ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 02/11/2022 ರಂದು ಪಿರ್ಯಾದಿದಾರರಾದ ರಾಜೇಶ್‌ ಜೋಗಿ (45), ತಂದೆ: ದಿ. ಅಣ್ಣಪ್ಪ ಬಳೆಗಾರ, ವಾಸ: ಬಳೆಗಾರಬೆಟ್ಟು, ಮಂದಾರ್ತಿ ಅಂಚೆ, ಹೆಗ್ಗುಂಜೆ ಗ್ರಾಮ, ಬ್ರಹ್ಮಾವರ ತಾಲೂಕು ಇವರು KA-21-K-4442 ನೇ ಹೊಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಅವರ ತಮ್ಮ ದಿನೇಶ್‌ ಜೋಗಿಯನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಬಾರ್ಕೂರಿಗೆ ಹೋಗಲು ಮನೆಯಿಂದ ಹೊರಟು ಮಂದಾರ್ತಿ – ಬಾರ್ಕೂರು ಮುಖ್ಯ ರಸ್ತೆಯ ಎಡಭಾಗದಲ್ಲಿ ಸವಾರಿ ಮಾಡಿಕೊಂಡು ಬೆಳಿಗ್ಗೆ 09:40 ಗಂಟೆಗೆ ಹನೇಹಳ್ಳಿ ಗ್ರಾಮದ ಬಾರ್ಕೂರು ಪದವಿ ಕಾಲೇಜು ಸಮೀಪ ತಲುಪುವಾಗ ಅವರ ಎದುರಿನಿಂದ ಅಂದರೆ ಬಾರ್ಕೂರು ಕಡೆಯಿಂದ ಆರೋಪಿ ಜಯರಾಮ ಶೆಟ್ಟಿ ಅವರ ನೊಂದಣಿ ನಂಬ್ರ ಹಾಕದ ಸ್ವೀಪ್ಟ್‌ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬಾರ್ಕೂರು ಪದವಿ ಕಾಲೇಜು ಕಡೆ ಹೋಗಲು ಬಲ ಭಾಗಕ್ಕೆ ಯಾವುದೇ ಸೂಚನೆ ನೀಡದೇ, ಇಂಡಿಕೇಟರ್‌ ಹಾಕದೇ ತಿರುಗಿಸಿ ಪಿರ್ಯಾದಿದಾರರಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಬಾರ್ಕೂರು ಪದವಿ ಕಾಲೇಜು ಕಡೆಗೆ ಕಾರನ್ನು ಚಲಾಯಿಸಿಕೊಂಡು ಹೋಗಿರುತ್ತಾರೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ತಮ್ಮ  ಸ್ಕೂಟರ್‌ ಸಮೇತ ರಸ್ತೆಯ ಚರಂಡಿಗೆ ಬಿದ್ದು, ಪಿರ್ಯಾದಿದಾರರ ಬಲತೊಡೆಯ ಭಾಗಕ್ಕೆ ಬಹಳ ನೋವುಂಟಾಗಿದ್ದು ಹಾಗೂ ದಿನೇಶ್‌ ಜೋಗಿ ರವರ ಬಲತೊಡೆ, ಮಂಡಿ ಹಾಗೂ ಕೋಲು ಕಾಲಿಗೆ ತೀವ್ರ ಜಖಂ ಆಗಿರುತ್ತದೆ.  