ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಅಮೀತ (38), ಗಂಡ: ಯತಿರಾಜ್ ಪೂಜಾರಿ, ವಾಸ:ಜಗನ್ನಾಥ ಕಂಪೌಂಡ್ ಮಾರ್ಪಳ್ಳಿ, ಬೈಲೂರು,76ನೇ ಬಡಗುಬೆಟ್ಟು ಗ್ರಾಮ, ಉಡುಪಿ ಇವರ ಗಂಡ ಯತಿರಾಜ್ (42) ಎಂಬುವವರು ಮದ್ಯ ವ್ಯಸನಿಯಾಗಿದ್ದು, ಸುಮಾರು 01  ವರ್ಷದಿಂದ ಲಿವರ್ ಸಂಬಂಧಿ ಖಾಯಿಲೆಯಿಂದ  ಬಳಲುತ್ತಿದ್ದು, ಈ ಬಗ್ಗೆ  ಮಿತ್ರ ಆಸ್ಪತ್ರೆ ಉಡುಪಿಯಲ್ಲಿ ಚಿಕಿತ್ಸೆ ಪಡೆದರೂ  ಗುಣಮುಖನಾಗದ  ಚಿಂತೆಯಿಂದ ಜೀವನದಲ್ಲಿ  ಜಿಗುಪ್ಸೆ  ಹೊಂದಿ  ದಿನಾಂಕ 10/05/2021 ರಂದು  ಬೆಳಿಗ್ಗೆ  8:30  ಗಂಟೆಯಿಂದ  11:45  ಗಂಟೆಯ  ಮಧ್ಯಾವಧಿಯಲ್ಲಿ ಮನೆಯ  ಹಾಲ್ ನಲ್ಲಿರುವ ಪಕ್ಕಾಸಿಗೆ ಚೂಡಿದಾರ್ ಶಾಲ್ ನಿಂದ ಕುತ್ತಿಗೆಗೆ  ನೇಣು  ಬಿಗಿದುಕೊಂಡು  ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 19/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಜೆಕಾರು: ಪಿರ್ಯಾದಿದಾರರಾದ ಜೋಸೆಫ್  (38), ಗಂಡ: ಕೆ.ಸಿ ಜೋಸ್ , ವಾಸ: ಪೆಳತಕಟ್ಟೆ, ಕಡ್ತಲ  ಗ್ರಾಮ ಕಾರ್ಕಳ ತಾಲೂಕು ಇವರ ಮಾವ ಜಾಯ್ ಪಿ.ಜೆ (53) ರವರು ಬೆಳ್ತಂಗಡಿಯಲ್ಲಿ ಹೆಂಡತಿ ರೋಸಾ ರವರೊಂದಿಗೆ ವಾಸಮಾಡಿಕೊಂಡಿದ್ದು, ಅವರ ಸಂಬಂಧಿಕರ ತೋಟದಲ್ಲಿ ರೈಟರ್ ಕೆಲಸವನ್ನು ಮಾಡಿಕೊಂಡಿರುತ್ತಾರೆ. 1 ವಾರದ ಹಿಂದೆ ಮನೆಯಾದ ಕಡ್ತಲ ಗ್ರಾಮದ ಪೆಲತಕಟ್ಟೆಗೆ ಬಂದಿರುತ್ತಾರೆ. ಅವರು ಮುಂಚಿನಿಂದಲೂ ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಉಜಿರೆಯ ಎಸ್ ಡಿ ಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದವರು ದಿನಾಂಕ 10/05/2021 ರಂದು  ಅವರಿಗೆ ಕೆಮ್ಮು, ಜ್ವರ  ಜಾಸ್ತಿಯಾದ ಕಾರಣ ಹೆಬ್ರಿಯ ರಾಘವೇಂದ್ರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಬಂದಿದ್ದು, ಸಂಜೆ 18:00 ಗಂಟೆಗೆ ಮನೆಯಲ್ಲಿದ್ದವರು ಮೂತ್ರ ಮಾಡಲೆಂದು ಎದ್ದವರು ಕಾಲು ಮರಗಟ್ಟಿ  ಅಲ್ಲಿಯೇ  ಕುಸಿದು ಬಿದ್ದಿರುತ್ತಾರೆ. ನಂತರ ಪಿರ್ಯಾದಿದಾರರು ಮತ್ತು ಅಜಿತ್ ಅವರನ್ನು ಮೂತ್ರ ಮಾಡಿಸಿಕೊಂಡು ಬಂದಿದ್ದು, ನಂತರ ಮಂಚದ ಮೇಲೆ ಹೋಗಿ ಮಲಗಿಕೊಂಡು ನೀರು ಕೇಳಿರುತ್ತಾರೆ. ನಾನು ನೀರು ತೆಗೆದುಕೊಂಡು ಹೋಗುವ ಸಮಯಕ್ಕೆ ಅವರು ಕಣ್ಣುಗಳನ್ನು ಮೇಲೆ ಮಾಡಿ ಮಾತನಾಡದೆ ಇದ್ದು, ಕೂಡಲೇ ಅಂಬುಲೆನ್ಸ್ ಗೆ ಕರೆ ಮಾಡಿ ಕಾರ್ಕಳ ಸರಕಾರಿ ಆಸ್ಪತ್ರೆಗೆ  20:00 ಗಂಟೆಯ ಸಮಯಕ್ಕೆ   ಕರೆದುಕೊಂಡು ಹೋಗಿದ್ದು, ವೈಧ್ಯರು ಪರೀಕ್ಷಿಸಿ ಆಗಲೇ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಅರ್  ಕ್ರಮಾಂಕ 06/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣಗಳು

 • ಶಂಕರನಾರಾಯಣ: ದಿನಾಂಕ 10/05/2021 ರಂದು 11:15 ಗಂಟೆಗೆ ಪಿರ್ಯಾದಿದಾರರಾದ ರೂಪ (29), ಗಂಡ:ಸುರೇಶ ಪೂಜಾರಿ, ವಾಸ; ಬ್ರಹ್ಮಶ್ರೀ ನಿಲಯ ಚೌಕುಳಮಕ್ಕಿ ಆಜ್ರಿ ಗ್ರಾಮ ಇವರ  ಗಂಡ  ಸುರೇಶ ಪೂಜಾರಿ  ಇವರೊಂದಿಗೆ  ಅವರ  ತಂದೆಗೆ  ಸೇರಿದ ಕುಂದಾಪುರ    ತಾಲೂಕಿನ   ಆಜ್ರಿ  ಗ್ರಾಮದ   ಚೌಕುಳಮಕ್ಕಿ   ಎಂಬಲ್ಲಿ   ಜಾಗದಲ್ಲಿ  ಮನೆ   ಕಟ್ಟಲು  ಜಾಗ  ಸ್ವಚ್ಚ  ಮಾಡುತ್ತಿರುವಾಗ  ಆರೋಪಿ ರಾಮ ಪೂಜಾರಿ ಸಿದ್ದಾಪುರ ಗ್ರಾಮ ಇವರು ಸ್ಕೂಟಿಯಲ್ಲಿ  ಬಂದು ಈ  ಜಾಗದಲ್ಲಿ ಕೆಲಸ ಮಾಡಬೇಡಿ  ಎಂದು  ಹೇಳಿದರು ಮತ್ತೆ   ಯಾಕೆ  ಕೆಲಸ  ಮಾಡುವುದು  ಹೇಳಿ  ಅವಾಚ್ಯ  ಶಬ್ದದಿಂದ  ಬೈದು ಪಿರ್ಯಾದಿದಾರರ  ಗಂಡ   ಸುರೇಶ  ಇವರಿಗೆ  ಅಡ್ಡಗಟ್ಟಿ ಕೈಯಿಂದ  ದೂಡಿ  ಹಲ್ಲೆ  ಮಾಡಿದ್ದು,  ಈ  ಸಮಯ   ಜಗಳ  ಬಿಡಿಸಲು   ಹೋದ  ಪಿರ್ಯಾದಿದಾರರಿಗೆ  ಹಾಗೂ  ಅವರ   ಅಕ್ಕನ  ಮಗಳು  ಸುಜಾತ   ಇವಳಿಗೆ   ಸಹ  ಕೈಯಿಂದ  ಹಲ್ಲೆ   ಮಾಡಿ ಬೆದರಿಕೆ  ಹಾಕಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2021 ಕಲಂ: 341, 504, 323, 506, 354 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಪುಷ್ಪರಾಜ್ ಶೆಟ್ಟಿ (40), ತಂದೆ: ನಾರಾಯಣ ಶೆಟ್ಟಿ, ವಾಸ: ಕೃಷ್ಣಪ್ಪ ಅಪಾರ್ಟಮೆಂಟ್ , ಹರಿಗುರು