ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 10/1/2022 ರಂದು 13:30 ಗಂಟೆ ಸಮಯಕ್ಕೆ ಪಿಯಾದಿದಾರರಾದ ನಾಗಪ್ಪ ಶಿವನಾಗಪ್ಪ ಕಾಟೇನಹಳ್ಳಿ ವಿಳಾಸ: ಕಾಟೇನಹಳ್ಳಿ ಕದರಮಂಡಲಗಿ ಪೋಸ್ಟ್ ಮತ್ತು ಗ್ರಾಮ  ಬ್ಯಾಡಗಿ ತಾಲೂಕು ಇವರು ಮತ್ತು ದೊಡ್ಡಮ್ಮ ಚೆನ್ನಬಸಮ್ಮ ರವರು ಮಣಿಪಾಲ ಈಶ್ವರ ನಗರದ ರಾ.ಹೆ 169(ಎ) ಮಣಿಪಾಲ-ಪರ್ಕಳ ಏಕಮುಖ ರಸ್ತೆಯನ್ನು ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದಾಗ ಆರೋಪಿತೆ ಸರೋಜಿನಿಯವರು ಮಣಿಪಾಲ ಕಡೆಯಿಂದ ಪರ್ಕಳ ಕಡೆಗೆ KA-20 EN-5109 ನೇ ಸ್ಕೂಟರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ  ಸವಾರಿಮಾಡಿಕೊಂಡು ಬಂದು  ಚನ್ನಬಸಮ್ಮ ರವರಿಗೆ ಡಿಕ್ಕಿ ಹೊಡೆದಿರುತ್ತಾಳೆ ಪರಿಣಾಮ ನನ್ನ ಚನ್ನಬಸಮ್ಮ ಹಾಗೂ ಅಪಘಾತ ಎಸಗಿದ ಸ್ಕೂಟರ್‌ ಸವಾರೆ ಮತ್ತು ಸಹಸವಾರೆ ನೆಲಕ್ಕೆ ಬಿದ್ದಿರುತ್ತಾರೆ. ಅಪಘಾತದಿಂದ ಚನ್ನಬಸಮ್ಮ ನ ಬಲಭುಜ ಮೂಳೆಮುರಿತ ಹಣೆಗೆ ರಕ್ತಗಾಯ ಕೈ ಮತ್ತು ಕಾಲಿಗೆ  ತರಚಿದ ಗಾಯ, ಸ್ಕೂಟರ್‌ ಸವಾರೆಯ ಕೈ ಮತ್ತು ಕಾಲಿಗೆ ರಕ್ತ ಗಾಯ ಉಂಟಾಗಿರುತ್ತದೆ. ಹಾಗೂ ಸ್ಕೂಟರ್‌ ಸಹ ಸವಾರೆಯಾದ ಸುನೀತಾರವರ ಎಡಕಣ್ಣಿನ ಬಳಿ ರಕ್ತ ಗಾಯ ಉಂಟಾಗಿರುತ್ತದೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ವಿಠಲ ಕಟ್ಟೇಮನಿ, (23) ತಂದೆ: ಹನುಮಂತ, ವಾಸ: ದಾಸರ ಓಣಿ, ವಾರ್ಡ ನಂ. 3, ಕಲಾದಿಗೆ, ಬಾಗಲಕೋಟೆ ಇವರು ದಿನಾಂಕ 07/01/2022 ರಂದು KA-20 EW-8446 ನೇ ನೋಂದಣಿ ಸಂಖ್ಯೆಯ ಹಿರೋ ಹೋಂಡಾ ತಯಾರಿಕೆಯ ಪ್ಯಾಶನ್ ಮಾದರಿಯ ಮೋಟಾರ್ ಸೈಕಲ್ ನಲ್ಲಿ ಸವಾರ ಸತ್ಯನಾರಾಯಣ ರವರೊಂದಿಗೆ ಸಹಸವಾರರಾಗಿ ಕುಳಿತುಕೊಂಡು ಮೂಡುಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ರಾಷ್ಟೀಯ ಹೆದ್ದಾರಿಯಲ್ಲಿ ಬರುತ್ತಿರುವಾಗ ಸಮಯ ಸುಮಾರು ರಾತ್ರಿ 09:30 ಗಂಟೆಗೆ ಕಾರ್ಕಳದ ಪುಲ್ಕೇರಿ ಬೈಪಾಸ್ ಬಳಿ ಬರುವಾಗ ಒಮ್ಮೆಲೇ ಒಂದು ನಾಯಿ ಅಡ್ಡ ಬಂದಿದ್ದು ಮೋಟಾರ್ ಸೈಕಲ್ ಸವಾರ ಸತ್ಯನಾರಾಯಣ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಬ್ರೇಕ್ ಹಾಕಿದ್ದರಿಂದ ಮೋಟಾರ್ ಸೈಕಲ್ ಆತನ ಹಿಡಿತ ತಪ್ಪಿ ಸ್ಕಿಡ್ ಆಗಿ ಡಾಂಬರು ರಸ್ತೆಗೆ ಬಿದ್ದಿದ್ದರ ಪರಿಣಾಮ ವಿಠಲ ಕಟ್ಟೇಮನಿ ರವರಿಗೆ ಬಲಕೈಗೆ ತರಚಿದ ರಕ್ತಗಾಯವಾಗಿದ್ದು ಹಾಗೂ ಮೋಟಾರ್ ಸೈಕಲ್ ಸವಾರ ಸತ್ಯನಾರಾಯಣನ ಬಲಕಾಲಿಗೆ ಹಾಗೂ ತಲೆಗೆ ಒಳಜಖಂ ಆಗಿರುತ್ತದೆ. ವಿಠಲ ಕಟ್ಟೇಮನಿ ರವರು ಆ ಕೂಡಲೇ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಹೋಗುವಂತೆ ತಿಳಿಸಿದರು. ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಸತ್ಯನಾರಾಯಣನಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದೆ ಎಂದು ತಿಳಿಸಿದರು. ನಂತರ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಸತ್ಯನಾರಾಯಣನಿಗೆ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಹೋಗುವಂತೆ ತಿಳಿಸಿದರು ನಂತರ ದಿನಾಂಕ 08/01/2022 ರಂದು ಪಾಧರ ಮುಲ್ಲಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಬೇಬಿ ಶೇಡ್ತಿ (47), ಗಂಡ: ಅಶೋಕ ಶೆಟ್ಟಿ, ವಾಸ: ಮರ್ಲಾಡಿ, 33 ನೇ ಶೀರೂರು ಗ್ರಾಮ, ಬ್ರಹ್ಮಾವರ ಇವರ ಗಂಡನಾದ ಅಶೋಕ ಶೆಟ್ಟಿ, (57) ಎಂಬವರು ದಿನಾಂಕ 10/01/2022 ರಂದು ಮಧ್ಯಾಹ್ನ 4:35 ಗಂಟೆಯಿಂದ ರಾತ್ರಿ 8:15 ಗಂಟೆಯ ಮಧ್ಯಾವಧಿಯಲ್ಲಿ ಹಾಲನ್ನು ಮನೆಯಿಂದ ಡೈರಿಗೆ ತೆಗೆದುಕೊಂಡು ಹೋದವರು, ಬಾರ್ಕೂರಿನ ಅಯ್ಯಪ್ಪ ಸ್ವಾಮಿ ಚಪ್ಪರಕ್ಕೆ ಮಾಲೆ ಹಾಕಿರುವ ತನ್ನ ಮಗನನ್ನು  ಇರುಮುಡಿ ಕಟ್ಟಿ ಸ್ವಾಮಿ ಕ್ಷೇತ್ರಕ್ಕೆ ಕಳುಹಿಸಿಕೊಡಲು ಬಾರ್ಕೂರಿನ ಅಯ್ಯಪ್ಪ ಸ್ವಾಮಿ ಚಪ್ಪರಕ್ಕೆ ಹೋಗಲು ತಡವಾಗುವುದೆಂದು ತಿಳಿದು, ಹಾಲನ್ನು ಮನೆಯ ಹತ್ತಿರದ ಗಿರೀಶ್ ರವರಲ್ಲಿ ಕೊಟ್ಟು ಡೈರಿಗೆ ಕೊಡುವಂತೆ ಹೇಳಿ ವಾಪಾಸ್ಸು ಮನೆಗೆ ಗದ್ದೆ ಅಂಚಿನಲ್ಲಿ ಗಡಿ ಬಿಡಿಯಲ್ಲಿ ನಡೆದುಕೊಂಡು ಬರುವಾಗ ದಿ. ಸುಮತಿ ಶೆಡ್ತಿಯವರ ಗದ್ದೆ ಅಂಚಿನ ಸ್ವಲ್ಪ ಇಳಿಜಾರು ಹಾಗೂ ಕೆಸರು ಜಾಗದಲ್ಲಿ ಆಯ ತಪ್ಪಿ ಮುಖ ಅಡಿಯಾಗಿ ಬಿದ್ದು ತಲೆಗೆ ಪೆಟ್ಟಾಗಿ ಅಥವಾ ಉಸಿರುಗಟ್ಟಿ ಅಥವಾ ಹೃದಯಾಘಾತದಿಂದ ಮೃತಪಟ್ಟಿರ ಬಹುದು ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯಯಿಲ್ಲದಿರುವುದಾಗಿದೆ, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ದಿನಾಂಕ 10/01/2022 ರಂದು ರಾತ್ರಿ 2:30 ಗಂಟೆಯಿಂದ 2:50 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ರಾಜೇಶ್ ಆಚಾರ್ಯ, (43), ತಂದೆ: ಸದಾಶಿವ ಆಚಾರ್ಯ, ವಾಸ: ದರ್ಖಾಸು ಮನೆ, ಲೆಮಿನಾ ಕ್ರಾಶ್, ನಿಟ್ಟೆ ಅಂಚೆ ಮತ್ತು ಗ್ರಾಮ, ಕಾರ್ಕಳ ಇವರ ಮನೆಯ ಪಕ್ಕದಲ್ಲಿ ಆವರಣ ಗೋಡೆ ಇಲ್ಲದ ಸಿಮೆಂಟ್ ಶೀಟ್ ಹಾಕಿದ ಚಪ್ಪರದಲ್ಲಿ ಕಟ್ಟಿದ್ದ ದನಗಳ ಪೈಕಿ 3 ಕಪ್ಪು ಬಣ್ಣದ ದನಗಳನ್ನು ಅವುಗಳಿಗೆ ಕಟ್ಟಿದ್ದ ಹಗ್ಗವನ್ನು ಯಾವುದೋ ಹರಿತವಾದ ಆಯುಧದಿಂದ ತುಂಡು ಮಾಡಿ ಹಾಗೂ 2 ಕಪ್ಪು ಬಣ್ಣದ ಹೆಣ್ಣು ಕರುಗಳನ್ನು ಅವುಗಳಿಗೆ ಕಟ್ಟಿದ್ದ ಹಗ್ಗದ ಸಮೇತ ಯಾರೋ ಕಳ್ಳರು ಯಾವುದೋ ನಾಲ್ಕು ಚಕ್ರದ ವಾಹನದಲ್ಲಿ ಬಂದು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ 3 ದನಗಳ ಅಂದಾಜು ಮೌಲ್ಯ 15,000/- ರೂಪಾಯಿ ಹಾಗೂ 2 ಹೆಣ್ಣು ಕರುಗಳ ಅಂದಾಜು ಮೌಲ್ಯ 5,000/- ಆಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2022 ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಸಂತೋಷ್ ಮರಕಾಲ (22), ತಂದೆ: ಮಂಜುನಾಥ ಮರಕಾಲ, ವಾಸ:- ನಡುಜೆಡ್ಡು, ಗುಡ್ಡಿಮನೆ, ಯಡ್ತಾಡಿ ಗ್ರಾಮ, ಬ್ರಹ್ಮಾವರ ಇವರ ತಂದೆಯಾದ ಮಂಜುನಾಥ ಮರಕಾಲ, (48) ಎಂಬವರು ಮೈಸೂರು, ಬೆಂಗಳೂರು, ಬೆಳಗಾಂ ಗಳಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದು, ತಿಂಗಳಿಗೊಮ್ಮೆ ಊರಿಗೆ ಬಂದು ಹೋಗುತ್ತಿದ್ದರು. ಅವರು ದಿನಾಂಕ 15/07/2021 ರಂದು ಮೈಸೂರು ಹೊಟೇಲ್ ಕೆಲಸಕ್ಕೆಂದು ಹೋಗಿದ್ದವರು ದಿನಾಂಕ 05/11/2021 ರಂದು ಅವರ ಮೊಬೈಲ್ ನಂಬ್ರನಿಂದ ಸಂತೋಷ್ ಮರಕಾಲ ರವರಿಗೆ  ಕರೆ ಮಾಡಿ ತಾನು ಮೈಸೂರಿನ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಆ ನಂತರ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಅವರ ಮೊಬೈಲ್‌ ಸ್ವಿಚ್ ಆಫ್ ಆಗಿರುತ್ತದೆ. ಅವರ ಬಗ್ಗೆ ಸಂಬಂಧಿಕರಲ್ಲಿ ವಿಚಾರಿಸಿದ್ದಲ್ಲಿ ಎಲ್ಲಿದ್ದಾರೆ ಎಂಬುದಾಗಿ ತಿಳಿದಿರುವುದಿಲ್ಲ. ಅವರು ಇದುವರೆಗೂ ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2022 ಕಲಂ: ಗಂಡಸುಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮೀ (52) ಗಂಡ:ದಿ.