ಗಾಯಾಳು ದಿನೇಶ್‌ ಜೋಗಿ ನೋವು ಕಡಿಮೆ ಇದ್ದ ಕಾರಣ ದೂರು ಬೇಡವೆಂದು ಹೇಳಿದ್ದು, ನಂತರ ಅವರಿಗೆ ನೋವು ಜಾಸ್ತಿಯಾಗಿದ್ದು, ಅಲ್ಲದೇ ವೈದ್ಯರು ಮೂಳೆ ಮುರಿತವಾಗಿದೆ ಕೆಲವು ತಿಂಗಳು ಆರೈಕೆಯಲ್ಲಿ ಇರಬೇಕಾಗುತ್ತದೆ ಎಂದು ತಿಳಿಸಿರುವುದರಿಂದ ದೂರು ನೀಡುವಾಗ ವಿಳಂಬವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 186/2022 ಕಲಂ : 279, 337, 338 ಐಪಿಸಿ  & 134 (A)&(B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ .
  • ಕುಂದಾಪುರ: ದಿನಾಂಕ 08/11/2022  ರಂದು ಬೆಳಿಗ್ಗೆ 8:45 ಗಂಟೆಗೆ ಕುಂದಾಪುರ ತಾಲೂಕಿನ, ಬಸ್ರೂರು   ಗ್ರಾಮದ ಶಾರದ ಆಂಗ್ಲ ಮಾದ್ಯಮ ಶಾಲೆಯ ಬಳಿ  ರಾಜ್ಯ  ರಸ್ತೆಯಲ್ಲಿ, ಆಪಾದಿತ KA-20-D-9597ನೇ ಶ್ರೀ  ದುರ್ಗಾಂಬಾ ಬಸ್ಸಿನ ಚಾಲಕ, ಬಸ್‌‌ನ್ನು  ಕಂಡ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲಿಸಿ, ಬಳಿಕ  ಬಸ್‌‌ನ್ನು ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು  ಹೋಗುವಾಗ ಬಸ್ಸಿಗೆ ಕಾಯುತ್ತ ನಿಂತುಕೊಂಡಿದ್ದ  ಪಿರ್ಯಾದಿದಾರರಾದ  ಕುಮಾರಿ  ಮನವಿ (16), ತಂದೆ: ರಾಜು ಬಿ,  ಜನತಾ ಕಾಲೋನಿ, ಬಸ್ರೂರು  ಗ್ರಾಮ, ಕುಂದಾಪುರ ಹಾಗೂ ಆಕೆಯ  ಗೆಳತಿ ತೃಪ್ತಿ (16) ಎಂಬುವವರಿಗೆ  ಅಪಘಾತಪಡಿಸಿ ನಿಲ್ಲಿಸದೇ  ಹೋಗಿರುತ್ತಾನೆ. ಈ  ಅಪಘಾತದಿಂದ ಕುಮಾರಿ  ಮನವಿ ಹಾಗೂ  ತೃಪ್ತಿ ಗಾಯಗೊಂಡು ಕುಂದಾಪುರ  ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 119/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ: ದಿನಾಂಕ 08/11/2022 ರಂದು ಸಂಜೆ 04:15 ಗಂಟೆಗೆ ಪಿರ್ಯಾದಿದಾರರಾದ ಪೌಲಪ್ಪ ಮೋಶಪ್ಪ ಗೌಡರ (45), ತಂದೆ: ದಿ. ಮೋಶಪ್ಪ ಗೌಡರ, ವಾಸ: ಕಟಗಿನಹಳ್ಳಿ ಗ್ರಾಮ,ಗುಳೇದಗುಡ್ಡ ತಾಲೂಕು ಬಾಗಲಕೋಟೆ ಜಿಲ್ಲೆ, ಪ್ರಸ್ತುತ ವಿಳಾಸ: Ignatius Compound ರವರ ಬಾಡಿಗೆ ಮನೆ ಆದರ್ಶನಗರ ಮಣಿಪಾಲ ಉಡುಪಿ ಇವರ ಮಗ ಅಂಥೋನಿ (12) ಮಣಿಪಾಲ ಜೂನಿಯರ್ ಕಾಲೇಜು ಬಳಿಯ ರಸ್ತೆಯ ಬಲ ಬಿದಿಯಲ್ಲಿ ನಿಂತುಕೊಂಡಿರುವುವಾಗ ಅಲೆವೂರು ಕಡೆಯಿಂದ ಮಣಿಪಾಲದ ಕಡೆಗೆ ಆರೋಪಿತ ರವಿರಾಜ್ ತನ್ನ  KA-47-H-0111 ಮೋಟಾರ್ ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲ ಬದಿಗೆ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಅಂಥೋನಿಗೆ ಎರಡು ಕೈಗಳ ಮೊಣಗಂಟಿನಲ್ಲಿ ಗೀಚಿರುವ ಗಾಯ ಮತ್ತು ಬಲಗಾಲಿನ ತೊಡೆಯಲ್ಲಿ ಗುದ್ದಿದ ತೀವ್ರ ನೋವು ಊಂಟಾಗಿರುತ್ತದೆ,  ಆತನನ್ನು ಚಿಕಿತ್ಸೆಯ ಬಗ್ಗೆ  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 200/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಶಿರ್ವಾ: ದಿನಾಂಕ 09/11/2022 ರಂದು ಪಿರ್ಯಾದಿದಾರರಾದ ಭಾಸ್ಕರ ದೇವಾಡಿಗ (52), ತಂದೆ: ದಿ: ಗುಡ್ಡ ಶೇರಿಗಾರ, ವಾಸ: ಮನೆ ನಂ. 3-220, 92 ಹೇರೂರು ಅಂಚೆ ಮತ್ತು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ತನ್ನ ಅಟೋ  ರಿಕ್ಷಾ  ನಂಬ್ರ  KA-20-AB-3064 ನೇದರಲ್ಲಿ 92 ಹೇರೂರು ಕಡೆಯಿಂದ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಬಂಟಕಲ್‌ ಅಟೋ ರಿಕ್ಷಾ ನಿಲ್ದಾಣಕ್ಕೆ ಬೆಳಿಗ್ಗೆ 11:30 ಗಂಟೆಗೆ   ಬಂದು  ಪ್ರಯಾಣಿಕರನ್ನು ಇಳಿಸುವ ಸಮಯದಲ್ಲಿ ಶಿರ್ವಾ–ಕಟಪಾಡಿ ಸಾರ್ವಜನಿಕ ರಸ್ತೆಯಲ್ಲಿ ಕಟಪಾಡಿ ಕಡೆಯಿಂದ ಶಿರ್ವಾ ಕಡೆಗೆ ಒಂದು ಕಾರನ್ನು ಅದರ ಚಾಲಕನು ಕಾರನ್ನು ಅತೀವೇಗ ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು ಪಿರ್ಯಾದಿದಾರರು ಬಂಟಕಲ್‌  ಅಟೋ  ನಿಲ್ದಾಣದ ಬಳಿ ನಿಲ್ಲಿಸಿದ ಪಿರ್ಯಾದಿದಾರರ ರಿಕ್ಷಾಕ್ಕೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ  ಅಟೋ  ರಿಕ್ಷಾ ಮುಂದಕ್ಕೆ ಹೋಗಿ ಅಲ್ಲಿಯೇ ಇದ್ದ ಧ್ವಜ ಕಂಬಕ್ಕೆ ತಾಗಿ ನಿಂತಿತು ಇದರಿಂದ ರಿಕ್ಷಾದಲ್ಲಿ ಕುಳಿತ್ತಿದ್ದ ಪಿರ್ಯಾದಿದಾರರ ಪರಿಚಯದ ವಿದ್ಯಾರ್ಥಿನಿ  ರಕ್ಷಿತಾ ದೇವಾಡಿಗ ರಿಕ್ಷಾದಿಂದ  ಕೆಳಗೆ  ಬಿದ್ದು ಆಕೆಯ ಕೈ ಹಾಗೂ  