ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ:  ದಿನಾಂಕ 10.07.2022  ರಂದು   ಸುಮಾರು  19;15  ಘಂಟೆಗೆ  ಫಿರ್ಯಾದಿ ರಘುರಾಮ   ಶೆಟ್ಟಿ ಪ್ರಾಯ  71 ವರ್ಷ ತಂದೆ, ಮಹಾಬಲ   ಶೆಟ್ಟಿ ವಾಸ,  ಅಂಪಾರು  ಮೂಡಬಗ್ಗೆ   ಇವರು ಕುಂದಾಪುರ  ತಾಲೂಕಿನ  ಅಂಪಾರು  ಗ್ರಾಮದ ಮೂಡಬಗ್ಗೆ ಎಂಬಲ್ಲಿಶೇಖರ ಶೆಟ್ಟಿ  ಎಂಬುವರ ಅಂಗಡಿಯ  ಎದುರುಗಡೆ   ಕೆಎ, 20 ಇಜಿ. 4716 ನೇ ನಂಬ್ರದ  ಟಿವಿಎಸ್  ಎಕ್ಸಲ್  ಮೋಟಾರ್  ಸೈಕಲ್  ನಿಲ್ಲಿಸಿಕೊಂಡು  ನಿಂತು ಕೊಂಡಿರುವಾಗ  ಅರೋಪಿಯು ಅಪರಿಚಿತ   ಮೋಟಾರ್  ಸೈಕಲ್  ಸವಾರ  ಮೋಟರ್ ಸೈಕಲ್‌‌ನ್ನು  ಸಿದ್ದಾಪುರ  ಕಡೆಯಿಂದ  ಅಂಪಾರು  ಕಡೆಗೆ  ಅತೀವೇಗಹಾಗೂ  ಅಜಾಗರೂಕತೆಯಿಂದ  ಚಲಾಯಿಸಿ ಕೊಂಡುಬಂದು ಡಿಕ್ಕಿ ಹೊಡೆದಿರುತ್ತಾನೆ, ಇದರ ಪರಿಣಾಮ  ಫಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ಮಗುಚಿ ಬಿದಿದ್ದು,ಇದರಿಂದ ಅವರ ಬಲಕಾಲಿನ  ಮಣಿ ಗಂಟಿನ ಬಳಿ  ಮೂಳೆ  ಮುರಿತದ  ಗಾಯವಾಗಿರುತ್ತದೆ, ಅಪಘಾತ ಸಮಯ ಮೋಟಾರ್  ಸೈಕಲ್  ಸವಾರ  ಗಾಯಳು ವನ್ನುಉಪಚರಿಸದೇ ಅಲ್ಲಿಂದ ಪರಾರಿಯಾಗಿರುತ್ತಾನೆ, ಈ ಬಗ್ಗೆ  ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 70/2022  ಕಲಂ: 279, 338,   ಐ.ಪಿಸಿ 134 (ಎ&ಬಿ) ಮೊ. ವಾ ಕಾಯ್ದೆ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

  • ಅಮಾಸೆಬೈಲು:   ಮಚ್ಚಟ್ಟು ಗ್ರಾಮದ ಕುಂದ ಸಮೀಪ ಎ ಕೆ ಮಥಾಯಿಸ್ ಎಂಬವರ ಜಾಗದಲ್ಲಿ ಮೆಸ್ಕಾಂ ಇಲಾಖೆಯ 3 ಪೇಸಿನ . ಎಲ್ ಟಿ ಮಾರ್ಗ ಹಾದುಹೋಗಿದ್ದು ದಿನಾಂಕ 09/07/2022 ರಂದು ಸಂಜೆ 05:30 ಗಂಟೆಗೆ  ಅಮಾಸೆಬೈಲು ಕ್ಯಾಂಪಿನ ಜೂನಿಯರ್ ಮಾರ್ಗದಾಳು ಸಿದ್ದರೂಢ  ಗೋಟುರೆ ಇವರು ಪಿರ್ಯಾದಿ ಮಂಜುನಾಥ ಶ್ಯಾನುಬಾಗ ಪ್ರಾಯ 47 ವರ್ಷ ಕಿರಿಯ ಇಂಜಿನಿಯರ ಮೆಸ್ಕಾಂ ಹಾಲಾಡಿ ಶಾಖೆ ಇವರಿಗೆ ಕರೆ ಮಾಡಿಕುಂದ ಸಮೀಪ ಹಾದುಹೋಗಿರುವ ಎಲ್ ಟಿ ಮಾರ್ಗದ 3ಕಂಬಗಳನ್ನು ತುಂಡು