ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ :

  • ಕೋಟ: ಪಿರ್ಯಾದಿ ಸುಧೀರ ಪ್ರಾಯ 40 ವರ್ಷ ತಂದೆ:ಸಂಜೀವ ಕೊರಗ ವಾಸ: ಕಲ್ಲುರಾಶಿ ನಡೂರು ಗ್ರಾಮ ಮತ್ತು ಅಂಚೆ ಬ್ರಹ್ಮಾವರ ತಾಲೂಕು ಇವರು ದಿನಾಕ 07/08/2021 ರಂದು ಸಂಜೆ ಸುಮಾರು 4.00 ಗಂಟೆಯ ಸಮಯಕ್ಕೆ ಮೋಟಾರ್ ಸೈಕಲ್ KA 20Y7495 ನೇದರಲ್ಲಿ ಹಳ್ಳಾಡಿ ಕಡೆಯಿಂದ ಅಚ್ಲಾಡಿ ಕಡೆಗೆ ಹೋಗುತ್ತಿರುವಾಗ ಸೈಬರ್‌ಕಟ್ಟೆ ಸರ್ಕಲ್ ಬಳಿಯಲ್ಲಿ ತನ್ನ ಮೋಟಾರ್ ಸೈಕಲ್ ನ್ನು  ನಿಲ್ಲಿಸಿಕೊಂಡಿರುವಾಗ ಹಿಂಬದಿಯಿಂದ KA19HG 1433 ಮೋಟಾರ್ ಸೈಕಲ್ ಸವಾರನು ತನ್ನ ಬಾಬ್ತು ಮೋಟಾರ್ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ  ತೀರಾ ಎಡ ಬದಿಗೆ ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಢಿಕ್ಕಿಹೊಡೆದನು. ಪರಿಣಾಮ ಪಿರ್ಯಾದಿದಾರರ ಬಲ ಕಾಲಿಗೆ ತೀವೃ ತರಹದ ಪೆಟ್ಟಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಬ್ರಹ್ಮಾವರದ ಮಹೇಶ ಆಸ್ಪತ್ರೆಗೆ ದಾಖಲಾಗಿದ್ದು, ,ಸದ್ರಿ ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರನು ಆಸ್ಪತ್ರೆಯ ಖರ್ಚು ವೆಚ್ಚವನ್ನು ತಾನೇ ಭರಿಸುವುದಾಗಿ ಭರವಸೆ ನೀಡಿದ್ದು, ಈ ಬಗ್ಗೆ ಯಾವುದೇ ಪ್ರಕರಣ ದಾಖಲಿಸುವ  ಅವಶ್ಯಕತೆ ಇಲ್ಲವೆಂದ ಕಾರಣ ಆ ದಿನ ಪ್ರಕರಣ ದಾಖಲಾಗಿರುವುದಿಲ್ಲ. ತದ ನಂತರ ಆತನು ಸಿಕ್ಕಿರುವುದಿಲ್ಲ. ಅದುದರಿಂದ ಪಿರ್ಯಾದಿ ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಕೋಟಾ ಠಾಣಾ ಅಪರಾಧ ಕ್ರಮಾಂಕ 149/2021 ಕಲಂ: 279.338 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು :

  • ಕಾರ್ಕಳ ಗ್ರಾಮಾಂತರ : ಕಾರ್ಕಳ ತಾಲೂಕು ಮಾಳ ಗ್ರಾಮದ ಮುಳ್ಳೂರು ಎಂಬಲ್ಲಿರುವ ವೆಂಕಟೇಶ ಜೋಷಿಯವರ ಕೃಷಿ ತೋಟಕ್ಕೆ IBX ಕರೆಂಟ್ ಬೇಲಿಯನ್ನು ಅಳವಡಿಸಿದ್ದು, ದಿನಾಂಕ  10-8-2021 ರಂದು ರಾತ್ರಿ 12-00 ಗಂಟೆಯಿಂದ ಈ ದಿನ ದಿನಾಂಕ 11-8-2021 ರಂದು ಬೆಳಿಗ್ಗೆ 9-15 ಗಂಟೆಯ ಮದ್ಯೆ ಸಮಯದಲ್ಲಿ ಪಿರ್ಯಾದಿ ವಿಘ್ನೇಶ ಪ್ರಾಯ 19 ತಂದೆ: ಸೋಮನಾಥ ಡೋಂಗ್ರೆ ಶಿವಕೃಪ ಮನೆ ಕೂಡಬೆಟ್ಟು ಮಾಳ  ಗ್ರಾಮ, ಕಾರ್ಕಳ ಇವರ ತಂದೆ ಸೋಮನಾಥ ಡೋಂಗ್ರೆಯವರು ವಿರೇಶ್ವರ ಡೋಂಗ್ರೆಯವರ ಮನೆಗೆ ನಡೆದುಕೊಂಡು ಹೋಗುವಾಗ ವೆಂಕಟೇಶ ಜೋಷಿಯವರು ಅವರ ಕೃಷಿ ತೋಟಕ್ಕೆ ಅಳವಡಿಸಿದ  IBX ಕರೆಂಟ್ ಬೇಲಿಯ ವಯರ್ ಗೆ  ತಾಗಿ ಪಿರ್ಯಾದಿದಾರರ ತಂದೆ ಮೃತಪಟ್ಟಿರುವುದಾಗಿದೆ. ಈ ಘಟನೆಗೆ ವೆಂಕಟೇಶ ಜೋಷಿಯವರ ನಿರ್ಲಕ್ಷವೇ ಕಾರಣ ಆಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ  97/2021 ಕಲಂ: 304 (A) ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ ಫಿರ್ಯಾದಿ ಸಿರಾಜ್‌ ಪ್ರಾಯ 26 ವರ್ಷ, ತಂದೆ: ಮಹಮ್ಮದ್, ವಾಸ: ಮುಂಡ್ಕೂರು ಕಾರ್ಕಳ, ಉಡುಪಿ ಜಿಲ್ಲೆ. ಇವರು ಆನ್ ಲೈನ್‌ನಲ್ಲಿ ಸಾಲ ಪಡೆಯುವ ಬಗ್ಗೆ ಗೂಗಲ್ ನ ಲೋನ್‌ ಆ್ಯಪ್ ನಲ್ಲಿ ಪಿರ್ಯಾದಿದಾರರ ಹೆಸರು ಮತ್ತು ಪೋನ್‌ನಂಬ್ರ ವನ್ನು ದಾಖಲಿಸಿದ್ದು, ಮೂರು ದಿನಗಳ ನಂತರ +918343839550ನೇ ನಂಬ್ರ ದಿಂದ ಯಾರೋ ಅಪರಿಚಿತರು ಕರೆ ಮಾಡಿ ಮುದ್ರಾ ಲೋನ್‌ನಿಂದ ಮಾತನಾಡುವುದಾಗಿ ನಂಬಿಸಿ ಟ್ಯಾಕ್ಸ್ ಕಟ್ಟುವಂತೆ ಖಾತೆ ನಂಬ್ರ 2734000100270680 ನೇದಕ್ಕೆ ಹಂತಹಂತವಾಗಿ 1,97,400 /- ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡಿದ್ದು,  ಸ್ವಲ್ಪ ದಿನಗಳ ನಂತರ ಇನ್ನೊಬ್ಬ ಅಪರಿಚಿತ ವ್ಯಕ್ತಿ +918674981386 ನೇ ನಂಬ್ರದಿಂದ ಕರೆ ಮಾಡಿ ಲೋನ್‌ಕೊಡಿಸುವುದಾಗಿ ಹಾಗೂ ಮೊದಲು ಕಳೆದುಕೊಂಡ ಹಣ ವನ್ನು ಹಿಂದಿರುಗಿಸಿ ನೀಡುವುದಾಗಿ ನಂಬಿಸಿ, ಇದಕ್ಕಾಗಿ ಹಂತ ಹಂತವಾಗಿ ಒಟ್ಟು 39,300/- ರೂಪಾಯಿ ಹಣವನ್ನು ಖಾತೆ ನಂಬ್ರ 79900100002242 ನೇದಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದು, ಪಿರ್ಯಾದಿದಾರರಿಂದ ದಿನಾಂಕ: 25.06.2021 ರಿಂದ 17.07.2021 ರವರೆಗೆ  ಒಟ್ಟು 2,36,700/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡು, ಪಿರ್ಯಾದಿದಾರರಿಗೆ ಸಾಲವನ್ನು ನೀಡಿದೇ, ಪಿರ್ಯಾದಿದಾರರು ಕಟ್ಟಿದ ಹಣವನ್ನು ನೀಡದೇ ಮೋಸ ಮಾಡಿರುವುದಾಗಿದೆ  ಈ ಬಗ್ಗೆ ಸೆನ್‌ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 41/2021 ಕಲಂ: 66(ಡಿ) ಐ.ಟಿ. ಆಕ್ಟ್ ಮತ್ತು ಕಲಂ. 420 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು : ಪಿರ್ಯಾದಿ ದಿನೇಶ್ ಪೂಜಾರಿ ಪ್ರಾಯ 30 ವರ್ಷ, ತಂದೆ; ಸೂಲ್ಯ ಪೂಜಾರಿ, ವಾಸ; ಬಿಡಾರದಮನೆ, ಹೆರೆಂಜಾಲು ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 11/08/2021 ರಂದು ಅವರ ಸ್ನೇಹಿತ ಪ್ರಸಾದ್ ರವರೊಂದಿಗೆ ಸ್ವಂತ ಕೆಲಸದ ನಿಮಿತ್ತ ಶಿರೂರು ಕಡೆಗೆ ಅವರ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿರುವಾಗ ಬೆಳಿಗ್ಗೆ 05:30 ಗಂಟೆಯ ಸುಮಾರಿಗೆ ಯಡ್ತರೆ ಜಂಕ್ಷನ್ ಬಳಿ ಮಣ್ಣುರಸ್ತೆಯಲ್ಲಿ ಮಲಗಿದ್ದ ದನಗಳನ್ನು ಕೆಎ 47 5929 ನೇ ಬೊಲೆರೋ ಪಿಕ್ ಅಪ್ ವಾಹನದಲ್ಲಿದ್ದವರು ತುಂಬಿಸಿಕೊಂಡಿದ್ದು ಫಿರ್ಯಾದಿದಾರರನ್ನು ನೋಡಿದ ಪಿಕ್ ಅಪ್ ವಾಹನದಲ್ಲಿದ್ದವರು ತಮ್ಮ ಬಾಬ್ತು ಪಿಕ್ ಅಪ್ ವಾಹನವನ್ನು ಶಿರೂರು ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಹೋಗಿರುತ್ತಾರೆ. ಆಗ ಶಿರೂರು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿರುವ ಪೊಲೀಸರಿಗೆ ಮಾಹಿತಿಯನ್ನು ನೀಡಿ ಫಿರ್ಯಾದಾರರು ಶಿರೂರು ಟೋಲ್ ತನಕ ಹೋದರೂ ವಾಹನ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆರೋಪಿತರು ದನಗಳನ್ನು ಕಳ್ಳತನ ಮಾಡಿ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ವಧೆ ಮಾಡಿ ಮಾಂಸ ಮಾಡಲು ದನಗಳನ್ನು ಸಾಗಾಟ ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ಠಾಣೆ ಅಕ್ರ 126-2021 ಕಲಂ 4,5,7,12  ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧಿನಿಯಮ 2020 & 11(1) (ಡಿ) ಪ್ರಾಣಿಹಿಂಸೆ ನಿಷೇಧ ಕಾಯಿದೆ ಮತ್ತು ಕಲಂ. 66, 192(ಎ) ಐಎಮ್ ವಿ ಆಕ್ಟ್ ಹಾಗೂ 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 11-08-2021 06:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080