ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಮೊಹಮ್ಮದ್ ಹನೀಫ್ (50), ತಂದೆ: ದಿ. ಅಬ್ದುಲ್ ಕರೀಂ, ವಾಸ: ರಾಜೀವ ನಗರ, ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 09/04/2022 ರಂದು  ಆಟೋರಿಕ್ಷಾದಲ್ಲಿ ಅಜೆಕಾರು ಕಡೆಯಿಂದ ಕಾರ್ಕಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ  ಮಧ್ಯಾಹ್ನ 2:30 ಗಂಟೆಗೆ ಹಿರ್ಗಾನ ಗ್ರಾಮದ ಬಿ.ಇ.ಎಂ ಹಿರಿಯ ಪ್ರಾಥಮಿಕ ಶಾಲೆಯ ಗೇಟಿನ ಮುಂಭಾಗ ತಲುಪಿದಾಗ ಪಿರ್ಯಾದಿದಾರರ ಪರಿಚಯದ ಸತೀಶ್ ರಾವ್ ಎಂಬುವವರು KA-20-D-0285 ನೇ ನೋಂದಣಿ ಸಂಖ್ಯೆಯ ಆಟೋರಿಕ್ಷಾವನ್ನು ಪಿರ್ಯಾದಿದಾರರ ಎದುರು ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯ ಕಾರ್ಕಳ ಕಡೆಯಿಂದ ಅಜೆಕಾರು ಕಡೆಗೆ MH-05-AJ-4406 ನೇ ನೊಂದಣಿ ಸಂಖ್ಯೆಯ ಕಾರಿನ  ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಸತೀಶ್ ರಾವ್ ರವರ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸತೀಶ್ ರಾವ್ ರವರು ಆಟೋರಿಕ್ಷಾದಿಂದ ಹೊರಗೆ ಬಿದ್ದಿದ್ದು ಕೂಡಲೇ ಅಲ್ಲಿ ಸೇರಿದ ಜನ ಸತೀಶ್ ರಾವ್ ರವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ಅಪಘಾತದಿಂದ ಸತೀಶ್ ರಾವ್ ರವರ ಎರಡೂ ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಸೊಂಟಕ್ಕೆ ಎದೆಗೆ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 09/04/2022 ರಂದು  ರಾತ್ರಿ 9:30 ಗಂಟೆಗೆ ಪಿರ್ಯಾದಿದಾರರಾದ ಸುರೇಶ (50), ತಂದೆ: ಲಕ್ಷ್ಮಣ, ವಾಸ:  ಡಿ.ಪಿ.ಶಾಲೆ ಹತ್ತಿರ, ಚೇರ್ಕಾಡಿ, ಪಜೆಮಂಗೂರು ಗ್ರಾಮ, ಕೊಕ್ಕರ್ಣೆ, ಬ್ರಹ್ಮಾವರ  ತಾಲೂಕು,  ಉಡುಪಿ ಜಿಲ್ಲೆ ಇವರು ಕುಂದಾಪುರ ತಾಲೂಕು ಕಸಬಾ ಗ್ರಾಮದ ಶಾಸ್ತ್ರಿ  ಪಾರ್ಕ  ಹತ್ತಿರದ  ಗಾಂಧಿ ಮೈದಾನದ ಎದುರು ರಾಷ್ಟ್ರೀಯ ಹೆದ್ದಾರಿ 66 ರ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಏಕಮುಖ ಡಾಮಾರು ರಸ್ತೆಯನ್ನು ಪೂರ್ವಬದಿಯಿಂದ  ಪಶ್ಚಿಮಬದಿಗೆ  ದಾಟುತ್ತಿರುವಾಗ  ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಮೋಟಾರ್‌ ಸೈಕಲ್‌ ನಂಬ್ರ KA-20-EE-4392 ನೇದನ್ನು ಅದರ ಸವಾರ ಓಂ ಪ್ರಕಾಶ ಸಹಸವಾರ ಚಂದನ್‌ ಎಂಬುವವರೊಂದಿಗೆ ಅತೀವೇಗ ಹಾಗೂ  ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು  