ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

  • ಬೈಂದೂರು : ಫಿರ್ಯಾದಿ ಸವಿತಾ ಪ್ರಾಯ 50 ವರ್ಷ ಗಂಡ: ಅಣ್ಣಪ್ಪ ಶೆಟ್ಟಿ ವಾಸ: ನಾಗಶ್ರೀ ನಿಲಯ ಕುಂಜಳ್ಳಿ ಯಡ್ತರೆ ಗ್ರಾಮ ಬೈಂದೂರು ತಾಲೂಕು ಇವರು ಪ್ರತಿದಿನದಂತೆ ದಿನಾಂಕ 10/10/2021ರಂದು ಅವರ ಮನೆಯ ದನಕರುಗಳನ್ನು ಮೇಯಲು ಬಿಟ್ಟಿದ್ದು, ಸಂಜೆ ಹೊತ್ತಿಗೆ ಅವುಗಳನ್ನು ವಾಪಾಸ್ಸು ಮನೆಗೆ ಕರೆದುಕೊಂಡು ಬರಲು ಸುಬ್ಬಣ್ಣ ಶೆಟ್ಟಿರವರ ಕೋಳಿ ಫಾರಂ ಹತ್ತಿರ ಪಾಳು ಬಿದ್ದ ಗದ್ದೆ ಬಳಿ ಹೋಗಿ ದನಕರುಗಳನ್ನು ಕರೆದುಕೊಂಡು ಮನೆಗೆ ಸಂಜೆ ಸುಮಾರು 6:30 ಗಂಟೆಗೆ ಮನೆಯಿಂದ ಸ್ವಲ್ಪ ದೂರದಲ್ಲಿ ಬರುತ್ತಿರುವಾಗ ಪಿರ್ಯಾದಿದಾರರ ಹಿಂದಿನಿಂದ ಯಾರೋ ಓಡಿ ಬರುತ್ತಿರುವ ಶಬ್ದ ಕೇಳಿ ಪಿರ್ಯಾದಿದಾರರು ಹಿಂತಿರುಗಿ ನೋಡಿದಾಗ ಪಿರ್ಯಾದಿದಾರರಿಗೆ ನೋಡಿ ಪರಿಚಯವಿರುವ ಸುಬ್ಬಣ್ಣ ಶೆಟ್ಟಿರವರು ಕೈಯಲ್ಲಿ ಮರದ ದೊಣ್ಣೆಯನ್ನು ಹಿಡಿದುಕೊಂಡು ಓಡಿ ಬರುತ್ತಿದ್ದವರು ಪಿರ್ಯಾದಿದಾರರಲ್ಲಿ ಏಯ್ ನಿಲ್ಲು ಎಂಬುದಾಗಿ ಹೇಳಿ ಪಿರ್ಯಾದಿದಾರರ ಎದುರುಗಡೆ ಬಂದು ಪಿರ್ಯಾದಿದಾರರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ತಾನು ಕಡವೆ ಹೊಡೆದ ಬಗ್ಗೆ ಅರಣ್ಯ ಇಲಾಖೆಯವರಿಗೆ ನೀನೇ ಹೇಳಿಕೊಟ್ಟಿರುವುದಾಗಿ ಹೇಳಿ, ಆತನ ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ ಹೊಡೆದಿದ್ದು, ಪಿರ್ಯಾದಿದಾರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಆತನು ತಂದಿದ್ದ ಮರದ ದೊಣ್ಣೆಯಿಂದ ಪಿರ್ಯಾದಿದಾರರ ಸೊಂಟಕ್ಕೆ ಹೊಡೆದು, ಕೆಳಗೆ ದೂಡಿ ಹಾಕಿ ಕಾಲಿನಿಂದ ದೇಹಕ್ಕೆ ತುಳಿದು ಮೆಟ್ಟಿದ್ದು, ಆಗ ಪಿರ್ಯಾದಿದಾರರು ನೋವಿನಿಂದ ಕೂಗಿಕೊಂಡಾಗ ಪಿರ್ಯಾದಿದಾರರ ಗಂಡ ಹಾಗೂ ಇತರರು ಬರುವುದನ್ನು ನೋಡಿದ ಸುಬ್ಬಣ್ಣ ಶೆಟ್ಟಿ ಪಿರ್ಯಾದಿದಾರರನ್ನು ಉದ್ದೇಶಿಸಿ ನನ್ನ ಬಗ್ಗೆ ಮುಂದಕ್ಕೆ ಯಾರಿಗಾದರೂ ಹೇಳಿ ಕೊಟ್ಟರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ, ಮರದ ದೊಣ್ಣೆಯನ್ನು ಅಲ್ಲೇ ಬಿಸಾಡಿ ಅಲ್ಲಿಂದ ಓಡಿ ಹೋಗಿರುತ್ತಾನೆ. ಹಲ್ಲೆ ಸಮಯ ಪಿರ್ಯಾದಿದಾರರು ಧರಿಸಿದ್ದ ಬಟ್ಟೆಯನ್ನು ಹರಿದಿರುತ್ತಾನೆ. ಪಿರ್ಯಾದಿದಾರರಿಗೆ ಸುಬ್ಬಣ್ಣ ಶೆಟ್ಟಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಸೊಂಟದ ಬಳಿ ರಕ್ತ ಹೆಪ್ಪುಗಟ್ಟಿದ್ದು, ಬಲಬದಿಯ ರಟ್ಟೆಗೆ, ದೇಹದ ಎಲ್ಲಾ ಭಾಗಗಳಲ್ಲೂ ಒಳನೋವು ಉಂಟಾಗಿದ್ದು, ಕೈಗಳಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಅವರ ಗಂಡ ಹಾಗೂ ಇತರರು ಎತ್ತಿ ಉಪಚರಿಸಿದ್ದು, ಪಿರ್ಯಾದಿದಾರರ ಗಂಡ ಪಿರ್ಯಾದಿದಾರರನ್ನು ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 162/2021 ಕಲಂ. 341, 323, 324, 354, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ :

  • ಶಿರ್ವ: ದಿನಾಂಕ 07/10/2021 ರಂದು ಪಿರ್ಯಾದಿ ಲಿಯೋ ಮಾತಾಯಸ್(61), ತಂದೆ: ಜಾನ್ ಮಾತಾಯಸ್, ವಾಸ; ತುಂಡುಬಲ್ಲೆ ಹೌಸ್ ಸೂಡಾ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲ್ಲೂಕು ಇವರು ತನ್ನ ಬಾಬ್ತು  ಕೆಎ 20 ಇ ಎಲ್ 3848 ನೇ ಆಕ್ಟಿವಾ 3 ಜಿ ದ್ವಿಚಕ್ರ ವಾಹನದಲ್ಲಿ ಶಿರ್ವದಿಂದ ತುಂಡುಬಲ್ಲೆಯಲ್ಲಿರುವ ತನ್ನ ಮನೆಗೆ ಬರುತ್ತಿರುವಾಗ ಸಂಜೆ ಸುಮಾರು  05:30 ಗಂಟೆಗೆ ಶಿರ್ವ, ಕಾರ್ಕಳ ಮುಖ್ಯ ರಸ್ತೆಯ ಸಂಪರ್ಕ ರಸ್ತೆಯಿಂದ ತುಂಡುಬಲ್ಲೆ ರಸ್ತೆಯ ಸ್ವಲ್ಪ ದೂರದಲ್ಲಿಎದುರಿನಿಂದ ಕೆಎ 20 ಎನ್ 9049 ನೇ ಮಾರುತಿ 800 ವಾಹನದ ಚಾಲಕನು ತುಂಡುಬಲ್ಲೆ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀರಾ ರಸ್ತೆಯ ಬಲಬಾಗಕ್ಕೆ ಬಂದು ಪಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿಗೆ ರಕ್ತ ಗಾಯವಾಗಿದ್ದು ದ್ವಿಚಕ್ರ ವಾಹನ ಕೂಡಾ ಜಖಂಗೊಂಡಿರುತ್ತದೆ. ಚಿಕಿತ್ಸೆ ಬಗ್ಗೆ ಅಲ್ಲಿದ್ದ ನೆರೆಕೆರೆಯ ಕಾರಿನಲ್ಲಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಹೊರ ರೋಗಿಯಾಗಿ ದಾಖಲಿಸಿರುತ್ತಾರೆ. ಪಿರ್ಯಾದಿದಾರರಿಗೆ ಅಪಘಾತವಾದ ಸಮಯ ಕಾರಿನ ಚಾಲಕರಾದ ಚಂದ್ರಶೇಖರ್ ಶೆಟ್ಟಿರವರು ಚಿಕಿತ್ಸೆಯ ಖರ್ಚು ಹಾಗೂ ವಾಹನ ಜಖಂಗೊಂಡ ರಿಪೇರಿಯ ಖರ್ಚನ್ನು ನೀಡುತ್ತೇನೆಂದು ತಿಳಿಸಿದ್ದು ಈ ವರೆಗೆ ನೀಡದ ಕಾರಣ ಈ ದಿನ ದಿನಾಂಕ 11/10/21ರಂದು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿರುವುದಾಗಿದೆ. .ಈ ಅಫಘಾತಕ್ಕೆ ಕೆಎ 20 ಎನ್ 9049 ನೇ ಮಾರುತಿ 800 ವಾಹನದ ಚಾಲಕ ಚಂದ್ರಶೇಖರ ಶೆಟ್ಟಿ ರವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಶಿರ್ವ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ :51/21, ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು : ಪಿರ್ಯಾದಿ ಅರ್ಜುನ್ ಶೆಟ್ಟಿ (25) ತಂದೆ: ಗೋಪಾಲಕೃಷ್ಣ ಶೆಟ್ಟಿ, ವಾಸ: ನಂದಗೋಕುಲ, ಅನಂತ ನಗರ, 2 ಸ್ಟೇಜ್, ಮಣಿಪಾಲ ದಾರರ ದೊಡ್ಡಪ್ಪನ ಮಗ ಚಂದ್ರಶೇಖರ (46) ಎಂಬುವರು ಏಣಗುಡ್ಡೆ ಗ್ರಾಮದ ಫಾರೆಸ್ಟ್ ಗೇಟ್ ಬಳಿ ತನ್ನ ತಾಯಿ ಜೊತೆಯಲ್ಲಿ ವಾಸಮಾಡಿಕೊಂಡಿದ್ದು ಮನೆಯಲ್ಲಿಯೇ ಇರುವುದಾಗಿದೆ. ಅವರ ಹೆಂಡತಿ ಮತ್ತು ಮಗ ಮುಂಬಾಯಿಯಲ್ಲಿ ವಾಸಮಾಡಿಕೊಂಡಿರುತ್ತಾರೆ. ದಿನಾಂಕ 11-10-2021 ರಂದು ಬೆಳಿಗ್ಗೆ 02:30 ಗಂಟೆ ಸಮಯಕ್ಕೆ ಪಿರ್ಯಾದಿದಾರರಿಗೆ ಅವರ ದೊಡ್ಡಮ್ಮ ವಾರೀಜ ಶೆಟ್ಟಿ ಎಂಬುವರು ಕರೆ ಮಾಡಿ ಚಂದ್ರಶೇಖರ ಶೆಟ್ಟಿ ಎಂಬುವರು ಕುಸಿದು ಬಿದಿದ್ದು ಮಾತನಾಡುತ್ತಿಲ್ಲವಾಗಿ ಕೂಡಲೇ ಬರುವಂತೆ ತಿಳಿಸಿದಂತೆ ಪಿರ್ಯಾದಿದಾರರು ಅವರ ತಂದೆಯ ಜೊತೆಯಲ್ಲಿ ಚಂದ್ರಶೇಖರ ಶೆಟ್ಟಿಯ ಮನೆಗೆ ಬಂದು ನೋಡಿದಾಗ ಆತನು ಬಿದ್ದು ಮಾತನಾಡುತ್ತಿರಲಿಲ್ಲ. ಕೂಡಲೇ ಪಿರ್ಯಾದಿದಾರರು ಮತ್ತು ಅವರ ತಂದೆ ಆತನನ್ನು