ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹೆಬ್ರಿ: ದಿನಾಂಕ 08/03/2023 ರಂದು ಸತೀಶ ಕುಲಾಲ ರವರು ಅವರ KA-20 EM-1561 ನೇ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಹೆಬ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿರುವಾಗ ಆತನು ಸಮಯ ಸುಮಾರು ಸಂಜೆ 05:00 ಗಂಟೆಗೆ ಚಾರಾ ಲಯನ್ಸ್ ಸರ್ಕಲ್ ಬಳಿವಿರುವ ಪೆಟ್ರೋಲ್ ಬಂಕ್ ನ ಎದುರುಗಡೆ ರಸ್ತೆ ತಲುಪಿದಾಗ ಸತೀಶ್ ಕುಲಾಲ್ ಈತನು ಮೋಟಾರ್ ಸೈಕಲ್ ಗೆ ನಿರ್ಲಕ್ಷತನದಿಂದ ಬ್ರೇಕ್  ಹಾಕಿದ ಪರಿಣಾಮ ಮೋಟಾರ್ ಸೈಕಲ್ ಅತನ ಹತೊಟಿ ತಪ್ಪಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ ತೀವ್ರ ಸ್ವರೂಪದ ನೋವಾಗಿರುವುದಾಗಿದೆ. ಎಂಬುದಾಗಿ ಶ್ರೀಮತಿ ವಸಂತಿ (40) ಗಂಡ: ಶೇಷಪ್ಪ ಮೂಲ್ಯ ವಾಸ: ಬಟ್ಟಂಬಳ್ಳಿ, ಕಳಾಲು ಬೆಟ್ಟು,  ಶಿವಪುರ ಗ್ರಾಮ ಹೆಬ್ರಿ ತಾಲೂಕು ಇವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 12/2023 : ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಫು: ದಿನಾಂಕ 10/03/2023 ರಂದು ಪಿಯಾ೯ದಿದಾರರಾದ ಅಕ್ಬರ್, (35) ತಂದೆ: ದಿ! ಹಸನ್‌ ಸಾಹೇಭ್‌  ವಾಸ: ಇಂದಿರಾ ನಗರ, ಕಟಪಾಡಿ ಅಂಚೆ, ಕೋಟೆ  ಇವರ ತಾಯಿ ಭಾನು ಬಿ (74) ರವರು ಬೀಡಿಯನ್ನು ಏಣಗುಡ್ಡೆ ಗ್ರಾಮದ ಅಗ್ರಹಾರದಲ್ಲಿರುವ ಭಾರತ್‌ ಬೀಡಿ ಬ್ರಾಂಚಿಗೆ ಕೊಡುವುದಕ್ಕಾಗಿ ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಹೊರಟು 10:30 ಗಂಟೆಗೆ ಕಲ್ಲಾಪು-ಕಟಪಾಡಿ ಹಳೇರಸ್ತೆಯನ್ನು ದಾಟುತ್ತಿರುವಾಗ ಮೂಡಬೆಟ್ಟು ಗ್ರಾಮದ ಕೆನರಾ ಬ್ಯಾಂಕ್‌ ಬಳಿ  ಓವ೯ ಮೋಟಾರ್‌ ಸೈಕಲ್‌ ಸವಾರನು ತನ್ನ ಮೋಟಾರ್‌ ಸೈಕಲನ್ನು ಕಲ್ಲಾಪು ಕಡೆಯಿಂದ ಕಟಪಾಡಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಅಕ್ಬರ್ ರವರ ತಾಯಿ ಭಾನು ಬಿ ರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಅಪಘಾತದಿಂದ ಬಾನು ಬಿ ರವರು ರಸ್ತೆಗೆ ಬಿದ್ದ ಪರಿಣಾಮ ಬಾಯಿಯ ಕೆಳಗಿನ ಮೂರು ಹಲ್ಲುಗಳು ಮುರಿತವಾಗಿದ್ದು ಮೂಗಿಗೆ ಜಜ್ಜಿದ ರಕ್ತಗಾಯವಾಗಿದ್ದು ಅಲ್ಲದೇ  ಬಲಕೈಯ ಮೂಳೇ ಮುರಿತವಾಗಿರುತ್ತದೆ. ಈ ಸಮಯ ಪೇಟೆಗೆಂದು ಹೊರಟು ಅಲ್ಲಿಗೆ ತಲುಪಿದ್ದ ಅಕ್ಬರ್ ರವರ ಅಕ್ಕ ಪರೀದಾರವರು ಈ ಅಪಘಾತವನ್ನು ನೋಡಿ ಅಲ್ಲಿಗೆ ಬಂದು ಅಪಘಾತಪಡಿಸಿದ ಮೋಟಾರ್‌ ಸೈಕಲ್‌ ನಂಬ್ರವನ್ನು ನೋಡಲಾಗಿ ಕೆ.ಎ-20-ಇ.ಹೆಚ್-9696‌ನೇ ಬಜಾಜ್‌ ಪಲ್ಸರ್‌ ಮೋಟಾರ್‌ ಸೈಕಲ್‌ ಆಗಿದ್ದು ಇದರ ಸವಾರನ ಹೆಸರು ಶರತ್‌ ಎಂಬುದಾಗಿ ತಿಳಿದುಕೊಂಡಿದ್ದು,  ಅಪಘಾತದಿಂದ ಗಾಯಗೊಂಡ ಭಾನು.ಬಿ ರವರನ್ನು ಒಂದು ವಾಹನದಲ್ಲಿ ಕುಳ್ಳಿರಿಸಿಕೊಂಡು ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಕೆಲಸ ಮಾಡಿಕೊಂಡಿರುವ ಅಕ್ಬರ್ ರವರಿಗೆ ವಿಷಯವನ್ನು ತಿಳಿಸಿದ್ದು, ಇವರು ತಾಯಿಯನ್ನು ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಿ ಅವರ ಆರೈಕೆಯಲ್ಲಿದ್ದು ಈ ವೇಳೆಗೆ ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ ಕಾಪು  ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 39/2023 : ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಫು: ದಿನಾಂಕ 10/03/2023 ರಂದು ಪಿಯಾ೯ದಿದಾರರಾದ ಸಾಯಿದೀಪ್ (29) ತಂದೆ:ದಿ!ನಾಗೇಶ್‌ ಶೆಟ್ಟಿ ವಾಸ: ”ಶ್ರೀಧಾಮ” ಶರಣ್ಯ ಹೋಮ್‌ ಅಪಾಟ೯ಮೆಂಟ್‌ ರೂಮ್‌ ನಂಬ್ರ:103, ಮೊದಲನೇ ಕ್ರಾಸ್‌, ಸಲ್ಪಾ ಲೇಔಟ್‌, ಅಚ್ಚಡ, ಏಣಗುಡ್ಡೆ ಗ್ರಾಮ, ಕಾಪು ಇವರ ಮಾವ ದೇವಾನಂದ ಶೆಟ್ಟಿ(52) ರವರು ಕೂಲಿ ಕೆಲಸಕ್ಕಾಗಿ ಬೆಳಿಗ್ಗೆ 08:00 ಗಂಟೆಗೆ ಮನೆಯಿಂದ ಹೊರಟಿದ್ದು ಮನೆಯಿಂದ ಹೋಗುವಾಗ ಮನೆ ಕೆಲಸದ ಲಕ್ಷ್ಮಿ ಎಂಬವರ ಮೊಬೈಲನ್ನು ತನ್ನ ಮೊಬೈಲೆಂದು ತಿಳಿದು ತೆಗೆದುಕೊಂಡು ಹೋಗಿದ್ದು ಇದನ್ನು ತಿಳಿದ ಸಾಯಿದೀಪ್ ರವರು ಮಾವನವರ ಮೊಬೈಲನ್ನು ತೆಗೆದುಕೊಂಡು ಹೋಗಿ ಅವರಿಗೆ ಕೊಟ್ಟು ಲಕ್ಷ್ಮಿ ಮೊಬೈಲ್‌ನ್ನು ಹಿಂದಕ್ಕೆ ತರುವರೇ ಸ್ಕೂಟರ್‌ನಲ್ಲಿ ಕಟಪಾಡಿ ಗೆ ಬಂದು ಕಟಪಾಡಿಯ  ಶ್ರೀ ದುಗಾ೯ಪರಮೇಶ್ವರಿ ದೇವಸ್ಥಾನದ ದ್ವಾರದ ಬಳಿ ನಿಂತಿದ್ದ  ಮಾವನವರನ್ನು ನೋಡಿ ಸ್ಕೂಟರನ್ನು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿ ರಸ್ತೆ ದಾಟಲು ನೋಡುತ್ತಿರುವಾಗ 08.20 ಗಂಟೆಗೆ ಕಟಪಾಡಿ ಕಡೆಯಿಂದ ಮಣೀಪುರ ಕಡೆಗೆ ಓವ೯ ಟಿಪ್ಪರ್‌ ಚಾಲಕನು ತನ್ನ ಟಿಪ್ಪರನ್ನು ಅತೀವೇಗ ಹಾಗೂ ನಿಲ೯ಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ದ್ವಾರದ ಬಳಿ ನಿಂತಿದ್ದ ದೇವಾನಂದ ಶೆಟ್ಟಿರವರಿಗೆ ಎಡಭುಜಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದಿದ್ದು ಈ ಸಮಯ ಟಿಪ್ಪರ್‌ನ ಹಿಂದಿನ ಎಡಭಾಗದ  ಚಕ್ರ  ದೇವಾನಂದ ಶೆಟ್ಟಿ ರವರ ಎಡ ಕೈ ಮೇಲೆ ಹಾಯ್ದು ಹೋಗಿದ್ದು,  ಆಗ ಟಿಪ್ಪರ್‌ ಚಾಲಕನು ಟಿಪ್ಪರನ್ನು ಹಿಂದಕ್ಕೆ ತೆಗೆದಿದ್ದು ಆ ಸಮಯ  ಟಿಪ್ಪರ್‌ನ ಹಿಂದಿನ ಚಕ್ರ ಕೆಳಗೆ ಬಿದ್ದಿದ್ದ ದೇವಾನಂದ ಶೆಟ್ಟಿ ಇವರ ಎರಡು ಕಾಲುಗಳ  ಮೇಲೆ ಹಾಯ್ದು ಹೋಗಿದ್ದು ದೇವಾನಂದ ಶೆಟ್ಟಿ ರವರ ಕೈ ಮತ್ತು ಕಾಲುಗಳ ಮೂಳೆ ಮುರಿತವಾಗಿರುತ್ತದೆ. ಅಪಘಾತಪಡಿಸಿದ ಟಿಪ್ಪರ್‌ ನಂಬ್ರವನ್ನು ನೋಡಲಾಗಿ ಅದರ ನೊಂದಣಿ ನಂಬ್ರ ಕೆ.ಎ-20-ಎಎ-3075 ಆಗಿದ್ದು ಅದರ ಚಾಲಕನ ಹೆಸರು ಕೇಳಲಾಗಿ ಬಸಪ್ಪ ಛಲವಾದಿ ಎಂಬುದಾಗಿ ತಿಳಿಯಿತು.  ಗಾಯಗೊಂಡ ದೇವಾನಂದ ಶೆಟ್ಟಿರವರನ್ನು ಒಂದು ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಉಡುಪಿಯ ಹೈಟೆಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದುಅವರ ಆರೈಕೆಯಲ್ಲಿದ್ದು ಈ ವೇಳೆಗೆ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.  