ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಪಡುಬಿದ್ರಿ: ಪಿರ್ಯಾದಿದಾರರಾದ ಶ್ರೀಮತಿ ಅನಿತಾ ಕೆ.ಎಸ್‌ ಮನೆ ನಂಬ್ರ 5-52, ಹೊಸಗದ್ದೆ ಹೌಸ್‌, ಸೋಣಂಗೇರಿ ಅಂಚೆ, ಜಾಲ್ಸೂರು ಗ್ರಾಮ,  ಸುಳ್ಯ ತಾಲೂಕು ಇವರು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಕಾನ್ಸಟೇಬಲ್‌ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ದಿನಾಂಕ 10/06/2021 ರಂದು ಬೆಳಿಗ್ಗೆ 06:00 ಗಂಟೆಯಿಂದ 11:00 ಗಂಟೆಯವರೆಗೆ ಪಡುಬಿದ್ರಿ ಪೇಟೆಯಲ್ಲಿ ಲಾಕ್‌ಡೌನ್‌ ಬಗ್ಗೆ ಬಂದೋಬಸ್ತ ಕರ್ತವ್ಯ ನಿರ್ವಹಿಸಿ ಬೆಳಿಗ್ಗಿನ ಉಪಹಾರದ ಬಗ್ಗೆ ಕಂಚಿನಡ್ಕದಲ್ಲಿರುವ ವಸತಿ ಗೃಹಕ್ಕೆ ತೆರಳಲು ಠಾಣೆಯಿಂದ KA-21-Y-5901 ನೇ ನಂಬ್ರದ ಹೋಂಡಾ ಆಕ್ಟಿವಾ ಸ್ಕೂಟಿಯನ್ನು ಚಲಾಯಿಸಿಕೊಂಡು ಹೊರಟು 11:10 ಗಂಟೆಗೆ ಪಡುಬಿದ್ರಿ ಪೇಟೆಯ ಕಾರ್ಕಳ ಜಂಕ್ಷನ್ ನಲ್ಲಿ ಕಾರ್ಕಳ ರಸ್ತೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು- ಉಡುಪಿ ನಡುವಿನ ಏಕಮುಖ ರಸ್ತೆಯನ್ನು ದಾಟಲು ರಸ್ತೆಯ ಪಶ್ಚಿಮ ಅಂಚಿನ ಬಳಿ ಸ್ಕೂಟಿಯನ್ನು ನಿಲ್ಲಿಸಿದಾಗ  ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA-03-AE-2613 ನೇ ನಂಬ್ರದ ಅಂಬುಲೆನ್ಸ್‌ ನ್ನು ಚಾಲಕ ಅಬ್ದುಲ್ ರಹೀಮಾನ್ ಎಂಬವರು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಕ್ಕೆ ಚಲಾಯಿಸಿ ಸ್ಕೂಟಿಯ ಎದುರುಗಡೆ ಚಕ್ರದ ಬಳಿ  ಬಲಬದಿಗೆ ಡಿಕ್ಕಿ ಹೊಡೆದು ನಂತರ  ಅಂಬುಲೆನ್ಸ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಜಂಕ್ಷನ್‌ನ ಉತ್ತರ ಬದಿಯ ಡಿವೈಡರ್ ಬಳಿ ನೆಟ್ಟಿದ್ದ ಟ್ರಾಫಿಕ್‌ ಪಾಯಿಂಟ್‌ ಪೋಸ್ಟ್‌ಗೆ ಡಿಕ್ಕಿ ಹೊಡೆದು ಡಿವೈಡರ್ ಹತ್ತಿ ನಿಂತಿರುತ್ತದೆ. ಈ ಅಪಘಾತದ ಪರಿಣಾಮ ಅನಿತಾ ಕೆ.ಎಸ್‌ ರವರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಎಡಕಾಲಿನ ಮತ್ತು ಬಲಕಾಲಿನ ಮೊಣಗಂಟಿಗೆ, ಬಲ ಸೊಂಟಕ್ಕೆ ಮತ್ತು ಬಲಭುಜಕ್ಕೆ ಒಳನೋವು ಆಗಿದ್ದು, ಪಡುಬಿದ್ರಿ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಅಪಘಾತದಿಂದ ಎರಡೂ ವಾಹನಗಳು ಮತ್ತು ಟ್ರಾಫಿಕ್ ಪಾಯಿಂಟ್  ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 55/2021 ಕಲಂ:  279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕೋಟ: ಪಿರ್ಯಾದಿದಾರರಾದ ಕರುಣಾಕರ ಶೆಟ್ಟಿ (45) ತಂದೆ: ನಾರಾಯಣ ಶೆಟ್ಟಿ, ವಾಸ:ಶ್ರೀನಿವಾಸ ಕೃಪಾ, ಗಾವಳಿ, ಹಳ್ಳಾಡಿ ಹರ್ಕಾಡಿ  ಗ್ರಾಮ ಕುಂದಾಪುರ ಇವರು ದಿನಾಂಕ 09/06/2021 ರಂದು ತನ್ನ KA-20-B-3489 ಗೂಡ್ಸ್  ವಾಹನದಲ್ಲಿ  ತನ್ನ ಸ್ನೇಹಿತನಾದ ವೆಂಕಪ್ಪನ ಜೊತೆ ಬಾಡಿಗೆ ನಿಮಿತ್ತ ಮಣಿಪಾಲಕ್ಕೆ ಹೋಗಿ ವಾಪಾಸ್ಸು ಬಾರ್ಕೂರಿನಿಂದ ಬಿದ್ಕಲ್ ಕಟ್ಟೆ ಗೆ ಹಾದುಹೋಗುವ ಮುಖ್ಯರಸ್ತೆಯಲ್ಲಿ ಬರುತ್ತಿರುವಾಗ ಸಮಯ ಸುಮಾರು 10:30 ಘಂಟೆಗೆ ಕುಂದಾಪುರ ತಾಲೂಕು ಹಳ್ಳಾಡಿ ಹರ್ಕಾಡಿ ಗ್ರಾಮದ ಚಂದ್ರಾವತಿ ಆಚಾರ್ತಿರವರ ಮನೆಯ ಎದುರು ತಿರುವಿನ ಬಳಿ ಬರುವಾಗ ಎದುರಿನಿಂದ ಬಿದ್ಕಲ್ ಕಟ್ಟೆ ಕಡೆಯಿಂದ KA-20–D-3442  ಗೂಡ್ಸ್ ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ತಿರುವಿನ ಬಳಿ ರಸ್ತೆಯ ಬಲಭಾಗಕ್ಕೆ ಬಂದ ಕಾರಣ ಕರುಣಾಕರ ಶೆಟ್ಟಿ ರವರ ಗೂಡ್ಸ್ ವಾಹನ ಆರೋಪಿಯ ಗೂಡ್ಸ್ ವಾಹನದ ಎಡ ಬದಿ ಬಾಗಿಲಿಗೆ ಬಡಿದಿರುತ್ತದೆ. ಈ ಅಪಘಾತದಿಂದ  ಕರುಣಾಕರ ಶೆಟ್ಟಿ ರವರ ಮುಖದ ಬಲಭಾಗ, ತಲೆ ಬಳಿ ರಕ್ತಗಾಯವಾಗಿದ್ದು ಹಾಗೂ ಬಲಕೈಯ  ಮೊಣಗಂಟಿನ ಬಳಿ ರಕ್ತ ಗಾಯವಾಗಿರುತ್ತದೆ ಹಾಗೂ ಅವರ ಜೊತೆ ಇದ್ದ ವೆಂಕಪ್ಪನವರಿಗೂ  ಹಣೆಯ ಬಲ ಭಾಗದ ಬಳಿ ರಕ್ತ ಗಾಯವಾಗಿರುತ್ತದೆ. KA-20-D-3442 ವಾಹನದ ಚಾಲಕ ಆರೋಪಿಗೆ ಯಾವುದೇ ಗಾಯವಾಗಿರುವುದಿಲ್ಲ. ಸ್ಥಳದಲ್ಲಿದ್ದ ಕರುಣಾಕರ ಶೆಟ್ಟಿ ರವರ ಪರಿಚಯದ ಅವಿನಾಶನು ಕರುಣಾಕರ ಶೆಟ್ಟಿ ಇವರನ್ನು ಹಾಗೂ ವೆಂಕಪ್ಪನನ್ನು ಕೋಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆಗೆ ಚಿಕಿತ್ಸೆಗೆ  ಕರೆತಂದಿದ್ದು  ಅಲ್ಲಿ ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಅಪಘಾತದಿಂದ ಕರುಣಾಕರ ಶೆಟ್ಟಿ ರವರ ವಾಹನ ಸಂಪೂರ್ಣ ಜಖಂಗೊಂಡು ಆರೋಪಿ ವಾಹನದ ಎಡ ಬದಿ ಬಾಗಿಲು ಜಖಂಗೊಂಡಿರುತ್ತದೆ. ಆರೋಪಿ ರಾಘವೇಂದ್ರ ಆಸ್ಪತ್ರೆ ವೆಚ್ಚವನ್ನು ನೀಡುವುದಾಗಿ ತಿಳಿಸಿದ್ದು ಆದರೆ ಯಾವುದೇ  ವೆಚ್ಚವನ್ನು ನೀಡದೇ ಇರುವುದರಿಂದ ಠಾಣೆಗೆ ಬಂದು ದೂರು ನೀಡಲು ತಡವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 117/2021 ಕಲಂ:  279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ: ದಿನಾಂಕ 05/06/2021 ರಂದು ಬೆಳಿಗ್ಗೆ 09:30 ಗಂಟೆಗೆ ಪಿರ್ಯಾದಿದಾರರಾದ ಸ್ವಸ್ತಿಶ್ರೀ (21) ತಂದೆ: ವಿಜಯ ಕುಮಾರ. ವಾಸ: ರತ್ನವತಿ ನಿಲಯ, ಗೋಳಿದಿಂಡಿ, ಇರ್ವತ್ತೂರು ಗ್ರಾಮ. ಕಾರ್ಕಳ ಇವರು ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ, ಸಾಣೂರು ಪಂಚಾಯ್ತಿ ವ್ಯಾಪ್ತಿಯ ಹಿಂದೂ ರುದ್ರ ಭೂಮಿಯ ಹತ್ತಿರ  ರಸ್ತೆಯ ಎಡಬದಿಯ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ತನ್ನ ಹಿಂದಿನಿಂದ ಅಂದರೆ ಸಾಣೂರು ಮುರತ್ತಂಗಡಡಿ ಕಡೆಯಿಂದ ಇರ್ವತ್ತೂರು ಕಡೆಗೆ KA-20-X-3675 ನೇ ನಂಬ್ರದ ಮೋಟಾರ್‌ ಸೈಕಲ್‌ ಸವಾರ ಪ್ರದೀಪ ಕುಮಾರ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಸವಾರಿ ಮಾಡಿಕೊಂಡು ಬಂದು ಸ್ವಸ್ತಿಶ್ರೀ ರವರ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ವಸ್ತಿಶ್ರೀ ರವರ ಬಲಕೈಯ ಮೂಳೆ ಮುರಿತಗೊಂಡಿದಲ್ಲದೇ, ಬಲ ಕಾಲಿನ ಮೊಣಗಂಟಿಗೆ ಗುದ್ದಿದ ಒಳ ನೋವು ಆಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 77/2021 ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣಗಳು

  • ಪಡುಬಿದ್ರಿ: ಪ್ರಸ್ತುತ ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 14/06/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆ ಯಂತೆ ಅನಗತ್ಯವಾಗಿ ತೆರೆದ ಅಂಗಡಿಗಳ ತಪಾಸಣೆಯ ಬಗ್ಗೆ ಪ್ರಕಾಶ್ ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತ, ಕಾಪು ರವರು ದಿನಾಂಕ 10/06/2021 ರಂದು ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ರೌಂಡ್ಸ್ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 11:50 ಗಂಟೆಗೆ ಆರೋಪಿ ಶೇಕ್ ಸಿರಾಜ್ ರವರು ಘನ ಕರ್ನಾಟಕ ಸರಕಾರವು ಕೋವಿಡ್‌ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ಆರೋಪಿಯು ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿ ಕಾಪು ತಾಲೂಕು, ಹೆಜಮಾಡಿ ಗ್ರಾಮದ ಹೆಜಮಾಡಿ ಪೇಟೆಯಲ್ಲಿರುವ ಫ್ರೆಶ್ ಮಾರ್ಟ್‌ಸೂಪರ್ ಬಜಾರ್ ಅಂಗಡಿ ಯನ್ನು ತೆರೆದು ವ್ಯಾಪಾರ ಮಾಡುತ್ತಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 56/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 25/05/2021 ರಿಂದ ದಿನಾಂಕ 14/06/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಸಂತೋಷ ಬಿಪಿ ಪೊಲೀಸ್ ಉಪನಿರೀಕ್ಷಕರು ಕೋಟ ರವರು ದಿನಾಂಕ 10/06/2021 ರಂದು ಠಾಣಾ ರಾಜು ಬಿ  ಹಾಗೂ ಇಲಾಖಾ ವಾಹನ ಚಾಲಕನಾಗಿ ಮಂಜುನಾಥ ಇವರೊಂದಿಗೆ ಕುಂದಾಪುರ ತಾಲೂಕು ಹೊಂಬಾಡಿ ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಪೇಟೆ  ಬಳಿಯಲ್ಲಿ ತೆರಳಿ ಅವಶ್ಯ ವಸ್ತುಗಳ ಖರೀದಿಯ ಅಂಗಡಿಯನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 09:45 ಗಂಟೆಗೆ ಹುಣ್ಸೆಮಕ್ಕಿ ಪೇಟೆಯಲ್ಲಿ ರಮೇಶ ಎಂಬವರ ಫ್ಯಾನ್ಸಿ ವಸ್ತುಗಳ ವ್ಯಾಪಾರದ ಅಂಗಡಿಯ ಮಾಲೀಕ ಆರೋಪಿ ರಮೇಶ ರವರು ತನ್ನ ಫ್ಯಾನ್ಸಿ ಅಂಗಡಿಯನ್ನು ತೆರೆದುಕೊಂಡಿರುತ್ತಾರೆ. ಮಾನ್ಯ  ಕರ್ನಾಟಕ ಸರಕಾರವು ಕೋವಿಡ್‌ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಫ್ಯಾನ್ಸಿ ಸಾಮಾನುಗಳ ಅಂಗಡಿಯನ್ನು ತೆರೆದುಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 115/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 25/05/2021 ರಿಂದ ದಿನಾಂಕ 14/06/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಸಂತೋಷ ಬಿಪಿ ಪೊಲೀಸ್ ಉಪನಿರೀಕ್ಷಕರು ಕೋಟ ರವರು ದಿನಾಂಕ 10/06/2021 ರಂದು ಠಾಣಾ ರಾಜು ಬಿ ಹಾಗೂ ಇಲಾಖಾ ವಾಹನ ನಂಬ್ರ ಕೆಎ-20- ಜಿ-238 ರಲ್ಲಿ ಚಾಲಕನಾಗಿ ಮಂಜುನಾಥ ಇವರೊಂದಿಗೆ ಕುಂದಾಪುರ ತಾಲೂಕು ಹಾರ್ದಳ್ಳಿ ಮಂಡಳ್ಳಿ   ಗ್ರಾಮದ ಬಿದ್ಕಲ್ ಕಟ್ಟೆ ಪೇಟೆ ಯಲ್ಲಿ ತೆರಳಿ ಅವಶ್ಯ ವಸ್ತುಗಳ ಖರೀದಿಯ ಅಂಗಡಿಯನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 10:00 ಗಂಟೆಗೆ ಬಿದ್ಕಲ್ ಕಟ್ಟೆ ಪೇಟೆಯಲ್ಲಿ ಸೀತಾರಾಮ ಎಂಬವರ ಕಾಳಿಕಾಂಬಾ ಗ್ಲಾಸ್ ಮತ್ತು ಫ್ಲೈವುಡ್ ಸಾಮಾಗ್ರಿಗಳ ವ್ಯಾಪಾರದ ಅಂಗಡಿಯ ಮಾಲೀಕ ಆರೋಪಿ ಸೀತಾರಾಮ ಆಚಾರಿ ರವರು ತನ್ನ ಗ್ಲಾಸ್ ಮತ್ತು ಫ್ಲೈವುಡ್ ಅಂಗಡಿಯನ್ನು ತೆರೆದುಕೊಂಡಿರುತ್ತಾರೆ. ಮಾನ್ಯ  ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಗ್ಲಾಸ್ ಮತ್ತು ಪ್ಲೈವುಡ್ ಸಾಮಾಗ್ರಿಗಳ ಅಂಗಡಿಯನ್ನು ತೆರೆದುಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 116/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಫು: ಪಿರ್ಯಾದಿದಾರರಾಧ ಅಖಿಲಾ ಅನ್ವರ್ (51) ಗಂಡ: ಅನ್ವರ್ ಹುಸೇನ್ ವಾಸ: ಹಯತ್ತುಲ್ ಮೊಯಿದ್ದೀನ್ ಜುಮ್ಮಾ ಮಸೀದಿ ಬಳಿ  ಪಕೀರ್ಣಕಟ್ಟೆ ಮಲ್ಲಾರು, ಕಾಪು ತಾಲೂಕು ಇವರು 1ನೇ ಆರೋಪಿ ಅನ್ವರ್ ಹುಸೇನ್ ಇತನನ್ನು ದಿನಾಂಕ 29/04/1982 ರಲ್ಲಿ ಮದುವೆಯಾಗಿ 3 ಮಕ್ಕಳು ಇರುತ್ತಾರೆ. ಅಖಿಲಾ ಅನ್ವರ್ ರವರು ಪ್ರಸ್ತುತ ಮಲ್ಲಾರು ಗ್ರಾಮದ ಪಕೀರ್ಣಕಟ್ಟೆಯಲ್ಲಿ ವಾಸಮಾಡಿಕೊಂಡಿದ್ದು ಆರೋಪಿ1 ನೇ ಅನ್ವ್ ಹುಸೇನ್, 2 ಆರೀಪ್, 3 ಮಹಮ್ಮದ್ ಅನೀಝ್, 4 ಅಪ್ರಾ, 5 ಫಾರೂಕ್ ರವರು ಉದ್ಯಾವರದ ಒಂದೇ ಮನೆಯಲ್ಲಿ ವಾಸಮಾಡಿಕೊಂಡಿರುತ್ತಾರೆ.  ಅಖಿಲಾ ಅನ್ವರ್ ಇವರಿಗೆ 1ನೇ ಆರೋಪಿಯೊಂದಿಗೆ ಮದುವೆಯಾಗಿ 15 ವರ್ಷಗಳ ಬಳಿಕ ಇವರಿಗೆ ಗೊತ್ತಿಲ್ಲದೇ ಇನ್ನೊಂದು ಮದುವೆಯಾಗಿರುತ್ತಾರೆ. ತದ ನಂತರ ಅಖಿಲಾ ಅನ್ವರ್ ರವರು ಆರೋಪಿ 1ನೇಯವರ ಮನೆಗೆ ಹೋದಾಗ  ಆರೋಪಿ 2 ನೇಯವರು ಇನ್ನು ಮುಂದಕ್ಕೆ ಇಲ್ಲಿ ಬಂದರೆ  ನಿನ್ನ ಕೈಕಾಲು ಕಡಿದು ತುಂಡು ಮಾಡುವುದಾಗಿ ಬೆದರಿಕೆ ಹಾಕಿರುತ್ತಾಳೆ ಹಾಗೂ ಉಳಿದ ಆರೋಪಿಗಳು ಕೂಡಾ ಒಟ್ಟಾಗಿ ಅಖಿಲಾ ಅನ್ವರ್ ರವರಿಗೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ಬೈದು ಎಲ್ಲರೂ ಸೇರಿ ಮನೆಗೆ ಬಂದಲ್ಲಿ ಕೊಂದು ಹಾಕುವುದಾಗಿ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 102/2021 ಕಲಂ: 323 504 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 07/06/2021 ರಿಂದ ದಿನಾಂಕ 14/06/2021 ರವರೆಗೆ ಕೋವಿಡ್ 19 ಸೋಂಕು ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಗುರುನಾಥ ಬಿ. ಹಾದಿಮನಿ, ಪಿ.ಎಸ್.ಐ. ಬ್ರಹ್ಮಾವರ ಪೊಲೀಸ್ ಠಾಣೆ. ಇವರು ದಿನಾಂಕ 10/06/2021 ರಂದು ಇಲಾಖಾ ವಾಹನದಲ್ಲಿ ರೌಂಡ್ಸ್‌ಕರ್ತವ್ಯದಲ್ಲಿದ್ದಾಗ 33 ನೇ ಶಿರೂರು ಗ್ರಾಮದ ಬೀಟ್‌ಸಿಬ್ಬಂದಿ ಪಿಸಿ 1162 ನೇ ರವರು ಶಿರೂರು ಗ್ರಾಮದ ಮೂಡುಗುಡ್ಡೆ ಎಂಬಲ್ಲಿ ಹಾಡಿಯಲ್ಲಿ ವ್ಯಕ್ತಿಯೋರ್ವ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಅದರಂತೆ ಇವರು ಸದ್ರಿ ಸ್ಥಳಕ್ಕೆ ತಲುಪಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ಮಧ್ಯಾಹ್ನ 4:20 ಗಂಟೆಗೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ, ಓಡಿ ಹೋಗಲು ಯತ್ನಿಸಿದ್ದ ಆರೋಪಿ ದ್ಯಾವಣ್ಣ ನಾಯ್ಕ ಎಂಬವನನ್ನು ಹಿಡಿದು ವಿಚಾರಿಸಲಾಗಿ, ಆತನು ಸ್ವಂತ ಲಾಭಗೋಸ್ಕರ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯದ ಪ್ಯಾಕೇಟ್‌ಳನ್ನು ಮಾರಾಟ ಮಾಡುತ್ತಿರುವುದಾಗಿ ಹಾಗೂ ಸದ್ರಿ ಮದ್ಯದ ಪ್ಯಾಕೇಟ್‌ಗಳನ್ನು ಜಾನುವಾರುಕಟ್ಟೆ ಎಂಎಸ್‌ಐಎಲ್‌ ಅಂಗಡಿಯಿಂದ ಖರೀದಿಸಿ ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುವುದಾಗಿದೆ. ನಂತರ ಆತನ ಬಳಿ ಇದ್ದ  ರಟ್ಟಿನ ಬಾಕ್ಸ್‌ನಲ್ಲಿ ಮದ್ಯ ತುಂಬಿದ Mysore Lancer ಎಂಬ ಹೆಸರಿನ 180 ಎಂ.ಎಲ್. ನ 32 ಪ್ಯಾಕೇಟ್‌ಗಳು ಮದ್ಯದ ಅಂದಾಜು ಮೌಲ್ಯ 2240/- ರೂಪಾಯಿ ಹಾಗೂ ಆತ ಮದ್ಯ ಮಾರಾಟದಿಂದ ಸಂಗ್ರಹಿಸಿದ 1250/- ರೂಪಾಯಿ ನಗದು ಹಣವನ್ನು ಸ್ವಾದೀನ ಪಡಿಸಿಕೊಂಡು, ಅಲ್ಲದೇ ಆರೋಪಿಯು ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಯಾವುದೇ ಪರವಾನಿಗೆ ಇಲ್ಲದೇ ಮದ್ಯ ಮಾರಾಟ ಮಾಡಿದ್ದು, ಕೋವಿಡ್‌19 ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 117/2021 ಕಲಂ:269 ಐಪಿಸಿ & 32, 34 ಕೆಇ ಆ್ಯಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ 10/06/2021 ರಂದು ವಿನಯ ಕೊರ್ಲಹಳ್ಳಿ – ಪ್ರೊಬೇಷನರಿ ಪಿ.ಎಸ್‌.ಐ ಗಂಗೊಳ್ಳಿ ಪೊಲಿಸ್ ಠಾಣೆ ರವರು ನರಸಿಂಹ, ಮೌನೇಶ, ಅನಿತ ರವರೊಂದಿಗೆ 16:00 ಗಂಟೆಗೆ ಗಂಗೊಳ್ಳಿ ಗ್ರಾಮದ ಮೇಲ್‌ ಗಂಗೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಗಂಗೊಳ್ಳಿ ಮುಖ್ಯ ರಸ್ತೆಯಲ್ಲಿ KA-20-D-8385 ನೇ ಆಟೋರಿಕ್ಷಾ ಚಾಲಕ ಫಜಲು ರೆಹಮಾನ್ (31) ಎಂಬುವವನು ಸಕಾರಣವಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮೂಲಕ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವು ಕೋವಿಡ್-19 ತಡೆಗಟ್ಟಲು ಹೊರಡಿಸಿದ ಲಾಕ್‌ಡೌನ್ ಆದೇಶ/ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದು, ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಸೋಂಕು ಹರಡುವ ಸಂಭವ ಇದೆ ಎಂದು ತಿಳಿದೂ ನಿರ್ಲಕ್ಷತನ ತೋರಿದ್ದರಿಂದ ಪ್ರೊಬೇಷನರಿ ಪಿ.ಎಸ್‌.ಐ ವಿನಯ ಕೊರ್ಲಹಳ್ಳಿ ಯವರು ಆಪಾದಿತನ ವಾಹನವನ್ನು ವಶಕ್ಕೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 51/2021 ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-06-2021 10:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080