ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ : ದಿನಾಂಕ 09/11/2021 ರಂದು ಪಿರ್ಯಾದಿ ಬಸವ ಖಾರ್ವಿ ಪ್ರಾಯ 45 ವರ್ಷ ತಂದೆ: ಕೊಗ್ಗ ಖಾರ್ವಿ ವಾಸ: ಅನೀಶ್ ನಿವಾಸ ಕೋಡಿ ತಲೆ ಸಾಸ್ತಾನ ಬ್ರಹ್ಮಾವರ ಇವರು ತನ್ನ ಸ್ನೇಹಿತನಾದ ದಯಾನಂದ ಖಾರ್ವಿ ಎಂಬವರ ಜೊತೆಯಲ್ಲಿ ಆತನ ಬಾಬ್ತು KA20EC9673ನೇ ಮೋಟಾರ್ ಸೈಕಲಿನಲ್ಲಿ ಸಾಸ್ತಾನದಿಂದ ಗಂಗೊಳ್ಳಿ ಕಡೆಗೆ ರಾ ಹೆ 66ರಲ್ಲಿ ಸಹಸವಾರನಾಗಿ ಹೊರಟು ಕುಂದಾಪುರ ಉಡುಪಿ ರಾ ಹೆ 66ರಲ್ಲಿ ಬರುತ್ತಿರುವಾಗ ಬೆಳಿಗ್ಗೆ ಸುಮಾರು 09.30 ಗಂಟೆಯ ಸಮಯಕ್ಕೆ ಕೋಟ ತಟ್ಟು ಗ್ರಾಮದ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಎದುರು ಬರುತ್ತಿರುವಾಗ ಪಿರ್ಯಾದಿದಾರರ ಹಿಂಬದಿಯಿಂದ KA20EJ9903ನೇ ಮೋಟಾರ್ ಸೈಕಲ್ ಸವಾರ ಸಂಪತ್ ಕುಮಾರ್ ಎಂಬಾತನು ತನ್ನ ಮೋಟಾರ್ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಸರ್ವಿಸ್ ರಸ್ತೆಗೆ ಹೋಗಲು ಒಮ್ಮೆಲೆ ಎಡಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರ ಮೋಟಾರ್ ಸೈಕಲಿನ ಬಲ ಬದಿಗೆ ಗುದ್ದಿದ್ದು, ಪರಿಣಾಮ ದಯಾನಂದ ಹಾಗೂ ರಸ್ತೆಗೆ ಬಿದ್ದಿದ್ದು, ದಯಾನಂದನ ಬಲ ಕಾಲಿನ ಮೊಣಗಂಟಿಗೆ ಬಳಿ ತೀವೃಸ್ವರೂಪದ ಗಾಯವಾಗಿದ್ದು ಪಿರ್ಯಾದಿದಾರರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 190/2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಹೆಬ್ರಿ  : ಪಿರ್ಯಾದಿ ಸಂತೋಷ ನಿಟ್ಟವಳ್ಳಿ  ಪ್ರಾಯ 32 ವರ್ಷ  ತಂದೆ: ಪರಮೇಶ್ವರ  ವಾಸ: ಕೆ ಇ ಬಿ ಗ್ರಿಡ್ ಹತ್ತಿರ ಬೀರೇಶ್ವರ ನಗರ ಹಲಗೇರಿ ರಸ್ತೆ ರಾಣಿ ಬೆನ್ನೂರು ಪಟ್ಟಣ ಹಾವೇರಿ ಇವರು ತನ್ನ ತಾಯಿ ಗಿರಿಜಾಮ್ಮ ಇವರಿಗೆ ಮಣಿಪಾಲ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೂಡಿಸುವ ಸಲುವಾಗಿ ಅವರನ್ನು ದಿನಾಂಕ;07/11/2021ರಂದು ತಂದೆ ಪರಮೇಶ್ವರಪ್ಪ, ಚಾಲಕ ರುದ್ರೇಶ್ ಇವರೊಂದಿಗೆ KA.26.M.4984 ನೇ ಕಾರಿನಲ್ಲಿ ರಾತ್ರಿ 8-15 ಗಂಟೆಗೆ ರಾಣಿಬೆನ್ನೂರಿನಿಂದ ಹೊರಟು ಮರುದಿನ ದಿನಾಂಕ: 08/11/2021 ರಂದು ಮುಂಜಾನೆ ಸಮಯ ಸುಮಾರು 4-00 ಗಂಟೆಗೆ ಶಿವಪುರ ಗ್ರಾಮದ ಬ್ಯಾಣ ಎಂಬಲ್ಲಿರುವ ಗದ್ದಿಗೆ ಅಮ್ಮ ದೇವಸ್ಥಾನದ ಎದುರುಗಡೆ ರಸ್ತೆ ತಲುಪಿದಾಗ ಕಾರನ್ನು ಚಲಾಯಿಸುತ್ತಿದ್ದ ರುದ್ರೇಶ್ ಇವರು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಾರು ಚಾಲಕನ ಹತೋಟಿ ತಪ್ಪಿ ರಸ್ತೆಯ ಎಡಬದಿಗೆ ಹೋಗಿ ರಸ್ತೆಯ ಬದಿಯಲ್ಲಿರುವ ನೀರು ಹೋಗುವ ಚರಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರಿಗೆ, ಪರಮೇಶ್ವರಪ್ಪ, ಗಿರಿಜಮ್ಮ ಮತ್ತು ಚಾಲಕ ರುದ್ರೇಶ್ ಇವರಿಗೆ ಗುದ್ದಿದ ನೋವಾಗಿದ್ದು. ಈ ಘಟನೆಯು KA.26.M.4984ನೇ ಕಾರಿನ ಚಾಲಕ ರುದ್ರೇಶ್ ಇವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಅಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 65/2021 U/s. 279, 337, 338 ಐಪಿಸಿಯಂತೆ ಪ್ರಕರಾಣ ದಾಖಲಿಸಿಕೊಳ್ಳಲಾಗಿದೆ.
  • ಹೆಬ್ರಿ : ದಿನಾಂಕ: 09/11/2021 ರಂದು ಚಂದ್ರಶೇಖರಪ್ಪ ಹೊಸಳ್ಳಿ (31 ವರ್ಷ) ಇವರು KA.20.ET.5043ನೇ ಮೋಟಾರ್ ಸೈಕಲ್ ನಲ್ಲಿ ಮಹೇಶ್ ಇವರನ್ನು ಸಹ ಸವಾರನಾಗಿ ಕುಳ್ಳೀರಿಸಿಕೊಂಡು ಮುದ್ದೂರು ಕಡೆಯಿಂದ ಕೊಕ್ಕರ್ಣೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದು. ಅವರು ಸಮಯ ಸುಮಾರು ಮದ್ಯಾಹ್ನ 3-45 ಗಂಟೆಗೆ ನಾಲ್ಕೂರು ಗ್ರಾಮದ ಕೈಯೆಟ್ಟು ಜಂಕ್ಷನ್ ಬಳಿ ತಲುಪಿದಾಗ ಅವರ ಎದುರುಗಡೆಯಿಂದ ಅಂದರೆ ಕೊಕ್ಕರ್ಣೆ ಕಡೆಯಿಂದ ಮುದ್ದೂರು ಕಡೆಗೆ KA.20.MD.3049ನೇ ಮಹೇಂದ್ರ ಬೊಲೇರೋ ವಾಹನವನ್ನು ಅದರ ಚಾಲಕ ವಿಜಯ ಕುಮಾರ್ ಶೆಟ್ಟಿ ಇವರು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ಬಲಬದಿಗೆ ಬಂದ ಪರಿಣಾಮ ಬೊಲೇರೋ ವಾಹನದ ಬಲಬದಿಯ ಮುಂದಿನ ಚಕ್ರವು KA.20.ET.5043 ನೇ ಮೋಟಾರ್ ಸೈಕಲ್ ಗೆ ತಾಗಿದ ಪರಿಣಾಮ ಸವಾರಿಬ್ಬರೂ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು. ಸವಾರ ಚಂದ್ರಶೇಖರ ಹೊಸಳ್ಳಿ ಇವರಿಗೆ ಬಲಕಾಲಿನ ತೋಡೆಯ ಬಳಿ ಮೂಳೆ ಮುರಿತವಾಗಿದ್ದು. ಹಣೆಯ ಎಡಭಾಗದಲ್ಲಿ ತೀವ್ರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು. ಸಹ ಸವಾರ ಮಹೇಶ್ ಇವರಿಗೆ ತಲೆಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಘಟನೆಯು KA.20.MD.3049ನೇ ಮಹೇಂದ್ರ ಬೊಲೇರೋ ವಾಹನ ಚಾಲಕ ವಿಜಯ ಕುಮಾರ್ ಶೆಟ್ಟಿ ಇವರ ಅತೀವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 66/2021 U/s. 279,338,304(A) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಮಲ್ಪೆ  : ಪಿರ್ಯಾಧಿ ಈಶ್ವರ ಪುತ್ರನ್ (46) ತಂದೆ: ಆನಂದ ಪುತ್ರನ್, ವಾಸ: ಬಲರಾಮ ನಗರ, ವಢಬಾಂಡೇಶ್ವರ ಕೊಡವೂರು ಇವರು ದಿನಾಂಕ 09-11-2021 ರಂದು ಕೊಡವೂರು ಗ್ರಾಮದ ಮಲ್ಪೆ ಬಂದರಿನಲ್ಲಿ ಕೆಲಸ ಮಾಡಿಕೊಂಡಿರುವಾಗ ಮಲ್ಪೆಯ ಮಂಜು ಕೊಳ ಎಂಬವರು ಪಿರ್ಯಾಧಿದಾರರಿಗೆ ಪೋನ್ ಕರೆ ಮಾಡಿ ಮಲ್ಪೆ ಬಂದರಿನ ಮಂಜು ಧಕ್ಕೆಯ ಬಾರ್ಜ ಬಳಿ ಯಾರೋ ವ್ಯಕ್ತಿ ನೀರಿಗೆ ಬಿದ್ದು ಮುಳುಗಿರುವುದಾಗಿ ತಿಳಿಸಿದ ಮೇರೆಗೆ ಸುಮಾರು  11:30 ಗಂಟೆಗೆ ಮುಂಜು ಧಕ್ಕೆಗೆ ಹೋಗಿ ಪಿರ್ಯಾಧಿದಾರರು ನೀರಿನಲ್ಲಿ ಮುಳುಗಿ ಹುಡುಕಾಡಿದಾಗ ಧಕ್ಕೆಯ ಪೂರ್ವ ಬದಿಯಲ್ಲಿ ಬಾರ್ಜನ ತಳಭಾಗದಲ್ಲಿ ಗಂಡಸಿನ ಮೃತದೇಹವು ಸಿಕ್ಕಿದ್ದು ಬಳಿಕ ಮೃತದೇಹವನ್ನು ನೀರಿನಿಂದ ಮೇಲೆತ್ತಿ ನೋಡಲಾಗಿ ಆತನ ಕಿಸೆಯಲ್ಲಿ ಹುಡುಕಿದಾಗ ಆಧಾರ ಕಾರ್ಡ್ ಸಿಕ್ಕಿದ್ದು Garikana Dhanayya (46) S/o Yerrayya, Andhra Pradesh ಎಂದು ಇದ್ದು, ಮೃತರು 11:15 ಗಂಟೆಯಿಂದ 11:45 ಗಂಟೆಯ ಮಧ್ಯಾವಧಿಯಲ್ಲಿ ಮೀನುಗಾರಿಕಾ ಬೋಟಿನಲ್ಲಿ ಆಕಸ್ಮಿಕ ವಾಗಿ ಕಾಲು ಜಾರಿ ಅಥವಾ ಯಾವುದೋ ಕಾರಣದಿಂದ ಕಾಲು ಜಾರಿ ಮಂಜು ಧಕ್ಕೆ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ :  45/2021  ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಅಜೆಕಾರು : ಫಿರ್ಯಾದಿ ಪ್ರಶಾಂತ ಶೆಟ್ಟಿ (38)  ತಂದೆ: ಕಿಟ್ಟ ಶೆಟ್ಟಿ  ವಾಸ: ಬೈಲು ಮನೆ ಮುಟ್ಲುಪಾಡಿಅಂಡಾರು ಗ್ರಾಮ ಹೆಬ್ರಿ ಇವರ ತಂದೆ 72 ವರ್ಷ ಪ್ರಾಯದ ಕಿಟ್ಟ ಶೆಟ್ಟಿ ಎಂಬವರು ಹೆಬ್ರಿ ತಾಲೂಕು ಅಂಡಾರು ಗ್ರಾಮದ ಬೈಲು ಮನೆ ಮುಟ್ಟುಪಾಡಿ ಎಂಬಲ್ಲಿ ವಾಸವಿದ್ದು ಸುಮಾರು 4 ವರ್ಷಗಳಿಂದ ಪಕ್ಷಿಪಾತ ಹಾಗೂ ಬಿ.ಪಿ.ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದು ಕೊಂಡರೂ ಖಾಯಲೆ ಗುಣವಾಗದ ಕಾರಣ ಮಾನಸಿಕವಾಗಿ ನೊಂದುಕೊಂಡಿದ್ದು, ದಿನಾಂಕ 09/11/2021 ರಂದು ಬೆಳಿಗ್ಗೆ 11:00 ಗಂಟೆಗೆ ಮನೆಯಲ್ಲಿ ಇದ್ದವರು ಸ್ವಲ್ಪ ಹೊತ್ತಿನ ನಂತರ ಮನೆಯಲ್ಲಿ ಕಂಡು ಬರದ ಕಾರಣ ಹುಡುಕಿದಾಗ ಪಿರ್ಯಾದಿದಾರರ ಮನೆಯ ಪಕ್ಕದ ನಿವಾಸಿಯಾದ ಸುದೀಪ್ ಅಜಿಲ ರವರ ಬಾಬ್ತು ಮನೆಯ ಪಕ್ಕದಲ್ಲಿರುವ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ. ಪಿರ್ಯಾದಿದಾರರ ತಂದೆ ದಿನಾಂಕ: 09/11/2021 ರಂದು ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯ ಮಧ್ಯದ ಅವಧಿಯಲ್ಲಿ ಬಾವಿಗೆ ಬಿದ್ದು ಆತ್ಮಹತ್ಯೆ ಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ: 22/2021 ಕಲಂ. 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ : ಪಿರ್ಯಾದಿ ಚಂದ್ರ ಪುತ್ರನ್‌, ಪ್ರಾಯ: 46 ವರ್ಷ, ತಂದೆ: ದಿ: ನಾರಾಯಣ ಮರಕಾಲ, ವಾಸ: ಶುಬೋದಯ, ದಂಡೆಬೆಟ್ಟು, ಐರೋಡಿ ಗ್ರಾಮ, ಬ್ರಹ್ಮಾವರ ಇವರ  ಅಣ್ಣ ಸುರೇಶ ಪುತ್ರನ್‌ಪ್ರಾಯ: 47 ವರ್ಷ ರವರು ಐರೋಡಿ  ಗ್ರಾಮದ  ಹಾಂಗಾರಕಟ್ಟೆ ಬಂದರಿನ ಹತ್ತಿರದಲ್ಲಿ ಶ್ರೀ ಮಂಜುನಾಥ ಫೀಶ್‌ಹೆಸರಿನ ಮೀನಿನ ಅಂಗಡಿ ವ್ಯವಹಾರ  ಮಾಡಿಕೊಂಡಿದ್ದು ವ್ಯವಹಾರಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಕಡೆಗಳಲ್ಲಿ ಕೈ ಸಾಲ ಮಾಡಿಕೊಂಡಿದ್ದು ಅಲ್ಲದೇ ವ್ಯವಹಾರದಲ್ಲಿಯೂ ನಷ್ಟವನ್ನು ಅನುಭವಿಸುತ್ತಿದ್ದು ಸಾಲವನ್ನು  ಸರಿಯಾದ ಸಮಯಕ್ಕೆ ತೀರಿಸಲಾಗದೆ ಇದೇ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ  09-11-2021 ರಂದು ಸಂಜೆ 6-30 ಘಂಟೆಯಿಂದ ಸಂಜೆ 8-30 ಘಂಟೆಯ ಮಧ್ಯಾವಧಿಯಲ್ಲಿ ದಂಡೆಬೆಟ್ಟು ಮನೆಯಿಂದ ಸ್ವಲ್ಪ ದೂರದಲ್ಲಿರುವ ಸೀತಾ ನದಿ ದಂಡೆಯಲ್ಲಿರುವ ಮರಕ್ಕೆ ನೈಲಾನ ಹಗ್ಗದಿಂದ ಕಟ್ಟಿ ಕತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿದೆ. ಈ  ಬಗ್ಗೆ ಕೋಟ ಯುಡಿಆರ್‌ ಕ್ರಮಾಂಕ : 44/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಬೈಂದೂರು : ಫಿರ್ಯಾದಿ ರಿಯಾಝ್ ಪ್ರಾಯ 42 ವರ್ಷ ತಂದೆ; ಅಹಮ್ಮದ್ ವಾಸ: ಚಾತನಕೆರೆ, ನಾವುಂದ ಗ್ರಾಮ ಬೈಂದೂರು ಇವರ ಹೆಂಡತಿ ದಿನಾಂಕ; 07/11/2021 ರಂದು ಸಿಯಾಬ್, ಇಸಾಖ್ ಮತ್ತು ಇತರರು ಮನೆಗೆ ಬಂದು ಗಲಾಟೆ ಮಾಡಿದ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಅದೇ ವಿಚಾರವಾಗಿ ದಿನಾಂಕ; 09/11/2021 ರಂದು ಬೆಳಿಗ್ಗೆ 11:00 ಗಂಟೆಗೆ ಫಿರ್ಯಾದಿದಾರರು ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗುವಾಗ ಅವರ ಪರಿಚಯದ ಆಪಾದಿತ ಅಲ್ ಫಝ್ ನು ಫಿರ್ಯಾದಿದಾರರು ಇರುವ ಬಾಡಿಗೆ ಮನೆಯ ಕಂಪೌಂಡ್ ಪ್ರವೇಶಿಸಿ ಫಿರ್ಯಾದಿದಾರರನ್ನು ಅಡ್ಡಗಟ್ಟಿ ಸಿಯಾಬ್ ಮತ್ತು ಇಸಾಕ್ ರವರ ಮೇಲೆ ಸುಳ್ಳು ದೂರು ಕೊಟ್ಟು ಜೈಲಿಗೆ ಕಳುಹಿಸಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಸಹಿತ ಬಿಡುವುದಿಲ್ಲ ಕೊಚ್ಚಿ ಕೊಚ್ಚಿ ಸಾಯಿಸುತ್ತೇನೆಂದು ಜೀವ ಬೆದರಿಕೆ ಹಾಕಿದ್ದು ನಂತರ ಆಪಾದಿತನು ಆತನು ಬಂದಿದ್ದ ಯಮಹಾ ಬೈಕಿನಲ್ಲಿ ನಾವುಂದ ಕಡೆಗೆ ಹೋಗಿರುತ್ತಾನೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 180-2021 ಕಲಂ: 447, 341 ,504, 506 ಭಾದಂಸಂನಂತೆ ಪ್ರಕರಣ ದಾಖಲಿಸಿಕೊಳ್ಲಲಾಗಿದೆ.

