ಅಭಿಪ್ರಾಯ / ಸಲಹೆಗಳು

ಅಸ್ವಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ  ಮಲ್ಲಪ್ಪ ತಳವಾರ್‌ (40), ತಂದೆ:  ತಿಪ್ಪಣ್ಣ  ತಳವಾರ,  ಹಾಲಿ ವಾಸ:  ರಮೇಶ  ಪೂಜಾರಿಯವರ  ಬಾಡಿಗೆ  ಮನೆ, ಕಟ್ಟದಮನೆ,  ಬನ್ನಂಜೆ  ಗರಡಿ  ಬಳಿ, ಉಡುಪಿ  ಜಿಲ್ಲೆ. ಖಾಯಂ  ವಾಸ:  ಸಿದ್ಧಾಪುರ ,  ಬಿಳಗಿ ತಾ||, ಬಾಗಲಕೋಟೆ  ಜಿಲ್ಲೆ ಇವರ ಮಗಳು ದೀಪಾ ತಳವಾರ (15) ರವರು ಹುಟ್ಟಿದಾಗಿನಿಂದ  ಮೂರ್ಚೆ ರೋಗದಿಂದ  ಬಳಲುತ್ತಿದ್ದು, ಈ ಬಗ್ಗೆ ದಿನಂಪ್ರತಿ  ಮಾತ್ರೆಯನ್ನು ಸೇವಿಸುತ್ತಿದ್ದವರು,  ಇದೇ  ಕಾರಣದಿಂದ  ಜೀವನದಲ್ಲಿ  ಜಿಗುಪ್ಸೆ  ಹೊಂದಿ ದಿನಾಂಕ 09/12/2021ರಂದು  ಬೆಳಿಗ್ಗೆ  8:15  ಗಂಟೆಯಿಂದ  ಸಂಜೆ  6:00  ಗಂಟೆಯ  ಮಧ್ಯಾವಧಿಯಲ್ಲಿ  ವಾಸವಿದ್ದ ಬಾಡಿಗೆ  ಮನೆಯ ಮಾಡಿನ  ಮರದ  ಅಡ್ಡ ತೊಲೆಯ  ಕಬ್ಬಿಣದ  ಹುಕ್ಕಿಗೆ  ನೈಲಾನ್‌  ಸೀರೆಯಿಂದ ಕುತ್ತಿಗೆಗೆ  ನೇಣು  ಬಿಗಿದುಕೊಂಡು  ಆತ್ಮಹತ್ಯೆಯನ್ನು  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 54/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಬೀನಾರಾಣಿ (33), ಗಂಡ:  ನಿತ್ಯಾನಂದ ಶೆಟ್ಟಿಗಾರ, ವಾಸ:  ಮನೆನಂಬ್ರ  8-74 ಎ,  'ಗಣೇಶ  ಪ್ರಸಾದ', ಹರಿನಗರ,  ಗುಂಡಿಬೈಲು,  ಕುಂಜಿಬೆಟ್ಟು ಅಂಚೆ, ಶಿವಳ್ಳಿ  ಗ್ರಾಮ, ಉಡುಪಿ ತಾಲೂಕು ಇವರ ಗಂಡ ನಿತ್ಯಾನಂದ  ಶೆಟ್ಟಿಗಾರ (41) ರವರು ಅವರಿಗಿದ್ದ  ತೀವ್ರ  ಆರ್ಥಿಕ  ತೊಂದರೆಯಿಂದ  ಮತ್ತು  ಅವರ ತಾಯಿಯ  ಮರಣದಿಂದಾಗಿ ಜೀವನದಲ್ಲಿ  ಜಿಗುಪ್ಸೆಗೊಂಡು ದಿನಾಂಕ 09/12/2021 ರಂದು 13:35  ಗಂಟೆಯಿಂದ  17:30 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಮಲಗುವ ಕೋಣೆಯ ಸೀಲಿಂಗ್‌ ಫ್ಯಾನಿಗೆ ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 55/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ವೆಂಕಟೇಶ (39), ವಾಸ: 4-690 ನೇತಾಜಿನಗರ 4ನೇ ಅಡ್ಡ ರಸ್ತೆ, 80 ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಪರಿಶಿಷ್ಟ ಜಾತಿಯ ಸಮಗಾರ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಪಿರ್ಯಾದಿದಾರರ ಪತ್ನಿ ಜಯಲಕ್ಷ್ಮಿ ಎಂಬುವವರು ದಿನಾಂಕ 06/12/2021 ರಂದು ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.  ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಗತಿಯಲ್ಲಿರುತ್ತದೆ.  ಪಿರ್ಯಾದಿದಾರರ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ದಿಗ್ವಿಜಯ ನ್ಯೂಸ್ ಚಾನಲ್ ನ ಶ್ರೀಕಾಂತ್ ಮತ್ತು ಹಿಂದೂ ಮುಖಂಡರು ಪಿರ್ಯಾದಿದಾರರ ಪತ್ನಿಯನ್ನು ಮತಾಂತರ ಮಾಡಲು ಯತ್ನಿಸಿರುವುದಾಗಿ ದಿನಾಂಕ 07/12/2021 ರಂದು ಸಂಜೆ 07:00 ಸಮಯ ದಿಗ್ವಿಜಯ ಟಿ.ವಿ.ವಾಹಿನಿಯಲ್ಲಿ  ಆಧಾರ ರಹಿತ ಪ್ರಚಾರ ಮಾಡಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 164/2021 ಕಲಂ: 3(1)(u) ಎಸ್ಸಿ/ಎಸ್ಟಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 10/12/2021 ರಂದು ಬೆಳಿಗ್ಗೆ ರಾಘವೇಂದ್ರ ಸಿ,  ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರಿಗೆ  ಮೂಳೂರು ಗ್ರಾಮದ ಸುನ್ನಿ ಸೆಂಟರ್ ಹಿಂಬದಿ ಅಬ್ಬು ಮಹಮ್ಮದ್ ಎಂಬುವವರ ಮನೆಯ ಹಿಂದಿನ ಕೊಟ್ಟಿಗೆಯಲ್ಲಿ ದನವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು ನೋಡಿದಲ್ಲಿ ಮೂಳೂರು ಗ್ರಾಮದ ಸುನ್ನಿ ಸೆಂಟರ್‌ಹಿಂಬದಿ ಅಬ್ಬು ಮಹಮ್ಮದ್ ಎಂಬುವವರ ಮನೆಯ ಹಿಂದಿನ ಕೊಟ್ಟಿಗೆಯ ಸಮೀಪ ಒಂದು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿದ್ದು ಅಲ್ಲಿ ಸಮೀಪದಲ್ಲಿ ಒಂದು ಪಿಕಪ್ ವಾಹನ ನಿಂತಿದ್ದು, ಅಲ್ಲದೇ ಅಲ್ಲೇ ಕೊಟ್ಟಿಗೆಯಲ್ಲಿ  ಮಾಂಸವನ್ನು ತಯಾರಿ ಮಾಡುತ್ತಿದ್ದುದನ್ನು  ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದಲ್ಲಿ  ಮಾಂಸ ಮಾಡುತ್ತಿರುವವರು ಅಲ್ಲಿಂದ ಓಡಿ ಹೋಗಿರುತ್ತಾರೆ. ಮಾಂಸವನ್ನು ತಯಾರಿ ಮಾಡಿಸುತ್ತಿರುವವರು ಇಸ್ಮಾಯಿಲ್ ಮತ್ತು  ಅಬ್ಬು ಮಹಮ್ಮದ್ ಎಂದು ತಿಳಿಯಿತು.  ಸ್ಥಳದಲ್ಲಿ ಪರೀಶಿಲಿಸಿದ್ದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿದ 1) ಕಂದು ಬಣ್ಣದ ಗಂಡು ಕರು –1,  ಮೌಲ್ಯ 5000/-  2) ಸುಮಾರು 10 ಕೆ.ಜಿ. ಮಾಂಸ ಮೌಲ್ಯ 2000/-, 3) ಮಾಂಸ ಹಾಕಲು ಉಪಯೋಗಿಸಿದ ಸಣ್ಣ ಅಲ್ಯೂಮಿನಿಯಮ್ ಪಾತ್ರೆ – 1  ಮೌಲ್ಯ 50/-, 4) ಫೈಬರ್ ಟಬ್ಬು-01,  5)ಕಬ್ಬಿಣದ ತೂಕದ ಮಾಪಕ – 1 ಮೌಲ್ಯ 2000/-,  6) ಮರದ ದಿಣ್ಣು,  7) KA-20-C-4987 ಪಿಕ್ ಅಪ್ ವಾಹನ ಮೌಲ್ಯ 2 ಲಕ್ಷ,  ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.  ಕೃತ್ಯವನ್ನು  ತಡೆಯಲು ದಾಳಿ ನಡೆಸುತ್ತಿರುವಾಗ  ಅಲ್ಲಿಗೆ ಬಂದ ಮಹಿಳೆಯರಾದ ಐಸಮ್ಮ, ರೆಯಾನ, ಜೋಹ್ರಾ ಮತ್ತು ಇತರರು ಏಕಾಏಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ದೂಡಿ, ಸಿಬ್ಬಂದಿಯವರಿಗೆ ಕೈಯಿಂದ ಹಲ್ಲೆ ಮಾಡಿ ದೂಡಿದ್ದಲ್ಲದೇ, ನೊಗದಿಂದ ಹಲ್ಲೆ ಮಾಡಲು ಬಂದಿರುತ್ತಾರೆ. ಆ ಸಮಯ  ವೈ ಬಿ ಸಿ ಭಾವ ಎಂಬುವವವನು ಗೇಟ್ ನ್ನು ಹಾಕಿ ಅವರನ್ನು ಹೊರಗಡೆ ಬಿಡಬೇಡಿ ಎಂದು ಹೇಳಿ ನಮ್ಮನ್ನು ತಡೆಯಲು ಬಂದಿರುತ್ತಾನೆ. ಆರೋಪಿಗಳು  ದನದ ಕರುಗಳನ್ನು ಅಕ್ರಮವಾಗಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಎಲ್ಲಿಂದಲೋ ಕಳ್ಳತನ ಮಾಡಿ  KA-20-C-4987 ಪಿಕಪ್ ವಾಹನದಲ್ಲಿ ತಂದಿರುವುದಾಗಿ ತಿಳಿದು ಬಂದಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 180/2021 ಕಲಂ: 379, 341, 353, 332, 504, ಜೊತೆಗೆ 149 ಐ.ಪಿ.ಸಿ ಕಲಂ: 5 4 7 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ 2020 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 10/12/2021 ರಂದು ಬೈಂದೂರು ತಾಲೂಕು ಶಿರೂರು ಗ್ರಾಮದ ಸಂಕದಗುಂಡಿ ಎಂಬಲ್ಲಿ ಡೀಸೆಲ್ ಸಾಗಾಟ ನಡೆಸುವ ವಾಹನಗಳ ಡೀಸೆಲ್ ಟ್ಯಾಂಕಿನಿಂದ ಡೀಸೆಲ್ ಅನ್ನು ಕಳವು ಮಾಡುವ ಬಗ್ಗೆ ಬಂದ ಮಾಹಿತಿಯಂತೆ ಶ್ರೀಕಾಂತ್ ಕೆ, ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪ ವಿಭಾಗ ಇವರು ಸಿಬ್ಬಂದಿಯವರೊಂದಿಗೆ ಶಿರೂರು ಮೇಲ್ಪೆಟೆಯಿಂದ ಸ್ವಲ್ಪ ಮುಂದಕ್ಕೆ ಸಂಕದಗುಂಡಿ ಎಂಬಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ರಾಷ್ಟ್ರೀಯ ಹೆದ್ದಾರಿ-66 ರ ಪಶ್ಚಿಮಕ್ಕೆ ಇರುವ ಖಾಲಿ ಜಾಗದಲ್ಲಿ ಇಂಧನ ಸಾಗಿಸುವ 4 ಟ್ಯಾಂಕರುಗಳು ನಿಂತಿದ್ದು, ಆ ಟ್ಯಾಂಕರ್ ಗಳ ಬಳಿ 1)ಕಿರಣ್, ಪ್ರಾಯ 32 ವರ್ಷ, ತಂದೆ : ರಾಮಯ್ಯ, ವಾಸ : ಮಾರ್ದಾಳ , ಎಂ.