ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಣಿಪಾಲ : ದಿನಾಂಕ 08/12/2021 ರಂದು 18:30 ಗಂಟೆಗೆ ಪಿರ್ಯಾದಿದಾರರಾದ ವಿಜಯ ಪೂಜಾರಿ  (32), ತಂದೆ: ಸಂಜೀವ ಪೂಜಾರಿ, ವಾಸ: ವಿದ್ಯಾಶ್ರೀ 1-132 , ದೇಕಿಬೆಟ್ಟು, ಹೆಬ್ರಿ ಗ್ರಾಮ ಇವರು KA-20-EQ-4154 ನೇ ಮೋಟಾರ್ ಸೈಕಲ್‌ನಲ್ಲಿ ಅಣ್ಣಪ್ಪ ರವಿ ಮೆಂಡನ್‌ರವರನ್ನು ಸಹಸವಾರನ್ನಾಗಿ  ಕುಳ್ಳಿರಿಸಿಕೊಂಡು  ಸವಾರಿ ಮಾಡಿಕೊಂಡು ಅನಂತನಗರದಿಂದ ಸಿಂಡಿಕೇಟ್‌ ಸರ್ಕಲ್‌‌ ಕಡೆಗೆ ಹೋಗುತ್ತಿದ್ದಾಗ ಸೋನಿಯಾ ಕ್ಲಿನಿಕ್‌ ಬಳಿ ಅವರ ಹಿಂದಿನಿಂದ ಅಪರಿಚಿತ ಮೋಟಾರ್ ಸೈಕಲ್‌ ಸವಾರನು ಪಿರ್ಯಾದಿದಾರರ ಮೋಟಾರ್‌ಸೈಕಲನ್ನು ಓವರ್‌ಟೇಕ್‌ ‌‌ಮಾಡುವ ಭರದಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ  ಎರಡೂ ಮೋಟಾರ್‌ಸೈಕಲ್‌ ಸವಾರರು ಮೋಟಾರ್ ಸೈಕಲ್ ಸಮೇತ ಕೆಳಕ್ಕೆ ಬಿದ್ದು ಅಣ್ಣಪ್ಪ ರವಿ ಮೆಂಡನ್‌ರವರ  ಎಡಕಾಲಿನ ಮೂಳೆ  ಮುರಿತ ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.  ಅಪಘಾತ ಎಸಗಿದ ಮೋಟಾರ್‌ಸೈಕಲ್ ಸವಾರ ಸ್ಥಳದಿಂದ ಮೋಟಾರ್‌ಸೈಕಲ್‌‌ ಸಮೇತ  ಪರಾರಿಯಾಗರುತ್ತಾನೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 163/2021 ಕಲಂ : 279, 338 ಐಪಿಸಿ ಮತ್ತು 134 (A) & (B) 187 IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರಾದ ಗಂಗಾಧರ ವರ್ಕರಿ (49), ತಂದೆ: ದಿ. ಗುರುಲಿಂಗಪ್ಪ, ವಾಸ:  ಸಿದ್ದೇಶ್ವರ ಮಂದಿರದ  ಹತ್ತಿರ, ತೋಳನೂರು ಗ್ರಾಮ, ಅಕಲಕೋಟ್ ತಾಲೂಕು, ಸೋಲಾಪುರ ಜಿಲ್ಲೆ, ಮಹಾರಾಷ್ಟ್ರ ರಾಜ್ಯ ಇವರು KA-32-A-8747 ನೇ ನಂಬ್ರದ ಲಾರಿಯಲ್ಲಿ  ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 08/12/2021 ರಂದು ರಾತ್ರಿ ಅವರು ಲಾರಿಯಲ್ಲಿ  ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಾ ಹೆಜಮಾಡಿ ಟೋಲ್ ಗೇಟಿನ ಸಮೀಪ ರಾಷ್ಟ್ರೀಯ  ಹೆದ್ದಾರಿ 66 ರ  ಮಂಗಳೂರು-ಉಡುಪಿ ಏಕಮುಖ ರಸ್ತೆಯ ಬದಿಯ ಪಾರ್ಕಿಂಗ್ ಸ್ಥಳದಲ್ಲಿ  ಲಾರಿ ನಿಲ್ಲಿಸಿ  ಅಲ್ಲೇ ಸಮೀಪದ ಗೂಡಂಗಡಿಯಲ್ಲಿ  ಊಟ ಮುಗಿಸಿ ರಾತ್ರಿ 10:15  ಗಂಟೆಯ ವೇಳೆಗೆ ಲಾರಿಯ ಪಕ್ಕದಲ್ಲಿ ನಿಂತಿದ್ದಾಗ ರಾಷ್ಟ್ರೀಯ  ಹೆದ್ದಾರಿ 66 ರ ಮಂಗಳೂರು-ಉಡುಪಿ ಏಕಮುಖ ರಸ್ತೆಯಲ್ಲಿ KA-32-A-8747 ನೇ ನಂಬ್ರದ ಹೋಂಡಾ ಆ್ಯಕ್ಟಿವಾವನ್ನು ಅದರ  ಸವಾರ ಸಂದೇಶ ಅತಿವೇಗ  ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ  ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದು ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು ಕೂಡಾ ಬಿದ್ದಿರುತ್ತಾರೆ. ಅಪಘಾತದಿಂದ ಪಿರ್ಯಾದಿದಾರರ  ಎಡಕೈಗೆ ಮತ್ತು ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಸೊಂಟಕ್ಕೆ ತರಚಿದ ಗಾಯವಾಗಿರುತ್ತದೆ. ಅಪಘಾತ ಮಾಡಿದ ಸ್ಕೂಟಿ ಸವಾರನಿಗೂ  ಕೈ, ಕಾಲಿಗೆ ತರಚಿದ ಗಾಯವಾಗಿರುತ್ತದೆ. ಇಬ್ಬರೂ  ಗಾಯಾಳುಗಳನ್ನು ಸ್ಥಳೀಯರು  ಚಿಕಿತ್ಸೆ  ಬಗ್ಗೆ ಮೂಲ್ಕಿಯ ಸಮುದಾಯ ಆರೋಗ್ಯ ಕೆಂದ್ರಕ್ಕೆ  ಕಳುಹಿಸಿಕೊಟ್ಟಿದ್ದು, ನಂತರ  ಪಿರ್ಯಾದಿದಾರರು ಮಂಗಳೂರಿನ  ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಹೋಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 115/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ದಿನಾಂಕ 09/12/2021 ರಂದು ಅಗತ್ಯ ಕೆಲಸದ ಬಗ್ಗೆ ಕಟಪಾಡಿ ಕಡೆ ಹೋಗುತ್ತಿರುವಾಗ ಕಟಪಾಡಿ ಸಮೀಪ ಕಲ್ಲಾಪು ಎಂಬಲ್ಲಿ ಮಂಗಳೂರು-ಉಡುಪಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯ ಮಣ್ಣು ರಸ್ತೆಯಲ್ಲಿ ಪಿರ್ಯಾದಿದಾರರಾದ ಸಂಜೀತ್ ಕುಮಾರ್ (33), ತಂದೆ :ಭೋಜರಾಜ್, ವಾಸ : “ರಾಜೀವ ನಿವಾಸ್” ಪಾಂಗಳ   ಗ್ರಾಮ ಮತ್ತು  ಅಂಚೆ ಕಾಪು ತಾಲೂಕು ಇವರ ಪರಿಚಯದ ಭವಾನಿ ಎಂಬುವವರು ರಸ್ತೆ ದಾಟಲು ನಿಂತಿದ್ದು ಆ ಸಮಯ ಬೆಳಿಗ್ಗೆ 08:00 ಗಂಟೆಗೆ  KA-25-N-1270 ನೇ ಕಾರು ಚಾಲಕ ಗಣೇಶ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ರಸ್ತೆ ದಾಟಲು ನಿಂತಿದ್ದ ಭವಾನಿರವರಿಗೆ ಡಿಕ್ಕಿ ಹೊಡೆದಿದ್ದು ಆ ಸಮಯ ಭವಾನಿಯವರು ರಸ್ತೆಗೆ ಬಿದ್ದ ಪರಿಣಾಮ ಭವಾನಿಯವರಿಗೆ ಎರಡು ಕಾಲ ಮಂಡಿಗೆ, ಬಲಕೈಗೆ, ಎದೆಗೆ ಜಖಂ ಆಗಿದ್ದು