ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕೊಲ್ಲೂರು: ಪಿರ್ಯಾಧಿದಾರರಾಧ ಭಾಸ್ಕರ್ ಎಲ್. (38) ತಂದೆ: ಲಿಂಗಪ್ಪ ನಾಯ್ಕ ವಾಸ:  ವಾಟೆಗುಂಡಿ  ಮುದೂರು ಗ್ರಾಮ ಬೈಂದೂರು ಇವರ ತಂದೆ ಲಿಂಗಪ್ಪ ನಾಯ್ಕ (65) ರವರು ಕೃಷಿ ಕೆಲಸ ಮಾಡಿಕೊಂಡಿದ್ದು  ದಿನಾಂಕ 10/09/2021 ರಂದು ಮಧ್ಯಾಹ್ನ 3:30 ಗಂಟೆಗೆ ಎಂದಿನಂತೆ ತನ್ನ ಮುದೂರು ಗ್ರಾಮದ ವಾಟೆಗುಂಡಿ ಎಂಬಲ್ಲಿ ಹಿಂಡುಗಾನ ಹೊಳೆ ಬಳಿ ಇರುವ ಅಡಿಕೆತೋಡದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ವಿಪರೀತ ಮಳೆ ಬಂದು ತುಂಬಿ ಹರಿಯುತ್ತಿರುವ ಹಿಂಡುಗಾಣ  ಹೊಳೆಯ ನೀರಿನ ಸೆಳತಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಕೊಚ್ಚಿಕೊಂಡು ಹೋಗಿ ಕಾಣಿಯಾಗಿದ್ದು. ದಿನಾಂಕ 11/09/2021 ರಂದು ಮಧ್ಯಾಹ್ನ 12:45 ಗಂಟೆಗೆ  ಮುದೂರು ಗ್ರಾಮದ ಹಿಂಡುಗಾಣ ನದಿಯ ಹೊಯಿಗೆ ಗುಂಡಿ ಎಂಬಲ್ಲಿ ನದಿಯ  ಗಿಡಬಳ್ಳಿಗಳ ನಡುವೆ ಲಿಂಗಪ್ಪ ನಾಯ್ಕರ ಮೃತ ಶರೀರ ಪತ್ತೆಯಾಗಿದ್ದು ಮೃತ  ಲಿಂಗಪ್ಪ ನಾಯ್ಕ ರವರು ಕೃಷಿ ಕೆಲಸ ಮಾಡುತ್ತಿದ್ದಾಗ ನದಿಯ ನೀರಿನಲ್ಲಿ  ಆಕಸ್ಮಿಕವಾಗಿ  ಕಾಲು ಜಾರಿ ಕೊಚ್ಚಿಕೊಂಡು ಹೋದವರು ನೀರಿನ ಸೆಳೆತಕ್ಕೆ ಸಿಕ್ಕಿ  ಮುಳುಗಿ  ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣಾ ಯು.ಡಿ.ಆರ್‌ ಕ್ರಮಾಂಕ 09/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಹಿರಿಯಡ್ಕ: ಫಿರ್ಯಾದಿದಾರರಾದ ಅಬುಬಕ್ಕರ್ (42), ತಂದೆ:ಹುಸೈನರ್, ವಾಸ: ಆತ್ರಾಡಿ ಶಾಲೆಯ ಹಿಂಬದಿ, ಆತ್ರಾಡಿ ಗ್ರಾಮ, ಉಡುಪಿ ಇವರು ದಿನಾಂಕ 10/09/2021 ರಂದು ಶುಕ್ರವಾರದ ಪ್ರಾರ್ಥನೆ ಬಗ್ಗೆ ಆತ್ರಾಡಿ ಮೊಯ್ಯಿದ್ದೀನ್ ಜುಮ್ಮಾ ಮಸೀದಿಗೆ ಸುಮಾರು 12:50 ಗಂಟೆಗೆ ಹೋಗಿದ್ದು, ಮಧ್ಯಾಹ್ನ 13:35 ಗಂಟೆಗೆ ಪ್ರಾರ್ಥನೆ ಮುಗಿದ ಬಳಿಕ ಮಸೀದಿ ಪಕ್ಕದಲ್ಲಿರುವ ದರ್ಗಾಕ್ಕೆ ಜಿಯಾರತ್ ಬಗ್ಗೆ ಹೋಗಿ ಪ್ರಾರ್ಥನೆ ಸಲ್ಲಿಸಿ ವಾಪಸು ಬರುವಾಗ ಅವರ ಪರಿಚಯದ ದೇವಿನಗರದ ಇಸ್ಮಾಯಿಲ್ ಫಿರ್ಯಾದದಿದಾರರ ಅಣ್ಣ ಇಸ್ಮಾಯಿಲ್ ನನ್ನು ಉದ್ದೇಶಿಸಿ ಕಳ್ಳ, ಕಳ್ಳರನ್ನು  ಕರೆದುಕೊಂಡು ಹೋಗಲು ಜನ ಬಂದಿರುತ್ತಾರೆ. ಎಂದು ಹೇಳಿದ್ದು, ಅದಕ್ಕೆ ಅಬುಬಕ್ಕರ್ ರವರು ಅಲ್ಲಿಯೇ ಇದ್ದ ದೇವಿನಗರ ಅಬ್ದುಲ್ಲನಲ್ಲಿ ಇಸ್ಮಾಯಿಲ್ ನನ್ನು ಕಳ್ಳ ಎಂದು ಯಾಕೆ ಕರೆಯುವುದು ಎಂದು ಕೇಳಿದಾಗ ಅಬ್ದುಲ್ಲನು ಅಬುಬಕ್ಕರ್ ಇವರನ್ನು ಉದ್ದೇಶಿಸಿ ನೀನು ಯಾರು ಅಧ್ಯಕ್ಷನ ಎಂದು ಹೇಳಿ ಅವರ ಕಾಲರನ್ನು ಹಿಡಿದುಕೊಂಡಾಗ ಅಲ್ಲಿ ಪ್ರಾರ್ಥನೆಗೆ ಬಂದವರು ನಮ್ಮನ್ನು ಸಮಾಧಾನ ಮಾಡಿ ಗಲಾಟೆ ಮಾಡುವುದು ಬೇಡ ಎಂದು ತಿಳಿಹೇಳಿರುತ್ತಾರೆ. ಬಳಿಕ ಅಬುಬಕ್ಕರ್ ರವರು ಮನೆಗೆ ಹೋಗಲು ಕಂಪೌಂಡ್  ಬಳಿ ಬಂದಾಗ ಹಮೀದ್ ಮಸೀದಿ  ಕಾರ್ಯದರ್ಶಿ, ಇಕ್ಬಾಲ್ ಕಬ್ಯಾಡಿ, ಅನ್ವರ್ ಕಬ್ಯಾಡಿ, ಹುಸೈನ್, ಸಮ್ಮದ್ ದೇವಿನಗರ, ಇಸ್ಮಾಯಿಲ್ ದೇವಿನಗರ,  ಜಸ್ವೀತ್ ದೇವಿನಗರ, ಮುನೀರ್ ದೇವಿನಗರ,  ಮಹಮ್ಮದ್ ಸಲೀಂ ದೇವಿನಗರ, ಆರೀಫ್ ದೇವಿನಗರ ಹಾಗೂ ಇತರರು ಅಲ್ಲಿಗೆ ಬಂದು ಅದರಲ್ಲಿ ಅಬ್ದುಲ್ಲನು ಪಂಚ್ ನಿಂದ ಅಬುಬಕ್ಕರ್ ರವರ ಬಲಕಣ್ಣಿಗೆ ಹೊಡೆದನು. ಸಮದನು ಕಬ್ಬಿಣದ ಪೈಪಿನಿಂದ ಇವರ ಸೊಂಟದ ಎಡಭಾಗಕ್ಕೆ ಹೊಡೆದನು. ಇಸ್ಮಾಯಿಲ್ ಅಬುಬಕ್ಕರ್ ಇವರ ತೊಡೆಯ ಭಾಗಕ್ಕೆ ತುಳಿದಿರುತ್ತಾನೆ. ಆಗ ಅಬುಬಕ್ಕರ್ ಇವರು ನೆಲಕ್ಕೆ ಬಿದ್ದಾಗ ಆರೋಪಿಗಳೆಲ್ಲ ಕಾಲಿನಿಂದ ತುಳಿದು ಕೈಗಳಿಂದ ಹೊಡೆದಿರುತ್ತಾರೆ. ಆಗ ನನ್ನ ಹೆಂಡತಿಯ ತಮ್ಮನಾದ ಇರ್ಫಾನ್ ಬಿಡಿಸಲು ಬಂದಾಗ ಸಮದ್ ನು ಇರ್ಫಾನ್ ಗೆ ಕಲ್ಲಿನಿಂಧ ಆತನ ಹಣೆಗೆ ಹೊಡೆದ ಪರಿಣಾಮ ಆತನ ಹಣೆಗೆ ರಕ್ತ ಗಾಯವಾಗಿರುತ್ತದೆ. ಆತನಿಗೆ  ಕೂಡ ಆರೋಪಿಗಳು ಕಾಲಿನಿಂದ ತುಳಿದು ಕೈಗಳಿಂದ ಹೊಡೆದಿರುತ್ತಾರೆ.  