ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾದ ಗುರು ಪ್ರಸಾದ್ (29) ತಂದೆ: ಸಂಜೀವ ಪೂಜಾರಿ ವಾಸ:3/36 , ಶ್ರೀ ಜನನಿ ನಿಲಯ ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 06/02/2021 ರಂದು ಸಂಜೆ 5:00 ಗಂಟೆಗೆ ತನ್ನ ಮಾವನಾದ ಸಂತೋಷ ಪೂಜಾರಿಯವರೊಂದಿಗೆ KA-20-EV-6410 ನೇ ACTIVA ಸ್ಕೂಟರ್ ನಲ್ಲಿ ಹಿಂಬದಿ ಸಹಸವಾರರಾಗಿ ಕುಳಿತುಕೊಂಡು ರಾಜ್ಯ ಹೆದ್ದಾರಿಯಲ್ಲಿ ಚಿತ್ತೂರಿನಿಂದ ಜಡ್ಕಲ್ ಕಡೆಗೆ ಹೋಗುವಾಗ ಇಡೂರು ಗ್ರಾಮದ ಕುಕ್ಕಡ ಕ್ರಾಸ್ ಎಂಬಲ್ಲಿ ತಲುಪಿದಾಗ ಗುರು ಪ್ರಸಾದ ರವರ  ಎದುರುಗಡೆಯಿಂದ ಅಂದರೆ ಕೊಲ್ಲೂರು ಕಡೆಯಿಂದ ಚಿತ್ತೂರು ಕಡೆಗೆ ಒಂದು ವಾಹನವು ಏಕಾಎಕೀ ಬಂದದ್ದನ್ನು ನೋಡಿ ಸ್ಕೂಟರ್ ಸವಾರ ಸಂತೋಷ್ ಪೂಜಾರಿಯು ಸ್ಕೂಟರನ್ನು ತೀರಾ ಎಡ ಬದಿಗೆ ಚಲಾಯಿಸಿ ಹತೋಟಿ ತಪ್ಪಿ ಸಂತೋಷ್ ಪೂಜಾರಿಯು ಸ್ಕೂಟರನ್ನು ಬಿಟ್ಟು ಕೆಳಗೆ ಹಾರಿದ್ದು ಆಗ ಸ್ಕೂಟರ್ ಸಮೇತ ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಸ್ಕೂಟರ್ ನ ಹ್ಯಾಂಡಲ್ ಹೊಟ್ಟೆಗೆ ಬಡಿದ್ದು  ಒಳ ಜಖಂ ಆಗಿದ್ದು ಚಿಕಿತ್ಸೆಯ ಬಗ್ಗೆ ಕುಂದಾಪುರ ವಿನಯ ಆಸ್ಪತ್ರೆಗೆ ದಾಖಲಾಗಿ ಅಲ್ಲಿ ಪರೀಕ್ಷಿಸಿದ ವೈದ್ಯರು ದಿನಾಂಕ 08/02/2021 ರಂದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ ಮೇರೆಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 09/02/2021 ರಂದು ಸಂಜೆ ಸುಮಾರು 4:00 ಗಂಟೆಗೆ, ಕುಂದಾಪುರ ತಾಲೂಕಿನ, ಕಸಬಾ ಗ್ರಾಮದ ಖಾರ್ವಿಕೇರಿ ರಸ್ತೆಯ ಪ್ರಕಾಶ್‌ ಟುಟೇರಿಯಲ್‌ ಬಳಿ ರಸ್ತೆಯಲ್ಲಿ, ಆಪಾದಿತೆ ಗೀತಾ  ಎಂಬವಳು KA-47-E-2888 ನೇ ಸ್ಕೂಟರ್‌ ನ್ನು ಖಾರ್ವಿಕೇರಿ ಕಡೆಯಿಂದ ಕುಂದಾಪುರ ಬಸ್‌ಸ್ಟ್ಯಾಂಡ್‌ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿ ಬಂದು, ಪಿರ್ಯಾದಿದಾರರಾದ ವಿಶ್ವನಾಥ (30)   ತಂದೆ: ವೀರಪ್ಪ ತೋಟದ್‌ ವಾಸ: ಹೆಗೋಡ್‌‌ತೋಟ, ಆನೆಗಳ್ಳಿ ಗ್ರಾಮ ಕುಂದಾಪುರ ತಾಲೂಕು & ಹಾಲಿವಾಸ: ಖಾರ್ವಿಕೇರಿ ರಸ್ತೆ, ಪ್ರಕಾಶ್‌ಟುಟೇರಿಯಲ್‌ಬಳಿ ಕಸಬಾ ಗ್ರಾಮ ಕುಂದಾಪುರ ರವರ ಜೋತೆಯಲ್ಲಿದ್ದ ಅವರ 5 ವರ್ಷದ ಮಗಳಾದ ದಾನೇಶ್ವರಿಗೆ ಡಿಕ್ಕಿ ಹೊಡೆದ ಪರಿಣಾಮ ದಾನೇಶ್ವರಿಯ  ಎಡಕಾಲಿಗೆ,  ಬಲಕೈಗೆ,ಎಡಕೈಗೆ ಹಾಗೂ ಬಲ ಕಣ್ಣಿನ ಹತ್ತಿರ  ಗಾಯ ನೋವಾಗಿ ಕುಂದಾಪುರ ಸರಕಾರಿ  ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಪಡುಬಿದ್ರಿ: ಪಿ.ಎಸ್ ಶ್ರೀನಿವಾಸ ರಾವ್ (52) ತಂದೆ: ಸುಬ್ಬ ರಾವ್ ವಾಸ: ಗಂಗು ಹೌಸ್, ಬೇಂಗ್ರೆ ರಸ್ತೆ, ನಡ್ಸಾಲು ಗ್ರಾಮ, ಪಡುಬಿದ್ರಿ, ಕಾಪು ತಾಲೂಕು ಎಂಬವರಿಂದ ಅಧಿಕಾರ ಪತ್ರ ಹೊಂದಿದ್ದ  ಪಿರ್ಯಾದಿದಾರರರಾದ ಶೈಲೇಂದ್ರ ಉಪಾಧ್ಯಾಯ (29) ತಂದೆ: ಶ್ರೀನಿವಾಸ ಉಪಾಧ್ಯಾಯವಾಸ: ಕೃಷ್ಣಾಪುರ ಮಠ, ಬೇಂಗ್ರೆ ರಸ್ತೆ, ನಡ್ಸಾಲು ಗ್ರಾಮ, ಕಾಪು ತಾಲೂಕು(ಜಿಪಿಎ ಹೋಲ್ಡರ್) ಪಿ.ಎಸ್ ಶ್ರೀನಿವಾಸ ರಾವ್ (52) ತಂದೆ: ದಿ. ಸುಬ್ಬ ರಾವ್ ವಾಸ: ಗಂಗು ಹೌಸ್, ಬೇಂಗ್ರೆ ರಸ್ತೆ, ನಡ್ಸಾಲು ಗ್ರಾಮ ಮತ್ತು ಅಂಚೆ, ಕಾಪು ರವರು ನೀಡಿದ ದೂರಿನಲ್ಲಿ, ಸರಕಾರದಿಂದ 1 ನೇ ಆರೋಪಿ  ಮೊಹಮ್ಮದ್ ಇಕ್ಬಾಲ್  ಹೆಸರಿಗೆ ಕೊಟ್ಟಂತೆ ಕಾಣುವ ನಕಲಿ ಸಾಗುವಳಿ ಚೀಟಿಯನ್ನು ದಿನಾಂಕ 27/01/1999 ರಂದು ಸೃಷ್ಟಿಸಿ ಕಾಪು ತಾಲೂಕು ನಡ್ಸಾಲು  ಗ್ರಾಮದ ಸ. ನಂ 244/11ಬಿ (ಪ್ರಸ್ತುತ ಸ.ನಂ 244/11ಪಿ2) ರಲ್ಲಿ 4 ಸೆಂಟ್ಸ್ ಹಾಗೂ ಸ.ನಂ 244/12ಎ (ಪ್ರಸ್ತುತ ಸ.