ಕೂಡಲೇ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 179/2021  ಕಲಂ: 279,  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಶ್ರೀ ಲತಾ ಶೆಟ್ಟಿ (29), ಗಂಡ: ಮಹೇಶ್ ಶೆಟ್ಟಿ, ವಾಸ: ಮೊಗೆಬೆಟ್ಟು, ಅಂಪಾರು ಮನೆ, ಬೇಳೂರು ಗ್ರಾಮ, ಕುಂದಾಪುರ ತಾಲೂಕು ಇವರ ತಂದೆ ತಾಯಿ ಹಾಗೂ ಮಕ್ಕಳೊಂದಿಗೆ ಕಳೆದ ನಾಲ್ಕು ತಿಂಗಳಿನಿಂದ ಬ್ರಹ್ಮಾವರ ತಾಲೂಕು ಹೇರಾಡಿ ಗ್ರಾಮದ ರಂಗನಕೆರೆ ಎಂಬಲ್ಲಿ ರಾಮಚಂದ್ರ ಅಡಿಗ ಎಂಬುವವರ ಮಾಲಿಕತ್ವದ ಬಾಡಿಗೆ ಮನೆಯಲ್ಲಿ ವಾಸವಿದ್ದು, ಅವರ ಬಾಡಿಗೆ ಮನೆಗೆ ಬೀಗ ಹಾಕಿ ಅವರ ತಾಯಿಯ ಮನೆ ಮೊಗೆಬೆಟ್ಟುಗೆ ಸಂಸಾರ ಸಮೇತ ಹೋಗಿದ್ದಾಗ ದಿನಾಂಕ 07/12/2021 ರಂದು ಮಧ್ಯಾಹ್ನ 3:00 ಗಂಟೆಯಿಂದ ದಿನಾಂಕ 09/12/2021 ರಂದು ಮಧ್ಯಾಹ್ನ 3:45 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಬಾಡಿಗೆ ಮನೆಯ ಪೂರ್ವ ಬದಿಯ ಅಡುಗೆ ಮನೆಯ ಪಕ್ಕದ ರೂಮಿಗೆ ಒಳಗಿನಿಂದ ಹಾಕಿದ ಚಿಲಕವನ್ನು ಮೀಟಿ ಬಾಗಿಲನ್ನು ತೆರೆದು ಒಳಗೆ ಹೋಗಿ  ಅಡುಗೆ ಮನೆ ಬಾಗಿಲು, ದ್ವಾರ ಬಾಗಿಲಿಗೆ ಹಾಕಿದ ಬೀಗದ ಕೊಂಡಿ, ದೇವರ ಕೋಣೆಯ ಬಾಗಿಲು , ಮಧ್ಯದ ಇರುವ ರೂಮ್‌ನ ಬಾಗಿಲು , ಮನೆಯ ಹಾಲ್‌ನಲ್ಲಿರುವ ಗೋಡ್‌ರೇಜ್‌ನ ಲಾಕರ್‌‌, ಮಲಗುವ ಕೋಣೆಯ ಬಾಗಿಲು ಮತ್ತು ಅದರ ಒಳಗಿರುವ ಗೋಡ್‌ರೇಜ್‌ನ ಲಾಕರ್‌‌ಗಳನ್ನು ಮೀಟಿ ತುಂಡು ಮಾಡಿ ತೆಗೆದು ದೇವರ ಪೂಜೆಗೆ ಇರಿಸಿದ ನಗದು ಹಣ ಹಾಗೂ ಮನೆಯ ನಿರ್ಮಾಣದ ಬಗ್ಗೆ ಇರಿಸಿದ್ದ ನಗದು ಹಣ ಒಟ್ಟು ರೂಪಾಯಿ 25,000/- ಹಾಗೂ ಅವರ ಗಂಡನ ಚಿನ್ನದ ಸರ -1, ಅವರ ತಂದೆಯ ಚಿನ್ನದ ಉಂಗುರ -1, ಮಗಳ ಕಿವಿಯ ಚಿನ್ನದ ಓಲೆ – 1 ಜೊತೆ, ಅವರ ಬೆಳ್ಳಿಯ ಕಾಲುಚೈನ್ – 2 ಜೊತೆ, ಮಗಳ ಬೆಳ್ಳಿಯ ಕಾಲುಚೈನ್ – 1 ಜೊತೆ, ಮಗಳ ಕಾಲಿನ ದೃಷ್ಟಿಯ ಚೈನ್‌-1 ಅಲ್ಲದೇ ಮನೆಯ ಬೆಳ್ಳಿಯ ಕುಂಕುಮ ಬಟ್ಟಲು – 2 ಜೊತೆ, ಬೆಳ್ಳಿಯ ದೀಪ 2 ಜೊತೆ  ಒಟ್ಟು ರೂಪಾಯಿ 1,23,000/- ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಸಾಮಾಗ್ರಿ ಹಾಗೂ ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 203/2021 ಕಲಂ :454, 