ನಿಲಯ, ಸುಬ್ರಹ್ಮಣ್ಯ ನಗರ, ಪುತ್ತುರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಪುತ್ತೂರು ಗ್ರಾಮದ ಕೊಡಂಕೂರಿನಲ್ಲಿ ಶ್ರೀ ಸಾಯಿ ಎಂಬ ಮೆಡಿಕಲ್ ಶಾಫ್‌ ನಡೆಸಿಕೊಂಡಿದ್ದು,  ದಿನಾಂಕ 10/05/2021 ರಂದು ರಾತ್ರಿ 8:00 ಗಂಟೆಯ ಸಮಯಕ್ಕೆ ಸರಕಾರಿ ಆದೇಶದಂತೆ  ತನ್ನ ಮೆಡಿಕಲ್ ಶಾಫ್‌ನ್ನು ಮುಚ್ಚಿ ಹೊರಡುವಾಗ ಆರೋಪಿತರಾದ  ಹರೀಶ್ ಹಾಗೂ ಆತನ ಮಗನು ಮೆಡಿಕಲ್  ಬಳಿ ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಬಿ.ಪಿ ಖಾಯಿಲೆಗೆ ಮೆಡಿಸಿನ್ ಕೊಡುವಂತೆ ಒತ್ತಾಯಿಸಿದ್ದು  ಬೆಳಿಗ್ಗೆ ಕೊಡುವುದಾಗಿ ತಿಳಿಸಿದಾಗ, ಮಾತಿಗೆ ಮಾತು ಬೆಳೆದು ಹರೀಶನು ಕೈಯಲ್ಲಿದ್ದ ಕೀ ಬಂಚ್ ನಿಂದ ಹಾಗೂ ಅವರ ಮಗ ಕೈಯಿಂದ ಪಿರ್ಯಾದಿದಾರರಿಗೆ ಹೊಡೆದಿದ್ದು ಪರಿಣಾಮ ಪಿರ್ಯಾದಿದಾರರಿಗೆ ಮುಖಕ್ಕೆ, ಕಣ್ಣಿನ ಕೆಳಗೆ ರಕ್ತಗಾಯವಾಗಿದಲ್ಲದೇ ಆರೋಪಿಗಳು  ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 81/2021 ಕಲಂ: 341,323, 504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
 • ಹಿರಿಯಡ್ಕ: ಪಿರ್ಯಾದಿದಾರರಾದ ಜಗದೀಶ ಪೂಜಾರಿ (32),ತಂದೆ: ಬಾಸ್ಕರ ಪೂಜಾರಿ, ವಾಸ: ಇಂದಿರ ನಿಲಯ ದರ್ಖಾಸು ಕುಕ್ಕಿಕಟ್ಟೆ , ಬೆಳ್ಳಂಪಳ್ಳಿ ಗ್ರಾಮ ಉಡುಪಿ ಇವರ  ತಂದೆ  ದಿನಾಂಕ 10/05/2021 ರಂದು ಮಧ್ಯಾಹ್ನ 1:00 ಗಂಟೆಯ ವೇಳೆಗೆ ಪಿರ್ಯಾದಿದಾರರು ರಿಪೇರಿಗೆ ತಂದಿರಿಸಿದ ಸುಮಾರು 20 ಎಲ್‌ಸಿಡಿ ಟಿವಿಯನ್ನು ತನ್ನ ಮನೆಯ ಬಳಿಯ ದಾಸ್ತಾನು ಕೊಠಡಿಯಲ್ಲಿ ಇರಿಸಿದ್ದು ಅಲ್ಲದೆ ದಸ್ತಾನು ಕೊಠಡಿಯ ಇನ್ನೊಂದು ಪಾರ್ಶ್ವದಲ್ಲಿ ಕಟ್ಟಿಗೆಯನ್ನು ಶೇಖರಿಸದ್ದು, ಪಿರ್ಯದಿದಾರರ ಮೇಲಿನ ದ್ವೇಷದಿಂದ ಉದ್ದೇಶ ಪೂರ್ವಕವಾಗಿ  ತಾನು ವ್ಯಾಪಾರ ಮಾಡುವ ಅಂಗಡಿಯಿಂದ ಪ್ಲಾಸ್ಟಿಕ್ ಬಾಟಲಿಯಲ್ಲಿ ಸೀಮೆ ಎಣ್ಣೆಯನ್ನು ತಂದು ಬೆಂಕಿ ಹಚ್ಚಿರುವುದಾಗಿದೆ. ಘಟನೆಯಿಂದ ಸುಮಾರು 20 ಎಲ್‌ಸಿಡಿ ಟಿವಿ ಕರಕಲಾಗಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2021 ಕಲಂ: 436 ಐಪಿಸಿಯಂತೆ 28/2021 ಕಲಂ: 436 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.       