ಈ ಬಗ್ಗೆ ಕಾಪು  ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 40/2023 : ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಫುರ: ಪಿರ್ಯಾದಿದಾರರಾದ ಸುಮಂಗಳ (65) ಗಂಡ: ಪ್ರಕಾಶ್‌ ರಾವ್ ವಾಸ: ಒಂಬತ್ತು ದಂಡಿಗೆ ರಸ್ತೆ, ಪಡುಕೇರಿ ಕುಂದಾಪುರ ಕಸಬಾ ಗ್ರಾಮ ಕುಂಧಾಪುರ ಇವರ ಗಂಡನಾದ ಪ್ರಕಾಶ್‌ ರಾವ್‌ (69) ರವರು ದಿನಾಂಕ 07/03/2023 ರಂದು ಬೆಂಗಳೂರಿನಿಂದ ಊರು ಮನೆಯಾದ ಕುಂದಾಪುರದಲ್ಲಿ ಚಿಕ್ಕಮ್ಮ ದೇವಸ್ಥಾನದ ಉತ್ಸವ ಕಾರ್ಯಕ್ರಮದ ಪ್ರಯುಕ್ತ ಬಂದಿದ್ದು ಸುಮಂಗಳ ರವರ ಮನೆಯಲ್ಲಿ ವಾಸವಾಗಿದ್ದು, ದಿನಾಂಕ 09/03/2023 ರಂದು ಪ್ರಕಾಶ್‌ ರಾವ್‌ರವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ನೆರಮನೆಯವರು ಕುಂದಾಪುರದ ನ್ಯೂ ಮೆಡಿಕಲ್‌ ಸೆಂಟರ್‌ಗೆ ಸೇರಿಸಿದ್ದು ನಂತರ ದಿನಾಂಕ 10/03/2023 ರಂದು ಬೆಳಗಿನ ಜಾವ ಸುಮಾರು 02:30 ಗಂಟೆಗೆ ವೈಧ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆ ಎಮ್‌ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ  ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ ಬೆಳಗ್ಗಿನ ಜಾವ 03:10 ಗಂಟೆಗೆ ಕೆ ಎಮ್‌ ಸಿ ಆಸ್ಪತ್ರೆಯ ವೈಧ್ಯರ ಮುಂದೆ ತೋರಿಸಿದಾಗ ವೈಧ್ಯರು ಪ್ರಕಾಶರಾವ್‌ ರವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದುದಾರರ ಗಂಡನಿಗೆ ಹೃದಯ ಸಂಬಂದಿ ಕಾಯಿಲೆಯಿದ್ದು, ಇವರು ಹೃದಾಯಾಘಾತ ಅಥವಾ ಇತರ ಯಾವುದೋ ಆರೋಗ್ಯ ಸಮಸ್ಯೆಯಿಂದ  ಮೃತ ಪಟ್ಟಿದ್ದು,ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌  ಠಾಣಾ  ಯು,ಡಿ,ಆರ್ ಕ್ರಮಾಂಕ13/2023 ಕಲಂ: 174 ಸಿ,ಆರ್,ಪಿ,ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಮಲ್ಪೆ: ಪಿರ್ಯಾದಿದಾರರಾದ ಗೀತಾ (45) ಗಂಡ:ನಾರಾಯಣ ಶ್ರೀಯಾನ್ ವಾಸ:ಅನಂತೇಶ್ವರ ನಿಲಯ, ಲಕ್ಷ್ಮೀನಗರ, ಕೊಡವೂರು ಇವರ ಗಂಡ ನಾರಾಯಣ ಶ್ರೀಯಾನ್ (48) ರವರು ಮಲ್ಪೆ ಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿರುತ್ತಾರೆ  ಇವರಿಗೆ ಬೆನ್ನು ನೋವಿನ ಸಮಸ್ಯೆಯಿದ್ದು ಚಿಕಿತ್ಸೆ ಪಡೆದುಕೊಂಡಿರುತ್ತಾರೆ ದಿನಾಂಕ 10/03/2023 ರಂದು ಗೀತಾ ರವರ ಗಂಡ ಕೆಲಸಕ್ಕೆ ಹೋಗದೆ ಮನೆಯಲ್ಲಿಯೆ ಇದ್ದಿದ್ದು ಮದ್ಯಾಹ್ನ ಸಮಯ ಸುಮಾರು 12:30 ರ ವೇಳೆಗೆ ಮನೆಯ ಒಳಗೆ ಏನೋ ಶಬ್ಧ ಆದದ್ದನ್ನು  ಕೇಳಿ ಗೀತಾ ರವರು ಒಡಿ ಹೋಗಿ ನೋಡಿದಾಗ ನಾರಾಯಣ ಶ್ರೀಯಾನ್(48)‌ರವರು ಮನೆಯ ಬೆಡ್‌ ರೂಮಿನ ಪಕ್ಕಾಸಿಗೆ ಪಂಚೆಯಿಂದ ಕುತ್ತಿಗೆಗೆ ಬಿಗಿದುಕೊಂಡು ನೇತಾಡುತ್ತಿದ್ದು ಕೂಡಲೆ ಗೀತಾ ರವರು ಮತ್ತು  ಅವರ ಮಗ ಪಕ್ಕಾಸಿಗೆ ಬಿಗಿದಿದ್ದ ಪಂಚೆಯನ್ನು ಬಿಡಿಸಿ ನಾರಾಯಣ ಶ್ರೀಯಾನ್‌  ರವರನ್ನು ಕೆಳಗೆ ಇಳಿಸಿ ಉಪಚರಿಸಲಾಗಿ ಆಗಾಗಲೆ ನಾರಾಯಣ ಶ್ರೀಯಾನ್‌ ರವರು ಮೃತ ಪಟ್ಟಿರುತ್ತಾರೆ, ಗೀತಾ ರವರ ಗಂಡನಿಗೆ ಬೆನ್ನು ನೋವಿನ ಸಮಸ್ಯೆಯಿದ್ದು ಮತ್ತು ಕುಡಿತದ ಚಟವೂ ಇದ್ದು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದಿರುವುದಿಲ್ಲ, ಮೃತರ ಸಾವಿನಲ್ಲಿ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ  ಯು,ಡಿ,ಆರ್ ಕ್ರಮಾಂಕ 17/2023 ಕಲಂ: 174 ಸಿ,ಆರ್,ಪಿ,ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ: ಪಿರ್ಯಾದಿದಾರರಾಧ ನವೀನ್‌, (32) ತಂದೆ: ಸುಂದರ, ವಾಸ: ಶಾಂತಿನಗರ, ಬೆಳುವಾಯಿ, ಮೂಡಬಿದ್ರೆ ತಾಲೂಕು ಇವರ ದೊಡ್ಡಮ್ಮನ ಮಗ ಸತೀಶ, (38) ರವರು ದಿನಾಂಕ 10/03/2023 ರಂದು ಬೆಳಗ್ಗೆ 07:30 ಗಂಟೆಗೆ ಕಾರ್ಕಳ ತಾಲೂಕು ಮಿಯಾರು ಎಂಬಲ್ಲಿ ದಿವಾಕರ ಶೆಟ್ಟಿ ರವರೊಂದಿಗೆ ಕೆಲಸಕ್ಕೆ ಹೋಗಿದ್ದು ಸಮಯ 11:30 ಗಂಟೆಗೆ ಸತೀಶರವರು ತನಗೆ ಕೈ ಮತ್ತು ಎದೆನೋವು ಎಂದು ದಿವಾಕರ ಶೆಟ್ಟಿ ರವರಿಗೆ ತಿಳಿಸಿದ್ದು ಸತೀಶರವರನ್ನು ಚಿಕಿತ್ಸೆಯ ಬಗ್ಗೆ ಸಮಯ ಮದ್ಯಾಹ್ನ 1:00 ಗಂಟೆಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿನ ವೈದ್ಯಾಧಿಕಾರಿಗಳು ಸತೀಶ ರವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ದಿನಾಂಕ 10/03/2023 ರಂದು ಸತೀಶರವರು  ಸಮಯ 11:30 ಗಂಟೆಯಿಂದ  ಮದ್ಯಾಹ್ನ 1:00 ಗಂಟೆಯ ಮದ್ಯಾವಧಿಯಲ್ಲಿ ಎದೆನೋವು ಸಮಸ್ಯೆಯಿಂದ ಅಥವಾ ಇತರ ಯಾವುದೋ ಕಾರಣದಿಂದ ಮೃತಪಟ್ಟಿರುವ ಸಾಧ್ಯತೆಯಿದ್ದು, ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ನಗರ  ಪೊಲೀಸ್‌  ಠಾಣಾ  ಯು,ಡಿ,ಆರ್ ಕ್ರಮಾಂಕ 09/2023 ಕಲಂ: 174 ಸಿ,ಆರ್,ಪಿ,ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಸುಮನ ಶೆಟ್ಟಿ  (47) ಗಂಡ: ಭೋಜ ರಾಜ ಶೆಟ್ಟಿ ವಾಸ: ಮಂಡಾಡಿ ಹೋರ್ವರ  ಮನೆ ಹೊಂಬಾಡಿ ಮಂಡಾಡಿ ಗ್ರಾಮ ಕುಂದಾಪುರ ಇವರು ದಿನಾಂಕ 10/03/2023 ರಂದು ಬೆಳಿಗ್ಗೆ 08:00 ಗಂಟೆಗೆ ಮಂಡಾಡಿ ಹೋರ್ವರ  ಮನೆ ಹೊಂಬಾಡಿ ಮಂಡಾಡಿ ಗ್ರಾಮದಲ್ಲಿ ತೋಟದಲ್ಲಿರುವ ಅಡಿಕೆ ಗಿಡಗಳಿಗೆ ನೀರು ಬಿಡುವರೆ ತೋಟಕ್ಕೆ ಹೋದಾಗ ನೆರೆಮನೆಯ ರಮಣಿ ಶೆಡ್ತಿ  ಎಂಬುವವರು ಗಿಡಕ್ಕೆ ಅಳವಡಿಸಿದ ಪೈಪನ್ನು ತುಂಡು ಮಾಡಿ ತೆಗೆದುಕೊಂಡು ಹೋಗಿದ್ದು ಹಾಗೂ ಸ್ಪಿಂಕ್ಲರ್ ಗಳನ್ನು ಕೂಡ ತುಂಡು ಮಾಡಿದ್ದು ಅಂದಾಜು 15000/- ರೂಪಾಯಿ ನಷ್ಟವನ್ನುಂಡು ಮಾಡಿದ್ದಲ್ಲದೇ ಕೆಲವೊಂದು ಅಡಿಕೆ ಗಿಡಗಳನ್ನು ಕಿತ್ತು ಸಾಯಿಸಿರುತ್ತಾರೆ ಹಾಗೂ “ಪೊಲೀಸ್ ಗೆ ಕಂಪ್ಲೆಂಟ್ ಕೊಡು ಏನು ಬೇಕಾದರೂ ಮಾಡಿಕೊ ಎಂಬುವುದಾಗಿ ಅವಾಚ್ಯವಾಗಿ ಬೈದಿದ್ದಲ್ಲದೇ “ನಿನ್ನ ಕೈ ಕಾಲುಗಳನ್ನು ಕಡಿಯುತ್ತೇನೆ,” ಎಂಬುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 40/2023  ಕಲಂ: 447, 427, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-03-2023 10:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080