ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಸಾಮ್ರಾಟ್ ಜಿ.ಎಲ್ (27), ತಂದೆ: ಲೋಕಣ್ಣ ಜಿ.ಎಮ್, ವಾಸ: ಗಿಣಿಕಲ್ ಕುಂಚೇಬೈಲ್ ಪೋಸ್ಟ್ ಶೃಂಗೇರಿ ತಾಲೂಕು ಚಿಕ್ಕಮಗಳೂರು ಜಿಲ್ಲೆ ಇವರ ತಂದೆ  ಜಿ.ಎನ್ ಲೋಕಣ್ಣ (54) ರವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗಿಣಕಲ್ ಎಂಬಲ್ಲಿ ವಾಸ ಮಾಡಿಕೊಂಡಿದ್ದು. ಅವರು ಅಡಿಕೆ ತೋಟದ ಬಗ್ಗೆ ಬ್ಯಾಂಕ್ ಮತ್ತು ಸೊಸೈಟಿಯಲ್ಲಿ ಸಾಲವನ್ನು ಮಾಡಿದ್ದು. ಅಡಿಕೆ ತೋಟದ ರೋಗ ಬಾದೆಯಿಂದ ಪಸಲು ಬಾರದ ಕಾರಣ ಅವರು ನಷ್ಟವುಂಟಾಗಿ ಬ್ಯಾಂಕ್ ಮತ್ತು ಸೊಸೈಟಿಯಲ್ಲಿ ಮಾಡಿದ ಸಾಲವನ್ನು ಕಟ್ಟಲಾಗದೇ ಸಾಲದ ಬಾದೆಯಿಂದ ಮನನೊಂದು ದಿನಾಂಕ 10/02/2022 ರಂದು ಬೆಳಿಗ್ಗೆ 11:00 ಗಂಟೆಯಿಂದ ಸಂಜೆ 4:00 ಗಂಟೆಯ ಮದ್ಯವಾದಿಯಲ್ಲಿ ನಾಡ್ಪಾಲು ಗ್ರಾಮದ ಸೋಮೇಶ್ವರ ಘಾಟಿಯ 2 ನೇ ತಿರುವಿನ ಬಳಿ ತಾನು ಚಲಾಯಿಸಿಕೊಂಡು ಬಂದಿದ್ದ ಓಮ್ನಿ ಕಾರನ್ನು ಕಚ್ಚಾ ರಸ್ತೆಯ ಬದಿಯಲ್ಲಿ ಇರಿಸಿ ಕಾರಿನ ಹಿಂದುಗಡೆಯ ಸೀಟಿನಲ್ಲಿ ಕುಳಿತುಕೊಂಡು ವಿಷ- ಪಧಾರ್ಥವನ್ನು ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ  ಶ್ರೀಮತಿ ಸುಜಾತಾ (44), ಗಂಡ ದಿ. ಚಂದ್ರಶೇಖರ, ವಾಸ: ರಾಜೀವ ನಗರ, ನೀರೆಬೈಲೂರು, ನೀರೆ ಗ್ರಾಮ, ಕಾರ್ಕಳ ತಾಲೂಕು ಇವರ ತಾಯಿ ಅಪ್ಪಿರವರ  ಹೆಸರಿನಲ್ಲಿ ಬೈಲೂರಿನ ಬಿಲ್ಲವ ಸಂಘದ ಬಳಿ ಎರಡೂವರೆ ಎಕರೆ ಜಾಗ ಇದ್ದು, ತಾಯಿ ಮೃತಪಟ್ಟ ನಂತರ ಪಿರ್ಯಾದಿದಾರರ ಎರಡನೇ ಅಣ್ಣ ಆನಂದ ಜಾಗದ ವಿಚಾರದಲ್ಲಿ ಆಗಾಗ ತಕರಾರು ತೆಗೆಯುತ್ತಾ ಇದ್ದು, ದಿನಾಂಕ 09/02/2022 ರಂದು ಮಧ್ಯಾಹ್ನ ಅಪಾದಿತನು ಪಿರ್ಯಾದಿದಾರರಲ್ಲಿ ತಾಯಿ ಮೃತಪಟ್ಟ ಬಗ್ಗೆ ಪಂಚಾಯತಿನಿಂದ ಹಣ ಬಂದಿದೆ ಹಣ ನೀನು ಖರ್ಚು ಮಾಡಿದ್ದಿ ಎಂದು ತಕರಾರು ತೆಗೆದಿದ್ದು  ಈ ವಿಚಾರವನ್ನು ಪಿರ್ಯಾದಿದಾರರು ತನ್ನ ಮೊದಲನೇ ಅಣ್ಣ ಸುಧಾಕರರವರಲ್ಲಿ ವಿಚಾರ ತಿಳಿಸಿ  ಅಣ್ಣ ಸುಧಾಕ ರವರೊಂದಿಗೆ ಬಿಲ್ಲವ ಸಂಘದ ಬಳಿ ಇರುವ ತಾಯಿ ಮನೆಗೆ ಹೋಗಿ ಅಪಾದಿತನಲ್ಲಿ ದಿನಾಂಕ 09/02/2022 ರಂದು ರಾತ್ರಿ 20:30 ಗಂಟೆಗೆ ವಿಚಾರಿಸುತ್ತಿದ್ದಾಗ ಅಪಾದಿತ ಆನಂದನು ಸುಧಾಕರರರಿಗೆ ಹೊಡೆಯಲು ಬಂದಾಗ ಪಿರ್ಯಾದಿದುದಾರರು ತಡೆದಿದ್ದು ಆಗ ಅಪಾದಿತನು ಅವಾಚ್ಯ ಶಬ್ದಗಳಿಂದ ಬೈದು ಕೋಲಿನಿಂದ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕಿವಿಗೆ ರಕ್ತಗಾಯವಾಗಿದ್ದು, ಎಡತೋಳಿಗೆ  ಗುದ್ದಿದ ಗಾಯವಾಗಿರುತ್ತದೆ.  ಮತ್ತು ಕೈಯಿಂದ ಬೆನ್ನಿಗೆ ಹೊಡೆದಿರುತ್ತಾನೆ. ಅಣ್ಣ ಸುಧಾಕರ 108 ಅಂಬುಲೆನ್ಸ್ ನಲ್ಲಿ ಕಾರ್ಕಳ ಸರಕಾರಿ  ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲುಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2022 ಕಲಂ: 324, 323, 504  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 11-02-2022 09:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080