 • ಕುಂದಾಪುರ: ದಿನಾಂಕ 10/05/2021 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ರವೀಶ್ ಹೊಳ್ಳ ಇವರು ಕೋವಿಡ್‌ವೈರಾಣು ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣದ ಸಂಬಂಧ ಮುಂಜಾಗ್ರತಾ ಕ್ರಮದ ಬಗ್ಗೆ ರೌಂಡ್ಸ್‌ಕರ್ತವ್ಯದಲ್ಲಿರುವ ವೇಳೆ 16:15  ಗಂಟೆಗೆ ಕುಂದಾಪುರ ತಾಲೂಕು  ಬಸ್ರೂರು  ಗ್ರಾಮದ  ಬಸ್ರೂರು ಪೇಟೆ ಬಳಿ  KA 20 MA 4380  ನೇ ಶೀಪ್ಟ್ ಕಾರು ಚಾಲಕನು ತನ್ನ ಕಾರನ್ನು ಸಂಚಾರ ಮಾಡಿಕೊಂಡು ಬಂದು  ಕೋವಿಡ್‌ ಸಂಬಂಧ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸದೆ, ನಿರ್ಲಕ್ಷತನ ತೋರಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2021 ಕಲಂ:269, 271 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 10-05-2021 ರಿಂದ 24-05-2021 ರವರೆಗೆ ಕೋವಿಡ್ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದು ಈ ಬಗ್ಗೆ  ದಿನಾಂಕ: 10/05/2021 ರಂದು ಸುದರ್ಶನ್ ಬಿ.ಎನ್, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಸಂಚಾರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ  ಕುಂದಾಪುರ ಕಸಬಾ ಗ್ರಾಮದ ಹಳೆ ಬಸ್ ನಿಲ್ದಾಣದ ಬಳಿ ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ 06:00 ಗಂಟೆಯಿಂದ  17:00 ಗಂಟೆಯ ಮದ್ಯಾವಧಿಯಲ್ಲಿ ನಗರದ ಮುಖ್ಯ ಮಾರ್ಗವಾಗಿ ಈ ಕೆಳಕಂಡ ವಾಹನಗಳನ್ನು ಅದರ ಸವಾರರು ಚಲಾಯಿಸಿಕೊಂಡು ಬರುತ್ತಿದ್ದನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ  ವಾಹನಗಳನ್ನು ಅದರ ವಾಹನ ಸವಾರರು ಚಲಾಯಿಸಿಕೊಂಡು ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. 