ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 

  • ಮಣಿಪಾಲ: ದಿನಾಂಕ :10.05.2023 ರಂದು ಪಿರ್ಯಾದಿ ಪವನ್ ಇವರು ತನ್ನ ಬಾಬ್ತು ಮೋಟಾರು ಸೈಕಲಿನಲ್ಲಿ ಉಡುಪಿಯಿಂದ ಮಣಿಪಾಲಕ್ಕೆ ಬರುತ್ತಿರುವಾಗ ಸಾಯಂಕಾಲ 5.20 ಗಂಟೆಗೆ ಮಣಿಪಾಲ ಲಕ್ಷ್ಮೀಂದ್ರ ನಗರ ಬಕಸಿನ್ ಬಾರ್ ಬಳಿ ರಾಷ್ಟ್ರೀಯ ಹೆದ್ದಾರಿ169 (ಎ) ರಲ್ಲಿ ಪಿರ್ಯಾದಿದಾರರ ಎದುರುಡೆಯಿಂದ ಹೋಗುತ್ತಿದ್ದ ಕೆ.ಎ.13.ಡಬ್ಲ್ಯು.6874 ಬಜಾಜ್ ಡಿಸ್ಕವರಿ ಮೋಟಾರು ಸೈಕಲಿಗೆ, ಉಡುಪಿ ಕಡೆಯಿಂದ ಅತೀವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಕೆ.ಎ.20.ಎಂ.ಇ.1269  ಮಹೀಂದ್ರ ಥಾರ್ ವಾಹನ ಹಿಂದಿನಿಂದ ಡಿಕ್ಕಿ ಹೊಡೆದ, ಪರಿಣಾಮ ಮೋಟಾರು ಸೈಕಲಿನಲ್ಲಿದ್ದ ವ್ಯಕ್ತಿಯು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ತಲೆಗೆ ತೀವ್ರ ಸ್ವರೂಪದ ಗಾಯ ಹಾಗೂ ದೇಹದ ಇತರ ಕಡೆಗಳಲ್ಲಿಯೂ ರಕ್ತಗಾಯವಾಗಿದ್ದು, ಬಳಿಕ ಮಹೀಂದ್ರ ಥಾರ್ ವಾಹನದ ಚಾಲಕ ಅಮರನಾಥ್  ಅಫಘಾತದಿಂದ ಗಾಯಗೊಂಡ ವ್ಯಕ್ತಿಯನ್ನು ಅದೇ ಕೆ.ಎ.20.ಎಂ.ಇ.1269 ವಾಹನದಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 109/2023 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಹೆಬ್ರಿ: ಗುರುಪ್ರಸಾದ ರವರು ದಿನಾಂಕ;10/05/2023 ರಂದು ಅವರ ಬಾಬ್ತು KA 20 ER  3153 ನೇ ಸ್ಕೂಟಿಯಲ್ಲಿ ಸಹ ಸವಾರರಾಗಿ ಸುಜಾತ ರವರನ್ನು ಕುಳ್ಳಿರಿಸಿಕೊಂಡು ಹೆಬ್ರಿ ಬನಶಂಕರಿಯಿಂದ ಹೆಬ್ರಿ ಪೇಟೆ ಕಡೆಗೆ ಹೋಗುತ್ತಿರುವಾಗ ಅವರು ಸಮಯ ಸುಮಾರು ಸಂಜೆ 06:45 ಗಂಟೆಗೆ ಹೆಬ್ರಿ ಗ್ರಾಮದ ಹೆಬ್ರಿ ಎಸ್.ಆರ್ ಶಾಲೆಯ ಬಳಿ ತಲುಪುವಾಗ ರಸ್ತೆಗೆ ಅಡ್ಡಲಾಗಿ ಬಂದ ನಾಯಿಯನ್ನು ತಪ್ಪಿಸಲು ಗುರುಪ್ರಸಾದ ರವರು ನಿರ್ಲಕ್ಷತನದಿಂದ  ಅವರು ಚಲಾಯಿಸುತ್ತಿದ್ದ ಸ್ಕೂಟಿಗೆ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟಿ ಅವರ ನಿಯಂತ್ರಣ ತಪ್ಪಿ ಸವಾರ ಮತ್ತು ಸಹ ಸವಾರರು ಸ್ಕೂಟಿ ಸಮೇತ ರಸ್ತೆಗೆ ಬಿದ್ದಿರುತ್ತಾರೆ ಪರಿಣಾಮ ಸಹ ಸವಾರರಾದ ಸುಜಾತ ರವರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ, ಗುರುಪ್ರಸಾದ ರವರಿಗೆ ಎರಡು ಕೈಗಳಿಗೆ ತರಚಿದ ಗಾಯವಾಗಿರುತ್ತದೆ, ಕಣ್ಣಿನ ಬಳಿ ರಕ್ತ ಗಾಯವಾಗಿರುತ್ತದೆ ಹಾಗೂ ತಲೆಗೆ ತೀವ್ರ ಸ್ವರೂಪದ ಗುದ್ದಿದ ನೋವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2023 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ

 

  • ಮಲ್ಪೆ: ಪಿಎಸ್  ಐ ಸುಷ್ಮಾ ಭಂಡಾರಿ ಉಡುಪಿ ಇವರು ಉಡುಪಿ ವಿಧಾನಸಭಾ  ಕ್ಷೇತ್ರದ ಸೆಕ್ಟರ್‌ -8 ಅಧಿಕಾರಿಯಾಗಿದ್ದು, ದಿನಾಂಕ: 10-05-2023 ರಂದು  18:10 ಗಂಟೆ ಸಮಯಕ್ಕೆ  ಚುನಾವಣಾ ಕರ್ತವ್ಯದಲ್ಲಿರುವಾಗ ಮಾನ್ಯ ಸೆಕ್ಟರ್‌ ನೂಡೆಲ್‌ ಆಫೀಸರ್‌ ಆದೇಶದಂತೆ   ಠಾಣಾ  ಸರಹದ್ದಿನಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ  Polling Booth No 107,108 ಗವರ್ನಮೆಂಟ್‌  ಮಾಡೆಲ್‌ ಹೈಯರ್‌ ಪ್ರೈಮರಿ  ಶಾಲೆ ಬೆಳ್ಕಳೆ  ಲಕ್ಷೀನಗರ  ತೆಂಕನಿಡಿಯೂರು ಶಾಲೆಯ ಗೇಟ್‌  ಬಳಿ ಸ್ಥಳೀಯ ದೀಪಕ್‌  ಸಾಲಿಯಾನ್‌ ( 32) ಎಂಬ ವ್ಯಕ್ತಿ  ಜನರನ್ನು  ಸೇರಿಸಿಕೊಂಡು  ಗುಂಪು ಮಾಡಿ  ದೊಡ್ಡದಾಗಿ ಮಾತನಾಡುತ್ತಾ  ನಿಂತಿರುವಾಗ  ಪಿಎಸ್  ಐ ಸುಷ್ಮಾ ಭಂಡಾರಿ ಇವರು ಹೆಚ್‌ಜಿ, ನಾಗರಾಜ ಮತ್ತು ಕಾರಿನ ಚಾಲಕ ದಿನೇಶ ರವರು ಸ್ಥಳಕ್ಕೆ ಆಗಮಿಸಿ 144 ಸೆಕ್ಷನ್‌ ಜಾರಿಯಲ್ಲಿದ್ದು, ಅಲ್ಲಿಂದ ತೆರಳಲು ಹೇಳಿದ್ದು ,ಆ ಸಮಯ ದೀಪಕ್‌ ಸಾಲಿಯಾನ್‌  ಏರುಧ್ವನಿಯಲ್ಲಿ  ನಾವು ಇಲ್ಲಿಂದ ಹೋಗಲ್ಲ  ನಮಗೆ ಹೇಳಲು ನೀನು ಯಾರೂ ,ಏನೂ ಬೇಕಾದರೂ ಮಾಡಿಕೋ  ಎಂದು ಏಕ ವಚನದಲ್ಲಿ ಬೈದಿದ್ದು, ಅಲ್ಲದೆ  ನನ್ನ ಏರಿಯಾಕ್ಕೆ  ಬಂದು ನನಗೆ ಭೋದನೆ ಮಾಡುತ್ತೀಯಾ  ಕಾಯ್ದೆ ಕಾನೂನು ನೀನು ಇಟ್ಟಿಕೊ ಎಂದು   ಕೈ ಮಾಡಲು ಬಂದಿದ್ದು,ಆ ಸಂದರ್ಭ ದಲ್ಲಿ ಜೊತೆಗಿರುವ  ಹೆಚ್‌ ಜಿ ನಾಗರಾಜ ಇವರು ತಪ್ಪಿಸಿರುತ್ತಾರೆ.  ಮೊಬೈಲ್‌ ನಲ್ಲಿ ವಿಡಿಯೋ ಮಾಡುತ್ತಿದ್ದು , ವಿಡಿಯೋ ಮಾಡುತ್ತಿದ್ದ ಮೊಬೈಲ್‌ ನ್ನು ವಶಕ್ಕೆ ಪಡೆದಿರುತ್ತಾರೆ. ಈ ಬಗ್ಗೆ ಸರ್ಕಾರಿ ಕರ್ತವ್ಯಕ್ಕೆ  ಅಡ್ಡಿಪಡಿಸಿದ  ದೀಪಕ್‌ ಸಾಲಿಯಾನ್‌ ರವರ  ವಿರುಧ್ಧ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 45/2023 ಕಲಂ  188, 353 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 11-05-2023 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080