ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕಾರ್ಕಳ: ದಿನಾಂಕ 11/06/2022 ರಂದು ಬೆಳಿಗ್ಗೆ 08 :45 ಗಂಟೆಗೆ ಕಾರ್ಕಳ ತಾಲೂಕು, ಮಾಳ ಗ್ರಾಮದ ಮಾಳ ಚೆಕ್ ಪೊಸ್ಟ್ ನಿಂದ ಸುಮಾರು 1 ಕಿ.ಮೀ ದೂರ ಮಾಳದಿಂದ ಕಳಸ ಕುದ್ರೆಮುಖ ಕಡೆ ಹಾದು ಹೋಗುವ ರಾಷ್ಟೀಯ ಹೆದ್ದಾರಿಯಲ್ಲಿ ಪಿರ್ಯಾದಿ ತ್ರಿಶಾಲ್ ಇವರು ಅವರ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಐಮನ್ ರವರನ್ನು ಕುಳ್ಳಿರಿಸಿ ಕಳಸಕ್ಕೆ ಪ್ರವಾಸಕ್ಕೆಂದು ಸವಾರಿ ಮಾಡಿಕೊಂಡು ಹೋಗುವಾಗ ಅವರ ಮುಂದುಗಡೆಯಿಂದ ಅವರ ಸ್ನೇಹಿತನಾದ  ಮಖರೇಶರವರು ಅವರ ಬಾಬ್ತು  KA-47-S-6027 ನೇ ಮೋಟಾರ್ ಸೈಕಲನ್ನು ಮಾಳದಿಂದ ಕಳಸ ಕುದ್ರೆಮುಖ ಕಡೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ KA-01-AH-9475  ನೇ ಕಾರಿನ ಚಾಲಕನು ಕಾರನ್ನು ಕಳಸ-ಎಸ್.ಕೆ ಬಾರ್ಡರಿನಿಂದ ಮಾಳ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ತಿರುವಿನಲ್ಲಿ ತೀರಾ ಬಲಕ್ಕೆ ಚಲಾಯಿಸಿ ಮಖರೇಶರವರು ಸವಾರಿ ಮಾಡುತ್ತಿದ್ದ KA-47-S-6027 ನೇ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಮಖರೇಶ ರವರು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಮಖರೇಶರವರ ಬಲ ಕಾಲಿಗೆ ತೀವೃ ರೀತಿಯ ಗಾಯವಾಗಿ, ಬಲಕೈಗೆ ತರಚಿದ ಗಾಯ ಆಗಿ, ಕಾರ್ಕಳದ ನಿಟ್ಟೆ ಗಾಜ್ರಿಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 82/2022 ಕಲಂ 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಫಿರ್ಯಾದಿ ಶೇಖರ ಪೂಜಾರಿ ಇವರ ಅಣ್ಣನಾದ ಅಣ್ಣಯ್ಯ ಪೂಜಾರಿ (55) ರವರು ಕುಡಿತದ ಚಟ ಹೊಂದಿದ್ದು  ನಿನ್ನೆ ದಿನಾಂಕ:10-06-2022 ರಂದು ರಾತ್ರಿ 20:30 ಗಂಟೆ ಸಮಯಕ್ಕೆ ಊಟ ಮಾಡಿ ಮಲಗಿದ್ದು ದಿನಾಂಕ:11-06-2022 ರಂದು ಬೆಳಿಗ್ಗೆ 06:00 ಗಂಟೆಗೆ ಫಿರ್ಯಾದಿದಾರರ ಅಳಿಯ ಗೋಪಾಲ ಪೂಜಾರಿಯವರು ಅಣ್ಣಯ್ಯ ಪೂಜಾರಿಯವರ ಕೋಣೆಗೆ ಹೋದಾಗ ಮಲಗಿದಲ್ಲಿ ಇಲ್ಲದೇ ಇದ್ದುದನ್ನು ಕಂಡು ಗಾಬರಿಗೊಂಡು ಹುಡುಕಾಡಿದಲ್ಲಿ ಮನೆಯ ಸಮೀಪ ಇರುವ ಒಂದು ಶೆಡ್ಡಿನ ಒಳಗಡೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡು ಬಂದಿರುತ್ತದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 11-06-2022 05:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080