ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

 • ಅಮಾಸೆಬೈಲು: ದಿನಾಂಕ 11/05/2021 ರಂದು ಸುಬ್ಬಣ್ಣ ಬಿ, ಪೊಲೀಸ್ ಉಪನಿರೀಕ್ಷಕರು ಅಮಾಸೆಬೈಲು ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದು ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 10/05/2021  ರಿಂದ 24/05/2021  ರವರೆಗೆ ಕೋವಿಡ್ – 19  ಸಾಂಕ್ರಾಮಿಕ  ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ್ದು ಅನಗತ್ಯ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು ಬೆಳಿಗ್ಗೆ 10:30 ಗಂಟೆಗೆ ಮಡಾಮಕ್ಕಿ ಗ್ರಾಮದ ಮಾಂಡಿ  ಮೂರ್ ಕೈ ಸರ್ಕಲ್ ಬಳಿ ಈ ಕೆಳಗೆ ತಿಳಿಸಿದ ದ್ವಿಚಕ್ರ ವಾಹನವನ್ನು ಆಪಾದಿತನು KA 20 EU 8297 ನೇ ಹೊಂಡಾ ಮೋಟಾರು ಸೈಕಲನ್ನು ಚಲಾಯಿಸಿಕೊಂಡು ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. ದ್ವಿಚಕ್ರ ವಾಹನ ಸವಾರ  ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2021 ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ದಿನಾಂಕ 11.05.2021 ರಂದು ಇಲಾಖಾ ಹೊಯ್ಸಳ ನಂಬ್ರ ಕೆ.ಎ. 20  ಜಿ 535 ನೇದರಲ್ಲಿ ಸಿಬ್ಬಂದಿಯವರೊಂದಿಗೆ, ದೇಶಾದ್ಯಂತ ಹರಡುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಸದ್ರಿ ಆದೇಶವನ್ನು ಪರಿಷ್ಕರಿಸಿ ದಿನಾಂಕ 10.05.2021 ರಂದು ಬೆಳಗ್ಗೆ 06.00 ಗಂಟೆಯಿಂದ ದಿನಾಂಕ 24.05.2021 ರ ಬೆಳಗ್ಗೆ 06.00 ಗಂಟೆಯವರೆಗೆ ಲಾಕ್‌ಡೌನ್ ಘೋಷಿಸಿದ್ದು,  ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ ಅನಗತ್ಯವಾಗಿ ಓಡಾಟ ನಿಷೇಧಿಸಿದ್ದು,  ಈ ನಿಗಾ ಇಡುವರೇ ರೌಂಡ್ಸ್ ನಲ್ಲಿ ಇರುವಾಗ ಸಮಯ ಸುಮಾರು ಬೆಳಗ್ಗೆ 10.00 ಗಂಟೆ ಸಮಯಕ್ಕೆ ಮೂಳೂರು ಗ್ರಾಮದ ಸುನ್ನಿ ಸೆಂಟರ್ ಹಿಂಬದಿ ಅಬ್ಬು ಮಹಮ್ಮದ್ ಎಂಬುವವರ ಮನೆಯ ಸಮೀಪ ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ದನಗಳನ್ನು ತಂದು ಕಡಿದು ಮಾಂಸ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಪಂಚರನ್ನು