ಬಂದು ಪಿರ್ಯಾದಿದಾರರಿಗೆ  ಡಿಕ್ಕಿ  ಹೊಡೆದ  ಪರಿಣಾಮ ಪಿರ್ಯಾದಿದಾರರು  ರಸ್ತೆಯಲ್ಲಿ  ಬಿದ್ದಿದ್ದು, ಮೋಟಾರ್‌ ಸೈಕಲ್‌ ಸವಾರ  ಮತ್ತು  ಸಹಸವಾರನು  ಮೋಟಾರ್  ಸೈಕಲ್‌ ಸಮೇತ  ರಸ್ತೆಗೆ  ಬಿದ್ದಿರುತ್ತಾರೆ. ಅಪಘಾತದಲ್ಲಿ  ಪಿರ್ಯಾದಿದಾರರು  ಎಡಕಾಲ ಮೂಳೆ ಮುರಿತದ ತೀವ್ರಸ್ವರೂಪದ ರಕ್ತಗಾಯವಾಗಿದ್ದು, ಬೆನ್ನಿನ ಹಿಂಬದಿ  ತರಚಿದ  ರಕ್ತಗಾಯವಾಗಿದ್ದು, ಬಲಕಣ್ಣಿಗೆ ಗುದ್ದಿದ  ಗಾಯವಾಗಿರುತ್ತದೆ.  ಮೋಟಾರ್‌ ಸೈಕಲ್‌ ಸವಾರ  ಓಂ  ಪ್ರಕಾಶನಿಗೆ  ಎಡಕೈ, ಬಲಕೈ  ಹಾಗೂ ಮುಖದಲ್ಲಿ  ತರಚಿದ  ಸಾಮಾನ್ಯ  ಸ್ವರೂಪದ ರಕ್ತಗಾಯವಾಗಿರುತ್ತದೆ. ಸಹಸವಾರ ಚಂದನ್‌ ರವರಿಗೆ ಹಣೆಯಲ್ಲಿ  ರಕ್ತಗಾಯವಾಗಿದ್ದು, ಕೈಕಾಲುಗಳಿಗೆ  ತರಚಿದ ಸಾಮಾನ್ಯ  ಸ್ವರೂಪದ ರಕ್ತಗಾಯವಾಗಿರುತ್ತದೆ. ಗಾಯಗೊಂಡವರನ್ನು  ಸ್ಥಳೀಯರು  ಒಂದು  ವಾಹನದಲ್ಲಿ  ಚಿಕಿತ್ಸೆಗೆ  ಕುಂದಾಪುರ  ಸರ್ಕಾರಿ  ಆಸ್ಪತ್ರೆಗೆ  ಕರೆದುಕೊಂಡು  ಹೋಗಿದ್ದು  ಅಲ್ಲಿಂದ  ಹೆಚ್ಚಿನ  ಚಿಕಿತ್ಸೆಗೆ  ಜಿಲ್ಲಾ  ಸರ್ಕಾರಿ  ಆಸ್ಪತ್ರೆ, ಅಜ್ಜರಕಾಡು , ಉಡುಪಿಗೆ ದಾಖಲಿಸಲಾಗಿರುತ್ತದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಿರ್ವಾ: ಪಿರ್ಯಾದಿದಾರರಾದ ರಾಮನಾಥ  ಜೊಯಿಸ (64), ತಂದೆ: ದಿವಂಗತ ಪುರುಷೋತ್ತಮ ಜೊಯಿಸ, ವಾಸ: ಸಾಧನಾ ಸ್ಟೋರ್‌, ಕಾಡಿಕಂಬ್ಳ, ಮಹಿಷಮರ್ದಿನಿ ದೇವಸ್ಥಾನದ ಬಳಿ,ಶಿರ್ವ ಗ್ರಾಮ ಮತ್ತು ಅಂಚೆ, ಕಾಫು ತಾಲೂಕು ಇವರು ದಿನಾಂಕ 10/04/2022 ರಂದು ಮೂಲ್ಕಿ ದೇವಸ್ಥಾನಕ್ಕೆ ಹೋಗಿ ದೇವಸ್ಥಾನದಿಂದ ವಾಪಾಸು ಬಸ್ಸಿನಲ್ಲಿ  ಶಿರ್ವ ಪೇಟೆಗೆ ಬಂದು ನಂತರ  ತನ್ನ ನೊಂದಣಿ ಮಾಲಕತ್ವದ KA-20-EH-3153  ನೇ ನೊಂದಣಿ ಸಂಖ್ಯೆಯ HONDA ACTIVA ಸ್ಕೂಟರನ್ನು ಶಿರ್ವ ಪೇಟೆಯಿಂದ ಮನೆ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಸವಾರಿ  ಮಾಡಿಕೊಂಡು ಇರ್ಮಿಂಜ ಚರ್ಚ್‌ ಬಳಿ ಮದ್ಯಾಹ್ನ 2:40 ಗಂಟೆಗೆ  ತಲುಪುವಾಗ  ಹಿಂದಿನಿಂದ ಶಿರ್ವ  ಕಡೆಯಿಂದ ಬೆಳ್ಮಣ್ಣು ಕಡೆಗೆ ಒಂದು ಕಾರನ್ನು ಅದರ  ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಬಲ ಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್‌ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ತಲೆಯ ಬಲಭಾಗಕ್ಕೆ ತುಟಿಗೆ ಬಲಭುಜಕ್ಕೆ ಎರಡು ಕಾಲುಗಳ ಮೊಣಗಂಟಿಗೆ ರಕ್ತಗಾಯವಾಗಿರುತ್ತದೆ, ಎರಡು  