ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಪಡುಬಿದ್ರಿ: ಪಿರ್ಯಾದಿದಾರರಾದ ಸುಧಾಕರ ಪೂಜಾರಿ (53), ತಂದೆ: ದಿ.ವಾಸು ಪೂಜಾರಿ, ವಾಸ: ಕೆಳಗಿನ ಮನೆ, ಮೂಳೂರು ಗ್ರಾಮ, ಉಚ್ಚಿಲ ಅಂಚೆ, ಕಾಪು ತಾಲೂಕು ಇವರು ಎಕ್ಸೆಲ್ ಸೈಕಲ್ ರಿಪೇರಿ ಅಂಗಡಿಯನ್ನು ಇಟ್ಟು ಕೊಂಡು ಕೆಲಸ ಮಾಡಿಕೊಂಡಿದ್ದು,  ದಿನಾಂಕ 09/08/2021 ರಂದು ಅಂಗಡಿಯನ್ನು ತೆರೆದು ಸೈಕಲ್ ರಿಪೇರಿ ಮಾಡಿ ನಂತರ ಸಂಜೆ 6:30 ಗಂಟೆಗೆ ಅಂಗಡಿಯನ್ನು ಮುಚ್ಚಿ ಸೈಕಲನ್ನು ಹಿಡಿದುಕೊಂಡು ಚಲಾಯಿಸಿಕೊಂಡು ಕುಂಜೂರು ಗ್ಯಾರೇಜಿನ ಎದುರು ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಡಿವೈಡರನಲ್ಲಿ ತಿರುಗಿಸಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ಏಕಮುಖ ಸಂಚಾರ ರಸ್ತೆಯ ಬಲ ಭಾಗದ ರಸ್ತೆಯ ಬದಿಯಲ್ಲಿ ಉಚ್ಚಿಲದಿಂದ ಮೂಳೂರು ಕಡೆಗೆ ಸೈಕಲನ್ನು ಚಲಾಯಿಸಿಕೊಂಡು ಹೋಗುವಾಗ ಸಂಜೆ  7:00 ಗಂಟೆಗೆ ವೆಸ್ಟ್ ಕೋಸ್ಟ್ ನರ್ಸರಿ ಎದುರು ತಲುಪಿದಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಯಾವುದೋ  ಒಂದು ಆಟೋ ರಿಕ್ಷಾವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿ ಪಿರ್ಯಾದಿದಾರರ ಎಡ ಕೈ ರಟ್ಟೆಗೆ ರಿಕ್ಷಾ ತಾಗಿದ ಪರಿಣಾಮ ಪಿರ್ಯಾದಿದಾರರು  ಸೈಕಲ್‌ ಸಮೇತ ರಸ್ತೆಗೆ ಬಿದ್ದು ಅವರ ತಲೆ, ಹಣೆಗೂ,  ಎಡಕೈ ಮಧ್ಯ ಬೆರಳಿಗೆ ಗಾಯವಾಗಿದ್ದು ಅಪಘಾತ ಉಂಟು ಮಾಡಿದ ರಿಕ್ಷಾ ಚಾಲಕನು ರೀಕ್ಷಾವನ್ನು ನಿಲ್ಲಿಸದೇ ಮುಂದಕ್ಕೆ ಚಲಾಯಿಕೊಂಡು ಹೋಗಿರುತ್ತಾನೆ. ಗಾಯಗೊಂಡ ಪಿರ್ಯಾದಿದಾರರು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2021 ಕಲಂ: 279, 337 ಐಪಿಸಿ ಮತ್ತು 134 (ಎ)(ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ಪಿರ್ಯಾದಿದಾರರಾದ ಶಂಕರಾವೊ ಎಸ್‌. ಘಾಟಗೇ (35), ತಂದೆ: ಸಂತಾಜೀ ಘಾಟಗೇ, ವಾಸ: ಆಶ್ರಯ ಪ್ಲ್ಯಾಟ್, ವಿಠಲ ಮಂದಿರದ ಹತ್ತಿರ, ಜಯನಗರ, ಮುಧೋಳ ತಾಲೂಕು, ಬಾಗಲಕೋಟೆ ಎಂಬುವವರು ದಿನಾಂಕ 10/08/2021 ರಂದು KA-22-D-2133 ನೇ ಲಾರಿಯಲ್ಲಿ ಮಂಗಳೂರಿನ ಪಣಂಬೂರು ಹಾರ್ಬರ್‌ ನಲ್ಲಿ ಕೋಕ್‌ ಲೋಡ್‌ ಮಾಡಿಕೊಂಡು ಬಾಗಲಕೋಟೆಗೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ರಾತ್ರಿ 10:30 ಗಂಟೆಗೆ ಕುಂದಾಪುರ ತಾಲೂಕಿನ ತ್ರಾಸಿ ಬೀಚ್‌ ನ ಮಯೂರ ಡಾಬಾದಿಂದ ಸ್ವಲ್ಪ ಮುಂದಕ್ಕೆ ತಲುಪುವಾಗ ಲಾರಿಯ ಹಿಂದಿನಿಂದ KA-27-C-0057 ನೇ ಲಾರಿಯನ್ನು ಅದರ ಚಾಲಕ ಪರಮೇಶಿ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಲಾರಿಯ ಹಿಂದಿನ ಬಲ ಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ. ಢಿಕ್ಕಿ ಹೊಡೆದ ಲಾರಿಯ ಕ್ಲೀನರ್‌ ಶ್ರೀಕಾಂತ್‌ ಎಂಬುವವರು ತೀವೃ ಗಾಯಗೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 73/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಾಣೆ ಪ್ರಕರಣಗಳು

 • ಬ್ರಹ್ಮಾವರ: ಪಿರ್ಯಾದಿದಾರರಾದ ಸನತ್ (22), ತಂದೆ: ರಾಮ ನಾಯ್ಕ , ವಾಸ: ಒಳಮಡಿ, (ಬ್ರಾಹ್ಮರಿ) , ಕುಕ್ಕೆಹಳ್ಳಿ, ಉಡುಪಿ ಇವರ ಮಾವ ನಾಗೇಶ್ ನಾಯ್ಕ  (40) ರವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಅವರು ದಿನಾಂಕ 09/08/2021 ರಂದು ಬೆಳಿಗ್ಗೆ 9:00 ಗಂಟೆಗೆ ಮನೆಯಿಂದ ಕೆಲಸದ ಬಗ್ಗೆ ಹೋಗುವುದಾಗಿ ಹೇಳಿ ಹೋದವರು  ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 152/2021 ಕಲಂ:  ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಪಿರ್ಯಾದಿದಾರರಾದ ರಾಧಾ (42), ಗಂಡ: ದಿ. ರಾಜಶೇಖರ ಉಡುಪ, ವಾಸ: ಡೇಸಾವಿಲ್ಲಾ, ಸೈಂಟ್ ಪಿಯುಸ್ ಚರ್ಚ್ ಬಳಿ, ಕೋಡಿ ರಸ್ತೆ, ಹಂಗಳೂರು ಗ್ರಾಮ, ಕುಂದಾಪುರ ಇವರ ಮಗ  ಅಕ್ಷಯ, ಬಿ ಆರ್ (19) ರವರು ದಿನಾಂಕ 10/08/2021 ರಂದು 10:00  ಗಂಟೆಗೆ ಕೋವಿಡ್ ವ್ಯಾಕ್ಸಿನ್ ಹಾಕಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 96/2021 ಕಲಂ:   ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾದ ಶ್ರೀಮತಿ ಶಾಂತಾ (56), ಗಂಡ: ವೆಂಕಟೇಶ್, ವಾಸ: ಭಗತ್ ನಗರ, ಕಂಚುಗೋಡು, ಗುಜ್ಜಾಡಿ ಪೋಸ್ಟ್ , ಹೊಸಾಡು ಗ್ರಾಮ, ಕುಂದಾಪುರ ತಾಲೂಕು ಇವರು ಹೊಸಾಡು ಗ್ರಾಮದ  ಕಂಚಗೋಡು ಭಗತ್‌ ನಗರ ನಿವಾಸಿಯಾಗಿದ್ದು, ಮಕ್ಕಳಾದ ರವಿ (19), ಅರುಣ, ಕಿರಣ ರೊಂದಿಗೆ ವಾಸ ಮಾಡಿಕೊಂಡಿರುತ್ತಾರೆ. ರವಿಯು ಸಂಸಾರದ ಜವಾಬ್ದಾರಿ ನೋಡಿಕೊಂಡಿದ್ದು, ಇದರಿಂದ ಆತನು ವಿಪರೀತ ಹಣದ ಅಡಚಣೆ ಇರುವುದಾಗಿ ಪಿರ್ಯಾದಿದಾರರಲ್ಲಿ ಹೇಳಿದ್ದು, ಪಿರ್ಯಾದಿದಾರರು ಸಮಾಧಾನ ಪಡಿಸಿರುತ್ತಾರೆ. ರವಿಯು ಇದೇ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 10/08/2021 ರಂದು ಬೆಳಿಗ್ಗೆ 11:30 ಗಂಟೆಯಿಂದ ಮಧ್ಯಾಹ್ನ 2:30 ಗಂಟೆಯ ನಡುವೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಪಕ್ಕಾಸಿಗೆ ನೀಲಿ ಬಣ್ಣದ ಟವಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 23/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  


ಇತ್ತೀಚಿನ ನವೀಕರಣ​ : 11-08-2021 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