ಬರಮಾಡಿಕೊಂಡು ಹೊರಟು 10:30 ಗಂಟೆಗೆ ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು ನೋಡಿದಲ್ಲಿ ಮೂಳೂರು ಗ್ರಾಮದ ಸುನ್ನಿ ಸೆಂಟರ್‌ ಹಿಂಬದಿ ಅಬ್ಬು ಮಹಮ್ಮದ್  ಎಂಬವರ ಮನೆ ಹತ್ತಿರ ಪಿಕ್‌ಅಪ್‌ ವಾಹನವೊಂದನ್ನು ನಿಲ್ಲಿಸಿದ್ದು, ಮನೆಯ ಸಮೀಪ ನಾಲ್ಕು ಕರುಗಳನ್ನು ಕಟ್ಟಿ ಹಾಕಿದ್ದು ಅಲ್ಲದೇ ಅಲ್ಲೇ ಸಮೀಪದಲ್ಲಿ ಮಾಂಸವನ್ನು ತಯಾರಿ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ 10.45 ಗಂಟೆಗೆ  ದಾಳಿ ನಡೆಸಿದಲ್ಲಿ ಸಮವಸ್ತ್ರದಲ್ಲಿ ಇದ್ದವರನ್ನು ಮತ್ತು ಜೀಪನ್ನು ನೋಡಿ ಅಲ್ಲಿದ್ದವರು ಓಡಲು ಪ್ರಯತ್ನಿಸಿದ್ದು, ಆರು ಜನರನ್ನು ಹಿಡಿದುಕೊಂಡಿದ್ದು ಉಳಿದ ಮೂವರು ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ. ಹಿಡಿದುಕೊಂಡವರನ್ನು ವಿಚಾರಿಸಲಾಗಿ 1)  ಮನ್ಸೂರ್ ಅಹಮ್ಮದ್ ಯಾನೆ ಅಹಮ್ಮದ್ ಮನ್ಸೂರ್ 2) ಮಹಮ್ಮದ್ ಅಜರುದ್ದೀನ್ 3) ನವಾಜ್ 4) ಮಹಮ್ಮದ್ ಹನೀಫ್ ಯಾನೆ ಆಸ್ಪಕ್ 5) ಮಹಮ್ಮದ್ ಇಸ್ಮಾಯಿಲ್ 6) ಉಮ್ಮರಬ್ಬ ಎಂದು ತಿಳಿಸಿದ್ದು ಓಡಿ ಹೋದವರು 1) ಇಸ್ಮಾಯಿಲ್ 2) ರಪೀಕ್ 3) ಅಬ್ಬು ಮಹಮ್ಮದ್ ಎಂದು ತಿಳಿಸಿದ್ದು, ಹಿಡಿಕೊಂಡವರನ್ನು ವಿಚಾರಿಸಿದ್ದಲ್ಲಿ ನಾವುಗಳು ಇಸ್ಮಾಯಿಲ್‌ನೊಂದಿಗೆ ಸೇರಿ ಆತನ ಸೂಚನೆಯಂತೆಯೇ 5 ಬಿಡಾಡಿ ದನದ ಕರುಗಳನ್ನು ಮಜೂರು ಕಡೆಯಿಂದ ಕೆ.ಎ. 20 ಸಿ. 4987 ಪಿಕ್ ಅಪ್ ವಾಹನದಿಂದ ಕದ್ದು  ತಂದು, ಅದರಲ್ಲಿ  1 ಕರುವನ್ನು ಕಡಿದು  ಮಾಂಸ ಮಾಡಿ ಮಾರಾಟ ಮಾಡುವುದಾಗಿ ಒಪ್ಪಿಕೊಂಡಂತೆ ಪಂಚರ ಸಮಕ್ಷಮ ಆರೋಪಿಗಳನ್ನು ದಸ್ತಗಿರಿ ಮಾಡಿ ಸ್ಥಳದಲ್ಲಿ ಪರೀಶಿಲಿಸಿದ್ದಲ್ಲಿ ಕಟ್ಟಿ ಹಾಕಿದ 1) ಕಪ್ಪು ಕಂದು ಬಣ್ಣದ ಗಂಡು ಕರು – 1, 2) ಕಪ್ಪು ಕಂದು ಬಣ್ಣದ ದೊಡ್ಡ ಗಂಡು ಕರು – 1, 3) ಕಂದು ಬಣ್ಣದ ಹೆಣ್ಣು ಕರು – 1, 4) ಕಂದು ಬಣ್ಣದ ಗಂಡು ಕರು – 1, 5) ಸುಮಾರು 30 ಕೆ.ಜಿ. ಮಾಂಸ.  6) ಮಾಂಸ ಹಾಕಲು ಉಪಯೋಗಿಸಿದ ದೊಡ್ಡ ಅಲ್ಯೂಮಿನಿಯಮ್ ಪಾತ್ರೆ – 1, 7) ತೂಕದ ಮಾಪಕ – 1, 8) ಮರದ ದಿಣ್ಣು. 9) ಚೂರಿ -2, 10) ಕೆ.ಎ. 20 ಸಿ. 4987 ಪಿಕ್ ಅಪ್ ವಾಹನ. ಆರೋಪಿಗಳು ತಂದ 11) ಸ್ಕೂಟರ್‌ ನಂಬ್ರ ಕೆ.ಎ. 20 ಇ.ಎನ್. 