ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ದಿನಾಂಕ: 09/12/2022 ರಂದು  ಪಿರ್ಯಾದಿ: ಎಸ್. ವಾಸುದೇವ ನಾಯಕ್ (68) ತಂದೆ: ದಿ|| ದಾಮೋದರ ನಾಯಕ್ ವಾಸ: ಲಕ್ಷ್ಮಿ ದಾಮೋದರ ಕೃಪಾ,ಪಂಚನಬೆಟ್ಟು , ಬೊಮ್ಮರಬೆಟ್ಟು  ಗ್ರಾಮ , ಇವರು  ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ರಮೇಶ್ ಶೆಟ್ಟಿಯವರ ಅಂಗಡಿಗೆ ಹಾಲಿನ ಹಣವನ್ನು ಕೊಟ್ಟು  ಮನೆಯಾದ ಪಂಚನಬೆಟ್ಟುವಿಗೆ ಹೋಗುವರೇ  ತನ್ನ  KA-20-Y-5962 ನೇ ಸ್ಕೂಟಿಯನ್ನು ಸವಾರಿ ಮಾಡುತ್ತಾ ಹಿರಿಯಡ್ಕ ಕಾರ್ಕಳ ಮುಖ್ಯ ರಸ್ತೆಗೆ ಬಂದು ಹೋಗುತ್ತಿರುವಾಗ  ಸಮಯ ಸುಮಾರು ಸಂಜೆ 18:15 ಗಂಟೆಗೆ ಪಿರ್ಯಾದಿದಾರರ ಹಿಂದಿನಿಂದ KA-20-EW-3430 ನೇ ಬೈಕ್ ಸವಾರನು ತನ್ನ ಬೈಕ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದುದಾರರ  ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟಿ ಸಮೇತ ಎಡಮಗುಲಾಗಿ ಬಿದ್ದ ಪರಿಣಾಮ ಪಿರ್ಯಾದಿದಾರರು  ಎಡಕಾಲಿಗೆ ತರಚಿದ ರಕ್ತ ಗಾಯವಾಗಿದ್ದು ನಂತರ ಹಿರಿಯಡ್ಕ ಕಾಮತ್ ನರ್ಸಿಂಗ್ ಹೋಂ ನಲ್ಲಿ ಹೊರರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ಠಾಣೆ. ಅಪರಾಧ ಕ್ರಮಾಂಕ  84/22    ಕಲಂ: 279, 337 IPC  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾಪು: ದಿನಾಂಕ 10/12/2022 ರಂದು ಪಿರ್ಯಾದಿ ಶೇಖರ್ (35) ತಂದೆ: ದಿ. ಗುಡ್ಡ ಗುರಿಕಾರ, ವಾಸ:ಕಾಳಿಕಾಂಬ ದೇವಸ್ಥಾನದ ಹತ್ತಿರ, ಅಗ್ರಹಾರ ಕಟಪಾಡಿ, ಏಣಗುಡ್ಡೆ ಗ್ರಾಮ ಇವರ ಅಣ್ಣ ಸತೀಶ್ (41) ರವರು ಏಣಗುಡ್ಡೆ ಗ್ರಾಮದ ಕಟಪಾಡಿ ಎಸ್ ಎನ್ ಜಿ ಸಿಮೆಂಟ್ ಅಂಗಡಿಯ ಎದುರು ರಾಹೆ 66 ಮಂಗಳೂರು –ಉಡುಪಿ  ಏಕಮುಖ ರಸ್ತೆಯನ್ನು ದಾಟುತ್ತಾ ರಸ್ತೆಯ ಪಶ್ಚಿಮದ ಅಂಚಿಗೆ ಬರುತ್ತಿದ್ದಾಗ ಬೆಳಿಗ್ಗೆ ಸಮಯ ಸುಮಾರು 8:50 ಗಂಟೆಗೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA 20 EZ 5247 ನೇ ಮೋಟಾರು ಸೈಕಲ್ ಧನುಷ್ ಚತ್ರ ಎಂಬವರು ತನ್ನ ಬಾಬ್ತು ಮೋಟಾರು ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸತೀಶ್ ರವರಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ತಲೆಗೆ ತೀವ್ರ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದವರನ್ನು ಪಿರ್ಯಾದಿದಾರರು  ಒಂದು ಅಂಬ್ಯುಲೆನ್ಸ್‌ನಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಸತೀಶನು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  134/2022 ಕಲಂ 279,  304(ಎ) ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೊಲ್ಲೂರು: ಪಿರ್ಯಾದಿ ನಾರಾಯಣ ಶೆಟ್ಟಿ( 48) ತಂದೆ:  ರಾಜೀವ ಶೆಟ್ಟಿ ವಾಸ: ಹಕ್ಲು  ಮನೆ ಯಡಮಗ್ಗೆ ಇವರ  ಮಾವನಾದ  ಶಿವರಾಮ ಶೆಟ್ಟಿಯವರು  ದಿನಾಂಕ   08.12.2022 ರಂದು  ಸಂಜೆ 6-30 ಗಂಟೆಗೆ ಅವರ   KA 20EQ 4115 ನೇ ಮೋಟಾರ್  ಸೈಕಲ್  ವೇಗವಾಗಿ  ದುಡುಕಿನಿಂದ ವಂಡ್ಸೆಕಡೆಯಿಂದ ಬೆಳ್ಳಾಲ ಕಡೆಗೆ  ವಂಡ್ಸೆ-ಬೆಳ್ಳಾಲ ರಸ್ತೆಯಲ್ಲಿ ಚಲಾಯಿಸಿ ವಂಡ್ಸೆ ಗ್ರಾಮದ ಮಾವಿನಕಟ್ಟೆ  ಎಂಬಲ್ಲಿ  ತಿರುವು ರಸ್ತೆಯಲ್ಲಿ  ತಲುಪಿದಾಗ ಮೋಟಾರ್ ಸೈಕಲ್ ನ ವೇಗವನ್ನು  ನಿಯಂತ್ರಿಸಲಾಗದೇ ಹತೋಟಿ  ತಪ್ಪಿ  ಬಲ ಮಗ್ಗುಲಾಗಿ  ಮಗುಚಿ  ಬಿದ್ದ  ಪರಿಣಾಮ ಬಲ ಭುಜಕ್ಕೆ ರಕ್ತ ಗಾಯವಾಗಿದ್ದು  ಕುಂದಾಪುರ  ವಿನಯ ಆಸ್ಪತ್ರೆಯಲ್ಲಿ ಹೋರರೋಗಿ  ಚಿಕಿತ್ಸೆ ಪಡೆದುಕೊಂಡು  ಮನೆಗೆ ಬಂದು  ದಿನಾಂಕ  09.12.2022 ರಂದು  ನೋವು  ಉಲ್ಬಣಗೊಂಡು ಕುಂದಾಪುರ ವಿನಯ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ವೈದ್ಯರು  ಪರೀಕ್ಷಿಸಿ  ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ  ಕೆ ಎಮ್ ಸಿ  ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದು , 108 ಅಂಬ್ಯುಲೆನ್ಸ್ ನಲ್ಲಿ ಕುಂದಾಫುರ  ಸರ್ಕಾರಿ ಆಸ್ಪತ್ರೆಗೆ ಬಂದಾಗ  ವೈದ್ಯರು  ಚಿಕಿತ್ಸೆ ನೀಡುತ್ತಿದ್ದ ವೇಳೆ ಮಧ್ಯಾಹ್ನ 2-30- ಗಂಟೆಗೆ ಉಬ್ಬಸ ಸಮಸ್ಯೆ ಕಾಣಿಸಿಕೊಂಡು  ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ  52/2022 ಕಲಂ: 279,304 (ಎ) IPC  ಯಂತೆ ಪ್ರಕರಣ ದಾಖಲಿಸಲಾಗಿದೆ.


ಹುಡುಗಿ ಕಾಣೆ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ: ಭವಾನಿ (38) ಗಂಡ: ಅಚ್ಚುತ ನಾಯ್ಕ ವಾಸ: ಜೆಪಿ ನಗರ , ಆರೂರು ಗ್ರಾಮ ಇವರ ಭಾವನಾದ ಮಂಜುನಾಥ, ವಾಸ: ತೀರ್ಥಹಳ್ಳಿ ತಾಲೂಕು ರವರ ಮಗಳಾದ ರಂಜಿತಾ, 23 ವರ್ಷ ಎಂಬವರು ಉಡುಪಿಯ ಶಿವಪುರದಲ್ಲಿ ಅವರ ಅಜ್ಜಿ ಮನೆಯಲ್ಲಿ ವಾಸವಿದ್ದುಕೊಂಡು ಉಡುಪಿಯಲ್ಲಿ ಲ್ಯಾಬ್‌ಟೆಕ್ನಿಷಿಯನ್‌  ಓದಿದ್ದು, ಓದು ಮುಗಿದ ಬಳಿಕ ವಾಪಸ್ಸು ತನ್ನ ಮನೆಯಾದ ತೀರ್ಥಹಳ್ಳಿಗೆ ಹೋಗಿ ಸುಮಾರು ಒಂದು ವರ್ಷ ಇದ್ದವರು , ಉಡುಪಿಯಲ್ಲಿ ಉದ್ಯೋಗ ಹುಡುಕುವ ಉದ್ದೇಶದಿಂದ ಎರಡು ವಾರಗಳ ಹಿಂದೆ ಅವರ ತಮ್ಮನಾದ ಸುದೀಪ್‌ಎಂಬವರೊಂದಿಗೆ ಬಂದು ಪಿರ್ಯಾಧುದಾರರ ಬ್ರಹ್ಮಾವರ ಆರೂರು ಗ್ರಾಮದ ಮನೆಯಲ್ಲಿ ವಾಸವಿದ್ದು, ಮೂರು ದಿವಸಗಳ ಹಿಂದೆ ಫಿರ್ಯಾದುದಾರರ ಜೊತೆ ಬ್ರಹ್ಮಾವರದ ಜೀವನ್‌ಜ್ಯೋತಿ ಆಸ್ಪತ್ರೆಯಲ್ಲಿ ಕೆಲಸದ ಬಗ್ಗೆ ಮಾತನಾಡಿಕೊಂಡು ದಿನಾಂಕ: 11/12/2022 ರಂದು ಸೋಮವಾರ ಕೆಲಸಕ್ಕೆ ಹೋಗುವುದಾಗಿ ತಿಳಿಸಿದ್ದು, ಈ ದಿನ ದಿನಾಂಕ : 09/12/2022 ರಂದು ತಾಯಿ ಮನೆಯಾದ ತೀರ್ಥಹಳ್ಳಿಗೆ ಹೋಗಿ ಬರುವುದಾಗಿ ತಿಳಿಸಿ ಮಧ್ಯಾಹ್ನ 2.10 ಗಂಟೇ ಸುಮಾರಿಗೆ ಆರೂರು ಕ್ರಾಸ್‌ಕುಂಜಾಲು ಬಳಿ ಬಸ್‌ಹತ್ತಿ ಹೋದವರು ತೀರ್ಥಹಳ್ಳಿಗೆ ಹೋಗದೇ , ಪೋನ್‌ಸಂಪರ್ಕಕ್ಕೆ ಸಿಗದೇ ಕಾಣೆಯಾಗಿರುತ್ತಾರೆ.ಈ ಬಗ್ಗೆ ಬ್ರಹ್ಮಾವರ ಠಾಣೆ /  ಅಪರಾಧ ಕ್ರಮಾಂಕ 210/2022 ಕಲಂ : ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಹುಡುಗ ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದಿ: ತುಳಸಿ ಗೌಡ (32) ಗಂಡ: ಅರುಣ ಗೌಡ ವಾಸ: 5ನೇ ಅಡ್ಡ ರಸ್ತೆ, ಕೊಳಂಬೆ, 76 ಬಡಗುಬೆಟ್ಟು ಗ್ರಾಮ, ಇವರ ಗಂಡ ಅರುಣ ಗೌಡ ಪ್ರಾಯ: 32 ವರ್ಷ ಎಂಬವರು ಮಣಿಪಾಲದ ಪ್ರೆಸ್‌ ನಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡಿಕೊಂಡಿದ್ದು, ಮದ್ಯಪಾನ ಮಾಡುವ ಚಟವಿರುತ್ತದೆ.  