ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿ ದಾಮೋದರ ಮೂಲ್ಯ,ಇವರು ದಿನಾಂಕ: 09.01.2023 ರಂದು ಬೆಳಗ್ಗೆ ತನ್ನ ಮನೆಯಿಂದ ಕಾರ್ಕಳ ತಾಲೂಕು ಮಿಯಾರು ಗ್ರಾಮದ ಜೋಡುಕಟ್ಟೆಯಲ್ಲಿರುವ ಗ್ಲೋರಿಯಾ ಎಣ್ಣೆ ಮಿಲ್‌ ನಿಂದ ತೆಂಗಿನ ಎಣ್ಣೆ ತರುವರೇ ನಡೆದುಕೊಂಡು ಹೊರಟು ರಾಷ್ಟ್ರೀಯ ಹೆದ್ದಾರಿಯ ಬಜಗೋಳಿ-ಕಾರ್ಕಳ ರಸ್ತೆಯಲ್ಲಿ ರಸ್ತೆಯ ಎಡಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ಸಮಯ ಸುಮಾರು ಬೆಳಗ್ಗೆ 11:15 ಗಂಟೆಗೆ ಗ್ಲೋರಿಯಾ ಎಣ್ಣೆ ಮಿಲ್‌ ಬಳಿ ತಲುಪುವಾಗ ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ KA19S6381 ನೇ ನಂಬ್ರದ ಹಿರೋ ಹೋಂಡಾ ಸ್ಪ್ಲೆಂಡರ್‌ ಮೋಟರ್‌ ಸೈಕಲ್‌ ನ್ನು ಅದರ ಸವಾರನು ಹೆಲ್ಮೆಟ್‌ ಧರಿಸಿದ್ದು ಮೋಟಾರ್‌ ಸೈಕಲ್‌ ನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರ ಹಿಂದುಗಡೆಗೆ ಡಿಕ್ಕಿ ಹೊಡೆದೆನು. ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮಣ್ಣು ರಸ್ತೆಗೆ ಬಿದ್ದುದ್ದು ಈ ಅಪಘಾತದಿಂದ ಪಿರ್ಯಾದಿದಾರರ ಸೊಂಟಕ್ಕೆ ಹಾಗೂ ಬಲಬದಿಯ ಮೊಣಗಂಟಿಗೆ ತರಚಿದ ಗಾಯವಾಗಿದ್ದು, ತಲೆಗೆ ಗುದ್ದಿದ ಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರನ್ನು ಕಾರ್ಕಳ ಸ್ಪಂದನಾ  ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 05/2023 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿ ಮಹೇಂದ್ರ, ಇವರು ದಿನಾಂಕ: 08.01.2023 ರಂದು ರಾತ್ರಿ ಕಾರ್ಕಳ ತಾಲೂಕು ಮಿಯಾರು ಎಂಬಲ್ಲಿ ಕಂಬಳಕ್ಕೆ ತನ್ನ ಸ್ನೇಹಿತ ಸಂದೇಶ್‌ ಎಂಬುವರ ಮೋಟಾರ್ ಸೈಕಲ್‌ ನಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ಹೊರಟು ಮಿಯಾರಿನಲ್ಲಿ ನಡೆಯುವ ಕಂಬಳಕ್ಕೆ ಹೋಗಿ ದಿನಾಂಕ: 09.01.2023 ರಂದು ವಾಪಾಸು ತನ್ನ ಮನೆಯಾದ ದೊಂಡೆರಂಗಡಿಗೆ ಮಿಯಾರು ಶಿರ್ಲಾಲು ಮಾರ್ಗವಾಗಿ ಹೊರಟು ಸಮಯ ಸುಮಾರು ಬೆಳಗ್ಗೆ 06:30 ಗಂಟೆಗೆ ಕಾರ್ಕಳ ತಾಲೂಕು ಮಿಯಾರು ಗ್ರಾಮದ ರಾಮೇರಗುತ್ತು ಬಳಿ ತಲುಪಿದಾಗ ತಮ್ಮ ಮುಂದುಗಡೆಯಿಂದ ಶಿರ್ಲಾಲು ಕಡೆಗೆ KA20ES7219 ನೇ ನೋಂದಣಿ ಸಂಖ್ಯೆಯ ಟಿವಿಎಸ್‌ ಸ್ಕೂಟರ್‌ ನಲ್ಲಿ ಪಿರ್ಯಾದಿದಾರರ ಪರಿಚಯದ ಮಂಜುನಾಥ ಎಂಬುವವರನ್ನು ಹಿಂಬದಿ ಸವಾರರಾಗಿ ಕುಳ್ಳಿರಿಸಿಕೊಂಡು ಸ್ಕೂಟರ್‌ ನ್ನು ಸಂದೀಪ್‌ ಎಂಬುವವರು ಹೆಲ್ಮೆಟ್‌ ಧರಿಸಿಕೊಂಡು ಅತಿ ವೇಗವಾಗಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಕಾಡುಪ್ರಾಣಿಯೊಂದು ರಸ್ತೆಗೆ ಅಡ್ಡವಾಗಿ ಹಾರಿದ್ದು ಅತಿ ವೇಗವಾಗಿ ಸ್ಕೂಟರ್‌ ನ್ನು ಸವಾರಿ ಮಾಡುತ್ತಿದ್ದ ಸಂದೀಪನು ನಿರ್ಲಕ್ಷತನದಿಂದ ಒಮ್ಮೆಲೆ ಬ್ರೇಕನ್ನು ಹಾಕಿದಾಗ ಹಿಂಬದಿ ಸವಾರನಾಗಿ ಕುಳಿತುಕೊಂಡಿದ್ದ ಮಂಜುನಾಥರವರು ಹಿಡಿತ ತಪ್ಪಿ ಡಾಮಾರು ರಸ್ತೆಗೆ ಬಿದ್ದಿದ್ದು ಸ್ಕೂಟರ್‌ ನೊಂದಿಗೆ ಸವಾರನು ಹೊಂಡಕ್ಕೆ ಬಿದ್ದದ್ದು ಈ ಅಪಘಾತದಿಂದ ಮಂಜುನಾಥರವರ ಕುತ್ತಿಗೆಯ ಹಿಂಭಾಗ ಬೆನ್ನಿಗೆ ಒಳಜಖಂ ಆಗಿರುತ್ತದೆ. ಚಿಕಿತ್ಸೆಯ ಬಗ್ಗೆ ಮಂಜುನಾಥರವರನ್ನು ಕಾರ್ಕಳ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ನಂತರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ನಂತರ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 06/2023 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ

  • ಉಡುಪಿ: ಪಿರ್ಯಾದುದಾರರಾದ ಶ್ರೀ ಕೆ. ಜಯಪ್ರಕಾಶ್‌ ಮಾಲಕತ್ವದ ಹೋಂಡಾ ಯೂನಿಕಾರ್ನ್ ಮೋಟಾರ್‌ ಸೈಕಲ್‌ ನಂಬ್ರ KA20EH6316 (Chassis No: ME4KC09CME8860974 & Engine No: KC09EE8687110) ನೇದನ್ನು ದಿನಾಂಕ 23/12/2022 ರಂದು 22:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಬನ್ನಂಜೆ ಎಂಬಲ್ಲಿ ಪಿರ್ಯಾದುದಾರರ ಮನೆಯ ಎದುರು ನಿಲ್ಲಿಸಿದ್ದು, ಮರುದಿನ ದಿನಾಂಕ 24/12/2022 ರಂದು ಬೆಳಿಗ್ಗೆ 06:30 ಗಂಟೆಗೆ ನೋಡಲಾಗಿ, ಮೋಟಾರ್‌ ಸೈಕಲ್‌ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಸದರಿ ಮೋಟಾರ್‌ ಸೈಕಲ್‌ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ ಸೈಕಲ್‌ ನ ಅಂದಾಜು ಮೌಲ್ಯ ರೂ. 40,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 08/2023 ಕಲಂ:  379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಕೋಟ: ಮಧು ಬಿ.ಇ. ಪೊಲೀಸ್ ಉಪನಿರೀಕ್ಷಕರು (ಕಾನೂನು ಮತ್ತು ಸುವ್ಯವಸ್ಥೆ)  ಕೋಟ ಪೊಲೀಸ್ ಠಾಣೆ ಇವರಿಗೆ ದಿನಾಂಕ: 10.01.2023 ರಂದು ಸಂಜೆ 16:00 ಗಂಟೆಗೆ ಬ್ರಹ್ಮಾವರ ತಾಲೂಕು ಅಚ್ಲಾಡಿ ಗ್ರಾಮದ ಗರಿಕೆಮಠದ ಬಳಿಯಿರುವ ಹಾಡಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ಬಾತ್ಮೀದಾರರಿಂದ ದೊರೆತ ಖಚಿತ ವರ್ತಮಾನದಂತೆ ಇಲಾಖಾ ವಾಹನದಲ್ಲಿ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ತೆರಳಿ ಇಸ್ಪೀಟು ಜುಗಾರಿ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸಂಜೆ 16:50 ಗಂಟೆಗೆ ಧಾಳಿ ನಡೆಸಿ ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪಿಟು ಜುಗಾರಿ ಆಟ ಆಡುತ್ತಿದ್ದ ಆರೋಪಿತ 1) ಮಂಜುನಾಥ (31 ) ತಂದೆ: ಸುಬ್ರಹ್ಮಣ್ಯ ವಾಸ: ಜನತಾ ಕಾಲೋನಿ, ಸೈಬ್ರಕಟ್ಟೆ, ಶಿರಿಯಾರ ಗ್ರಾಮ ಬ್ರಹ್ಮಾವರ ತಾಲೂಕು. 2) ಪಳನಿ ಕುಮಾರ್‌ (31) ತಂದೆ: ಮೈಲ್‌ಚಾಮಿ ವಾಸ: ಗರಿಕೆಮಠ, ಅಚ್ಲಾಡಿ ಗ್ರಾಮ ಬ್ರಹ್ಮಾವರ ತಾಲೂಕು. 3) ಬಸವರಾಜ್‌ (41 ) ತಂದೆ: ವೆಂಕಪ್ಪ ವಾಸ: ಗರಿಕೆಮಠ, ಅಚ್ಲಾಡಿ ಗ್ರಾಮ ಬ್ರಹ್ಮಾವರ. 4) ನಾಗರಾಜ್‌ (46 ) ತಂದೆ: ಸುಬ್ರಹ್ಮಣ್ಯ ವಾಸ: ಗರಿಕೆಮಠ, ಅಚ್ಲಾಡಿ ಗ್ರಾಮ ಬ್ರಹ್ಮಾವರ ಇವರುಗಳನ್ನು  ವಶಕ್ಕೆ ಪಡೆದು ಅವರ ಬಳಿ ಜುಗಾರಿ ಆಟಕ್ಕೆ ಬಳಸಿದ ರೂ. 4,350/- ಮತ್ತು 52 ಇಸ್ಪೀಟು ಎಲೆಗಳು & ಹಳೆಯ ಪೇಪರ್‌ ಒಂದನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 04/2023  ಕಲಂ: 87 KP ACT ನಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿ ಎಚ್ ನಾಗ ಮೊಗೇರಾ ಇವರ ಹೆಂಡತಿಯಾದ ಗಿರಿಜಾ ಪ್ರಾಯ: 67 ವರ್ಷ ರವರು ಸುಮಾರು  2-3 ತಿಂಗಳಿನಿಂದ ವಿಪರೀತ ಹೊಟ್ಟೆ ಉರಿ ಮತ್ತು ನಿದ್ರೆ ಬಾರದೆ ಇರುವುದರಿಂದ ಪಿರ್ಯಾದುದಾರರ  ಮಕ್ಕಳು ಬೆಂಗಳೂರಿನ ಆಸ್ಪತ್ತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು ಕೂಡ ಗುಣಮುಖಳಾಗದೆ ಇದ್ದು ಇದರಿಂದ ಮಾನಸಿಕವಾಗಿ ಜುಗುಪ್ಸೆಗೊಂಡಿದ್ದರು. ಇದರಿಂದಾಗಿ ದಿನಾಂಕ 10-01-2023 ರಂದು 00:00 ಗಂಟೆಯಿಂದ ದಿನಾಂಕ 11-01-2023 ರ ಬೆಳಿಗ್ಗೆ 07:00 ಗಂಟೆಯ ಮಧ್ಯಾವದಿಯಲ್ಲಿ  ದೇವಾಡಿಗರ ಬೆಟ್ಟು  ಕುಂಭಾಷಿ ಗ್ರಾಮ   ಎಂಬಲ್ಲಿ ಮನೆಯ ಎದುರು ಇರುವ ನೀರು ತುಂಬಿದ ಬಾವಿಗೆ  ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯು.ಡಿ.ಆರ್ 06/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹಿರಿಯಡ್ಕ: ಪಿರ್ಯಾದಿ ಸೂರ್ಯ ಇವರ ತಾಯಿ  ಸುಮಾರು 67 ವರ್ಷದ ಬುಕ್ಕಿ ಎಂಬವರಿಗೆ ಕಳೆದ 4–5 ವರ್ಷಗಳಿಂದ ಮೂರ್ಛೆ ಹಾಗೂ ನಿಧಾನ ಗತಿಯ ರಕ್ತದೊತ್ತಡದ ಕಾಯಿಲೆಯಿದ್ದು, ಈ ಬಗ್ಗೆ ಚಿಕಿತ್ಸೆ ಮಾಡಿದರೂ ಸಂಪೂರ್ಣ ಗುಣಮುಖವಾಗದೇ ಇದ್ದು, ದಿನಾಂಕ: 06-01-2023 ರಂದು ಬೆಳಿಗ್ಗೆ 08:30 ಗಂಟೆಗೆ ತನ್ನ ವಾಸ್ತವ್ಯದ ಮನೆಯ ಅಡುಗೆ ಕೋಣೆಯ ಓಲೆಯ ಬಳಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮೂರ್ಛೆ ಹೋಗಿ ಓಲೆಯ ಮೇಲೆ ಬಿದ್ದವರು ಸುಟ್ಟ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಕೆಎಂಸಿ ಮಣಿಪಾಲಕ್ಕೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾ, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 10-01-2023 ರ ರಾತ್ರಿ 20:30 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯು.ಡಿ.ಆರ್ 03/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 11-01-2023 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080