ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಪಡುಬಿದ್ರಿ: ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ ಚಂದ್ರಶೇಖರ ಶೆಟ್ಟಿ ಇವರು ಫಲಿಮಾರಿನಲ್ಲಿ ಜನರಲ್ ಸ್ಟೋರ್  ಮತ್ತು ದಿನ ಪತ್ರಿಕೆಯನ್ನು ಅಂಗಡಿ,ಶಾಪ್,ಮನೆಗಳಿಗೆ  ಹಾಕುವ ಕೆಲಸ ಮಾಡಿಕೊಂಡಿದ್ದು, ದಿನಾಂಕ 10.06.2022 ರಂದು ಬೆಳಿಗ್ಗೆ ಪಲಿಮಾರಿನಿಂದ ಪಲಿಮಾರು ಬ್ರಿಡ್ಜ್‌ ಕಡೆಗೆ ಪೇಪರ್‌ ಹಾಕಿದ  ಹಣ ಪಡೆಯಲು ಪಿರ್ಯಾದಿದಾರರು ತನ್ನ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಸಮಯ ಸುಮಾರು 08.30 ಗಂಟೆಗೆ ಪಲಿಮಾರು ಕೋಟೆ ಹೌಸ್‌ ಎಂಬಲ್ಲಿ ಕರ್ನಿರೆ ಕಡೆಯಿಂದ  KA 19-AC-9955 ನಂಬ್ರದ ಟಿಪ್ಪರ್ ಲಾರಿಯನ್ನು  ಅದರ ಚಾಲಕ ರೋಣಪ್ಪ ಗದಗ ಎಂಬವನು ಅತಿ ವೇಗ ಮತ್ತು ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು  ಕಾರೊಂದನ್ನು ಓವರ್‌ ಟೇಕ್‌ ಮಾಡಿ ಪಿರ್ಯಾದಿದಾರರ  ಮೋಟಾರು ಸೈಕಲ್ ನ  ಮುಂದಿನಿಂದ  ಹೋಗುತ್ತಿದ್ದ KA 19 Y 9681  ನಂಬ್ರದ  ಬೈಕಿಗೆ  ಡಿಕ್ಕಿ ಹೊಡೆದಿದ್ದುಅಪಘಾತದಿಂದ  ಬೈಕ್‌ ಸವಾರ ಕರ್ನೀರೆಯ  ನಿಶಿತ್‌ ಶೆಟ್ಟಿ ಎಂಬವರು  ಬೈಕ್‌ ಸಮೇತ ರಸ್ತೆಗೆ ಬಿದ್ದು  ಹಣೆಗೆ ಮತ್ತು  ಎಡ ಕಾಲಿಗೆ  ಗಾಯಗೊಂಡಿದ್ದು, ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 73/2022 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿ ಕೆ ದಯಾನಂದ ಹವಾಲ್ದಾರ್ ಇವರು 1 ನೇ ಆರೋಪಿತ ಆಶಾಲತಾ ರನ್ನು 1989 ರಲ್ಲಿ ಮದುವೆಯಾಗಿದ್ದು  ಅವರು  ದುಬೈ ಏರ್ ಪೋರ್ಟ ನಲ್ಲಿ  2021  ಸಪ್ಟಂಬರ್ ತನಕ  ಕರ್ತವ್ಯ ನಿರ್ವಹಿಸಿಕೊಂಡಿದ್ದು  1 ನೇ ಅಪಾದಿತೆ 1990 ರಿಂದ 2003-04  ರ ತನಕ ಪಿರ್ಯಾದಿದಾ ರರ ಜೊತೆ ಯಲ್ಲಿದುಬೈಯಲ್ಲಿ ವಾಸ್ತವ್ಯವಿದ್ದು ನಂತ್ರದಲ್ಲಿ  1 ನೇ ಅಪಾದಿತಳು ಕುಂದಾಪುರ ಚರ್ಚ ರಸ್ತೆಯಲ್ಲಿರುವ  ಪಿರ್ಯಾದಿದಾರ ರ ಮನೆಯಲ್ಲಿ ವಾಸ್ತವ್ಯ ವಿದ್ದು ಅವರಿಗೆ ಯಾವುದೇ ಸೊತ್ತುಗಳಾಗಲಿ ಆದಾಯದ ಮೂಲಗಳಾಗಲಿ  ಇರುವುದಿಲ್ಲ 1 ನೇ ಅಪಾದಿತನನ್ನು ಅವಲಂಬಿಸಿ ಜೀವನ ನೆಡಸಿಕೊಂಡಿರುವುದಾಗಿದೆ. ಹೀಗಿರುತ್ತಾ  ಪಿರ್ಯಾದಿದಾರರ  ಉಳಿತಾಯದ ಹಣ ದಿಂದ ಖರೀದಿಸಿದ  ಸುಮಾರು 1 ಕೋಟಿ  ಮೌಲ್ಯದ ಚಿನ್ನಾ ಮತ್ತು ಬೆಳ್ಳಿಯ ಒಡವೆಗಳನ್ನು  ಪಿರ್ಯಾದಿದಾರರು ಮತ್ತು  1 ನೇ  ಅಪಾದಿತರು ಜಂಟಿ ಖಾತೆಯಲ್ಲಿ ಕುಂದಾಪುರ ಕೆನರಾ  ಬ್ಯಾಂಕಿನ ಶಾಖೆಯಲ್ಲಿ  ಲಾಕರ್  ನಂ 323 ರಲ್ಲಿ ಭದ್ರತೆಯಲ್ಲಿರಿಸಿದ್ದಾಗಿದೆ.  