1). KA-05-MA-3909ನೇ Santro  ಕಾರು -1,  ಚಾಲಕ & ವಿಳಾಸ  ; ಸುರೇಶ  ಪ್ರಾಯ :42   ವರ್ಷ ತಂದೆ : ಕೆ. ಆರ್‌ ಚಿನ್ನಸ್ವಾಮಿ  ವಾಸ: ಸ್ವಾಮಿ ನಿಲಯ, ಅಸೋಡು ಗ್ರಾಮ  ಕುಂದಾಪುರ  ತಾಲೂಕು, 2). KA-19-ME-8342ನೇ  RITZ ಕಾರು -1,  ಚಾಲಕ & ವಿಳಾಸ  ; ಸುನಿಲ್‌‌ ಕುಮಾರ್‌  ಪ್ರಾಯ :38    ವರ್ಷ ತಂದೆ : ರೂಸೆ ಮೌರ್ಯ ವಾಸ: ಕಾಂತೇಶ್ವರ  ರಸ್ತೆ, ಗೋಪಾಡಿ  ಗ್ರಾಮ  ಕುಂದಾಪುರ  ತಾಲೂಕು,3) KA-20-EU-0692 ನೇ ಬೈಕ್‌‌-1,  ಸವಾರ & ವಿಳಾಸ  : ರಾಘವೇಂದ್ರ  ಪ್ರಾಯ 37  ವರ್ಷ ತಂದೆ  ಗಣಪ  ಪೂಜಾರಿ  ವಾಸ: ಬಸ್ರೂರು ಗ್ರಾಮ, ಕುಂದಾಪುರ  ತಾಲೂಕು, 4) KA-20-ER-1982 ನೇ ಬೈಕ್‌‌-1,  ಸವಾರ & ವಿಳಾಸ : ಮಹಾದೇವ  ಪ್ರಾಯ 37 ವರ್ಷ  ತಂದೆ  ರಾಮಣ್ಣ  ವಾಸ: ವಾಸ:  ಸಂತೆಮಾರ್ಕೆಟ್‌, ಕಸಬಾ ಗ್ರಾಮ, ಕುಂದಾಪುರ  ತಾಲೂಕು., 5) KA-20-U-173ನೇ ಸ್ಕೂಟರ್‌‌-1 ಸವಾರ & ವಿಳಾಸ : ಮೆಲ್ವಿನ್‌ ‌‌ಪ್ರಾಯ 60 ವರ್ಷ ತಂದೆ ಫೆಲಿಕ್ಸ್‌ ಕೋರಿಯ ವಾಸ: ಚಿಕ್ಕನ್‌‌ಸಾಲ್‌‌ ರಸ್ತೆ, ಕಸಬಾ ಗ್ರಾಮ, ಕುಂದಾಪುರ  ತಾಲೂಕು, 6) KA-05-ER-8112 ನೇ  ಬೈಕ್‌ ಸವಾರ & ವಿಳಾಸ : ಉದಯ  ಪ್ರಾಯ 45 ವರ್ಷ ತಂದೆ ತಂದೆ  ತಿಮ್ಮ  ಪೂಜಾರಿ  ವಾಸ: ಉಪ್ಪಿನಕುದ್ರು  ಗ್ರಾಮ, ಕುಂದಾಪುರ  ತಾಲೂಕು, 7) KA-20-EK-7543 ನೇ ಸ್ಕೂಟರ್‌‌-1 ಸವಾರ & ವಿಳಾಸ : ವಿನಯ ಚೌಹಣ್‌ಪ್ರಾಯ ಲೋಟನ್‌ಚೌಹಣ್‌ವಾಸ: ಸಂತೆಮಾರ್ಕೆಟ್‌, ಕಸಬಾ ಗ್ರಾಮ, ಕುಂದಾಪುರ  ತಾಲೂಕು, 8) KA-01-JB-9859 ಸ್ಕೂಟರ್‌‌ಸವಾರ, 9 ) KA-20-EU-1689 ನೇ ಸ್ಕೂಟರ್‌‌ ಸವಾರ, 10) KA-20-EK-0182 ನೇ ಸ್ಕೂಟರ್‌‌ ಸವಾರ  ಮೇಲ್ಕಂಡ ದ್ವಿಚಕ್ರ ವಾಹನ ಸವಾರರು ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2021  ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-05-2021 10:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