ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾಧ ರಾಘವೇಂದ್ರ ಕಾಂಚನ್‌‌(37), ತಂದೆ: ಗಣೇಶ್‌ಮೆಂಡನ್‌‌, ವಾಸ: ಸಿದ್ದಿಕೃಪಾ ಕೆಜಿರೋಡ್‌‌ಕ್ರಾಸ್‌ಬಳಿ, ತೆಂಕಬೆಟ್ಟು  ಉಪ್ಪೂರು ಗ್ರಾಮ, ಬ್ರಹ್ಮಾವರ ಇವರು ತನ್ನ ಭಾವ ಅಶೋಕ್‌ ಮೈಂದನ್‌ ರವರ ಜೊತೆ ದಿನಾಂಕ 09/02/2023 ರಂದು ರಾತ್ರಿ 8:45 ಗಂಟೆಗೆ ರಾಹೆ 66 ರ ಉಪ್ಪೂರು ಗ್ರಾಮದ, ಉಪ್ಪೂರು ಸಂತೆಕಟ್ಟೆ ಬ್ರಿಡ್ಜ್‌‌ನ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ  ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ  ‌KA-20 AA-1233 TVS ಆಟೋ ರಿಕ್ಷಾದ ಚಾಲಕ ಪುಷ್ಪರಾಜ್‌ರವರು ತನ್ನ ಆಟೋ ರಿಕ್ಷವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸೇತುವೆ ಮೇಲೆ ತೀರಾ ಬದಿಗೆ ಚಲಾಯಿಸಿ ರಾಘವೇಂದ್ರ ಕಾಂಚನ್‌‌ ರವರ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಶೋಕ್‌ ಮೈಂದನ್‌ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅಶೋಕ ಮೈಂದನ್‌ ರವರಿಗೆ ತಲೆಗೆ ಕೆನ್ನೆಗೆ ರಕ್ತಗಾಯ, ಬಲಕಾಲಿನ ಮೊಣಗಂಟಿಗೆ ತೀವ್ರ ತರಹದ ಮೂಳೆ ಮುರಿತ ಹಾಗೂ ಮೈಕೈಗೆ ಅಲ್ಲ್ಲಲ್ಲಿ ರಕ್ತಗಾಯವಾಗಿರುತ್ತದೆ.ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಅಪಘಾತಕ್ಕೆ KA-20 AA-1233 TVS ಆಟೋ ರಿಕ್ಷಾದ ಚಾಲಕ ಪುಷ್ಪರಾಜ್‌ನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ರಾಘವೇಂದ್ರ ಕಾಂಚನ್‌‌ ರವರು ಗಾಯಾಳುವಿನ ಆರೈಕೆಯಲ್ಲಿದ್ದುದರಿಂದ , ಅಪಘಾತದ ಬಗ್ಗೆ ಯಾರೂ ದೂರು ನೀಡದೇ ಇರುವ ವಿಷಯ ತಿಳಿದು ನಂತರ ದೂರು ನೀಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 20/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 11/02/2023 ರಂದು ಬೆಳಗ್ಗ 11:30 ಗಂಟೆಗೆ ಕಾರ್ಕಳ ತಾಲೂಕು, ಮುಡಾರು ಗ್ರಾಮದ ಪೆಜತಗುರಿ ಎಂಬಲ್ಲಿ ಹಾದು ಹೋಗುವ, ಕಾರ್ಕಳ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ನಂಬ್ರ KA-18 B-9292 ನೇಯದರ ಚಾಲಕನು ಟಿಪ್ಪರನ್ನು ಕಡಾರಿ ಕಡೆಯಿಂದ ಬಜಗೋಳಿ ಕಡೆಗೆ ಅತಿವೇಗವಾಗಿ ಹಾಗೂ ನಿರ್ಲಕ್ಷತನದಿಂದ ಆತನ ತೀರಾ ಬಲಭಾಗದಲ್ಲಿ ಚಲಾಯಿಸಿಕೊಂಡು ಹೋಗಿ, ಪ್ರಶಾಂತ್ ಎಂಬವರು ಬಜಗೋಳಿ ಕಡೆಯಿಂದ ಕಡಾರಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ KA-19 Y-4624 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರನು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು,  ಮೋಟಾರು ಸೈಕಲ್ ಸವಾರನ ಮುಖಕ್ಕೆ ರಕ್ತಗಾಯ ಹಾಗೂ ಕೈ, ಕಾಲುಗಳಿಗೆ ತರಚಿದ ಗಾಯವಾಗಿದ್ದು, ಎರಡೂ ವಾಹನಗಳು ಜಖಂಗೊಂಡಿರುತ್ತವೆ, ಎಂಬುದಾಗಿ ರಾಜೇಶ್ ಕೋಟ್ಯಾನ್, (51) ತಂದೆ: ದಿವಂಗತ ಶೀನ ಪೂಜಾರಿ, ವಾಸ: ಅಪೂರ್ವ ನಿವಾಸ, ಇಂದಿರಾ ನಗರ, ಸಾಣೂರು ಅಂಚೆ ಮತ್ತು ಗ್ರಾಮ, ಕಾರ್ಕಳ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 17/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿದಾರರಾಧ ಸುಕೇಶ್‌(34) ತಂದೆ : ದಿ.ಗೋಪಾಲ ಪೂಜಾರಿ ವಾಸ : ಗೋಪಾಲ ನಿವಾಸ,ಹಾಡಿಮನೆ ,ಕುರ್ಪಾಡಿ ,ಮರ್ಣೆ ಗ್ರಾಮ ಕಾರ್ಕಳ ಇವರ ತಮ್ಮ ಶ್ರೀನಿವಾಸ(25) ರವರು ಸುಕೇಶ್‌ ರವರೊಂದಿಗೆ ವಾಸವಾಗಿದ್ದು , ವೆಲ್ಡಿಂಗ್‌ ವರ್ಕ್‌ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದು ,ಹೈನುಗಾರಿಕೆಯನ್ನೂ ಕೂಡಾ ಮಾಡುತ್ತಿದ್ದರು. ದಿನಾಂಕ 10/02/2023 ರಂದು ಕೆಲಸ ಮುಗಿಸಿ ಮನೆಗೆ ಬಂದವರು ರಾತ್ರಿ ಸುಮಾರು 10:45 ಗಂಟೆಯ ಸಮಯಕ್ಕೆ ಮಲಗಲು ಮನೆಯ ಸಮೀಪ ಇರುವ  ಮಾವ ಕರುಣಾಕರ ರವರ ಮನೆಗೆ ಹೋಗಿರುತ್ತಾರೆ.ದಿನಾಂಕ 11/02/2023ರಂದು ಬೆಳಿಗ್ಗೆ 07:30 ಗಂಟೆಯ ಸುಮಾರಿಗೆ  ಆತನು ಮರ್ಣೆ ಗ್ರಾಮದ ಮಜಲು ಮನೆಯ ರಾಘವೇಂದ್ರ ರವರ ಜಾಗದಲ್ಲಿ ನ ಗೇರು ಮರದ ಕೊಂಬೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕರುಣಾಕರರವರ ಪತ್ನಿ ವಿದ್ಯಾರವರು ತಿಳಿಸಿದ್ದು  ,ಅವರು ಹೈನುದ್ಯಮದಲ್ಲಿ ನಷ್ಟವನ್ನು ಹೊಂದಿದ್ದು ಇದೇ ಕಾರಣದಿಂದ ಅಥವಾ ಇನ್ಯಾವುದೋ ಕಾರಣದಿಂದ  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 10/02/2023 ರ ರಾತ್ರಿ 10:45 ಗಂಟೆಯಿಂದ ದಿನಾಂಕ 11/02/2023 ರ 07:30 ಗಂಟೆಯ ಮಧ್ಯಾವದಿಯಲ್ಲಿ  ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 07/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾಧ ಗೋಪಾಲ ಸಿ ಶೆಟ್ಟಿ (29) ತಂದೆ: ಚಂದ್ರಪ್ರಕಾಶ ಶೆಟ್ಟಿ ವಾಸ: ಗೋಪಾಲ ನಿವಾಸ ಗೋವಿಂದ ಕಲ್ಯಾಣ ಮಂಟಪದ ಎದುರು 76 ಬಡಗಬೆಟ್ಟು ಗ್ರಾಮ ಕಿನ್ನಿಮೂಲ್ಕಿ ಇವರು ದಿನಾಂಕ 10/02/2023 ರಂದು ರಾತ್ರಿ ತನ್ನ ಸ್ನೇಹಿತ ಅಮಯ ಶೆಟ್ಟಿ ಅವರೊಂದಿಗೆ ಮಣಿಪಾಲದ ಡಿ ಟಿ ಬಾರ್ ಒಳಗಡೆ ಕೌಂಟರ್ ಬಳಿ ನಿಂತು ಮಾತನಾಡುತ್ತಿರುವಾಗ ಸಮಯ ಸುಮಾರು ರಾತ್ರಿ 11:30 ಗಂಟೆಗೆ ಇವರ ಪರಿಚಯದ ಗಣೇಶ್ ಡ್ರೈವಿಂಗ್ ಸ್ಕೂಲ್ ನ ಮಾಲಿಕ ಗಣೇಶ್ ರಾವ್ ಎಂಬುವರು ಟೇಬಲ್ ನಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದವರು ಗೋಪಾಲ ಸಿ ಶೆಟ್ಟಿ ರವರನ್ನು ಕಂಡು ಅವಾಚ್ಯ ವಾಗಿ ಬೈದಿದ್ದು ಗೋಪಾಲ ಸಿ ಶೆಟ್ಟಿ ರವರು ಏನೂ ಮಾತನಾಡದೆ ಕೌಂಟರ್ ಬಳಿ ನಿಂತುಕೊಂಡು ಬಿಯರ್ ಕುಡಿಯುತ್ತಾ ನಿಂತಿದ್ದು ಸ್ವಲ್ಪ ಸಮಯದ ನಂತರ ಆರೋಪಿ ಗಣೇಶ್ ರಾವ್ ಕೈ ಯಲ್ಲಿ ಬಿಯರ್ ಮಗ್ ನ್ನು ಹಿಡಿದುಕೊಂಡು ಕೊಲೆ ಮಾಡುವ ಉದ್ದೇಶದಿಂದ  ಗೋಪಾಲ ಸಿ ಶೆಟ್ಟಿ ರವರ ಬಳಿ ಬಂದು ಏಕಾಏಕಿ ಬಿಯರ್ ಮಗ್ ನಿಂದ ಗೋಪಾಲ ಸಿ ಶೆಟ್ಟಿ ರವರ ತಲೆಗೆ ಹೊಡೆದಿದ್ದು ಪರಿಣಾಮ ಆರೋಪಿಯ ಕೈಯಲ್ಲಿದ್ದ ಬಿಯರ್ ಮಗ್  ಒಡೆದು ಹೋಗಿದ್ದು,  ಆರೋಪಿಯು ತನ್ನ ಕೈಯಲ್ಲಿದ್ದ ಅರ್ಧ ಗ್ಲಾಸಿನ ಚೂರಿಯಿಂದ ಪುನ: ಗೋಪಾಲ ಸಿ ಶೆಟ್ಟಿ ರವರ ಕುತ್ತಿಗೆಯ ಬಳಿ ಹೊಡೆದಿದ್ದು ಆಗ ಇವರು ಹಾಗೂ ಅವರ  ಸ್ನೇಹಿತ  ಅಮಯ ಶೆಟ್ಟಿ  ತಡೆಯಲು ಪ್ರಯತ್ನಿಸಿದ್ದು ಆಗ ಆರೋಪಿ ಗಣೇಶ್ ರಾವ್ ಇವರನ್ನು ಉದ್ದೇಶಿಸಿ ಈಗ ಬಚಾವಾಗಿದ್ದಿ ಇನ್ನೊಮ್ಮೆ ಸರಿಯಾಗಿ ಸಿಕ್ಕು, ನಿನ್ನನ್ನು ಮುಗಿಸಿ ಬಿಡುತ್ತೇನೆ” ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ, ಈ ಹಲ್ಲೆಯಿಂದ  ಗೋಪಾಲ ಸಿ ಶೆಟ್ಟಿ ರವರಿಗೆ ತಲೆ ಹಾಗೂ ಕುತ್ತಿಗೆಯ ಬಳಿ ತೀವ್ರವಾಗಿ ಗಾಯ ಉಂಟಾಗಿ ರಕ್ತ ಬಂದಿರುತ್ತದೆ,  ಹಾಗೂ ಹಲ್ಲೆಯನ್ನು ತಡೆಯಲು ಬಂದ ಅಮಯ ಶೆಟ್ಟಿ ಯವರ ಬಲ ಕೈಗೆ ಗ್ಲಾಸ್ ತಾಗಿ ಗಾಯ ಉಂಟಾಗಿರುತ್ತದೆ, ನಂತರ ಇಬ್ಬರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 25/2023 ಕಲಂ: 504, 326,307,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾಧ ಗಣೇಶ್ ರಾವ್ (50) ತಂದೆ: ದಿ. ರಘುರಾಮ ರಾವ್ ವಾಸ: ಪ್ಲಾಟ್ ನಂ: 1005, 10 ನೇ ಮಹಡಿ ಮಾಂಡವಿ ಎಮಾರಲ್ಡ್ ವಿದ್ಯಾರತ್ನ ನಗರ ಮಣಿಪಾಲ ಶಿವಲ್ಳಿ ಇವರು ದಿನಾಂಕ 10/02/2023 ರಂದು ಮಣಿಪಾಲದ ಡಿ ಟಿ ಬಾರ್ ಕೌಂಟರ್ ಬಳಿ ಸಮಯ ಸುಮಾರು ರಾತ್ರಿ 11:30 ಗಂಟೆಗೆ ನಿಂತುಕೊಂಡಿರುವಾಗ ಇವರ ಪರಿಚಯದ ಗೋಪಾಲ ಶೆಟ್ಟಿ ಎಂಬುವರು ಬಿಯರ್ ಬಾಟಲ್ ಹಿಡಿದುಕೊಂಡು ಕುಡಿಯುತ್ತಿದ್ದವರು ಗಣೇಶ್ ರಾವ್ ರವರನ್ನು ಕಂಡು ಅವಾಚ್ಯವಾಗಿ ಬೈದಿದ್ದು ಆಗ ಗಣೇಶ್ ರಾವ್ ರವರು ಆರೋಪಿಗೆ ನೀನು ನನ್ನ ಮಗಳ ವಯಸ್ಸಿನವ ನನಗೆ ಬೈಯುತಿಯಾ ಎಂದು ಹೇಳಿದಾಗ ಆರೋಪಿ ಗೋಪಾಲ ಶೆಟ್ಟಿ ಆತನ ಕೈಲ್ಲಿದ್ದ ಬಿಯರ್ ಬಾಟಲಿಯನ್ನು  ಗಣೇಶ್ ರಾವ್ ರವರ ಕಡೆಗೆ ಬಿಸಿದ್ದು ಆಗ ಇವರು ಬಲ ಕೈ ಯನ್ನು ಅಡ್ಡ ತಡೆದಿದ್ದು ಬಿಯರ್ ಬಾಟಲಿಯ ಗಾಜು ಗಣೇಶ್ ರಾವ್ ಇವರ ಬಲ ಕೈ ಗೆ ತಾಗಿ ಬಲ ಕೈ ಯ ಅಂಗೈಯ ಬಳಿ ರಕ್ತ ಗಾಯವಾಗಿರುತ್ತದೆ, ಅಲ್ಲದೇ ಇವರು ತಡೆಯುವಾಗ  ಬಾಟಲಿಯ ಗಾಜಿನ ತುಂಡು ಆರೋಪಿ ಗೋಪಾಲ ಶೆಟ್ಟಯ ಕುತ್ತಿಗೆಗೆ ತಾಗಿ ಗಾಯವಾಗಿರುತ್ತದೆ, ನಂತರ ಗಣೇಶ್ ರಾವ್ ರವರು ಚಿಕಿತ್ಸೆಯ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 26/2023 ಕಲಂ: 504, 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-02-2023 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080