ದಿನಾಂಕ:06/12/2022 ರಂದು ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದವರು ಊಟ ಮಾಡಿ ಮಲಗಿದ್ದು, ದಿನಾಂಕ:07/12/2022 ರಂದು ಬೆಳಗಿನ ಜಾವ 04:00 ಗಂಟೆಗೆ ಎದ್ದು ನೋಡಿದಾಗ ಪಿರ್ಯಾದುದಾರರ ಗಂಡ ಮನೆಯಲ್ಲಿ ಇರದೇ ಕಾಣೆಯಾಗಿದ್ದು, ಮನೆಯ ಸುತ್ತ-ಮುತ್ತ ಹಾಗೂ ಸಂಬಂಧಿಕರ ಮನೆಯಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಈವರೆಗೆ ಪತ್ತೆಯಾಗಿರುವುದಿಲ್ಲ, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  180/2022 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾಪು: ಪಿರ್ಯಾದಿ ರವಿ ಎನ್ ನಾಯ್ಕ್ (40) ತಂದೆ: ನಾತು ನಾಯ್ಕ್, ವಾಸ: ಮಾತೃಛಾಯ ಕರಂದಾಡಿ ಮಜೂರು ಗ್ರಾಮ  ಇವರ ಅಕ್ಕ ಸುಶೀಲ (46) ರವರು ಹಾಗೂ ಅವರ ಅಕ್ಕ ಪದ್ಮ ರವರು ಪಿರ್ಯಾದಿದಾರರೊಂದಿಗೆ ಒಂದೇ ಮನೆಯಲ್ಲಿ ವಾಸಮಾಡಿಕೊಂಡಿದ್ದು ಸುಶೀಲರವರಿಗೆ ಮದುವೆಯಾಗಿರುವುದಿಲ್ಲ. ದಿನಾಂಕ 09/12/2022 ರಂದು  ಪಿರ್ಯಾದಿದಾರರು ಹೊರಗಡೆ ಕೆಲಸದಲ್ಲಿರುವಾಗ ಅಕ್ಕ ಸುಶೀಲ ರವರಿಗೆ ಎದೆ ನೋವು ಕಾಣಿಸಿಕೊಂಡಿರುವುದಾಗಿ ಪಿರ್ಯಾದಿದಾರರಿಗೆ  ಅವರ ಅಕ್ಕ ಪೋನ್ ಮಾಡಿದ್ದು ಅದಕ್ಕೆ ಪಿರ್ಯಾದಿದಾರರು ಸಂಜೆ ಔಷಧಿ ತರುತ್ತೇನೆಂದು ತಿಳಿಸಿರುತ್ತಾರೆ. ನಂತರ ರಾತ್ರಿ 9:30 ಗಂಟೆಗೆ ಪುನಃ ಅಕ್ಕ ಸುಶೀಲರವರಿಗೆ ಎದೆನೋವು ಕಾಣಿಸಿಕೊಂಡಿದ್ದು 2 ಸಲ ಕೆಮ್ಮಿ ಪ್ರಜ್ಞಾಹೀನರಾಗಿರುತ್ತಾರೆಂದು ಮದುವೆ ಸಮಾರಂಭದಲ್ಲಿದ್ದ ಪಿರ್ಯಾದಿದಾರಿಗೆ ಅವರ ದೊಡ್ಡ ಅಕ್ಕ ಪೋನ್ ಮಾಡಿ ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ಮನೆಗೆ ಬಂದು ನೆರೆಕರೆಯವರೊಂದಿಗೆ ಸೇರಿ 108 ಅಂಬ್ಯುಲೆನ್ಸ್‌‌ನಲ್ಲಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ರಾತ್ರಿ ಸುಮಾರು11:50 ಗಂಟೆಗೆ  ಸುಶೀಲ ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಯು.ಡಿ.ಆರ್. ನಂಬ್ರ 36/2022 ಕಲಂ 174 ಸಿಆರ್‌‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 10-12-2022 06:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080