ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಲ್ಪೆ: ದಿನಾಂಕ 09/03/2022 ರಂದು ಪಿರ್ಯಾದಿದಾರರಾದ ದಿನೇಶ ಮೆಂಡನ್ (39) ತಂದೆ:  ವಾಮನ ಸುವರ್ಣ ವಾಸ:  ಶ್ರೀ ಶಾರದಾ ವಾಸುಕೀ  ನಗರ ಕೊಡವೂರು ಇವರು ಗರಡಿಮಜಲಿನಿಂದ ತನ್ನ ಮನೆಯಾದ ಕೊಡವೂರು ಕಡೆಗೆ ಸಮಯ ಸುಮಾರು ರಾತ್ರಿ 8:30 ಗಂಟೆಗೆ  ಜನರಲ್ ಸ್ಟೋರ ಎದುರುಗಡೆ  ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ KA-20 EX-1938 ದ್ವಿಚಕ್ರ ವಾಹನದ ಸವಾರ ಕೊಡವೂರು ಕಡೆಯಿಂದ  ಗರಡಿಮಜಲು ಕಡೆಗೆ  ಅತೀವೇಗ  ಮತ್ತು ಅಜಾಗರೂಕತೆಯಿಂದ ತನ್ನ ಮೋಟಾರುಸೈಕಲ್ ನ್ನು ಚಲಾಯಿಸಿ ನಿಯಂತ್ರಣ ತಪ್ಪಿ  ತೀರ ಬದಿಗೆ ಬಂದು ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ದಿನೇಶ ಮೆಂಡನ್‌ ಇವರಿಗೆ ಢಿಕ್ಕಿ ಹೊಡೆದ ಪರಿಣಾಮ ಇವರ ಬಲಕಾಲಿಗೆ ತೀವ್ರ ಸ್ವರೂಪದ ಗಾಯವಾಗಿ ಮೂಳೆ ಮುರಿತವಾಗಿರುತ್ತದೆ. ಮುಖಕ್ಕೆ ಕೂಡ ಗಾಯವಾಗಿರುತ್ತದೆ. ಅಲ್ಲಿನ ಸ್ಥಳಿಯರು ಇವರನ್ನು ಚಿಕಿತ್ಸೆಯ ಬಗ್ಗೆ ಹೈಟೆಕ್ ಆಸ್ಪತ್ರೆ ದಾಖಲಿಸಿರುವುದಾಗಿದೆ. ಈ ಅಫಘಾತಕ್ಕೆ KA-20 EX-1938  ಸವಾರನ ಅತೀವೇಗ  ಮತ್ತು ಅಜಾಗರೂಕತೆಯ ಚಾಲನೆಯೆ ಕಾರಣವಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 27/2022 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ಪಿರ್ಯಾದಿದಾರರಾದ ದಿನೇಶ್‌ಸೇರಿಗಾರ, (33) ತಂದೆ: ದಿ. ಆನಂದ ಸೇರಿಗಾರ, ವಾಸ: ಕುಂಜಾರುಗಿರಿ ಪಡು ಪಾಜೈ, ಕುರ್ಕಾಲು ಗ್ರಾಮ, ಕಾಪು ಇವರು ದಿನಾಂಕ 10/03/2022 ರಂದು ಸಮಯ ಸಂಜೆ ಸುಮಾರು 5:20 ಗಂಟೆ  ಸುಭಾಸ್‌ನಗರ ರಿಕ್ಷಾ ನಿಲ್ದಾಣದಲ್ಲಿರುವಾಗ ರಿಕ್ಷಾ ನಿಲ್ದಾಣದ ಎದುರುಗಡೆ ಹಾದು ಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕಟಪಾಡಿ ಕಡೆಯಿಂದ ಶಿರ್ವ ಕಡೆಗೆ ಆರೋಪಿ ಕುಮಾರ್‌ತಾನು ಚಲಾಯಿಸುತ್ತಿದ್ದ KA-52 A-6264 ನೇ ಗೂಡ್ಸ್‌ಟ್ರಕ್‌ನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬೇರೊಂದು ವಾಹನವನ್ನು ಓವರ್‌ ಟೇಕ್‌ ಮಾಡುವ ಬರದಲ್ಲಿ ಶಿರ್ವ ಕಡೆಯಿಂದ ಕಟಪಾಡಿ ಕಡೆಗೆ ಮೊಹನ್‌ಆಚಾರ್ಯ ರವರು KA-20 D-6941 ನೇಯ ಆಟೋ ರಿಕ್ಷಾದಲ್ಲಿ ಪ್ರಯಾಣಿಕ ಬೊಲ ಮಂಡಲ ರವರನ್ನು ಕುಳ್ಳರಿಸಿಕೊಂಡು ಹೋಗುತ್ತಿದ್ದಾಗ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಚಾಲಕ ಮೊಹನ್‌ಆಚಾರ್ಯ ಹಾಗೂ ಪ್ರಯಾಣಿಕ ಪ್ರಯಾಣಿಕ ಬೊಲ ಮಂಡಲ ರವರು ರಸ್ತೆಗೆ ಎಸೆಯಲ್ಪಟ್ಟು ಬಿದ್ದಿರುತ್ತಾರೆ. ಮೊಹನ್‌ಆಚಾರ್ಯ ರವರ ಎರಡೂ ಕಾಲಿನ ಮೂಳೆ ಮುರಿತದ ತೀವ್ರ ಸ್ವರೂಪದ ಜಖಂ ಮತ್ತು ಎಡಬದಿಯ ಮುಖಕ್ಕೆ ರಕ್ತ ಗಾಯವಾಗಿರುತ್ತದೆ ಹಾಗೂ ಬೊಲ ಮಂಡಲ ರವರ ಎರಡೂ ಕಾಲಿನ ಮೂಳೆ ಮುರಿತದ ತೀವ್ರ ಸ್ವರೂಪದ ಜಖಂ ಮತ್ತು ಮುಖಕ್ಕೆ ರಕ್ತ ಗಾಯವಾಗಿರುತ್ತದೆ.  ಅಪಘಾತದ ರಭಸಕ್ಕೆ ಅಲ್ಲಿ ಹೋಗುತ್ತಿದ್ದ KA-20 EG-4648 ನೇ ಸ್ಕೂಟರಿಗೆ ಕೂಡಾ ಡಿಕ್ಕಿ ಹೊಡೆದಿದ್ದು ಪರಿಣಾಮ ಸ್ಕೂಟರ್‌ಸವಾರ ಶಿವ ಪ್ರಸಾದ ರವರ ಬಲ ಕಾಲಿಗೆ ರಕ್ತ ಗಾಯವಾಗಿರುತ್ತದೆ. ಈ ಅಪಘಾತಕ್ಕೆ KA-52 A-6264 ನೇ ಗೂಡ್ಸ್‌ಟ್ರಕ್‌ನ ಚಾಲಕ ಕುಮಾರ್‌ರವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 13/2022 ಕಲಂ: 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 09/03/2022 ರಂದು ಪಿರ್ಯಾದಿದಾರರಾದ ರಾಮಕೃಷ್ಣ ಆಚಾರಿ (33) ತಂದೆ:ಶೇಷು ಆಚಾರಿ ವಾಸ: ವರ್ಸೆ,ತಗ್ಗರ್ಸೆ ಗ್ರಾಮ, ಬೈಂದೂರು ಇವರು ಶಶಿಕಾಂತ ಆಚಾರಿ ಎಂಬುವರೊಂದಿಗೆ ಮಯ್ಯಾಡಿಯ ಅಶ್ವತ್ಥನಾರಾಯಣ ಎಂಬುವವರ ಮನೆಗೆ  ಮರದ ಕೆಲಸ ಮಾಡಿಕೊಂಡಿದ್ದು ರಾತ್ರಿ 7:30 ಗಂಟೆಗೆ ಶಶಿಕಾಂತ ಆಚಾರಿರವರು ಆತನ  ಬೈಕ್ ನಂಬ್ರ ಕೆಎ-20 ಇಟಿ-6567 ನೇದರಲ್ಲಿ ಮನೆಗೆ ಹೋಗುವರೇ ಬೈಕ್ ನ್ನು ಚಲಾಯಿಸಿಕೊಂಡು ಯಡ್ತರೆ ಕಡೆಗೆ ಹೋಗುವ  ಸಮಯ ಎನ್.ಎಚ್ 766 ಸಿ ಮಯ್ಯಾಡಿ ಸೇತುವೆ ಬಳಿ ತಲುಪಿದಾಗ ಯಡ್ತರೆ ಕಡೆಯಿಂದ ಬಂದ ಕೆಎ-20 ಇಟಿ-2804 ನೇದರ ಬೈಕ್ ಸವಾರ ವಾಸುದೇವ ಎಂಬುವವರು ಆತನ ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಶಿಕಾಂತನ ಬೈಕಿಗೆ ಎದುರಿನಿಂದ ಢಿಕ್ಕಿ ಹೊಡೆದಿದ್ದು  ಅದರ ಪರಿಣಾಮ ಶಶಿಕಾಂತನು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಈ ಘಟನೆಯಿಂದ ಶಶಿಕಾಂತ ಆಚಾರಿ ಎಂಬುವವರಿಗೆ ತಲೆಗೆ ರಕ್ತ ಗಾಯವಾಗಿದ್ದು ಅಶ್ವತ್ಥನಾರಾಯಣ ಮನೆಯ ಎದರು ನಿಂತುಕೊಂಡಿದ್ದ ರಾಮಕೃಷ್ಣ ಆಚಾರಿ ರವರು ಹಾಗೂ ಶಾಂತನಂದ ಆಚಾರಿ ಎಂಬುವವರು ಓಡಿ ಹೋಗಿ  ಎತ್ತಿ ಉಪಚರಿಸಿ ಕೂಡಲೇ ಚಿಕಿತ್ಸೆಯ ಬಗ್ಗೆ ಅಂಜಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯಾಧಿಕಾರಿಯವರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯನ್ನಾಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 58/2022 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಅಶೋಕ, (22) ತಂದೆ: ಶೀನ ನಾಯ್ಕ, ವಾಸ: ಗುಂಡಾಲು, ಪೆಜಮಂಗೂರು ಗ್ರಾಮ, ಬ್ರಹ್ಮಾವರ ಇವರ ತಾಯಿ ದೇವಕಿ, (47) ರವರು ದಿನಾಂಕ  03/03/2020 ರಂದು ಮಧ್ಯಾಹ್ನ 1:00 ಗಂಟೆಗೆ ಕೆಮ್ಮು ಇದ್ದುದರಿಂದ ಸಿರಾಫ್‌ ಹಾಕಿದ್ದ ಬಾಟಲಿಯಲ್ಲಿದ್ದ ಇಲಿ ಪಾಷಣವನ್ನು ಆಕಸ್ಮಿಕವಾಗಿ ಕುಡಿದು ಆಸ್ವಸ್ಥಗೊಂಡಿದ್ದು, ಬಳಿಕ ಅಶೋಕ ರವರು ತಾಯಿಯನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರದ ಮಹೇಶ್‌ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿ ಒಳರೋಗಿಯಾಗಿ ಚಿಕಿತ್ಸೆ ನೀಡಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ದೇವಕಿಯವರು ದಿನಾಂಕ 10/03/2022 ರಂದು ಮಧ್ಯಾಹ್ನ 3:20 ಗಂಟೆಗೆ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 12/2022 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 11-03-2022 10:05 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080