ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಅಜೆಕಾರು: ಫಿರ್ಯಾದಿ ಶ್ರೀನಿವಾಸ  ಕುಲಾಲ್ ಇವರು ದಿನಾಂಕ: 09-05-2022 ರಂದು ಸಂಜೆ ಕೋಳಿ ಖರೀದಿಸುವ ಬಗ್ಗೆ ಅಜೆಕಾರಿಗೆ ಬಂದಿದ್ದು, ಕೋಳಿಯನ್ನು ಖರೀದಿಸಿ ಅವರ ಮನೆಯಾದ ಕಡ್ತಲಕ್ಕೆ ಹೊರಡುವಾಗ ಫಿರ್ಯಾದುದಾರ ಪರಿಚಯದ ಕಡ್ತಲದ ನಿವಾಸಿಯಾದ ಸುಧಾಕರರವರು ಫಿರ್ಯಾದುದಾರರಲ್ಲಿ ನಾನು ಕೂಡಾ ಕಡ್ತಲಕ್ಕೆ ಹೋಗುತ್ತೇನೆ ಜೊತೆಗೆ ಬರುವಂತೆ ತಿಳಿಸಿದ ಮೇರೆಗೆ ಪಿರ್ಯಾದಿ ಸುಧಾಕರ ರವರ ಬಾಬ್ತು ಬೈಕ್ ನಲ್ಲಿ ಸಹ ಸವಾರನಾಗಿ ಹೊರಟು ಹೋಗುತ್ತಿದ್ದಾದ ಸಂಜೆ 6:15 ಗಂಟೆಯ ಸಮಯಕ್ಕೆ ಕಡ್ತಲ ಬಸ್ ನಿಲ್ದಾಣದಿಂದ ಮುಂದೆ ಇರುವ ಸಾರ್ವಜನಿಕ ಡಾಮಾರು ರಸ್ತೆಯ ತಿರುವಿನಲ್ಲಿ ಬೈಕ್ ನ್ನು ತಿರುಗಿಸದೇ ತೀರಾ ವೇಗ ಹಾಗೂ ತೀವೃ ನಿರ್ಲಕ್ಷ್ಯತನದಿಂದ ನೇರವಾಗಿ ಚಲಾಯಿಸಿದ್ದು, ಬೈಕ್ ಸವಾರನ ಹತೋಟಿ ತಪ್ಪಿ ರಸ್ತೆಯ ಬದಿಯಲ್ಲಿನ ತೋಡಿಗೆ ಹಾಕಿರುವ ಹಾಸು ಕಲ್ಲಿಗೆ ಡಿಕ್ಕಿ ಹೊಡೆದಿದ್ದು, ಫಿರ್ಯಾದುದಾರರು ಹಾಗೂ ಸುಧಾಕರ ರವರು ಬೈಕ್ ಸಮೇತ ಕೆಳಗೆ ಬಿದ್ದಿದ್ದು, ಪರಿಣಾಮ ಫಿರ್ಯಾದುದಾರರ ಬೆನ್ನಿಗೆ ಹಾಗೂ ಎದೆಗೆ  ಗುದ್ದಿದ ಒಳ ನೋವಾಗಿದ್ದು, ಸುಧಾಕರ  ರವರಿಗೆ ಹಣೆಯ ಭಾಗಕ್ಕೆ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ. ಅಪಘಾತದಲ್ಲಿ ಭಾಗಿಯಾದ ಮೋಟಾರ್ ಸೈಕಲ್ KA 20 EX 3023 ನೇ ನಂಬ್ರದ ನೇರಳೆ ಬಣ್ಣದ TVS Radeon ಬೈಕ್ ಆಗಿರುತ್ತದೆ. ಅಪಘಾತದ ಬಳಿಕ ಸುಧಾಕರ ರವರನ್ನು ಚಿಕತ್ಸೆ ಬಗ್ಗೆ ಪುರಂದರ, ರಾಘವೇಂದ್ರ ಹಾಗೂ ಅಶೋಕ ರವರು ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಅಪಘಾತಕ್ಕೆ ಸುಧಾಕರ ರವರ ತೀರಾ ವೇಗ & ತೀವ್ರ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2022 ಕಲಂ 279, 337  ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಗಂಗೊಳ್ಳಿ : ಫಿರ್ಯಾದಿದಾರರಾದ ಮಂಜುನಾಥ ಎಸ್ ಬಿಲ್ಲವರವರು ದಿನಾಂಕ: 10-05-2022 ರಂದು ತನ್ನ ಚಿಕ್ಕಪ್ಪ ನರಸಿಂಹರವರ  ಬಾಬ್ತು KA-20 EP-2537 ನೇ ಆಕ್ಟಿವಾ ಹೋಂಡಾ ಸ್ಕೂಟರ್ ನಲ್ಲಿ ನರಸಿಂಹರವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ನಾವುಂದ ಕಡೆಯಿಂದ ಕುಂದಾಪುರ ಕಡೆಗೆ ರಾ.