ಕಾಲುಗಳ ಬೆರಳುಗಳಿಗೆ ತರಚಿದ ಗಾಯವಾಗಿರುತ್ತದೆ. ಅಪಘಾತದ  ವಿಚಾರ ತಿಳಿದು  ಸ್ಥಳಕ್ಕೆ ಬಂದ ಅನಂತ  ಶೆಣೈಯವರು ಪಿರ್ಯಾದಿದಾರರನ್ನು ಉಪಚರಿಸಿ ಶಿರ್ವ  ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು  ಬಂದಿದ್ದು ಅಲ್ಲಿನ  ವೈದ್ಯರು  ಪ್ರಾಥಮಿಕ ಚಿಕಿತ್ಸೆ ನೀಡಿ  ಹೆಚ್ಚಿನ ಚಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ  ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ನಂತರ ಉಡುಪಿ ಜಿಲ್ಲಾಸ್ಪತ್ರೆಗೆ ಬಂದಿದ್ದು ವೈದ್ಯರು  ಪಿರ್ಯಾದಿದಾರರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಸ್ಕೂಟರಿಗೆ  ಡಿಕ್ಕಿ ಹೊಡೆದ ಕಾರು ಚಾಲಕನು ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಬೆಳ್ಮಣ್‌ ಕಡೆಗೆ ಪರಾರಿಯಾಗಿರುತ್ತಾನೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 20/2022 ಕಲಂ: 279,  337 ಐಪಿಸಿ & 134(ಎ)& (ಬಿ) ಐಎಮ್‌ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ಆನಂದ ಪುತ್ರನ್ (47), ತಂದೆ: ಆನಂದ ಪುತ್ರನ್, ವಾಸ: ಬಲರಾಮ ನಗರ, ಮಲ್ಪೆ, ಕೊಡವೂರು ಗ್ರಾಮ, ಉಡುಪಿ ತಾಲೂಕು ಇವರಿಗೆ ದಿನಾಂಕ 10/04/2022 ರಂದು ತನ್ನ ವಾಸ್ತವ್ಯದ ಮನೆಯಲ್ಲಿರುವಾಗ ತನ್ನ ಸ್ನೇಹಿತರೊಬ್ಬರು ಕರೆ ಮಾಡಿ ಮಲ್ಪೆ ಬಂದರಿನ ಮಂಜುಧಕ್ಕೆಯ ನೀರಿನಲ್ಲಿ ಓರ್ವ ಅಪರಿಚಿತ ಗಂಡಸಿನ ಮೃತ ದೇಹ ತೇಲುತ್ತಿರುವುದಾಗಿ ಮಾಹಿತಿ ತಿಳಿಸಿದಂತೆ ಪಿರ್ಯಾದಿದಾರರು ಬೆಳಿಗ್ಗೆ 08:30 ಗಂಟೆಗೆ ಮಲ್ಪೆ ಬಂದರಿನ ಮಂಜುಧಕ್ಕೆಗೆ ತೆರಳಿ ನೀರಿನಲ್ಲಿ ತೇಲುತ್ತಿದ್ದ ಅಪರಿಚಿತ ಗಂಡಸಿನ ಮೃತ ದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿ ಧಕ್ಕೆಯ ಮೇಲಿಟ್ಟು ನೋಡಲಾಗಿ ಮೃತ ಅಪರಿಚಿತ ಗಂಡಸಿನ ಪ್ರಾಯ 50 ರಿಂದ 55 ವರ್ಷ ಗಂಡಸಿನ ಮೃತ ದೇಹವಾಗಿದ್ದು ಮೃತರು  ಹಸಿರು ಬಣ್ಣದ ಅಂಗಿ, ಹಾಗೂ ನೀಲಿ ಬಿಳಿ ಕೇಸರಿ ಬಣ್ಣದ ಗೆರೆಗಳಿರುವ ಪಂಚೆ ಧರಿಸಿರುತ್ತಾರೆ, ಮೃತ ದೇಹವನ್ನು ಅಂಬ್ಯುಲೆನ್ಸ್‌ನಲ್ಲಿ  ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು ಮೃತರು ಸುಮಾರು1 ದಿನದ ಹಿಂದೆ ಮಲ್ಪೆ ಬಂದರಿನ ಮಂಜುಧಕ್ಕೆಯ ನೀರಿನಲ್ಲಿ ಯಾವುದೋ ಕಾರಣದಿಂದ ಯಾವುದೋ ರೀತಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 