ಅಭಿಪ್ರಾಯ / ಸಲಹೆಗಳು

ಅಪಘಾತ  ಪ್ರಕರಣಗಳು

  • ಕೊಲ್ಲೂರು: ಪಿರ್ಯಾದಿ ದೇವದಾಸ್ (54)ತಂದೆ: ವಿ ಜೆ ಜೋಸೇಫ್ ವಾಸ:  ಜಡ್ಡಿನ ಮುಲ್ಲೆ  ಜಡ್ಕಲ್ ಗ್ರಾಮ ಇವರು ದಿನಾಂಕ:   09-11-2021 ರಂದು ಬೆಳಿಗ್ಗೆ  11:30 ಗಂಟೆಗೆ ತನ್ನ ಮೋಟಾರ್ ಸೈಕಲ್ ನಲ್ಲಿ  ಕೆಲಸದ  ನಿಮಿತ್ತ ಜಡ್ಕಲ್ ಫಾರೆಸ್ಟ್ ಬಂಗಲೆ ಕಡೆಯಿಂದ  ಬಾಗಿಕೊಡ್ಲು ಕಡೆಗೆ  ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು  ಹೋಗುತ್ತ ಜಡ್ಕಲ್ ಗ್ರಾಮದ ಬಾಗಿಕೊಡ್ಲು  ಕೆ ಜಿ ಜೋಸೇಫ್ ರವರ ಮನೆ ಬಳಿ ತಲುಪಿದಾಗ ಪಿರ್ಯಾದುದಾರರ ಎದುರಿನಿಂದ ಅಂದರೆ  ಜಡ್ಕಲ್ ಇಗರ್ಜಿ ಕಡೆಯಿಂದ ಬಾಗಿಕೊಡ್ಲು  ಕಡೆಗೆ ಆರೋಪಿತ ಶೇಖರ್ ನಾಯ್ಕ್  KA 20 W 5321 ನೇ ಮೋಟಾರು ಸೈಕಲ್ ನಲ್ಲಿ ಪ್ರಭಾಕರ ನಾಯ್ಕ್ ಎಂಬವರನ್ನು ಹಿಂಬದಿ ಸಹಸವಾರನಾಗಿ  ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ನಾಯಿಯೊಂದು ರಸ್ತೆಯ ಎಡಬದಿಯಿಂದ  ಒಮ್ಮೇಲೆ ಅಡ್ಡ ಬಂದ ಕಾರಣ ಗಲಿಬಿಲಿ ಗೊಂಡು ಮೋಟಾರು ಸೈಕಲ್ ಗೆ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ನ  ಹಿಂಬದಿ ಸವಾರನಾದ  ಪ್ರಭಾಕರ ನಾಯ್ಕ್ ರವರು  ಬಲ ಮಗ್ಗುಲಾಗಿ  ರಸ್ತೆಗೆ ಏಸೆಯಲ್ಪಟ್ಟು  ಎಡಕಾಲು ತೊಡೆಗೆ ಒಳನೋವು , ಮತ್ತು  ಬಲ ಭುಜಕ್ಕೆ ಒಳನೋವು ಆಗಿ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಒಳರೋಗಿ ಚಿಕಿತ್ಸೆಯಲ್ಲಿರುತ್ತಾರೆ. ಹಾಗೂ ಆರೋಪಿತರು ಮೋಟಾರ್ ಸೈಕಲ್ ಸಮೇತ ಬಿದ್ದು ಸಣ್ಣಪುಟ್ಟ ಗಾಯಾವಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 42/2021  ಕಲಂ: 279, 337 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿ ಎಂ. ಶಂಕರ ಖಾರ್ವಿ, ಪ್ರಾಯ: 76  ವರ್ಷ, ತಂದೆ: ಎಂ.ಶೇಷು ಖಾರ್ವಿ, ವಾಸ: ಮರವಂತೆ ಪಂಚಾಯತ್ ಬಳಿ, ಮರವಂತೆ ಗ್ರಾಮ ಮತ್ತು ಅಂಚೆ, ಬೈಂದೂರು ಇವರು ಮರವಂತೆ ಹಾಗೂ ನಾವುಂದದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ 3 ಖಾತೆಗಳನ್ನು ಹೊಂದಿದ್ದು, ದಿನಾಂಕ 09.11.2021 ರಂದು ಸಂಜೆ 5:56 ಗಂಟೆ ಸುಮಾರಿಗೆ ಪಿರ್ಯಾದಿದಾರರ ಮೊಬೈಲ್ ನಂಬ್ರಕ್ಕೆ ಕೆವೈಸಿ ಮಾಹಿತಿಯನ್ನು ಸರಿಪಡಿಸಲು ಸಂದೇಶ ಬಂದಿದ್ದು, ನಂತರ ಪಿರ್ಯಾದಿಯ ಮೊಬೈಲ್ ನಂಬ್ರ: 9448317355 ನೇದಕ್ಕೆ ಅಪರಿಚಿತ ವ್ಯಕ್ತಿಗಳು ಬ್ಯಾಂಕಿನ ಅಧಿಕಾರಿ ಎಂದು ನಂಬಿಸಿ ಮೊಬೈಲ್ ನಂಬ್ರ: 8250897356 ನೇದರಿಂದ ಕರೆ ಮಾಡಿ ಎಸ್.ಬಿ ಖಾತೆಗೆ ಸಂಬಂದಿಸಿದ ಕೆವೈಸಿ ಮಾಹಿತಿ ಬ್ಲಾಕ್ ಆಗಿದ್ದು, ಅದನ್ನು ಸರಿಪಡಿಸಿಲು ಎ.ಟಿ.