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಸುನಿಲ್ ದೇವಾಡಿಗ (26), ತಂದೆ: ಚಂದ್ರ  ದೇವಾಡಿಗ , ವಾಸ:ನವೋದಯ ಕಾಲೋನಿ, ಬವಳಾಡಿ, ಉಪ್ಪುಂದ  ಗ್ರಾಮ ಬೈಂದೂರು ತಾಲೂಕು ಇವರ ತಂದೆ ಚಂದ್ರ ದೇವಾಡಿಗ (45) ಎಂಬುವವರು ದಿನಾಂಕ 07/12/2021 ರಂದು ಮನೆಯಲ್ಲಿ ಇದ್ದವರು ಸಂಜೆ 5:00 ಗಂಟೆಗೆ ಕೆಲಸದ ಬಗ್ಗೆ ಮಾತನಾಡಲು ಪೇಟೆಗೆ ಹೋಗಿ ಬರುವುದಾಗಿ ಮನೆಯವರಲ್ಲಿ ಹೇಳಿ ಮನೆಯಿಂದ ಹೋದವರು ತಡರಾತ್ರಿಯಾದರೂ ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 199/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಣಿಪಾಲ : ಪಿರ್ಯಾದಿದಾರರಾದ ದಾದಾಫೀರ್ (46), ತಂದೆ: ಮುಗ್ದುಂ ಸಾಬ್, ವಾಸ: ನರಗುಂದ ಗ್ರಾಮ ಮತ್ತು ತಾಲೂಕು , ಗದಗ ಜಿಲ್ಲೆ ಇವರ ಜೊತೆಯಲ್ಲಿ ಕೆಲಸ ಮಾಡಿಕೊಂಡಿದ್ದ ಬಾಗಲಕೋಟೆ ಜಿಲ್ಲೆಯ ಮೌಲಾ ಸಾಬ್ ಸುಂಕದ ಎಂಬುವವರು  ದಿನಾಂಕ 09/12/2021 ರಂದು ಕೆಲಸ ಮಾಡಿಕೊಂಡಿದ್ದ ಸಮಯದಲ್ಲಿ ಬೆಳಗಿನಿಂದ 6-7 ಬಾರಿ ವಾಂತಿ ಮಾಡಿಕೊಂಡಿದ್ದು, ಅಸೌಖ್ಯದಿಂದ  ಮಧ್ಯಾಹ್ನ 03:30 ಕ್ಕೆ  ಕೆಲಸದ ಸ್ಥಳದಲ್ಲಿದೇ ಮಲಗಿಕೊಂಡಿದ್ದವರನ್ನು ಪಿರ್ಯಾದಿದಾರರು ಶುಶ್ರೂಷೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮೌಲಾ ಸಾಬ್ ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.ಮೃತ ಮೌಲಾ ಸಾಬ್  ದಿನಾಂಕ 09/12/2021 ರಂದು ಮಧ್ಯಾಹ್ನ 03:30 ಗಂಟೆಯಿಂದ ಸಂಜೆ 04:39 ಗಂಟೆ ಮಧ್ಯಾವಧಿಯಲ್ಲಿ ಯಾವುದೋ ಕಾರಣದಿಂದ ಅಸೌಖ್ಯಗೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 43/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಸಂಪತ್ ಕುಮಾರ್ (40), ತಂದೆ: ಕೃಷ್ಣಪ್ಪ ದೇವಾಡಿಗ, ವಾಸ:  ಸಂದೀಪ ನಿವಾಸ, ಜೋಗುಳಬೆಟ್ಟು ಕಸಬಾ ಗ್ರಾಮ, ಕಾರ್ಕಳ ತಾಲೂಕು ಇವರ ಅಣ್ಣ ಉದಯ ದೇವಾಡಿಗ (48) ರವರು ಪಿರ್ಯಾದಿದಾರರೊಂದಿಗೆ ವಾಸವಿದ್ದವರು ಕಾರ್ಕಳದ ಬಾಸ್ಕರ ಕುಲಾಲ್ ರವರ ಹೂವಿನ  ಅಂಗಡಿಯಲ್ಲಿ ಕೆಲಸ  ಮಾಡಿಕೊಂಡಿದ್ದವರು ಮದ್ಯಪಾನ ಮಾಡುವ  ಅಬ್ಯಾಸ ಹೊಂದಿದ್ದು  ದಿನಾಂಕ 09/12/2021  ರಂದು