ಚೆಂಬು ಗ್ರಾಮ, ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ, 2)ಮಹಮ್ಮದ್ದ ಮುಸ್ತಾಫ್, ಪ್ರಾಯ 34 ವರ್ಷ, ತಂದೆ : ಸಾಬು, ವಾಸ : ಬರಿಗೇರಿ, ಪಟ್ಟೆ ಸರಕಾರಿ ಶಾಲೆಯ ಹತ್ತಿರ, ಪುತ್ತೂರು ತಾಲೂಕು, ದ.ಕ. ಜಿಲ್ಲೆ, 3)ಅಶೋಕ್, ಪ್ರಾಯ 30 ವರ್ಷ, ತಂದೆ : ದಿ/ ಶ್ರೀಧರ ಪೂಜಾರಿ, ವಾಸ ಕೋಡಿ ಪಿರ್ಯಾ ಮನೆ, , ಎನ್.ಸಿ. ರೋಡ್, ಪುಂಜಾಲಕಟ್ಟೆ, ಹವಲಮುಡೂರು ಗ್ರಾಮ, ಬಂಟ್ವಾಳ ತಾಲೂಕು, ದ.ಕ. ಜಿಲ್ಲೆ, 4)ರೂಪೇಶ್ ಪೂಜಾರಿ, ಪ್ರಾಯ 27 ವರ್ಷ, ತಂದೆ : ದಿ/ ಶ್ರೀಧರ ಪೂಜಾರಿ, ವಾಸ : ಕೋಡಿ ಪಿರ್ಯಾ ಮನೆ, ಎನ್.ಸಿ. ರೋಡ್, ಪುಂಜಾಲಕಟ್ಟೆ, ಹವಲಮುಡೂರು ಗ್ರಾಮ, ಬಂಟ್ವಾಳ ತಾಲೂಕು, ದ.ಕ. ಜಿಲ್ಲೆ, 5) ಮೋಹನ ಪೂಜಾರಿ, ಪ್ರಾಯ 42 ವರ್ಷ, ತಂದೆ : ದಿ/ ಕುಷ್ಟು ಪೂಜಾರಿ, ವಾಸ : ಅಳ್ವೆಗದ್ದೆ,  ಶಿರೂರು ಗ್ರಾಮ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಇವರು ಇದ್ದು, ಅವರುಗಳು ಟ್ಯಾಂಕರ್ ಗಳ ಕೆಳಗೆ ಇರುವ ಅದೇ ವಾಹನದ ಇಂಧನ ಟ್ಯಾಂಕಿನಿಂದ ಪೈಪ್ ಬಳಸಿ ಇಂಧನವನ್ನು ಕಳವು ಮಾಡುತ್ತಿರುವುದು ಖಚಿತವಾದ್ದರಿಂದ ಆ ಸ್ಥಳಕ್ಕೆ 06:00 ಗಂಟೆಗೆ ದಾಳಿ ನಡೆಸಿ ಆರೋಪಿತರನ್ನು ಸುತ್ತುವರಿದು ಟ್ಯಾಂಕ್ ಬಳಿ ಇದ್ದ ಟ್ಯಾಂಕ್ ಗಳ ಚಾಲಕರಲ್ಲಿ ವಿಚಾರಿಸಿದಾಗ ನಾವು ನಮ್ಮ ಪ್ರತಿ ಲಾರಿಯ ಡಿಸೇಲ್ ಟ್ಯಾಂಕಿನಿಂದ 15-20 ಲೀಟರ್ ಡಿಸೇಲ್ ಅನ್ನು ಕಳವು ಮಾಡಿ ಶಿರೂರಿನ ಮೋಹನ ಪೂಜಾರಿಯವರಿಗೆ ನೀಡುತ್ತಿರುವುದಾಗಿ ತಿಳಿಸಿದ್ದು ಪರಿಶೀಲಿಸಿದಾಗ ಪ್ರತಿ ವಾಹನದ ಡಿಸೇಲ್ ಟ್ಯಾಂಕಿನ ಬಳಿ ಒಂದೊಂದು ಕ್ಯಾನ್ ಇದ್ದು, ಅವುಗಳ ಪೈಕಿ 3 ಕ್ಯಾನ್ ಗಳಿಗೆ ಡಿಸೇಲ್ ತುಂಬಿದ್ದು, ಒಂದು ಕ್ಯಾನ್ ಗೆ ಪೈಪ್ ಮೂಲಕ ಡಿಸೇಲ್ ತುಂಬಿಸುವ ಪ್ರಕ್ರಿಯೆ ಚಾಲ್ತಿಯಲ್ಲಿ ಇದ್ದಿರುವುದು ಕಂಡು ಬಂದಿದ್ದು  ಒಟ್ಟು 4 ಕ್ಯಾನ್ ಗಳಲ್ಲಿ ಸುಮಾರು 73 ಲೀಟರ್ ಡಿಸೇಲ್ ( ಮೌಲ್ಯ 6500/-) ಇರುವುದು ಕಂಡು ಬಂದಿರುತ್ತದೆ.  ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 200/2021 ಕಲಂ:379 ಐಪಿಸಿ ಮತ್ತು 3,,7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ 1955 ಮತ್ತು ಕಲಂ 23 ಪೆಟ್ರೋಲಿಯಂ ಕಾಯ್ದೆ 1934 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-12-2021 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080