ಹೆ 66 ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ  ಬೈಂದೂರು ತಾಲೂಕು ಮರವಂತೆ ಗ್ರಾಮದ ಮರವಂತೆ ಪಂಚಾಯತ್ ಬಳಿ ತಲುಪುವಾಗ್ಗೆ ಮದ್ಯಾಹ್ನ ಸಮಯ ಸುಮಾರು 1:10 ಗಂಟೆಗೆ ಫಿರ್ಯಾದಿದಾರರ ಹಿಂದಿನಿಂದ ಯಾವುದೋ ನೋಂದಣಿ ನಂಬ್ರ ತಿಳಿಯದ ಕಾರೊಂದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದು ಆಕ್ಟಿವಾ ಹೋಂಡಾ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಹಾಗೂ ಸಹ ಸವಾರರು ವಾಹನ ಸಮೇತ ರಸ್ತೆಗೆ ಬಿದ್ದಿದ್ದು ಫಿರ್ಯಾದಿದಾರರಿಗೆ ತಲೆಗೆ ಮುಖಕ್ಕೆ, ಹಣೆಗೆ,  ಎಡ ಭುಜಕ್ಕೆ ಮತ್ತು ಬೆನ್ನಿಗೆ ಪೆಟ್ಟಾಗಿರುತ್ತದೆ. ಸಹ ಸವಾರ ನರಸಿಂಹ ಪೂಜಾರಿಯವರಿಗೆ  ಎಡಕೈಯ ಭುಜಕ್ಕೆ, ಬಲ ಕೈಗೆ, ಎರಡು ಕಾಲಿನ ಗಂಟಿಗೆ ಪೆಟ್ಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಕಾರು ಚಾಲಕನು  ಕಾರನ್ನು  ನಿಲ್ಲಿಸದೇ ಹೋಗಿರುತ್ತಾನೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2022 ಕಲಂ:279,337  ಐಪಿಸಿ  134(ಎ)(ಬಿ) ಐ.ಎಮ್.ವಿ ಆಕ್ಟ್ ನಂತೆ  ಪ್ರಕರಣ ದಾಖಲಿಸಲಾಗಿದೆ.

 ಹಲ್ಲೆ ಪ್ರಕರಣ

  • ಬ್ರಹ್ಮಾವರ: ದಿನಾಂಕ 09.05.2022 ರಂದು ಪಿರ್ಯಾದಿ ಸೃಜನ್ ಗಾಣಿಗ ರವರು ತನ್ನ ಸಂಬಂಧಿ ರವೀಂದ್ರರೊಂದಿಗೆ 52 ನೇ ಹೇರೂರು ಗ್ರಾಮದ, ಹೇರೂರು ಜಿ.ಪಂ.ಹಿ.ಪ್ರಾ. ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಸ್ವಲ್ಪ ಮುಂದೆ ಶಿವರಾಮ ಗಾಣಿಗ ರವರ ಮನೆಯ ಮುಂಭಾಗ ಸಮಯ ಸಂಜೆ 6:30 ಗಂಟೆಯಿಂದ 6:45 ಗಂಟೆಯ ಮಧ್ಯಾವಧಿಯಲ್ಲಿ  ಅತೀ ವೇಗದಿಂದ ಬೈಕ್‌ನಲ್ಲಿ ಬಂದ ಪಿರ್ಯಾದಿಯ ಸ್ನೇಹಿತ ಅಕ್ಷಯ್ ನನ್ನು 1ನೇ ಆರೋಪಿ ಸಂದೇಶ್ ಶೆಟ್ಟಿ  ಎಂಬವನು ಅಡ್ಡ ಹಾಕಿದ್ದು, ಸದ್ರಿ ಸ್ಥಳಕ್ಕೆ  ಪಿರ್ಯಾದಿಯು ಹೋದಾಗ  1 ನೇ ಆರೋಪಿ ಹಾಗೂ 