ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ದಿನಾಂಕ 09/04/2023 ರಂದು ಪಿರ್ಯಾದಿದಾರರಾದ ಶರಣಪ್ಪ ಹನುಮಂತ ಪವಾರ  (40), ತಂದೆ: ದಿ: ಹನುಮಂತ ಪವರ್‌, ವಾಸ: ಮನೆ ನಂ. 19-ಪಿ.ಪಿ. ಹಿರೇಮಠ ಬಲಕುಂದಿ, ಬಾಗಲಕೋಟೆ  ಜಿಲ್ಲೆ. ಹಾಲಿ ವಾಸ: ಕಿಶೋರ್‌ ಗುರ್ಮೆ ರವರ ಪ್ಲಾಂಟ್‌  ಚಂದ್ರನಗರ, ಕಳತ್ತೂರು  ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಮನೆಯಲ್ಲಿರುವಾಗ ನಾದಿನಿ ಅಶ್ವಿನಿ  ರವರ ಜೊತೆ ಪಿರ್ಯಾದಿದಾರರ ಇಬ್ಬರು ಮಕ್ಕಳಾದ ಕಲ್ಪನಾ ಹಾಗೂ  ಕವನಾ ರವರು  ಮಧ್ಯಾಹ್ನ ಹಾಲು ತರಲು  ಚಂದ್ರನಗರ  ಎಂಬಲ್ಲಿಗೆ  ಹೋಗಿದ್ದು, ಮಧ್ಯಾಹ್ನ 2:20 ಗಂಟೆ ಸುಮಾರಿಗೆ  ನಾದಿನಿ ಅಶ್ವಿನಿರವರು ಮೊಬೈಲ್‌ಗೆ  ಕರೆ  ಮಾಡಿ ಮಗಳು ಕವನಾ (7) ಈಕೆಗೆ  ಅಟೋ ರಿಕ್ಷಾ ಡಿಕ್ಕಿ ಹೊಡೆದು  ಅಪಘಾತವಾಗಿರುವ ವಿಚಾರ  ತಿಳಿಸಿದಂತೆ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಲಾಗಿ ಮಗಳು ಕವನಾಳು ರಸ್ತೆ  ಅಪಘಾತಕ್ಕೀಡಾಗಿ ಪ್ರಜ್ಷಾಹೀನ ಸ್ಥಿತಿಯಲ್ಲಿದ್ದಳು. ನಾದಿನಿ ಅಶ್ವಿನಿರವರಲ್ಲಿ ವಿಚಾರ ಕೇಳಲಾಗಿ  ತಾನು ಕಲ್ಪನಾ ಹಾಗೂ ಕವನಾಳು ಅಂಗಡಿಯಿಂದ ಹಾಲು ತೆಗೆದುಕೊಂಡು ಸಾರ್ವಜನಿಕ ಡಾಮಾರು ರಸ್ತೆ ಬದಿಯಲ್ಲಿ ನಡೆದುಕೊಂಡು ಮನೆ ಕಡೆಗೆ ಬರುತ್ತಿರುವಾಗ ಕಳತ್ತೂರು ಗ್ರಾಮದ ಚಂದ್ರನಗರ ಜನನಿ ಹೊಟೇಲ್‌ಬಳಿ ಮಧ್ಯಾಹ್ನ 2:15 ಗಂಟೆ  ಸುಮಾರಿಗೆ ತಲುಪುವಾಗ ಕಾಪು ಕಡೆಯಿಂದ ಶಿರ್ವ ಪೇಟೆ  ಕಡೆಗೆ   ಅಟೋ ರಿಕ್ಷಾ ಚಾಲಕನು ರಿಕ್ಷಾವನ್ನು ಅತೀ ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಹಿಂದಿನಿಂದ ಕವನಾಳಿಗೆ  ಡಿಕ್ಕಿ ಹೊಡೆದ  ಪರಿಣಾಮ ಆಕೆ ಕವಚಿ ಬಿದ್ದು, ಹಣೆಗೆ ಒಳಜಖಂ ಆಗಿದ್ದು, ಮುಖಕ್ಕೆ, ಕೈ ಬೆರಳಿಗೆ ಮೊಣ ಕಾಲುಗಳಿಗೆ ರಕ್ತ ಗಾಯವಾಗಿದ್ದು, ಎದೆಗೆ ಗುದ್ದಿದ ನೋವು ಆಗಿರುತ್ತದೆ.  ತನಗೆ  ಹಾಗೂ ಕಲ್ಪನಾಳಿಗೆ  ಯಾವುದೇ ಗಾಯಗಳಾಗಿರುವುದಿಲ್ಲ. ಅಟೋ  ರಿಕ್ಷಾ ಚಾಲಕನು ಅಟೋವನ್ನು ನಿಲ್ಲಿಸಿ ಕವನಾಳನ್ನು ಉಪಚರಿಸಿದ್ದು, ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ  ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 33/2023   ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶಿರೂರು ಮೊಹಮ್ಮದ್ ಅಜೀಮ್ (48), ತಂದೆ : ಎಸ್.ಎ. ನಿಜಾಮುದ್ದೀನ್, ವಾಸ : H.NO : 1-220(F), ಝಹರಾ ಮಂಜಿಲ್, ನ್ಯೂ ಕಾಲೋನಿ, ನಿರೋಡಿ, ಮಾರ್ಕೇಟ್ ಶಿರೂರು, ಶಿರೂರು ಗ್ರಾಮ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಇವರು ಶಿರೂರು ಗ್ರಾಮದ  ಶಿರೂರು ಮಾರ್ಕೇಟ್ ನಲ್ಲಿ ಝಹರಾ ಎಂಟರ್ ಪ್ರೈಸಸ್ ಎಂಬ ಹಾರ್ಡವೇರ್ ಮತ್ತು ಬಿಲ್ಡಿಂಗ್ ಮೆಟೀರಿಯಲ್ಸ್ ಎಂಬ ಅಂಗಡಿ ವ್ಯವಹಾರ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ  09/04/2023 ರಂದು ಸಾಯಂಕಾಲ 6:15 ಗಂಟೆಗೆ ಮನೆಯ ಬಾಗಿಲಿಗೆ ಬೀಗಹಾಕಿ  ತನ್ನ ಹಿರಿಯ ಮಗನಾದ ಮೊಹಮ್ಮದ್ ಅಯಾನುದ್ದೀನ್ ನೊಂದಿಗೆ ಶಿರೂರು ವೆಂಕಟರಮಣ ದೇವಸ್ಥಾನ ರಸ್ತೆಯಲ್ಲಿರುವ   ತನ್ನ  ಹೆಂಡತಿ ಮನೆಗೆ  ಹೋಗಿ, ಅಲ್ಲಿದ್ದ  ತನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು, ಅಲ್ಲಿಂದ ಬೈಂದೂರಿಗೆ ಹೋಗಿ ಬಟ್ಟೆಬರೆ ಖರೀದಿಸಿ  ರಾತ್ರಿ 11:00  ಗಂಟೆಗೆ  ವಾಪಾಸು ಮನೆಗೆ ಬಂದಿರುತ್ತಾರೆ. ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ  ಬಾಗಿಲಿನ ಡೋರ್ ಲಾಕ್  ನ್ನು ಯಾವುದೋ ಆಯುಧ ದಿಂದ ಒಡೆದು  ಒಳ  ಪ್ರವೇಶಿಸಿ  ಮನೆಯ ಒಳಗೆ  ಪಿರ್ಯಾದಿದಾರರ ಬೆಡ್  ರೂಂ  ನಲ್ಲಿದ್ದ   ಕಪಾಟಿನ ಕೀ ಯನ್ನು  ತೆಗೆದುಕೊಂಡು  ಕಪಾಟಿನ ಬಾಗಿಲು ತೆಗೆದು 10 ಲಕ್ಷ ರೂಪಾಯಿ ಹಣ ,  ಕಪಾಟಿನ ಡ್ರಾವರ್ ದಲ್ಲಿ ಬಾಕ್ಸ್ ನಲ್ಲಿ ಇಟ್ಟಿದ್ದ ಪಿರ್ಯಾದಿದಾರರ ಹೆಂಡತಿಯ ಒಡವೆಗಳಾದ ಚಿನ್ನದ ಬಳೆ-2, ಚಿನ್ನದ ಚೈನ್-1, ಉಂಗುರ-3 ಹಾಗೂ ಮಗಳ ಚಿನ್ನದ ಚೈನ್ -2. ಒಟ್ಟು  8 ಲಕ್ಷ ರೂಪಾಯಿ ಮೌಲ್ಯದ 15 ಪಾವನ್ ಚಿನ್ನದ ಒಡವೆ. ಹಾಗೂ ಕಪಾಟಿನಲ್ಲಿ ಇಟ್ಟಿದ್ದ ಬೆಳ್ಳಿಯ ನಾಣ್ಯ ಮತ್ತು ಬೆಳ್ಳಿಯ ಪಾತ್ರೆ ಒಟ್ಟು ಅರ್ಧ ಕೆ.ಜಿ ತೂಕದ 30,000/- ರೂಪಾಯಿ ಮೌಲ್ಯದ ಸೊತ್ತು ಹಾಗೂ ಜಯಲಕ್ಷ್ಮೀ ಅಂಗಡಿಯಿಂದ ತಂದಿದ್ದ 3,500/- ಮೌಲ್ಯದ  ಗವನ್ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸ್ವತ್ತಿನ ಒಟ್ಟು ಮೌಲ್ಯ 18,33,500/-ರೂಪಾಯಿ ಆಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2023  ಕಲಂ. 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಹೆಬ್ರಿ: ದಿನಾಂಕ 10/04/2023 ರಂದು ನಂದಕುಮಾರ.ಎಂ.ಎಂ, ಪೊಲೀಸ್‌ ಉಪನಿರೀಕ್ಷಕರು, ಹೆಬ್ರಿ ಪೊಲೀಸ್‌ ಠಾಣೆ ಇವರಿಗೆ ಬಂದ ಮಾಹಿತಿಯಂತೆ ಹೆಬ್ರಿ ತಾಲೂಕು ಚಾರ ಗ್ರಾಮದ ಚಾರ ಬಸ್ಸು ನಿಲ್ದಾಣದ ಬಳಿ  ನೋಡಿದಾಗ ಆರೋಪಿತ ಅರುಣ ನಾಯ್ಕ (33), ತಂದೆ: ಮಂಜುನಾಥ ನಾಯ್ಕ, ವಾಸ: ಮನೆ ನಂ: 1-205 ಕೆಸಾಪುರ ಯಡ್ತಾಡಿ ಅಂಚೆ ಯಡ್ತಾಡಿ ಗ್ರಾಮ ಕುಂದಾಪುರ ತಾಲೂಕು  ಎಂಬಾತ  ಬಸ್ಸು ನಿಲ್ದಾಣ ಬದಿಯಲ್ಲಿ  ನಿಂತುಕೊಂಡು ಒಂದು ರೂಪಾಯಿಗೆ 70 ಎಂದು ಮಟ್ಕಾ ಜೂಜಾಟಕ್ಕೆ ಜನರನ್ನು ಕರೆದು ಚೀಟಿಯ ಮೇಲೆ ಪೆನ್ನಿನಿಂದ ಅಂಕಿಗಳನ್ನು ಬರೆಯುತ್ತಿದ್ದಲ್ಲಿಗೆ ದಾಳಿ ಮಾಡಿ ಆತನ ಬಳಿವಿದ್ದ 1,320 /-ರೂಪಾಯಿ ನಗದು, ಮಟ್ಕಾ ನಂಬ್ರ ಬರೆದ ಚೀಟಿ ಹಾಗೂ ಬಾಲ್ ಪೆನ್ನನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 20/2023 ಕಲಂ: 78(I)(III) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-04-2023 09:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080