ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಅಜೆಕಾರು: ಪಿರ್ಯಾದಿದಾರರಾದ ಸಂತೋಷ್ ಮೂಲ್ಯ (39) ತಂದೆ: ಮೆಣ್ಪ ವಾಸ: ಅಮ್ಮ ನಿವಾಸ ಅಶೋಕ ನಗರ ಕಡ್ತಲ ಗ್ರಾಮ ಕಾರ್ಕಳ ತಾಲೂಕು ಉಡುಪಿ ಇವರು ಬೈರಂಪಳ್ಳಿಯ ನಿವಾಸಿ ಸುಧಾಕರ ಪೂಜಾರಿಯವರೊಂದಿಗೆ ಗಾರೆ ಕೆಲಸವನ್ನು ಮಾಡಿಕೊಂಡಿದ್ದು, ಸುಧಾಕರ ಪೂಜಾರಿಯವರು ಅಜೆಕಾರಿನ ಕೈಕಂಬದಲ್ಲಿ ಮನೆ ಕೆಲಸ ವಹಿಸಿಕೊಂಡಿದ್ದು, ಇವರು ನಿತ್ಯವೂ ಕೆಲಸಕ್ಕೆ ಹೋಗುವರೇ ಬೆಳಿಗ್ಗೆ ಕಡ್ತಲ ಪೇಟೆಗೆ ಬರುತ್ತಿದ್ದು, ಅಲ್ಲಿಂದ ಸುಧಾಕರ ಪೂಜಾರಿಯವರ ಬೈಕ್ ನಲ್ಲಿ ಕೈಕಂಬಕ್ಕೆ ಕೆಲಸಕ್ಕೆ ಹೋಗುವುದಾಗಿದೆ. ಅದರಂತೆ ಸಂತೋಷ್ ಮೂಲ್ಯ ರವರು ದಿನಾಂಕ 11/02/2022 ರಂದು ಬೆಳಿಗ್ಗೆ 08:25 ಗಂಟೆಗೆ ಕಡ್ತಲ ಪೇಟೆಗೆ ಬಂದಿದ್ದು, ಅಲ್ಲಿಂದ ಸುಧಾಕರ ಪೂಜಾರಿಯವರ KA-20 L-1813 Splender ಬೈಕ್ ನಲ್ಲಿ ಹೋಗುತ್ತಾ ಕೆಲಸಕ್ಕೆ ತಗಡು ಶೀಟ್ ಬೇಕಾಗಿದ್ದ ಕಾರಣ ರಾಮನಾಥ ಹಾರ್ಡ್ ವೇರ್ ನಲ್ಲಿ ಹೇಳಿ ಹೋಗುವ ಎಂದು 08:40 ಗಂಟೆಗೆ ಅಜೆಕಾರಿನ ರಾಮನಾಥ್ ಹಾರ್ಡ್ ವೇರ್ ಮುಂದಿನ ಡಾಮಾರು ರಸ್ತೆಯ ಬದಿಯಲ್ಲಿ ಬೈಕ್ ನ್ನು ನಿಲ್ಲಿಸಿದ್ದು,  ಹಿಂದೆ ಸಹಸವಾರನಾಗಿದ್ದ ಸಂತೋಷ್ ಮೂಲ್ಯ ರವರು ಬೈಕ್ ನ್ನು ಇಳಿಯುತ್ತಿರುವಾಗ ಹಿಂದಿನಿಂದ ಅಂದರೆ ಹೆಬ್ರಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುವ ವಾಹನವೊಂದು ಅತೀ ವೇಗ & ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಬಂದು ಬೈಕ್ ಗೆ ಡಿಕ್ಕಿ ಪಡಿಸಿದ್ದು, ಬೈಕ್ ಸವಾರ & ಸಹಸವಾರ ಇಬ್ಬರು ಬೈಕ್ ಸಮೇತ ಕೆಳಗೆ ಬಿದ್ದಿರುತ್ತಾರೆ. ಸಂತೋಷ್ ಮೂಲ್ಯ ರವರು ಮೇಲಕ್ಕೆ ಎದ್ದು ನೋಡಲಾಗಿ ಡಿಕ್ಕಿ ಪಡಿಸಿದ ವಾಹನದ ನಂಬ್ರ KA-47 M-4887 ಮಾರುತಿ ಸುಜಿಕಿ EECO ಸಿಲ್ವರ್ ಬಣ್ಣದ ವಾಹನವಾಗಿರುತ್ತದೆ. ಸ್ವಲ್ಪ ಸಮಯದ ಬಳಿಕ  ವಾಹನದ ಸವಾರನು ವಾಹನ ಸಮೇತ ಸ್ಥಳದಿಂದ ಪರಾರಿಯಾಗಿರುತ್ತಾನೆ. ಬೈಕ್ ನಿಂದ ಕೆಳಗೆ ಬಿದ್ದ ಪರಿಣಾಮ ಸಂತೋಷ್ ಮೂಲ್ಯ ರವರಿಗೆ ತಲೆಯ ಎಡಭಾಗದಲ್ಲಿ, ಬಲಹಣೆಯ ಬಳಿಯಲ್ಲಿ ರಕ್ತಗಾಯವಾಗಿದ್ದು, ಎಡಗೈ ಲ್ಲಿ ತರಚಿದ ರೀತ್ಯಾ ಗಾಯಗಳಾಗಿದ್ದು, ಎಡಗಾಲಿನ ಹಿಮ್ಮಡಿಯ ಬಳಿ ಗುದ್ದಿದ ಹಾಗೆ ಆಗಿದ್ದು,  ಬೈಕ್ ಸವಾರ ಎಡಗೈ ಭುಜ ಹಾಗೂ ಎಡಗಾಲಿನ ಹಿಮ್ಮಡಿ ಬಳಿ ತೀವ್ರವಾಗಿ ಜಖಂ ಆಗಿರುತ್ತದೆ. ಗಾಯಾಳುಗಳನ್ನು ಅಲ್ಲಿ ಸೇರಿದ್ದ ಸಾರ್ವಜನಿಕರ ಸಹಾಯದಿಂದ ಸುನೀಲ್ ಹಾಗೂ ಪ್ರಶಾಂತ್ ರವರುಗಳು ಒಂದು ರಿಕ್ಷಾದಲ್ಲಿ ಕಾರ್ಕಳ ನರ್ಸಿಂಗ್ ಹೋಂ ಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಅಪಘಾತಕ್ಕೆ KA-47 M-4887 ನೇ ನಂಬ್ರದ ಸಿಲ್ವರ್ ಬಣ್ಣದ ಮಾರುತಿ ಸುಜಿಕಿ EECO ವಾಹನದ  ಸವಾರನ ಅತೀ ವೇಗ & ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2022 ಕಲಂ 279, 337, 338 IPC R/W 134 (A)(B) IMV Actರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾಧಿದಾರರಾದ ಬಾಬಿನಿ  ಗೌಡ(42) ಗಂಡ: ರಮೇಶ ಗೌಡ ವಾಸ: ಆಕಾಶ ಐಸ್ ಪ್ಲಾಂಟ್ ಹತ್ತಿರ  ಬಾಡಿಗೆ ಮನೆ ಗುಜ್ಜರಬೆಟ್ಟು  ಪಡುತೋನ್ಸೆ ಗ್ರಾಮ ಇವರು ಮತ್ತು ಪಿರ್ಯಾಧಿದಾರರ ಗಂಡ  ರಮೇಶ ಗೌಡ (45) ಮತ್ತು  ಮಕ್ಕಳೊಂದಿಗೆ  ಸುಮಾರು 4 ವರ್ಷದಿಂದ  ಗುಜ್ಜರಬೆಟ್ಟುವಿನಲ್ಲಿ  ಬಾಡಿಗೆ ಮನೆಯಲ್ಲಿ  ವಾಸವಾಗಿದ್ದು .  ಸುಮಾರು 15 ದಿನಗಳ ಹಿಂದೆ ಬಾಬಿನಿ  ಗೌಡ ರವರ  ಗಂಡ ರಮೇಶ ಗೌಡ (45) ರವರಿಗೆ ಹಲ್ಲುನೋವು  ಮತ್ತು ಜ್ವರ  ಬಂದಿದ್ದು ಈ ಬಗ್ಗೆ  ಚಿಕಿತ್ಸೆ ಪಡೆದಿರುತ್ತಾರೆ, ದಿನಾಂಕ 10/02/2022 ರಂದು ಎಂದಿನಂತೆ  ಕೆಲಸಕ್ಕೆ ಹೋಗಿದ್ದು  ಮಧ್ಯಾಹ್ನ 1:00 ಗಂಟೆಗೆ  ಮನೆಯಲ್ಲಿ  ಊಟ ಮಾಡಿ ಮಲಗಿದವರು  ಎದೆನೋವು ಆಗುತ್ತಿದೆ ಎಂದು ಅಸ್ವಸ್ಥಗೊಂಡವರನ್ನು ಹೈಟೆಕ್ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಸುಮಾರು 3:00 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಇವರು ಎದೆನೋವು  ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರಬಹುದುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 05/2022 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಸುಧಾಕರ ಶೆಟ್ಟಿ ನೆಲ್ಯಾಡಿ (40) ತಂದೆ:ಶೀನಪ್ಪ ಶೆಟ್ಟಿ ವಾಸ: ಪ್ರಿಶಾನ್ ಹೌಸ್, ಕಂಚಿಕಾನ್ ರಸ್ತೆ ಉಪ್ಪುಂದ ಗ್ರಾಮ, ಬೈಂದೂರು ಇವರಿಗೆ KA-20 C-270 ನೇ ಮಹೀಂದ್ರ  ಮ್ಯಾಕ್ಷಿಮೋ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು ಅದರಂತೆ ದಿನಾಂಕ 10/02/2022 ರಂದು ಬೆಳಗಿನ ಸಮಯದಲ್ಲಿ ಸದ್ರಿ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಿರುವ ಬಗ್ಗೆ ಹಾಗೂ ಸಂಜೆಯು ಸಹಾ ಅದೇ ವಾಹನದಲ್ಲಿ ದನಗಳನ್ನು ಸಾಗಾಟ ಮಾಡುವ ಬಗ್ಗೆ ಮಾಹಿತಿ ತಿಳಿದು ಬಂದ ಮೇರೆಗೆ ಸುಧಾಕರ ಶೆಟ್ಟಿ ನೆಲ್ಯಾಡಿ ರವರು ವೇದನಾಥ ಶೆಟ್ಟಿ, ದಿನೇಶ್ ಪೂಜಾರಿ, ಹಾಗೂ ಇತರರೊಂದಿಗೆ ನಾವುಂದ ಗ್ರಾಮದ ಅರೆಹೊಳೆ ಜಂಕ್ಷನ್ ಬಳಿ ಕಾದು ಕುಳಿತುಕೊಂಡಿರುವಾಗ ಸಂಜೆ 5;00 ಗಂಟೆಗೆ  ಆರೋಪಿ ರವೀಂದ್ರ ಪೂಜಾರಿ ಎಂಬಾತನು ಹಸಿರು ಬಣ್ಣದ KA-20 C-270 ನೇ ಮಹೀಂದ್ರ ಗೂಡ್ಸ್ ವಾಹನವನ್ನು ನಾವುಂದ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಚಲಾಯಿಸಿಕೊಂಡು ಬರುತ್ತಿರುವುದನ್ನು ನೋಡಿ ಸುಧಾಕರ ಶೆಟ್ಟಿ ನೆಲ್ಯಾಡಿ ರವರು ನಿಲ್ಲಿಸಿ ನೋಡಿದಾಗ  ವಾಹನದಲ್ಲಿ ಕಪ್ಪು  ಬಿಳಿ ಬಣ್ಣದ 1 ದನವನ್ನು  ಯಾವುದೇ ಆಹಾರ ಬಾಯಾರಿಕೆ ನೀಡದೇ  ಮಾಂಸ ಮಾಡುವ  ಉದ್ಧೇಶದಿಂದ  ಹಿಂಸಾತ್ಮಕ  ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು. ಸುಧಾಕರ ಶೆಟ್ಟಿ ನೆಲ್ಯಾಡಿ ರವರು ಆರೋಪಿತ 1}ರವೀಂದ್ರ ಪೂಜಾರಿ, 2} ಜಲೀಲ್ ನಾವುಂದನಲ್ಲಿ ಸದ್ರಿ ಗೂಡ್ಸ್ ವಾಹನದಲ್ಲಿ ಬೆಳಿಗ್ಗೆ ಸಮಯ ಹಳಗೇರಿಯಿಂದ 2 ದನಗಳನ್ನು ಹಾಗೂ ಮುಳ್ಳಿಕಟ್ಟೆಯಿಂದ 2 ದನಗಳನ್ನು ಸಾಗಾಟ ಮಾಡಿರುವುದರ ಕುರಿತು ವಿಚಾರಿಸಿದಾಗ ನಾವುಂದದ ಜಲೀಲ್ ಎಂಬಾತನು ದನಗಳನ್ನು ಸಾಗಾಟ ಮಾಡಲು ಹೇಳಿದ್ದು  ಸಾಗಾಟ ಮಾಡಿಕೊಟ್ಟರೇ ಬಾಡಿಗೆಯ  ಎರಡರಷ್ಟು ಹಣವನ್ನು ಕೊಡುವುದಾಗಿ ಆರೋಪಿ ತಿಳಿಸಿದ್ದು, ಸದ್ರಿ ವಾಹನದಲ್ಲಿ ಆರೋಪಿಯು ಬೆಳಿಗ್ಗೆ ಸಾಗಾಟ ಮಾಡಿರುವ ಜಾನುವಾರುಗಳನ್ನು ಪತ್ತೆ ಮಾಡಿ ಹಾಗೂ ಯಾವುದೇ ಪರವಾನಿಗೆ ಇಲ್ಲದೆ ಮಾಂಸ ಮಾಡುವ ಉದ್ಧೇಶದಿಂದ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಾಟ ಮಾಡಿರುವುದಾಗಿದೆ, ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 42/2022 ಕಲಂ 4,5,7,12 ಕರ್ನಾಟಕ ಗೋ  ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧಿನಿಯಮ 2020 & 11(1) (ಡಿ) ಪ್ರಾಣಿಹಿಂಸೆ ನಿಷೇಧ ಕಾಯಿದೆ.