ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾದ ಸುಧಾಕರ ಶೆಟ್ಟಿ (52), ತಂದೆ:  ಕಾಳಪ್ಪ ಶೆಟ್ಟಿ, ವಾಸ:ಸಿದ್ದುಕೋಣ್‌ ಕುಳ್ಳಂಬಳ್ಳಿ ಕೆರಾಡಿ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರು  ಮತ್ತು ನೆರಕರೆಯ ನಿವಾಸಿಗಳಾದ ಸುಶೀಲ ಮತ್ತು ನಾಗರತ್ನ ರವರು ದಿನಾಂಕ 10/05/2023  ರಂದು  ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ  ಹಿನ್ನಲೆಯಲ್ಲಿ ಕೆರಾಡಿ  ಗ್ರಾಮ ಪಂಚಾಯತು ಕಟ್ಟಡದಲ್ಲಿ  ಇರುವ ಮತದಾನ ಕೇಂದ್ರಕ್ಕೆ ಮತದಾನ ಮಾಡಲು ಹೆಮ್ಮಕ್ಕಿ - ಕೆರಾಡಿ ರಸ್ತೆಯ ಬಲ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದಾಗ ಬೆಳಗ್ಗೆ 09:50 ಗಂಟೆಗೆ  ಕುಳ್ಳಂಬಳ್ಳಿ ಅರೆಕಲ್ಲು ಮನೆಯ ಸಮೀಪ ಪಿರ್ಯಾದಿದಾರರ  ಹಿಂದಿನಿಂದ ಬೆಳ್ಳಾಲ ಕಡೆಯಿಂದ  ಕೆರಾಡಿ ಕಡೆಗೆ  KA-20-ME-4018 ಮಾರುತಿ ಇಕೋ ಕಾರನ್ನು ಅದರ ಚಾಲಕ ಆರೋಪಿ ಕೃಷ್ಣ  ಕೊಠಾರಿ  ಅತೀ ವೇಗವಾಗಿ ದುಡುಕಿನಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಕಾರಿನ ವೇಗವನ್ನು  ನಿಯಂತ್ರಿಸಲಾಗದೇ  ಹತೋಟಿ ತಪ್ಪಿ ತೀರ ಬಲಕ್ಕೆ ಚಲಾಯಿಸಿ  ಮಣ್ಣು ರಸ್ತೆಯಲ್ಲಿ ನಡೆದುಕೊಂಡು  ಹೋಗುತ್ತಿದ ಸುಶೀಲ ಮತ್ತು ನಾಗರತ್ನರವರಿಗೆ  ಹಿಂಬದಿಯಿಂದ ಡಿಕ್ಕಿ ಹೊಡೆದು ಬಳಿಕ ಕವಲು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸುಶೀಲರವರಿಗೆ  ತಲೆಗೆ  ಮತ್ತು ಕೈ ಕಾಲುಗಳಿಗೆ  ಗಂಭೀರ ಸ್ವರೂಪದ  ರಕ್ತಗಾಯವಾಗಿ  ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಕುಂದಾಪುರ  ಸರಕಾರಿ  ಆಸ್ಪತ್ರೆಗೆ  ಚಿಕಿತ್ಸೆಗೆ  ಕರೆದುಕೊಂಡು ಹೋದಾಗ ವೈದ್ಯರು ಪರಿಕ್ಷೀಸಿ  ಚಿಕಿತ್ಸೆ  ಕರೆತರುವ ದಾರಿಯಲ್ಲಿ  ಮೃತಪಟ್ಟಿರುವುದಾಗಿ ಬೆಳಗ್ಗೆ 10:50 ಗಂಟೆಗೆ ದೃಢೀಕರಿಸಿರುತ್ತಾರೆ. ಗಾಯಳು ನಾಗರತ್ನರವರಿಗೆ  ಎಡಕಾಲು ಮತ್ತು ತುಟಿಗೆ ರಕ್ತಗಾಯ ಹಾಗೂ  ಬಲ ಕೈ , ಬಲ ತೂಡೆ  ಮತ್ತು ಬೆನ್ನಿಗೆ ಗುದ್ದಿದ ಒಳನೋವು ಉಂಟಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿ ರುತ್ತಾರೆ. ಹಾಗೂ ಆರೋಪಿ ಕಾರಿನಲ್ಲಿ ಪ್ರಯಾಣಿಸುತ್ತಿದ ದೇವೇಂದ್ರ ಮತ್ತು ಆರೋಪಿ ಕೃಷ್ಣ ಕೊಠಾರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2023 ಕಲಂ: 304(A) 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿಯಾ೯ದಿದಾರರಾದ ಟೆರೆನ್ಸ್‌ ಪಿರೇರಾ (54), ತಂದೆ:ದಿ. ಬಿದಾ ಕುಸ್‌ ಪಿರೇರಾ, ವಾಸ:”ಈಡನ್”‌ ಬೋಲ್ಜೆ ಉದ್ಯಾವರ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಅಣ್ಣ ಜೆರಲ್ಡ್‌ ಪಿರೇರಾ(65) ರವರು  ದಿನಾಂಕ 06/05/2023 ರಂದು ಬೆಳಿಗ್ಗೆ 10:00 ಮನೆಯಿಂದ ತನ್ನ ಸ್ಕೂಟರ್‌ ನಂಬ್ರ KA-20-EX-5918 ನೇದರಲ್ಲಿ ಹೊರಟು  ಪಡುಬಿದ್ರೆಯ ಡಾ. ಅಂಚನ್‌  ರವರ ಕ್ಲಿನಿಕ್‌ ಗೆ ತೆರಳಿ ತಮಗೆ ಅಗತ್ಯವಾದ ಔಷಧಿಯನ್ನು  ತೆಗೆದುಕೊಂಡು ಮರಳಿ ಮನೆಗೆ ಹೊರಟು ಕಾಪುವಿನ ಮಂಗಳೂರು-ಉಡುಪಿ ಸವಿ೯ಸ್‌ ರಸ್ತೆಯಲ್ಲಿ ಪಡುಬಿದ್ರೆ ಕಡೆಯಿಂದ ಕಟಪಾಡಿ ಕಡೆಗೆ ಬರುತ್ತಿರುವಾಗ ಮಧ್ಯಾಹ್ನ 1:20 ಗಂಟೆಗೆ ಕಾಪುವಿನ ಹಳೇ ತಾಲೂಕು ಕಛೇರಿ ಬಳಿ ತಲುಪುವಾಗ ಎದುರಿನಿಂದ ಅದೇ ರಸ್ತೆಯಲ್ಲಿ ಓವ೯ ಸ್ಕೂಟರ್‌ ಸವಾರನು ತನ್ನ ಸ್ಕೂಟರನ್ನು ಅತೀವೇಗ  ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಜೆರಾಲ್ಡ ರವರ ಸ್ಕೂಟರ್‌ ಗೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಸ್ಕೂಟರನ್ನು ನಿಲ್ಲಿಸದೇ ಹೋಗಿದ್ದು,  ಅಪಘಾತದ ಪರಿಣಾಮ ಜೆರಾಲ್ಡ್‌ ರವರು ಸ್ಕೂಟರ್‌ ಸಹಿತ ರಸ್ತೆಗೆ ಬಿದ್ದಿರುತ್ತಾರೆ.  ಅಪಘಾತದಿಂದ ಗಾಯಗೊಂಡ ಜೆರಾಲ್ಡ್‌ ರವರನ್ನು ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಜೆರಾಲ್ಡ್‌ ರವರನ್ನು ಪರೀಕ್ಷಿಸಿದ ವೈಧ್ಯರು  ಅವರ  ಎದೆಯ ಮೂಳೆ ಮುರಿತವಾಗಿರುವುದಾಗಿ, ಶ್ವಾಸಕೋಶಕ್ಕೆ ಹಾನಿಯಾಗಿರುವುದಾಗಿ ಹಾಗೂ ಸ್ಪೈನಲ್ ಕಾಡ್೯ ಬಳಿ ಮೂಳೆ ಬಿರುಕು ಬಂದಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 81/2023 ಕಲಂ: 279, 338 ಐಪಿಸಿ ಮತ್ತು ಕಲಂ:134(ಎ) (ಬಿ) ಐ.ಎಂ. ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮಾಲತೇಶ್ ಎಂ ಸಿ (33), ಎಫ್ ಎಸ್ ಟಿ -2 118 ಬೈಂದೂರು ವಿಧಾನಸಭಾ ಕ್ಷೇತ್ರ ಇವರು ದಿನಾಂಕ 10/05/2023 ರಂದು ವಿಧಾನ ಸಭಾ ಚುನಾವಣೆಯ ಪ್ರಯುಕ್ತ ಬೆಳಿಗ್ಗೆ 06:00 ಗಂಟೆಯಿಂದ  ಕರ್ತವ್ಯದಲ್ಲಿರುವಾಗ ಸಮಯ 12:30 ಗಂಟೆಗೆ ಚುನಾವಣಾ ಕಂಟ್ರೋಲ್ ರೂಮ್ ನಿಂದ ನಾವುಂದ ಗ್ರಾಮದ ಅರೆಹೊಳೆ ಕ್ರಾಸ್ ಆಶೀರ್ವಾದ ಬಾರ್ ಹಿಂದುಗಡೆ ಹಾಡಿಯಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ತಮ್ಮ ತಂಡದವರೊಂದಿಗೆ ಕಾರಿನಲ್ಲಿ ಮಧ್ಯಾಹ್ನ 01:00 ಗಂಟೆಗೆ ಸ್ಥಳಕ್ಕೆ ತಲುಪಿ ಅಲ್ಲಿ ಹಾಡಿಯೊಳಗೆ ಹೋಗಿ ನೋಡಲಾಗಿ 2 ರಟ್ಟಿನ ಬಾಕ್ಸ್ ನಲ್ಲಿ ಮಧ್ಯವನ್ನು ಇಟ್ಟುಕೊಂಡು ಒಬ್ಬ ವ್ಯಕ್ತಿ ನಿಂತಿದ್ದು ಆತನು ಪಿರ್ಯಾದಿದಾರರನ್ನು ಹಾಗೂ ತಂಡದವರನ್ನು  ದೂರದಿಂದ ನೋಡಿ ಬಾಕ್ಸನ್ನು ಬಿಟ್ಟು ಓಡಿ ಹೋಗಿದ್ದು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಆತ ಸಿಗದೇ ತಪ್ಪಿಸಿಕೊಂಡಿರುತ್ತಾನೆ. ನಂತರ  2 ಬಾಕ್ಸ ಗಳನ್ನು ಪರಿಶೀಲಿಸಲಾಗಿ ಒಂದು ಬಾಕ್ಸನಲ್ಲಿ  TUBORG Premium Strong ಕಂಪನಿಯ 650 ಎಮ್ ಎಲ್ ನ 12 ಬಿಯರ್ ಬಾಟಲಿಗಳು ಇದ್ದು ಅದರ ಮೌಲ್ಯ 1920/- ರೂಪಾಯಿ ಆಗಿದ್ದು, ಮತ್ತೊಂದು ರಟ್ಟಿನ ಬಾಕ್ಸ್ ನಲ್ಲಿ Black Fort Super Strong ಕಂಪನಿಯ 650 ಎಮ್ ಎಲ್ ನ 8  ಬಿಯರ್ ಬಾಟಲಿಗಳು ಇದ್ದು ಅದರ  ಮೌಲ್ಯ 1080/- ರೂಪಾಯಿ ಆಗಿದ್ದು,  ಒಟ್ಟು 13 ಲೀಟರ್ ಬಿಯರ್ ಇದ್ದು ಇದರ ಒಟ್ಟು  ಮೌಲ್ಯ 3000/- ರೂಪಾಯಿ ಆಗಿರುತ್ತದೆ. . ದಿನಾಂಕ 10/05/2023 ರಂದು ಕರ್ನಾಟಕ ವಿಧಾನ ಸಭಾ ಕ್ಷೇತ್ರದ ಚುನಾವಣೆ ಇದ್ದು ಈ ದಿನವನ್ನು ಡ್ರೈ ಡೇ ಎಂಬುದಾಗಿ  ಮಾನ್ಯ ಜಿಲ್ಲಾಧಿಕಾರಿ ಉಡುಪಿ ರವರು ಆದೇಶಿಸಿದ್ದು ಆದ್ದುದರಿಂದ ಯಾವುದೇ ಮಧ್ಯವನ್ನು ಮಾರಾಟ ಮಾಡುವುದು ಅಪರಾಧವಾಗಿದ್ದು  ಕಾನೂನು ಬಾಹಿರವಾಗಿ ಅರೆಹೊಳೆ ಆಶೀರ್ವಾದ ಬಾರ್ ಹಿಂದುಗಡೆ ಹಾಡಿಯ ಒಳಗೆ  ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 77/2023 ಕಲಂ: 32,34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-05-2023 09:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080