ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಹೆಬ್ರಿ: ಪಿರ್ಯಾಧಿದಾರರಾದ ಆವಿನಾಶ್ ಇವರು  ದಿನಾಂಕ 08/04/2021 ರಂದು ತನ್ನ ಮಾವನವರ ಬಾಬ್ತು KA.20.ED.3125 ನೇ ಮೋಟಾರ್ ಸೈಕಲ್ ನ್ನು ಹೆಬ್ರಿ ಕಡೆಯಿಂದ ತನ್ನ ಮನೆಯಾದ ಮುನಿಯಲ್ ಕಡೆಗೆ ಹೋಗುತ್ತಿರುವಾಗ ಅವರು ಸಮಯ ಸುಮಾರು ಸಂಜೆ 19-30 ಗಂಟೆಗೆ ವರಂಗ ಗ್ರಾಮದ ಚಟ್ಕಲ್ ಪಾದೆ ಎಂಬಲ್ಲಿಗೆ ತಲುಪಿದಾಗ ಅವರ ಎದುರುಗುಡೆಯಿಂದ ಅಂದರೆ ಮುನಿಯಲ್ ಕಡೆಯಿಂದ KA.14.B.1398 ನೇ TATA 1109 ವಾಹನವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ರಸ್ತೆಯ ಬಲಬದಿಗೆ ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು. ಅವರಿಗೆ ಬಲಕೈಗೆ, ಬಲಕಾಲಿಗೆ, ಬಲಕಾಲಿನ ಎರಡನೇಯ ಬೆರಳಿಗೆ ಗಾಯವಾಗಿದ್ದು ಬಲಕೈಯ ಕಿರುಬೆರಳಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ ಈ ಅಪಘಾತವು KA.14.B.1398 ನೇ TATA 1109 ವಾಹನದ ಚಾಲಕನ ಅತೀವೇಗ ಹಾಗೂ ಅಜಾಗರುಕತೆಯ ಚಾಲನೆಯಿಂದ ಅಗಿರುವುದಾಗಿದೆ.  ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಹಲ್ಲೆ ಪ್ರಕರಣ

 • ಕೋಟ: ದಿನಾಂಕ 09/04/2021 ರಂದು ಸಂಜೆ 4.40  ಗಂಟೆಯ ಸಮಯಕ್ಕೆ ಪಿರ್ಯಾದಿ ಸಂದೀಪ ಇವರು ಮನೆಯಲ್ಲಿರುವಾಗ ಪಿರ್ಯಾದಿದಾರರ ಮನೆಯ ಬಳಿಯಲ್ಲಿ ವಾಸ ವಾಗಿರುವ ಪ್ರಫುಲ್ಲಾ ಎಂಬವರ ಹೊಸ ಮನೆ ನಿರ್ಮಿಸಲು ತೆಗೆದ ಪಾಯದ ಬಳಿ ಮನೆಯ ಹತ್ತಿರದ ಬೇಬಿ ಶೆಡ್ತಿ ,ಸುಜಾತ ಹಾಗೂ ಪ್ರಪುಲ್ಲಾ ರವರು ಪಿರ್ಯಾದಿದಾರರ ತಾಯಿಗೆ ಜೋರಾಗಿ ಬೈಯುತ್ತಿದ್ದು ಆಗ ಪಿರ್ಯಾದಿದಾರರು ಅಲ್ಲಿಗೆ ಹೋಗಿ ಯಾಕೇ ನನ್ನ ತಾಯಿಗೆ ಬೈಯುತ್ತಿರಿ ಎಂದು ಹೇಳಿ ತನ್ನ ಮೊಬೈಲ್ ನಿಂದ ಪೋಟೋ ತೆಗೆಯಲು ಹೋದಾಗ ಬೇಬಿ ಶೆಟ್ಟಿ ಪಿರ್ಯಾದಿದಾರರ ಬಲ ಕೆನ್ನೆಗೆ ಕೈಯಿಂದ ಹೊಡೆದಿರುತ್ತಾಳೆ.  