ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ  ಲೀಲಾವತಿ (75), ಗಂಡ :  ದಿವಂಗತ  ಕೇಶವ  ಶೇರೆಗಾರ್, ವಾಸ:  ಉಪ್ಪಿನಕುದ್ರು  ಗ್ರಾಮ  ಕುಂದಾಪುರ  ತಾಲೂಕು  ಉಡುಪಿ  ಜಿಲ್ಲೆ ಇವರ ಗಂಡನ ಸ್ವಾಧೀನದಲ್ಲಿರುವ ಕುಂದಾಪುರ ತಾಲೂಕು ಉಪ್ಪಿನಕುದ್ರು ಗ್ರಾಮದ ಸರ್ವೆ ನಂಬ್ರ  160/8 ರಲ್ಲಿ 0.18 ಎಕ್ರೆ ಗದ್ದೆಯಲ್ಲಿ ಪಿರ್ಯಾದಿದಾರರು ಹಾಗೂ ಅವರ ಮಕ್ಕಳು ಭತ್ತದ  ಕೃಷಿ ಮಾಡಿರುವುದಾಗಿದೆ. ದಿನಾಂಕ 08/10/2021 ರಂದು ಪಿರ್ಯಾದಿದಾರರು ಜಾಗದ  ಸಮೀಪ ಹೋಗಿ ಗದ್ದೆಯಲ್ಲಿನ ಪೈರನ್ನು ನೋಡಿಕೊಂಡು ಬಂದಿದ್ದು ಕೊಯ್ಯಲು ಇನ್ನೂ ಸುಮಾರು  20 ರಿಂದ  30  ದಿನಗಳು  ಬಾಕಿ  ಇರುವುದರಿಂದ ಹಾಗೇ ಬಿಟ್ಟು ಬಂದಿರುವುದಾಗಿದೆ.  ದಿನಾಂಕ  09/10/2021 ರಂದು ಪಿರ್ಯಾದಿದಾರರು  ಗದ್ದೆಗೆ  ಹೋಗಿ ನೋಡಿದಾಗ ಗದ್ದೆಯಲ್ಲಿನ ಭತ್ತದ ಪೈರನ್ನು ಕೊಯ್ದು ಕಳ್ಳತನ ಮಾಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಗದ್ದೆಯ ಸಮೀಪದ ನಿವಾಸಿಗಳಲ್ಲಿ ವಿಚಾರಣೆ ಮಾಡಿದಾಗ ದಿನಾಂಕ 09/10/2021 ರಂದು ಬೆಳಗಿವ ಜಾವ 03:00 ಗಂಟೆಗೆ ಆಪಾದಿತರಾದ 1) ಬಾಬು ರಾಯ ಶೇರೆಗಾರ್, 2) ಶ್ರೀಕಾಂತ, 3) ಶಶಿಕಾಂತ, 4) ಸುಪ್ರೀತಾ, 5) ಸ್ವಾತಿ, 6) ಪ್ರಭಾಕರ, 7) ಭಾಗೀರಥಿ, 8) ಮಧುಕರ, 9) ವಾಸುದೇವ, ಎಲ್ಲರೂ ಉಪ್ಪಿನಕುದ್ರು ನಿವಾಸಿಗಳು ಇವರು ಪಿರ್ಯಾದಿದಾರರ ಜಾಗದಲ್ಲಿ ಬೆಳೆಸಿದ ಭತ್ತದ ಪೈರನ್ನು ಕಟಾವು ಮಾಡಿ ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿದು ಬಂದಿರುತ್ತದೆ. ಕಳವಾದ ಸ್ವೊತ್ತಿನ ಮೌಲ್ಯ 60,000/- ರೂಪಾಯಿ ಆಗಿರುತ್ತದೆ. ದಿನಾಂಕ 09/10/2021 ರಂದು ಕೃತ್ಯದ ಬಗ್ಗೆ ವಿಚಾರಣೆ ಮಾಡಲು ಪಿರ್ಯಾದಿದಾರರು ಹಾಗೂ ಅವರ ಮಗ ರಾಘವೇಂದ್ರ ರವರು ಬಾಬುರಾಯ ಶೇರೆಗಾರ್ ರವರ ಮನೆಯ ಬಳಿ ಹೋದಾಗ  ಅಲ್ಲಿದ್ದ ಆಪಾದಿತರಾದ ಶ್ರೀಕಾಂತ, ಶಶಿಕಾಂತ, ಪ್ರಭಾಕರ ಮತ್ತು ಮಧುಕರ ಎಂಬುವವರು ಪಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು  ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 110/2021 ಕಲಂ: 143, 147, 379, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಆನಂದ (36), ತಂದೆ: ದಿ.