ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ :

  • ಕೋಟ  : ಫಿರ್ಯಾದು ಸುನೀಲ್ ಶೆಟ್ಟಿ ಪ್ರಾಯ 37 ವರ್ಷ ತಂದೆ:ಶ್ರೀಧರ ಶೆಟ್ಟಿ ವಾಸ: ಇಸಾರ್ ಮಕ್ಕಿ ಆವರ್ಸೆ ಗ್ರಾಮ ಬ್ರಹ್ಮಾವರ ತಾಲೂಕು ಇವರ ಅಣ್ಣ ಮೃತ ಸುಧೀರ ಶೆಟ್ಟಿ ಪ್ರಾಯ 42 ವರ್ಷ ಈತನು ಸುಮಾರು 10-12 ವರ್ಷಗಳ ಕಾಲ ದುಬೈಯಲ್ಲಿ ಕೆಲಸ ಮಾಡಿಕೊಂಡಿದ್ದವನು , 3 ವರ್ಷಗಳ ಈಚೆಗೆ ಊರಿಗೆ ಬಂದವನು ಮಾನಸಿಕ ವಾಗಿ ತೊಂದರೆಗೆ ಸಿಲುಕಿದ್ದು  ಅವನಿಗೆ ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿರುತ್ತದೆ. ಅವನಿಗೆ ಮದುವೆಯಾಗಿರುವುದಿಲ್ಲ. ಕೆಲಸವಿಲ್ಲದೇ ಮನೆಯಲ್ಲಿಯೇ ಇರುತ್ತಿದ್ದನು. ದಿನಾಂಕ 11/05/2022 ರಂದು ಬೆಳಿಗ್ಗೆ 06.00 ಗಂಟೆಗೆ ಎದ್ದವನು ಮನೆಯಿಂದ ಹೊರಗೆ ಹಿತ್ತಲಿಗೆ ಹೋಗಿದ್ದನ್ನು ತಂದೆಯವರು ನೋಡಿದ್ದು ಆ ಬಳಿಕ 06.30 ಗಂಟೆಗೆ ತಂದೆಯವರು ಮನೆಯ ಹಿಂಬದಿಗೆ ಹೋದಾಗ  ಮನೆಯ ಹಿಂದಿಯ ಸ್ವಾಮಿ ದೇವಸ್ಥಾನದ ಹಿಂದಿನ ಹಲಸಿನ ಮರಕ್ಕೆ ನೈಲಾನ್ ರೋಪಿನಿಂದ ಕಟ್ಟಿ ಕುತ್ತಿಗೆಗೆ ಬಿಗಿದುಕೊಂಡ ಸ್ಥಿತಿಯಲ್ಲಿ ಇರುತ್ತಾನೆ. ಪಿರ್ಯಾದಿದಾರರ ಅಣ್ಣ ದಿನಾಂಕ 11.05.2022 ರಂದು ಬೆಳಿಗ್ಗೆ 06.00 ಗಂಟೆಯಿಂದ 06.30 ಮಧ್ಯಾವಧಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ: 17/2022 ಕಲಂ: 174 ಸಿಆರ್‌ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ : ಪಿರ್ಯಾಧಿ ಸುಧಾಕರ ಎಮ್ (40) ತಂದೆ: ದಿ: ಶೀನ ಮೇರ, ವಾಸ: ಕನ್ನಡಿ ಬೆಟ್ಟು, ಮುಳ್ಳೂರು, ಮಾಳ ಗ್ರಾಮ ಮತ್ತು ಅಂಚೆ, ಕಾರ್ಕಳ ತಾಲೂಕು ಇವರ ತಾಯಿಯ ತಮ್ಮನಾದ ಆನಂದನು ಅವಿವಾಹಿತನಾಗಿದ್ದು, ತಂದೆ ತಾಯಿ ಇಲ್ಲದೇ ಒಬ್ಬನೇ ವಾಸ್ತವ್ಯವಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಆತನಿಗೆ ಚಿಕ್ಕಂದಿನಿಂದಲೇ ವಿಪರೀತ ಸಾರಾಯಿ ಕುಡಿಯುವ ಚಟವಿದ್ದು ಅಲ್ಲದೇ ಪಿಟ್ಸ್ ಖಾಯಿಲೆ ಕೂಡಾ ಇರುತ್ತದೆ. ದಿನಾಂಕ 10/05/22 ರಂದು ರಾತ್ರಿ 9:30 ಗಂಟೆಗೆ ರಮೇಶ ಹಾಗೂ ಆನಂದನು ಶಿವಾಲಯ ಬಳಿಯ ಮೋರಿಯಲ್ಲಿ ಸಾರಾಯಿ ಕುಡಿಯುತ್ತಿದ್ದಾಗ ಆನಂದನು ಪಿಟ್ಸ್ ಖಾಯಿಲೆಯಿಂದ ನರಳಾಡಿ ಮೋರಿಯಿಂದ ಜಾರಿ 20 ಅಡಿ ಕೆಳಗೆ ತೋಡಿನಲ್ಲಿದ್ದ ಕಲ್ಲಿನ ಮೇಲೆ ಕವುಚಿ ಬಿದ್ದು ತಲೆಗೆ ಗಾಯವಾಗಿ ರಕ್ತಸ್ರಾವವಾಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ : 12/2022 ಕಲಂ. 