ಕಾಲಿಗೆ ತರಚಿದ ಗಾಯವಾಗಿದ್ದು  ಪಿರ್ಯಾದಿದಾರರಿಗೆ  ತಲೆಯ ಹಿಂಬದಿಗೆ  ಗುದ್ದಿದ ನೋವಾಗಿ  ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರ ರಿಕ್ಷಾಕ್ಕೆ  ಡಿಕ್ಕಿ ಹೊಡೆದ ಕಾರಿನ ನಂಬ್ರ ನೋಡಲಾಗಿ KA-20-ME-4481 ನೇ SKODA ಕಂಪೆನಿಯ ಕಾರು  ಆಗಿರುತ್ತದೆ. ಅಪಘಾತದ ಪರಿಣಾಮ ಅಟೋ  ರಿಕ್ಷಾ ಜಖಂ ಆಗಿದ್ದು ಕಾರು  ಕೂಡ ಜಖಂ ಆಗಿರುತ್ತದೆ. ಕಾರು ಚಾಲಕರು ನಮ್ಮ ಬಳಿ  ಬಂದು  ಉಪಚರಿಸಿದ್ದು ಆ ಸಮಯದಲ್ಲಿ ಕಾರು  ಚಾಲಕರ  ಹೆಸರು  ಕೇಳಲಾಗಿ  ವಿಲ್ಮಾ  ಕರ್ಡೋಜ  ಎಂಬುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 80/22 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಕಳವು ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಸಂಪಾವತಿ (48) ಇವರು ಕಾಪು ತಾಲೂಕು ಹೆಜಮಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕಿ ಆಗಿರುತ್ತಾರೆ, ದಿನಾಂಕ 08/11/2022 ರಂದು ಸಂಜೆ 17:00 ಗಂಟೆಗೆ ತರಗತಿ ಮುಗಿಸಿ ಎಲ್ಲಾ ಕೊಠಡಿ ಮತ್ತು ಶಾಲಾ ಕಛೇರಿಗೆ ಬೀಗ ಹಾಕಿ ಹೋಗಿದ್ದು, ನಂತರ ಯಾರೋ ಕಳ್ಳರು  ದಿನಾಂಕ 08/11/2022 ರಂದು 17:00 ಗಂಟೆಯಿಂದ  ದಿನಾಂಕ 09/11/2022 ರ ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ಆಯುಧದಿಂದ ಮುಖ್ಯ ಶಿಕ್ಷಕರ ಕೊಠಡಿಯ ಬಾಗಿಲಿನ ಬೀಗವನ್ನು  ಯಾವುದೋ ಆಯುಧದಿಂದ ಮುರಿದು ಬಾಗಿಲನ್ನು ತೆರೆದು ಒಳ ಪ್ರವೇಶಿಸಿ, ಒಳಗಿದ್ದ ಕಪಾಟುಗಳ ಬೀಗವನ್ನು  ಮುರಿದಿದ್ದು, ಬಾಗಿಲು ತೆರೆದು ಒಳಗೆ ಹೋಗಿ, ಅಲ್ಲಿರುವ ಕಪಾಟಿನ ಬಾಗಿಲುಗಳನ್ನು ಕೂಡಾ ಯಾವುದೋ ಆಯುಧದಿಂದ ಮೀಟಿಸಿ ತೆರೆದು ಜಾಲಾಡಿಸಿ ಕಪಾಟಿನ ಒಳಗೆ ಅಕ್ಷರ ದಾಸೋಹ ಆಹಾರ ವಸ್ತುಗಳ ಖರೀದಿಗೆಂದು ಇರಿಸಿದ್ದ ನಗದು ರೂಪಾಯಿ 15,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಮತ್ತು