ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಮಂಜುನಾಥ್ (24), ತಂದೆ: ದ್ಯಾಮಣ್ಣ,ವಾಸ: ಉಳ್ಳದ್ದಿ ಗ್ರಾಮ, ಮರೋಳ ಅಂಚೆ, ಹುನಗುಂದ ತಾಲೂಕು ಬಾಗಲಕೋಟೆ ಜಿಲ್ಲೆ, ಹಾಲಿವಾಸ: ರಾಜೇಶ್ ಕ್ಲಿನಿಕ್ ಬಳಿ,ನಿಟ್ಟೂರು ಎಂಬಲ್ಲಿ ಬಾಡಿಗೆ ಮನೆ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 10/07/2022ರಂದು KA-28-EU-6545ನೇ ಮೋಟಾರು ಸೈಕಲ್ ನಲ್ಲಿ ಸಹಸವಾರನಾಗಿ ಸುನೀಲ್  ಸವಾರನಾಗಿ ಕರಾವಳಿ ಕಡೆಯಿಂದ ನಿಟ್ಟೂರು ಜಂಕ್ಷನ್ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಸವಾರಿ ಮಾಡಿಕೊಂಡುಹೋಗುತ್ತಿರುವಾಗ  ಮದ್ಯಾಹ್ನ 3:05 ಗಂಟೆಗೆ ಕರಾವಳಿ ಶಾರದ ಹೋಟೆಲ್ ನ ಮುಂಭಾಗ ತಲುಪುವಾಗ ಬ್ರಹ್ಮಾವರದ ಕಡೆಯಿಂದ ಮಂಗಳೂರು ಕಡೆಗೆ KA-19-MJ-0965 ನೇ ಕಾರಿನ ಚಾಲಕ ಅಂಕಿತ್ ಶೆಟ್ಟಿ  ಓರ್ವ ಹೆಂಗಸನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ದುಡುಕುತನ ಮತ್ತು ನಿರ್ಲಕ್ಷತನದಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಪಿರ್ಯಾದಿದಾರರು ಹಾಗೂ ಸುನೀಲ್ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ KA-28-EU-6545ನೇ ಮೋಟಾರು ಸೈಕಲ್ ನ ಮೇಲೆ ಬಿದ್ದ ಪರಿಣಾಮ ಪಿರ್ಯಾದಿದಾರ ಎಡ ಕಾಲಿಗೆ ಮತ್ತು ಎಡಕೈಯ ಮೊಣಗಂಟಿಗೆ ಮೂಳೆಮುರಿತದ ಗಂಭೀರ ಸ್ವರೂಪದ ಜಖಂ ಆಗಿದ್ದು, ಸುನೀಲ್ ರವರ ಮುಖಕ್ಕೆ ಮೈ ಕೈಗೆ ತಲೆಗೆ ಗಂಭಿರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.ಹಾಗೂ ಕಾರಿನ ಚಾಲಕ ಹಾಗೂ ಕಾರಿನಲ್ಲಿದ್ದ  ಹೆಂಗಸಿಗೆ ಸಣ್ಣಪುಟ್ಟ ಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ,ಪಿರ್ಯಾದಿದಾರರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 54/2022 ಕಲಂ: 279, 337,338, 304(ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 10/07/2022 ರಂದು ಮಧ್ಯಾಹ್ನ  1:15 ಗಂಟೆಗೆ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಪಿರ್ಯಾದಿದಾರರಾದ ನಾರಾಯಣ ಎಂ ಸುವರ್ಣ(64), ತಂದೆ: ಮಂಕ ಪೂಜಾರಿ, ವಾಸ: ಸುವರ್ಣ ನಿವಾಸ ಮಾವಿನಕಟ್ಟೆ ನಂದಳಿಕೆ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ ಅಂಗಡಿ ಎದುರು  ಹಾದುಹೋಗಿರುವ ಪಡುಬಿದ್ರೆ ಕಾರ್ಕಳ ರಾಜ್ಯಹೆದ್ದಾರಿಯಲ್ಲಿ  KA-19-Z-5023 ನೇ ನಂಬ್ರದ ಇನ್ನೋವಾ ಕಾರಿನ  ಚಾಲಕನು ಪಡುಬಿದ್ರೆ ಕಡೆಯಿಂದ ಕಾರ್ಕಳಕಡೆಗೆ ತನ್ನ ಕಾರನ್ನು ರಸ್ತೆಯ ತಿರುವಿನಲ್ಲಿ ಅತೀವೇಗ ಹಾಗೂ ಅಜಾಗರೂತೆಯಿಂದ ರಸ್ತೆಯ ತೀರಾಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ನಿಟ್ಟೆ ಕಡೆಯಿಂದ ಬೆಳ್ಮಣ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-ES-3099 ನೇ ನಂಬ್ರದ ಸ್ಕೂಟಿಗೆ  ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಸಹಸವಾರ ಸ್ಕೂಟಿ ಸಮೇತ ರಸ್ತೆಗೆ ಬಿದ್ದು,  ಸವಾರ ಸಂದೀಪ್ ಕುಲಾಲ್ ರವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸಹಸವಾರ ಸತೀಶ್ ಕುಲಾಲ್  ರವರ ತಲೆಗೆ  ತೀವ್ರ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 94/2022 ಕಲಂ: 279,  338, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿದಾರರಾದ ಸಂಜೀವ ನಾಯ್ಕ್ (46), ತಂದೆ: ಕೊರಗ ನಾಯ್ಕ್ ಕುಕ್ಕೆಹಳ್ಳಿ , ಅಂಚೆ & ಗ್ರಾಮ, ಚೋಳಬೆಟ್ಟು ಮನೆ, ಉಡುಪಿ ತಾಲೂಕು ಇವರ  ಊರಿನವರಾದ ಮಹೇಶ್‌ ಹೆಬ್ಬಾರ್‌ರವರು ಮೀನುಗಾರಿಕೆ ಬಗ್ಗೆ ತನ್ನ ಪಟ್ಟಾ ಜಾಗ ಹಾಗೂ ಸರಕಾರಿ ಜಾಗದಲ್ಲಿ ಬೃಹತ್‌ ಹೊಂಡಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದಲ್ಲದೆ  ದಿನಾಂಕ 10/07/2022 ರಂದು ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ ಮೀನುಗಾರಿಕಾ ಹಾಗೂ ಇತರ ಇಲಾಖಾ ವತಿಯಿಂದ ಕುಕ್ಕೆಹಳ್ಳಿ ಚೋಳಬೆಟ್ಟು ನಿವಾಸಿಯಾದ ಮಹೇಶ್ ಹೆಬ್ಬಾರ್  ಮತ್ತು  ಅವರ ಅಕ್ಕನ ಮಗ ಶ್ರೀವತ್ಸ ಅಕ್ರಮ ಗಣಿಗಾರಿಕೆ ಮಾಡಿ ನಿರ್ಮಿಸಲಾದ ಬೃಹತ್ ಹೊಂಡದ ಪಕ್ಕದಲ್ಲಿ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮವನ್ನು ಕುಕ್ಕೆಹಳ್ಳಿ ಚೋಳಬೆಟ್ಟು ಎಂಬಲ್ಲಿ ಅಯೋಜಿಸಿದ್ದು  ಕಾರ್ಯಕ್ರಮ ಆರಂಭವಾಗುವ ಮುಂಚೆ ಪಿರ್ಯಾದಿದಾರರು ಅಲ್ಲಿಗೆ  10:45 ಗಂಟೆಗೆ  ಮೀನುಗಾರಿಕಾ ಅಧಿಕಾರಿಗಳೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಹೋಗಿ ಪಿರ್ಯಾದಿದಾರರು ಮಹೇಶ್‌ ಹೆಬ್ಬಾರ್‌ ನಿರ್ಮಿಸಿದ ಹೊಂಡದ ಕುರಿತು ನೀಡಿರುವ ದೂರಿನ ಕುರಿತು ಮೀನುಗಾರಿಕಾ ಇಲಾಖಾ ಅಧಿಕಾರಿಯವರೊಂದಿಗೆ ಚರ್ಚಿಸುತ್ತಿರುವಾಗ ಮಹೇಶ್ ಹೆಬ್ಬಾರ್ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ  ಶಬ್ದಗಳಿಂದ ಬೈದು ನಿಂದಿಸಿರುತ್ತಾರೆ. ಅಲ್ಲದೆ ಪಿರ್ಯಾದಿದಾರರನ್ನು ಉದ್ದೇಶಿಸಿ ದುರುಗುಟ್ಟಿಕೊಂಡು ಹೊಡೆಯಲು ಬಂದಿರುತ್ತಾನೆ. ಹಾಗೂ ಮಹೇಶ್‌ ಹೆಬ್ಬಾರ್‌ರವರ  ಅಕ್ಕನ ಮಗ ಶ್ರೀವತ್ಸ ಕೂಡ  ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36 /2022 ಕಲಂ: 504, 506 ಐಪಿಸಿ  ಮತ್ತು 3(1-r),3 (1-s) SC/ST ACT ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ: ಪಿರ್ಯಾದಿದಾರರಾದ ಮಹೇಶ್ ಹೆಬ್ಬಾರ್ (43), ತಂದೆ: ಕೆ ವೆಂಕಟೇಶ್ ಹೆಬ್ಬಾರ್, ವಾಸ: ಭಾಗ್ಯಲಕ್ಷ್ಮೀ , ಚೋಳ ಬೆಟ್ಟು, ಕುಕ್ಕೆಹಳ್ಳಿ ಗ್ರಾಮ, ಉಡುಪಿ ತಾಲೂಕು ಇವರು ಕುಕ್ಕೆಹಳ್ಳಿಯ ಅವರ ಸ್ವಂತ ಪಟ್ಟಾ ಜಾಗದ  ಚೋಳಬೆಟ್ಟುವಿನ  ಕೆರೆಯಲ್ಲಿ ಮೀನು ಸಾಕಣೆ ಮಾಡಿ ಮಾರಾಟ ಮಾಡಿಕೊಂಡಿದ್ದು, ಪಿರ್ಯಾದಿದಾರರ  ಊರಿನ ಸಂಜೀವ ನಾಯ್ಕ್  ಎಂಬುವವರು ಪಿರ್ಯಾದಿದಾರರು ಮೀನು ಸಾಕಣೆ ಮಾಡದಂತೆ ಅವರಿಗೆ ಮೊದಲಿನಿಂದಲೂ ಕಿರುಕುಳ ನೀಡುತ್ತಾ ಬಂದಿದ್ದು, ದಿನಾಂಕ 10/07/2022 ರಂದು ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ಉಡುಪಿ ಮೀನುಗಾರಿಕಾ ಇಲಾಖಾ ವತಿಯಿಂದ ಪಿರ್ಯಾದಿದರರ ಮೀನು ಸಾಕಣೆಯ ಕೆರೆಯ ಬಳಿ ಮಿಟೀಂಗ್ ನಡೆದಿದ್ದು, ಅದಕ್ಕೆ ಮೀನುಗಾರಿಕಾ ಇಲಾಖೆಯವರು ಹಾಗೂ ಅವರು ಮೀನು ಸಾಕಣೆ ಮಾಡುವರು ಬಂದಿದ್ದು, 10:30 ಗಂಟೆಗೆ ಸಂಜೀವ ನಾಯ್ಕ್ ರವರು ಏಕಾಏಕಿ ಅವರ ಪಟ್ಟಾ ಜಾಗಕ್ಕೆ ಮಿಟಿಂಗ್ ನಡೆಯುವಲ್ಲಿಗೆ ಅಕ್ರಮ ಪ್ರವೇಶ ಮಾಡಿ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಬಂದು ವಿಡಿಯೋ ಮಾಡಿದಂತೆ ಮಾಡಿ ಪಿರ್ಯಾದಿದಾರರ ಬಳಿ ಬಂದು ಅವರಲ್ಲಿ  ನೀನು ಇಲ್ಲಿ ಮೀನು ಸಾಕಣೆ ಮಾಡಿದರೆ ಜಾಗ್ರತೆ, ನನಗೆ 2,00,000/- ರೂಪಾಯಿಯನ್ನು ಕೊಟ್ಟರೆ ಮಾತ್ರ ನಿನಗೆ ಮಾಡಲು ಬಿಡುತ್ತೇನೆ ಎಂದು ಹೇಳಿ ಅವರಿಗೆ  ಹೆದರಿಸಿ ಹೊಡೆಯಲು ಬಂದು ಬಲದ್ಗ್ರಹಣ ಮಾಡಿರುತ್ತಾನೆ. ಅಲ್ಲದೇ ಅವರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಕಸಿದುಕೊಂಡು ಹೋಗುವ ಉದ್ದೇಶದಿಂದ ಹಿಡಿದು ಎಳೆದಿದ್ದು, ಆಗ ಅವರ ಚಿನ್ನದ ಸರ ತುಂಡಾಗಿ ಅಲ್ಲಿ ಎಲ್ಲಿಯೋ ಬಿದ್ದಿರುತ್ತದೆ. ಬಳಿಕ ಆತನು ಪಿರ್ಯಾದಿದಾರರನ್ನು ಉದ್ದೇಶಿಸಿ  ನಿನ್ನ ಮೇಲೆ ಜಾತಿ ನಿಂದನೆ ಕೇಸು ನೀಡುತ್ತೇನೆ ಎಂದು ಎಂದು ಜೀವ ಬೆದರಿಕೆ ಹಾಕಿ, ಬೆದರಿಸಿ  ಹೋಗಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2022 ಕಲಂ:  447, 504, 506, 384, 327 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು:  ದಿನಾಂಕ 10/07/2022 ರಂದು ಶ್ರೀಶೈಲ ಡಿ. ಎಮ್, ಪೊಲೀಸ್‌ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರಿಗೆ  ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯ ಮಲ್ಲಾರು ಗ್ರಾಮದ ಪಕೀರ್ಣ ಕಟ್ಟೆಯಿಂದ ಮೂಳೂರು ಕಡೆಗೆ KA-20-EN- 2710 ನೇ  ಕಪ್ಪು  ಬಣ್ಣದ ಹೊಂಡಾ ಆಕ್ಟಿವಾ ಸ್ಕೂಟರ್‌ ನಲ್ಲಿ 2 ಜನ ವ್ಯಕ್ತಿಗಳು ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ  ಮಲ್ಲಾರು ಗ್ರಾಮದ ಕೋಟೆ ರಸ್ತೆಯ ರೈಲ್ವೆ ಸೇತುವೆ ಬಳಿ ಹೋಗಿ ನಿಂತು ವಾಹನಗಳನ್ನು ಪರಿಶೀಲಿಸುತ್ತಿರುವಾಗ 18:20 ಗಂಟೆಯ ಸಮಯಕ್ಕೆ ಪಕೀರ್ಣಕಟ್ಟೆ ಕಡೆಯಿಂದ KA-20-EN-.‌ 2710 ನೇ ಕಪ್ಪು ಬಣ್ಣದ ಹೊಂಡಾ ಆಕ್ಟಿವಾ-125  ಸ್ಕೂಟರ್‌  ನಲ್ಲಿ ಇಬ್ಬರು ವ್ಯಕ್ತಿಗಳು ಬಂದಿದ್ದು, ಸ್ಕೂಟರ್ ನ್ನು ನಿಲ್ಲಿಸುವಂತೆ ಸೂಚನೆ ನೀಡಿ ತಡೆದು ನಿಲ್ಲಿಸಿ ಸದ್ರಿ ಸ್ಕೂಟರ್ ನ್ನು ಪರಿಶೀಲಿಸಲಾಗಿ  ಸ್ಕೂಟರ್‌ ನ  ಮುಂಭಾಗದಲ್ಲಿ ಹಳದಿ ಮತ್ತು ಹಸಿರು ಬಣ್ಣದ ಪಾಲಿಥಿನ್‌ ಚೀಲದಲ್ಲಿ ಸುಮಾರು 15 ಕೆ.ಜಿಯಷ್ಟು ಮಾಂಸವಿದ್ದು, ಸ್ಕೂಟರ್ ಸವಾರ ಹಾಗೂ ಸಹಸವಾರನಲ್ಲಿ ಯಾವ ಮಾಂಸ ಎಂಬ ಬಗ್ಗೆ ವಿಚಾರಿಸಿಲಾಗಿ ದನದ ಮಾಂಸ ಎಂದು ತಿಳಿಸಿದ್ದು. ಬಳಿಕ ಸವಾರನ ಹೆಸರು ವಿಳಾಸ ವಿಚಾರಿಸಲಾಗಿ ಹುಸೇನಬ್ಬ, ಸಹ ಸವಾರನ ಹೆಸರು ಶಂಶುದ್ಧೀನ್‌ ಎಂಬುದಾಗಿ ತಿಳಿಸಿರುತ್ತಾನೆ. ಹುಸೇನಬ್ಬ ಹಾಗೂ ಶಂಶುದ್ಧೀನ್‌ ರವರುಗಳಲ್ಲಿ ಮಾಂಸ ಮಾರಾಟ ಮಾಡಲು ಪರವಾನಿಗೆಯ  ಬಗ್ಗೆ ವಿಚಾರಿಸಲಾಗಿ ತಮ್ಮಲ್ಲಿ ಯಾವುದೇ ಪರವಾನಗಿ ಇಲ್ಲವಾಗಿ ಹಾಗೂ  ತಾವುಗಳು ಬೀದಿ ಬದಿಯಲ್ಲಿನ ದನವನ್ನು ಕಳವು ಮಾಡಿ, ಹಾಡಿಯಲ್ಲಿ ಮಾಂಸ ಮಾಡಿ ಮನೆ ಮನೆಗೆ ಮಾರಾಟ ಮಾಡುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 69/2022 ಕಲಂ: 379 ಐಪಿಸಿ. ಮತ್ತು ಕಲಂ:  4, 5, 7, 12 ಕ. ಜಾ. ಹತ್ಯೆ ಪ್ರ. ಸಂ. ಕಾಯ್ದೆ-2020 ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 11-07-2022 09:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080