ಮಾಡಿ ಈ ಮಾರ್ಗದ ಅಲ್ಯುಮಿನಿಯಂ ವಾಹಕಗಳನ್ನು  ಸ್ಪಾರ್ನ ಗಳನ್ನು ಯಾರೋ ಕಳ್ಳರು  ಕದ್ದು ಹೋಗಿರುತ್ತಾರೆ ಎಂದು ತಿಳಿಸಿದ್ದು ಪಿರ್ಯಾದುದಾರರು ಬಂದು ನೋಡಿರುತ್ತಾರೆ ನಂತರ ದಿನಾಂಕ 10/07/2022 ರಂದು ಪುನಃ ಇದೇ ಮಾರ್ಗದ ಇನ್ನೊಂದು ಕಂಬವನ್ನು ತುಂಡರಿಸಿ ಅಲ್ಯುಮಿನಿಯಂ ವಾಹಕಗಳನ್ನು ಹಾಗೂ ಅಲ್ಲಿಯೇ ಶೆಡ್ ನಲ್ಲಿದ್ದ ಹಳೆಯ ಪಂಪ್ ಸೆಟ್ ನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಕಳವಾದ ಸ್ವತ್ತಿನ ಅಂದಾಜು ಮೌಲ್ಯ 90,000 ಆಗಿರುತ್ತದೆ. ಈ ಬಗ್ಗೆ ಅಮಾಸೆಬೈಲು  ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 16/2022  ಕಲಂ 379   427 ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  •  ಕಾರ್ಕಳ : ದಿನಾಂಕ 10/07/2022 ರಂದು ಸಂಜೆ 6:45 ಗಂಟೆಗೆಯಿಂದ ದಿನಾಂಕ 11/07/2022 ರಂದು ಬೆಳಗ್ಗೆ 6:10 ಗಂಟೆಯ ಮಧ್ಯೆ ಯಾರೋ ಕಳ್ಳರು ಕಾರ್ಕಳ ತಾಲೂಕು ಬೋಳ ಗ್ರಾಮದ ಬೋಳ ಕೋಡಿಯಲ್ಲಿರುವ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನದ ಉತ್ತರ ದಿಕ್ಕಿನ ಮರದ ಮತ್ತು ಕಬ್ಬಿಣದ ಬಾಗಿಲುಗಳಿಗೆ ಹಾಕಿದ ಬೀಗಗಳನ್ನು ಯಾವುದೋ ಸಲಕರಣೆಯಿಂದ ಮುರಿದು ಒಳ ಪ್ರವೇಶಿಸಿ, ದೇವಸ್ಥಾನದ ಗರ್ಭಗುಡಿಯ ಬಾಗಿಲಗೆ ಹಾಕಿದ ಬೀಗವನ್ನು ಯಾವುದೇ ಸಲಕರಣೆಯಿಂದ ಮುರಿದು  ದೇವರ ಪೀಠದಲ್ಲಿ ಇರಿಸಿದ್ದ ಪುರಾತನ ಪಂಚಲೋಹದ ಬಲಿ ಮೂರ್ತಿ, ಗಣಪತಿ ಗುಡಿಯ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಅದರೊಳಗೆ ಇರಿಸಿದ್ದ ಸುಮಾರು 5,000/- ರೂಪಾಯಿ ಮೌಲ್ಯದ ಗಣಪತಿಯ ಬೆಳ್ಳಿಯ ಮುಖವಾಡ, ತೀರ್ಥ ಮಂಟಪದ ಬಳಿ ಇರಿಸಿದ್ದ ಕಬ್ಬಿಣದ ಕಾಣಿಕೆ ಡಬ್ಬಿಯ ಬಾಗಿಲನ್ನು ಯಾವುದೋ ಸಲಕರಣೆಯಿಂದ ಮೀಟಿ ತೆರೆದು, ಅದರೊಳಗೆ ಇದ್ದ ನಗದು ಅಂದಾಜು 45,000-50,000 ರೂಪಾಯಿಗಳನ್ನು (ನೋಟುಗಳು ಮಾತ್ರ) ಹಾಗೂ ದೇವಸ್ಥಾನ ಕಛೇರಿಯ ಒಳಗೆ ಅಳವಡಿಸಿದ್ದ ಸುಮಾರು 9000/- ರೂಪಾಯಿ ಮೌಲ್ಯದ HIK