2 ನೇ ಆರೋಪಿ ಸುಹಾನ್ ಎಂಬವರು ಬೈಕ್ ಸವಾರ ಅಕ್ಷಯ್‌ಗೆ ಕೈಯಿಂದ ಹೊಡೆಯುತ್ತಿದ್ದು,  ಆಗ ಪಿರ್ಯಾದಿಯು ಆರೋಪಿಗಳಿಗೆ ಹೊಡೆಯಬೇಡಿ ಎಂದು ಎಷ್ಟು ವಿನಂತಿ ಮಾಡಿದರೂ ಕೇಳಿರುವುದಿಲ್ಲ. ಆಗ ಪಿರ್ಯಾದಿಯು ಅಕ್ಷಯ್‌ನಿಗೆ ಇಲ್ಲಿಂದ ಹೋಗು, ಅಷ್ಟು ವೇಗವಾಗಿ ಈ ಮಕ್ಕಳು ಇರುವ ಸ್ಥಳದಲ್ಲಿ ಗಾಡಿಯನ್ನು ಚಲಾವಣೆ ಮಾಡುತ್ತೀಯಾ  ಅಂತ ಹೇಳಿ ಮನೆಗೆ ಹೋಗಲು ಹೇಳಿದೆ. ಇಷ್ಟು ಹೇಳಿದ ಮಾತಿಗೆ 3 ನೇ ಆರೋಪಿ ರಕ್ಷಿತ್ ಮೊದಲು ಪಿರ್ಯಾದಿಯ ಕುತ್ತಿಗೆ ಭಾಗದಲ್ಲಿ ಹೊಡೆದಿದ್ದು, ನಂತ್ರ 2 ನೇ ಆರೋಪಿ ಸುಹಾನ್ ,4 ನೇ ಆರೋಪಿ ಆಯುಷ್ , 5ನೇ ಆರೋಪಿ ಸಂದೇಶ್ (ವೆಲ್ಡರ್) 6ನೇ ಆರೋಪಿ ಸೂರಜ್  ಎಂಬವರು ಸೇರಿ  ಪಿರ್ಯಾದಿಯ ಹಿಂದೆ, ಕುತ್ತಿಗೆ ಭಾಗ, ತಲೆಯ ಕೂದಲು, ಸೊಂಟ, ಎದೆಯ ಭಾಗ ಮತ್ತುಹೊಟ್ಟೆಯ ಭಾಗದಲ್ಲಿ ತುಳಿದಿರುತ್ತಾರೆ.  ಹಾಗೂ 2, 3, 4ನೇ ಆರೋಪಿಯು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. 1ನೇ ಆರೋಪಿಯು ನಾವು ವಿಶು ಅಣ್ಣ ಮತ್ತು ಗುರು ಭಾಯಿ ಜನ ಎಂದು ನಮ್ಮ ಸುದ್ದಿಗೆ ಬಂದರೆ ನಾವು ಕಡಿದು ಹಾಕುತ್ತೇವೆ ಎಂದು ಬೆದರಿಕೆ ಹಾಕಿರುತ್ತಾನೆ. ಎಲ್ಲಾ ಆರೋಪಿಗಳು ಅಮಲು ಪದಾರ್ಥ ಸೇವಿಸಿದ್ದು, ಅಲ್ಲದೇ ಪಿರ್ಯಾದಿಯನ್ನು ಕೊಲ್ಲುವ ಉದ್ಧೇಶದಿಂದ ಇದು 2ನೇ ಬಾರಿಗೆ ನಡೆಸಿದ ಹಲ್ಲೆಯಾಗಿರುತ್ತದೆ.  ದಿನಾಂಕ 10.05.2022 ರಂದು   1ನೇ ಆರೋಪಿಯು ಆಸ್ಪತ್ರೆಗೆ ಬಂದು ನನ್ನ ಮೇಲೆ ಕೇಸು ಮಾಡಿದರೆ ನೀನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಹೋಗಿರುತ್ತಾನೆ ಎಂಬಿತ್ಯಾದಿ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 81/2022 ಕಲಂ 143, 147, 32̧3 50̧4 506 ಜೊತೆಗೆ  149 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ: ಫಿರ್ಯಾದಿ ಆಯುಷ್‌ ರವರು ದಿನಾಂಕ: 09/05/2022 ರಂದು ಸಂಜೆ 52ನೇ ಹೇರೂರು ಗ್ರಾಮದ ಶಾಲೆಯ ಹತ್ತಿರ  ಕ್ರಿಕೇಟ್‌ ಆಡುತ್ತಿರುವಾಗ ಆರೋಪಿ ಸೃಜನ್‌ ಗಾಣಿಗ ಆತನ ಬೈಕ್‌ನ್ನು ಅತೀ ವೇಗ ವಾಗಿ ಚಲಾಯಿಸಿಕೊಂಡು