ಹರಿಶ್ಚಂದ್ರ  ವಾಸ: ಬಿಜೂರು ಗ್ರಾಮ ಬೈಂದೂರು ಇವರು ಬಿಜೂರು ಗ್ರಾಮದ ಮುರ್ಗೊಳಿ ಹಕ್ಲು  ಬಳಿಯ ಸರಕಾರಿ  ಪ್ರೌಡ ಶಾಲೆಯ ಹತ್ತಿರ ಸರ್ವೆ ನಂಬ್ರ: 76/42, 76/46, 76/15 ರ ಹದ್ದು ಬಸ್ತು ಆಗಿರುವ ಜಾಗದಲ್ಲಿ ಪಾಗಾರ ಮಾಡಲು ಮುಂದಾಗಿದ್ದ ಸಮಯದಲ್ಲಿ ದಿನಾಂಕ 11/01/2022 ರಂದು ಬೆಳಿಗ್ಗೆ 9:00 ಗಂಟೆಯ ಸಮಯ  ಆಪಾದಿತರಾದ 1}ಶ್ರೀಮತಿ ಶಾರದ ತಂದೆ:ದಿ. ಗೋವಿಂದ ದೇವಾಡಿಗ, 2}ಕೇಶವ ದೇವಾಡಿಗ ತಂದೆ: ದಿ. ಗೋವಿಂದ ದೇವಾಡಿಗ, 3}ಶ್ರೀಮತಿ ಶೇಷಿಗಂಡ:: ದಿ. ಗೋವಿಂದ ದೇವಾಡಿಗ, ವಾಸ:ಬಾಕಿ ಮನೆ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ, 4}ಶ್ರೀಮತಿ ಸುಶೀಲ  ಗಂಡ:ನಾಗ ದೇವಾಡಿಗ ವಾಸ: ಹಾಡಿಕಿರಿನ ಮನೆ  ಮುರ್ಗೊಳಿಹಕ್ಲು  ಬಿಜೂರು, 5}ಲಕ್ಷ್ಮೀ  ಬಿನ್ ಮಾಚಿ ವಾಸ: ಹಾಡಿಕಿರಿನ ಮನೆ  ಮುರ್ಗೊಳಿಹಕ್ಲು  ಬಿಜೂರು, 6)ಪುಟ್ಟಮ್ಮ ತಂದೆ:ಮರ್ಲ ದೇವಾಡಿಗ ವಾಸ: ಹಾಡಿಕಿರಿನ ಮನೆ ಮುರ್ಗೊಳಿಹಕ್ಲು ಬಿಜೂರು ಇವರು ಅಕ್ರಮ ಪ್ರವೇಶ ಮಾಡಿ  ಶ್ರೀಮತಿ ಲಕ್ಷ್ಮೀ ರವರು ನಿರ್ಮಿಸಲು ಮುಂದಾಗಿದ್ದ ಪಾಗಾರವನ್ನು ಕಟ್ಟುವುದನ್ನು ತಡೆದಿದ್ದು ಆ ಸಮಯ ಅಪಾದಿತ ಕೇಶವ ದೇವಾಡಿಗನು ಶ್ರೀಮತಿ ಲಕ್ಷ್ಮೀ ರವರ ಸೀರೆಯನ್ನು ಎಳೆದು ದೂಡಿ ಕೆಳಗೆ ಬಿಳಿಸಿ ಹಲ್ಲೆ ಮಾಡಿದ್ದಲ್ಲದೇ  ಕೆಲಸದವರಿಗೂ ಶ್ರೀಮತಿ ಲಕ್ಷ್ಮೀ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ  ಹಾಕಿ ಇನ್ನು ಮುಂದಕ್ಕೆ ಪಾಗಾರವನ್ನು ಕಟ್ಟಲು ಬಂದರೆ ನಿಮ್ಮ ಕೈ ಕಾಲನ್ನು ಮುರಿಯುವುದಲ್ಲದೇ ನಿಮ್ಮನ್ನು ಕಡಿದು ಅಲ್ಲಿಯೇ ಹೂತು  ಹಾಕುವುದಾಗಿ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2022 ಕಲಂ: 447,354,504, 506, ಜೊತೆಗೆ 149  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-01-2022 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080