ಇತರ ಪ್ರಕರಣ

  • ಮಲ್ಪೆ: ಪಿರ್ಯಾಧಿ ಪಿರ್ಯಾಧಿ ಚಂದ್ರ ಪುತ್ರನ್‌, ಪ್ರಾಯ: 46 ವರ್ಷ, ತಂದೆ: ದಿ: ನಾರಾಯಣ ಮರಕಾಲ, ವಾಸ: ಶುಬೋದಯ, ದಂಡೆಬೆಟ್ಟು, ಐರೋಡಿ  ಗ್ರಾಮ, ಬ್ರಹ್ಮಾವರ ಇವರ ತಮ್ಮ ಜ್ಯೂನಿಯರ್ ಡಿ’ಸೋಜ ಎಂಬವರು ಕೆಮ್ಮಣ್ಣು ಹಂಪನಕಟ್ಟೆ ಎಂಬಲ್ಲಿ ವಾಸ ಮಾಡಿಕೊಂಡಿದ್ದು, ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿರುತ್ತಾರೆ. ಜ್ಯೂನಿಯರ್ ಡಿ’ಸೋಜ ರವರ ಹೆಂಡತಿ ಐರಿನ್ ಡಿ’ಸೋಜ ಮತ್ತು ಅವರ ಮಗ ಜೋಯ್ ಸದ್ರಿ ಮನೆಯಲ್ಲಿ ವಾಸವಾಗಿದ್ದು, ಫಿರ್ಯಾದಿದಾರರ ತಮ್ಮ ವಿದೇಶದಿಂದ ಬರುತ್ತಿದ್ದು ಅವರನ್ನು ಬೆಂಗಳೂರಿನಿಂದ ಕರೆದುಕೊಂಡು ಬರಲು ದಿನಾಂಕ:07/11/2021 ರಂದು ಅವರ ಹೆಂಡತಿ ಮತ್ತು ಮಗ ಮನೆಗೆ ಬೀಗ ಹಾಕಿ ಹೋಗಿದ್ದು, ದಿನಾಂಕ 08/11/2021ರ 22:00 ಗಂಟೆಯಿಂದ ದಿನಾಂಕ 09/11/2021 ರಂದು 06:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಯಾವುದೋ ಆಯುಧದಿಂದ ಮನೆಯ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಮನೆಯ ಬೆಡ್‌ರೂಮಿನ ಗೊದ್ರೇಜ್‌ನಲ್ಲಿದ್ದ 1 ½ ಪವನ್ ಚಿನ್ನದ ಕರಿಮಣಿ ಸರ, 10 ಗ್ರಾಂ ಚಿನ್ನದ ಬ್ರಾಸ್‌‌ಲೇಟ್‌‌, 6 ಗ್ರಾಂ ಚಿನ್ನದ ಬಳೆ, 2 ಪವನಿನ ಚಿನ್ನದ ಸರ ಅಂದಾಜು ಮೌಲ್ಯ ಸುಮಾರು ರೂ.1,80,000/- ಹಾಗೂ ಮನೆಯ ಹಾಲ್‌ನಲ್ಲಿದ್ದ ಫ್ಲಾಟ್‌ ಟಿ.ವಿ ಅಂದಾಜು ಮೌಲ್ಯ ರೂ.30,000/- ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಒಟ್ಟು ಕಳವಾದ ಸ್ವತ್ತುಗಳ ಮೌಲ್ಯ ರೂ. 2,10,000/-ಆಗಿರುತ್ತದೆ. ಈ ಬಗ್ಗೆ  ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 123/2021 ಕಲಂ: 457, 380  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 10-11-2021 10:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080