಂದ ಸ್ಕೂಟಿ ನಂಬ್ರ ಕೆಎ-20 ಇಪಿ-5433 ಆಗಿರುತ್ತದೆ . ಈ ಅಪಘಾತಕ್ಕೆ ಕೆಎ-20 ಇಪಿ-5433 ನೇ ಸ್ಕೂಟಿ ಸವಾರ ಗೋವಿಂದ ಕುಲಾಲ್ ಅತೀವೇಗ ಹಾಗೂ ನಿರ್ಲಕ್ಷತನದ ಸವಾರಿ ಕಾರಣವಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 62/2022 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 10/10/2022 ರಂದು ರಾತ್ರಿ ಸುಮಾರು 8:00 ಗಂಟೆಗೆ, ಕುಂದಾಪುರ ತಾಲೂಕಿನ, ವಡೇರಹೋಬಳಿ  ಗ್ರಾಮದ  ನೆಹರೂ ಮೈದಾನದ ಬಳಿ  NH 66 ರಸ್ತೆಯಲ್ಲಿ, ಆಪಾದಿತ ಬಿಳಿ ಬಣ್ಣದ ನೊಂದಣಿ ನಂಬ್ರದ ತಿಳಿಯದ ಕಾರಿನ ಚಾಲಕ ಕಾರನ್ನು ಉಡುಪಿ ಕಡೆಯಿಂದ ಬೈಂದೂರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು, NH 66 ರಸ್ತೆ ದಾಟುತ್ತಿದ್ದ ಬಸಪ್ಪ ಶಂಕರಪ್ಪ ಎಂಬವರಿಗೆ  ಡಿಕ್ಕಿ ಹೊಡೆದು ನಿಲ್ಲಿಸದೇ ಹೋಗಿರುತ್ತಾನೆ. ಈ ಅಪಘಾತದಿಂದ ಬಸಪ್ಪ ಶಂಕರಪ್ಪರವರ ಎರಡೂ ಕಾಲುಗಳಿಗೆ, ತಲೆಗೆ ರಕ್ತಗಾಯ ಹಾಗೂ ಒಳಜಖಂ ಉಂಟಾದ ಗಾಯವಾಗಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿರುವುದಾಗಿದೆ. ಎಂಬುದಾಗಿ ಮಹಾದೇವ  (30)  ತಂದೆ  ಜಯಪಾಲ್‌  ಪಾಟೀಲ್‌‌  ವಾಸ:   ನಂಬ್ರ 307, ಕುಂಚಿನೂರು  ಗ್ರಾಮ ಜಮಖಂಡಿ  ತಾಲೂಕು & ಬಾಗಲಕೋಟ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 108/2022 ಕಲಂ: 279, 338   IPC  & 134 (A) & (B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

 • ಕಾರ್ಕಳ: ದಿನಾಂಕ 10/10/2022 ರಂದು 14:00 ಗಂಟೆಗೆ  ಕಾರ್ಕಳ ತಾಲೂಕು ಬಜಗೋಳಿ ಪೇಟೆಯಲ್ಲಿರುವ ಜೈನ್ ಹೋಟೇಲ್ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಾಗರಾಜ, ಎಂಬಾತನು ತನ್ನ ಸ್ವಂತ ಲಾಭಗೋಸ್ಕರ 1 ರೂ ಗೆ 70 ರೂಪಾಯಿ ನೀಡುವುದಾಗಿ  ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಮಾಹಿತಿಯಂತೆ ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ ಸಂಜೆ 16:00 ಗಂಟೆಗೆ ಪಂಚರ ಸಮಕ್ಷಮ ಹೋಗಿ ದಾಳಿ ನಡೆಸಿ ಆರೋಪಿ ನಾಗರಾಜ, (32), ತಂದೆ:ಮಂಜ, ವಾಸ: ಮಿಯ್ಯಾರು ಕಂಬಳದ ಬಳಿ, ಮಿಯ್ಯಾರು ಅಂಚೆ ಮತ್ತು ಗ್ರಾಮ, ಕಾರ್ಕಳ ಇವರನ್ನು ವಶಕ್ಕೆ ಪಡೆದು ಆರೋಪಿಯ ವಶದಲ್ಲಿ ಮಟ್ಕಾ ಜುಗಾರಿ  ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 1315 ಮಟ್ಕಾ ಬರೆದ ಚೀಟಿ ಮತ್ತು ಬಾಲ್‌ಪೆನ್‌-01 ಕಂಡು ಬಂದಿದ್ದು,ವಿಚಾರಣೆ ಸಮಯ ಆರೋಪಿಯು ಮಟ್ಕಾಜುಗಾರಿ ಆಟಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದಾಗಿ ಒಪ್ಪಿಕೊಂಡಿರುವುದರಿಂದ ಕಾನೂನು ಕ್ರಮದ ಬಗ್ಗೆ  ವರದಿಯನ್ನು ಸಲ್ಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 127/2022 ಕಲಂ: 78 (i)(iii) ಕರ್ನಾಟಕ ಪೊಲೀಸ್ ಕಾಯ್ದೆ ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ರೆಹನಾ (:38) ಗಂಡ: ಕೆ.ಎನ್.ದಿಲೀಪ್ ಕುಮಾರ್ @ ಮೊಹಮ್ಮದ್ ರೆಹಾನ್ ವಾಸ : #-4-600 ಎಂ. ರಾಜೀವ ನಗರ, 2 ನೇ ಸ್ಟೇಜ್ ದುಗ್ಲಿಪದವು, ಮಂಚಿ, 80 ಬಡಗಬೆಟ್ಟು ಗ್ರಾಮ, ಉಡುಪಿ ಇವರ ಗಂಡ ಕೆ.ಎನ್.ದಿಲೀಪ್ ಕುಮಾರ್ @ ಮೊಹಮ್ಮದ್ ರೆಹಾನ್ (38) ಇವರು ಗ್ಯಾಸ್ಟ್ರಿಕ್ ಖಾಯಿಲೆಯಿಂದ ಬಳತ್ತಿದ್ದು ಮೆಡಿಕಲ್ ನಿಂದ   ಮುದ್ದು ತೆಗೆದುಕೊಳ್ಳುತ್ತಿದ್ದರು, ಮೃತರು ದಿನಾಂಕ 10/10/2022 ರಂದು 03:40 ಗಂಟೆಯ ಸಮಯಕ್ಕೆ ರಾಜೀವನಗರದ ಆಟೋ ಸ್ಟ್ಯಾಂಡ್ ನ ಲ್ಯಾಂಡ್ ಲೈನ್ ಗೆ ಕರೆ ಮಾಡಿ ಅಜಿತ್ ರವರಲ್ಲಿ ನನಗೆ ಎದೆ ನೋವು ಆಗುತ್ತಿದೆ ಗ್ಯಾಸ್ಟ್ರಿಕ್  ಮಾತ್ರೆ ತರುವಂತೆ ಹೇಳಿದ್ದು ಅದರಂತೆ ಅಜಿತ್ ಮಾತ್ರೆ ತಗೆದುಕೊಂಡು ಹೋದ ಸಮಯ ಮೃತ ಕೆ.ಎನ್.ದಿಲೀಪ್ ಕುಮಾರ್ @ ಮೊಹಮ್ಮದ್ ರೆಹಾನ್ ಅವರು ನೆಲದಲ್ಲಿ ಬಿದ್ದು ಕೊಂಡಿದ್ದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು  ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅವರನ್ನು ಪರೀಕ್ಷಿಸಿದ ವೈದ್ಯರು ಆಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಆಗ ಸಮಯ ಸುಮಾರು ಸಂಜೆ 04:15 ಗಂಟೆ ಆಗಿರುತ್ತದೆ, ಪಿರ್ಯಾದಿದಾರರ ಗಂಡನಾದ ಕೆ.ಎನ್.ದಿಲೀಪ್ ಕುಮಾರ್ @ ಮೊಹಮ್ಮದ್ ರೆಹಾನ್ ಅವರು ಯಾವುದೋ ವ್ಯಾದಿಯಿಂದ ದಿನಾಂಕ 10/10/2022 ರಂದು 03:40 ಗಂಟೆಯಿಂದ 04:15 ಗಂಟೆಯ ಮಧ್ಯಾವಧಿಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 37/2022 ಕಲಂ: 174 ಸಿ ಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಉಮೇಶ ಪೂಜಾರಿ (45) ತಂದೆ; ದಿ; ದೂಜ ಪೂಜಾರಿ ವಾಸ; ತಡ್ಪೆದೋಟ ಮನೆ, ಕೌಡೂರು ಗ್ರಾಮ, ಕಾರ್ಕಳ ಇವರ ತಮ್ಮ ಪ್ರದೀಪ್ ಪೂಜಾರಿ (37) ಇವರು ಸುಮಾರು  10 ವರ್ಷಗಳಿಂದ ಮುಂಬಾಯಿ ಮತ್ತು ಪೂನಾದಲ್ಲಿ ಕೆಲಸ ಮಾಡಿಕೊಂಡಿದ್ದು, ಈಗ್ಯೆ ಸುಮಾರು 1 ವರ್ಷದಿಂದ ಊರಿನಲ್ಲಿ ಉಮೇಶ ಪೂಜಾರಿ ರವರೊಂದಿಗೆ ವಾಸವಾಗಿದ್ದು, ಕಳೆದ ವರ್ಷ ಕೊರೋನಾ  ಸಮಯದಲ್ಲಿ ಅತನ ಎಡಕೈಗೆ ಇಂಜೆಕ್ಷನ್ ನೀಡಿದ್ದು ಇದರಿಂದ ಕೈನೋವುಂಟಾಗಿ ಸರಿಯಾಗಿ ಕೆಲಸ ಮಾಡಲು ಆಗದೇ ಇದ್ದುದರಿಂದ ಮನನೊಂದು ದಿನಾಂಕ 10/10/2022 ರಂದು   ಮದ್ಯಾಹ್ನ 1:45 ಗಂಟೆಯಿಂದ ಸಂಜೆ 6:00 ಗಂಟೆಯ ಮಧ್ಯೆ ಮನೆಯ ಪಕ್ಕದಲ್ಲಿರುವ ಹಾಡಿಯಲ್ಲಿ ಮರಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 44/2022 ಕಲಂ: 174 ಸಿ ಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ: ಪಿರ್ಯಾದಿದಾರರಾಧ ಪ್ರಿತೀಶ್ (34) ತಂದೆ:ದಿ. ಅಶೋಕ ಶೆಟ್ಟಿ  ವಾಸ: ಅಶೋಕ ನಿಲಯ ಹೋಳಿಂಜೆ ಬೀಡು ಪೆರ್ಡೂರು ಅಂಚೆ ಮತ್ತು ಗ್ರಾಮ  ಉಡುಪಿ ತಾಲೂಕು ಇವರ ತಾಯಿ ಇಂದಿರಾ ಶೆಟ್ಟಿ (61) ರವರು ಸುಮಾರು 3 ತಿಂಗಳ ಹಿಂದೆ ನಾಗರ ಪಂಚಮಿ ದಿನದಂದು ತನ್ನ ಕಾಲಿನ ಮೇಲೆ ಹಾವೊಂದು ಹರಿದು ಹೋಗಿದ್ದು ಮೊದಲೇ ಹಾವಿನ  ಬಗ್ಗೆ ಭಯ ಜಾಸ್ತಿ ಇದ್ದ ಇಂದಿರಾ ಶೆಟ್ಟಿಯವರು ಇದರಿಂದ ಭಯಗೊಂಡು ನಂತರ ಅದೇ ವಿಷಯದಲ್ಲಿ ಮಾನಸಿಕವಾಗಿ ಅಲ್ಲಿಲ್ಲಿ ಓಡಾಡುತ್ತಾ ಅಸಹಜವಾಗಿ ವರ್ತಿಸುತ್ತಿದ್ದು, ಅಲ್ಲದೇ ಇತ್ತೀಚಿಗೆ ಸುಮಾರು 15 ದಿನದಿಂದ ತನಗೆ ವಿಪರೀತ ತಲೆ ನೋವು ಹಾಗೂ ಕಾಲು ನೋವು ಬರುತ್ತಿದ್ದು, ತನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ನಾನು ಸಾಯುತ್ತೇನೆ ನನಗೆ ಭಯವಾಗುತ್ತಿದೆ ಎಂದು ಹೇಳುತ್ತಿದ್ದವರು ಇದೇ ವಿಷಯದಲ್ಲಿ ಮಾನಸಿಕವಾಗಿ ನೊಂದು