ದೊರೆ ಸ್ವಾಮಿ, ವಾಸ: ಮಂಜರಬೆಟ್ಟು ಯಡ್ತಾಡಿ ಗ್ರಾಮ ಸಾಹೈಬರಕಟ್ಟೆ ಅಂಚೆ, ಬ್ರಹ್ಮಾವರ ತಾಲ್ಲೂಕು ಉಡುಪಿ ಜಿಲ್ಲೆ ಇವರಿಗೆ ದಿನಾಂಕ 10/10/2021 ರಂದು ಮಧ್ಯಾಹ್ನ 3:00 ಗಂಟೆಗೆ ಸಂಬಂಧಿಯಾದ ರವಿ ಎಂಬುವವರು ಕರೆ ಮಾಡಿ ಧರ್ಮದ ಬಗ್ಗೆ ಮಾತಾನಾಡಲಿಕ್ಕೆ ಇದೆ ಎಂದು ಹಳ್ಳಾಡಿ ಪೇಟೆಗೆ ಬಾ ಎಂದು ತಿಳಿಸಿದ ಮೇರೆಗೆ ಪಿರ್ಯಾದಿದಾರರು ಸಂಜೆ 5:45 ಗಂಟೆಗೆ ತನ್ನ ಸ್ನೇಹಿತನಾದ ಶರಣ ರವರ ಜೊತೆ ಹೋದಾಗ ರವಿ ಅಲ್ಲಿಗೆ ಬಂದು ಪಿರ್ಯಾದಿದಾರರು ಹಾಗೂ ಶರಣ ರವರನ್ನು ಮುಕ್ಲಾಟಿಕೆಯ ಜ್ಯೋತಿ ಎಂಬುವವರ ಮನೆಗೆ ಕರೆದುಕೊಂಡು ಹೋಗಿದ್ದು ಆ ಸಮಯ ಮನೆಯಲ್ಲಿದ್ದ ಜ್ಯೋತಿ, ಪ್ರಕಾಶ, ಮನೋಹರ ರವರಿಗೆ ಪಿರ್ಯಾದಿದಾರರನ್ನು ರವಿಯು ಪರಿಚಯಿಸಿದ್ದು ಆಗ ಜ್ಯೋತಿಯು ಪಿರ್ಯಾದಿದಾರರ ಬಳಿ ನೀವು ಯಾವ ಧರ್ಮ ನಂಬುತೀರಿ, ಎಂದು ಕೇಳಿದ್ದು ಅದಕ್ಕೆ ಪಿರ್ಯಾದಿದಾರರು ಹಿಂದು ಧರ್ಮವನ್ನು ಪೂಜಿಸುತ್ತಿದ್ದೇನೆ ಎಂದು ಹೇಳಿದಕ್ಕೆ ಅದಕ್ಕೆ ಜ್ಯೋತಿ ಪಿರ್ಯಾದಿದಾರರು ಮತ್ತು ಆತನ ಸ್ನೇಹಿತನ ಬಳಿ ನೀವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಗೊಂಡರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ ಹಿಂದು ಧರ್ಮದಲ್ಲಿ ಸಾವಿರಾರು ದೇವರುಗಳಿವೆ ಅಲ್ಲದೇ ಹಲವಾರು ಜಾತಿಗಳಿವೇ ನೀವು ಕ್ರಿಶ್ಚಿಯನ ಧರ್ಮಕ್ಕೆ ಬನ್ನಿ ಎಂದು ಹೇಳಿರುವುದಲ್ಲದೇ ಎಲ್ಲರೂ ಸೇರಿ ಹಿಂದು ದೇವರುಗಳೆಲ್ಲವೂ ಮೂಡನಂಬಿಕೆಯ ದೇವರುಗಳು ಎಂಬುದಾಗಿ ಕೆಟ್ಟದಾಗಿ ಹಿಂದು ದೇವರನ್ನು ಬೈದು ತುಚ್ಚವಾಗಿ ಮಾತನಾಡಿ ಕ್ರಿಶ್ಚಿಯನ್ ಧರ್ಮ ಶೇಷ್ಠ ಧರ್ಮ ಎಂದು ಹೇಳಿರುವುದಾಗಿದೆ. ಆರೋಪಿತರು ಎರಡು ಧರ್ಮಗಳ ಮಧ್ಯೆ ದ್ವೇಷವನ್ನುಂಟು ಮಾಡುವ ಮತ್ತು ಸೌರ್ಹಾದತೆಗೆ ಧಕ್ಕೆ ಮಾಡುವ ಕೃತ್ಯಗಳನ್ನು ಮಾಡುವ ಉದ್ದೇಶದಿಂದ ಆಪಾದಿತರು ಮನೆಗೆ ಕರೆದು ಪಿರ್ಯಾದಿದಾರರು ಹಾಗೂ ಅವರ ಸ್ನೇಹಿತನನ್ನು ಮತಾಂತರ ಮಾಡಲು ಪ್ರೇರೆಪಿಸಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 175/2021 ಕಲಂ: 153 (A), 295 (A), 298  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 11-10-2021 10:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080