ಹೈಸ್ಕೂಲ್ ಕಟ್ಟಡದಲ್ಲಿರುವ ಕಾಲೇಜು ವಿಭಾಗದ ಹಳೆಯ ಕಂಪ್ಯೂಟರ್, ಇನ್ವರ್ಟರ್, ಬ್ಯಾಟರಿಗಳಿರುವ ಕೊಠಡಿಯ ಬಾಗಿಲಿನ ಬೀಗವನ್ನು ಮುರಿದು ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 143/2022, ಕಲಂ:  454, 457,  380, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಪಡುಬಿದ್ರಿ: ಪಿರ್ಯಾದಿದಾರರಾದ ಹಂಝ ಅಹ್ಮದ್ (53) ಇವರು ಉಡುಪಿ ಜಿಲ್ಲೆ ಕಾಪು ತಾಲೂಕು ಹೆಜಮಾಡಿ ಗ್ರಾಮದ ಅಲ್-ಅಝ್‌‌‌ಹರ್ ಆಂಗ್ಲ ಮಾಧ್ಯಮ ಶಾಲೆಯ ಕೋ-ಆರ್ಡಿನೇಟರ್ ಆಗಿರುತ್ತಾರೆ. ದಿನಾಂಕ 08/11/2022 ರಂದು ಕಛೇರಿಯ ಸಿಬ್ಬಂದಿಗಳು ಸಂಜೆ 16:30 ಗಂಟೆಗೆ ಎಲ್ಲಾ ಕೊಠಡಿ ಮತ್ತು ಶಾಲಾ ಕಛೇರಿಗೆ ಬೀಗ ಹಾಕಿ ಹೋಗಿದ್ದು, ನಂತರ ಯಾರೋ ಕಳ್ಳರು ದಿನಾಂಕ 08/11/2022 ರಂದು 17:00 ಗಂಟೆಯಿಂದ  ದಿನಾಂಕ 09/11/2022 ರ ಬೆಳಿಗ್ಗೆ 07:00 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ಆಯುಧದಿಂದ ಶಾಲಾ ಕಛೇರಿಯ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಬಾಗಿಲನ್ನು ತೆರೆದು ಒಳ ಪ್ರವೇಶಿಸಿ, ಒಳಗಿದ್ದ ಡ್ರಾವರಿನ ಬಾಗಿಲು ತೆರೆದು, ಡ್ರಾವರಿನಲ್ಲಿ ಶಾಲಾ ಕುರ್ಚಿ  ಖರೀದಿಗೆಂದು ಇರಿಸಿದ್ದ, ನಗದು ರೂಪಾಯಿ 45,000/-, ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆಂದು ಸಂಗ್ರಹಿಸಿದ ನಗದು ರೂಪಾಯಿ 11,000/- ಮತ್ತು ಶಾಲಾ ಶುಲ್ಕದ ಬಾಬ್ತು ನಗದು ರೂಪಾಯಿ 20,020/- ಸೇರಿದಂತೆ ಒಟ್ಟು ರೂಪಾಯಿ 79,020/-  ಹಣವನ್ನು ಕಳವು ಮಾಡಿ, ಕಛೇರಿಯನ್ನು ಜಾಲಾಡಿಸಿ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳ್ಳತನ ಮಾಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 144/2022, ಕಲಂ:  454, 457,  380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಲ್ಪೆ: ಆಪಾದಿತರಾದ 1)  ಸುಧೀರ, 2) ಪವಿತ್ರ  ಇವರು ದಿನಾಂಕ 28/09/2022 ರಂದು ಸಂಜೆ 5:00 ರಿಂದ 5:15 ಗಂಟೆಯ ಸಮಯದಲ್ಲಿ ಪಿರ್ಯಾದಿದಾರರಾದ ಶೈಲಜಾ  ಸುರೇಶ ಜತ್ತನ್, C/O  ದಿ. ಸುರೇಶ  ಜತ್ತನ್ ವಾಸ:  ಪ್ಲಾಟ್ ನಂಬ್ರ 304  ಅನ್ವಿತಾ ಅಪಾರ್ಟ್ ಮೆಂಟ್  ಕಂಕನಾಡಿ  ಕೊಚ್ಚಿನ್ ಬೇಕರಿ  ಹತ್ತಿರ ಮಂಗಳೂರು ಇವರಿಗೆ ಸಂಬಂಧಿಸಿದ ಉಡುಪಿ ತಾಲೂಕು ಮೂಡುತೋನ್ಸೆ ಗ್ರಾಮ ಡೋರ್  ನಂಬ್ರ 5-217 (1) ರಲ್ಲಿರುವ  ಜತ್ತನ್ ಪೆಟ್ರೋ ಸರ್ವಿಸಸ್  ಎಂಬ ಕಛೇರಿಯ ಬೀಗವನ್ನು ಒಡೆದು  ಪೆಟ್ರೋಲ್ ಬಂಕ್ ನ ಮೂಲ ದಾಖಲೆಗಳನ್ನು, ಆಫೀಸ್ ನಲ್ಲಿರುವ ಸಾಮಾಗ್ರಿಗಳನ್ನು ಕಂಪ್ಯೂಟರ್ ನ್ನು ಕಳವು ಮಾಡಿಕೊಂಡು  ಹೋಗಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 94 /2022 ಕಲಂ: 454, 380, 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಬೈಂದೂರು ತಾಲೂಕು ಯಡ್ತರೆ  ಗ್ರಾಮದ ಯಡ್ತರೆ  ಎಂಬಲ್ಲಿ ಪಿರ್ಯಾದಿದಾರರಾದ ಮೋಜಮ್ (49), ತಂದೆ: ವೈ ಎಮ್ ಹುಸೇನ್, ವಾಸ: ಬೈಂದೂರು ತಾಲೂಕು ಇವರ  ದೊಡ್ಡಮ್ಮನ  ಹಕ್ಕಿನ ಸ್ಥಳವಾದ ಸರ್ವೆ ನಂಬ್ರ 79/2 ರಲ್ಲಿ 0.24 ಸೆಂಟ್ಟ್  ಜಾಗದಲ್ಲಿ ಇರುವ ಮನೆಯಲ್ಲಿ ಪಿರ್ಯಾದಿದಾರರು ದೊಡ್ಡಮ್ಮನ ಅನುಮತಿ ಪಡೆದು ಮಸೀದಿಯ ಗುರುಗಳಿಗೆ ವಾಸ್ಥವ್ಯಕ್ಕೆ ನೀಡಿರುತ್ತಾರೆ. ದಿನಾಂಕ 09/11/2022 ರಂದು ಮಧ್ಯಾಹ್ನ 1:00 ಗಂಟೆಗೆ ಆಪಾದಿತರಾದ ಮುಜಾಹಿದ್ ಪಾಷಾ , ಅಬುಬಕರ್ ಹಾಗೂ  ವಕ್ಫ್ ಮಂಡಳಿಯ ಅಧ್ಯಕ್ಷರಾದ ಮುತಾಲಿ ಎಂಬುವವರು ಪಿರ್ಯಾದಿದಾರರ ದೊಡ್ಡಮ್ಮನ ಮನೆಯಲ್ಲಿ ಮಸೀದಿಯ ಗುರುಗಳು ಇಲ್ಲದ ಸಂದರ್ಭದಲ್ಲಿ ಅತಿಕ್ರಮ ಪ್ರವೇಶ ಮಾಡಿ, ಮನೆಗೆ ಬೀಗ ಹಾಕುತ್ತೇವೆ ಎಂದು ಬೆದರಿಕೆ  ಹಾಕಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 220/2022 ಕಲಂ: 448, 504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಬೈಂದೂರು  ಜಾಮೀಯಾ ಮಸೀದಿ  ಉಡುಪಿ ಜಿಲ್ಲೆ ವಕ್ಪ ಸಂಸ್ಥೆಯ  ಕರ್ನಾಟಕ ರಾಜ್ಯ ವಕ್ಪ ಮಂಡಳಿಯಲ್ಲಿ  ನೊಂದಣಿಯಾದ ವಕ್ಪ ಸಂಸ್ಥೆಯಾಗಿದ್ದು, ಆಪಾದಿತ  ಮೊಹ್ಮದ್  ಪೈಸಲ್  ಬಾರಿ ರವರಿಗೆ ಮಸೀದಿ ವತಿಯಿಂದ ನಿಡಲಾಗಿದ್ದ ಇಮಾಂ ವಸತಿ ಗ್ರಹವನ್ನು ಖಾಲಿ ಮಾಡುವಂತೆ ತಿಳಿವಳಿಕೆ ಪತ್ರವನ್ನು ನಿಡಿದ್ದು  ಅದಕ್ಕೆ ಮೊಹ್ಮದ್  ಪೈಸಲ್  ಬಾರಿ ಯಾವುದೇ ಸ್ಪಂದನೆ ನೀಡದೆ ಇರುವುದರಿಂದ ಅವರಿಗೆ ಅಂತಿಮ ನೋಟಿಸ್ ನೀಡಿದ್ದರು ಆದರೂ ಮನೆಯನ್ನು ಖಾಲಿಮಾಡದೇ ವಾರಕ್ಕೊಮ್ಮೆ ಬಂದು ಕುಳಿತುಕೊಳ್ಳುತ್ತಿದ್ದರು, ಹೊಸದಾಗಿ ಬಂದ ಇಮಾಂ ರವರಿಗೆ ಮನೆಯನ್ನು ನಿಡಬೇಕಾಗಿರುವುದರಿಂದ ಜಿಲ್ಲಾ ವಕ್ಪ ಸಲಹಾ ಸಮಿತಿಯ ಅಧ್ಯಕ್ಷರು, ಅಧಿಕಾರಿ ಹಾಗೂ ಸಿಬ್ಬಂದಿ ಹಾಗೂ ಸದಸ್ಯರು ಮತ್ತು ಮಸೀದಿಯ ಸಿಬ್ಬಂದಿಯವರ ಸಮಕ್ಷಮ ಮಹಜರನ್ನು ಮಾಡಿ ಇಲಾಖೆಯ ವತಿಯಿಂದ ಬೀಗವನ್ನು ಹಾಕಿ ಬಟ್ಟೆಯನ್ನು ಸುತ್ತಿ ಛಾಯಾಚಿತ್ರವನ್ನು ತೆಗೆದಿರುತ್ತಾರೆ, ನಂತರ ಕೆಲವು ದಿನಗಳ ನಂತರ ಮಸೀದಿಯ ಸಿಬ್ಬಂದಿಯೊಬ್ಬರು ಹೋಗಿ ನೋಡಿದ್ದು  ಮನೆಗೆ ಹಾಕಿದ್ದ ಬೀಗವನ್ನು ಒಡೆಯಲಾಗಿತ್ತು ಮಸೀದಿಯ ಸ್ವಾದೀನದ ಡೋರ್ ನಂಬ್ರ 5/82 ಕ್ಕೆ ದಿನಾಂಕ 21/10/2022 ರಂದು ಮಧ್ಯಾಹ್ನ  12:18 ಗಂಟೆಗೆ  ಅಕ್ರಮ ಪ್ರವೇಶ ಮಾಡಿರುವ ಮೊಹಮ್ಮದ್ ಪೈಸಲ್ ಬಾರಿ , ಅವರಿಗೆ  ಸಹಕರಿಸಿದ ವೈ ಎಮ್ ಮುಜಮ್ ಹುಸೇನ್ , ಅಖೀಲ್ ಮವಾಡ್ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಅಬುಬಕರ್ (56), ತಂದೆ: ಕುನ್ಹಿ ಬ್ಯಾರಿ, ವಕ್ಫ ಅಧಿಕಾರಿ ಉಡುಪಿ ಜಿಲ್ಲಾ ವಕ್ಫ ಕಚೇರಿ ಉಡುಪಿ ಯವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 221/2022 ಕಲಂ: 448 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-11-2022 09:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080