ನಂ 244/12ಪಿ2) ರಲ್ಲಿ 5 ಸೆಂಟ್ಸ್ ಆಸ್ತಿಯ ಆರ್‌ಟಿಸಿ ಖಾತೆಯನ್ನು ಸರಕಾರದ ಹೆಸರಿನಿಂದ 1ನೇ ಆರೋಪಿಯು ತನ್ನ ಹೆಸರಿಗೆ ಮೋಸದಿಂದ ವರ್ಗಾವಣೆ ಮಾಡಿಕೊಂಡಿರುವುದಾಗಿದೆ. ಸುಳ್ಳು ಸಾಗುವಳಿ ಚೀಟಿಯ ಪ್ರತಿಯನ್ನು ನೀಡಿ 2 ನೇ ಆರೋಪಿತ ಲಿಯಾಖತ್ ಹುಸೇನ್ ವಾಸ: ನಡ್ಸಾಲು ಗ್ರಾಮ, ಕಾಪು ತಾಲೂಕು ಹೆಸರಿನಲ್ಲಿ ಪಡುಬಿದ್ರಿ ಪಂಚಾಯತಿಗೆ ಸುಳ್ಳು ದಾಖಲೆಗಳನ್ನು ನೀಡಿ, ಕಟ್ಟಡ ಪರವಾನಿಗೆ ಪಡೆದುಕೊಂಡದ್ದಲ್ಲದೆ ಸ.ನಂ 245/2 ರ 23 ಸೆಂಟ್ಸ್ ಆಸ್ತಿಯಲ್ಲಿರುವ ಪವಿತ್ರ ಗಣಪತಿ ಮಂದಿರಕ್ಕೆ ಹೋಗಿ ಬರಲು ಇರುವ 15 ಅಡಿ ಅಗಲದ ಸಾರ್ವಜನಿಕ ದಾರಿಯನ್ನು ಅತಿಕ್ರಮಣ ಮಾಡಿ ದೇವಸ್ಥಾನದ ದಾರಿಗೆ ತೊಂದರೆ ಮಾಡಿರುವುದಾಗಿದೆ ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2021 ಕಲಂ: 417, 420, 465, 466, 468, 471 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
    ಅಜೆಕಾರು: ಫಿರ್ಯಾದಿದಾರರಾದ ಬಬುಲ್‌(20) ತಂದೆ:ರಾಜೇಂದ್ರ ವಾಸ: ಬಾರಿಗೋಕುಡ, ಗುಂಡಾಲ ಗ್ರಾಮ, ಕುಂದ್ರ ತಾಲೂಕು, ಕೊರಾಪುಟ್‌ಜಿಲ್ಲೆ, ಒಡಿಸ್ಸಾ ರಾಜ್ಯ ಇವರು ಕಾರ್ಕಳ ಸಾಣೂರಿನ ಮುರತಂಗಡಿಯ ಮಥಾಯಸ್‌ಫಾರಂ ನಲ್ಲಿ ಸುಮಾರು 2 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಅವರ  ಸ್ನೇಹಿತ ಧನಪತಿ ಎಂಬವರು ಉಡುಪಿ ತಾಲೂಕಿನ ಕಣಜಾರು ಎಂಬಲ್ಲಿ ಚೆರಿಯನ್ @ ಶನೀಶ್‌ರವರ ತೋಟದಲ್ಲಿ ಸುಮಾರು 2 ತಿಂಗಳಿನಿಂದ ಕೂಲಿ ಕೆಲಸ ಮಾಡಿಕೊಂಡಿದ್ದು, ಆತನ ಮಾಲಕ ಶನೀಶ್‌ರವರು ಸರಿಯಾಗಿ ಸಂಬಳ ಹಾಗೂ ವಸತಿ ನೀಡುತ್ತಿಲ್ಲವಾಗಿ ತಿಳಿಸಿದಂತೆ, ಬಬುಲ್‌ ರವರು ದಿನಾಂಕ 31/01/2021 ರಂದು ಕಣಜಾರು ಸ್ನೇಹಿತ ಧನಪತಿ ರವರನ್ನು ವಿಚಾರಿಸಲು ಹೋದಾಗ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನಂತರ ‌ಧನಪತಿಯು ಬಬುಲ್‌ ರವರು ಕೆಲಸ ಮಾಡಿಕೊಂಡಿದ್ದಲ್ಲಿಗೆ ಬಂದು ಕೆಲಸಕ್ಕೆ ಸೇರಿದ್ದು,  ದಿನಾಂಕ 02/02/2021 ರಂದು ಸಂಜೆ ಶನೀಶ್‌ರವರು ಆತನ ಸ್ನೇಹಿತ ಸಚ್ಚಿದಾನಂದ ಪ್ರಭು @ ಸಚ್ಚು ಎಂಬವರಲ್ಲಿ ಫೋನು ಮಾಡಿಸಿ ನಮ್ಮನ್ನು ಅಜೆಕಾರು ಪೊಲೀಸ್‌ ಠಾಣೆಗೆ ಬರುವಂತೆ ತಿಳಿಸಿದ್ದು, ಅದರಂತೆ ಠಾಣೆಗೆ ಬಂದ ನಮ್ಮಲ್ಲಿ ಶನೀಶ್‌ರವರು ಮಾತನಾಡಿ ಒಳ್ಳೆಯ ಸಂಬಳ ಕೊಡುವುದಾಗಿಯೂ, ಯಾವುದೇ ತೊಂದರೆ ಕೊಡುವುದಿಲ್ಲ ಎಂಬುದಾಗಿ ಪುಸಲಾಯಿಸಿ ನಮ್ಮನ್ನು ಶನಿಶ್‌ರವರು ಅವರ ಕಾರಿನಲ್ಲಿ ಸಂಜೆ 6:00 ಗಂಟೆ ಸುಮಾರಿಗೆ ಅಜೆಕಾರಿನ ಬಸ್ತಿರೋಡ್‌ ಪಕ್ಕದಲ್ಲಿದ್ದ ತನ್ನ ಮನೆಯ ಪಕ್ಕ ಕೆಲಸದವರು ವಾಸಮಾಡುವ ರೂಮಿಗೆ ನಮ್ಮಿಬ್ಬರನ್ನು ಶನೀಶ್‌, ಸಾಬು ಹಾಗೂ ಸಂದೀಪ್‌ರವರು ಸೇರಿ ಕರೆದುಕೊಂಡು ಹೋಗಿ ರೂಮಿನಲ್ಲಿ ಕೂಡಿ ಹಾಕಿ, ಕೈಯಿಂದ ತಲೆಗೆ, ಬೆನ್ನಿಗೆ, ಹೊಟ್ಟೆಗೆ ಹೊಡೆದುದ್ದಲ್ಲದೇ ಕಾಲಿನಿಂದ ಸೊಂಟಕ್ಕೆ ಎದೆಗೆ ತುಳಿದು ನಮ್ಮಿಬ್ಬರ ಕೈಯ್ಯಲ್ಲಿದ್ದ ಮೊಬೈಲ್‌ಸೆಟ್‌ಗಳನ್ನು ಹಾಗೂ ನಮ್ಮ ಬಳಿಯಿದ್ದ ರೂಪಾಯಿ. 1,600/- ನ್ನು ತೆಗೆದುಕೊಂಡು ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನು ಕೊಂದು ಹಾಕುವುದಾಗಿ ಜೀವಬೆದರಿಕೆ ಹಾಕಿ ರೂಮಿನಲ್ಲಿ ಕೂಡಿ ಹಾಕಿ ಹೋಗಿರುತ್ತಾರೆ. ನಂತರ ನಾವು ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ನನಗೆ ವಿದ್ಯಾಭ್ಯಾಸ ಹಾಗೂ ಭಾಷೆಯ ತೊಂದರೆಯಿಂದ ಹಾಗೂ ಜನರ ಪರಿಚಯ ಇಲ್ಲದ ಕಾರಣ ಠಾಣೆಗೆ ದೂರು ನೀಡಲು ತಡವಾಗಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2021 ಕಲಂ: 323, 342, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 11-02-2021 10:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080