8331, 12) ಸ್ಕೂಟರ್ ನಂಬ್ರ ಕೆ.ಎ. 20 ಇ.ವಿ. 6355, 13) ಸ್ಕೂಟರ್ ನಂಬ್ರ ಕೆ.ಎ. 20 ಇ.ಎನ್. 9888, 14) ಸ್ಕೂಟರ್ ನಂಬ್ರ ಕೆ.ಎ. 20 ಇ.ವಿ. 6124 ಆಗಿದ್ದು. ಸದ್ರಿ ಆರೋಪಿ ಮತ್ತು ಸೊತ್ತುಗಳನ್ನು ಪಂಚರ ಸಮಕ್ಷಮ ಮಹಜರು ಮುಖೇನ  ಸ್ವಾಧೀನ ಪಡಿಸಿಕೊಂಡಿದ್ದು ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2021 ಕಲಂ 4,5,9,11, ಕರ್ನಾಟಕ ಗೋಹತ್ಯೆ ನಿಷೇಧ  ಕಾಯ್ದೆ 1964 , ಕಲಂ. 11(1)(ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯಿದೆ -1960 ಹಾಗೂ ಮತ್ತು   269, 379 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ 

 • ಕುಂದಾಪುರ: ದಿನಾಂಕ: 11-05-2021 ರಂದು 07:15 ಗಂಟೆಗೆ ಪಿರ್ಯಾದಿ ನಾಗರಾಜ ಶೆಟ್ಟಿ ಇವರು ತಂದು ನೀಡಿದ ಲಿಖಿತ ಪಿರ್ಯಾದಿ ಸಾರಾಂಶ ವೇನೆಂದರೆ. ದಿನಾಂಕ: 07-05-2021 ರಂದು ಪಿರ್ಯಾದಿದಾರರು  17:30 ಗಂಟೆಗೆ ಮಗಳ ಮದುವೆಯ ಕಾರ್ಯಕ್ರಮಕ್ಕೆ ತನ್ನ ಮನೆಯಾದ ಕರ್ಕಿಯಿಂದ ಸೌಕೂರು ಹೋಗಿದ್ದು ದಿನಾಂಕ: 10-05-20201 ರಂದು ಮದುವೆಯ ಕಾರ್ಯಕ್ರಮ ಮುಗಿಸಿ ವಾಪಾಸು 20:00 ಗಂಟೆಗೆ ಪಿರ್ಯಾದಿದಾರರ ಮನೆಯಾದ ರಮ್ಯ ನಿಲಯ ಕರ್ಕಿಗೆ ಬಂದು ನೋಡುವಾಗ ಮನೆಯ ಮಾಡಿದ ಹಂಚು ತೆಗೆದು ಯಾರೋ ಮನೆಯ ಒಳಗೆ ಪ್ರವೇಶಿಸಿರುವುದು ಕಂಡು ಬಂದಿದ್ದು ಮನೆಯ ಬೀಗ ತೆಗೆದು ಒಳಗೆ ಹೋಗಿ ನೋಡುವಾಗ ಮನೆ ಕಪಾಟಿನಲ್ಲಿ ಇರಿಸಿದ್ದ  1 ¼ ಪಾವನಿನ ಚಿನ್ನದ ನೆಕ್ಲೆಸ್ -1 ಮತ್ತು 1 ಪಾವನಿನ ಚಿನ್ನದ ನೆಕ್ಲೇಸ್ – 1 ಹಾಗೂ ¼ ಪಾವನಿನ ಉಂಗುರ -1 , ಹಾಗೂ ನಗದು 75,000 ಒಟ್ಟು 1,45000 ರೂ ಮೌಲ್ಯದ ನಗ ನಗದು ಕಂಡು ಬರಲಿಲ್ಲ  ದಿನಾಂಕ: 07-05-2021 ರಂದು 17:30 ಗಂಟೆಯಿಂದ  09-05-2021 ರಂದು 20: ಗಟೆಯ ನಡುವೆ ಯಾರೋ ಕಳ್ಳರು ಸುಮಾರು 1,45000 ರೂ ಮೌಲ್ಯದ ನಗ ನಗದು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2021, ಕಲಂ: 457.454,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

   

ಇತ್ತೀಚಿನ ನವೀಕರಣ​ : 11-05-2021 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080