ದಿನಾಂಕ 10/10/2022 ರಂದು ಮದ್ಯಾಹ್ನ  3:15 ಗಂಟೆಯಿಂದ ಸಂಜೆ 6:30 ಗಂಟೆಯ ಮದ್ಯಾವದಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯ ತನ್ನ ಮನೆಯ ಬಾವಿಯ ನೈಲಾನ್ ಹಗ್ಗವನ್ನು ಬಾವಿಯ ಸಿಮೆಂಟ್ ಕಂಬಕ್ಕೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 39/2022 ಕಲಂ: 174 ಸಿ ಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ರೇಚಲ್ ಡಿಸೋಜ , (43) ಗಂಡ: ಸ್ಟೀಫನ್ ಲೋಬೋ, ಶೂಶ್ರೂಷಕ ಅಧಿಕಾರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಇವರು ದಿನಾಂಕ 10/10/2022  ರಂದು ಬೆಳಿಗ್ಗೆ 08:00 ಗಂಟೆಗೆ  ಕರ್ತವ್ಯಕ್ಕೆ  ಬಂದ ಸಮಯ  20 ವರ್ಷದ ಹಿಂದೆ ತನ್ನ ಮದುವೆಯ  ಸಮಯ ಮಾಡಿಸಿದ ತನ್ನ 6  ಪವನ್  ತೂಕದ ಚಿನ್ನದ ಕರಿಮಣಿ ಸರವನ್ನು ತನ್ನ ಹ್ಯಾಂಡ್  ಬ್ಯಾಗಿನಲ್ಲಿ ಇಟ್ಟು ಕೊಠಡಿ ಸಂಖ್ಯೆ 5 ರಲ್ಲಿ  ಶುಶ್ರೂಷಕ ಅಧಿಕಾರಿಯವರು ಬಟ್ಟೆ ಬದಲಾಯಿಸುವ ರೂಮಿನಲ್ಲಿ ಇಟ್ಟಿದ್ದು ಮಧ್ಯಾಹ್ನ 1:30 ಗಂಟೆಗೆ ನೋಡಿದಾಗ ಕರಿಮಣಿ ಸರವು ಬ್ಯಾಗಿನಲ್ಲಿ ಇಲ್ಲದೇ  ಇದನ್ನು ಯಾರೋ ಕಳವು ಮಾಡಿರುತ್ತಾರೆ, ಕಳವಾದ ಕರಿಮಣಿಯಲ್ಲಿ ಅರ್ಧ ಚಂದ್ರಾಕಾರ ಮತ್ತು ಮತ್ತು ತ್ರಿಕೋನಾಕಾರದ ಪೆಂಡೆಂಟ್ ಇದ್ದು ಇದರಲ್ಲಿ  ಶಿಲುಬೆಯ ಚಿತ್ರ ಇದ್ದು ಕಳವಾದ ಕರಿಮಣಿಯ  ಅಂದಾಜು ಮೌಲ್ಯ ರೂಪಾಯಿ 01.45 ಲಕ್ಷ ಆಗಬಹುದುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 132/2022 ಕಲಂ  379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾಧ ಕಾಮೇಶ್ ಭಾಗ್ (42) ತಂದೆ: ದಿ/ ಬಿಸಂಬರ್, ವಾಸ: # 21-3-209, ಇಂದಿರಾ ನಗರ, ಗೋದಾರಿಖನಿ ಗ್ರಾಮ, ರಾಮಗುಂಡಮ್ ತಾಲೂಕು, ಇವರು ಕಾಪು ತಾಲೂಕು ಎಲ್ಲೂರು ಗ್ರಾಮದ ಯು ಪಿ ಸಿ ಎಲ್ ಅದಾನಿ ಪವರ್ ಪ್ಲಾಂಟ್ ನಲ್ಲಿ 2 ವರ್ಷಗಳಿಂದ ಮ್ಯಾನ್ ಪವರ್ ಸಪ್ಲೈ ಮಾಡುವ ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡಿದ್ದು, ಅವರ ಊರಿನ ಚೈತನ್ ಬಾಗ್ (43) ಎಂಬಾತನು ದಿನಾಂಕ 22/08/2022 ರಿಂದ ಅದಾನಿ ಕಂಪನಿಯ ಮೆಸ್‌‌ನಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ಸದ್ರಿ ಚೈತನ್ ಬಾಗ್‌‌ನು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು, ಅಲ್ಲಿ ಕೆಲಸ ಮಾಡಲು ಆಗದೇ ದಿನಾಂಕ 30/08/2022 ರಂದು 14:30 ಗಂಟೆಗೆ ತಾನು ಊರಿಗೆ ಹೋಗುವುದಾಗಿ ಮೆಸ್‌‌ಸೂಪರ್ ವೈಸರ್ ಬೈದನಾಥ್ ಜಗತ್ ಎಂಬುವರಿಗೆ ಹೇಳಿ ಲಗ್ಗೇಜ್ ಬ್ಯಾಗಿನೊಂದಿಗೆ ಹೋದವನು, ಈವರೆಗೆ ಆತನ ಊರಿಗೂ ಹೋಗದೇ, ವಾಪಾಸ್ಸು ಕೆಲಸಕ್ಕೂ ಬಾರದೇ ಕಾಣೆಯಾಗಿರುತ್ತಾನೆ. ನಂತರ ಸದ್ರಿ ಚೈತನ್ ಬಾಗ್‌‌ ನನ್ನು ಕಂಪನಿಯ ಆಸುಪಾಸಿನಲ್ಲಿ ಮತ್ತು ಇತರೆಡೆಗಳಲ್ಲಿ ಹುಡುಕಾಡಿ ಪತ್ತೆಯಾಗದಿದ್ದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 125/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಹೆಬ್ರಿ: ದಿನಾಂಕ 10/10/2022 ರಂದು ಪಿರ್ಯಾದಿದಾರರಾದ ರಾಘುವೇಂದ್ರ ಪೂಜಾರಿ (39) ತಂದೆ: ನಾಗಪ್ಪ ಪೂಜಾರಿ ವಾಸ; ತುರ್ಕೆರ ಬೆಟ್ಟು, ಮುದ್ರಾಡಿ ಗ್ರಾಮ, ಹೆಬ್ರಿ ರವರು ತನ್ನ KL-04 N-6274 ನೇ 407 ವಾಹನವನ್ನು ಕೆಲಕಿಲ ಒಳಗಿನ ರಸ್ತೆಯಿಂದ ಚಲಾಯಿಸಿಕೊಂಡು ವರಂಗ ಕಡೆಗೆ ಹೋಗುತ್ತಿರುವಾಗ ಅವರು ಸಮಯ ಸುಮಾರು ಸಂಜೆ 04:00 ಗಂಟೆಗೆ ಮುದ್ರಾಡಿ ಗ್ರಾಮದ ಕೆಲಕಿಲ ನವಗ್ರಾಮ ಎಂಬಲ್ಲಿನ  ವಿಜಯ ಎಂಬವರ ಮನೆಯ ಎದುರಿನ ರಸ್ತೆ ತಲುಪಿದಾಗ ಅರೋಪಿತ ವಿಜಯ ರವರು ಅತನ KA-20 A-9261 ನೇ ಪಿಕಾಪ್ ವಾಹನವನ್ನು ಚಲಾಯಿಸಿಕೊಂಡು ರಾಘುವೇಂದ್ರ ಪೂಜಾರಿ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ವಾಹನಕ್ಕೆ ಅಡ್ಡ ಇಟ್ಟು ವಾಹನದಿಂದ ಕೆಳಗಿಳಿದು ರಾಘುವೇಂದ್ರ ಪೂಜಾರಿ ರವರಲ್ಲಿ ನೀನು ಬಾರಿ ಮರಳು ಸಾಗಾಟ ಮಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ನೀನು ಮರಳು ಸಾಗಾಟ ಮಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 51/2022 ಕಲಂ:341,504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 11-10-2022 10:13 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080