ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮುಲ್ಲಾ ಫಾರೂಕ್ (46), ತಂದೆ: ಮುಲ್ಲಾ ಇಬ್ರಾಹಿಂ, ವಾಸ: ಕುಲ್ಸುಂ ಮಂಜಿಲ್ ಹಡವಿನಕೋಣೆ ಶಿರೂರು ಗ್ರಾಮ ಬೈಂದೂರು ತಾಲೂಕು ಇವರು  ದಿನಾಂಕ 11/02/2021 ರಂದು ಬೆಳಿಗ್ಗೆ ಹಾಲಿನ ಪ್ಯಾಕೇಟ್ ಗಳನ್ನು ಶಿರೂರು ಟೋಲ್ಗೇಟ್  ಬಳಿಯ ಅಂಗಡಿಗಳಿಗೆ ಕೊಡಲು ಶಿರೂರು ಮಾರ್ಕೆಟ್ ನಿಂದ ಅವರ ಮೋಟಾರ್ ಸೈಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 66 ನೇದರ ಪಶ್ಚಿಮ ಬದಿಯ ರಸ್ತೆಯಲ್ಲಿ ಹೊರಟಿದ್ದು  8:30 ಗಂಟೆಗೆ ಶಿರೂರು ಗ್ರಾಮದ ಕರಿಕಟ್ಟೆ ಬಳಿ ಪಿರ್ಯಾದಿದಾರರ ಹಿಂದಿನಿಂದ ಶಿರೂರು ಮಾರ್ಕೆಟ್ ಕಡೆಯಿಂದ ಭಟ್ಕಳ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯ ರಸ್ತೆಯಲ್ಲಿ ಒಂದು ನೊಂದಣೆ ಸಂಖ್ಯೆ ಇಲ್ಲದ ಯಮಹಾ ಕಂಪೆನಿಯ ಆರ್ 15 ಮೋಟಾರ್ ಸೈಕಲ್ ನ್ನು ಸಾರಂಗ್ ಅರ್ಹಾನ್(14)  ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಪಿರ್ಯಾದಿದಾರರ ಮೋಟಾರ್ ಸೈಕಲ್ ನ್ನು ಓವರ್ ಟೇಕ್ ಮಾಡಿಕೊಂಡು ಮುಂದೆ ಹೋಗಿ ಕರಿಕಟ್ಟೆಯಲ್ಲಿರುವ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ಆಶ್ರಮದ ಎದುರು ಮೋಟಾರು ಸೈಕಲ್ ನ್ನು ಅತೀವೇಗದಿಂದ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ಸಾರಂಗ್ ಅರ್ಹಾನ್ ನ ಹತೋಟಿ ತಪ್ಪಿ, ಮೋಟಾರ್ ಸೈಕಲ್  ಡಿವೈಡರ್ ಮೇಲೆ ಚಲಿಸಿ, ಡಿವೈಡರ್ ನಲ್ಲಿ ಅಳವಡಿಸಿದ ಸೂಚನಾ ಫಲಕದ ಕಂಬಕ್ಕೆ ಮೋಟಾರ್ ಸೈಕಲ್ ಢಿಕ್ಕಿ ಹೊಡೆದ ಪರಿಣಾಮ ಅರ್ಹಾನ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದಿದ್ದು, ಅರ್ಹಾನ್ ರವರ ತಲೆಗೆ ಮುಖಕ್ಕೆ ತೀವ್ರ ಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.  ಅಪಘಾತಕ್ಕೊಳಗಾದ ಮೋಟಾರ್ ಸೈಕಲ್ ನ್ನು ಚಲಾಯಿಸಿ ಮೃತಪಟ್ಟ ಅರ್ಹಾನ್ ಅಪ್ರಾಪ್ತ ವಯಸ್ಕನಾಗಿದ್ದು, ಆತನಿಗೆ ಮೋಟಾರ್ ಸೈಕಲ್ ಸವಾರಿ ಮಾಡಲು ಡ್ರೈವಿಂಗ್ ಲೈಸೆನ್ಸ್ ಇಲ್ಲದಿರುವ ವಿಚಾರ ತಿಳಿದೂ ಕೂಡಾ ಮೋಟಾರ್ ಸೈಕಲ್ ನ ಮಾಲಕರು ಅಪ್ರಾಪ್ತ ವಯಸ್ಕ ಸಾರಂಗ್ ಅರ್ಹಾನ್ ನಿಗೆ ಮೋಟಾರ್ ಸೈಕಲ್  ನೀಡಿರುವುದಾಗಿದೆ.  ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2021 ಕಲಂ: 279, 304(A) ಐಪಿಸಿ ಮತ್ತು 5(1), 180, 3(1) ಜೊತೆಗೆ 181 ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸುವರ್ಣ (28), ಗಂಡ:ರಾಜೇಶ್ , ವಾಸ: ಹೋಟೆಲ್ ವೆಜ್ ತಡ್ಕ ಸಾಯಿ ನಾಥ ಬಿಲ್ಡಿಂಗ್ 76 ಬಡಗುಬೆಟ್ಟು ಗ್ರಾಮ ಉಡುಪಿ ಇವರು ಒಂದು ವರ್ಷದ ಹಿಂದೆ ರಾಜೇಶ್ (35) ಎಂಬುವವರನ್ನು ಬೆಳಗಾಂನಲ್ಲಿ  ಮದುವೆಯಾಗಿದ್ದು , ಮೂರು ತಿಂಗಳಿಂದ ಉಡುಪಿಯ ಹೋಟೆಲ್ ವೆಜ್ ತಡ್ಕ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಗಂಡನೊಂದಿಗೆ ವಾಸವಾಗಿದ್ದು,  ದಿನಾಂಕ 09/02/2021 ರಂದು ರಾತ್ರಿ 8:30 ಗಂಟೆಗೆ ಪಿರ್ಯಾದಿದಾರರ ಗಂಡ ರಾಜೇಶ್ ತಾನು  ಮನೆಯಲ್ಲಿ ಇರುವುದಾಗಿ ಹೇಳಿ ಹೋಗಿದ್ದು , ಪಿರ್ಯಾದಿದಾರರು ಕೆಲಸ ಮುಗಿಸಿ ರಾತ್ರಿ 9:00 ಗಂಟೆಗೆ ಮನೆಗೆ ಬಂದು ನೋಡಿದಾಗ ರಾಜೇಶ್ ಮನೆಯಲ್ಲಿ ಇಲ್ಲದೆ ಇದ್ದು ಎಲ್ಲಾ ಕಡೆಗಳಲ್ಲಿ ಹುಡುಕಿದ್ದು ಪತ್ತೆಯಾಗದೇ ಇವರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 11-02-2021 06:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080