ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಲೋಕೇಶ್ ಅಂಚನ್ (53), ತಂದೆ: ದಿ. ಬೂದ ಮೇಸ್ತ್ರಿ, ವಾಸ: ಅಂಚನ್ ನಿವಾಸ, ಕಂಚಿನಡ್ಕ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು, ಉಡುಪಿ ಇವರು ಕಾಪು ತಾಲೂಕು ಅಂಬೇಡ್ಕರ್ ಯುವ ಸೇನೆಯ ಅಧ್ಯಕ್ಷರಾಗಿರುತ್ತಾರೆ.  ಲೋಕೇಶ್ ಅಂಚನ್ ರವರನ್ನು ಕೊಲೆ ಮಾಡಲು ಪಡುಬಿದ್ರಿ ಕಂಚಿನಡ್ಕ ನಿವಾಸಿ ಮನ್ಸೂರ್ ಎಂಬಾತನು ಸುಪಾರಿ ನೀಡಿರುವುದಾಗಿ ದಿನಾಂಕ 31/12/2021 ರಂದು ಮಧ್ಯಾಹ್ನ 14:31 ಗಂಟೆಗೆ ಪಡುಬಿದ್ರಿಯ ಒಬ್ಬ ರಿಕ್ಷಾ ಚಾಲಕ ಪಿರ್ಯಾದಿದಾರರಿಗೆ ಮಾಹಿತಿ ತಿಳಿಸಿದ್ದು, ಅದರ ವಿವರ ಪಡುಬಿದ್ರಿ ಪಂಚಾಯತ್ ಸದಸ್ಯರಾದ ಹಸನ್ ಬಾವಾ,  ಫಿರೋಜ್, ನಜೀರ್ ಎಂಬುವರಿಗೆ ತಿಳಿದಿರುತ್ತದೆ ಎಂದು ತಿಳಿಸಿರುತ್ತಾನೆ. ನಂತರ ಪಿರ್ಯಾದಿದಾರರು ಪೋನ್ ಮೂಲಕ ಫಿರೋಜ್‌‌ ಎಂಬುವವರನ್ನು ಸಂಪರ್ಕಿಸಿ ವಿಚಾರಿಸಿದಲ್ಲಿ,  ಫಿರೋಜ್ ನು ದಿನಾಂಕ 06/01/2022 ರಂದು ಬೆಳಿಗ್ಗೆ 09:00 ಗಂಟೆಗೆ ಪಿರ್ಯಾದಿದಾರರನ್ನು ಕರೆದುಕೊಂಡು ಸುರತ್ಕಲ್ ಕೃಷ್ಣಾಪುರದ ನಿವಾಸಿ ಅಜೀದ್ ಎಂಬಾತನ ಬಳಿಗೆ ಹೋಗಿ ಈತನಿಗೇ ಮನ್ಸೂರನು  ನಿನ್ನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದು ಎಂದು ಹೇಳಿರುತ್ತಾನೆ.  ನಂತರ ಪಿರ್ಯಾದಿದಾರರು ಅಜೀದ್ ಎಂಬಾತನಲ್ಲಿ ವಿಚಾರಿಸಿದಲ್ಲಿ ಮನ್ಸೂರನು ಪಿರ್ಯಾದಿದಾರರನ್ನು ಕೊಲ್ಲಲು ತನಗೆ ತಿಳಿಸಿದ್ದು, ಕಂಚಿನಡ್ಕಕ್ಕೆ ಕರೆದುಕೊಂಡು ಹೋಗಿ ಪಿರ್ಯಾದಿದಾರರ ಮನೆಗೆ ಹೋಗುವ ದಾರಿಯ ಮಧ್ಯೆ ಕೊಲೆ ಮಾಡಿ, ಹೆಣವನ್ನು ಬೇರೆ ಕಡೆ ಎಸೆದು, ಅವರಾಲು ಮಟ್ಟು ರಸ್ತೆಯಿಂದಾಗಿ ಹೋಗುವಂತೆ ತಿಳಿಸಿರುವುದಾಗಿ ಹೇಳಿರುತ್ತಾನೆ. ಪಿರ್ಯಾದಿದಾರರಿಗೂ ಮತ್ತೂ ಆರೋಪಿತನಿಗೂ ಯಾವುದೇ ವೈಯಕ್ತಿಕ ದ್ವೇಷ ಇರದಿದ್ದರೂ ಪಿರ್ಯಾದಿದಾರರ ಕೊಲೆಗೆ ಸಂಚು ರೂಪಿಸಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2022  ಕಲಂ : 120(ಬಿ),  ಐಪಿಸಿ ಮತ್ತು ಕಲಂ: 3(2)(V-a) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ)  ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಅಂದಾನಯ್ಯ ಸ್ವಾಮಿ ಹಿರೇಮಠ, ದ್ವಿತೀಯ ದರ್ಜೆಯ ಸಹಾಯಕ , ಹಿರಿಯ ಸಿವಿಲ್‌ ನ್ಯಾಯಾಲಯ, ಕಾರ್ಕಳ ಇವರು ದಿನಾಂಕ 07/01/2022 ರಂದು ಅವರ ಮೊಬೈಲ್‌ ನಂಬ್ರ ರಿಚಾರ್ಜ್ ಅನ್ನು ಪೇ ಟಿಎಮ್  ಮೂಲಕ ಮಾಡಲು ಪ್ರಯತ್ನಿಸಿದ್ದು ಅದು ಫೇಲ್‌ ಆದ ಕಾರಣ ಗೂಗಲ್‌ನಲ್ಲಿ ಸರ್ಚ್ ಮಾಡಿ ಕಸ್ಟಮರ್ ಕೇರ್‌ ನಂಬ್ರ 8926099248 ನೇದಕ್ಕೆ ಕರೆ ಮಾಡಿದ್ದು, ಅವರ ಕೋರಿಕೆಯ ಮೇರೆಗೆ Any desk App ಡೌನ್‌ಲೋಡ್‌ ಮಾಡಿ, ತನ್ನ ಎ.ಟಿ.ಎಂ ಮತ್ತು ಬ್ಯಾಂಕ್‌ ಖಾತೆಯ ವಿವರವನ್ನು ಒದಗಿಸಿದ್ದು ಆ ಕೂಡಲೇ ಅವರ ಎರಡು ಎಸ್.ಬಿ.ಐ ಬ್ಯಾಂಕ್‌ ಖಾತೆಯಿಂದ ಒಟ್ಟು ರೂಪಾಯಿ 43,399/- ಹಣವನ್ನು ಯಾರೋ ವರ್ಗಾವಣೆ ಮಾಡಿಕೊಂಡು ಪಿರ್ಯಾದಿದಾರರಿಗೆ ಅಪ್ರಮಾಣಿಕವಾಗಿ ವಂಚನೆ ನಡೆಸಿ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2022 ಕಲಂ: 66(ಸಿ)ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದುದಾರರು ಬಾಬು ಶೆಟ್ಟಿ (55), ತಂದೆ: ರಾಮಯ್ಯ ಶೆಟ್ಟಿ, ವಾಸ: ಎಲ್ಲೂರು, ಹೊಸಮನೆ, ಗೋಳಿಹೊಳೆ ಗ್ರಾಮ ಮತ್ತು ಅಂಚೆ ಬೈಂದೂರು ತಾಲೂಕು ಬೈಂದೂರು ತಾಲೂಕು ಇವರು ಗೋಳಿಹೊಳೆ ಗ್ರಾಮದ ಸರ್ವೆ ನಂಬ್ರ 314-P2 ರಲ್ಲಿ  0.42 ಎಕ್ರೆ ಜಾಗವನ್ನು ಅವರ ತಂದೆಯ ಮರಣದ ನಂತರ ಸ್ವಾದೀನತೆ ಹೊಂದಿ ಅನುಭವಿಸಿಕೊಂಡು ಬರುತ್ತಿದ್ದು, ಜಾಗದಲ್ಲಿ ಗೇರು , ಮಾವು , ಹಲಸು ಹಾಗೂ ಇತರ ಕಾಟು ಮರಗಳನ್ನು ಬೆಳೆಸಿರುತ್ತಾರೆ. ಪಿರ್ಯಾದಿದಾರರು ತೋಟಕ್ಕೆ ದಿನಾಂಕ 06/01/2022 ರಂದು ಹೋಗಿ ಸಂಜೆ 7:00 ಗಂಟೆಯ ತನಕ ಕೆಲಸ ಮಾಡಿ ಮನೆಗೆ ಹೋಗಿದ್ದು, ದಿನಾಂಕ 07/01/2022 ರಂದು  ಬೆಳಿಗ್ಗೆ 10:00 ಗಂಟೆಗೆ ತೋಟಕ್ಕೆ ಬಂದಾಗ ಪಿರ್ಯಾದಿದಾರರು ತೋಟದಲ್ಲಿ ನೆಟ್ಟು ಬೆಳಸಿದ ಎಲ್ಲಾ ಮರಗಳನ್ನು ಕಿತ್ತು ಹಾಕಿ, ಧರೆಯನ್ನು ನೆಲಸಮ ಮಾಡಿದ ಬಗ್ಗೆ ಪಿರ್ಯಾದಿದಾರರು ಅಲ್ಲಿಯ ಸಮೀಪದ ನಿವಾಸಿ ಪರಿಚಯದ ರುದ್ರಮ್ಮ ಶೆಡ್ತಿಯವರಲ್ಲಿ  ವಿಚಾರಿಸಿದಾಗ ಆರೋಪಿತರಾದ 1)  ಸಂಜೀವಿ ಶೆರೆಗಾರ (70),  ಗಂಡ:ದಿ. ಗಣೇಶ್ ಶೇರೆಗಾರ, 2) ಸುಬ್ರಹ್ಮಣ್ಯ  ಶೇರೆಗಾರ (55), ತಂದೆ: ದಿ. ಗಣೇಶ್ ಶೇರೆಗಾರ, 3) ಭವಾನಿ ಶಂಕರ ಶೇರೆಗಾರ (25), ತಂದೆ: ದಿ. ಗಣೇಶ್ ಶೇರೆಗಾರ, 4) ಅಶೋಕ ಶೇರೆಗಾರ (38), ತಂದೆ: ದಿ. ಗಣೇಶ್ ಶೇರೆಗಾರ, 5) ದಿನಕರ ಶೇರೆಗಾರ (30), ತಂದೆ: ದಿ. ಗಣೇಶ್ ಶೇರೆಗಾರ, 6) ಗಾಯತ್ರಿ ಶೇರೆಗಾರ (28) ,ವಾಸ:ಕೊಟೇಬಾಗಿಲು ಪಡುವರಿ ಗ್ರಾಮ ಮತ್ತು ಅಂಚೆ ಬೈಂದೂರು ತಾಲೂಕು ಇವರು 3-4 ಜನರು ಕೆಲಸಗಾರರೊಂದಿಗೆ ರಾತ್ರಿ 12:00 ಗಂಟೆಗೆ ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜೆ.ಸಿ.ಬಿ ಯಂತ್ರದ ಮೂಲಕ  ತೋಟದಲ್ಲಿದ್ದ  ಎಲ್ಲಾ ಮರಗಳನ್ನು ಬೆಳಗ್ಗಿನ ಜಾವ 4:30 ಗಂಟೆಯ ತನಕ ಕಿತ್ತು ರಾಶಿ ಹಾಕಿ, ಜಾಗದ ಸುತ್ತಲೂ ಇರುವ ಮಣ್ಣಿನ ಧರೆಯನ್ನು ನೆಲಸಮ ಮಾಡಿ ಬೆಳಗಿನ ಜಾವ 4:45 ಗಂಟೆಗೆ ಅವರ ಕಾರು ಹಾಗೂ ಜೆ.ಸಿ.ಬಿ ಯಂತ್ರದೊಂದಿಗೆ ಹೊರಟು ಹೋಗಿದ್ದು, ಅವರ ಕಾರಿನ ಹಾಗೂ ಜೆ.ಸಿ.