ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಶಿರ್ವ :ಪಿರ್ಯಾದಿ ಬಾಲಾಜಿ ಪೂಜಾರಿ, ಪ್ರಾಯ 33 ವರ್ಷ, ತಂದೆ: ದಿ/ಚಂದ್ರಶೇಖರ ವಾಸ: ಕಿದಿಯೂರು ಅಂಬಲಪಾಡಿ ಗ್ರಾಮ,ಇವರು ತನ್ನ ಬಾಬ್ತು ಮೋಟಾರು ಸೈಕಲ್ ನಂ ಕೆಎ 20-ಇಯು- 3337ನೇದರಲ್ಲಿ ದಿನಾಂಕ: 10/07/2021 ರಂದು ಎಂದಿನಂತೆ ಗ್ಯಾರೇಜ್ ನ ಕೆಲಸ ಮುಗಿಸಿ ಕ್ಯಾಂಟೀನ್ ನಲ್ಲಿ ಊಟ ಮಾಡಿ ವಾಪಾಸು ಗ್ಯಾರೇಜ್ ಗೆ ಹೋಗುವಾಗ ಸಮಯ ಸುಮಾರು 13.15 ಗಂಟೆಗೆ ಮೂಡುಬೆಳ್ಳೆಯ ಪ್ರೇಮಾ ಮೆಡಿಕಲ್ ಎದುರುಗಡೆ ತಲುಪುವಾಗ ಓರ್ವ ಕಾರಿನ ಚಾಲಕನು ಪಳ್ಳಿ ಕಡೆಯಿಂದ ಉಡುಪಿ ಕಡೆಗೆ ಸುರೇಶ ದೇವಾಡಿಗ ತನ್ನ ಕಾರು ನಂ ಕೆ.ಎ. 19 ಎಮ್ ಬಿ -1135 ನೇದನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ವಾಹನ ಸಮೇತ ರಸ್ತೆಗೆ ಬಿದ್ದು ಬಲಕಾಲಿನ ಮಣಿಗಂಟಿನ ಮೇಲ್ಗಡೆ ಮೂಳೆ ಮುರಿತದ ಒಳ ಜಖಂ ಆಗಿರುತ್ತದೆ. ಈ ಬಗ್ಗೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ: 38/21, ಕಲಂ 279,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ಪಿರ್ಯಾದಿ: ಅಮೀರ್ ಸೊಹೆಲ್ (29)ತಂದೆ: ಅಜೀಜ್ ಅಹಮ್ಮದ್ ವಾಸ: ರಾಜೀವನಗರ ನಿಟ್ಟೂರು ಇವರು ಮಲ್ಪೆ ಬಂದರಿನ ಬಳಿ ಗ್ಯಾರೇಜಿನಲ್ಲಿ ಕೆಲಸ ಮಾಡಿಕೊಂಡಿದ್ದು ಈ ದಿನ ದಿನಾಂಕ 10-07-2021 ರಂದು ಗ್ಯಾರೇಜಿನಲ್ಲಿ ಕೆಲಸ ಮಾಡಿ ಮಧ್ಯಾಹ್ನ ಊಟಕ್ಕೆಂದು ತನ್ನ ಬಾಬ್ತು KA-20- ER- 4507ಮೋಟಾರು ಸೈಕಲ್ ನಲ್ಲಿ ಮಲ್ಪೆ ಬೀಚನ ಗಾಂಧಿಪ್ರತಿಮೆಯ ಬಳಿ ಹೋಟೆಲ್ ನಲ್ಲಿ ಊಟ ಮಾಡಿ ವಾಪಸ್ಸು ಗ್ಯಾರೇಜ್ ಗೆ ಹೊರಟು ಕೊಳ ಬೀಚ್ ರಸ್ತೆಯಲ್ಲಿ ಪ್ಯಾರಡೈಸ್ ಹೋಟೆಲ್ ನ ಸ್ವಲ್ಪ ಮುಂದೆ ಕಲಿಯುಗ ಹೋಟೆಲ್ ನ ಎದುರು ತಲುಪುವಾಗ ಮಧ್ಯಾಹ್ನ 2:10 ಗಂಟೆಗೆ KA 02 MP8519 ನೇ ಕಾರು ಚಾಲಕನು ಕಲಿಯುಗ ಹೋಟೆಲ್ ಎದುರಿನಿಂದ ಯಾವುದೇ ಸೂಚನೆ ನೀಡದೆ ನಿರ್ಲಕ್ಷ್ಯತನದಿಂದ ಒಮ್ಮೆಲೆ ಎಡಕ್ಕೆ ತಿರುಗಿಸಿದ ಪರಿಣಾಮ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನು ಬೈಕ್ ಸಮೇತ ರಸ್ತೆಗೆ ಬಿದ್ದ, ಪರಿಣಾಮ ಬೈಕ್ ಸವಾರನ ಬಲಕಾಲಿನ ಪಾದಕ್ಕೆ ರಕ್ತಗಾಯ ಹಾಗೂ ಕೋಲು ಕಾಲಿಗೆ ಮೂಳೆ ಮುರಿತವಾಗಿ ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ: 87/21, ಕಲಂ 279,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು: ದಿನಾಂಕ; 09/07/2021 ರಂದು ಪಿರ್ಯಾದಿ ಸುರೇಶ ದೇವಾಡಿಗ ಪ್ರಾಯ 30 ವರ್ಷ, ತಂದೆ; ಕೃಷ್ಣ ದೇವಾಡಿಗ, ವಾಸ; ಬೆಸ್ಕೂರ್, ಕಾವೇರಿಮನೆ, ತಾರಪತಿ ಪೋಸ್ಟ್, ಪಡುವರಿ ಗ್ರಾಮ ಇವರು ಬೈಂದೂರು ಮೀನು ಮಾರ್ಕೆಟ್ ಗೆ ಹೊರಟು ರಾಹೆ 66 ರ ರಸ್ತೆಯಲ್ಲಿ ಸಮಯ ಸುಮಾರು ಸಂಜೆ 05:30 ಗಂಟೆಗೆ ಉಪ್ಪುಂದ ಸೇತುವೆಗಿಂತ ಸ್ವಲ್ಪ ಹಿಂದೆ ಹೋಗುತ್ತಿರುವಾಗ ಬಿಜೂರು ಕಡೆಯಿಂದ ಬೈಂದೂರು ಕಡೆಗೆ ಕೆ ಎ 20-ಇಡಬ್ಲೂ-5063 ನೇ ಮೋಟಾರ್ ಸೈಕಲ ಸವಾರ ಸುರೇಶನು ಆತನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ದನವೊಂದು ಮೋಟಾರ್ ಸೈಕಲ್ ಗೆ ಅಡ್ಡ ಬಂದಿದ್ದು ಮೋಟಾರ್ ಸೈಕಲನ್ನು ಓಮ್ಮಲೇ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸ್ಕೀಡ್ ಆಗಿ ಸವಾರ ಹಾಗೂ ಸಹಸವಾರ ಸುಬ್ರಹ್ಮಣ್ಯ ಪೂಜಾರಿ ರವರು ರಸ್ತೆಗೆ ಬಿದ್ದಿದ್ದು ಪರಿಣಾಮ ಸವಾರ ಸುರೇಶನಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿದ್ದು, ಸಹಸವಾರ ಸುಬ್ರಹ್ಮಣ್ಯ ಪೂಜಾರಿಗೆ ಬಲಗೈಗೆ ರಕ್ತಗಾಯ, ಹಣೆಗೆ, ಬಲಕಾಲಿಗೆ ತರಚಿದ ಗಾಯವಾಗಿರುತ್ತದೆ, ಗಾಯಗೊಂಡವರನ್ನು ಪಿರ್ಯಾದಿದಾರರು ಹಾಗೂ ಇತರರು ಎತ್ತಿ ಉಪಚರಿಸಿ ಒಂದು ಅಂಬುಲೆನ್ಸ್ ನಲ್ಲಿ ಬೈಂದೂರು ಅಂಜಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದ್ದಲ್ಲಿ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ವೈದರ ಸಲಹೆಯಂತೆ ಕುಂದಾಪುರ ನ್ಯೂ ಮೆಡಿಕಲ್ ಸೆಂಟರ್ ಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ.. ಈ ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ: 116/21, ಕಲಂ 279,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣಗಳು

  • ಪಡುಬಿದ್ರಿ: ದಿನಾಂಕ:09.07.2021 ರ ಸಂಜೆ 17:00 ಗಂಟೆಯಿಂದ ದಿನಾಂಕ:10.07.2021 ರ ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಾಪು ತಾಲೂಕು ಎಲ್ಲೂರು ಗ್ರಾಮ ಕುಂಜೂರಿನಲ್ಲಿರುವ ಪಿಲಿಚಂಡಿ ದೈವಸ್ಥಾನದ ಎದುರಿನ ಬಾಗಿಲಿಗೆ ಹಾಕಿದ ಬೀಗದ ಕೊಂಡಿಯನ್ನು ಯಾವುದೋ ಆಯುಧದಿಂದ ತುಂಡು ಮಾಡಿ ದೈವಸ್ಥಾನದ ಒಳ ಪ್ರವೇಶಿಸಿ, ದೈವಸ್ಥಾನದ ಒಳಗೆ ಮಂಚದಲ್ಲಿದ್ದ ಸುಮಾರು ರೂ. 8,000/- ಮೌಲ್ಯದ 200 ಗ್ರಾಂ ತೂಕದ ಬೆಳ್ಳಿಯ ಗಿಂಡಿ-1, ಮತ್ತುಸುಮಾರು 8,000/- ರೂ ಇದ್ದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ಸುಮಾರು 16,000/- ರೂಪಾಯಿ ಆಗಿರುತ್ತದೆ . ಈ ಬಗ್ಗೆ ಸತೀಶ್ ಕುಂಡತ್ತಾಯ, ಪ್ರಾಯ: 58 ವರ್ಷ, ರಾಮಕೃಷ್ಣ ಕುಂಡತ್ತಾಯ, ವಾಸ: ಕುಂಕುಮ, ಕುಂಜೂರು, ಎಲ್ಲೂರು ಗ್ರಾಮ, ಅದಮಾರು ಅಂಚೆ, ಇವರು ಪಡುಬಿದ್ರಿ ಠಾಣೆಗೆ ದೂರು ನೀಡಿದ್ದು ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ: 64/2021 ಕಲಂ: 457, 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಶಂಕರನಾರಾಯಣ: ಫಿರ್ಯಾದಿ ಕು, ಮಾಲತಿ ಪ್ರಾಯ 27 ವರ್ಷ ತಂದೆ, ರಾಮ ನಾಯ್ಕ ವಾಸ, ತಾರೀಕಟ್ಟೆ ನಂಚಾರು ಗ್ರಾಮ ಉಡುಪಿ ತಾಲೂಕು ಇವರಿಗೆ ಹಾಲಾಡಿಯ ಯೊಗೀಶ ನಾಯ್ಕ ಎಂಬುವರು ಮದುವೆ ಆಗುವುದಾಗಿ ಹೇಳಿದ್ದು, ಆ ಬಳಿಕ ಮದುವೆ ಆಗದೇ ಇದ್ದಾಗ ಅವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ದ ದೂರು ಅರ್ಜಿ ನೀಡಿರುತ್ತಾರೆ, ಆದರೆ ಯೊಗೀಶ ನಾಯ್ಕ ಫಿರ್ಯಾದುದಾರರನ್ನು ಮದುವೆ ಆಗದೇ ಇದ್ದು, ಈ ಸಮಯ ಆರೋಪಿಯು ಫಿರ್ಯಾದುದಾರು ಕೆಲಸ ಮಾಡಿಕೊಂಡಿರುವ ಆಸ್ಪತ್ರೆಯಲ್ಲಿ ಪರಿಚಯ ಆಗಿದ್ದು ಆಗ ಫಿರ್ಯಾದುದಾರರಲ್ಲಿ ಆತನು ನಾನು ಶೇಖರ ಬಳೆಗಾರ ಕಟ್ಟಬೆಲ್ತೂರು ಪ್ರಭಾವಿ ರಾಜಕಾರಣಿ, ನಾನು ಹೇಳಿದ ಹಾಗೇ ಎಲ್ಲಾ ಸರಕಾರಿ ಅಧಿಕಾರಿಗಳು ಕೇಳುತ್ತಾರೆ ಎಂದು ಹೇಳಿದಾಗ ಫಿರ್ಯಾದುದಾರರು ಅವರಲ್ಲಿ ಯೊಗೀಶನ ವಿಷಯ ಹೇಳಿದಾಗ ಆರೋಪಿಯು ಫಿರ್ಯಾದುದಾರರಲ್ಲಿ ನಾನು ಶಂಕರ ನಾರಾಯಣ ಪೊಲೀಸ್ ರಿಗೆ ಹಾಗೂ ಪೇಪರನವರಿಗೆ ಹೇಳಿ ಮದುವೆ ಮಾಡಿಸುವುದಾಗಿ ಪೊಲೀಸರಿಗೆ ಹಾಗೂ ಪೇಪರನರಿಗೆ ಹಣ ಕೊಡಲು ಇದೇ ಎಂದು ಹೇಳಿ ಪಿರ್ಯಾದುದಾರಲ್ಲಿ ಪದೇ ಪದೇ ಒತ್ತಾಯ ಮಾಡಿ ದಿನಾಂಕ 14.04.2021 ರಂದು ಹಾಗೂ ದಿನಾಂಕ 23.04.2021 ರಂದು ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಶಂಕರ ನಾರಾಯಣ ಪೊಲೀಸ್ ಠಾಣೆಯ ಎದುರುಗಡೆ ವಕೀಲರ ಕಛೇರಿಯ ಬಳಿ 50,000/- ರೂ ಹಾಗೂ 25,000/- ರೂ ಪಡೆದುಕೊಂಡಿದ್ದು, ಆ ಬಳಿಕ ಪದೇ ಪದೇ ಹಣ ಕೊಡುವಂತೆ ಫಿರ್ಯಾದುದಾರರಿಗೆ ಒತ್ತಾಯ ಮಾಡಿದಾಗ ಅವರು ಹಣ ಇಲ್ಲ ಎಂದು ಹೇಳಿದಕ್ಕೆ , ನಿನ್ನ ವಿಷಯವನ್ನು ಪೇಪರಿಗೆ ಹಾಕಿ ಮರ್ಯಾದೆ ತೆಗೆಯುತ್ತೆನೆ, ಎಂದು ಹೇಳಿ ಬೆದರಿಕೆ ಹಾಕಿ ದಿನಾಂಕ 02.07.2021 ರಂದು ಪೇಪರನವ ರಿಗೆ ಕೊಡಲು ಇದೆ ಹಣಕೊಡು ಎಂದು ಹೇಳಿ ಪುನ ಕೊಟೇಶ್ವರ ಎನ್,ಆರ್ ಆಚಾರ್ಯ ಆಸ್ಪತ್ರೆಯ ಎದುರಗಡೆ ಫಿರ್ಯಾಧುದಾರರಿಂದ 20,000/- ರೂ ಹಣ ಪಡೆದು ಕೊಂಡಿರುತ್ತಾನೆ, ಅಲ್ಲದೆ ಪುನ ಪುನ: ಹಣ ಕೊಡುವಂತೆ ಹೇಳಿದ್ದು, ಹಣ ಇಲ್ಲ ಎಂದು ಹೇಳಿದಕ್ಕೆ ಇನ್ನು 1 ಲಕ್ಷ ಹಣ ಕೊಡದೇ ಇದ್ದರೆ ಪೇಪರನವರಿಗೆ ಹಾಗೂ ಪೊಲೀಸ್ ರಿಗೆ ಹೇಳಿ ನಿನ್ನಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ: 75/2021 ಕಲಂ: 384,506 ಭಾ.ಧಂ.ಸಂ ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 11-07-2021 11:08 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080