ಚಿಕಿತ್ಸೆಗಾಗಿ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದಾಗ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ದಿನಾಂಕ 11-10-2021 ರಂದು ಬೆಳಿಗ್ಗೆ 03:15 ಗಂಟೆಗೆ ಚಂದ್ರಶೇಖರ ಶೆಟ್ಟಿಯು ಚಿಕಿತ್ಸೆಗೆ ಸ್ವಂದಿಸದೆ ಮೃತ ಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ. ಪಿರ್ಯಾದಿದಾರರ ದೊಡ್ಡಪ್ಪನ ಮಗನಾದ ಚಂದ್ರಶೇಖರ ಶೆಟ್ಟಿಯು ಅನಾರೋಗ್ಯದ ಕಾರಣದಿಂದ ಮೃತಪಟ್ಟಿರುವುದಾಗಿದೆ ಎಂದು ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ : 36/2021 ಕಲಂ. 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮನುಷ್ಯ ಕಾಣೆ ಪ್ರಕರಣ

  • ಕುಂದಾಪುರ : ಪಿರ್ಯಾದಿ ಸರಸ್ವತಿ , ಪ್ರಾಯ: 29 ವರ್ಷ,ಗಂಡ: ದಿನೇಶ್, ವಾಸ: ಮನೆ ನಂ :231/B , ನಾನಾ ಸಾಹೇಬ್‌ರಸ್ತೆ ,ಗುಜ್ಜಿತೋಟ, ವಡೇರ ಹೋಬಳಿ  ಗ್ರಾಮ ಕುಂದಾಪುರ ಇವರ ಗಂಡ ಹಾಗೂ ಮಕ್ಕಳೊಂದಿಗೆ ಕುಂದಾಪುರ ತಾ.ವಡೇರ ಹೋಬಳಿ  ಗ್ರಾಮದ  ನಾನಾ ಸಾಹೇಬ ರಸ್ತೆಯ  ಗುಜ್ಜಿ ತೋಟ  ಎಂಬಲ್ಲಿ ವಾಸವಾಗಿದ್ದು,  ಪಿರ್ಯಾದುದಾರರ ಗಂಡ ದಿನೇಶ್‌, ಪ್ರಾಯ 35 ವರ್ಷರವರು ದಿನಾಂಕ: 10/10/2021 ರಂದು ಸಂಜೆ 04:30 ಗಂಟೆಗೆ ವಡೇರಹೋಬಳಿ ಗ್ರಾಮದಲ್ಲಿರುವ ಕಾಮತ್‌ಹೆಂಚಿನ ಕಾರ್ಖಾನೆ ಬಳಿ ಎಂದಿನಂತೆ ಮೀನು ಹಿಡಿಯಲು ಬೀಸು ಬಲೆಯನ್ನು ಹಾಕಲು ಮನೆಯಿಂದ ಹೋದವರು ವಾಪಾಸು ಮನೆಗೆ ಬಂದಿರುವುದಿಲ್ಲ. ಈ ಕುರಿತು ದಿನೇಶ್‌ರವರ ಸ್ನೇಹಿತರಲ್ಲಿ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗದೇ ಇದ್ದು, ಸದ್ರಿಯವರನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರಿನಂತೆ ಕುಂದಾಫುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 111/2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 11-10-2021 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080