ಬಿ ಯ ನಂಬ್ರವನ್ನು ಕತ್ತಲಲ್ಲಿ ನೋಡಿರುವುದಿಲ್ಲವಾಗಿ ತಿಳಿಸಿದರು. ಈ ಬಗ್ಗೆ ಪಿರ್ಯಾದಿದಾರರು  4ನೇ ಆರೋಪಿತನಲ್ಲಿ ವಿಚಾರಿಸಿದಾಗ ಆತನು  ಸ್ಥಳ ತಮಗೆ ಬೇಕೆಂದು ಜೀವ ಬೆದರಿಕೆ ಹಾಕಿರುತ್ತಾನೆ. ಪಿರ್ಯಾದಿದಾರರ ಜಾಗದ ಉತ್ತರ ಹಾಗೂ ಪಶ್ಚಿಮದಲ್ಲಿ ಗಡಿ ಗುರುತು ಇರುವ ಆರೋಪಿಗಳ ತಂದೆ ಗಣೇಶ್ ಶೇರುಗಾರರವರಿಗೆ ಸಂಬಂಧಿಸಿದ ಜಾಗವಿದ್ದು, ಅವರೊಳಗಿನ ಜಾಗದ  ತಕರಾರೇ ಈ ಘಟನೆಗೆ ಕಾರಣವಾಗಿರುತ್ತದೆ. ಈ ಘಟನೆಯಿಂದ ಪಿರ್ಯಾದಿದಾರರಿಗೆ 2 ಲಕ್ಷ ರೂಪಾಯಿ  ನಷ್ಟ ಉಂಟಾಗಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2022 ಕಲಂ: 447, 427, 506 ಜೊತೆಗೆ 149  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿದಾರರಾದ  ವೆಂಕಟೇಶ್ ಭಟ್ (43), ತಂದೆ: ಯು. ದಿನಕರ ಭಟ್, ವಾಸ:ಕೃಷ್ಣಕೃಪಾ, ಡೋರ್ ನಂ: 4-327ಬಿ, 5ನೇ ಕ್ರಾಸ್ ಹಯಗ್ರೀವ ನಗರ, ಇಂದ್ರಾಳಿ ಜಿಬೆಟ್ಟು ಅಂಚೆ, ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಇವರ ಮಿತ್ರರಾದ  ಬೈಲೂರು ಪಾಂಡುರಂಗ ಕಿಣಿ (53) ಎಂಬುವವರು ಪಿರ್ಯಾದಿದಾರರ ಇತರ ಜಾಗದ ದಾಖಲಾತಿಗಳೊಂದಿಗೆ  ದಿನಾಂಕ 30/10/2016 ರಂದು ಪಿರ್ಯಾದಿದಾರರ ಮನೆಯಿಂದ ಪಿರ್ಯಾದಿದಾರರ ಗಮನಕ್ಕೆ ಬಾರದೇ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಸರ್ವೆ ನಂಬ್ರ 308/18 ರಲ್ಲಿ 2.75 ಸೆಂಟ್ಸ್ , ಹಾಗೂ ಸರ್ವೆ ನಂಬ್ರ  308/18 ರಲ್ಲಿ 5.50 ಸೆಂಟ್ಸ್ ಸ್ಥಿರಾಸ್ತಿಯ ಮೂಲ ದಾಖಲಾತಿಗಳನ್ನು ಮೋಸದಿಂದ ತಗೆದುಕೊಂಡು ಹೋಗಿ ತನ್ನ ಮನೆಯಲ್ಲಿ  ಇಟ್ಟು ಪಿರ್ಯಾದಿದಾರರಿಗೆ ನಂಬಿಕೆ ದ್ರೋಹ ಮಾಡಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2022  ಕಲಂ: 406, 424 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 11-01-2022 10:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080