VISION ಕಂಪೆನಿಯ DVR ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ  ಶ್ರೀನಿವಾಸ ಭಟ್, (44), ತಂದೆ: ದಿ ನರಸಿಂಹ ಭಟ್, ವಾಸ: ದೇವಸ್ಯ ಮನೆ, ಬೊಳ ಕೋಡಿ ಅಂಚೆ, ಬೋಳ ಗ್ರಾಮ, ಕಾರ್ಕಳ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 95/2022 ಕಲಂ: 457,380 ಭಾದಸಂ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕೋಟ: ಪಿರ್ಯಾದಿ ಲಕ್ಷ್ಮಿ ಪ್ರಾಯ 40 ವರ್ಷ ಗಂಡ: ದಿವಂಗತ ಕೃಷ್ಣ ಪೂಜಾರಿ ವಾಸ:ನಾಗಶ್ರೀ ನಿಲಯ ಕಾರ್ಕಡ ಗ್ರಾಮ ಬ್ರಹ್ಮಾವರ ಇವರು ಕಾರ್ಕಡದಲ್ಲಿ ವೀರಭದ್ರ ಕ್ಯಾಂಟೀನ್ ನಡೆಸಿಕೊಂಡಿದ್ದು ,ಸದ್ರಿ ಕಟ್ಟಡದ 1ನೆ ಮಹಡಿಯಲ್ಲಿ ಮಕ್ಕಳೊಂದಿಗೆ ವಾಸವಾಗಿರುತ್ತಾರೆ. ಪಿರ್ಯಾದಿದಾರರ  ಮಗ ನಾಗೇಂದ್ರ 14 ವರ್ಷ ಈತನು  ಕೋಟ ವಿವೇಕ ಹೈಸ್ಕೂಲಿನಲ್ಲಿ 9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು , ಈ ದಿನ ದಿನಾಂಕ 11/07/2022 ರಂದು ಶಾಲೆಗೆ ರಜೆ ಇದ್ದುದರಿಂದ  ಬೆಳಿಗ್ಗೆ ಕಾರ್ಕಡ ಶಾಲಾ  ಮೈದಾನಲ್ಲಿ ಆಡ ಆಡಲು ಹೋಗಿರುತ್ತಾನೆ . ಮಧ್ಯಾಹ್ನ  ಸಮಯ ನಾಗೇಂದ್ರನು ಊಟಕ್ಕೆಂದು ಮನೆಗೆ ಬಂದವನು ಪಿರ್ಯಾದಿದಾರರಲ್ಲಿ  ಊಟ ಬಡಿಸಲು ಹೇಳಿದ್ದು ,ಕ್ಯಾಂಟೀನ್ ನಲ್ಲಿ ಗಿರಾಕಿಗಳು ಇದ್ದುದರಿಂದ  ಪಿರ್ಯಾದಿದಾರರು ನಾಗೇಂದ್ರನಿಗೆ  ಮನೆಗೆ ಹೋಗಿ ಊಟ ಹಾಕಿಕೊಂಡು ಊಟ ಮಾಡು ಎಂದು ಹೇಳಿದ್ದಕ್ಕೆ ಹಠ ಸ್ವಭಾವದ ನಾಗೇಂದ್ರನು ಸಿಟ್ಟುಗೊಂಡು ಮಧ್ಯಾಹ್ನ 01.00 ಗಂಟೆಯಿಂದ 1.30 ಗಂಟೆಯ ಮಧ್ಯಾವಧಿಯಲ್ಲಿ ಬಟ್ಟೆ ಹಾಕಲು ಸಿಟೌಟ್ ನಲ್ಲಿ  ಕಟ್ಟಿದ ಹಗ್ಗಕ್ಕೆ ಬಿಳಿ ಬಣ್ಣದ  ಟವೆಲ್ ನಿಂದ ಕುತ್ತಿಗೆಗೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌  ಠಾಣಾ ಯು.ಡಿ.ಆರ್ ನಂಬ್ರ 27/2022 ಕಲಂ: 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 11-07-2022 06:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080