ಎಮ್ ಕಾರ್ಡಿನ ನಂಬ್ರವನ್ನು ಕೇಳಿದ್ದು ಅದರಂತೆ ಪಿರ್ಯಾದಿದಾರರು ತನ್ನಲ್ಲಿರುವ ಎರಡು ATM ಕಾರ್ಡಿನ ನಂಬ್ರ ಹಾಗೂ ತನ್ನ ಮೊಬೈಲ್ ಗೆ ಬಂದ OTP ಯನ್ನು ಅಪರಿಚಿತ ವ್ಯಕ್ತಿಗೆ ನೀಡಿದ್ದು, ಆತನು 5 ಬಾರಿ ಪಿರ್ಯಾದಿಯಿಂದ OTP ಪಡೆದು ಒಟ್ಟು ರೂ.3,89,423/- ಹಣವನ್ನು ಪಿರ್ಯಾದಿದಾರರ ಖಾತೆಯಿಂದ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ಸೆನ್‌ ಪೊಲೀಸ್‌  ಠಾಣಾ ಅಪರಾಧ ಕ್ರಮಾಂಕ  56/2021 ಕಲಂ 66(c), 66(d) ಐ.ಟಿ. ಆಕ್ಟ್  420 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾಪು: ಪಿರ್ಯಾದಿ ಸುಲಕ್ಷಣಾ ಪ್ರಭು @ ವೈಶಾಲಿ ಹೆಗ್ಡೆ  ಪ್ರಾಯ : 40 ವರ್ಷ  ಗಂಡ : ನಾರಾಯಣ ಪ್ರಭು ಜಿ.  ವಾಸ :  ದಾಮೋದರ  ವಿಜಯ ತಾಲೂಕು ಕಛೇರಿ ರಸ್ತೆ ಪುತ್ತೂರು  ದ.ಕ.  ಜಿಲ್ಲೆ. ಇವರ  ತಾಯಿ ವನಿತಾ ಹೆಗ್ಡೆ  ಪ್ರಾಯ  ಸುಮಾರು 61 ವರ್ಷ ಎಂಬವರು ಉದ್ಯಾವರ ಮೇಲ್ಪೇಟೆಯ ಅವರ ಹಿರಿಯರ ಮನೆಯಲ್ಲಿ ಅವರ ಕುಟುಂಬದವರೊಂದಿಗೆ ವಾಸವಿದ್ದು  ಅವರು  ತನ್ನ  ಮಗ ರಾಧಾಕೃಷ್ಣ ಹೆಗ್ಡೆಯವರಿಗೆ ಮದುವೆ ಆಗಲಿಲ್ಲ  ಎಂಬ ಚಿಂತೆಯಿಂದ ಅಲ್ಲದೇ  ಬೇರೆ ಯಾವುದೋ ಚಿಂತೆಯಿಂದ  ಜೀವನದಲ್ಲಿ  ಜೀಗುಪ್ಸೆಗೊಂಡು  ದಿನಾಂಕ 10.11.2021  ರಂದು  ಬೆಳಗಿನ ಜಾವ 02.00  ಗಂಟೆಯಿಂದ   07.00  ಗಂಟೆಯ ಸಮಯದಲ್ಲಿ   ಮನೆಯ ಸಮೀಪದ  ಬಾವಿಯ ನೀರಿಗೆ  ಹಾರಿ ನೀರಿನಲ್ಲಿ ಮುಳುಗಿ  ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವುದಾಗಿದೆ. ಮೃತರ ಮರಣದಲ್ಲಿ ಬೇರೆ ಯಾವುದೇ ಕಾರಣ ಇರುವುದಿಲ್ಲ ಎನ್ನುವುದಾಗಿ ಪಿರ್ಯಾದಿದಾರರು ಕಾಪು ಠಾಣೆಗೆ ದೂರು ನೀಡಿದ್ದು  ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್‌.ನಂಬ್ರ 412021 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ :  ಕಾರ್ಕಳ ತಾಲೂಕು ಮುಡಾರು ಗ್ರಾಮದ ಬೈಲು ಮೇಲಿನ ಮನೆಯಲ್ಲಿ  ವಾಸವಾಗಿರುವ ಪಿರ್ಯಾದಿ ಭಾಸ್ಕರ ಸೆರ್ವೆಗಾರ್, ತಂದೆ: ದಿ/ ವೆಂಕಪ್ಪ ಸೆರ್ವೆಗಾರ್  ವಾಸ: ಹ್ಯೊಪಲ್ ಮನೆ ಗಣಪತಿ ಕಟ್ಟೆ ಬಳಿ , ನಲ್ಲೂರು ಗ್ರಾಮ ಇವರ ತಮ್ಮ ಜಗದೀಶ್ ರಾವ್ ಪ್ರಾಯ 48  ವರ್ಷ ಇವರು ಒಂದು ವರ್ಷದಿಂದ ಸಕ್ಕರೆ ಕಾಯಿಲೆಗೆ  ಔಷಧಿ ಪಡೆದುಕೊಳ್ಳುತ್ತಿದ್ದು, ಅವರು ಕಾಯಿಲೆಯಿಂದ  ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 10/11/2021 ರಂದು ಬೆಳಗಿನ ಜಾವ 03:00 ಗಂಟೆಯಿಂದ 06:00 ಗಂಟೆಯ ಮಧ್ಯೆ ತಮ್ಮ ಮನೆಯ ಸಮೀಪ ಇರುವ ಮಾವಿನಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಠಾಣಾ ಯು.ಡಿ.ಆರ್‌.ನಂಬ್ರ 42/2021  ಕಲಂ: 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 10-11-2021 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080