ಸುಜಾತ ಹಾಘೂ ಪ್ರಫುಲ್ಲಾ ಸಹ ಪಿರ್ಯಾದಿದಾರರನ್ನು ಕೈಯಿಂದ ದೂಡಿರುತ್ತಾರೆ. ಆಗ ಪಿರ್ಯಾದಿದಾರರ ತಾಯಿ ತಪ್ಪಿಸಲು ಬಂದಾಗ ಅವರುಗಳು ಸೇರಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2021 ಕಲಂ:323.504.506 RW 34 IPC  US 75  JJ ACT ನಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿ ಶ್ರೀಮತಿ ಬೇಬಿ ಶೆಡ್ತಿ ಇವರ ಮನೆಯ ಬಳಿಯಲ್ಲಿ ಪಿರ್ಯಾದಿದಾರರ ಅಕ್ಕನ ಮಗಳಾದ ಪ್ರಪುಲ್ಲಾಳು ವಾಸವಾಗಿದ್ದು, ಪ್ರಪುಲ್ಲಾಳು ಅವಳ ಮನೆಯ ಬಳಿಯಲ್ಲಿ  ಹೊಸಮನೆ ನಿರ್ಮಾಣಕ್ಕೆಂದು ಅವಳ ಜಾಗದಲ್ಲಿ ಪಾಯ ತೆಗೆದಿರುತ್ತಾಳೆ ದಿನಾಂಕ 09/04/2021 ರಂದು ಸಂಜೆ 4.30 ಗಂಟೆಯ ಸಮಯಕ್ಕೆ ಪಿರ್ಯಾದಿದಾರರು ಮನೆಯ ಬಳಿಯಲ್ಲಿ ಇರುವಾಗ ನೆರೆಮನೆಯವರಾದ ಗಣೇಶ ಎಂಬವರು ವಡ್ಡರ್ಸೆ ಪಂಚಾಯತ್ ನ ಪಿಡಿಓ ಉಮೇಶರವರನ್ನು ಜೊತೆಯಲ್ಲಿ ಕರೆದುಕೊಂಡು ಬಂದು ಮನೆಗೆ ಪಾಯ ಹಾಕಿರುವ ಜಾಗ ನಮಗೆ  ಸೇರಬೇಕು ಎಂದು ಜೋರಾಗಿ ಹೇಳಿರುತ್ತಾನೆ.ಆಗ ಪಿರ್ಯದಿದಾರರು ನಿರ್ಮಾಣ ಮನೆಯ ಬಳಿಯಲ್ಲಿ ಹೋಗಿ ಯಾಕೆ ಗಲಾಟೆ ಮಾಡುತ್ತೀರಿ ಪ್ರಪುಲ್ಲಾ ಅವಳ ಜಾಗದಲ್ಲಿ ಮನೆ ಕಟ್ಟುತ್ತಿದ್ದಾಳೆ ಎಂದು ಹೇಳಿದ್ದು ಆಗ ಗಣೇಶನ ಮಗನಾದ ಸಂದೀಪನು ಆತನ ಮೊಬೈಲ್ ನಲ್ಲಿ ಪೋಟೊ ತೆಗೆಯಲು ಬಂದಾಗ ಪಿರ್ಯಾದಿದಾರರು ಯಾಕೆ ಪೋಟೋ ತೆಗೆಯುತ್ತೀಯಾ ಎಂದು ಹೇಳಿದಾಗ ಸಂದೀಪನು ಪಿರ್ಯಾದಿದಾರರ ಎಡ ಕೆನ್ನೆಯ ಬಳಿ ಕೈಯಿಂದ ಬಲವಾಗಿ ಹೊಡೆದಿರುತ್ತಾನೆ. ಆಗ ಗಣೇಶನು ಸಹ ಪಿರ್ಯಾದಿದಾರರನ್ನು ಕೈಯಿಂದ ದೂಡಿರುತ್ತಾನೆ. ಆಗ ಪಿರ್ಯಾದಿದಾರರರ ಅಕ್ಕನ ಮಗಳಾದ ಪ್ರಪುಲ್ಲಾ ,ಸುಜಾತ ಮತ್ತು ಸಬಿತಾರವರು ಬಿಡಿಸಲು ಬಂದಾಗ  ಗಣೇಶ ಮತ್ತು ಸಂದೀಪ ಪ್ರಪುಲ್ಲಾರ ಎಡ ಕೈಗೆ ಕೈಯಿಂದ ಹೊಡೆದು ದೂಡಿ ಹಾಕಿ ನಿಮ್ಮಿಬ್ಬರನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಈ ಎಲ್ಲಾ ಘಟನೆಗೆ ಗಣೇಶನ ಸಂಬಂಧಿ ಸುಭಾಸ್ ನ ಕುಮ್ಮಕ್ಕೆ ಕಾರಣವಾಗಿರುತ್ತದೆ ಎಂಬಿತ್ಯಾದಿ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2021 ಕಲಂ:143.147.148.323.354 ,504.506 RW 149 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ದಿನಾಂಕ 10/04/2021 ರಂದು ಸಂಜೆ ಪಿರ್ಯಾದಿ ರಾಜೇಂದ್ರ ಗಾಣಿಗ ಇವರ ಮನೆಯ ಚಿಕ್ಕಮ್ಮ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ದೇವಾಡಿಗ ಎಂಬವರು  ಪಿರ್ಯಾದಿದಾರರ ಮನೆಯಲ್ಲಿ ಹತ್ತಿರದ ಓಣೆಯಲ್ಲಿರುವ ಮರದ ದರ್ಲ (ಓಣಗಿದ ಎಲೆ) ಯನ್ನು ತೆಗೆಯುತ್ತಿರುವಾಗ, ಸಮಯ ಸಂಜೆ 5-30 ಗಂಟೆಗೆ ಆರೋಪಿತ ರಾಘವೇಂದ್ರ ಎಂಬವರು ಬಂದು ಇಲ್ಲಿನ ದರ್ಲೆ ತೆಗೆಯಬೇಡ ಎಂದು ಹೇಳಿದಾಗ ರಾಘವೇಮದ್ರನು ತನ್ನ ಕೆಲವನ್ನು ಮುಂದುವರಿಸಿದ್ದಕ್ಕೆ ಅರುಣನು ಏಕಾಏಕಿಯಾಗಿ ಅವಾಚ್ಯವಾಗಿ ಬೈದು ನಿನ್ನನ್ನು ಜೀಓವ ಸಹಿತ ಬಿಡುವುದಿಲ್ಲವಾಗಿ ಗದರಿಸಿ, ಆತನನ್ನು ಕೊಲ್ಲುವ ಉದ್ದೇಶದಿಂದ ತಡೆದು ನಿಲ್ಲಿಸಿ, ಮುಖಕ್ಕೆ ಗುದ್ದಿ ರಕ್ತಗಾಯ ಮಾಡಿದ್ದು, ಆಗ ರಾಘವೇಂದ್ರನು ಕೆಳಕ್ಕೆ ಬಿದ್ದಾಗ ನಿನ್ನನ್ನು ಕೊಂದೇ ಹಾಕುತ್ತೇನೆ ಎಂದು ಹತ್ತಿರದಲ್ಲಿದ್ದ ಮರದ ಕೋಲಿನಿಂದ ತಕೆಗೆ ಹೊಡೆದನು ಆಗ ಪಿರ್ಯಾಧಿದಾರರು ಹತ್ತಿರ ಹೋಗಿ ಹೊಡೆಯುವುದನ್ನು ತಪ್ಪಿಸಿದಾಗ ಅಲ್ಲಿಗೆ ಬರುತ್ತಿರುವ ಜನರನ್ನು ನೋಡಿ ಇದು ಇಲ್ಲಿಗೆ ಮುಗಿಯಲಿಲ್ಲ ನಿಮ್ನನ್ನು ಕೊಂದೇ ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಹೋಗಿದ್ದು, ಪಿರ್ಯಾಧಿದಾರರು ಅಲ್ಲಿ ಸೇರಿದ ಜನರು ಗಾಯಾಳು ರಾಘವೇಂದ್ರನನ್ನು ಉಪಚರಿಸಿ ನೋಡಲಾಗಿ ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಕೂಡಲೇ ಚಿಕಿತ್ಸೆಯ ಬಗ್ಗೆ ಪ್ರಣವ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ರಾಘವೇಂದ್ರನನ್ನು ಪರೀಕ್ಷಿಸಿದ ವ್ಯೆದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ.  ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 65/2021 ಕಲಂ: 341 323 324 307 504 506 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ

 

 • ಬ್ರಹ್ಮಾವರ : ಫಿರ್ಯಾದಿ ಉದಯ ಪೂಜಾರಿ ಇವರು ಬ್ರಹ್ಮಾವರ ತಾಲೂಕು, ಮಟಪಾಡಿ ಗ್ರಾಮದ, ಬಲ್ಜಿ ಎಂಬಲ್ಲಿ 5 ಸೆಂಟ್ಸ್ ಎಂಬಲ್ಲಿ ವಾಸವಾಗಿದ್ದು, ಅವರ ಜೊತೆಯಲ್ಲಿ ವಾಸವಾಗಿದ್ದ ಅವರ ಮಾವ ಚೀಂಕ್ರ ಪೂಜಾರಿ(78 ವರ್ಷ) ಇವರು ಕಿವುಡರಾಗಿದ್ದು ಪ್ರತಿನಿತ್ಯ ಸಂಜೆ ವೇಳೆಗೆ ಮನೆಯಿಂದ ಸಮೀಪದ ಮಟಪಾಡಿ ಬೋಳುಗುಡ್ಡೆ ಅಂಗಡಿಗೆ ಹೋಗಿ ಬರುವ ಹವ್ಯಾಸ ಹೊಂದಿದ್ದು ಮನೆ ಸಮೀಪದ ರೈಲ್ವೇ ಹಳಿಯನ್ನು ದಾಟಿ ಒಳದಾರಿಯಾಗಿ ಬೋಳುಗುಡ್ಡೆಗೆ ಪ್ರತಿನಿತ್ಯ ಹೋಗಿ ಬರುವುದಾಗಿದೆ. ಅದರಂತೆ ಈ ದಿನ ದಿನಾಂಕ 10-04-2021 ರಂದು 18-00 ಗಂಟೆಗೆ ಮನೆಯಿಂದ ಬೋಳುಗುಡ್ಡೆಗೆ ಹೋದ ಚೀಂಕ್ರ ಪೂಜಾರಿಯವರು ವಾಪಾಸ್ಸು ಬಾರದೇ ಇರುವುದರಿಂದ ಫಿರ್ಯಾದಿದಾರರು ಬಲ್ಜಿ ರೈಳ್ವೇ ಹಳಿ ಬಳಿ ಹೋದಾಗ ಸುಮಾರು 19-10 ಗಂಟೆಗೆ  ರೈಲ್ವೇ ಗೇಟ್ ಬಳಿ ರೈಲ್ವೇ ಮೈಲಿ ಕಲ್ಲು ನಂಬ್ರ 697/3 ರೆ ಬಳಿ ಚೀಂಕ್ರ ಪೂಜಾರಿಯವರ ಮೃತದೇಹ ಹಾಗೂ ಅವರ ಬಟ್ಟೆ ಛಿದ್ರವಾಗಿ ಬಿದ್ದಿರುವುದು ಕಂಡುಬಂತು. ಸುಮಾರು 19-00 ಗಂಟೆಗೆ ಮಂಗಳೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುವ ಯಾವುದೋ  ರೈಲು ಫಿರ್ಯಾದಿದಾರರ ಮಾವ ಚೀಂಕ್ರ ಪೂಜಾರಿಯವರಿಗೆ ಢಿಕ್ಕಿ ಹೊಡೆದು ಎಸೆಯಲ್ಪಟ್ಟು ದೇಹ ಛಿದ್ರವಾಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 22/2021 ಕಲಂ: 174 ಸಿ.ಅರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-04-2021 10:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080