23/2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಪಿರ್ಯಾದಿದಾರರಾದ ಸಂಜಯ್ ಪೂಜಾರಿ (24), ತಂದೆ: ಸಂತೋಷ ಪೂಜಾರಿ, ವಾಸ: ಮಾರ್ಕೋಡು ಗುಡ್ಡೆಮನೆ, ಕೋಟೇಶ್ವರ ಗ್ರಾಮ,ಕುಂದಾಪುರ ತಾಲೂಕು ಇವರ ಸಹೋದರ ಸುಜಯ್ ಪೂಜಾರಿ(21) ಎಂಬುವವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು ಪ್ರಸ್ತುತ  ಕೋಟೇಶ್ವರದ ಮನೆಯಲ್ಲಿ ವರ್ಕ್ ಫ್ರಂ ಹೋಂ  ಮಾಡುತ್ತಿದ್ದುದಾಗಿದೆ.   ದಿನಾಂಕ 10/04/2022 ರಂದು 15:00 ಗಂಟೆಗೆ ಸುಜಯ್ ಪೂಜಾರಿ ಹೊರಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ವಾಪಾಸು ಬಾರದೇ ಇದ್ದು ಈ ಬಗ್ಗೆ ಹುಡುಕಲಾಗಿ ಸುಜಯ್ ಪೂಜಾರಿಯು ಕೋಣಿ ಗ್ರಾಮದ ಮೇಲ್ಕಟ್ಕೇರೆ ಅಂಗನವಾಡಿ ಸಮೀಪ ಪ್ರಶಾಂತ ಶೆಟ್ಟಿಯವರ ಹಾಡಿಯಲ್ಲಿ ಒಂದು ಕಾಟುಮರದ ಕೊಂಬೆಗೆ ಲ್ಯಾಪ್ ಟಾಪ್ ಮುಚ್ಚುವ ಬಟ್ಟೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದು ಮೃತಪಟ್ಟಿರುವುದಾಗಿದೆ.  ಸುಜಯ್ ಪೂಜಾರಿ ಯವರು ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 10/04/2022 ರಂದು 15:00 ರಿಂದ 16:00 ಗಂಟೆಯ ಮಧ್ಯಾವಧಿಯಲ್ಲಿ  ಕುತ್ತಿಗೆಗೆ ನೇಣು ಬಿಗಿದು ಆತ್ಮಹ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 13/೨022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

 • ಗಂಗೊಳ್ಳಿ: ದಿನಾಂಕ 10/04/2022 ರಂದು ಬೆಳಿಗ್ಗೆ 7:00 ಗಂಟೆಗೆ ಪಿರ್ಯಾದಿದಾರರಾದ ದೇವಕಿ (41), ಗಂಡ: ರಾಜು ಗಾಣಿಗ, ಕೊಡಪಾಡಿ, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು ಇವರ ಗುಜ್ಜಾಡಿ ಗ್ರಾಮದ ಕೊಡಪಾಡಿ ಎಂಬಲ್ಲಿರುವ ಜಾಗಕ್ಕೆ ಆಪಾದಿತರುಗಳಾದ ರಾಮಚಂದ್ರ ಗಾಣಿಗ, ವಿಜಯ ಗಾಣಿಗ, ಸೀತಾರಾಮ ಗಾಣಿಗರವರು ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರಿಗೆ ಸಂಬಂಧಿಸಿದ ಕಲ್ಲಿನ ಪಾಗಾರ ಹಾಗೂ ಧರೆಯನ್ನು ಕೆಡವಿ ಗಿಡ ಮರಗಳನ್ನು ಕಡಿದು ರೂಪಾಯಿ 40,000/- ದಷ್ಟು ನಷ್ಟ ಉಂಟು ಮಾಡಿದ್ದಲ್ಲದೇ ಆಕ್ಷೇಪಿಸಿದ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2022 ಕಲಂ:  447, 427, 354, 504, 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 11-04-2022 09:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080