ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ: 10/08/2022 ರಂದು 07:45  ಗಂಟೆಗೆ ಕಾರ್ಕಳ ತಾಲೂಕು ಈದು ಗ್ರಾಮದ ಗುಮ್ಮೆತ್ತು ಜಂಕ್ಷನ್ ಬಳಿ ಗುಮ್ಮತ್ತು ಕಡೆಯಿಂದ KA-20-EC-9128 ನೇ ಮೋಟಾರ್ ಸೈಕಲ್ ಸವಾರ ರಂಜಿತ್  ತನ್ನ ಮೋಟಾರ್ ಸೈಕಲ್ ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಒಮ್ಮೇಲೇ ತನ್ನ ತೀರಾ ಬಲಭಾಗಕ್ಕೆ ಸವಾರಿ ಮಾಡಿ ಮುಜಿಲ್ನಾಯಿ ಕಡೆಯಿಂದ ಗುಮ್ಮೆತ್ತು ಜಂಕ್ಷನ್ ಕಡೆಗೆ ಬರುತ್ತಿದ್ದ KA-20-B-4798 ನೇ ನಂಬ್ರದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಚಾಲಕ ಆಟೋರಿಕ್ಷಾ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು, ಈ ಅಪಘಾತದಿಂದ ಆಟೋ ರಿಕ್ಷಾ ಚಾಲಕ ಶ್ರೀಧರ ಪೂಜಾರಿಯವರ ಮೈಕೆಗೆ ರಕ್ತಗಾಯವಾಗಿ,ಎದೆಗೆ ಗುದ್ದಿದ್ದ ರೀತಿಯ ಒಳನೋವು ಆಗಿದ್ದು, ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 103/2022 ಕಲಂ 279, 337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿ ಮಹಮ್ಮದ್ ಜಾಫರ್  ಪ್ರಾಯ : 50  ವರ್ಷ ತಂದೆ : ದಿ. ಮೈದಿನ್  ಹಸನ್  ವಾಸ : ಕುಡ್ತಿಮಾರ್ ಕೋಟೆ ರಸ್ತೆ, ಮಲ್ಲಾರು ಗ್ರಾಮ ಕಾಪು ಈವರ ಮಗ ಮಹಮ್ಮದ್ ಅಲ್ಫಾಜ್ ಪ್ರಾಯ 20 ವರ್ಷ ಇವನು ಕಟಪಾಡಿ ಅಚ್ಚಡದಲ್ಲಿ ಎಸ್.ಕೆ. ಅಕ್ಬರ್ ರವರ ಎಸ್. ಕೆ. ಪಾಲಿಮರ್ಸ್ ಚಪ್ಪಲ್ ಗೋಡಾನ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 10-08-2022 ರಂದು ಪಿರ್ಯಾದಿದಾರರ ಮಗ ಮತ್ತು ಸಾಹಿಲ್ ನು ಕೆಲಸದ ಬಗ್ಗೆ  ಅವರ  ಕೆ.ಎ 20 ಇ.ಎಫ್. 2968 ನೇ ಡಿಯೋ ಸ್ಕೂಟರ್‌ನಲ್ಲಿ  ಸಾಹಿಲ್‌ನು  ಹಿಂಬದಿ ಸವಾರನಾಗಿ ಕುಳ್ಳರಿಸಿಕೊಂಡು ಗೋಡಾನ್ ನಿಂದ ಹೊರಟು ಮಂಗಳೂರು ಉಡುಪಿ ರಾ ಹೆ 66 ರಲ್ಲಿ ಉಡುಪಿ ಕಡೆಗೆ ಸಮಯ ಸುಮಾರು ಸಂಜೆ 7.10 ಗಂಟೆಗೆ  ಉದ್ಯಾವರ ಸೇತುವೆ ಮೇಲೆ ಹೋಗುತ್ತಿರುವಾಗ ಟ್ಯಾಂಕರ್‌ ನಂಬ್ರ ಕೆ.ಎ. 19 ಡಿ. 3390 ನೇದರ ಚಾಲಕ ತನ್ನ ಬಾಬ್ತು ಟ್ಯಾಂಕರ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್‌ಗೆ ಹಿಂದಿನಿಂದ  ಢಿಕ್ಕಿ ಹೊಡೆದು, ಪರಿಣಾಮ ಸ್ಕೂಟರ್‌ ಸಮೇತ ಮಹಮ್ಮದ್ ಅಲ್ಫಾಜ್ ಮತ್ತು ಸಾಹಿಲ್ ನು ರಸ್ತೆಗೆ ಬಿದ್ದಿದ್ದು, ಟ್ಯಾಂಕರ್ ಮಹಮ್ಮದ್ ಅಲ್ಫಾಜ್ ನ ತಲೆಯ ಮೇಲೆ ಹರಿದು ಹೋಗಿದ್ದು, ಪರಿಣಾಮ  ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದು, ಸಾಹಿಲ್‌ಗೆ ಬಲಕಾಲಿನ ಮೊಣಗಂಟಿಗೆ ಮತ್ತು ಬಲ ಅಂಗೈಗೆ ರಕ್ತಗಾಯವಾಗಿದ್ದು, ಟ್ಯಾಂಕರ್‌ ಚಾಲಕನು ಢಿಕ್ಕಿ ಹೊಡೆದು ಮುಂದಕ್ಕೆ ಹೋಗಿ ನಿಧಾನ ಮಾಡಿ ನಂತರ ಟ್ಯಾಂಕರ್‌ನ್ನು ನಿಲ್ಲಿಸದೇ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ.  ಅಪರಾಧ ಕ್ರಮಾಂಕ. 83/2022 ಕಲಂ  279 337 304(A) ಐ.ಪಿ.ಸಿ. ಮತ್ತು ಕಲಂ  134(A)&(B) ಐ.ಎಮ್.ವಿ. ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಫಿರ್ಯಾದಿದಾರರಾದ ರವೀಂದ್ರ ಪೂಜಾರಿ (30), ತಂದೆ; ಅಣ್ಣಪ್ಪ ಪೂಜಾರಿ, ವಾಸ; ಮಕ್ಕಿಮನೆ, ಬೋಳಂಬಳ್ಳಿ, ಕಾಲ್ತೋಡು ಗ್ರಾಮ, ಬೈಂದೂರು ಇವರ ದೊಡ್ಡಮ್ಮ ಸರೋಜಾ ಇವರ ಮಗಳು ಸುಮಿತ್ರಾರವರ ಮಗಳು ಸನ್ನಿಧಿ (7) ರವರು  ಚಪ್ಪರಿಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2 ನೇ ತರಗತಿಯಲ್ಲಿ ಕಲಿಯುತ್ತಿದ್ದು,  ದಿನಾಂಕ 08/08/2022 ರಂದು ಸುಮಿತ್ರಾ ರವರು ಸನ್ನಿಧಿಯನ್ನು ಬೆಳಿಗ್ಗೆ ಶಾಲೆಗೆ ಬಿಟ್ಟು ಬಂದಿದ್ದು, ವಿಪರೀತ ಮಳೆ ಆರಂಭವಾದ ಕಾರಣ ಶಾಲೆಗೆ ಮಧ್ಯಾಹ್ನ ರಜೆ ನೀಡಿದ್ದು, ಪಿರ್ಯಾದಿದಾರರ ಪಕ್ಕದ ಮನೆಯವರಾದ ಭಾರತಿ ಗಾಣಿಗ ರವರು ಶಾಲೆಯಿಂದ ತಮ್ಮ ಮಕ್ಕಳನ್ನು ಕರೆದುಕೊಂಡು ಬರುವಾಗ ಮಧ್ಯಾಹ್ನ 3:00 ಗಂಟೆಗೆ ಕಾಲ್ತೋಡು ಬೀಜಮಕ್ಕಿ ಮಹಾಲಿಂಗ ಗಾಣಿಗ ರವರ ಜಾಗದ ಬಳಿ ಚಪ್ಪರಿಕೆ ಹೊಳೆಗೆ ಹಾಕಿದ ಮರದ ಕಾಲುಸಂಕದಲ್ಲಿ ದಾಟುತ್ತಿರುವಾಗ ಸನ್ನಿಧಿಯು ಕಾಲು ಮರದ ಕಾಲುಸಂಕದ ಮೇಲೆ ಆಕಸ್ಮಿಕವಾಗಿ ಜಾರಿ ರಭಸವಾಗಿ ತುಂಬಿ ಹರಿಯುತ್ತಿದ್ದ ಚಪ್ಪರಿಕೆ ಹೊಳೆಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು , ಸನ್ನಿಧಿಯನ್ನು ಚಪ್ಪರಿಕೆ ಹೊಳೆಯಲ್ಲಿ ಬಿದ್ದ ಸಮಯದಿಂದ ಹುಡುಕಾಡುತ್ತಿದ್ದು, ದಿನಾಂಕ 10/08/2022 ಸಂಜೆ 5:00 ಗಂಟೆಗೆ ಕಾಲ್ತೋಡು ಗ್ರಾಮದ ಬೀಜಮಕ್ಕಿ ವಾಟೆಮನೆ ಬಚ್ಚ ಪೂಜಾರಿ ರವರ ತೋಟದ ಬಳಿ ಹರಿಯುತ್ತಿದ್ದ ಚಪ್ಪರಿಕೆ ಹೊಳೆಯಲ್ಲಿ ನೀರಿನ ಅಡಿಯಲ್ಲಿ ಸಿಕ್ಕಿಹಾಕಿಕೊಂಡ ಮೃತದೇಹವನ್ನು ಮುಳುಗು ತಜ್ಞರಾದ ಮಂಜುನಾಥ ನಾಯ್ಕ್ ರವರು ನೀರಿನಿಂದ ಮೇಲಕ್ಕೆ ತಂದಿದ್ದು, ಸನ್ನಿಧಿಯು ದಿನಾಂಕ 08/08/2022 ರಂದು ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ವಿಪರೀತ ಮಳೆಯಿಂದಾಗಿ ಚಪ್ಪರಿಕೆ ಹೊಳೆಗೆ ಹಾಕಿದ ಕಾಲುಸಂಕದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಚಪ್ಪರಿಕೆ ಹೊಳೆಗೆ ಬಿದ್ದು ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 41/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಕಳವು ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾದ ಪ್ರವೀಣ ( 32), ತಂದೆ: ಮಹಾಲಿಂಗ, ವಾಸ: ಸಣ್ಣಹಿತ್ತಲು, ಯಡ್ತರೆ ಗ್ರಾಮ, ಮತ್ತು ಅಂಚೆ, ಬೈಂದೂರು ತಾಲೂಕು  ಇವರು ತನ್ನ ತಂದೆ ಸೌಖ್ಯವಿಲ್ಲದೇ  ಮಣಿಪಾಲ ಆಸ್ಪತ್ರೆಯಲ್ಲಿ ಇರುವುದರಿಂದ ಮಣಿಪಾಲಕ್ಕೆ ಹೋಗಲು ದಿನಾಂಕ 05/08/2022 ರಂದು ರಾತ್ರಿ 07:40 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂಬ್ರ  KA-20-EG-0306 Splender Pro  ನೇದನ್ನು  ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನ ಬಳಿ ಇಟ್ಟು ಬಸ್ ನಲ್ಲಿ ಹೋಗಿದ್ದು  ದಿನಾಂಕ  06/08/2022 ರಂದು ಬೆಳಿಗ್ಗೆ 11:20 ಗಂಟೆಗೆ ಪೆಟ್ರೋಲ್ ಬಂಕ್ ಬಳಿ ಬಂದಾಗ ಅಲ್ಲಿ ಇಟ್ಟಿದ್ದ  ಮೋಟಾರ್ ಸೈಕಲ್ ಇಲ್ಲದೇ ಇದ್ದು ಆಸುಪಾಸುಗಳಲ್ಲಿ  ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಪಿರ್ಯಾದಿದಾರರು ಪೆಟ್ರೋಲ್ ಬಂಕ್ ಬಳಿ ಇಟ್ಟಿದ್ದ KA-20-EG-0306 Splender Pro ಮೋಟಾರ್ ಸೈಕಲ್ ನ್ನು ದಿನಾಂಕ 05/08/2022 ರಂದು ರಾತ್ರಿ ಸಮಯ ಸು07:40  ಗಂಟೆಯಿಂದ ದಿನಾಂಕ 06/08/2022 ರಂದು ಬೆಳಿಗ್ಗೆ 11:20  ಗಂಟೆ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಮೋಟಾರ್ ಸೈಕಲ್ ನ  ಮೌಲ್ಯ  35,000/- ರೂಪಾಯಿ ಆಗಿರುತ್ತದೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 74/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಕಾಪು: ಪಿರ್ಯಾದಿ ಆಜ್ಯೂ೯ ಸಪ೯ರಾಜ್‌ (33)ಗಂಡ:ಸಪ೯ರಾಜ್ ವಾಸ:ಎಸ್.ಎಸ್.‌ ‌ರೋಡ್‌, ರೂಮ್‌ ನಂಬ್ರ 301   ಶ್ರೀ ಸಾಯಿ ವಾಚ೯ರ್‌ ಪ್ಲಾಟ್‌ ಮೂಳುರು ಗ್ರಾಮ, ಇವರು  ದಿನಾಂಕ: 08/08/2022 ರಂದು  ರಾತ್ರಿ 8:30 ಗಂಟೆ ಸುಮಾರಿಗೆ ಮಗನೊಂದಿಗೆ  ಅವರ  ಕೆ.ಎ-20-ಜೆಡ್-5080‌ನೇ ಸ್ವಿಪ್ಟ ಕಾರಿನಲ್ಲಿ ಉಡುಪಿಯ ಕಿನ್ನಿಮೂಲ್ಕಿಯ ಮಾಂಡವಿ ರೆಸಿಡೆನ್ಸಿಯಲ್ಲಿರುವ ತನ್ನ ತಂಗಿ ನಾದಿಯ ರವರ ಮನೆಗೆ ಹೋಗಿದ್ದು. ಈ ವೇಳೆ ಚಿನ್ನಭರಣಗಳನ್ನು ಮನೆಯ ಬೆಡ್‌‌ರೂಮ್‌ನಲ್ಲಿದ್ದ ಮರದ ಕಪಾಟಿನ ಡ್ರಾಯರ್‌ ನಲ್ಲಿಟ್ಟು ಮನೆಯ ಬಾಗಿಲನ್ನು ಬೀಗ ಹಾಕಿ ಹೋಗಿದ್ದು. ಈ  ದಿನ ದಿನಾಂಕ 10-08-2022 ರಂದು   ಪಿರ್ಯಾದಿದಾರರು ತನ್ನ ತಂಗಿ ಮನೆಯಿಂದ  ಹೊರಟು  ಬೆಳಗ್ಗೆ  07:30  ಗಂಟೆಗೆ ತನ್ನ ಮನೆಗೆ ಬಂದು, ಮನೆಯ ಬೀಗ ತೆರೆದು, ಮನೆ ಒಳಗೆ ಹೋಗಿ, ಮಗನನ್ನು ಶಾಲೆಗೆ ಕಳುಹಿಸಿದ ಬಳಿಕ  ಪಿರ್ಯಾದಿದಾರರು ಮನೆಯ ಒಳಗೆ ಬಂದು ಕಪಾಟನ್ನು ತೆರೆದು ನೋಡುವಾಗ ಅದರ ಡ್ರಾಯರ್‌ನಲ್ಲಿಟ್ಟಿದ್ದ ಚಿನ್ನಾಭರಣಗಳು ಕಾಣದೇ ಇದ್ದು, ಈ ಬಗ್ಗೆ  ಮನೆಯಲ್ಲಿ ಎಲ್ಲಾ ಕಡೆಯಲ್ಲೂ ಹುಡುಕಾಡಿದ್ದಲ್ಲಿ ಸಿಗದೇ ಇದ್ದು, ಕಾಣದಿರುವ ಚಿನ್ನಾಭರಣಗಳಾದ 1] 12 ಗ್ರಾಂ ತೂಕದ ಕರಿಮಣಿ ಸರ-1 ಅಂದಾಜು ಮೌಲ್ಯ 48,000/-,    2}12 ಗ್ರಾಂ ತೂಕದ ಬ್ರಾಸ್‌ ಲೈಟ್-1,‌ ಅಂದಾಜು ಮೌಲ್ಯ 48,000/-     3}8 ಗ್ರಾಂ ತೂಕದ ಬ್ರಾಸ್‌ ಲೈಟ್-1‌, ಅಂದಾಜು ಮೌಲ್ಯ 32,000/-    4} 12 ಗ್ರಾಮದ  ಚಿನ್ನದ ಉಂಗುರಗಳು -6, ಅಂದಾಜು ಮೌಲ್ಯ 48,000/-    ಹಾಗೂ ಇತರ ಕೆಲವು ವಸ್ತುಗಳಾದ 5} ಸ್ಮಾಟ೯ ವಾಚ್‌-1, ಅಂದಾಜು ಮೌಲ್ಯ 5,000/-    6} ಡ್ರಿಲ್ಲಿಂಗ್‌ ಮಿಷಿನ್‌ -1, ಅಂದಾಜು ಮೌಲ್ಯ 16,000/-   7} ಐರನ್‌ ಬಾಕ್ಸ್‌-1, ಅಂದಾಜು ಮೌಲ್ಯ 1,000/-     8} ಕಾರಿನ ಕೀ-1, 9} ಮನೆಯ ಮುಂಬಾಗಿಲಿನ ಕೀ-1, ಕಳವಾಗಿದ್ದು,  ಪಿರ್ಯಾದಿದಾರರು ಕೂಡಲೇ ತನ್ನ ನೆರೆಮನೆಯವರಾದ ಮುಮ್ತಾಜ್‌ ಎಂಬವರಿಗೆ ವಿಷಯ ತಿಳಿಸಿ ಬಳಿಕ ಪರಿಚಯದ ಪಾರೂಕ್‌ ಎಂಬವರಿಗೆ  ದೂರವಾಣಿ ಕರೆಮಾಡಿ ವಿಷಯ ತಿಳಿಸಿದ್ದು,  ಬಳಿಕ ತನ್ನ ಗಂಡನೊಂದಿಗೆ ಚಚಿ೯ಸಿ ಈಗ ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿದೆ. ಯಾರೋ ಕಳ್ಳರು  ದಿನಾಂಕ 08.08.2022 ರಂದು ರಾತ್ರಿ 8:30 ಗಂಟೆಯಿಂದ ದಿನಾಂಕ 10.08.2022 ರ ಬೆಳಿಗ್ಗೆ 7:30 ಗಂಟೆಯ ನಡುವೆ ನಕಲೀ ಕೀ ಬಳಸಿ ಅಥವಾ ಇನ್ಯಾವುದೋ ಉಪಕರಣ ಬಳಸಿ ಪಿರ್ಯಾದಿದಾರರು ಇಲ್ಲದ ಸಮಯದಲ್ಲಿ ಪಿರ್ಯಾದಿದಾರರ ಮನೆಯನ್ನು ಪ್ರವೇಶಿಸಿ  ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 82/2022 ಕಲಂ 457 380  ಐ.ಪಿ.ಸಿ. ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಶೋಭಾ (35), ತಂದೆ:ದಿ.ಬಾಬು ಆಚಾರ್ಯ, ವಾಸ:ಮೂಡು ಫಲಿಮಾರು,ಫಲಿಮಾರು ಗ್ರಾಮ  ಕಾಪು  ತಾಲೂಕು ,ಉಡುಪಿ ಜಿಲ್ಲೆ ಇವರು ಕಾಪು ತಾಲೂಕು ಫಲಿಮಾರು  ಗ್ರಾಮದ ಮೂಡು ಫಲಿಮಾರು ವಿನಲ್ಲಿ ತನ್ನ ತಾಯಿ, ಅಕ್ಕ ಮತ್ತು ತಮ್ಮನ ಜೊತೆ  ವಾಸವಾ ಗಿರುವುದಾಗಿದೆ. ದಿನಾಂಕ 06/05/2022 ರಂದು ಮದ್ಯಾಹ್ನ 15:00 ಗಂಟೆ ಸಮಯಕ್ಕೆ  ಪಿರ್ಯಾದಿದಾರರ ಮನೆಗೆ ಅಪರಿಚಿತ ವ್ಯಕ್ತಿಯು ಬಂದು ತನ್ನ ಹೆಸರು ಹರೀಶ್ ಪುತ್ತೂರು ವಿಶ್ವಕರ್ಮ ಕುಲದವರು ಎಂದು ಪರಿಚಯಿಸಿ ಆತನಿಗೆ  ನೀರು,ಚಹಾ ಕೊಟ್ಟಿದ್ದು, ಆತನು ಅರ್ಧ ಗಂಟೆ ಇದ್ದು, ನಂತರ ಹೋಗಿರು ತ್ತಾನೆ. ನಂತರ ಎರಡು ದಿನ ಬಿಟ್ಟು ಅದೇ ವ್ಯಕ್ತಿಯು ಮದ್ಯಾಹ್ನ 15:00 ಗಂಟೆಗೆ ಪಿರ್ಯಾದಿದಾರರ ಮನೆಗೆ ಬಂದು ತಾನು ನಿಮ್ಮ ಜಾತಿಯವರನ್ನೇ ಮದುವೆಯಾಗುವುದಾಗಿ ತಿಳಿಸಿದ್ದು, ತನಗೆ ಕುಂದಾಪುರದಲ್ಲಿದ್ದ ರೂಪಾಯಿ 80 ಲಕ್ಷ ಮೌಲ್ಯದ ಜಾಗವು ಮಾರಾಟವಾಗಿದ್ದು, ಅದರ ದಾಖಲೆಗಳು ಬ್ಯಾಂಕಿನಲ್ಲಿರುವುದರಿಂದ ಅದನ್ನು ಬಿಡಿಸಿಕೊಳ್ಳಲು ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದು, ಪಿರ್ಯಾದಿದಾರರು ಹಣ ಇಲ್ಲವೆಂದು ತಿಳಿಸಿದ್ದರೂ  ಫಿರ್ಯಾದಾರರನ್ನು ಮತ್ತು ಅವರ ಅಕ್ಕ ಶ್ಯಾಮಲಾರವರನ್ನು ನಂಬಿಸಿ ಅಕ್ಕ ಶ್ಯಾಮಲರವರಿಂದ 6 ಗ್ರಾಂ ತೂಕದ ಚಿನ್ನದ ಉಂಗುರ, ಪಿರ್ಯಾದಿದಾರರಿಂದ 2½ ಫವನ್ ತೂಕದ ಪವನ್ ಸರ, 1¾ ಪವನ್‌ಚಿನ್ನದ ಬೆಂಡೋಳೆ ಮತ್ತು ಜುಮ್ಕಿಯನ್ನು ತೆಗೆದುಕೊಂಡು  ಚಿನ್ನದ ಹಣವನ್ನು  ಅವನ  ಜಾಗ ಮಾರಾಟ ಮಾಡಿ ಬಂದಿರುವ ಹಣದಲ್ಲಿ ದಿನಾಂಕ 16/05/2022 ರಂದು ನಿಮ್ಮ ಹಣಕ್ಕೆ ಹೆಚ್ಚುವರಿಯಾಗಿ ಹಣ ಕೊಡುತ್ತೇನೆ ಎಂದು ನಂಬಿಸಿ ಹೋಗಿರುತ್ತಾನೆ. ನಂತರ 14/05/2022 ರಂದು ವಾಪಾಸ್ಸು ಪಿರ್ಯಾದಿದಾರರ ಮನೆಗೆ ಬಂದು, ಎರಡು ದಿನ  ಮನೆಯಲ್ಲಿ ವಾಸವಾಗಿದ್ದು, ದಿನಾಂಕ 16/05/2022 ರಂದು ಬೆಳಿಗ್ಗೆ 09:00 ಗಂಟೆಗೆ  ಮನೆಯಿಂದ ಹೋಗಿದ್ದುನಂತರ ಮನೆಗೆ ಬಂದಿರುವುದಿಲ್ಲ. ಫಿರ್ಯಾದುದಾರರಿಗೆ  ವಾಪಾಸು ಚಿನ್ನಾರಣವನ್ನಾಗಲೀ ಹಣವನ್ನಾಗಲೀ ನೀಡದೇ ಆರೋಪಿಯು ಪಿರ್ಯಾದಿದಾರ ರನ್ನು ಮತ್ತು ಅವರ ಅಕ್ಕನನ್ನು  ಮೋಸ ಮಾಡುವ ಉದ್ದೇಶ ದಿಂದ ನಂಬಿಸಿ. ಪಿರ್ಯಾದಿದಾರರ ಮತ್ತು ಅವರ ಅಕ್ಕನ 5 ಪವನ್‌ ತೂಕದ ರೂಪಾಯಿ 1,65,000/- ಮೌಲ್ಯದ ಚಿನ್ನದ ಆಭರಣಗಳನ್ನು ಮೋಸದಿಂದ ತೆಗೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 98/2022 ಕಲಂ: 406,  420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಗಂಗೊಳ್ಫಿ: ಪಿರ್ಯಾದಿ ಸತೀಶ್‌ ಎಂ ನಾಯಕ್‌ (57  ವರ್ಷ)  ತಂದೆ: ದಿವಂಗತ ಮೂಡ್ಲಗಿರಿ ನಾಯಕ್‌,   ವಾಸ:  ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಮಹಾರಾಜ ಸ್ವಾಮಿ ಶ್ರೀ ವರಹ ದೇವಸ್ಥಾನ, ಇವರು ಬೈಂದೂರು ತಾಲೂಕು ಮರವಂತೆ ಗ್ರಾಮದ ಮಹಾರಾಜಸ್ವಾಮಿ ಶ್ರೀ ವರಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.  ದಿನಾಂಕ: 09.08.2022 ರಂದು ಸಂಜೆ ಸಮಯ ಸುಮಾರು 3:30 ಗಂಟೆಗೆ ಸದ್ರಿ ದೇವಸ್ಥಾನಕ್ಕೆ ಓರ್ವ ಪುರುಷ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಹಾಗೂ ಓರ್ವ ಮಹಿಳೆ ಸೇರಿಕೊಂಡು ದೇವಸ್ಥಾನದ ಬಾಗಿಲನ್ನು ಓಡೆದು ಗರ್ಭಗುಡಿಯ ಒಳಗೆ ಪ್ರವೇಶಿಸಿ ಕಳ್ಳತನ ಮಾಡಲು ಪ್ರಯತ್ನಿಸಿರುತ್ತಾರೆ. ಇದು ದೇವಸ್ಥಾನಕ್ಕೆ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುತ್ತದೆ. ಪಿರ್ಯಾದಿದಾರರು ದೇವಸ್ಥಾನದ ಕಮಿಟಿಯವರಲ್ಲಿ ಚರ್ಚಿಸಿ ದೂರು ನೀಡುವಾಗ ವಿಳಂಭವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 73 /2022 ಕಲಂ: 454, 511 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 10.08.2022 ರಂದು ಪಿರ್ಯಾದಿ ಗುರುನಾಥ ಬಿ ಹಾದಿಮನಿ, ಪೊಲೀಸ್ ಉಪನಿರೀಕ್ಷಕರು  ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಯಡ್ತಾಡಿ ಗ್ರಾಮದ ದ್ವಾರಾಕಾ ಬೋರ್ಡಿಂಗ್‌ & ಲಾಡ್ಜಿಂಗ್‌‌ನ ಮೊದಲನೆ ಮಹಡಿಯ ಲಾಡ್ಜ್ ಗೆ ಸಂಬಂಧಿಸಿದ ರೂಂ ನಂಬರ್ 108 ರಲ್ಲಿ  ಹಣವನ್ನು ಪಣವನ್ನಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ದೊರೆತ ಮೇರೆಗೆ, ಮಾನ್ಯ ಪೊಲೀಸ್ ಉಪಾಧೀಕ್ಷಕರು ಉಡುಪಿರವರಿಂದ ಶೋಧನಾ ವಾರೆಂಟ್ ಪಡೆದುಕೊಂಡು ಪಂಚರು ಹಾಗೂ ಠಾಣಾ ಪಿಎಸ್‌‌ಐ ತನಿಖೆ ಹಾಗೂ ಠಾಣಾ ಸಿಬ್ಬಂಧಿಗಳೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ ದ್ವಾರಾಕಾ ಲಾಡ್ಜ್‌‌‌‌  ಮೊದಲನೆ ಮಹಡಿಯ ರೂಮ್ ನಂಬರ್ 108 ರ ಸ್ವಲ್ಪ ತೆರೆದಿರುವ ಬಾಗಿಲ ಮೂಲಕ ನೋಡಿದಾಗ ಒಳಗಡೆ ಆರೋಪಿಗಳು ಕುಳಿತು ಹಣವನ್ನು ಪಣವನ್ನಾಗಿಟ್ಟುಕೊಂಡು  ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್  ಬಾಹರ್  ಎಂಬ ಜುಗಾರಿ ಆಟ ಆಡುತ್ತಿದ್ದು , ಅಲ್ಲದೇ ಒಬ್ಬನು ನನ್ನದು  ರೂಪಾಯಿ  1,000 ಅಂದರ್  ಅದಕ್ಕೆ  ಇನ್ನೊಬ್ಬ  ನನ್ನದು ಬಾಹರ್ ಎಂದು  ಜೋರಾದ ಧ್ವನಿಯಲ್ಲಿ ಹೇಳುತ್ತಿದ್ದು, ಆರೋಪಿಗಳು ರೂಮ್‌ ನ  ಒಳಗಡೆ ಇಸ್ಪೀಟ್  ಎಲೆಗಳನ್ನು  ಬಳಸಿಕೊಂಡು  ಅಂದರ್ ಬಾಹರ್  ಜೂಜಾಟ  ನಡೆಸುತ್ತಿರುವುದನ್ನು ಖಚಿತಪಡಿಸಿಕೊಂಡು  ರೂಮ್‌ ಒಳಗೆ  ಮಧ್ಯಾಹ್ನ 4:10 ಗಂಟೆಗೆ ದಾಳಿ ನಡೆಸಿದಾಗ ಆರೋಪಿಗಳಾದ 1))ಕಾರ್ತಿಕ್‌, ಪ್ರಾಯ: 25 ವರ್ಷ, 2) )ಕಿರಣ್‌, ಪ್ರಾಯ:30 ವರ್ಷ, 3))ವಿಠ್ಠಲ, ಪ್ರಾಯ: 30 ವರ್ಷ, 4)ಸಂದೇಶ, ಪ್ರಾಯ: 29 ವರ್ಷ, 5)) ಶರಣ್‌, ಪ್ರಾಯ: 30 ವರ್ಷ ರವರು ಹಣವನ್ನು ಪಣವನ್ನಾಗಿ ಇಟ್ಟುಕೊಂಡು ಇಸ್ಫಿಟ್ ಜುಗಾರಿ ಆಡುತ್ತಿರುವ ಬಗ್ಗೆ ತಮ್ಮ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಅವರನ್ನು ವಶಪಡಿಸಿಕೊಂಡು, ಹಾಗೂ 6 ನೇ ಆರೋಪಿಯಾದ ಕಿರಣ್‌ ಮೊಗವೀರ ಲಾಡ್ಜ್‌ನ ಕಿಟಕಿಯಿಂದ ಹಾರಿ ಪರಾರಿಯಾಗಿರುವುದಾಗಿ ಆರೋಪಿಗಳು ತಿಳಿಸಿರುತ್ತಾರೆ. ನಂತ್ರ ಆರೋಪಿಗಳು ಅಂದರ್ ಬಾಹರ್ ಆಟಕ್ಕೆ ಬಳಸಿದ  ಕ್ರೀಂ ಕಲರಿನ ಬಟ್ಟೆ, 52 ಇಸ್ಪೀಟ್ ಎಲೆಗಳು, ಲಾಡ್ಜ್‌ ರಿಜಿಸ್ಟರ್‌, ಬಟ್ಟೆಯ ಮೇಲೆ ಇದ್ದ ನಗದು ರೂ. 9000/- ಹಣವನ್ನು ಹಾಗೂ 5 ಜನ ಆರೋಪಿಗಳ ಅಂಗ ಜಪ್ತಿಯಿಂದ ದೊರೆತ ಹಣ  ರೂ, 14,500/-   ( ಒಟ್ಟು ಮೊತ್ತ ರೂ.23,500/-) ಹಣವನ್ನು ಪಂಚರ ಸಮಕ್ಷಮಚಆರೋಪಿಗಳನ್ನು ಹಾಗೂ ಸ್ವತ್ತುಗಳನ್ನು  ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 133/2022 ಕಲಂ : 79, 80 KP ACT ರಂತೆ ಪ್ರಕರಣ ದಾಖಲಿಸಲಾಗಿದೆ.ಇತ್ತೀಚಿನ ನವೀಕರಣ​ : 11-08-2022 11:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080