ಬಂದು ಒಂದು ಮಗುವಿಗೆ ಡಿಕ್ಕಿ ಹೊಡೆಯುವ ರೀತಿಯಲ್ಲಿ ಚಲಾಯಿದ್ದು ಅದಕ್ಕೆ ಪಿರ್ಯಾದಿಯು ಆರೋಪಿಗೆ  ಈ ಸಣ್ಣ ರಸ್ತೆಯಲ್ಲಿ ಈ ರೀತಿ ಬೈಕ್‌ನ್ನು ಚಲಾಯಿಸ ಬೇಡ ಎಂದು ಹೇಳಿ ಮುಂದೆ ಹೋಗುತ್ತಿದ್ದಾಗ,  ಆರೋಪಿಯು  ಆತನ  ಬೈಕ್‌ನ್ನು ರಭಸವಾಗಿ ಚಲಾಯಿಸಿ ಫಿರ್ಯಾದಿಗೆ ಮುಂದೆ ಹೋಗದಂತೆ ಅಡ್ಡ ನಿಲ್ಲಿಸಿ ತಡೆದು,  ಕೈಯಿಂದ  ಫಿರ್ಯಾದಿಯ ಎಡ ಕೆನ್ನೆಗೆ  ಜೋರಾಗಿ ಹೊಡೆದು, ಹೊಟ್ಟೆ ಭಾಗಕ್ಕೆ ಗುದ್ದಿರುತ್ತಾನೆ. ಅಲ್ಲದೇ ನಾನು  ಬೈಕ್‌ ಓಡಿಸುವುದೇ ಹೀಗೆ, ನೀನು ಹೇಳಲು ಯಾರು ನನ್ನ ಸುದ್ದಿಗೆ ಬಂದರೆ  ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಜೋರಾಗಿ ಬೈದಿದ್ದು, ಆಗ ಅಲ್ಲೇ ಕ್ರಿಕೆಟ್‌ ಆಡುತ್ತಿರುವ ಪಿರ್ಯಾದಿಯ ಸ್ನೇಹಿತರಾದ ಸಂದೇಶ್‌ ಶೆಟ್ಟಿ, ಪ್ರಕಾಶ್‌, ರಕ್ಷಿತ್‌ ಮತ್ತು ಸುಹಾನ್‌ ಬರುವುದನ್ನು ನೋಡಿ ಈಗ ನಿನ್ನ ಸ್ನೇಹಿತರು ಬರುತ್ತಿದ್ದಾರೆ, ಮುಂದಕ್ಕೆ ನೀನು ಒಬ್ಬನೇ ಸಿಕ್ಕು ಆಗ ನಿನ್ನ ನೋಡಿಕೊಳ್ಳುತ್ತೇನೆ ಎಂದು ಹೇಳಿ ಹೋಗಿರುತ್ತಾನೆ. ಆರೋಪಿಯು ಪಿರ್ಯಾದಿಗೆ ಹೊಡೆದ ಪೆಟ್ಟಿಗೆ ಅವರ ಎಡಕೆನ್ನೆ ಹಾಗೂ ಹೊಟ್ಟೆ ಒಳಭಾಗ ವಿಪರೀತ ನೋವು ಕಾಣಿಸಿಕೊಂಡಿದ್ದು ಈ ಬಗ್ಗೆ ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ ಎಂಬಿತ್ಯಾದಿ . ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 82/2022 ಕಲಂ 341, 323, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ಪಿರ್ಯಾದಿ ಕುಮಾರಿ ವೀಣಾ ಆಗೇರ ಇವರು ಪರಿಶಿಷ್ಟ  ಜಾತಿಗೆ ಸೇರಿದವರಾಗಿದ್ದು, ಕುಂದಾಪುರ ಕಸಬಾ ಗ್ರಾಮದ ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿ ಹಾಗೂ  ಬ್ಯಾರೀಸ್ ಬಾಲಕಿಯರ ವಸತಿ ನಿಲಯ, ಕೋಡಿ ಇದರ ವಾರ್ಡನ್ ಆಗಿರುವುದಾಗಿದೆ. ದಿನಾಂಕ 09-05-2022 ರಂದು 04:30 ಗಂಟೆಗೆ ಆರೋಪಿತ 1) ಫಿರೋಜ್, ಪ್ರಾಯ: 25 ವರ್ಷ,  ತಂದೆ: ದಿವಂಗತ ಮೊಹಮ್ಮದ್ ಕುಂಙ,2) ಸಲೀಂ ಮಲ್ಲಿಕ್, 28 ವರ್ಷ, ತಂದೆ:  ದಿವಂಗತ ಮೊಹಮ್ಮದ್ ಕುಂಙ ಇವರುಗಳು