ಗಾಯಗೊಂಡ ಫಿರ್ಯಾದಿ ಹಾಗೂ ಇರ್ಪಾನ್ ಚಿಕಿತ್ಸೆಗೆ  ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುತ್ತಾರೆ. ಅಬುಬಕ್ಕರ್ ಇವರ ಅಣ್ಣ ಇಸ್ಮಾಯಿಲ್ ಆತ್ರಾಡಿ ಮೊಯ್ಯಿದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷನಾಗಿದ್ದು, ಮಸೀದಿ ಕಮೀಟಿಯ ವಿಚಾರದಲ್ಲಿ ಫಿರ್ಯಾದಿ ಹಾಗೂ ದೇವಿನಗರದರಿಗೆ ಕೆಲವು ಸಮಯಗಳಿಂದ ಕಚ್ಚಾಟ ವೈಮನಸ್ಸು ಇದ್ದು, ಫಿರ್ಯಾದಿದಾರರ ಅಣ್ಣನನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯಬೇಕೆಂಬ ಉದ್ದೇಶದಿಂದ ಪಿತೂರಿಯನ್ನು ಅವರು ನಡೆಸುತ್ತಿದ್ದು, ಅದೇ ವಿಚಾರದಲ್ಲಿ ಇಸ್ಮಾಯಿಲ್ ತಗಾದೆ ತೆಗೆದಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 51/2021 ಕಲಂ: 143, 147, 323, 324 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಫಿರ್ಯಾದಿದಾರರಾಧ ಇಸ್ಮಾಯಿಲ್ (48) ತಂದೆ: ಅಬ್ದುಲ್ ಖಾದರ್ ವಾಸ: ದೇವಿನಗರ , 2 ನೇ ಅಡ್ದ ರಸ್ತೆ, 80 ನೇ ಬಡಗಬೆಟ್ಟು ಗ್ರಾಮ, ಉಡುಪಿ ಇವರು ದಿನಾಂಕ 10/09/2021 ರಂದು ಶುಕ್ರವಾರದ ಪ್ರಾರ್ಥನೆ ಬಗ್ಗೆ ಮೊಯ್ಯಿದ್ದೀನ್ ಜುಮ್ಮಾ ಮಸೀದಿ ಆತ್ರಾಡಿಗೆ ಸುಮಾರು 12:00 ಗಂಟೆಗೆ ಹೋಗಿದ್ದು, ಮಧ್ಯಾಹ್ನ 13:40 ಗಂಟೆಗೆ ಪ್ರಾರ್ಥನೆ ಮುಗಿದ ಬಳಿಕ ಖಬರಿಸ್ತಾನ ಕ್ಕೆ ಪ್ರಾರ್ಥನೆ ಸಲ್ಲಿಸಲು ಹೋದಾಗ ದೇವಿನಗರದ ಅಬ್ದುಲ್ ಕೂಡ ಅಲ್ಲಿಗೆ ಬಂದಿದ್ದು, ಅಲ್ಲಿ ಪ್ರಾರ್ಥನೆ ಸಲ್ಲಿಸಿ ವಾಪಸು ಬರುವಾಗ ಮಸೀದಿ ಕಂಪೌಂಡ್ನ ಬಳಿ ಇದ್ದ ಇಸ್ಮಾಯಿಲ್, ಅಬುಬಕ್ಕರ್, ಹಾರುನ್ ರಶೀದ್ ಇದ್ದಿದ್ದು, ಅದರಲ್ಲಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಇಸ್ಮಾಯಿಲ್ ಇವರಲ್ಲಿ ನಿಮ್ಮದು ಯಾವಾಗಲೂ ಕಮಿಟಿಯ ವಿಚಾರದಲ್ಲಿ  ಕಿರಿಕಿರಿ ಏನು ಎಂದು ಕೇಳಿದ್ದು, ಆಗ ಇಸ್ಮಾಯಿಲ್ ರವರು ಏನೂ ಮಾತನಾಡದೇ ಇದ್ದಾಗ ಅಬುಬಕ್ಕರ್ ಹಾಗೂ ಹಾರುನ್ ರಶೀದ್ ಇಸ್ಮಾಯಿಲ್ ರವರ ಕಾಲರ್ ಪಟ್ಟಿ ಹಿಡಿದು ಇಸ್ಮಾಯಿಲ್ ಕೈ ಗಳಿಂದ ಇಸ್ಮಾಯಿಲ್ ಇವರ ಎದೆಯ ಬಲಭಾಗಕ್ಕೆ ಗುದ್ದಿರುತ್ತಾರೆ. ಆಗ ಹಾರುನ್ ರಶಿದ್ ಇಸ್ಮಾಯಿಲ್ ರವರ ತಲೆಯ ಹಿಂಬದಿ ಕೈಯಿಂದ ಗುದ್ದಿರುತ್ತಾನೆ. ಅವರು ಮೂವರು ಸೇರಿ ಇಸ್ಮಾಯಿಲ್ ಇವರನ್ನು ಹಾಗೂ ಅಬ್ದುಲ್ಲನನ್ನು ಮಸೀದಿಯ ಗೇಟಿನ ಹೊರಗೆ ದೂಡಿಕೊಂಡು ಬಂದಾಗ ಅವರಿಬ್ಬರು ಹೆದರಿ ಕೋಳಿ ಅಂಗಡಿಯ ಇಸ್ಮಾಯಿಲ್ ರವರ ಮನೆಯ ಎದುರು ಓಡಿ ಹೋದಾಗ ಅಲ್ಲಿಗೆ ಇಸ್ಮಾಯಿಲ್, ಅಬುಬಕ್ಕರ್, ಮುಶ್ತಾಕ್, ಸಮ್ಮ ದ್, ರಫೀಕ್, ಅಬ್ದುಲ್ ರೆಹಮಾನ್, ಮಹಮ್ಮದ್ ವೆನಿಲ್ಲಾ, ಅದ್ರಮಾನ್ ವೆನಿಲ್ಲಾ ಸುಲೆಮಾನ್, ಸುಲೈಮಾನ್ ರಿಕ್ಷಾ, ಇರ್ಫಾನ್, ರಮೀಜ್ ಹಾಗೂ ಇತರರು ಬಂದು ಅವರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಹಾರುನ್ ರಶೀದ್ ಹಾಗೂ ಇಸ್ಮಾಯಿಲ್ ಇಸ್ಮಾಯಿಲ್ ರವರ ಅಂಗಿಯನ್ನು ಹರಿದು ಹಾಕಿದ್ದು, ರಿಕ್ಷಾ ಅಬುಬಕ್ಕರ್ ರವರ ಮಗ ಅಫ್ರೀದ್ ಒಂದು ಪೈಬರ್ ಕುರ್ಚಿಯಿಂದ ತಲೆಗೆ ಹೊಡೆದನು. ಇಮ್ರಾನ್ ಇಸ್ಮಾಯಿಲ್ ರವರ ತಲೆಗೆ  ಕೈಯಿಂದ ಹೊಡೆದಿರುತ್ತಾನೆ. ಅಲ್ಲದೆ ಅಬ್ದುಲನಿಗೆ ಕೂಡ ಆರೋಪಿಗಳು ಕಾಲಿನಿಂದ ತುಳಿದು ಕೈಯಿಂದ ಹೊಡೆದಿರುತ್ತಾರೆ. ಗಾಯಗೊಂಡ ಅವರು ಚಿಕಿತ್ಸೆಗೆ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುತ್ತಾರೆ. ಆತ್ರಾಡಿ ಇಸ್ಮಾಯಿಲ್ ಮಸೀದಿಯ ಅಧ್ಯಕ್ಷನಾಗಿದ್ದು, ನಮಗೆ ಹಾಗೂ ಆತ್ರಾಡಿಯವರಿಗೆ ಮಸೀದಿ ಕಮಿಟಿ ವಿಚಾರದಲ್ಲಿ ಕೆಲವು ಸಮಯಗಳಿಂದ ಕಚ್ಚಾಟ, ವೈಮನಸ್ಸು ಇದ್ದು, ಇಸ್ಮಾಯಿಲ್ ನನ್ನು ಕಾನೂನು ಪ್ರಕಾರ ಅಧ್ಯಕ್ಷ ಸ್ಥಾನದಿಂದ ತೆಗೆಯಬೇಕೆಂದು ಹೊರಾಟ ಮಾಡುತ್ತಿದ್ದು, ಅದೇ ವಿಚಾರದಲ್ಲಿ ಈ ದಿನ ಇಸ್ಮಾಯಿಲ್ ಹಾಗೂ ಆತನ ಸಂಗಡಿಗರು ತಗಾದೆ ತೆಗೆದು ಈ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 