ಮೈ ಕೈ ನೋವು ಎದೆನೋವು ಸುಸ್ತು ಎಂದು ಹೇಳಿ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದವರು ಮದ್ಯಾಹ್ನ ಊಟಮಾಡಿ 3:00 ಗಂಟೆಗೆ ಮಲಗಿದ್ದವರು 5:00 ಗಂಟೆಗೆ ತಾಯಿ ಪದ್ಮಾವತಿರವರು ಎಬ್ಬಿಸಲು ಹೋದಾಗ ಪ್ರತಿಕ್ರಿಯಿಸದೆ ಇದ್ದು, ತಾಯಿ ಕರೆ ಮಾಡಿ ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ಮನೆಗೆ ಬಂದು ಅಣ್ಣ ಉದಯರವರನ್ನು ಒಂದು ವಾಹನದಲ್ಲಿ  ಕಾರ್ಕಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ  ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ ವೈದ್ಯರು ಉದಯ ದೇವಾಡಿಗ ರವರು ಮೃತಪಟ್ಟಿರುವುದಾಗಿ ತಿಳಿಸುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 47/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಉಡುಪಿ: ದಿನಾಂಕ 09/12/2021 ರಂದು 14:11 ಗಂಟೆಗೆ ERSS ವಾಹನದಲ್ಲಿರುವ ಟ್ಯಾಬ್‌ಗೆ ದೂರು ಅರ್ಜಿ ನಂಬ್ರ: 2630008 ರಂತೆ ದೂರು ಬಂದಿದ್ದು, ದೂರನ್ನು ಪರಿಶೀಲಿಸಲಾಗಿ, ಶ್ರೀ ಮಲ್ಲೇಶ್‌ಕುಮಾರ್‌ ಎಂಬುವವರಿಗೆ ಅವರ ಸಿ.ಎ ಕಛೇರಿಗೆ ಇಬ್ಬರು ಬಂದು ತೊಂದರೆ ಕೊಡುತ್ತಿರುವುದಾಗಿ ಇದ್ದು, ಕೂಡಲೇ ERSS ಕರ್ತವ್ಯದಲ್ಲಿದ್ದ ಸಿಬ್ಬಂದಿ ಸುಬ್ರಹ್ಮಣ್ಯ, ಹೆಚ್‌.ಸಿ ಉಡುಪಿ ನಗರ ಪೊಲೀಸ್‌ ಠಾಣೆ ಇವರು ಉಡುಪಿ ವಾಹನದೊಂದಿಗೆ ಬನ್ನಂಜೆ ತಲುಪಿ ಮಲ್ಲೇಶ್‌ ಎಂಬುವವರ ಕಛೇರಿಗೆ ತಲುಪಿದ್ದು, ಕಛೇರಿಯಲ್ಲಿದ್ದ ಇಬ್ಬರು ಆರೋಪಿತರಲ್ಲಿ ನೀವು ಕಛೇರಿಯಲ್ಲಿ ಅನಾವಶ್ಯಕವಾಗಿ ಗಲಾಟೆ ಮಾಡಬೇಡಿ, ಮಲ್ಲೇಶ್‌ರವರು 112 ಗೆ ಕರೆ ಮಾಡಿ ನಿಮ್ಮ ಮೇಲೆ ದೂರು ನೀಡಿದ ಮೇರೆಗೆ ನಾವುಗಳು ಬಂದಿದ್ದು, ಏನಿದ್ದರೂ ಉಡುಪಿ ಪೊಲೀಸ್‌ ಠಾಣೆಗೆ ಹೋಗಿ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದು, ಆಗ ಆಪಾದಿತರಾದ 1) ಮನೋಜ್‌ ಕುಂದರ್‌, 2) ಪ್ರಶಾನ್‌ ಇವರು ಅವಾಚ್ಯ ಶಬ್ದಗಳಿಂದ ಬೈದು ಸಮವಸ್ತ್ರದಲ್ಲಿದ್ದ ಪೋಲೀಸ್ ಸಿಬ್ಬಂದಿಯವರ ಮೈಗೆ ಕೈ ಹಾಕಿ ಹಿಂದಕ್ಕೆ ದೂಡಿ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 182/2021 ಕಲಂ: 504, 353 