ಬ್ಯಾರೀಸ್ ವಿದ್ಯಾಸಂಸ್ಥೆಯ ಆವರಣ ಗೋಡೆಯನ್ನು ಕೆಡವುತ್ತಿದ್ದಾರೆಂದು ಭದ್ರತಾ ಸಿಬ್ಬಂದಿ ಮನೀಷ್ ರಾಯ್ ರವರು ಪಿರ್ಯಾದುದಾರರಿಗೆ ಮಾಹಿತಿ ನೀಡಿದ್ದು ಅದರಂತೆ ಸ್ಥಳಕ್ಕೆ ಭೇಟಿ ನೀಡಲಾಗಿ ಅಲ್ಲಿದ್ದ ಆರೋಪಿತರಲ್ಲಿ ಘಟನೆಯ ಬಗ್ಗೆ ವಿಚಾರಿಸಿದಾಗ ಆರೋಪಿತರಿಗೆ ಪಿರ್ಯಾದುದಾರರು ಪರಿಶಿಷ್ಟ ಜಾತಿಗೆ ಸೇರಿದವರೆಂದು ಗೊತ್ತಿದ್ದು ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ನಿನಗ್ಯಾಕೆ ಅಧಿಕ ಪ್ರಸಂಗತನ ಎಂದು ಜಾತಿ ನಿಂದನೆ ಮಾಡಿ 1 ನೇ ಆರೋಪಿತನು ಪಿರ್ಯಾದುದಾರರ ಮೇಲೆ ಕೈ ಹಾಕಿ ಎಳೆದಿರುವುದಾಗಿದೆ. ಸದ್ರಿ ಕೃತ್ಯವನ್ನು ಹಂಝಾ ಮೊಹಮ್ಮದ್, ಮನೀಷ್ ರಾಯ್, ಡಾ ಉಷಾರಾಣಿ ವೀಕ್ಷಿಸಿರುವುದಾಗಿದೆ. ಆರೋಪಿತರು ಬ್ಯಾರೀಸ್ ವಿದ್ಯಾಸಂಸ್ಥೆಯ ಸ್ಥಿರಾಸ್ಥಿಯಲ್ಲಿಸುಳ್ಳು ಹಕ್ಕು ಸ್ಥಾಪಿಸುವ ದುರುದ್ದೇಶ ಹೊಂದಿ ಆರೋಪಿತರು ಸಮಾನ ಉದ್ದೇಶದಿಂದ ದುಷ್ಕೃತ್ಯ ಎಸಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 52/2022, US 504, 506, 354, rw 34 IPC, &  3 (1) (r) (s), 3 (W-1), 3 (2) (V-a) SCST POA Act 1989  ನಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ ದೀಪಾ ಇವರ ಮಾಲೀಕತ್ವದ ಸುಜುಕಿ ಆ್ಯಕ್ಸಸ್‌ ಸ್ಕೂಟರ್‌ ನಂಬ್ರ: KA20ES5905 (Chassis No: MB8DP11AJ8A55106, Engine No: AF211867406) ನೇದನ್ನು ದಿನಾಂಕ: 07/05/2022 ರಂದು ಬೆಳಿಗ್ಗೆ ಪಿರ್ಯಾದುದಾರ ಗಂಡ ತನ್ನ ಕೆಲಸಕ್ಕೆಂದು ತೆಗೆದುಕೊಂಡು ಹೋದವರು, ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆಯ ಮಾಂಡವಿ ಕಾಸಗ್ರೀನ ಫ್ಲಾಟ್‌ನ ಪಾರ್ಕಿಂಗ್‌ ಸ್ಥಳದಲ್ಲಿ ಬೆಳಿಗ್ಗೆ 08:00 ಗಂಟೆಗೆ ನಿಲ್ಲಿಸಿದ್ದು, ವಾಪಾಸು 13:00 ಗಂಟೆಗೆ ಬಂದು ನೋಡಿದಾಗ ಸ್ಕೂಟರ್‌ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರ್‌ನ ಅಂದಾಜು ಮೌಲ್ಯ ರೂ. 