ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ  ಈಶ್ವರ ಖಾರ್ವಿ (34), ತಂದೆ: ನಾರಾಯಣ ಖಾರ್ವಿ, ವಾಸ:ಬೈರು ಮನೆ ಅಳಿವೆಕೋಡಿ, ತಾರಾಪತಿ , ಪಡುವರಿ ಗ್ರಾಮ , ಬೈಂದೂರು ತಾಲೂಕು ಇವರು ಆಟೋ ರಿಕ್ಷಾವನ್ನು ಶಾಲೆಬಾಗಿಲು ರಿಕ್ಷಾ ನಿಲ್ದಾಣದಲ್ಲಿ ಇಟ್ಟುಕೊಂಡು ಬಾಡಿಗೆ ಮಾಡಿಕೊಂಡಿದ್ದು, ದಿನಾಂಕ 10/04/2023ರಂದು ಸಂಜೆ ಸಮಯ ಬಾಡಿಗೆ ಬಗ್ಗೆ ತಾರಾಪತಿ ಅಳಿವೆಕೋಡಿಗೆ ರಿಕ್ಷಾದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ಬಿಟ್ಟು ಅಲ್ಲಿಂದ ವಾಪಾಸ್ಸು ಶಾಲೆ ಬಾಗಿಲು ಕಡೆಗೆ ತಾರಾಪತಿ ರಸ್ತೆಯಲ್ಲಿ ಉಪ್ಪುಂದ ಗ್ರಾಮದ ತಾರಾಪತಿ ಪೋಸ್ಟ್ ಆಫೀಸ್ ಬಳಿ ಸಮಯ ಸಂಜೆ 7:40 ಗಂಟೆಗೆ ಹೋಗುತ್ತಿರುವಾಗ ಪಿರ್ಯಾದಿದಾರರ ರಿಕ್ಷಾದ ಹಿಂದಿನಿಂದ  KA-47-X-6948 ನೇ ಹೀರೋ ಸ್ಪೆಂಡರ್ ಮೋಟಾರು ಸೈಕಲ್ ನ್ನು ಅದರ ಸವಾರ ಆನಂದರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಆಟೋ ರಿಕ್ಷಾವನ್ನು  ಹಿಂದಿಕ್ಕಿ  ಓಲಗ ಮಂಟಪ ಕಡೆಯಿಂದ ತಾರಾಪತಿ ಕಡೆಗೆ ಮೋಟಾರ್ ಸೈಕಲ್ ನಂಬ್ರ KA-20-EM-8442 ನೇದರಲ್ಲಿ  ಬರುತ್ತಿದ್ದ ಮಹೇಶ್ ರವರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರು ಸೈಕಲ್ ಸವಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಅಪಘಾತದಿಂದ ಮಹೇಶ್ ರವರ ತಲೆ ರಸ್ತೆಗೆ ಬಡಿದಿದ್ದು, ಅವರ ತಲೆಗೆ ಒಳ ಜಖಂ ಆಗಿ ಕಿವಿ, ಮೂಗು, ಹಾಗೂ ಬಾಯಿಯಿಂದ ರಕ್ತ ಬರುತ್ತಿದ್ದು, ಬಲಕಾಲಿಗೆ ರಕ್ತಗಾಯವಾಗಿರುತ್ತದೆ. ಢಿಕ್ಕಿ ಹೊಡೆದ ಮೋಟಾರು ಸೈಕಲ್ ಸವಾರ ಆನಂದ ರವರಿಗೆ ಮುಖಕ್ಕೆ, ಬಲಕೈಗೆ ಹಾಗೂ ಬಲಕಾಲಿಗೆ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರು ಗಾಯಾಳುಗಳನ್ನು ಎತ್ತಿ ಉಪಚರಿಸಿ ಮಹೇಶ್ ರವರನ್ನು ಚಿಕಿತ್ಸೆ ಬಗ್ಗೆ 108 ಅಂಬುಲೆನ್ಸ್  ವಾಹನದಲ್ಲಿ ಹಾಗೂ ಗಾಯಾಳು ಆನಂದರವರನ್ನು ಖಾಸಗಿ ಕಾರಿನಲ್ಲಿ ಚಿನ್ಮಯಿ ಆಸ್ಪತ್ರೆಗೆ ಕಳುಹಿಕೊಟ್ಟಿದ್ದು, ಆನಂದರವರನ್ನು ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಿಸಿಕೊಂಡಿದ್ದು, ಮಹೇಶರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ ಮಹೇಶರವರನ್ನು ಮಣಿಪಾಲ  ಕೆ. ಎಂ. ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ, ಅಲ್ಲಿನ ವೈದ್ಯರು ಕೂಡಾ ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದಂತೆ ಮಂಗಳೂರಿನ ಎ ಜೆ ಆಸ್ಪತ್ರೆಗೆ ದಿನಾಂಕ 11/04/2023 ರಂದು ಬೆಳಗಿನ ಜಾವ 3:42 ಗಂಟೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರ ಮುಂದೆ ಹಾಜರುಪಡಿಸಿದಾಗ ಮಹೇಶರವರನ್ನು ಪರೀಕ್ಷೀಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 57/2023 ಕಲಂ:  279, 304(ಎ) ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಜಯರಾಮ  ಪೂಜಾರಿ (37), ತಂದೆ:  ಶೀನ ಪೂಜಾರಿ,   ವಾಸ: ಬಾತಾಳಿ ತಡ್ಕಲ್‌ಜೆಡ್ಡು  ಹೆಂಗವಳ್ಳಿ ಗ್ರಾಮ ಕುಂದಾಪುರ ತಾಲೂಕು ಹಾಗೂ ಅವರ ತಂದೆ  ಶೀನ ಪೂಜಾರಿ  (63)  ಇವರು ದಿನಾಂಕ 10/04/2023 ರಂದು 21:00 ಗಂಟೆಗೆ ಕುಂದಾಪುರ  ತಾಲೂಕಿನ ಹೆಂಗವಳ್ಳಿ ಗ್ರಾಮದ ಬಾತಾಳಿ ತಡ್ಕಲ್‌ಜೆಡ್ಡು ಎಂಬಲ್ಲಿ ಇರುವ ಅಡಿಕೆ  ತೋಟಕ್ಕೆ  ನೀರು ಬಿಡಲು ಪಂಪಸೆಟ್   ಶೆಡ್‌‌ಗೆ   ಸ್ವಿಚ್  ಹಾಕಲು  ಹೋಗಿದ್ದು, ಪಂಪಸೆಟ್  ಸ್ವಿಚ್ ಹಾಕಿದಾಗ   ನೀರು  ಬಾರದೇ  ಇರುವ   ಕಾರಣ ಶೀನ  ಪೂಜಾರಿ  ಇವರು  ಹೊಳೆಯಲ್ಲಿ  ಇದ್ದ  ಪೈಪ್ ಸರಿ ಮಾಡಲು ಹೋದಾಗ  ಅಕಸ್ಮಾತ ಕಾಲು   ಜಾರಿ  ಹೊಳೆಯ ನೀರಿಗೆ ಬಿದ್ದು ನೀರಿನಲ್ಲಿ  ಮುಳುಗಿ  ಮುಳುಗಿ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 10/2023 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಕಾರ್ಕಳ ತಾಲೂಕು ಬೋಳ ಗ್ರಾಮದ ಕೆರೆಕೋಡಿ ದರ್ಖಾಸು ನಿವಾಸಿ ಶ್ರೀಮತಿ ಸುಶೀಲಾ ಇವರ ಮಗಳು ಶೋಭಾ (40) ಇವರು ಹಲವಾರು ವರ್ಷಗಳಿಂದ ಮಾನಸಿಕ ಅಸ್ವಸ್ಥತೆ ಮತ್ತು ಭುದ್ದಿಮಾಂದ್ಯತೆಯಿಂದ ಬಳಲುತ್ತಿದ್ದು, ಈ ಬಗ್ಗೆ ಸಾರ್ವಜನಿಕ ಸರಕಾರಿ ಆಸ್ಪತ್ರೆ, ಕಾರ್ಕಳ ಇಲ್ಲಿಯ ವೈದ್ಯಾಧಿಕಾರಿಯವರಿಂದ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 10/04/2023 ರಂದು ರಾತ್ರಿ 9:30 ಗಂಟೆಗೆ ಊಟ ಆದ ಬಳಿಕ ಮನೆಯಲ್ಲಿ, ತಾನು ಅನಾರೋಗ್ಯದ ಬಗ್ಗೆ ಸೇವಿಸುತ್ತಿದ್ದ ಎಲ್ಲಾ ಮಾತ್ರೆಗಳನ್ನು ಒಟ್ಟಿಗೆ ಸೇವಿಸಿ ಅಸ್ವಸ್ಥಗೊಂಡವರನ್ನು ದಿನಾಂಕ 11/04/2023 ರಂದು ಬೆಳಗ್ಗೆ 9:30 ಗಂಟೆಗೆ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕೊಂಡು ಹೋದಾಗ ಅಲ್ಲಿಯ ವೈದ್ಯರು ಶೋಭಾ ರವರನ್ನು ಬೆಳಗ್ಗೆ 10:55 ಗಂಟೆಗೆ ಪರೀಕ್ಷಿಸಿ, ಶೋಭಾ ಇವರು  ಆದಾಗಲೇ ದಾರಿ ಮಧ್ಯೆ ಮೃತಪಟ್ಟ ಬಗ್ಗೆ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 24/2023 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸುಮಿತ್ರಾ (47), ಗಂಡ: ಲಕ್ಷ್ಮಣ್ ಮೂಲ್ಯ , ವಾಸ: ಸುಮ ಚೈತ್ರಾ ನಿವಾಸ ದಿಡಿಂಬಿರಿ ಮುಡಾರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ಗಂಡ ಲಕ್ಷ್ಮಣ್ ಮೂಲ್ಯ (53) ಇವರು ದಿನಾಂಕ 09/04/2023 ರಂದು ಬೆಳಿಗ್ಗೆ ಕೆಲಸ್ಕೆಂದು ಮನೆಯಿಂದ ಹೋದವರು ಸಂಜೆಯಾದರೂ ಮನೆಗೆ ಬಾರದೇ ಇದ್ದು, ಅವರ ನಂಬರ್ ಗೆ ಕರೆ ಮಾಡಿ ಕೇಳಿದಾಗ  ಕರೆ ಕಟ್ ಮಾಡಿದ್ದು,  ವಾಪಾಸ್ಸು ಮನೆಗೆ ಬಾರದೇ, ಸಂಬಂಧಿಕರ ಮನೆಗೆ ಹೋಗದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2023 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಆತ್ರೇಯ ಆಚಾರ್ಯ ಇವರಿಗೆ ತುಷಾರ್ ಕಪೂರ್ ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡು ಬಿಟ್ ಕಾಯಿನ್ ನಲ್ಲಿ ಇನ್‌‌ವೆಸ್ಟ್‌‌ಮೆಂಟ್ ಮಾಡಿದಲ್ಲಿ ಅತೀ ಲಾಭ ಬರುವ ಬಗ್ಗೆ ಆಸೆ ತೋರಿಸಿ, ಪಿರ್ಯಾದಿದಾರರಿಂದ Binance ಹಾಗೂ Noones.com ನಲ್ಲಿ ವ್ಯಾಲೆಟ್ ಓಪನ್ ಮಾಡಿಸಿ, ಹಣ ಪಾವತಿಸುವಂತೆ ತಿಳಿಸಿರುತ್ತಾನೆ. ಇದನ್ನು ನಂಬಿದ ಪಿರ್ಯಾದಿದಾರರು ದಿನಾಂಕ 19/03/2023 ರಿಂದ ದಿನಾಂಕ 09/04/2023 ರ ಮಧ್ಯವಧಿಯಲ್ಲಿ ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂಪಾಯಿ 25,52,300/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿರುತ್ತಾರೆ.  