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 09/12/2021 ರಂದು ಮಧ್ಯಾಹ್ನ 2:00 ಗಂಟೆಗೆ ಪಿರ್ಯಾದಿದಾರರಾದ ಭೋಜ ಪೂಜಾರಿ (52), ತಂದೆ: ದಿ ಕಾಳು ಪೂಜಾರಿ, ವಾಸ: ಜೀವನ ನಿವಾಸ, ಗುಂಡ್ಯಡ್ಕ, ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು ಇವರು ಹಿರ್ಗಾನ ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ತನ್ನ ಸ್ಥಿರಾಸ್ಥಿಯ ಗದ್ದೆ ಊಳಲು ಟ್ರಾಕ್ಟರ್ ನ್ನು ತಂದಿದ್ದು, ದಾರಿಯಲ್ಲಿದ್ದ ನೀರಿನ ಪೈಪನ್ನು ತೆಗೆದು  ಗದ್ದೆಗೆ ಟ್ರಾಕ್ಟರ್ ತೆರಳಿದ ಬಳಿಕ ರಸ್ತೆಯಲ್ಲಿ ಹಾದು ಹೋಗಿರುವ ಪೈಪ್ ಲೈನನ್ನು ಸಿಕ್ಕಿಸುತ್ತಿರುವ ಸಂದರ್ಭ, ಪಿರ್ಯಾದಿದಾರರ ಅಕ್ಕ ಲೀಲಾ ಮತ್ತು ಅವರ ಮಕ್ಕಳಾದ  ಹೃಶಿಕೇಶ ಎಂಬಾತನು  ಕೈಯಲ್ಲಿ ಕತ್ತಿ ಹಿಡಿದುಕೊಂಡು, ದೇವರಾಜನು ಕೈಯಲ್ಲಿ ಕೋಲು ಹಿಡಿದುಕೊಂಡು ಬಂದು, ನೀನು ಒಬ್ಬನೇ ಕೃಷಿ ಮಾಡಿ ತಿನ್ನುತ್ತೀಯಾ ಎಂದು ಬೈಯ್ದು ಆಪಾದಿತರ ಪೈಕಿ ಹೃಶಿಕೇಶನು ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿದಾರರ ತಲೆಗೆ ಹೊಡೆದಿದ್ದು, ಹೊಡೆಯದಂತೆ ಕೈಯನ್ನು ಹಿಡಿದಾಗ  ಹೃಶಿಕೇಶನು ಪಿರ್ಯಾದಿದಾರರ ಎಡಕೈಗೆ ಕಚ್ಚಿ ಗಾಯಗೊಳಿಸಿದ್ದು ದೇವರಾಜನು ಕೋಲಿನಿಂದ ಪಿರ್ಯಾದಿದಾರರ ಬೆನ್ನಿಗೆ ಹೊಡೆದಿದ್ದರಿಂದ ಪಿರ್ಯಾದಿದಾರರು ನೆಲಕ್ಕೆ ಬಿದ್ದಿದ್ದು ಈ ವೇಳೆ ಪಿರ್ಯಾದಿದಾರರ ಅಕ್ಕ ಲೀಲಾ ಪಿರ್ಯಾದಿದಾರರಿಗೆ ಕಾಲಿನಿಂದ ತುಳಿದಿರುವುದಾಗಿದೆ. ಹೃಶಿಕೇಶನು ಕತ್ತಿಯಿಂದ ಹೊಡೆದ ಪರಿಣಾಮ ಪಿರ್ಯಾದಿದರರ  ತಲೆಯ ಹಿಂಬದಿಗೆ ಮತ್ತು ಹಣೆಗೆ ರಕ್ತಗಾಯವಾಗಿರುವುದಲ್ಲದೇ, ದೇವರಾಜನು ಕೋಲಿನಿಂದ ಹೊಡೆದ ಪರಿಣಾಮ ಎದೆ ಮತ್ತು ಸೊಂಟಕ್ಕೆ ಗುದ್ದಿದ ಒಳನೋವು ಆಗಿರುತ್ತದೆ. ಗಲಾಟೆ ಕೇಳಿ ಪಿರ್ಯಾದಿದಾರರ  ಪತ್ನಿ ಬೊಬ್ಬೆ ಹಾಕಿಕೊಂಡು ಸ್ಥಳಕ್ಕೆ ಬಂದಾಗ ಆಪಾದಿತರು  ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 160/2021 ಕಲಂ: 323, 324, 506(2) ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 10-12-2021 10:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080