35,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2022 ಕಲಂ :379 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ಪಿರ್ಯಾದಿ ಅರ್ಚನಾ ಇವರ ತಂದೆ ತುಕ್ರಮೂಲ್ಯ ರವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಎಂಜಿಎಂ ಬಳಿ ಕೆ.ಇ.ಬಿ ಕ್ವಾಟ್ರಸ್‌ ಎದುರು ಗೂಡಂಗಡಿ ನಡೆಸಿಕೊಂಡಿದ್ದು, ದಿನಾಂಕ 10/05/2022 ರಂದು 14:45 ಗಂಟೆಯಿಂದ 14:55 ಗಂಟೆ ನುಡುವಿನ ಸಮಯದಲ್ಲಿ ಇಬ್ಬರು ಅಪರಿಚಿತರು ಗಿರಾಕಿಗಳಾಗಿ ಬಂದು ಕ್ಯಾಶ್‌ ರ್ಯಾಕ್‌ನಲ್ಲಿ ಇಟ್ಟಿದ್ದ ಬ್ಯಾಗ್‌ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಬ್ಯಾಗ್‌ ನಲ್ಲಿ ರೂ. 13,000/- ನಗದು, ಪಾನ್‌ಕಾರ್ಡ್‌, ಬ್ಯಾಂಕ್‌ ಪಾಸ್‌ಪುಸ್ತಕ, ಚೆಕ್‌ಬುಕ್‌, ಆರ್‌ಸಿ, ಡಿಎಲ್‌, ವಿಮೆಪತ್ರ ಹಾಗೂ ಎಫ್‌.ಡಿ ಬಾಂಡ್‌ ಇರುವುದಾಗಿದೆ ಎಂಬಿತ್ಯಾದಿ.  ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 78/2022 ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿ ರಾಕೇಶ್ ಕನ್ನಂತ ಇವರು  ಕುಂದಾಪುರದ  ನಂದಿನಿ ಹೊಟೇಲ್‌ ನ ಮ್ಯಾನೇಜರ್ ಆಗಿ ಕೆಲಸ  ಮಾಡಿಕೊಂಡಿದ್ದು  ದಿನಾಂಕ  10/05/2022 ರಂದು  ಮಧ್ಯಾಹ್ನ  ಸುಮಾರು  3.30  ಗಂಟೆಗೆ  ಸುಮಾರಿಗೆ  ನಂದಿನಿ   ಹೊಟೇಲ್  ಕಟ್ಟಡದ ದಕ್ಷಿಣ ಬದಿಯಲ್ಲಿ ಒಂದು ಗಂಡಸು ನೆಲದಲ್ಲಿ  ಮಲಗಿದ್ದ ಸ್ಥಿತಿಯಲ್ಲಿ ಇದ್ದು ಸಮೀಪ ಹೋಗಿ ನೋಡಲಾಗಿ ಮೃತಪಟ್ಟಿರುವುದಾಗಿದೆ. ಮೃತ ವ್ಯಕ್ತಿಯು ಸುಮಾರು  55-60  ವರ್ಷ ಪ್ರಾಯದ ಗಂಡಸು ಆಗಿದ್ದು   ಗುರುತು  ಪತ್ತೆಯಾಗಿರುವುದಿಲ್ಲ. ಮೃತನು ಟೀ ಶರ್ಟ ಮತ್ತು ಬಿಳಿ ಬಣ್ಣದ ಚಡ್ಡಿ ಧರಿಸಿದ್ದು  ಸುಮಾರು 5 ಇಂಚು ಉದ್ದನೆಯ  ಕಪ್ಪು ಬಿಳಿ ಬಣ್ಣದ  ತಲೆ ಕೂದಲು ಕುರುಚಲು ಗಡ್ಡ  ಹೊಂದಿದ್ದು ಕಪ್ಪು ಮೈಬಣ್ಣ ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2022 ಕಲಂ: 174  ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 11-05-2022 11:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080