ಆ ಬಳಿಕ ಪಿರ್ಯಾದಿದಾರರ ವ್ಯಾಲೇಟ್ ನಲ್ಲಿದ್ದ ಬಿಟ್ ಕಾಯಿನ್ ನ್ನು ಆರೋಪಿಯು ದಿನಾಂಕ 09/04/2023 ರಂದು ಟ್ರಾನ್ಸ್‌‌ಫರ್ ಮಾಡಿ, ಬಿಟ್ ಕಾಯಿನ್ ನೀಡದೇ ಪಡೆದ ಹಣ ವಾಪಾಸು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ಸೆನ್‌ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2023  ಕಲಂ: 66(C)  66(D) ಐ.ಟಿ. ಆಕ್ಟ್ ನಂತೆ  ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ: ಪಿರ್ಯಾದಿದಾರರಾದ ಕೃಷ್ಣಪ್ಪ ಅಮೀನ್‌ (60), ತಂದೆ: ಲೋಕು ಪೂಜಾರಿ, ವಾಸ: ಕುಕ್ಕಾಬೆ ಹೌಸ್‌, ದೂಪದಕಟ್ಟೆ ಅಂಚೆ, ನಿಟ್ಟೆ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರಿಗೂ  ದೂರದ ಸಂಬಂಧಿ ಆರೋಪಿ ವಿಶ್ವನಾಥ ಪೂಜಾರಿಗೂ  ನಿಟ್ಟೆ ಗ್ರಾಮದ ಕುಕ್ಕಾಬೆ ಎಂಬಲ್ಲಿ ಜಾಗದ ವಿಚಾರದಲ್ಲಿ ತಕರಾರು ಇದ್ದು, ಇದೇ ವಿಚಾರದಲ್ಲಿ ದಿನಾಂಕ 11/04/2023 ರಂದು ಬೆಳಿಗ್ಗೆ 09:00 ಗಂಟೆಗೆ ಪಿರ್ಯಾದಿದಾರರು ಸೈಕಲ್‌‌ನಲ್ಲಿ ಮನೆಯಿಂದ ನಿಟ್ಟೆ ಕಡೆಗೆ ಹೋಗುತ್ತಿರುವಾಗ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಲೆಮಿನಾ ಕ್ರಾಸ್‌ಬಳಿ ತಲುಪುತ್ತಿದ್ದಾಗ ವಿಶ್ವನಾಥ ಪೂಜಾರಿಯು ತನ್ನ ಆಟೋ ರಿಕ್ಷಾದಲ್ಲಿ ಪಿರ್ಯಾದಿದಾರರ ಬಳಿ ಬಂದು  ಆತನ ಆಟೋ ರಿಕ್ಷಾವನ್ನು ಪಿರ್ಯಾದಿದಾರರಿಗೆ ಅಡ್ಡವಾಗಿ ನಿಲ್ಲಿಸಿ ಸೈಕಲಿನಲ್ಲಿ ಮುಂದೆ ಹೋಗದಂತೆ ತಡೆದು ಬಳಿಕ ಏಕಾಎಕಿ ಪಿರ್ಯಾದಿದಾರರನ್ನು  ಉದ್ದೇಶಿಸಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ ಸೈಕಲಿನಲ್ಲಿ ಕುಳಿತ್ತಿದ್ದ ಪಿರ್ಯಾದಿದಾರರ ಬಲ ಕೈಯನ್ನು ಹಿಡಿದು ತಿರುಗಿಸಿ ಬಲವಾಗಿ ದೂಡಿದ್ದು, ಪರಿಣಾಮ ಪಿರ್ಯಾದಿದಾರರು ಸೈಕಲಿನಿಂದ ಕೆಳಗೆ ಬಿದ್ದಿದ್ದು ಪಿರ್ಯಾದಿದಾರರ ಬಲ ಕೈಗೆ ಗುದ್ದಿದ ನೋವು ಮತ್ತು ಬಲ ಕಾಲಿಗೆ  ರಕ್ತ ಗಾಯ ಆಗಿರುತ್ತದೆ. ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ.  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 51/2023 ಕಲಂ: 341, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-04-2023 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080