ಮತ್ತು ಕಲಂ 66,192(ಎ) ಐ ಎಮ್ ವಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪ್ರಸನ್ನ ಎಮ್ ಎಸ್, ಪೊಲೀಸ್‌ ಉಪನಿ ರೀಕ್ಷಕರು ಕಾರ್ಕಳ ನಗರ ಪೊಲೀಸ್‌ ಠಾಣೆ ರವರು ದಿನಾಂಕ 11/02/2022 ರಂದು ಕಾರ್ಕಳ ಕಸಬಾದಲ್ಲಿ ರೂಟ್ ಮಾರ್ಚ್ ಕರ್ತವ್ಯದಲ್ಲಿರುವ ಸಮಯ ಬೆಳಿಗ್ಗೆ  09:30 ಗಂಟೆಗೆ ಕಾರ್ಕಳ ಕಸಬಾ ಗ್ರಾಮದ ತೆಳ್ಳಾರು ಸೇತುವೆಯ ಕೆಳಗಡೆ ನೀರಿನಲ್ಲಿ ಪ್ರಾಣಿಯ ಅವಶೇಷ ಇರುವುದಾಗಿ ಬಾತ್ಮೀದಾರರಿಂದ ಮಾಹಿತಿ ಬಂದಿದ್ದು ಸಿಬ್ಬಂಧಿಯವರೊಂದಿಗೆ ತೆಳ್ಳಾರು ಸೇತುವೆ ಬಳಿ 09:45 ಗಂಟೆಗೆ ತಲುಪಿ ಸೇತುವೆಯ ಕೆಳಗೆ ನೀರಿನಲ್ಲಿ ಪರಿಶೀಲಿಸಿದಾಗ ನೀರಿನಲ್ಲಿ ದನದ ಅವಶೇಷಗಳು ಕಂಡು ಬಂದಿದ್ದು ಪಂಚರ ಸಮಕ್ಷಮ ಸದ್ರಿ ಅವಶೇಷವನ್ನು ಮೇಲಕ್ಕೆ ತೆಗೆದು ಪರಿಶೀಲಿಸಲಾಗಿ ದನದ ತಲೆಬುರುಡೆ , ಕಪ್ಪು ಬಣ್ಣದ  ಚರ್ಮಕ್ಕೆ ಲಗ್ತಿಯಾಗಿ  ಕಿವಿ ಮತ್ತು ಬಾಲ ಇದ್ದು  ಯಾರೋ ಕಳ್ಳರು ಎಲ್ಲಿಯೋ ಜಾನುವಾರನ್ನು ಕಳವು ಮಾಡಿ ಪರವಾನಿಗೆ ಹೊಂದದೇ ಸಾಗಾಟ ಮಾಡಿ ಮಾಂಸಕ್ಕಾಗಿ ಹತ್ಯೆ ಮಾಡಿ ಮಾಂಸ ಮಾಡಿದ ನಂತರ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಅವಶೇಷಗಳನ್ನು ಯಾವುದೋ ವಾಹನದಲ್ಲಿ ಸಾಗಾಟ ಮಾಡಿ ಹರಿಯುವ ನೀರಿಗೆ ಎಸೆದು ನೀರನ್ನು ಮಲಿನಗೊಳಿಸಿದ್ದಲ್ಲದೇ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುವಂತೆ ತ್ಯಾಜ್ಯವನ್ನು ನೀರಿಗೆ ಎಸೆದಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 27/2022 ಕಲಂ: 379,201,269,277 ಐಪಿಸಿ ಮತ್ತು ಕಲಂ 4,,5,7 12 KARNATAKA PREVENTION OF SLAUGHTER AND PRESERVATION OF CATTLE ORDINANCE 2020 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-02-2022 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080