174 ಸಿಅರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣಗಳು :

  • ಕೊಲ್ಲೂರು : ಪಿರ್ಯಾದಿ ಸಂತೋಷ್ ಶೆಟ್ಟಿ (45) ತಂದೆ: ದಿ. ಜಿ ಮಂಜಯ್ಯ ಶೆಟ್ಟಿ ವಾಸ: ಶಿವ ಶಕ್ತಿನಿಲಯ ಹೆಸಿನ ಬೇರು ಇಡೂರು ಕುಂಜ್ಞಾಡಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 10-05-2022ರಂದು ಸಾಯಂಕಾಲ 5:00 ಗಂಟೆಗೆ ತನ್ನ ಬಾಬ್ತು KA 20-U-8450ನೇ ಮೋಟಾರು ಸೈಕಲ್‌ ನಲ್ಲಿ ಚಿತ್ತೂರು ಪೇಟೆಯಿಂದ ತನ್ನ ಮನೆಯಾದ ಇಡೂರಿಗೆ  ಚಲಾಯಿಸಿಕೊಂಡು ಹೋಗಿ, ಚಿತ್ತೂರು ಜಂಕ್ಷನ್ ಬಳಿ ತಲುಪಿದಾಗ ಎದುರಿನಿಂದ ಅಂದರೆ ಜಡ್ಕಲ್ ಕಡೆಯಿಂದ ಆರೋಪಿಯು ತನ್ನ ಬಾಬ್ತು  KA 03 AC 4999ನೇ ಟಿ.ಟಿ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲಿಗೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ಬಲ ಕಾಲಿನ ಪಾದದ ಬಳಿ ರಕ್ತಗಾಯ, ಬಲಕಾಲಿನ ಮೊಣ ಗಂಟಿಗೆ ಮತ್ತು ಬಲ ಬದಿ ಸೊಂಟದ ಬಳಿ ಗುದ್ದಿನ ಒಳ ಜಖಂ ಆಗಿರುತ್ತದೆ. ಪಿರ್ಯಾದುದಾರರು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 23/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ : ಅನಂದ (50) ಇವರು ಉಡುಪಿಯ ಮಣಿಪಾಲದಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು. ಅವರು ದಿನಾಂಕ;10/05/2022 ರಂದು ರಾತ್ರಿ ಸಮಯ ಹೆಬ್ರಿ ಗ್ರಾಮದ ಹೆಬ್ರಿ ಬಂಟರ ಭವನದ ಹತ್ತಿರದಲ್ಲಿರುವ ಅವರ ಸಂಬಂಧಿಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಹೆಬ್ರಿಯಿಂದ ನಡೆದು ಕೊಂಡು ಸಮಯ ಸುಮಾರು ರಾತ್ರಿ 10-45 ಗಂಟೆಗೆ ಹೆಬ್ರಿ ಗ್ರಾಮದ ಬಂಟರ ಭವನದ ಎದುರುಗಡೆ ರಸ್ತೆ ತಲುಪಿದಾಗ ಯಾವುದೋ ಒಂದು ಅಪರಿಚಿತ ವಾಹನವನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ರಸ್ತೆಯ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಅನಂದ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಅನಂದ ರವರು ರಸ್ತೆಯ ಬದಿಯಲ್ಲಿರುವ ಚರಂಡಿಯ ಬದಿಗೆ ಬಿದ್ದು. ಅವರ ತಲೆಗೆ ತೀವ್ರ ಸ್ವರೂಪದ ಗಾಯ ವಾಗಿದ್ದು. ಅಪಘಾತ ಪಡಿಸಿದ ಅಪರಿಚಿತ ವಾಹನವನ್ನು ಅದರ ಚಾಲಕನು ನಿಲ್ಲಿಸದೇ ಪರಾರಿಯಾಗಿದ್ದು. ಗಾಯಾಳುವನ್ನು ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಗೆ ದಾಖಲು ಮಾಡಿ ನಂತರ ಅಲ್ಲಿಂದ ಬಿಡುಗಡೆ ಮಾಡಿ ದಿನಾಂಕ; 11/05/2022 ರಂದು ಮುಂಜಾನೆ 04-16 ಗಂಟೆಗೆ ಮಂಗಳೂರು ವೆನ್ಲಾಕ್ ಅಸ್ಪತ್ರೆಗೆ ಕರೆ ತಂದು ವೈದ್ಯರಲ್ಲಿ ತೋರಿಸಿದಾಗ, ಅವರು ದಾರಿ ಮದ್ಯೆ ಮೃತ ಪಟ್ಟಿರುತ್ತಾರೆಂದು ವೈದ್ಯರು ತಿಳಿಸಿರುತ್ತಾರೆ ಅದ್ದರಿಂದ ಅಪಘಾತ ಪಡಿಸಿದ ಅಪರಿಚಿತ ವಾಹನ ಮತ್ತು ಅದರ ಚಾಲಕ ವಿರುಧ್ದ  ಕಾನೂನು ಕ್ರಮ ಕೈಗೊಳ್ಳುವಂತೆ ಮಂಜುನಾಥ (44) ತಂದೆ: ಕಾಡಿಯ ಪೂಜಾರಿ, ವಾಸ: ವಟ್ಲುಮಕ್ಕಿ, ನೀಲುಬಾಗಿಲು ಅಂಚೆ, ಹೆಗ್ಗಾರ್ ಗ್ರಾಮ, ಕೊಪ್ಪ ತಾಲೂಕು, ಚಿಕ್ಕಮಗಳೂರು ಇವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 20/2022 U/s. 279,304(A) IPC & 134(A)(B) IMV Act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ : ಪಿರ್ಯಾದು ಪುನೀತ್ ಪ್ರಾಯ 27 ವರ್ಷ ತಂದೆ: ದಿ ಮಹಾಬಲ ಶೆಟ್ಟಿ ವಾಸ: ಬಾರಂದಾಡಿ ಹೊಸಮನೆ ಕುಂದ ಬಾರಂದಾಡಿ ಗ್ರಾಮ ಕುಂದಾಪುರ ಇವರು ದಿನಾಂಕ 10/05/2022 ರಂದು ಕೆಲಸ ಮುಗಿಸಿ ತನ್ನ ಬಾಬ್ತು ಮೋಟಾರ್ ಸೈಕಲ್ KA 20EN0261ನೇದರಲ್ಲಿ ತನ್ನ ಭಾವ ರಾಘವೇಂದ್ರರವರನ್ನು ಕುಳ್ಳಿರಿಸಿಕೊಂಡು ಬ್ರಹ್ಮಾವರ ದಿಂದ ಹೊರಟು ಮನೆಯ ಕಡೆಗೆ ಬರುತ್ತಾ ತೆಕ್ಕಟ್ಟೆ ಭಾರತ್ ಪೆಟ್ರೋಲ್ ಬಂಕ್ ನಿಂದ ಸುಮಾರು 50 ಮೀಟರ್ ಮೊದಲು ಬರುತ್ತಿರುವಾಗ ಅವರ ವಿರುದ್ದ ದಿಕ್ಕಿನಲ್ಲಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ KA 20EH 6547ನೇ ಮೋಟಾರ್ ಸೈಕಲ್ ಸವಾರ ಪ್ರವೀಣ್ ಎಂಬಾತನು ಹಿಂದುಗಡೆ ಓರ್ವ ಹೆಂಗಸನ್ನು ಕುಳ್ಳಿರಿಸಿಕೊಂಡು ರಾ. ಹೆ 66ರಲ್ಲಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಸಮಯ ಸಂಜೆ ಸುಮಾರು 6.50 ಗಂಟೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಎಡಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರ ಮೋಟಾರ್ ಸೈಕಲಿನ ಬಲ ಭಾಗಕ್ಕೆ ಢಿಕ್ಕಿ ಹೊಡೆದು ರಸ್ತೆಯ ಮೇಲೆ ಬಿದ್ದನು. ಪಿರ್ಯಾದಿದಾರರು ಕೂಡ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದರು. ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಬಲ ಮೊಣಗಂಟಿಗೆ ರಕ್ತಗಾಯ ಹಾಗೂ ಬೆರಳುಗಳಿಗೆ ತರಚಿದ ಗಾಯವಾಗಿತ್ತು ಹಾಗೂ ಪಿರ್ಯಾದಿದಾರರ ಭಾವ ರಾಘವೆಂದ್ರ ರವರಿಗೆ ಎಡ ಕಾಲು ಮೊಣ ಗಂಟಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಪ್ರವೀಣ್ ರವರಿಗೆ ಕೈ ಕಾಲಿಗೆ ಸಣ್ಣ ತರಚಿದ ಗಾಯವಾಗಿರುತ್ತದೆ. ಹಿಂಬದಿ ಸವಾರರಾದ ಮಾಲತಿರವರಿಗೆ ತಲೆಗೆ ಬೆನ್ನಿಗೆ ಹಾಗೂ ಭುಜಕ್ಕೆ ಗಾಯವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 65/2022 ಕಲಂ: 279,337,338 IPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮನುಷ್ಯ ಕಾಣೆ ಪ್ರಕರಣ :

  • ಕಾರ್ಕಳ : ಕಾರ್ಕಳ ತಾಲೂಕು, ಮುಲ್ಲಡ್ಕ ಗ್ರಾಮದ ಕೊರಗರ ಕಾಲೋನಿ ನಿವಾಸಿ ದೂಜ, ಪ್ರಾಯ 63 ವರ್ಷ ಇವರು ದಿನಾಂಕ 09/05/2022 ರಂದು ಬೆಳಗ್ಗೆ ಸುಮಾರು 10:00 ಗಂಟೆಗೆ ತಮ್ಮ ಮನೆಯಿಂದ ಮುಂಡ್ಕೂರು ಪೇಟೆಗೆ ಹೋದವರು ಇದುವರೆಗೆ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಸಂಬಂಧಿಕರಲ್ಲಿ ಹಾಗೂ ಪರಿಚಯದವರಲ್ಲಿ ವಿಚಾರಿಸಿದಲ್ಲಿ ಅವರ ಬಗ್ಗೆ ಯಾವುದೇ ತಿಳಿದಿರುವುದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 56/2022ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 11-05-2022 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080