ಇತ್ತೀಚೆಗೆ ಪಿರ್ಯಾದಿದಾರರು 1 ನೇ ಅಪಾದಿತರ ಹೆಸರಿನಲ್ಲಿ ಮಾಡಿದ ಎಲ್ ಐ ಸಿ ಭಾಂಡ್  ಅವಧಿ ಮುಗಿದು  ಅದರಲ್ಲಿ 1.93.899   ಹಣ ಬಂದಿದ್ದು  ಅದನ್ನು ಪಿಕ್ಷೆಡ್ ಡೆಪಾಸಿಟ್ ಇಡುವಂತೆ ಪಿರ್ಯಾದಿದಾರರು ಸೂಚಿಸಿದ್ದು ಈ ವಿಚಾರದಲ್ಲಿ ಅವರೊಳಗೆ ಬಿನ್ನಾಬಿಪ್ರಾಯ ಉಂಟಾಗಿ ಪಿರ್ಯಾದಿದಾರರಿ ಗೆ  ತಿಳಿಸದೆ 1,90.000/- ಹಣ ವನ್ನು 1 ನೇ ಅಪಾದಿತ ಬ್ಯಾಂಕ್ ನಿಂದ ಹಿಂದಕ್ಕೆಪಡೆದಿರುತ್ತಾಳೆ, 1 ನೇ ಅಪಾದಿತಳು ಪಿರ್ಯಾದಿದಾರರಿಗೆ ತಿಳಿಸದೆ ದಿನಾಂಕ 03/03/2022ರಂದು  ಬ್ಯಾಂಕ್ ನ ಲಾಕ ರ್ ತೆಗೆದು ಅದರ ಲ್ಲಿ ಎಲ್ಲಾ ಚಿನ್ನಾಭರ ಣಗಳನ್ನು ಬೇರೆಕಡೆ ಸಾಗಿಸಿದ್ದು 2 ನೇ ಆಪಾದಿತ ಲಕ್ಷ್ಮೀಶ  ಹವಾಲ್ದಾರ್ ಮತ್ತು 3 ನೇ ಅಪಾದಿತ ಎನ್ ನಾಗೇಶ ರಾವ್ ಇವರು  ಕಳವು ಮಾಲೆಂದು  ತಿಳಿದು ಅದನ್ನು ಬಚ್ಚಿಡಲು ಸಹಕಾರ ನೀಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 59/2022 ಕಲಂ: 379.109.112.414 R/W 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ಆರೋಪಿತ 1) ಶ್ರೀಮತಿ ಸುಮತಿ ಶೆಟ್ಟಿ,, ಗಂಡ: ಸಂಜಿವ ಶೆಟ್ಟಿ, 2) ದಿನೇಶ ಶೆಟ್ಟಿ.ತಂದೆ: ಸಂಜೀವ ಶೆಟ್ಟಿ. 3) ಶಾರದಾ ಶೆಟ್ಟಿ. ಗಂಡ: ದಿನೇಶ ಶೆಟ್ಟಿ ವಾಸ, ಎಲ್ಲರೂ: ಕಾಡುಹೊಳೆ, ಮರ್ಣೆ ಗ್ರಾಮ, ಕಾರ್ಕಳ ಇವರಿಗೂ ಫಿರ್ಯಾದಿ ಹರೀಶ ನಾಯ್ಕ ಇವರಿಗೂ ಜಾಗದ ಗಡಿ ವಿಚಾರದಲ್ಲಿ ತಕರಾರು ಇದ್ದು, ಆರೋಪಿತರು ಅವರ ಜಾಗದ ತೆಂಗಿನ ಹಾಗೂ ಅಡಿಕೆ ಮರದ ಫಲವನ್ನು ಹೀನ ಜಾತಿಯವನಾದ ನೀನು ಅನುಭವಿಸುತ್ತಿದ್ದಿ ಎಂದು ಫಿರ್ಯಾದುದಾರರಿಗೆ ಮೂದಲಿಸುತ್ತಿದ್ದು, ಜಾಗದ ತಕರಾರು ಕಾರಣದಿಂದ ದಿನಾಂಕ 09.06.2022 ರಂದು 15-00 ಗಂಟೆಗೆ ಆರೋಪಿತರು ಫಿರ್ಯಾದುದಾರರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದುದಾರರಿಗೆ, ಅವರ ಹೆಂಡತಿ ಸವಿತ ಮತ್ತು ಅಣ್ಣ ಬಾಲಕೃಷ್ಣರವರನ್ನುದ್ದೇಶಿಸಿ’ ವಾಚ್ಯವಾಗಿ ಬೈದು ನೀವು ಕಟ್ಟಿದ ಗೋಡೆಯನ್ನು ಜೆಸಿಬಿಯಿಂದ  ದೂಡಿ ಹಾಕುತ್ತೇವೆ ನಿಮ್ಮೆಲ್ಲರ ಕೈಕಾಲು ಮುರಿದು ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ.  ಈ ಸಮಯ ಅಲ್ಲಿಗೆ ಬಂದ ಫಿರ್ಯಾದುದಾರರ ಅಕ್ಕ ಸರಸ್ವತಿ, ಭಾವ ಕೃಷ್ಣ ನಾಯ್ಕ, ಅಳಿಯ ಜಯಕುಮಾರ್‌, ಅವರ ಹೆಂಡತಿ ಹೇಮಲತಾ ಇವರಿಗೂ ‘ಅವಾಚ್ಯ  ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 18/2022 ಕಲಂ: 447, 504, 506 ಜೊತೆಗೆ 34 ಐಪಿಸಿ, ಮತ್ತು ಕಲಂ: 3(1)(r), (s), 3(2)(va) Sc/St POA Ammendment Act-2015 ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 11-06-2022 10:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080