52/2021 ಕಲಂ: 143, 147, 323, 324 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ದಿನಾಂಕ 10/09/2021 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿದಾರರಾದ ಬೆನಡಿಕ್ಟ್ ವಾರ್ತಿಕ್ ,ಪ್ರಾಯ: 58 ವರ್ಷ, ತಂದೆ: ಜೆ.ಹೆಚ್. ವಾರ್ತಿಕ್ ವಾಸ: ಪಂಚಾಯತ್ ಬಳಿ, ಹಾಳೆಕಟ್ಟೆ, ಕಲ್ಯಾ ಗ್ರಾಮ, ಕಾರ್ಕಳ ತಾಲೂಕು ಇವರು ಕುಕ್ಕುಂದೂರು ಗ್ರಾಮದ ನಕ್ರೆ ಬಳಿ ಮಂಗಳೂರು KACES ಎಂಬ ಸಂಸ್ಥೆ ವತಿಯಿಂದ ನಡೆಸುವ ಪ್ರಗತಿ ಟ್ರಸ್ಟ್ ನಲ್ಲಿ ಇತರೇ ವ್ಯಕ್ತಿಗಳೊಂದಿಗೆ ಸೇರಿ ಪ್ರಾರ್ಥನೆ ನಡೆಸುತ್ತಿರುವ ಸಂದರ್ಭ ಸುಮಾರು 25 ರಿಂದ 30 ಜನ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಪಿರ್ಯಾದಿದಾರರು ಮತ್ತು ಇತರರು ಪ್ರಾರ್ಥನೆ ನಡೆಸುತ್ತಿದ್ದ ಕಟ್ಟಡಕ್ಕೆ ಪ್ರವೇಶಿಸಿ ಏಕಾಏಕಿ ದಾಳಿ ನಡೆಸಿ ಪ್ರಾರ್ಥನೆ ನಡೆಸುತ್ತಿದ್ದ ಹೆಂಗಸರು, ಗಂಡಸರು ಮತ್ತು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ದೈಹಿಕವಾಗಿ ಹಲ್ಲೆ ನಡೆಸಿ, ಒರ್ವ ಹೆಂಗಸಿನ ಕೈಯನ್ನು ಹಿಡಿದು ಎಳೆದಿದ್ದಲ್ಲದೇ, ಪ್ರಾರ್ಥನೆ ನಡೆಸುತ್ತಿದ್ದ ಪಿರ್ಯಾದಿದಾರರಿಗೆ ಮತ್ತು ಇತರರಿಗೆ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 110/2021 ಕಲಂ 110/2021 ಕಲಂ: 143,147, 323, 354, 448, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ : ಪಿರ್ಯಾದಿದಾರರಾದ ಸುನೀಲ್ ಪ್ರಾಯ: 20 ವರ್ಷ, ತಂದೆ: ಶ್ರೀನಿವಾಸ, ವಾಸ: 4 ನೇ ಅಡ್ಡರಸ್ತೆ, ಕುಂಟಲ್ಪಾಡಿ, ಕಸಬ ಗ್ರಾಮ, ಕಾರ್ಕಳ ತಾಲೂಕು ಇವರು ಹಿಂದೂ ಧರ್ಮದ ಅನುಯಾಯಿಯಾಗಿದ್ದು, ಅವರು ಆರ್ಥಿಕವಾಗಿ ಸ್ವಲ್ಪ ಸಮಸ್ಯೆಯಲ್ಲಿ ಇದ್ದುದನ್ನು ತಿಳಿದು ಬೆನಡಿಕ್ಟ್ ಎಂಬುವವರು 2 ತಿಂಗಳ ಹಿಂದೆ ಬಸ್ ಸ್ಟಾಂಡ್‌ನಲ್ಲಿ ಭೇಟಿಯಾಗಿ ವಿಚಾರಿಸಿ ಹೋಗಿದ್ದು, ನಂತರ ಅಪಾದಿತ ಬೆನಡಿಕ್ಟ್ ಮತ್ತೋರ್ವರು ಪಿರ್ಯಾದಿದಾರರ ಮನೆಗೆ ಬಂದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ, ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಹಿಂದೂ ಧರ್ಮದಲ್ಲಿ ಸಾವಿರಾರು ದೇವರುಗಳಿರುತ್ತಾರೆ ನೂರಾರು ಜಾತಿಗಳು, ಮೇಲು ಕೀಳೆಂಬ ಜಾತಿಗಳಿರುತ್ತದೆ ಎಂದು ಹಿಂದೂ ಧರ್ಮ ಮತ್ತು ದೇವರುಗಳ ಬಗ್ಗೆ ಅಪಹಾಸ್ಯ ಮತ್ತು ನಿಂದನೆ ಮಾಡಿದ್ದಲ್ಲದೇ ಕ್ರೈಸ್ತ ಧರ್ಮದ ದೇವರನ್ನು ಪೂಜಿಸಿ ಎಂದು ಸಣ್ಣ ಶಿಲುಬೆಯನ್ನು ನೀಡಿರುತ್ತಾನೆ, ದಿನಾಂಕ 10/09/2021 ರಂದು ಗಣೇಶ ಚೌತಿ ಇದ್ದು ಪಿರ್ಯಾದಿದಾರರಿಗೆ ನಕ್ರೆ ಪ್ರದೇಶದಲ್ಲಿರುವ ಒಂದು ಮನೆಗೆ ಬರಲು ತಿಳಿಸಿದ್ದಲ್ಲದೇ ಗಣಪತಿ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುತ್ತಾರೆ . ಅವರ ಮಾತನ್ನು ನಂಬಿ ಬೆಳಿಗ್ಗೆ 09:30 ಗಂಟೆಗೆ ಕುಕ್ಕುಂದೂರು ಗ್ರಾಮದ ನಕ್ರೆಯಲ್ಲಿರುವ ಅಪಾದಿತ ಬೆನಡಿಕ್ಟನು ತಿಳಿಸಿದ ಮನೆಗೆ ಹೋದಾಗ ಅಲ್ಲಿ ಪಿರ್ಯಾದಿದಾರರ ಹಾಗೆಯೇ ಇನ್ನೂ 50-60 ಜನ ಸೇರಿದ್ದು ಅಪಾದಿತ ಬೆನಡಿಕ್ಟನು ಹಿಂದೂ ಧರ್ಮ ಮತ್ತು ದೇವರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಲ್ಲದೇ ಕ್ರೈಸ್ತಧರ್ಮವನ್ನು ಸರ್ವ ಶ್ರೇಷ್ಟ ಎಂದು ಹೇಳಿರುತ್ತಾನೆ. ಆದುದರಿಂದ ಹಿಂದೂ ಸಮಾಜ ಜಾತಿ, ದೈವ ದೇವರುಗಳ ಬಗ್ಗೆ ನಿಂದನಾರ್ಹ ಪದಗಳನ್ನು ಆಡಿದ ಮತ್ತು ಪಿರ್ಯಾದಿದಾರರನ್ನು ಆರ್ಥಿಕ ಪ್ರಲೋಬನೆಗೆ ಒಳಪಡಿಸಲು ಪ್ರಯತ್ನಿಸಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 111/2021 ಕಲಂ : 295(A), 298 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-09-2021 06:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080